Oppanna.com

ಶುಭತ್ತೆಯ ರೋಸಿಯ ನೋಡಿ ಬಂದೆ

ಬರದೋರು :   ಪೆರ್ಲದಣ್ಣ    on   09/09/2010    9 ಒಪ್ಪಂಗೊ

ಪೆರ್ಲದಣ್ಣ

ಪ್ರೀತಿಯ ಒಪ್ಪಣ್ಣ,
ನಿನ್ನ ಕಾಗದ ಅಕೇರಿಗೂ ಎನ್ನ ಕೈಗೆ ಸಿಕ್ಕಿತ್ತು. ನೀನು ಎಡ್ರೆಸ್ಸು ಬರೆವಾಗ ಅದರ್ಲಿ ಒಂದು ‘A’ ಬಿಟ್ಟಿತ್ತಿದ್ದೆ. ಅದು ಹತ್ತರಾಣ ಅಪಾರ್ಟುಮೆಂಟಿನ ತೆಲುಗಿನವರ(ಅವರ ಹೆಸರು ಗೊಂತಿಲ್ಲೆ) ಪೋಸ್ಟು ಡಬ್ಬಿಗೆ ಸೇರಿತ್ತು. ಅವಕ್ಕೂ ಎನ್ನ ಹೆಸರು ಗೊಂತಿಲ್ಲದ್ದ ಕಾರಣ ಅದರ ಕಸವಿನೊಟ್ಟಿಂಗೆ ಹಾಕಿದವು ಹೇಳಿ ಕಾಣ್ತು. ಅವರ ಮಗ ಕಸವಿನ ರಾಶಿಂದ ಆ ಕಾಗದವ ತೆಗೆದು ರಾಕೆಟ್ ಮಾಡುದರ ನೋಡಿದ ಅಮ್ಮ ಬೈದರೂ ಕೇಳದ್ದೆ ಹಾರಿಸಿ ಅಪ್ಪಗ ಎಂಗಳ ಬಾಲ್ಕನಿಲಿ ಬಂದು ಬಿದ್ದತ್ತದ… ಅಂತೂ ನಿನ್ನ ಕಾಗದ ಓದುಲೆಡಿಗಾತು. ಊರಿಲ್ಲಾದರೆ ಹಾಂಗೆಲ್ಲ ಆಗ. ಏಕೆ ಹೇಳಿದರೆ ಕಾಗದವ ಪೋಸ್ಟುಮ್ಯಾನು ಯಾವಾಗಲೂ ಕಿಣಿಯ ಅಂಗಡಿಲ್ಲೇ ಕೊಟ್ಟಿಪ್ಪ ಕಾರಣ ಕೊತ್ತಂಬರಿ ತಪ್ಪಲೋ ಮತ್ತು ಹೋಪಗ ಸಿಕ್ಕುತ್ತಲ್ಲದ? ಹಾಂಗೆಂತಾರು ಸಿಕ್ಕದ್ದರೂ ಅದು ಬೇರೆ ಮನೆಗೆ ಹೋದರೂ ಅವು ಆ ಕಾಗದವ ಸಾಮಾನು ಕಟ್ಟುಲೆ ಹೇಳಿ ಕೊಡುದು ಕಿಣಿಯ ಅಂಗಡಿಗೇ ಅಲ್ಲದ? ಅಷ್ಟಪ್ಪಗ ಆದರುದೇ ಕಿಣಿ ಅದರ ನೋಡಿ ತೆಗೆದು ಮಡುಗುಗು. ಅಲ್ಲ, ಬೈಲಿಲ್ಲಿ ಒಪ್ಪಣ್ಣನ ಹೆಸರು ಗೊಂತಿಲ್ಲದ್ದವೂ ಆರೂ ಇಲ್ಲೆ ಹೇಳಿ ಮಡುಗುವ.
ಊರಿಲ್ಲಿ ಈಗ ಜೋರು ಮಳೆ ಬಂದುಕೊಂಡಿಕ್ಕು ಅಲ್ಲದ? ಇಲ್ಲಿಯೂ ಕಳೆದ ವಾರ ಚೂರು ಮಳೆ ಬಂದಿತ್ತು. ಅರ್ಧ ಗಂಟೆ ಮಳೆಗೆ ಎಲ್ಲಾ ದಿಕೆ ನೀರು ತುಂಬಿ ಮೆಜೆಸ್ಟಿಕಿಂದ ಸಂಪಿಗೆ ಮಾರ್ಗದ ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಮೊದಲೇ ಮಂತ್ರಿ ಮಾಲು ಹೇಳಿ ದೊಡ್ಡ ಅಂಗಡಿ ಕಟ್ಟಡ ಬಂದ ಕಾರಣ ಅಲ್ಲೀಲ್ಲ ಜಾಮು. ಟೀವಿ ೯ನವಂತೂ ಇಡೀ ದಿನ ಅದನ್ನೇ ತೋರಿಸಿದರೂ ನಡುಗೆ ಕೆಲವು ಸರ್ತಿ ಸುದ್ದಿ ಇನ್ನೂ ಇದೆ ಹೇಳ್ತಾ ಇತ್ತವು.
ಆನು ಕಳೆದ ವಾರ ಎರಡೇ ಸರ್ತಿ ಊರಿಂಗೆ ಬಂದಿತ್ತಿದ್ದು. ಮೊದಲಾಣ ಸರ್ತಿ ಬಂದಿಪ್ಪಗ ಮೂರು ದಿನ ಇತ್ತಿದ್ದೆ, ಎರಡನೇ ಸರ್ತಿ ಬಂದಿಪ್ಪಗ ನಾಲ್ಕು ದಿನ. ಕಳೈದ ಸರ್ತಿ ಪುತ್ತೂರಿಲ್ಲಿ ಬಸ್ಸಿಳಿದು ಪೆರ್ಲಕ್ಕೆ ಹೋಪಗ ಮಾಡಿದ ಕೃಷ್ಣ ಬಸ್ಸಿನ ಟಿಕೇಟು ಎನ್ನತ್ತರೇ ಇತ್ತು. ನೀನು ಟಿಕೇಟೆಲ್ಲ ತಗೆದು ಮಡುಗಿಕೊಂಬ ಅಭ್ಯಾಸ ಇಪ್ಪ ಕಾರಣ ಇದರೊಟ್ಟಿಂಗೆ ವಾಪಸ್ಸು ಕಳಿಸುತ್ತೆ.

ಕೃಷ್ಣ ಬಸ್ಸು ಟಿಕೇಟು - ಈಗ ಹೆಸರು ಬದಲಿದ್ದು

ಹೇಳಿದಾಂಗೆ ಮೊನ್ನೆ ಶುಭತ್ತೆಯ ಮನೆಗೆ ಹೋಗಿತ್ತಿದ್ದೆ. ಪೂಜೆಗೆ ಬನ್ನಿ ಹೇಳಿ ಅವು ಕಳುಸಿದ ಈಮೈಲು ಮರೆತ್ತೇ ಹೋಗಿತ್ತು. ಹೊತ್ತೋಪಗ ಆಫೀಸಿಂದ ಹೆರಡುವಾಗ “pending” ಹೇಳಿ ಗುರುತು ಮಾಡಿದ್ದ ಈಮೈಲುಗಳಲ್ಲಿ ಅವರ ಮೈಲು ನೋಡಿ ನೆನಪಾತು. ಕೂಡ್ಲೆ ಹೋದೆ. ಇಲ್ಲಿ ಕತ್ರಿಗುಪ್ಪೆ ಸಿಗ್ನಲ್ ಕಳಿದು ಬಿಗ್ ಬಜಾರಿನ ಹತ್ತರೆ ಎಡಕ್ಕೆ ಹೋಗಿ ಮೂರು ಮಾರ್ಗ ದಾಂಟಿದರೆ ಕಾಫಿ ಡೇ ಹೇಳುವ ಕಾಫಿ ಅಂಗಡಿ ಸಿಕ್ಕುತ್ತು. ಅಲ್ಲಿಂದ ಬಲಕ್ಕೆ ತಿರುಗಿ ಮುಂದೆ ಹೋದರೆ ಒಂದು ಮರ ಇದ್ದು(ಅಪ್ಪು, ಬೆಂಗ್ಳೂರಿಲ್ಲೂ ಮರ ಇರ್ತು). ಅದರ ಹತ್ತರಾಣದ್ದೇ ಅವರ ಮನೆ. ಬಿಂಗಿ ಪುಟ್ಟ° ಎಲ್ಲ ಹೋಗಿ ಆಗಿತ್ತು, ಹಾಂಗಾಗಿ ಆಗೆರೆಕ್ಕು ಆನು ಬೈಂದಿಲ್ಲೆ ಹೇಳಿ ಹೇಳಿದ್ದು. ಬೆಂಗ್ಳೂರಿಲ್ಲಿ ಕಾರ್ಯಕ್ರಮ ಇದ್ದರೆ ಹೊತ್ತೋಪಗಾಣ ವರೆಗೂ ಆರು ಇರ್ತವು ಅಲ್ಲದ್ರೂ…
ಶುಭತ್ತೆಯ ಮನೆಒಳ ಹೋದ ಕೂಡ್ಲೇ ಇಬ್ರು ಮಕ್ಕೊದೇ ಮೇಲಂಗೆ ಓಡಿದವು. ಆರಾರು ಬಂದರೆ ಅವಕ್ಕೆ ಆವ್ತಿಲ್ಲಡ, ಶುಭತ್ತೆ ದಿನಿಗೇಳಿದರೂ ಬೈಂದವಿಲ್ಲೆ. ರೋಸಿ ಮಾತ್ರ ಓಡಿಬಂದು ಕಾಲಿನ ಹತ್ತರೆ ನಿಂದತ್ತು. ಯಬ್ಬ! ಹೆದರಿಕೆ ಆವುತ್ತು. ನೀನು ಹೇಳಿದಾಂಗೆ ಅದಕ್ಕೆ ದೇವರ ಕೋಣೆಗೆ ನುಗ್ಗುಲೆಡಿಯ! ಅಷ್ಟು ತೋರ ಇದ್ದು. ಪ್ರಕಾಶ ಮಾವನ ಕಾರು ದೊಡ್ಡ ಇದ್ದಕಾರಣ ಬಚಾವ್, ಶುಭತ್ತೆ ಶಾಪಿಂಗ್ ಹೋಪಗ ಅದರಲ್ಲಿ ನಾಯಿಯನ್ನೂ ಕರಕ್ಕೊಂಡು ಹೋವ್ತವು. ಆ ನಾಯಿಗೆ ತಿಂಬಲೆ ಬಿಸ್ಕೆಟ್, ತಿಂಗಳಿಂಗೊಂದರಿ ಡಾಕುಕ್ಟ್ರತ್ತರೆ ಚೆಕಪ್ಪು, ಆಡುಲೆ ಬೊಂಬೆ, ಶೇವ್ ಮಾಡಿಸುಲೆ ಹೇಳಿ ಎಲ್ಲ ತಿಂಗಳಿಂಗೆ ಆರುವರೆ ಸಾವಿರ ಖರ್ಚಾವುತ್ತಡ. ಊರಿಲ್ಲಿ ಬಟ್ಯನ ಕೂಲಿಯನ್ನೇ ನೀನು ಜಾಸ್ತಿ ಹೇಳ್ತಾ ಇತ್ತೆ ಅಲ್ಲದ?
ಮಗಳ ನೋಡಿಕೊಂಬಲೆ ಅಂದು ಬತ್ತ ಇತ್ತಿದ್ದ ಆಯಾ ಕೂಡ ನಾಯಿಯ ಮುಟ್ಟುಲೆ ಬಿಟ್ಟುಕೊಂಡಿತ್ತಿಲ್ಲೆ ಶುಭತ್ತೆ. ಮಕ್ಕಳ ನೋಡ್ಲೆ ಆಯಾ ಇಪ್ಪಗ ಆರಿನ ಮುದ್ದು ಮಾಡುದು? ಅದಕ್ಕೆ ರೋಸಿ ಅವಕ್ಕೆ. ನೀನು ರೋಸಿಯ ಬಗ್ಗೆ ಬರೆದ್ದು ಓದಿಯಪ್ಪಗ ಇದೆಲ್ಲ ನೆಂಪಾತು ಅಷ್ಟೆ.
ಹೇಳಿದಾಂಗೆ “ಬೈಲಿನ ಶುಬತ್ತೆಗೂ, ನಿಜವಾದ ಶುಬತ್ತೆಗೂ ಯೇವದೇ ಸಂಬಂದ ಇಲ್ಲೆ.” ಹೇಳಿತ್ತೆ ಅಲ್ದಾ, ಅದಾರು ನಿಜವಾದ ಶುಭತ್ತೆ ಹೇಳಿ ಶುಭತ್ತೆ ಕೇಳಿಕೊಂಡಿತ್ತವು
ಮತ್ತೆಂತ ನೆನಪಾವ್ತಿಲ್ಲೆ, ಇನ್ನೊಂದರಿ ಕಾಂಬ!
ಬೆಂಗ್ಳೂರಿಂದ,
ಪೆರ್ಲದಣ್ಣ

9 thoughts on “ಶುಭತ್ತೆಯ ರೋಸಿಯ ನೋಡಿ ಬಂದೆ

  1. ಪೆರ್ಲದಣ್ಣನೂ ಮತ್ತೆ ತಮ್ಮನೂ, ಮತ್ತೆ ಆರು, ಆ ಬಗ್ಗೆ ಸಂಶಯ ಬೇಡ. ಆದ್ರೆ ನೆಗೆಗಾರಾ, ಪೆರ್ಲಂದ ಪುತ್ತೂರಿಂಗೆ ಈಗ ೨೫ ರೂಪಾಯಿ. ಹಾಂಗಾಗಿ ನೆಂಪಿರ್ಲಿ, ಪೆರ್ಲದಣ್ಣ ಟಿಕೇಟು ತೆಗೆಶುಗು ಆದರೆ ಎರಡು ಟಿಕೇಟು ತೆಗೆಯ ಹೇಳಿ.

  2. ಪೆರ್ಲದಣ್ಣ,
    ಕಾಕತ ಎಲ್ಲ ಲಾಯಿಕ ಬರದ್ದಿ. ನಿಂಗಳ ಟಿಕೇಟು ತೋರುಸಿ ಪುನಾ ಸಿಕ್ಕಿ ಬಿದ್ದಿ!
    ಈ ಸರ್ತಿ ಕೂಸು ನೋಡ್ಳೆ ಬಂದದಡ, ನೀರ್ಕಜೆ ಚಿಕ್ಕಮ್ಮ ಹೇಳಿತ್ತಿದ್ದವು.
    ಅದರ್ಲಿ ಎರಡು ಸೀಟು – ಹೇಳಿ ಬರಕ್ಕೊಂಡಿದ್ದಲ್ಲದೋ – ಇನ್ನೊಂದು ಆರಿದ್ದದು ಒಟ್ಟಿಂಗೆ? 😉

    1. ಅಯ್ಯೋ.. ಹೀಂಗೆಲ್ಲ ಗ್ರೇಶುತ್ತಿರಿ ಹೇಳಿ ಗೊಂತಿತ್ತಿಲ್ಲೆ.
      {ಆನು ಕಳೆದ ವಾರ ಎರಡೇ ಸರ್ತಿ ಊರಿಂಗೆ ಬಂದಿತ್ತಿದ್ದು.} ಅದರ ಕಳುದ ವರ್ಷ ಹೇಳಿ ತಿದ್ದಿಕೊಳ್ಳಿ. ಆನು ಊರಿಂಗೆ ಹೋಗದ್ದೆ ತುಂಬಾ ಸಮಯಾತು.

      1. {ಆನು ಊರಿಂಗೆ ಹೋಗದ್ದೆ ತುಂಬಾ ಸಮಯಾತು}
        ಕೃಷ್ಣಬಸ್ಸಿಲೇ ಇಬ್ರಿಬ್ರು ತಿರುಗಿರೂ ನಿಂಗಳ ಊರಿಂಗೆ ಹೋಯಿದಿಲ್ಲೆಯಾ ಮಾಣಿ?
        ಪೆರ್ಲದ ತಮ್ಮನತ್ರೆ ಚಾಡಿ ಹೇಳ್ತೆ ನೋಡು!
        ಎಂಗೊ ಆರುದೇ ನೋಡ್ತಿಲ್ಲೆ ಹೇಳಿಯೋ ಹಾಂಗೆಲ್ಲ ಮಾಡುದು, ಹಪ್ಪಾ ನೀನೇ!!

        1. ಅದು ಹಳತ್ತಲ್ಲದೊ ನೆಗೆಗಾರಣ್ಣಾ… ಸರೀ ನೋಡು.
          ಹೋ ಅದರ್ಲಿ ತಾರೀಕು ಬರದ್ದವಿಲ್ಲೆಯಾ? ಬೇಕಾರೆ ತಾರೀಕು ಬರೆದು ಪುನಃ ಅಪ್ ಲೋಡು ಮಾಡುತ್ತೆ

    2. ಈಗಾಣ ಕಾಲಲ್ಲಿಯೂ 2 ಟಿಕೆಟಿಂಗೆ 5 ರೂಪಾಯಿಯಾ? ಆರೋ ಸಣ್ಣ ಮಕ್ಕೊ ಹೋದ ಟಿಕೇಟ್ ಅದು.

  3. ಪೆರ್ಲದಣ್ಣ,
    ಒಪ್ಪಣ್ಣಂಗೆ ಪ್ರೀತಿಲಿ ಬರದ ಕಾಗದ ಓದಿದೆ. ಬೇರೆಯವರ ಕಾಗದ ಓದಲೆ ಆಗದ್ದರೂ ಹೀಂಗಿಪ್ಪ ಕುಶಲ ಸಮಾಚಾರ ಕಾಗದಂಗಳ ಎಲ್ಲರೂ ಕೇಳ್ತಾ ಹಾಂಗೆ ಓದುವ ಕ್ರಮ ಮೊದಲಿಂದಲೂ ಇದ್ದು. ಹಾಂಗಾಗಿ ಓಪ್ಪಣ್ಣ ಎಂಗೊಗೆಲ್ಲ ಓದಲೆ ಕೊಟ್ಟದಿದ.
    ನಿಂಗ ತೋರ್ಸಿದ ಟಿಕೇಟಿಲ್ಲಿ ಎಲ್ಲಿಂದ, ಎಲ್ಲಿಗೆ, ತಾರೀಕು, ಎಷ್ಟು ಜೆನ ಎಲ್ಲ ಬರೆಯದ್ದೆ ಎಂತದೋ ಅಂಕೆ ಕಾಣುತ್ತು. ಅದರ ಓದಲೆ ಎಡಿಯದ್ದೆ “ಅಣ್ಣೆ ಬರೆಯಿನವೆ ಅಣ್ಣೆನೇ ಓದೋಡು” ಹೇಳ್ತ ಮಾತು ನೆಂಪಾತಿದ. ಒಂದು ಟಿಕೇಟಿಂದ ಎಂತೆಲ್ಲ ಅನುಭವ ಆತು ನೋಡಿ!!!
    ಎಂಗೊಗೆ ಬಸ್ಸಿಲ್ಲಿ ಟಿಕೇಟ್ ಕೊಡ್ತ ಕ್ರಮ ಹೇಳಿ ಇದ್ದು. ಆದರೆ ಈ ಸಿಟಿ ಬಸ್ಸಿನವು ಎಂಜಲು ಉದ್ದಿ, ಅದರ ಕೈಲಿ ಕೊಡ್ಲೆ ಬಪ್ಪಗ ಬೇಗ ಕೈ ಹಿಂದಕ್ಕೆ ತೆಕ್ಕೊಂಡು ಹೋಪದಿದ. ಇಲ್ಲದ್ದರೆ ಅವರ ಎಂಜಲಿನ ನಾವು ಗಿಸೆಗೆ ಎಂತಕೆ ಹಾಕಿಯೊಳೆಕ್ಕು ಅಲ್ಲದಾ. ಕೆಲವು ಕಂಡಕ್ಟ್ರುಗೊಕ್ಕೆ ಅದು ಗೊಂತಿದ್ದು ಹೇಳಿ ಕಾಣುತ್ತು. ಅವು ಹರುದ ಟಿಕೇಟಿನ ನೀದಾ ಗಾಳಿಗೆ ಹಾರ್ಸಿ ಬಿಡ್ತವು. ಮತ್ತೆ ಅದರಲ್ಲಿ ಬರದ ಪೈಸೆಗೂ, ನಾವು ಕೊಡುವದಕ್ಕೂ ಎಂತ ತಾಳ ಮೇಳ ಇಲ್ಲೆ. ಮತ್ತೊಂದು ಸರ್ತಿ ನಮ್ಮ ಹತ್ರೆ ಪೈಸಗೆ ಬಾರದ್ರೆ ಆತಿದ.
    ಶುಭತ್ತೆಯ ಮನೆಗೆ ಹೋದ್ದು ಒಳ್ಳೆದಾತು. ಅ ರೋಸಿಯ ನೋಡಿದ ಹಾಂಗೆ ಆತು. ನಿಂಗ ಬರದ್ದರ ಶುಭತ್ತೆ ಓದಿದರೆ “ರೋಸಿಯ” ನಾಯಿ ಹೇಳಿದ್ದಕ್ಕೆ ಎಷ್ಟು ಬೇಜಾರು ಮಾಡ್ತವೋ ಎಂತದೋ? ಅವರ ಹತ್ರೆ ಹಾಂಗೆ ಹೇಳ್ಲೆ ಅಕ್ಕ ಹೇಳಿ ಒಂದು ಸರ್ತಿ ಕೇಳಿದ್ದರೆ ಒಳ್ಳೆದಿತ್ತಿದ್ದು.
    [ಅದಾರು ನಿಜವಾದ ಶುಭತ್ತೆ ಹೇಳಿ ಶುಭತ್ತೆ ಕೇಳಿಕೊಂಡಿತ್ತವು]. ರೋಸಿಯ ಪೋಚಕನ ಮಾಡುವ ದಿಸೆಲಿ ಇದೆಲ್ಲಾ ಅರ್ಥ ಆಯಿದಿಲ್ಲೆ ಆದಿಕ್ಕು.:)

  4. ಬೇರೆವಕ್ಕೆ ಬರದ ಕಾಗದವ ಓದುತ್ತದು ಸರಿಯಲ್ಲ. ಆದರೂ ಕಾಗದದ ಒಕ್ಕಣೆ, ಶುಭತ್ತೆಯ ಮನೆಯ ಸುದ್ದಿ ಹೇಳಿ ಅಪ್ಪಗ ಕೆಮಿ ಕುತ್ತ ಆತು. ಕುತೂಹಲಲ್ಲಿ ಓದಿದೆ, ಪೆರ್ಲದಣ್ಣಂಗೆ ಬೇಜಾರು ಇಲ್ಲೇನೆ ?!
    ಹೇಳಿದ ಹಾಂಗೆ, ಪೆರ್ಲದಣ್ಣಂಗೆ ಶುಭತ್ತೆಯ ಮನೆಲಿ ಆಸರಿಂಗೆ ಎಂತ ಕೊಟ್ಟವೋ ?!
    ಒಂದು ಬಸ್ಸು ಟಿಕೆಟ್ಟಿನ ಸರಿಯಾಗಿ ನೋಡಿದ್ದು ಹೇಳಿರೆ ಇಂದು ಪೆರ್ಲದಣ್ಣನ ಕಾಗದಲ್ಲಿ. ಇಷ್ಟರ ವರೆಗೆ ಅದರಲ್ಲಿ ಎಂತ ಬರಕ್ಕೊಂಡು ಇರುತ್ತು ಹೇಳಿ ಆನು ನೋಡಿದ್ದಿಲ್ಲೆ.
    ಪತ್ರ ರೂಪದ ಲೇಖನ ಲಾಯಕಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×