Oppanna.com

ಈಗ ಬೈಲಿಲಿ ಕನ್ನಡ ಅಕ್ಷರಲ್ಲಿಯೂ ಬರವಲೆಡಿತ್ತು!!

ಬರದೋರು :   ಶುದ್ದಿಕ್ಕಾರ°    on   22/01/2011    53 ಒಪ್ಪಂಗೊ

ಎಲ್ಲೋರಿಂಗೂ ಒಂದು ಕೊಶಿಶುದ್ದಿ!
ಸುಮಾರು ಸಮೆಯಂದ ಕಾದ ’ಕನ್ನಡಲ್ಲಿ ಟೈಪು ಮಾಡ್ತ’ ವಿಚಾರ ಇಂದು ಬಂತಿದಾ..

ಬರೇಕಾರೆ ಎಂತ ಮಾಡೆಕು?:
ಬೈಲಿನ ಮೇಗೆ-ಕೊಡೀಲಿ ಒಂದು ಸಣ್ಣ ಪೆಟ್ಟಿಗೆ ಇದ್ದಲ್ಲದೋ – ಅದರ್ಲಿ ಭಾರತದ ಹೆಚ್ಚಿನ ಭಾಶೆಯ ಲಿಪಿಗಳಿಂದ ತೊಡಗಿ, ಇಂಗ್ಳೀಶು ಲಿಪಿಯ ಒರೆಂಗೂ ಇದ್ದು!
ನಿಂಗೊಗೆ ಬೇಕಾದ್ದರ ಆಯ್ಕೆ ಮಾಡಿರೆ ಆ ಭಾಶೆಲಿ ಬರವಲೆಡಿತ್ತು!

ಭಾಷೆ ಬದಲುಸುತ್ತ ಕೊಳಿಕ್ಕೆ

ಬರವದು ಹೇಂಗೆ?:
ಇದು IndicIME – ಭಾಶೆ ಪರಿವರ್ತಕ.
ಈ ವೆವಸ್ತೆಲಿ ’ಮಾತಾಡ್ತ ನಮುನೆ ಬರೆತ್ತದು’.
ಉದಾ:
ವಿನಾಯಕ – ಈ ಶಬ್ದವ ಇಂಗ್ಳೀಶಿಲಿ ಹೇಂಗೆ ಬರೆತ್ತಿ? – vinaayaka, ಅಲ್ದೋ?
ಹಾಂಗೇ ಬರದರೆ ಆತು ಇಲ್ಲಿಯುದೇ!

ವರ್ಣಮಾಲೆಯ ಬರವಣಿಗೆ ವಿವರ:

ಸ್ವರಾಕ್ಷರಂಗೊ:

ಅ  = a ಆ  = aa / A ಇ = i ಈ = ii / I ಉ = u ಊ = uu / U
ಋ = R ೠ = RR ಎ = e ಏ = E ಐ = ai ಒ = o
ಓ = O ಔ = ou ಅಂ = aM ಅಃ = aH

ವರ್ಗೀಯ ವ್ಯಂಜನಂಗೊ:

ಕ್ = k ಖ್ = K / kh ಗ್ = g ಘ್ = G / gh ಙ್ = NG
ಚ್ = c ಛ್ = C / ch ಜ್ = j ಝ್ = J / jh ಞ್ = NY
ಟ್ = T ಠ್ = Th ಡ್ = D ಢ್ = Dh ಣ್ = N
ತ್ = t ಥ್ = th ದ್ = d ಧ್ = dh ನ್ = n
ಪ್ = p ಫ್ = P (ph) ಬ್ = b ಭ್ = B / bh ಮ್ = m

ಅವರ್ಗೀಯ ವ್ಯಂಜನಂಗೊ:

ಯ್ = y ರ್ = r ಲ್ = l ವ್ = v ಶ್ = S / sh ಷ್ = Sh
ಸ್ = s ಹ್ = h ಳ್ = L
ಕ್ಷ್ = ksh ತ್ರ್ = tr ಜ್ಞ್ = jNY

ಭಾಷೆ ಬದಲಾವಣೆ ಹೇಂಗೆ?:
ಒಂದು ಭಾಶೆಲಿ ಬರೆತ್ತಾ ಹೋಪಗ ನಿಂಗೊ ಪಕ್ಕನೆ ಎಡಕ್ಕಿಲಿ ಮಾತೊಂದು ಭಾಶೆಯ ಶಬ್ದ ಸೇರುಸೇಕಾತು –
ಕೂಡ್ಳೇ ಆ ಪಟ್ಟಿಯ ನೋಡಿ, ಅದರ್ಲಿಪ್ಪ ಇನ್ನೊಂಬ ಭಾಶೆಯ ಆಯ್ಕೆ ಮಾಡಿರೆ ಆತು.
ಯೇವ ಭಾಶೆಯೂ ಬೇಡ, ಬರೇ ಇಂಗ್ಳೀಶು ಮಾಂತ್ರ ಸಾಕೋ – ನಿಂಗಳ ಕೀಬೋರ್ಡಿನ F12 ಸುಚ್ಚು ಒತ್ತಿ, ಅಷ್ಟೇ!

ಬರವಲೆ ತೊಂದರೆ ಆವುತೋ?
:

ಎಂತಾರು ತೊಂದರೆ, ಸಂಶಯ ಬಂದರೆ ಒಪ್ಪ ಕೊಟ್ಟು ಕೇಳಿ.
ಆತೋ?
~
ಶುದ್ದಿಮಾಣಿ

ಸೂ:

  • ಅರ್ದ ಅಕ್ಷರ ಬೇಕಾರೆ – Shift + x ಒತ್ತೇಕು.
    ಉದಾ:
    ಕಳ್ಳ = ಕಳ್ + ಳ
    = ಕಳ್ + Shift  X + ಳ
    = kaL + Shift X + La
    = ಕಳ್ಳ

53 thoughts on “ಈಗ ಬೈಲಿಲಿ ಕನ್ನಡ ಅಕ್ಷರಲ್ಲಿಯೂ ಬರವಲೆಡಿತ್ತು!!

  1. ಹ್ಝಾಂ ಎನಗುದೆ ಕನ್ನಡಲ್ಲಿ ಬರವಲೆ ಎಡಿಗಾತಿದಾ….ಧನ್ಯವಾದೊಂಗ….

  2. ಧನ್ಯವಾದ.
    ಆದರೆ ಆನು ಕೇಳಿದ್ದು ಱ. ಅದಕ್ಕೆ ‘ಶಕಟ ರೇಫ’ ಹೇಳಿ ಹೆಸರು. ನಿಂಗೊ ಹೇಳಿದ್ದರ ಶುದ್ದಿಕ್ಕಾರನೇ ಬರದ್ದ°.

      1. IndicIME Tab ಲಿ ಇಪ್ಪ ” ? ” ಚಿಹ್ನೆಯ ಮೇಲೆ click ಮಾಡಿದರೆ Help chart ನೋಡ್ಲಕ್ಕು.

  3. ಶುದ್ದಿಕ್ಕಾರಂಗೆ ಒಪ್ಪ.
    ಎರಡು ಸರ್ತಿ LL ಒತ್ತಿರೆ ೞ ಬಂತು. ಆದರೆ ಱ ಬರೆಕ್ಕಾರೆ ಎಂತ ಮಾಡೆಕ್ಕು?

  4. ಒಂದು ತಪ್ಪು ಇದ್ದೋ ಹೇಳಿ=
    ksh = ಕ್ಶ್
    kSh = ಕ್ಷ್
    ತಿದ್ದಿಕ್ಕಿ.

  5. ಬೈಲಿಲಿ ರಿಜಿಸ್ತ್ರಿ ಹೇಳ್ರೆ ಎಂತಾ ಹೇಳಿ ಗೊಂತಾತಿಲ್ಲೆನ್ನೆ!.

  6. “ಶ್ರೀ ಗುರುಭ್ಯೋ ನಮಃ”
    ಹೋ ಬರವಲೆಡಿತ್ತು ಇನ್ನು “ಬರಹ” ಬೇಡ.

  7. ಶುದ್ದಿಕ್ಕಾರ° ನಿನಗೆ ದನ್ಯವಾದ… ಎ೦ತೆಗೆ ಕೇಳ್ತ್ಯೊ….

    ಅ,ಆ,ಇ,ಈ.. ಪುನಾ ನಿ೦ಪುಮಾಡಿಕೊಟ್ಟದಕ್ಕೆ… 😛

  8. ಎನ್ನ ಕಂಪ್ಯೂಟರಿಲ್ಲಿ haLLa kaLLa beLLa ಬರದರೆ ಹೞ ಕೞ ಬೆೞ ಹೇಳಿ ಬತ್ತಾನ್ನೆ,ಹೇಂಗೆ ಸರಿ ಮಾದುವದು? (os-winxp)

    1. ಈ ತೊಂದರೆ ಎನಗೂ ಬಂತು. haLLi ಬರದರೆ ಹೞಿ ಬಂತು

      1. ಒಂದರಿ ಆಂಗ್ಲಭಾಷೆಯ ಸೆಲೆಕ್ಟ್ ಮಾಡಿ ಮತ್ತೆ ರಿಫ್ರೆಶ್ ಮಾಡಿ, ಪುನ ಕನ್ನಡ ಒತ್ತಿರೆ ಸರಿ ಅಪ್ಪ ಸಾಧ್ಯತೆ ಇದ್ದು ಕಾಣ್ತು.. ಃ)

        1. ಒಳ್ಳೆ ಪ್ರಶ್ನೆ ಶಂಕರಮಾವ..
          ಶುದ್ದಿಲಿಯೇ ಉತ್ತರವ ಸೇರುಸಿದ್ದು.

          ದಯವಿಟ್ಟು ನೋಡಿ ಉಪಯೋಗವ ಪಡಕ್ಕೊಳೇಕು ಹೇಳಿ ಕೇಳಿಕೆ.
          ಹರೇರಾಮ.

          1. ಈಗ ಲಾಯಿಕ ಆತು.
            ಶರ್ಮಪ್ಪಚ್ಚಿ ಹೇಳಿ ಇಲ್ಲಿಯೇ ಬರವಲೆ ಆತಿದ

        2. ಬಲ್ನಾಡುಮಾಣೀ..
          ಲೊಟ್ಟೆ ಹೇಳ್ತಯಾ, ಕಳ್ಳಾ.. 😉
          (ಎನಗೆ ನೀನು ಹೇಳಿದಾಂಗೆ ಮಾಡದ್ದೆ ಬರವಲೆಡಿತ್ತು!)

  9. ॥ಹರೇ ರಾಮ॥
    ಬೈಲಿಂಗೆ ಅಕ್ಷರಾಭ್ಯಾಸ ಆತದಾ ಈಗ!!! ಬೊಳುಂಬು ಮಾವ° ಗಣಪತಿ ದೇವರ ಹೆಸರಿಲೇ ಸುರು ಮಾಡಿದವು. ಲಾಯ್ಕಾತು.
    ಶುದ್ದಿಕ್ಕಾರೋ, ಎಳೆ ಎಳೆಯಾಗಿ ಬರವದರ ಬಗ್ಗೆ ವಿವರಣೆ ಕೊಟ್ಟದು ಲಾಯ್ಕಾಯಿದು. ಧನ್ಯವಾದಂಗೋ….
    ಒಪ್ಪ ಕೊಡ್ಲೆ ಸುಲಾಬ ಆತು…

    ನಮ್ಮ ಯೇನಂಕೊಡ್ಳು ಅಣ್ಣಂಗೆ ಒಂದರಿ ಕೈಹಿಡಿಶಿ ಕನ್ನಡ ಹೇಳಿ ಕೊಡ್ಲೆ ಗುರಿಕ್ಕಾರ್ರ ಹತ್ತರೆಯಾ, ಬಟ್ಟಮಾವನ ಹತ್ತರೆಯಾ ಹೇಳುಲೆ ಆವುತ್ತಿತ್ತೋ ಕಾಣ್ತು. 😉

  10. ಯೆಬೇಲೆ!
    ಆನು ಇಂಗ್ಳೀಶಿಲಿ ಬರದರೂ ಇಲ್ಲಿ ಕನ್ನಡಲ್ಲಿಯೇ ಬತ್ತು! 🙁

    ಆನು ಇಂಗ್ಳೀಶು ಕಲಿವಲಾಗ ಹೇಳಿ ಹೀಂಗೆಲ್ಲ ಮಾಡಿದ್ದೋ?

    1. ಅಪ್ಪು. ನಿನ್ನ ಇಂಗ್ಲೀಷ್ ಕಲಿಯಾಣ ಮುಂದೆ ಹೋವ್ತ ಹಾಂಗೆ ಕಾಣ್ತಿಲ್ಲೆ.
      ಕನ್ನಡ ಆದರೂ ಸರಿ ಕಲಿ ಹೇಳಿ ಈ ವೆವಸ್ಥೆ ಮಾಡಿದ್ದವು ನಮ್ಮ ಗುರಿಕ್ಕಾರ್ರು

    2. @ನೆಗೆಗಾರ°..
      {ಆನು ಇಂಗ್ಳೀಶು ಕಲಿವಲಾಗ ಹೇಳಿ ಹೀಂಗೆಲ್ಲ ಮಾಡಿದ್ದೋ?}

      ಅಪ್ಪು ಮಾಣಿ. ನಿನಗೆ ಬೈಲಿಲಿ ಸರ್ಕೀಟು ಅಪ್ಪಗಳೇ ದಿನ ಮುಗಿತ್ತಡ್ಡ ಶಾಂತತ್ತೆ ಮೊನ್ನೆ ಪರಂಚಿಗೊಂಡಿತ್ತಿದ್ದವು.
      ಶುದ್ದಿ ಬರವದು ಬಿಟ್ಟಿದೆನ್ನೆ!!! ಈಗ ಬೈಲಿನ ಶುದ್ದಿ ಓದುತ್ತದೂ ಇಲ್ಲೆಯೋ ಅಂಬಗ? ಎಡೇಲಿ ಕೆಲವು ದಿಕ್ಕೆ ಪ್ರತ್ಯಕ್ಷ ಅಪ್ಪದು ಕಾಣ್ತು.

      ಮಾಷ್ಟ್ರುಮಾವ° ಬಿಂಗಿ ಮಾಡುದು ಬಿಟ್ಟು ಇಂಗ್ಲೀಷು ಕಲಿ ಹೇಳಿ ಅಪ್ಪಗ ಒಂದರಿ ಅಕ್ಷರದಣ್ಣ ಕೊಟ್ಟ ಡಿಕಿಶ್ನರಿ ಹಿಡುದ್ದು ಬೈಲಿಂಗೆ ಕಂಡಿದು. ಶ್ರೀಶಣ್ಣ ಹೇಳಿದ್ದೇ ಆತೋ ಹೇಳಿ ಕಾಣ್ತು… ದಿಕಿಶ್ನರಿ ತಲೆದಿಂಬು ಆಯಿದೋ ಸಂಶಯ!!!!;-)
      ಈಗ ಇಂಗ್ಳೀಶೂ ಇಲ್ಲೆ, ಏಕಪದಿಯೂ ಇಲ್ಲೆ ಬೈಲಿಲಿ ನೆಗೆಗಾರನ ಎಲ್ಲೋರೂ ಕಾದ್ದದೇ ಬಂತು.. 🙁

  11. ಅಬ್ಬ..! ಇಷ್ಟು ದಿನ ಶುದ್ದಿ ಹೇಳ್ತೆ ಹೇಳಿರೂ ಒಪ್ಪ ಕೊಡ್ತೆ ಹೇಳಿರೂ ಒಪ್ಪದ್ದೆ ಮೋರೆ ತಿರುಗುಸಿ ಓಡಿಂಡಿತ್ತು. ಅದ- ಈಗ ಶುದ್ದಿ ಹೇಳಲೆ ಬಿಡದ್ರೂ ಒಪ್ಪ ಕೊಡ್ಲೆ ಕೊಶೀಲಿ ಒಪ್ಪುತ್ತು!

    ಏರ್ಪಾಡು ಅಡಿಪ್ಪೊಳಿ..

    1. {ಈಗ ಶುದ್ದಿ ಹೇಳಲೆ ಬಿಡದ್ರೂ}
      ಸುಭಗರಿಂಗೆ ನಮಸ್ಕಾರ!

      ಬೈಲು ಎಲ್ಲೋರಿಂಗೂ ಇಪ್ಪಂತಾದ್ದು, ಶುದ್ದಿ ಹೇಳುಲೆ ಬಿಟ್ಟೇ ಬಿಡ್ತು.
      ಈ ವಾರವೇ ನಿಂಗೊ ಶುದ್ದಿ ಹೇಳುಲೆ ವೆವಸ್ತೆ ಮಾಡುವೊ°,
      ಒಂದು ಚೆಂದದ ಶುದ್ದಿ ತೆಯಾರು ಮಾಡಿ!

      ಬೈಲಿಂಗೆ ಬನ್ನಿ, ನೆರೆಕರೆಲಿ ಒಂದಾಗಿ.
      ಹರೇರಾಮ

    2. {ಅಡಿಪ್ಪೊಳಿ..}=
      ಸುಭಗಣ್ಣ ತೆಂಕ್ಲಾಗಿತ್ತಿದ್ದವೋ ಹೇಂಗೆ?

      1. ವರ್ಮುಡಿ ಮಾವಾ.. ಆನು ತೆಂಕ್ಲಾಗಿ ‘ತಾಮಸ’ ಮಾಡಿದ್ದಿಲ್ಲೆ. ಆದರೂ ಕೇರಳಕ್ಕೆ ಹೋದರೆ ‘ಸಂಸಾರ’ ಮಾಡ್ಲೆ ಬೇಕಾಷ್ಟು ಮಲಯಾಳಂ ಗೊಂತಿದ್ದು..! 😉

        1. ಬಚಾವು! “ಸಮ್ಮಂದಂ” ಮಾಡಿದ್ದೂ ಇಲ್ಲೆನ್ನೆ!. ಕುಂಬ್ಳೆ ಸೀಮೆಲಿ ಹುಡ್ಕಿರೆ “ಸಮ್ಮಂದಂ ವಿಳಕ್ಕ್” ಸಿಕ್ಕುಗು.
          “ಸಂಸಾರ” ಮಾಡ್ಳೆ ಎನಗೂ ಕರ್ಚಿಗೆ ತಕ್ಕ ಗೊಂತಿದ್ದು.
          “ತಾಮಸ”= ವಾಸ
          “ಸಂಸಾರ” = ಮಾತಾಡುದು
          “ಸಮ್ಮಂದಂ”= ನಾಯರ್ ಹುಡುಗಿಯೊಟ್ಟಿಂಗೆ ಅವೈದಿಕ ಮದುವೆ(ಅಧಿಕೃತ ಮಾನ್ಯತೆ ಇಪ್ಪ)
          “ಸಮ್ಮಂದಂ ವಿಳಕ್ಕ್”= ಕಸ್ತ್ಲಪ್ಪಗ ನಾಯರ್ ನ ಮನೆಗೆ ಹೋಪಲಿಪ್ಪ ಒಂದು ರೀತಿಯ ದೀಪ

          1. ಏ ಮಾವಾ, ನಿಂಗೊ ‘ಎಲ್ಲಿ ಮಡುಗಿ’ ಇಷ್ಟೆಲ್ಲ ಕಲ್ತದು..?!!

          2. ನಿಂಗೊ ವಿವರುಸಿದ ಮೂರನೆ ವಿಷಯ ನಮ್ಮ ಅಜ್ಜಂದಿರ ಕಾಲಲ್ಲಿ ಒಳ್ಳೆತ ಇತ್ತಡ. 😉

          3. “ಶಾಂತಿ ಮಾಡ್ಲೆ ತೆಂಕ್ಲಾಗಿ ಹೋಪದು” – ನಿಜಾರ್ಥಲ್ಲಿ ದೇವಸ್ಥಾನದ ಪೂಜೆ ಮಾಡ್ಲೆ ಹೋಪದು; ಆಂತರ್ಯಲ್ಲಿ “ಸಂಮ್ಮಂದ” ಹೇಳ್ತ ಅರ್ಥ.

          4. {“ಎಲ್ಲಿ ಮಡುಗಿ” ಕಲ್ತದು ?} = “ಎವಿಡೆ ಬೆಚ್ಚ್ ಪಡಿಚ್ಚ್ ?”
            ಕುಂಬ್ಳೆ ಸೀಮೆಯ ಪದಪ್ರಯೋಗ; ಒಳುದವಕ್ಕೆ ದ್ವಂದ್ವಾರ್ಥ ಕಾಂಗು.

          5. ಬೈಲಿನ “ಸಕಲಸೀಮಾ ಪದಪ್ರಯೋಗ ಪರಿಣತ ಮತಿಗಳ್”ಸೇರಿ ಚೆ೦ದಗೊಳುಸಿದವು ಹೇಳುಲೆ ಅಡ್ಡಿ ಈಲ್ಲೆ..

  12. ಧನ್ಯವಾದಗಳು…ಕನ್ನಡ/ ಹವ್ಯಕ ಭಾಶೆಲಿ ಬರವಹಾನ್ಗೆ ಆರು ಮಾಡಿದ್ದವೊ ಅವಕ್ಕೆ ಶುಭಾಶಯನ್ಗೊ….ಹೀನ್ಗೆ ಇಪ್ಪ ಸುಧಾರನೆಗೊ ಇನ್ನು ಬರಲಿ….

  13. ಈಗ `ಜ್ಞಾ’ನ ಸರೀ ಬ೦ತು ಬರವಲೆ.
    ಪಟ್ಟಿಲ್ಲಿ {ಜ್ಞ್ = jNG} jNY ಹೇಳಿ ಆಯೆಕಲ್ಲದ?
    ಞ್ = NY ಆದರೆ ಜ್ಞ್ = jNY ಆಯೆಕನ್ನೆ!

    1. ಓ! ಬೈಲಿಂಗೆ ಹೇಳು ಹೇಳಿದ್ದಕ್ಕೆ ಗಡಿಬಿಡಿಲಿ ಹೇಳಿದ್ದ ನಮ್ಮ ಶುದ್ದಿಕ್ಕಾರ°..
      ತಪ್ಪು ತಿಳಿಶಿಕೊಟ್ಟದಕ್ಕೆ ವಂದನೆಗೊ.

      ಸರಿ ಮಾಡಿತ್ತು, ನೋಡಿಕ್ಕಿ ಒಂದರಿ.
      ಹರೇರಾಮ..

  14. ಈಗ ಬರವಲೆ ಸುಲಾಭ ಆತನ್ನೇ.”ಸೊಲುದ ಬಾಳೆಹಣ್ಣಿನ೦ದದಿ” ಹೇಳಿ ದೊಡ್ಡೋರು ಹೇಳಿದ್ದು ಇದನ್ನೇ ಆಗಿಕ್ಕು,ಅಲ್ಲದೋ..ಬೋಚಭಾವ,ನಾಕು ಒಪ್ಪ ಹೆಚ್ಚು ಬರದುಹೋಕೋ ಹೇ೦ಗೆ? “ಭಾವ°” -ಇದರ ಹೇ೦ಗೆ ಬರೆತ್ಸು?

    1. ಕದಿವದಕ್ಕಿಂತಲೂ Alt+248 ಒತ್ತುದು ಸುಲಾಭ ಹೇಳಿ ಒಪ್ಪಣ್ಣ ಹೇಳಿ ಕೊಟ್ಟಿತ್ತಿದ್ದ° ಒಂದರಿ…

    2. ರಘು ಭಾವ,
      ಎ೦ತ ರಸಾಯನ ಮಣ್ಣೊ ಮಾಡ್ಲಿದ್ದೊ.. ಆನುದೆ ಅಜ್ಜಕಾನ ಭಾವನು ಬತ್ಯೊ… ಒ೦ದು ಲಾಲ್ಕು ಲೋಟ ತೆಗದು ಮಡುಗಿ.. ಆತ.. 😉

      1. [ಒ೦ದು ಲಾಲ್ಕು ಲೋಟ ತೆಗದು ಮಡುಗಿ]
        ಅಕ್ಕು. ಲೋಟ ತೆಗದು ಮಡುಗ್ಗು, ಖಾಲಿ !!!

  15. ಇದಿದ ಕೆಲಸ ಹೇಳೀರೆ ಈಗ ಎಶ್ಷ್ಷ್ಟು ಸುಲಭ ಆತು ಹಿ೦ಗೆ ಬೇಕಿದ ಒಪ್ಪಣ್ಣ ಹೇಳೀರೆ.ಒಪ್ಪ೦ಗಳೊಟ್ಟಿ೦ಗೆ

  16. ಇದರಿಂದ ಬೇಗ ಒಪ್ಪ ಬರವಲೆ ಇಡಿತ್ತು. ಮೊದಲಾದರೆ ಬರಹವೋ,ನುಡಿಗೋ ಹೋಗಿ ಬರೆಯೆಕ್ಕಲ್ಲದ…………

  17. ಇದು ಬಹಳ ಉಪಕಾರಿ ಕೆಲಸ ಆತು. ಧನ್ಯವಾದ೦ಗೊ. ಆನು ಅಲ್ಲದ್ರೆ ಕನ್ನಡ ಸ್ಲೇಟಿ೦ಗೆ ಹೋಗಿ ಅಲ್ಲಿ ಟೈಪಿಸಿ, ಅಲ್ಲಿ೦ದ ನಕಲು ಮಾಡಿ ಇಲ್ಲಿ ಅ೦ಟಿಸಿ ಎಲ್ಲ ಮಾಡಿ೦ಡು ಇತ್ತಿದ್ದದು. ಈಗ ಸುಲಾ…..ಬ ಆತಿದಾ…

  18. ಓಂ ಶ್ರೀ ಮಹಾ ಗಣಪತಯೇ ನಮಃ ।

    ಬರಹಕ್ಕೆ ಹೋಗದ್ದೆ ಕನ್ನಡಲ್ಲಿ ಬರವಲೆ ಎಡಿತ್ತೋ ನೋಡಿದೆ. ಓ, ಲಾಯಕಾಯಿದು. ಶುದ್ಧಿಕಾರಂಗೆ ಮನಸಾರೆ ಧನ್ಯವಾದಂಗೊ. ಅಂತೂ ಹೊಸ ವರ್ಷಲ್ಲಿ ಹೊಸ ಹೊಸ ವ್ಯವಸ್ಥೆಗೊ ಎಲ್ಲ ಬಂದು ಬೈಲಿನವಕ್ಕೆ ಸುಲಭ ಆತಿದ.

  19. ಹೀಂಗಿಪ್ಪ ವೆವಸ್ಥೆ ಮಾಡಿದ್ದು ಒಳ್ಲೆದಾತು. ಇನ್ನು ಎಲ್ಲರಿಂಗೂ ನಮ್ಮ ಭಾಶೆಲಿ ಬರವಲೆ ಅಕ್ಕು. ಶುದ್ದಿಕ್ಕಾರಂಗೆ ಧನ್ಯವಾದಂಗೊ

  20. ಇದು ನಿಜಕ್ಕೂ ಪಷ್ಟಾಯಿದು. ನಮ್ಮ ಭಾಷೆಲಿ ಬರವಲೆ ಅರಡಿಯದ್ದೆ ಕೆಲವು ಜೆನ ಬೈಲಿಲ್ಲಿ ಹರ್ಕತ್ತು ಮಾಡಿಗೊಂಡ ಹಾಂಗೆ ಇನ್ನು ಆಗ, ಅಲ್ಲ್ದೋ…?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×