ಸಣ್ಣ ಸಣ್ಣ ಶುದ್ದಿ ಹೇಳುದರ್ಲಿ ಕಳಾಯಿ ಗೀತತ್ತೆದು ಎತ್ತಿದ ಕೈ.
ದೊಡ್ಡಮಾವನ ಶುದ್ದಿಗೊ ಎಷ್ಟು ದೊಡ್ಡವೋ, ಕಳಾಯಿಗೀತತ್ತೆದು ಅಷ್ಟೇ ಸಣ್ಣ!
ಬೈಲಿನ ಎಲ್ಲಾ ಅಳಿಯ, ಸೊಸೆಯಕ್ಕಳ ಒಟ್ಟಿಂಗೆ ಸಂತೋಷವಾಗಿ ಇಪ್ಪ ಈ ಅತ್ತೆಗೆ - `ಎಡೆ ಹೊತ್ತಿಲಿ ಬೈಲಿಂಗೆ ಬಂದು ಶುದ್ದಿ ಹೇಳಿ ಗೀತತ್ತೆ’ ಹೇಳಿದೆ.
ಸುರುಸುರುವಿಂಗೆ ಎನ್ನಂದ ಅದೆಲ್ಲ ಅರಡಿಯ ಹೇಳಿರೂ, ಕ್ರಮೇಣ ಸುಮಾರು ಸರ್ತಿ ಹೇಳುಗ ಅವಕ್ಕೇ ಆ ಬಗ್ಗೆ ಒಲವು ಬಂತು.
ಓಮಿನಿ ಕಲುಶುಗಳೂ ಹಾಂಗೇ ಆಯಿದು ಹೇಳಿ ಮೈರದಜ್ಜ ನೆಗೆಮಾಡಿದವು.
ಹ್ಮ್, ಅಪ್ಪೂಳಿ, ಈಗ ಗೀತತ್ತೆ ಓಮಿನಿ ಬಿಡ್ತವು ಬುರೂನೆ.
ಪೇಟೆಂದ ಬೈಲಿಂಗೆ ಅವ್ವೇ ಹೋಗಿ ಬತ್ತವು.
ಸಂಗೀತ ಕ್ಲಾಸಿಂದ ಕಳಾಯಿ ಪುಳ್ಳಿಯ ಅವ್ವೇ ಕರಕ್ಕೊಂಡು ಬಪ್ಪದು, ಓಮಿನಿಲಿ.
ಒಂದೊಂದರಿ ದಾರಿಕರೆಲಿ ಒಪ್ಪಣ್ಣ ನೆಡಕ್ಕೊಂಡು ಹೋಪವ ಸಿಕ್ಕಿರೆ ಪೇಂಕ್ ಹೇಳಿ ಒಂದು ಹೋರ್ನು ಬಡಿತ್ತವು,
`ಗುರ್ತ ಸಿಕ್ಕಿತ್ತು’ ಹೇಳುವ ಸೂಚನೆ. ಎಲ್ಲಿ ಸಿಕ್ಕಿರೂ ಮಾತಾಡುಗು.
ಪುರುಸೊತ್ತಿದ್ದರೆ ಓದುಗು, ಭೈರಪ್ಪನ ಪುಸ್ತಕದ ಬಗ್ಗೆ ವಿಶೇಷ ಒಲವು.
ಬೆಂಗುಳೂರಿಂಗೆ ಹೋಗಿಪ್ಪಗ ಅಳಿಯನೊಟ್ಟಿಂಗೆ ಸಿನಮ ನೋಡಿದ್ದುದೇ ಇದ್ದು, ಹಾಂಗೆ ನೋಡಿನೋಡಿ ಸಿನೆಮ ಪದ್ಯಂಗೊ ದಾರಾಳ ಅರಡಿಗು!
ಅಷ್ಟು ಮಾಂತ್ರ ಅಲ್ಲದ್ದೆ, ಕಾಶಿಂದ ರಾಮೇಶ್ವರ (ನೀರ್ಕಜೆ ಅಳಿಯ ಅಲ್ಲ!) ಒರೆಂಗೂ,
ಜಿಮೈಲಿಂದ ಮೈಲುತೂತಿನ ಒರೆಂಗೂ,
ಓಮಿನಿಂದ ಭಾಮಿನಿ ಒರೆಂಗೂ ಮಾಹಿತಿ ತಿಳಿವ ಕುತೂಹಲ ಇದ್ದು ಇವಕ್ಕೆ.
ಎಲ್ಲವು ಅರಡಿಗುದೇ!
ಆಗಲಿ, ಬೈಲಿಂಗೆ ಬಂದು ಅಳಿಯಸೊಸೆಯಕ್ಕೊಗೆ ಉತ್ಸಾಹಲ್ಲಿ ಶುದ್ದಿ ಹೇಳ್ತ ಮನಸ್ಸು ಮಾಡಿದ್ದವು.
ಇವರ ಶುದ್ದಿ ಕೇಳುವ°, ಒಪ್ಪಒಪ್ಪ ಶುದ್ದಿಗೊಕ್ಕೆ ಒಪ್ಪ ಕೊಡುವ°...
Latest posts by ಕಳಾಯಿ ಗೀತತ್ತೆ
(see all) ಅಲ್ಲ…, ನಿಂಗೊ ಬೆಂಗಳೂರಿಂಗೆ/ದೊಡ್ಡ ಪೇಟೆಗೆ ಒಂದರಿ ಬಂದರೆ ಗೊಂತಾಕ್ಕು, ಎಷ್ಟು ಜನ ಭಿಕ್ಷೆ ಬೇಡುವವು ಇದ್ದವು ಹೇಳಿ! ದಾರಿ ದಾರಿಗೂ ಇದ್ದವು.
ಬೇರೆ ಬೇರೆ ನಮೂನೆ ಭಿಕ್ಷುಕರೂ ಇದ್ದವು .
ಇಲ್ಲಿ ಮಕ್ಕಳ ಒಂದು ವ್ಯಾನ್ ಲಿ ತಂದು ಬಿಟ್ಟು, ದೇವರ ಫೋಟೋ ಕೊರಳಿಂಗೆ ನೇಲ್ಸಿ ಬೇಡುಲೇ ಕಳ್ಸುವವು ಇದ್ದವು. ಹೊತ್ತಪಗ ಎಲ್ಲಾರನ್ನು ಒಟ್ಟಿಂಗೆ ವಾಪಾಸ್ ಕರಕ್ಕೊಂಡು ಹೋಕು.
ಅದರ ಎಡಕ್ಕಿಲಿ ಕೆಲವು ನಿಜವಾಗಿಯೂ ಕಾಲು ಸರಿ ಇಲ್ಲದ್ದವು. ಪ್ರಾಯ ಆದವು, ದುಡಿವಲೆ ಎಡಿಯದ್ದವು, ಅದರ ಎಡಕ್ಕಿಲಿ ಎಲ್ಲಾ ಸರಿ ಇದ್ದವುದೇ ಇಕ್ಕು.
ಆರದ್ದೋ ಮಕ್ಕಳ ಒಟ್ಟಿ೦ಗೆ ಹಿಡ್ಕೊಂಬವೂ ಇದ್ದವು. ಕೊಡದ್ರೆ ಹಿಂದಂದ ಓಡ್ಸಿಗೊಂಡು ಬಂದು ಬಡಿವವೂ ಇದ್ದವು.
ಒಟ್ಟು ಆರಿಂಗೆ ನಿಜವಾಗಿ ಪೈಸೆ ಕೊಡೆಕ್ಕಾದ್ದು ಹೇಳಿ ನಿರ್ಣಯ ಮಾಡ್ಲೇ ಎಡಿಯ. ಅಲ್ಲಲ್ಲಿ ಭಿಕ್ಷೆ ಬೇಡುವವು ಬೇರೆ!
ಹಾಂಗಾಗಿ ಎಂತ ಅಪ್ಪದು ಹೇಳಿರೆ.., ಆರಿಂಗೂ ಕೊಡದ್ದೆ ಹೋಪದು ಹೇಳಿ ಅಪ್ಪದು.
ಒಂದೊಂದರಿ ಎಂತ ಮನಸ್ಸಿಂಗೆ ಬಕ್ಕು ಹೇಳಿರೆ, ಈ ಎಲ್ಲೋರಿಂಗೂ ಉಂಬಲೆ ತಕ್ಕ ಸಿಕ್ಕದ್ರೆ ಕದ್ದು ಜೀವನ ಮಾಡ್ಲೆ ಕಲ್ತ್ರೆ ಎಂತ ಅಕ್ಕು ಹೇಳಿ!!
ನ್ಯಾಯವಾಗಿ ಭಿಕ್ಷೆ ಕೊಡಿ ಹೇಳಿ ಕೇಳಿರೆ ಹೆಚ್ಚಿನೋರೂ ಕೊಡ್ತವಿಲ್ಲೇ
ಅಷ್ಟಪ್ಪಗ ಗ್ರೇಷಿ ಹೋತು. ಈ ಎಲ್ಲಾ ಭಿಕ್ಷುಕರೂ ಕಳ್ಳಂಗೋ ಆದರೆ/ಅಗಿರ್ತೀತರೆ!! ನಮ್ಮಂದ ಎಡಿಗೋ…..??!!!
ಕದ್ದ ಸಾಮಾನಿನ ವಸೂಲು ಸುಲಭವೂ ಅಲ್ಲ. ಜನಂಗೋ ಹೋದ್ದು ಹೋತು ಹೇಳಿ ಕೂರ್ತವುದೇ ಅಲ್ಲದೋ …
ಯಾವುದೇ ಸಹಾಯ ಮಾಡುಲೆ ಹೆರಡುವ ಮುನ್ನ ನಾವು ಮನಸ್ಸು ಗಟ್ಟಿ ಮಾಡಿಗೊಂಡೆ ಹೆರಡೆಕ್ಕು. “ಸಹಾಯ ಮಾಡುತ್ತಾ ಹೋದ ಹಾಂಗೆ ಜಗತ್ತು ನಮ್ಮನ್ನೇ ನಿಸ್ಸಹಾಯಕರನ್ನಾಗಿ ಮಾಡುತ್ತು… ಆದರೆ ಸಹಾಯವನ್ನೇ ಮಾಡದ್ದರೆ ನಾವು ನಿಷ್ಪ್ರಯೋಜಕರಾಗಿ ಇರುತ್ತು…”.
ಕೊಟ್ರೂ ಕಷ್ಟ, ಕೊಡದ್ರೂ ಕಷ್ಟ (ಮನಸ್ಸಿಂಗೆ). ಹಾಂಗಾಗಿ ತಲೆತಿರುಗಿಸಿ ನಮ್ಮ ದಾರಿ ನೋಡ್ತದೇ ಒಳ್ಳೆದು ಕಾಣ್ತು ಹಲವು ಸರ್ತಿ. ಒಂದು ರುಪಾಯಿ ಕೊಟ್ರೆ ಹತ್ತು ರೂಪಾಯಿ ಹಾಕಲೆ ಎಂತ ಸಂಕಟ ಹೇಳಿ ಕೇಳ್ವವೇ ಹೆಚ್ಚಿನ ಕಡೆ ಕಾಂಬದು. ಅಸಹಾಯಕಂಗೆ ನಮ್ಮಿಂದಪ್ಪ ಉಪಕಾರ ಮಾಡೆಕ್ಕಪ್ಪದೇ .., ಆದರೆ ನಮ್ಮನ್ನೇ ಅಸಹಾಯಕರಾಗಿ ಮಾಡಿಬಿಡ್ತವು ಹಲವು ಸರ್ತಿ!!