Oppanna.com

ಬಾಳೆ ಕುರುಳೆ ನೆಟ್ಟು ನೋಡಿ

ಬರದೋರು :   ವೇಣೂರಣ್ಣ    on   29/06/2010    22 ಒಪ್ಪಂಗೊ

ವೇಣೂರಣ್ಣ

ತೆಂಗಿನ ಮರವ ಕಲ್ಪವೃಕ್ಷ ಹೇಳಿ ಹೇಳ್ತವು .
ತೆಂಗಿನ ಮರಂದ ಸಿಕ್ಕುವ ಎಲ್ಲ ಉತ್ಪನ್ನ ಉಪಯುಕ್ತ ಹೇಳ್ವ ಕಾರಣಕ್ಕೆ (ಬೊಂಡ , ಮಡಲು, ಕಾಯಿ , ಹಸಿ ಮಡಲು ಭೂತ ಕಟ್ಲೆ!, ಹೆಣ ಕೊಂಡೋಪಲೆ! ಸತ್ತ ಮರಂದ ಪಕ್ಕಾಸು ಮಾಡ್ಲೆ, ಚೆಂಡೆ ಕುತ್ತಿ, ಇತ್ಯಾದಿ)
ಎನಗನಿಸಿದ ಹಾಂಗೆ ತೆಂಗಿನ ಮರದ ನಂತರ ಬಹು ಉಪಯೋಗಿ ಹೇಳಿ ಸಸ್ಯ ಇದ್ದರೆ ಅದು ಬಾಳೆಯೇ..
ಬಾಳೆ ಸಮಶೀತೋಷ್ಣ , ಬಹು ಉಷ್ಣ , ಮದ್ಯೋಷ್ಣ ಪ್ರದೇಶಂಗಳಲ್ಲಿ ಸಮೃದ್ಧವಾಗಿ ಬೆಳವ ಸಸ್ಯ . ಒಂದರೆ ಹಾಂಗೆ ಆಲೋಚನೆ ಮಾಡಿ ಬಾಳೆ ಎಂತಗೆಲ್ಲ ಬೇಕಾವ್ತು ಹೇಳಿ .
ಬಾಳೆ ಎಲೆ ನಾಳ್ತು ಚೆನ್ನಬೆಟ್ಟಣ್ಣನ ಮದುವೆಗೆ ಬಂದೊರಿನ್ಗೆ ಭೂರಿ ಭೋಜನಕ್ಕೆ , ಮದುವೆಯ ಸಮಸ್ತ ಕ್ರಿಯಾ ಭಾಗಕ್ಕೆ, ಅಡಿಗೆ ಕೊಟ್ಟಗೆಲಿ ಹಾಲಿನ ಕವಂಗಕ್ಕೆ ಮುಚ್ಚುದರಿಂದ ಹಿಡುದು ಬೆಂದಿಗೆ ಕೊರವಲ್ಲಿವರೆಗೆ ಎಲ್ಲದಕ್ಕೋ ಬೇಕೇ ಬೇಕು!
ಅಜ್ಜನ ಅಥವಾ ಅಜ್ಜಿಯ ತಿಥಿಗೆ ಬಾಳೆ ಎಲೆ ಬಾಡ್ಸಿ ದೊನ್ನೆ ಮಾಡ್ಲೆ , ಕೊಟ್ಟಿಗೆ ಕಟ್ಟುಲೇ , ಮೂಡೆ ಮಾಡ್ಲೆ ಬಾಡ್ಸಿದ ಬಾಳೆ ಬೇಕನ್ನೇ?

ಬಾಳೆಕಾನದ ಬಾಳೆಗೊನೆ!

ಬಾಳೆ ಬಳ್ಳಿ ಮಲ್ಲಿಗೆ ಹೂಗು ಕಟ್ಟುದರಿಂದ ಹಿಡುದು ಬಾಸಿಂಗ ಕಟ್ಟುವಲ್ಲಿ ವರೆಗೆ, ಜಾಜಿ ಮಲ್ಲಿಗೆ ಗುಂಟಕ್ಕೆ ಬಿಗಿವಲೆ, ಎಲೆ ಸೂಡಿ ಕಟ್ಲೆ , ಹುಲ್ಲಿನ ಕಟ್ಟ ಕಟ್ಲೆ, ಬಾಳೆ ಚಾಂಬಾರು (ಸೆಸಿಲೆ ಒಣಗಿದ ಎಲೆ) ಒಲೆ ಹೊತ್ತುಸುಲೆ, ಬಾಳೆ ದಂಡು ಹೋಮಕ್ಕೆ ಸುತ್ತ ಮಡುಗುಲೆ (ಸ್ಥನ್ಡಿಲಕ್ಕೆ ), ಪಿಂಡಿ ಮಾಡಿ ಕಟ್ಟಲ್ಲಿ ಹಾರುಲೆ !,
ಬಾಳೆ ದಂಡಿನ ತಾಳಿಂಗೆ (ಪಲ್ಯಕ್ಕೆ) ,ಕಡದು ಕುಡಿವಲೆ, ಹಾಂಗೆ ತಿಂಬಲೇ, ಬಾಳೆ ಕೂಂಬೆ ಬಜ್ಜಿಗೆ ,ಚಟ್ನಿಗೆ , ಬಾಳೆ ಕಾಯಿ ಮುತ್ತಣ್ಣ ಮಾಡ್ಲೆ (ಪಲ್ಯದ ಒಂದು ವೆರೈಟಿ ) , ಚಾಯದ ಬಾಯಿಗೆ ಕಚ್ಚುಲೆ ಬೆಶಿ ಬೆಷಿ ಪೋಡಿ ಮಾಡ್ಲೆ , ಚಿಪ್ಸ್ ಮಾಡ್ಲೆ, ಅವಿಲಿಂಗೆ, ಮೇಲಾರಕ್ಕೆ , ಕೆಂಬುಡೆ ಕಾಯಿ ಸಾಂಬಾರಿಂಗೆ ಚೇರ್ಚೆಗೆ ಲಾಯ್ಕಾವ್ತು .
ಇನ್ನು ಬಾಳೆ ಹಣ್ಣು ಗೆಣವತಿ ದೇವರ ನೈವೇದ್ಯಂದ ಹಿಡುದು , ಸಪಾದ ಭಕ್ಷ್ಯ , ಪಾಯಸಕ್ಕೆ, ಹಲ್ವಕ್ಕೆ, ಅಷ್ಟದ್ರವ್ಯಕ್ಕೆ , ಹೋಮದ ಪೂರ್ಣಾಹುತಿ ಮೊದಲು ಚಾಮಿ ದೇವರಿಂಗೆ ಭಟ್ಟ ಮಾವ
“ಇದಂ ಪಕ್ವಂ ಮಾಯಾ ದೇವ ಸ್ಥಾಪಿತ: ಪುರತಸ್ತವ
ತೇನ ಮೇ ಸಫಲಾವಾಪ್ತಿರ್ ಭವೇತ್ ಜನ್ಮನಿ ಜನ್ಮನಿ |

ಹೇಳಿ ಸಮರ್ಪಿಸುಲೆ, ಮಾತ್ರವಲ್ಲದ್ದೆ ಬಾಬೆಗೊಕ್ಕೆ ತಿನ್ಸುಲೆ ಅಮ್ಮಂದ್ರ ಅಮೂರ್ತ ಆಹಾರವೇ ಬಾಳೆ ಹಣ್ಣು .
ಇನ್ನು ಬಾಳೆ ಕುರುಳೆ ಸತ್ಯನಾರಾಯಣ ಪೂಜೆಗೆ ಮಂಟಪ ಕಟ್ಟುವಲ್ಲಿಂದ ಹಿಡುದು ದೇವಸ್ಥಾನಲ್ಲಿ ಕೊಡಿ ಕಂಬಕ್ಕೆ ಕಟ್ಟುವ ವರೆಗೆ ಹಲವು ಅಲಂಕಾರಿಕ ಪ್ರಯೋಜನಕ್ಕೆ ಬೇಕಾವ್ತು ಹೇಳ್ತ ವಿಚಾರ ಎಲ್ಲೋರಿಂಗೂ ಗೊಂತಿಪ್ಪದೆ .
ಸುಳ್ಯ ತಾಲೂಕಿಲ್ಲಿ ಬಾಳೆ ಚಾಂಬಾರಿನ ಮೈಗೆ ಇಡೀ ಸುತ್ತಿಗೊಂಡು “ಸಿದ್ಧ ವೇಷ ” ಹೇಳಿ ಮಾಡ್ತವು. ನವರಾತ್ರಿಗೆ , ಛದ್ಮವೇಶ ಸ್ಪರ್ಧೆಗೆ ಎಲ್ಲ ಈ ವೇಷವ ಮಾಡುಗಿದಾ.
ಬ್ರಾಹ್ಮಣರಲ್ಲಿ ಹಲವು ಒಳಪಂಗಡ ಇಪ್ಪ ಹಾಂಗೆ ಬಾಳೆಲಿ ಹಲವು ತಳಿಗೊ ಇದ್ದು.
ಕದಳಿ ಬಾಳೆ ಸಾರ್ವತ್ರಿಕ ಪ್ರಯೋಜನಕ್ಕೆ ಬಪ್ಪ ಏಕೈಕ ತಳಿ . ಇನ್ನು “ಮೈಸೂರು , ನೈ ಕದಳಿ , ಕರ್ಪೂರ ಕದಳಿ , ಪಚ್ಚೆ ಬಾಳೆ, ಆಮುಂಡ ಬಾಳೆ, ಬೂದಿ ಬಾಳೆ , ಗಾಳಿ ಬಾಳೆ, ಹೂ ಬಾಳೆ, ಚಂದ್ರ ಬಾಳೆ, ರಸ ಬಾಳೆ , ಚುಕ್ಕಿ ಬಾಳೆ, ಎರಚ್ಚಿ (ಏಲಕ್ಕಿ ) ಬಾಳೆ, ಕೆಂಪ ಬಾಳೆ
( ಇನ್ನು ನಿಂಗೋಗೆ ಗೊಂತಿಪ್ಪದನ್ನು ಸೇರ್ಸಿಗೊಳ್ಳಿ ಆತೋ ?).. ಹಲವು ಬಗೆ ಇದ್ದು.
ಬಾಳೆ ಬೆಳವಲೂ ಸುಲಭ .
ತೋಟದ ಮಧ್ಯೆ ಮಿಶ್ರ ಬೆಳೆಯಾಗಿಯೂ , ಅಥವಾ ಪ್ರಧಾನ ಬೆಳೆ ಆಗಿಯೋ ಬೆಳವಲಾವ್ತು . ಮಿಶ್ರ ತಳಿ ಆದರೆ ಪ್ರತ್ಯೇಕ ಗೊಬ್ಬರ ಹಾಕೆಕಾವ್ತಿಲ್ಲೆ .
ಇನ್ನು ಬಾಳೆಯ ಬಗ್ಗೆ ರಜ್ಜ ನಮ್ಮ ಹಿರಿಯೋರು ಕವಿಗೊ ಕಾವ್ಯಮಯವಾಗಿ ವರ್ಣಿಸಿದ್ದವು.
ಕದಳಿಯೋಳು ಮದದಾನೆ ಹೊಕ್ಕಂದದಲಿ … ಸಾಮರ್ಥ್ಯವ ಪೌರುಷವ ವಿವರುಸುಲೆ ಉಪಯೋಗಿಸಿದ್ದವು .
ನಮ್ಮ ಯಕ್ಷಗಾನ ಕವಿಗೊ ಅವರವರ ಪ್ರಸಂಗಂಗಳಲ್ಲಿ ಬೇಕಾದಲ್ಲಿ ಬೇಕಾದಷ್ಟು ಬಾಳೆ ಉಪಯೋಗಿಸಿದ್ದವು.
ಕಂಡು ಕದಳಿಯ ವೀರ ಹನುಮನು|
ಉಂಡು ತೇಗಿದ ಹಲವು ಬಗೆಗಳ ||
ಮುದಗೊಂಡು ನುಡಿದನು |
ಪಡೆವುದೇನ್ ನೆಲಗೊಂಡು ಮನದಿ ||

ಇನ್ನು ನಮ್ಮ ಜೋಯಿಷರು ಪಂಚಮಲ್ಲಿ ಶೆನಿ ಇಪ್ಪ ಮದುಮ್ಮಾಯಂಗೆ ಹೆಂಡತಿ ಸಾವ ಯೋಗ ಇಪ್ಪ ಕಾರಣ ” ರಂಭಾ ವಿವಾಹ ” ಮಾಡೆಕ್ಕು ಹೇಳಿಯೂ , ಅಷ್ಟಮಲ್ಲಿ ಶೆನಿ ಇಪ್ಪ ಮದುಮ್ಮಾಳಿಂಗೆ ಗೆಂಡ ಸಾವ ಯೋಗ ಬಪ್ಪ ಕಾರಣ ” ರಂಭಾ ವಿವಾಹ ” ಮಾಡೆಕ್ಕು ಹೇಳಿ ಹೇಳ್ತವು .
ಇದರ ಪ್ರಕಾರ ಮೊದಲು ಒಂದು ಬಾಳೆಗೆ ಮದುವೆ ಮಾಡಿ ಕೊಟ್ಟು ಆಮೇಲೆ ಅದರ ಕಡುದು ಇಡ್ಕಿ “ಕೂಸಿನ ಯಾ ಮಾಣಿ ಒಟ್ಟಿ೦ಗೆ ” ಮಾಡುವೆ ಮಾಡುವ ಸಂಪ್ರದಾಯ ಇದ್ದು.
ಕೊಡವ ಜಾತಿಯವರಲ್ಲಿ ಮದುವೆ ಆಯೆಕ್ಕಾರೆ ಪೌರುಷ ಪ್ರದರ್ಶನಕ್ಕೆ ಬಾಳೆ ದಂಡು ಕಡುದು ಇಡ್ಕುವ ಸಂಪ್ರದಾಯ ಇದ್ದು .
ಹೀಂಗೆ ಹಲವು ಪ್ರಯೋಜನ ಇಪ್ಪ ಬಾಳೆಯ ನೆಟ್ಟು ಮಾಡಿ ಸಮೃದ್ಧ ಫಲ ಪ್ರಯೋಜನ ಪಡವಲೆ ಮನೇಲಿ ಸುತ್ತ ಮುತ್ತ ರಜ ಜಾಗೆ ಇದ್ದರೆ ಒಂದು ಬಾಳೆ ಕುರುಳೆ ನೆಟ್ಟು ನೋಡಿ…!
ಎಂತ ಹೇಳ್ತಿ

22 thoughts on “ಬಾಳೆ ಕುರುಳೆ ನೆಟ್ಟು ನೋಡಿ

  1. namaskara venuranna,
    baleya hchhina mahithige banana.org heluva balege bileku,
    kaluble,kadu bale bere bere,kallu bale parekallina sandili appadu,kadubale yengala thotalli iddu,yele kaye palyakke avuthu,baleya bagge sumaru mahithigo iddu,sandya nina lekana odi kushi pattathu

  2. ಸುಬ್ರಹ್ಮಣ್ಯಣ್ಣ,
    ಎನಗೆ ಎನ್ನ ಪಂಜದ ಅಜ್ಜನ ಮನೆ ನೆಂಪಾತು, ಎನ್ನ ಮಾವಂದ್ರು ಸುಬ್ರಹ್ಮಣ್ಯಕ್ಕೆ ಉಂಬ ಬಾಳೆಲೆ ಕೊಂಡೋಗಿ ಕೊಟ್ಟೊಂಡಿತ್ತಿದ್ದವು..
    ಕಿಡ್ನಿ ಕಲ್ಲಿಂಗೆ ಕಲ್ಲುಬಾಳೆ ನಿಜವಾಗಿದೆ ರಾಮಬಾಣ ಅಡ. ಲಾಯ್ಕ ಬರದ್ದಿ… ಬಾಳೆ ಸೆಸಿ weak ಆದರುದೆ ತುಂಬಾ strong… ಅಲ್ದಾ….

    1. ಹೇಳಿದ ಹಾಂಗೆ ಬಾಳೆ ಹೇಳಿಯಪ್ಪಗ ನೆನಪಾಯೇಕ್ಕಾದ್ದು ಶ್ರೀ ಮಚ್ಚಿಮಲೆ ಶಂಕರನಾರಾಯಣ ರಾವ್ ಬರದ ಮಕ್ಕಳ ಪದ್ಯ
      – ಮಂಗಗಳ ಉಪವಾಸ
      ಬಾಳೆಯ ತೋಟದ ಪಕ್ಕದ ಕಾಡಲಿ …
      ಅದರ ಪೂರ್ಣ ಪಾಠ ಕೇಳಾಣ ಕೊಂಡಿ ಒತ್ತಿರೆ ಸಿಕ್ಕುತ್ತು …
      http://puttanaputa.blogspot.com/2008/08/blog-post_2605.html

  3. ಆಹಾ ! ಉಪ್ಪುಕರಿ ಹೇಳುವಾಗಲೇ ಆಶೆ ಆವ್ತು ಮಾವ 😀

  4. ಕದಳೀ ಬಾಳೆ ಕಾಯಿ ಯ ಇಡೀ ಬೇಶಿ ಅದರ ಗುದ್ದಿ ಉಪ್ಪುಕರಿ ಮಾಡಿದರೆ ಬಾರೀ ರುಚಿ ಆವುತ್ತು..ಅವಲಕ್ಕಿ ಉಪ್ಪುಕರಿ ಮಾಡಿದ ಹಾಂಗೆ ಮಾಡಿದರೆ ಆತು.

  5. ಕಲ್ಲು ಬಾಳೆ ಅಥವಾ ಕಾಡುಬಾಳೆ ಹೇಳಿ ಹೆಸರು.ಅದರ ದಂಡಿನ ಕಡದು ಕುಡುದರೆ kidny stone ಕರಗಿ ಹೋಉತ್ತು ಅದರ ಹಣ್ಣಿಲಿ ಕಲ್ಲಿನ ಹಾಂಗೆ ಗಟ್ತಿ ಇರುತ್ತು .ಇದು ಅಳಿವಿನ ಅಂಚಿಲಿ ಇಪ್ಪ ಸಸ್ಯ.

  6. thanks bava
    ಕಲ್ಲು ಬಾಳೆ ಬಗ್ಗೆ ಎನಗೆ ಗೊಂತಿತ್ತಿಲ್ಲೇ . ಹೊಸ ಮಾಹಿತಿಗೆ ಧನ್ಯವಾದ

  7. ಭಾರಿ ಲಾಯ್ಕ ಇದ್ದು ಲೇಖನ…….
    ಹಾಂಗೆ ಇನ್ನೊಂದು ಕಲ್ಲು ಬಾಳೆ ಹೇಳ್ತ ತಳಿಯೂ ಇದ್ದಲ್ಲದಾ…
    ಮಾಹಿತಿ ಪೂರ್ಣ ಲೇಖನ

  8. ಬಾಳೆ ಬಗ್ಗೆ ವಿವರವಾದ ಒಳ್ಳೆ ಲೇಖನ.
    ಬಾಳೆ ದಿಂಡಿನ ಎಸರು ಕುಡುದರೆ, ಕಿಡ್ನಿ ಸ್ಟೋನ್ ಇಪ್ಪವಕ್ಕೆ ಒಳ್ಳೆದು ಹೇಳಿ ಕೇಳಿದ್ದೆ. ಸುವರ್ಣಿನಿ ಅಕ್ಕಂಗೆ ಗೊಂತಿಕ್ಕು.
    ನೇಂದ್ರ ಬಾಳೆ ಹಣ್ಣಿನ ಪೋಡಿ ಅಂತೂ ಸೂಪರ್.
    ಬಾಳೆಲಿ ತಳಿಗೊ ಹಲವಾರು ಇದ್ದು ಮಾತ್ರ ಅಲ್ಲದ್ದೆ ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ತಳಿ ಪ್ರಸಿದ್ಧಿ ಇದ್ದು.
    ಪೇಟೆಗಳಲ್ಲಿ ಬೇಗ ಹಣ್ಣು ಆಯೆಕ್ಕು ಹೇಳಿ ಅದಕ್ಕೆ ಮೊದಲಾಣವು ಉಬೆಲಿ ಹಾಕಿಂಡು ಇತ್ತಿದ್ದವು. ಈಗ ಕೆಮಿಕಲ್ ಹಾಕಿ ಹಣ್ಣು ಮಾಡ್ಲೆ ಸುರು ಮಾಡಿದ್ದವು.
    ಸಾವಯವ ಗೊಬ್ಬರ ಹಾಕಿ ಅದರಷ್ಟಕ್ಕೆ ಬೆಳದು ಆದ ಬಾಳೆ ಹಣ್ಣು ಸಿಕ್ಕಲೆ ಕಷ್ಟ.
    ಜೆಂಬ್ರದ ಊಟ ಆದ ನಂತರ ಕದಳಿ ಹಣ್ಣು ತಿಂದರೆ, ಆಸರು ಅಪ್ಪದು ತುಂಬಾ ಕಮಿ ಆವುತ್ತು ಹೇಳಿ ಎನ್ನ ಅನುಭವ.

    1. { ಜೆಂಬ್ರದ ಊಟ ಆದ ನಂತರ ಕದಳಿ ಹಣ್ಣು ತಿಂದರೆ }
      ಹಶು ಅಪ್ಪದೂ ಕಮ್ಮಿ ಆವುತ್ತಡ ಅಪ್ಪಚ್ಚಿ!
      ಅಜ್ಜಕಾನ ಬಾವ° ಹೇಳಿದ್ದ°.

    2. ಅರಿಂಗಾರು ಕೈವಿಷ ಹಾಕಿದ್ದರೆ ಅದರ ತೆಗವಲೆ ಬಾಳೆ ದಂಡಿನ ಎಸರಿನೊಟ್ಟಿ೦ಗೆ ನೀರಡಕ್ಕೆ ಎಸರು ಸೇರ್ಸಿ ಕುಡಿಶುತ್ತವು. ಅದರ ಕುಡುದ ಕೂಡ್ಲೇ ಕಾರುಲೇ ಸುರು ಮಾಡ್ತವು . ಹೊಟ್ಟೆ ಲಿಪ್ಪ ವಿಷವ ಅದು ಹೆರ ಹಾಕುತ್ತು . ಮನೇಲಿ ಸಣ್ಣದಿಪ್ಪಗ ಅಪ್ಪ ಕೆಲಸಕ್ಕೆ ಬಟ್ಟ ನಾವುರ ಹೇಳ್ತದ್ದಕ್ಕೆ ಇದರ ಪ್ರಯೋಗ ಮಾಡಿ ವಿಷ ತೆಗದ್ದರ ನೋಡಿದ್ದೇ.

  9. ಸುಬ್ಬಣ್ಣ
    ನಾವು ತೋಟಲ್ಲಿ ಬಾಳೆ ಚೀಪೆ ತಿಂದದು ನೆನಪಿಲ್ಯ? ಅದರೆಂತಕೆ ಬಿಟ್ಟದು ?
    ಆಟದ ಮರುಳು ಇನ್ನು ಬಿಟ್ಟಿದಿಲ್ಲೇ ನೀನು 😀

    1. ಬಳ್ಳ ಸುಬ್ಬಣ್ಣ ಭಾವ
      ನೆನಪಿಲ್ಲದ್ದೆ ಎಂತ ? ನಿನಗೆ ಕಡಂದಳು ಕುಟ್ಟಿದ್ದು ನೆಂಪು ಇದ್ದು 😀
      ನಿನಗೆ ಕ್ರಿಕೆಟ್ interest ಇಪ್ಪನ್ನಾರ ಎನಗೆ ಆಟದ ಮರುಳು ಇರ್ತು !

  10. ಒಳ್ಳೆ ಲೇಖನ ಭಾವಾ , ಬಾಳೆ ಹಣ್ಣು ಮಾಡುವ ಬೇರೆ ಬೇರೆ ವಿಧಾನವನ್ನು ಒತ್ತಿನ್ಗೆ ಸೇರ್ಸಿ ಬರದರೆ ಒಳ್ಳೆದಿತ್ತು. ಎಂಗೊ ಬೇಗ ಹಣ್ಣು ಮಾಡುಲೆ ಬಾಳೆ ಕೊನೆಗೆ ಬ್ಲೇಡ್ ಚುಚ್ಚಿ ಗೋಣಿಲ್ಲಿ ಕಟ್ಟಿ ಮಡುಗುತ್ತೆಯೋ. ಬೇರೆ ಹೊಸ ವಿಧಾನ ಇದ್ದರೆ ಹೇಳಿಕ್ಕು .

  11. ಅಪ್ಪು ಮಾವ ನಿಂಗೋ ಹೇಳ್ತದ್ದು ಬೆಳಕಿನಷ್ಟೇ ಸತ್ಯ . ನಾವು ಬೆಳದ ಯಾವ ಬೆಳಗೆ ತಾನೇ ಸರಿಯಾದ ಬೆಳೆ ಸಿಕ್ಕುತ್ತು. ಎಲ್ಲ ಟೊಪ್ಪಿಗಳೂ ನವಗೆ ಒಂದಲ್ಲ ಒಂದು ರೀತಿಲ್ಲಿ ಟೊಪ್ಪಿ ಹಾಕುತ್ತವು . ಬಾಳೆ ಹಣ್ಣು ಮಾಡುವ ವಿಧಾನಗಳಲ್ಲಿ ಬೇರೆ ಬೇರೆ ಇದ್ದು. ಅದಕ್ಕೆ ಕೆಮಿಕಲ್ ಹಾಕಿಯೂ ಇತ್ತೀಚಿಗೆ ಬೇಗ ಹಣ್ಣಪ್ಪ ಹಾಂಗೆ ಮಾಡುತ್ತವು.

  12. ಒಳ್ಳೆ ಮಾಹಿತಿ ಶ್ರೀದೇವಿಯಕ್ಕಾ. ನಿ೦ಗೋ ಹೇಳಿದ ವಿಷಯ ಎನಗೆ ಗೊಂತಿತ್ತಿಲ್ಲೇ . ಕದಳಿ ಬಾಳೆ ಹಣ್ಣು ಬಾಬೆಗೊಕ್ಕೆ ಒಳ್ಳೇದು ಹೇಳಿ ಅಮ್ಮ ಹೇಳ್ತವು .
    ಹೇಳಿದ ಹಾಂಗೆ ಎನಗೆ ನೇಂದ್ರ ಬಾಳೆ ಬಗ್ಗೆ ಬರವಲೆ ಮರದತ್ತು 🙂 ಸಕ್ಕರೆ ಬೆರಟಿ, ಪಾಯಸ ( ಪ್ರಥಮ ) ಕ್ಕೆ , ಚಿಪ್ಸ್ ಮಾಡ್ಲೆ ಒಳ್ಳೆ ಬಾಳೆ ಕಾಯಿ ಅದು. ಅದರ ಬೆಳೆಶುವ ವಿಧಾನವೂ ವಿಶಿಷ್ಟ .

  13. ಬಾಳೆ ಬಗ್ಗೆ ಬರದ್ದು ಒಳ್ಳೆದಾಯಿದು….ಕೆಲವು ಸರ್ತ್ತಿ ನೆಟ್ತ ಕೂಡಲೆ ಅದಕ್ಕೆ ರೋಗ ಸುರು ಆಉತ್ತು…ಕೆಲವು ಜೆನ ಪೆಟೆಲಿ ಸಿಕ್ಕುತ್ತ ಸಂಕಪಾಶಾಣ ತಂದು ಹಾಕುತ್ತವು.ಅದರ ಹಾಕದ್ದೆ ಕೊನೆ ಬಿಡುತ್ತೂ ಇಲ್ಲೆ ಮತ್ತ್ತೆ ನಮ್ಮ chance ಲಿ ಒಂದೊಂದರಿ ಕೊನೆಬಿಡುದೂ ಇದ್ದು…ಆತನ್ನೆ ಬಿಟ್ಟ ಕೊನೆಯ ಮಾರಾಟಕ್ಕೆ ಕೊಂಡು ಹೋದರೆ ಬ್ಯಾರಿ kg 10 ರೂಪಾಇಗೆ ಕೇಳುದು ನವಗೆ ಕೊಡದ್ದೆ ಗೊಂತ್ತಿದ್ದ?ಅದು ಅದರ ಮಾರುದು ಕೇವಲ 20 ಕ್ಕೆ ಹೀಂಗಿಪ್ಪ ಕತೆ…ಅಲ್ಲದ್ದೆ ಅದರ ಹಣ್ಣು ಮಾಡುಲೆ ಇನ್ನೆಂತದೊ ವಿಷ ಹಾಕುತ್ತವಡ…..

  14. ವೇಣೂರಣ್ಣ ಬಾಳೆಯ ಸರ್ವ ಗುಣಂಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದವು.. ಬಾಳೆಯ ಬಗ್ಗೆ ಈಗ ತಿಳುವಳಿಕೆ ಕೊಟ್ಟದು ಒಳ್ಳೇದಾತು…
    ನಾಳ್ದು ಸೋಣೆ ತಿಂಗಳಿಲಿ ಬಾಳೆ ಕುರುಳೆ ನೆಟ್ಟರೆ ಬಪ್ಪ ಗಣೇಶ ಚತುರ್ಥಿಗೆ, ನಾಗರ ಪಂಚಮಿಗೆ ಅಪ್ಪಗ ಬಾಳೆಕಾಯಿಗೆ ಒಳ್ಳೆ ರೇಟು ಇಪ್ಪಗ ಮಾರುಲೆದೆ ಸಿಕ್ಕುತ್ತಡ್ಡ ಮಾಷ್ಟ್ರು ಮಾವ° ಹೇಳಿದವು…
    ಬಾಳೆದಂಡಿಂದ ಪತ್ರೊಡೆ, ಬೋಂಡವುದೇ ಲಾಯಕಾವುತ್ತು ವೇಣೂರಣ್ಣಾ…
    ಸಣ್ಣ ಬಾಬೇಗೊಕ್ಕೆ ಬೂದಿ ಬಾಳೆಕಾಯಿದು ಮಣ್ಣಿದೆ ಮಾಡ್ತ ಕ್ರಮ ಇದ್ದದಾ ನಮ್ಮಲ್ಲಿ ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×