ಮುಕ್ತಕಂಗೊ – (ಬರದೋರು : ಅರ್ತಿಕಜೆ ಮಾವ°)
ಗೆಡ್ಡ ಬೆಳೆಶೆಡ ಗುಡ್ಡೆ ಹತ್ತೆಡ
ಅಡ್ಡಿಮಾಡೆಡ ಒಳ್ಳೆ ಕೆಲಸಕ್ಕೆ ಈ ಲೋಕಲ್ಲಿ
ಗುಡ್ಡಗೆ ಗುಡ್ಡೆ ಅಡ್ಡ ಇಕ್ಕು ಮುದ್ದುತಮ್ಮ ||
ಸಂಪತ್ತು ಬಪ್ಪಗ ಹಿಗ್ಗೆಡ ವಿಪತ್ತು ಬಪ್ಪಗ ಕುಗ್ಗೆಡ
ತಾಳ್ಮೆ ಧೈರ್ಯ ಸೌಜನ್ಯ ಇರೆಕ್ಕು ಮನುಷ್ಯಂಗೆ
ಹಾಂಕಾರ ಬಪ್ಪಲಾಗ ಎಂದಿಂಗು ಮುದ್ದುತಮ್ಮ ||
ಬೇರೆಯೋರ ಬೈಯೆಡ ನೆರೆಕರೆಯ ದೂರೆಡ
ತನ್ನ ತಾನೇ ಹೊಗಳಿಯೊಂಬಲಾಗ ಮನುಷ್ಯಂಗೆ
ಅಲ್ಪತನ ಇಪ್ಪಲಾಗ ಮುದ್ದುತಮ್ಮ ||
ಆಸಗೆ ಮಿತಿಬೇಕು ಕೂಸಿಂಗೆ ಸದ್ಗುಣ ಬೇಕು
ಓಡುವ ಕುದುರಗೆ ಕಡಿವಾಣ ಬೇಕು ಬದುಕಿಲ್ಲಿ
ಬಂದದರ ಅನುಭವುಶಲೇ ಬೇಕು ಮುದ್ದುತಮ್ಮ ||
ಜೀವನಲ್ಲಿ ಬಪ್ಪದು ತಪ್ಪ ಅದು ಬಂದೇ ಬಕ್ಕು
ಮಾಡಿದ ತಪ್ಪಿನ ಒಪ್ಪಿಗೊಂಡು ಕ್ಷಮೆ ಕೇಳಿದವಂಗೆ
ಮುಂದಂಗೆ ಸುಖ ಇಕ್ಕು ಮುದ್ದುತಮ್ಮ ||
ಹೆಣ್ಣು ಚೆಂದ ಇರೆಕ್ಕು ಹಣ್ಣು ಸೀವಿರೆಕ್ಕು
ಕಣ್ಣು ಅತಿಸೂಕ್ಷ್ಮ ಇರೆಕ್ಕು ಫಕ್ಕ ಎಲ್ಲದರ ನೋಡ್ಳೆ
ಮಣ್ಣು ಫಲವತ್ತಾಗಿರೆಕ್ಕು ಕೃಷಿಗೆ ಮುದ್ದುತಮ್ಮ ||
ಆಜಾತಿ ಈಜಾತಿ ಮೇಲ್ಜಾತಿ ಕೀಳ್ಜಾತಿ
ಹೇಳ್ತ ಜಾತಿ ಬೇಧವು ಬೇಡ ಇಪ್ಪದು ಒಂದೇ ಜಾತಿ
ಅದು ಮನುಷ್ಯ ಜಾತಿ ಮುದ್ದುತಮ್ಮ ||
ಹೆರಜಾತಿ ಒಳಜಾತಿ ಹೇಳುವ ತಾರತಮ್ಯವು ಬೇಡ
ಎಲ್ಲೋರದ್ದೊಂದೇ ಜಾತಿ ಅದು ಮನುಷ್ಯಜಾತಿ
ಹೇಳುವ ಸಮಭಾವ ಬೇಕು ಮುದ್ದುತಮ್ಮ ||
ಹಾಡಲೆ ಕಂಠಸರಿ ಇರೆಕ್ಕು ನೋಡಲೆ ಕಣ್ಣು ಸರಿ ಇರೆಕ್ಕು
ಓಡಲೆ ಕಾಲುಸರಿ ಇರೆಕ್ಕು ಕೇಳುಲೆ ಕೆಮಿಸರಿ ಇರೆಕ್ಕು
ಗೆಯ್ಯಲೆ ದೇಹ ಗಟ್ಟಿ ಇರೆಕ್ಕು ಮುದ್ದುತಮ್ಮ ||
ಬಕಾಸುರನ ಹಾಂಗೆ ತಿನ್ನೆಡ ಕುಂಭಕರ್ಣನ ಹಾಂಗೆ ಒರಗೆಡ
ಎಕ್ಕದ್ದ ಹಣ್ಣಿಂಗೆ ಕೈನೆಗ್ಗೆಡ ಈ ಲೋಕಲ್ಲಿ ನಾವು
ಸಿಕ್ಕಿದಷ್ಟಕ್ಕೆ ತೃಪ್ತಿಪಡೆಕ್ಕು ಮುದ್ದುತಮ್ಮ ||
ಹೆಣ್ಣಿನಾಶೆಯು ಬೇಡ ಮಣ್ಣಿನಾಶೆಯು ಬೇಡ
ಕಂಡದೆಲ್ಲ ಬೇಕೆನಗೆ ಹೇಳುವ ಕುಂಡಿಬಟ್ಟಂಗೆ
ಎಷ್ಟು ಕೊಟ್ಟರು ಸಾಲ ಮುದ್ದುತಮ್ಮ ||
ಒಳ್ಳೆಯ ಅವಕಾಶಕ್ಕೆ ಶತಪ್ರಯತ್ನ ಮಾಡೆಕ್ಕು
ಎಲ್ಲ ಬಾಗಿಲನ್ನೂ ತಟ್ಟೆಕ್ಕು ಒಂದಾದರೂ ತೆಗೆಯದ್ದಿರ
ಸಿಕ್ಕಿದವಕಾಶ ಕಳಕ್ಕೊಳೆಡ ಮುದ್ದುತಮ್ಮ ||
ಹೊಟ್ಟಗೆ ಹಿಟ್ಟಿಲ್ಲೆ ಜೊಟ್ಟಿಂಗೆ ಮಲ್ಲಿಗೆ ಹೂಗು
ಪೈಸಕ್ಕೆ ಠಿಕಾಣಿ ಇಲ್ಲೆ ರಾಜದರ್ಬಾರು ಮಾಡಿರೆ
ಸೌಖ್ಯಲ್ಲಿ ಬದ್ಕಲೆಡಿಗೊ ಮುದ್ದುತಮ್ಮ ||
ಗತಿಶುದ್ಧ ಇದ್ದರೆ ಸಾಲ ಸಂಗತಿ ಶುದ್ಧ ಇರೆಕು
ಗತಿಶುದ್ಧ ಇದ್ದರೆ ಸಾಲ ಗ್ರಹಗತಿ ಶುದ್ಧ ಇರೆಕು
ಮನುಷ್ಯಂಗೆ ಏವಾಗಳೂ ಮತಿ ಶುದ್ಧ ಇರೆಕು ಮುದ್ದುತಮ್ಮ ||
ಕೆಲವಕ್ಕೆ ಪೈಸೆಬಲ ಕೆಲವಕ್ಕೆ ಜನಬಲ
ಕೆಲವಕ್ಕೆ ಸ್ಥಾನಬಲ ಇನ್ನು ಕೆಲವಕ್ಕೆ ಮಾತಿನ ಬಲ
ಎಲ್ಲಕ್ಕಿಂತ ಮನೋಬಲವೇ ಮುಖ್ಯ ಮುದ್ದುತಮ್ಮ ||
ಅತ್ತೆಸೊಸಗಳ ಲಡಾಯಿ ಇಲ್ಲದ್ದ ಮನೆ ಇಲ್ಲೆ
ಒಂದು ರಚ್ಚೆಂದ ಬಿಡ ಇನ್ನೊಂದು ಗೂಂಜಿಂದ ಬಿಡ
ಇವರೆಡೆಲಿ ಒಳುದವಕ್ಕೆ ಸುಖ ಇಲ್ಲೆ ಮುದ್ದುತಮ್ಮ ||
ಆನು ಹೇಳುವ ಸ್ವಾಭಿಮಾನ ಬೇಕು ದುರಭಿಮಾನ ಬೇಡ
ಆರೊಬ್ಬರಿಂದಲೂ ನಡವದಲ್ಲ ಈ ಲೋಕ ಆ ದೇವರ
ದಯೆ ಇಲ್ಲದ್ದೆ ಹುಲ್ಲುದೆ ಹಂದ ಮುದ್ದುತಮ್ಮ ||
ಬೆಶಿಲಿಪ್ಪಗಳೇ ಅಡಕ್ಕೆ ಒಣಗುಸೆಕು ನೀರು ಬಪ್ಪಗಳೇ ಮಿಂದೊಳೆಕು
ಕೈಕಾಲು ಗಟ್ಟಿ ಇಪ್ಪಗಳೇ ಸರಿಯಾಗಿ ಗೈದು ಸಾಧುಸೆಕು
ಗಾಳಿ ಬಂದಾಂಗೆ ಕೊಡೆ ಹಿಡಿಯೆಕ್ಕು ಮುದ್ದುತಮ್ಮ ||
ಊಟಕ್ಕೆ ಮದಾಲು ಹೋಯೆಕ್ಕು ಮೀವಲೆ ಅಖೇರಿಗೆ ಹೋಯೆಕ್ಕು
ಔತಣ ಕೂಟಕ್ಕೆ ಮಧ್ಯಲ್ಲಿ ಹೋದರೊಳ್ಳೆದು ನಾವು
ಹತ್ತು ಜೆನ ಹೇಳಿದ್ದರ ನಂಬೆಕ್ಕು ಮುದ್ದುತಮ್ಮ ||
ಮೂಕಂಗೆ ಮಾತನಾಡಲೆಡಿಗೊ ಕುರುಡಂಗೆ ನೋಡಲೆಡಿಗೊ
ಬಾಯಿದ್ದೂ ಮೂಕ ಆದರೆ ಕಣ್ಣಿದ್ದೂ ಕುರುಡ ಆದರೆ ಎಂತಮಾಡುದು
ಒರಕ್ಕು ಬಂದವನ ಏಳ್ಸಲೆಡಿಗು ಹಾಂಗೆ ನಟುಸುವವನ ಏಳ್ಸಲೆಡಿಯ ಮುದ್ದುತಮ್ಮ ||
ಕುಂಟಂಗೆ ನಡವಲೆಡಿಯ ಕಿವುಡಂಗೆ ಕೇಳ್ಳೆಡಿಯ
ಕೈ ಇಲ್ಲದ್ದವಂಗೆ ಗೈಯಲೆಡಿಯ ಈ ಲೋಕಲ್ಲಿ
ಎಂದಾದರೂ ಎಲ್ಲಾವು ಸರಿ ಇಪ್ಪಲಿದ್ದೋ ಮುದ್ದುತಮ್ಮ ||
ನಡವಲ್ಲಿ ನಡೆಯೆಕ್ಕು ಓಡುವಲ್ಲಿ ಓಡೆಕ್ಕು
ಹಿಡಿವಲ್ಲಿ ಹಿಡಿಯೆಕ್ಕು ಬಿಡುವಲ್ಲಿ ಬಿಡೆಕ್ಕು
ದುಡಿವಲ್ಲಿ ಸರಿಯಾಗಿ ದುಡಿಯೆಕ್ಕು ಮುದ್ದುತಮ್ಮ ||
ಈ ಲೋಕಲ್ಲಿ ಒಳ್ಳೆಯವು ಇಕ್ಕು ಕೆಟ್ಟವುದೆ ಇಕ್ಕು
ನೆಲಲ್ಲಿ ಏರುದೆ ಇಕ್ಕು ತಗ್ಗುದೆ ಇಕ್ಕು ಜೀವನಲ್ಲಿ ನಾವು
ಕಳ್ಳಂದಲೂ ಒಳ್ಳೆದರ ಕಲಿಯೆಕ್ಕು ಮುದ್ದುತಮ್ಮ ||
ಮಧ್ಯಾಹ್ನ ಉಂಡಿಕ್ಕಿ ರಜ ಒರಗೆಕ್ಕು ಇರುಳು ಉಂಡಿಕ್ಕಿ ರಜ ನಡೆಯೆಕ್ಕು
ವಾರಕ್ಕೊಂದರಿ ಮೈಗೆ ಎಣ್ಣೆಕಿಟ್ಟಿ ಮೀಯೆಕ್ಕು ನಮ್ಮ ಆರೋಗ್ಯಕ್ಕೆ
ದಿನವೂ ಯೋಗ ಪ್ರಾಣಾಯಾಮವ ಮಾಡೆಕ್ಕು ಮುದ್ದುತಮ್ಮ ||
ಕಾಕೆಯ ಹಾಂಗೆ ಶ್ರದ್ಧೆಯು ಬೇಕು ಕೊಕ್ಕರೆ ಹಾಂಗೆ ಏಕಾಗ್ರತೆ ಬೇಕು
ನಾಯಿ ಹಾಂಗೆ ಒರಗೆಕ್ಕು ಫಕ್ಕನೆ ಏಳೆಕ್ಕು ಮನುಷ್ಯಂಗೆ
ಪ್ರಾಣಿಪಕ್ಷಿಗಳಿಂದಲೂ ಕಲಿವದು ಎಷ್ಟೋ ಇದ್ದು ಮುದ್ದು ತಮ್ಮ ||
***
~~ **** ~~
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ಅರ್ತಿಕಜೆ ಅಣ್ಣನ ಅನುಭವದ ನುಡಿಗೊ ಮುಕ್ತಕಂಗಳ ರೂಪಲ್ಲಿ ಬಂದದು ತುಂಬಾ ಲಾಯಕಾಯಿದು.
ನುಡಿ ಮುಕ್ತಕಂಗೊ ಒಂದೊಂದೂ ಮುತ್ತುಗಳೇ.
ಶ್ರೀ”ಕ೦ಠ” ಸೇರಿದ್ದರೆ, ರಸಪುರಿ ಒ೦ದರ ಮತ್ತೆ ಇನ್ನೊ೦ದು ಸವಿದಾ೦ಗೆ ಆವುತಿತ್ತು.
ನುಡಿ ಮುತ್ತುಗಳ ಮುಕ್ತಕವಾಗಿ ಮಾಡಿದ್ದು ಲಾಯಕ ಆಯಿದು ನೆನಪು ಮಾಡಿಕೊಂಬಲೇ ಸುಲಭ ಆತು
ನುಡಿಮುತ್ತುಗೊ ಲಾಯ್ಕ ಆಯಿದು
ಸದಾ ನೆನಪ್ಪಿಲಿ ಮಡಗೆಕ್ಕಾದ ನುಡಿಮುತ್ತುಗೊ. ಧನ್ಯವಾದ ಅರ್ತಿಕಜೆ ಮಾವ.
ಹರೇ ರಾಮ.