Oppanna.com

ರಾಮಾಯಣ ಕಾಲದ ಸ್ಮಾರಕ

ಬರದೋರು :   ಗಣೇಶ ಮಾವ°    on   18/09/2010    19 ಒಪ್ಪಂಗೊ

ಗಣೇಶ ಮಾವ°

ಇದು ಶ್ರೀ ರಾಮಾಯಣ ನಡದ್ದು ಹೇಳುವದಕ್ಕೆ  ಸಾಕ್ಷಿಯಾಗಿಪ್ಪ  ಒಳುದ  ಸ್ಮಾರಕ ಪಳೆಯುಳಿಕೆಗ.
ಈ ಪ್ರದೇಶಂಗ  ಈಗ ಶ್ರೀಲ೦ಕಾದ ಆಡಳಿತಲ್ಲಿ ಇದ್ದು..
ಅಲ್ಯಾಣ  ಸರ್ಕಾರ ಇದರ ಎಲ್ಲಾ  ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳ ಹೇಳಿ ಪರಿವರ್ತನೆ ಮಾಡ್ಲೆ ಹೆರಟಿದಡ.
ಇದರ್ಲಿ  ಎರಡನೇ   ಚಿತ್ರ  ಎನಗೆ ಕುತೂಹಲ ಮೂಡಿಸಿದ್ದು..
ಆ ಚಿತ್ರಲ್ಲಿ ತೋರ್ಸಿದ  ಗುಹೆಯ ಹೆರಾಣ ಭಾಗಲ್ಲಿ “ ಸುಗ್ರೀವ ಗುಹೆ“ ಹೇಳಿ  ಕನ್ನಡಲ್ಲಿ ಬರದ ಹಾಂಗೆ ಕಾಣ್ತು.
ಅಥವಾ ಅದರ ಅಲ್ಲಿ ಹೋದ  ಪ್ರವಾಸಿಗರು ಕೆತ್ತಿ ಇಕ್ಕೋ ಹೇಳಿ ಗೊಂತಿಲ್ಲೆ..

ಷರಾ: ಎನಗೆ ಬ೦ದ ಈ ಮೇಲ್ ನಿ೦ದ ಈ  ಪಟಂಗಳ ಇಲ್ಲಿ ತೋರ್ಸುತ್ತಾ ಇದ್ದೆ.
ಜೈಶ್ರೀರಾಮ್!

19 thoughts on “ರಾಮಾಯಣ ಕಾಲದ ಸ್ಮಾರಕ

  1. ಆನು ಈ ಪಟಂಗಳ ಬೈಲಿಲಿ ತೋರ್ಸಿದ್ದು ಒಳ್ಳೇದಾತು..ಮಿಂಚಂಚೆ ಬಂದದರ ಪೂರ್ತಿ ನಂಬುಲಾಗ ಹೇಳಿ ಈಗ ಗೊಂತಾತು..ಎನಗೂ ಆ ಕಲ್ಲಿನ ರಥ ನೋಡಿಯಪ್ಪಗ ಸಂಶಯ ಬಂತು,,ಆದರೂ ನಮ್ಮ ಬೈಲಿಲಿ ಹಿರಿಯವು,ಅನುಭವಸ್ಥರು ಇದ್ದವನ್ನೆ,,ಅವು ಸ್ಪಷ್ಟತೆ ಕೊಡುಗು ಹೇಳಿ ಎನ್ನ ನಂಬಿಕೆ..ಸುವರ್ಣಿನಿ ಅಕ್ಕನ ಅಭಿಪ್ರಾಯ ಒಳ್ಳೆದಾಯಿದು…ಅವು ಹೇಳುವದರ್ಲ್ಲಿಯೂ ಸ್ಪಷ್ಟತೆ ಕಾಣ್ತು..ಬೈಲಿಲಿ ಆರಾದರೂ ಈ ಬಗ್ಗೆ ಸರಿಯಾದ ಸ್ಪಷ್ಟತೆ ಕೊಡುವಿರೋ?

    1. ಗಣೇಶ ಭಾವ ನಾವಿದಾ ಹೀಂಗೆ ಒಟ್ಟು ಸೇರಿಯಪ್ಪಗಳೇ ನವಗೆ ಗೊಂಥಿಪ್ಪದರ ವಿಮರ್ಶೆ ಮಾಡ್ಲೆಡಿತ್ತಿದಾ!!
      ಭಾವ ನಮ್ಮ ಗೊಕರ್ಣಲ್ಲಿ ಒಂದು ವಿಶೇಷವಾದ ಸ್ಥಳ ಇದ್ದು ! ನಿಂಗೋಗೆ ಗೊಂತಿಪ್ಪಲೂ ಸಾಕು; ರಾಮಾಯಣಲ್ಲಿ ನಡದ ಒಂದು ಕಥೆಯ ಜಾಗೆ ಇದ್ದು!ರಾವಣ ಜಟಾಯುವಿನ ರೆಕ್ಕೆ ಕಡುದು ಬಿದ್ದ ಜಾಗೆ !!!! ದೇವಸ್ಥಾನಂದ ನಡದು ಹೋಪ ದೂರ ಅಷ್ಟೇ ಇಪ್ಪದು !

      1. ಅಪ್ಪು,ಜಟಾಯುತೀರ್ಥ ಹೇಳಿ ಇಪ್ಪದು..ಓಂ ಬೀಚಿಂಗೆ ಆನು ಹೋಪಗ ನೋಡಿದ್ದೆ..ಸಮುದ್ರಕ್ಕೆ ತಾಗಿಗೊಂಡು ಸಿಹಿ ನೀರು ಬಪ್ಪ ಜಾಗೆ..ಅದುವೇ ಅಲ್ದೋ?

          1. {ಇನ್ನಾಣ ಸರ್ತಿ ಖಂಡಿತಾ ನೊಡೆಕು}
            ಈ ಸರ್ತಿಯೇ ನೋಡಿಕ್ಕಲಾವುತಿತು, ಒಟ್ಟಿಂಗಿದ್ದೋರು ಕೋಪಮಾಡಿ ಮೋರೆ ತಿರುಗುಸದ್ದೆ ಇರ್ತಿತರೆ!! 😉

          2. ಈ ಸರ್ತಿ ಹೊಗಿತ್ತಿದ್ದೆ ಗೊಕರ್ನಕ್ಕೆ. ಆದರೆ ಗಣೇಶ ಮಾವ ಹೇಳಿದ್ದವೇ ಇಲ್ಲೆ. ಒಟ್ಟಿಂಗೇ ಇದ್ದರೂ ಹೇಳಿದ್ದವಿಲ್ಲೇಳಿ….

  2. ಈ ವಿಚಾರದ ಬಗ್ಗೆ ಆನು ಒಂದು ಟಿವಿ ಕಾರ್ಯಕ್ರಮ ನೋಡಿತ್ತಿದ್ದೆ. ಜಾಗೆ ನೋಡ್ಲೆ ಚೆಂದ ಇದ್ದು, ಅಲ್ಲದ್ದೆ ರಾಮಾಯಣದ ಇತಿಹಾಸ ಬೇರೆ !! ಅಲ್ಲಿಯಾಣ ಕೆಲವು ಜಾಗೆಗಳಲ್ಲಿ ಮಣ್ಣು ಕಲ್ಲು ಎಲ್ಲವೂ ಮಸಿ ಕಪ್ಪು, ಹನುಮಂತ ಸುಟ್ಟ ಕಾರಣ ಹೇಳಿ ಹೇಳ್ತವು. ಸೀತಾಮಾತೆಯ ಮಡುಗಿದ್ದ ಅಶೋಕಾವನವನ್ನೂ ಅದರ್ಲಿ ತೋರ್ಸಿತ್ತಿದ್ದವು, ಆ ಜಾಗೆಲಿ ಈಗಳೂ ಅಶೋಕ ಮರಂಗೊ ತುಂಬಾ ಇದ್ದಡ. ಆ ಜಾಗೆಲಿ ನಮ್ಮಲ್ಲಿ ಅಶ್ವತ್ಥ ಕಟ್ಟೆ ಕಟ್ಟಿದ ಹಾಂಗೆ ಕಾಣ್ತು, ಆದರೆ ತುಂಬಾ ಹಳತ್ತು. ಇನ್ನು ಅಲ್ಲಿ ಸಂಜೀವಿನಿ ಪರ್ವತದ ಕುರುಹು ಇದ್ದು ಹೇಳ್ತವು. ಯಾವುದೋ ಒಂದು ಬೆಟ್ಟಲ್ಲಿ ಸುಮಾರು ಔಷದೀಯ ಗಿಡಂಗೊ ಇದ್ದಡ. ರಾವಣನ ಅರಮನೆಯ ಜಾಗೆಯೂ ಇದ್ದು, ಆ ಜಾಗೆ ನೋಡುವಗ ಈಗ ಯಾವುದೇ ಕಟ್ಟಡ ಇಲ್ಲದ್ರೂ..ಅಲ್ಲಲ್ಲಿ ಕಲ್ಲಿನ ಅಡಿಪಾಯ ಇಪ್ಪಹಾಂಗೆ ಕಾಣ್ತು. ಸಮುದ್ರ ತೀರಲ್ಲಿ ಯುದ್ಧ ನಡದ ಜಾಗೆಯೂ ಇದ್ದು. ಆದರೆ ಆನು ಟಿವಿಲಿ ನೋಡಿದ ಪ್ರಕಾರ ನಿಂಗೊ ಇಲ್ಲಿ ಹಾಕೊದ ಪಟಂಗೊ ಅಲ್ಲಿಯಾಣದ್ದಲ್ಲ, ರಾಮಸೇತುದು ಬಿಟ್ಟು.

    1. { ಯುದ್ಧ ನಡದ ಜಾಗೆಯೂ ಇದ್ದು. ಆದರೆ ಆನು ಟಿವಿಲಿ ನೋಡಿದ ಪ್ರಕಾರ }
      ಯಬ್ಬ!
      ಯುದ್ಧ ನಿಂಗಳ ಟೀವಿಲಿ ಕಂಡತ್ತೋ ಅಂಬಗ?
      ಕೊಳಚ್ಚಿಪ್ಪು ಬಾವಂಗೆ ಗೊಂತಾದರೆ ನಿಂಗಳ ಟೀವಿಗೆ ಕ್ರಯಮಾಡುಗು! 😉

  3. ಈ ಸುಗ್ರೀವ ಗುಹೆ ಮತ್ತೆ ಅಕೇರಿಯಾಣ ಪಟ ಹಂಪೆದು (ಹಂಪೆಲಿ ಕಿಷ್ಕಿಂದ ಹೇಳಿ ಬೆಟ್ಟ ಇದ್ದು )…ಬಾಕಿ ಇಪ್ಪದೆಲ್ಲ ಶ್ರೀಲಂಕದ್ದು ಆದಿಕ್ಕು…ಮಿಂಚಂಚೆಲಿ ಸುಮಾರು ಜನ ಹೀಂಗೆ ಲೊಟ್ಟೆ ಚಿತ್ರ ಹಾಕಿ ಕಳ್ಸುತ್ತವು. ಎಲ್ಲದನ್ನೂ ನಾವು ನಂಬುಲೆ ಎಡಿಯ.

    1. ಅಪ್ಪು ಕೊಳಚ್ಚಿಪ್ಪುಭಾವಾ, ಎಲ್ಲೊರುದೇ ನೇರ್ಪದ ಪಟಂಗೊ ಹಾಕವು.
      ನಿನ್ನ ಹೆಸರಿನೊಟ್ಟಿಂಗೆ ಇಪ್ಪ ಪಟದ ನಮುನೆ!! 😉

  4. ಮಾವಾ,ಈ ಪಟಂಗ ಶ್ರೀಲಂಕದ್ದು ಅಲ್ಲ ಹೇಳಿ ಎನ್ನ ಅಂದಾಜು.
    ಕಡೇ ಪಟ ಹಂಪೆಯ ಕಲ್ಲಿನ ರಥ.ರಾಮಸೇತುವಿಂದು ನಿಜ.ಒಳುದ್ದು ಎಂತದು ಹೇಳಿ ರಜಾ ಹುಡುಕ್ಕುವ ಪ್ರಯತ್ನ ಮಾಡ್ತೆ.

    1. ಹ್ಮ್ಮ್,ಆದಿಕ್ಕು… ಎನಗೆ ಬಂದ ಮಿಂಚಂಚೆ ಪ್ರಕಾರ ಹೀಂಗೆ ತೋರ್ಸುತ್ತಾ ಇದ್ದೆ..ಈ ಬಗ್ಗೆ ಎನಗೆ ಸ್ಪಷ್ಟ ದೃಡೀಕರಣ ಕೊಡುವಿರಾ?

    2. “ಸುಗ್ರೀವನ ಗುಹೆ (ಹೆರಾಣ ನೋಟ)..” ಮತ್ತೆ.. “ಸೀತೆಯ ರಾವಣ ಬಂಧನಲ್ಲಿ ಮಡುಗಿದ ಅಶೋಕವನ”
      ಭಾವೊ೦… ಇದರಲ್ಲಿ ಎರಡುದೆ.. ಹಂಪೆಲಿಪ್ಪದು.. ಎದಾ.. ಈ ಸನ್ಕೊಲೆ ನೋಡಿ.. 😛
      http://sites.google.com/site/manjunathkp2/hampi

    3. ಯೋ… ಅನು ಎ೦ತರ ನ೦ಬುಸು, ಬಿಡುಸು.. ಎ೦ತದುದೆ… ಗೊ೦ತಾವುತ್ತಿಲೆನೆಪ್ಪಾ..!!! 😀

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×