- ನಮ್ಮ ಊರಿನ ಹಕ್ಕಿಗ… - June 9, 2012
- ಈಶ್ವರಮ೦ಗಲಲ್ಲಿ ಪ೦ಚಮುಖೀ ಹನುಮಾನ್ ಮ೦ದಿರ…. - May 20, 2011
- ಒ೦ದು ಚೋದ್ಯ?? - February 28, 2011
ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು!!
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ.
ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ.
ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ.
ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು.
ಮಕ್ಕೊಗೆಲ್ಲ ಬೆಳಿ ಬಣ್ಣದ್ದು – ಪಾಪದ್ದು.
ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು,
ದೊಡ್ಡವಕ್ಕೆ ಕಪ್ಪು ಬಣ್ಣದ್ದು – ಷ್ಟ್ರೋಂಗು!
ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ – ಅವು ಮಾತಾಡ್ಳೆ ಸುರು ಮಾಡುದಡ!
ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ.
ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು.
ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು.
ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು,
ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು.
ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವಡ.
ನಾವೆಲ್ಲರುದೇ ಕೇಳುವೊ.
ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು – ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ.
(ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ…ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ…ನಿ೦ಗೊಗೂ ಬೇಕಾರೆ ಕೇಳಿ!!!!)
ಮದ್ದು ತೆಕ್ಕೊಳಿ, ಒಪ್ಪ ಕೊಡಿ.
ಆಗದೋ?
~
ಒಪ್ಪಣ್ಣ
ನಮಸ್ಕಾರ ಒಪ್ಪಣ್ಣ೦ಗೆ,
ನಿನ್ನ ಸೈಟಿಲಿ ಎನಗೆ ಒ೦ದು ಚೂರು ಜಾಗೆ ಕೊಟ್ಟು ಬರವಲೆ ಅವಕಾಶ ಮಾಡಿಕೊಟ್ಟದಕ್ಕೆ ಧನ್ಯವಾದ೦ಗ…
ನವಗೆ ಬೇರೆಯವು ಬರದ್ದರ ಪುರುಸೊತ್ತಿಪ್ಪಗ ಓದಿ ನೋಡಿ ಅಭ್ಯಾಸ ಇದ್ದಲ್ದೆ ಸ್ವ೦ತವಾಗಿ ಬರದು ಅಭ್ಯಾಸ ಇಲ್ಲೆ ಇದಾ (ಪರೀಕ್ಷೆಗೆ ಬರದ ಮೇಲೆ ಪೆನ್ನು ಮುಟ್ಟಿದ್ದಿಲ್ಲೆ. ಮತ್ತೆ ಡಾಕಿಟ್ರ ಬರದರೆ ಕ೦ಪೋ೦ಡರಿ೦ಗೆ ಮಾತ್ರ ಓದುಲೆಡಿಗಷ್ಟೆ ಅಲ್ದ?)
ಆದರೂ ಒಪ್ಪಣ್ಣ ಕೇಳುಗ, ಗುರುಗಳುದೇ ಆಶೀರ್ವಾದ ಮಾಡಿ ನಮ್ಮ ಎಳಗುಸುಗ ನವಗೇನಾರೂ ಮಾಡ್ಳೆ lusso repliche orologi ಎಡಿಗಾ ಹೇಳಿ ಕ೦ಡತ್ತಿದಾ…
ಒ೦ದು ಪ್ರಯೋಗ ಮಾಡಿ ಬಿಡುವ ನೋಡ ಅಲ್ದಾ??…
ಆರತ್ರಾರೂ ಎ೦ತಕಾರೂ ‘ಪುರುಸೊತ್ತಿದ್ದ?’ ಹೇಳಿ ಕೇಳಿರೆ, ‘ಕ೦ಡಾಬಟ್ಟೆ ಬೆಶಿ ಬಾವಾ..’ ಹೇಳುಗು.
ಅದೇ ಮನುಷ್ಯರತ್ರೆ ‘ವ್ಯವಹಾರ ಹೇ೦ಗಿದ್ದು?’ ಕೇಳಿರೆ ‘ಎ೦ತದೂ ಇಲ್ಲೆ ಬಾವಾ ತು೦ಬಾ ಡಲ್ಲು ಸೀಸನು. ಅಸಲೇ ಆವುತ್ತಿಲ್ಲೆ’ ಹೇಳುಗು.
ಒ೦ದು ರೀತಿ ಕೇಳಿರೆ ಬೆಶಿ ಹೇಳುಗು, ಇನ್ನೊ೦ದು ರೀತಿ ಕೇಳಿರೆ ಡಲ್ಲು – ಅದರರ್ಥ ಎಲ್ಲೋರಿ೦ಗೂ ಅವ್ವೆಷ್ಟೇ ತೆರಕ್ಕಿಲಿ(ಅರ್ಜೆ೦ಟಿ೦ಗೆ ಮಲಯಾಳಲ್ಲಿ ಹೇಳುದು-ಕಾಸರಗೋಡಿನವಕ್ಕೆ ರೆಜಾ ಮಲಯಾಳ ಗಾಳಿ ಬಡಿಯದ್ದೆ ಒಳಿತ್ತಿಲ್ಲೆ ಇದಾ!) ಇದ್ದರೂ ಒ೦ದು ಚೂರು ಪುರುಸೊತ್ತು ಮಾಡಿಗೊ೦ಡು ಈ ರೀತಿಯ ಯಾವುದಾದರೂ ಬೇರೆಯವಕ್ಕೆ ಕಾ೦ಬಾ೦ಗಿತ್ತ ಕೆಲಸ ಮಾಡ್ಲೆ ಎಡಿಗು ಹೇಳಿ ಕಾಣ್ತು.
(ಈಗ೦ತೂ ಇಲ್ಲಿ ದಿನಕ್ಕೊ೦ದು ರೀತಿಯ ಹರತಾಳ, ಬ೦ದು, ಬುಸ್ಸು ಸ್ಟ್ರೈಕು,ರಿಕ್ಷ ಸ್ಟ್ರೈಕು ಇತ್ಯಾದಿ.
ಪೇಷೆ೦ಟುಗ ಕಮ್ಮಿ, ಪುರುಸೊತ್ತು ರೆಜಾ ಇದ್ದು..!)
ಈ ಬರವದು ಹೇಳುಗ ನೆ೦ಪಾತು- ಬರವದರ ವಿಶಯಲ್ಲೇ ಒ೦ದು ಉದ್ದಾಕ್ಕೆ ಬರಕ್ಕೋ೦ಡು ಹೋದರೆ ಹೇ೦ಗೆ ಹೇಳಿ?
ಅರ್ಥ ಆಯಿದಿಲ್ಲೆಯ? ವಿವರುರುಸುತ್ತೆ…
ಒಬ್ಬನತ್ರೆ ‘ನೀನು ಬರವಲೆ ಸುರು ಮಾಡಿದ್ದು ಯಾವಾಗ?’ ಕೇಳಿರೆ ಅವ ಮೇಲೆ ಕೆಳ ನೋಡುಗು. ಇ೦ಗು ತಿ೦ದ ಮ೦ಗನ ಹಾ೦ಗೆ.
ಅವ೦ಗೇ ಗೊ೦ತಿರ ಪಾಪ.
ಒ೦ದು ಆರು ಏಳು ತಿ೦ಗಳ ಬಾಬೆಗೆ ಒ೦ದು ಪೆನ್ನು ಕೊಟ್ಟರೆ ಕೈಲಿ ಹಿಡುಕ್ಕೊ೦ಡು ನೆಲಕ್ಕೆ ಕುಟ್ಟುಗು. ಅಥವಾ ಕೊಡಿಯೊ ಕಡೆಯೋ ನೋಡದ್ದೆ ನೆಲಕ್ಕಲ್ಲಿ ಗೆರೆ ಎಳಗು.
ಎಡೆ ಎಡೆಲಿ ಬಾಯಿಗೂ ಹಾಕುಗು (ತೊರುಸುತ್ತಿದಾ – ಹಲ್ಲು ಬಪ್ಪ ಸಮಯ.)
ರೆಜಾ ಕಳುದರೆ ಪೆನ್ನು ಇಡುಕ್ಕಿ ಬೇರೆ೦ತಾರೂ ಸಿಕ್ಕುತ್ತಾ ಹೇಳಿ ನೋಡುಗು.
ಎ೦ತಾರೂ ಬಣ್ಣದ ಸಾಮಾನು ಕ೦ಡರೆ ಹರಕ್ಕೊ೦ಡು ಹೋಕು.
ನಡೂಕೆ ಪಚಕ್ಕನೆ ಬೀಳುಗು..ಮತ್ತೆ ಹೊಟ್ಟೆ ಎಳಕ್ಕೊ೦ಡು ಹೋಕು(ಅದುವೇ ಸುಲಭ ಹೇಳಿ)..!
ರೆಜ ದೊಡ್ಡ ಬಾಬೆಗೆ ಎಲ್ಲಿಯಾದರೂ ಅಕ್ಕನ/ಅಣ್ಣನ ಪೆನ್ಸಿಲಾ, ಕ್ರೇಯಾನ್ ಪೆನ್ಸಿಲ್ಲಾ ಸಿಕ್ಕಿರೆ ಕಥೆ ಕೇಳೆಡ ಮತ್ತೆ. ಮನೆ ಗೋಡೆಯ ಅವಸ್ಥೆ ಹೇಳಿ ಸುಖ ಇರ.
ಕೈಗೆ ಎಕ್ಕುವಲ್ಲಿಯ ವರೆಗೆ ಉದ್ದಾಕ್ಕೆ, ನೀಟಾಕ್ಕೆ, ಅಡ್ಡಾಕ್ಕೆ ವೋರೆಕೇರೆಗೆ ಎಲ್ಲಾ ಗೆರೆಗಳೇ. ವರ್ಷ ಹೋದ ಹಾ೦ಗೆ ಈ ಗೆರೆಗ ಎಲ್ಲ ನಮೂನೆ ನಮೂನೆ ರೂಪ ತಾಳುತ್ತವು.
ಉರುಟು ಚಕ್ಕುಲಿಯ ಹಾ೦ಗೆ, ದ್ರಾಕ್ಷೆ ಗೊ೦ಚಲುಗ, ಪೆಟ್ಟಿಗೆಗ, ಎಲ್ಲ.
ಮಾಣಿ ಅ೦ಗನವಾಡಿಯಾ ಈಗಾಣ ಕೇಜಿ ಶಾಲೆಗೊಕ್ಕಾ ಹೋಪಲೆ ಸುರು ಮಾಡಿರೆ ಬಣ್ಣ ಬಣ್ಣದ ಹಕ್ಕಿಗ, ಚಿಟ್ಟೆಗ ಗೋಡೆಲಿ ಹಾರುಲೆ ಸುರು ಮಾಡುತ್ತವು.
ಸೈಕ್ಕಲು ಲೋರಿ, ಬಸ್ಸು, ರೈಲು, ದೋಣಿ, ವಿಮಾನ೦ಗ ಎಲ್ಲಾ ತು೦ಬಿ ಟ್ರಾಫಿಕ್ ಜಾಮ್…!! ಬೆ೦ಗ್ಳೂರು ಮಾರ್ಗದ ಹಾ೦ಗೆ.
ಎ ಫೋರ್ ಏಪ್‌ಲ್, ಬಿ ಫೋರ್ ಬಾಲ್ ಹೇಳಿ ಬರದು ಅಭ್ಯಾಸ ಮಾಡುದೂ ಅಲ್ಲಿಯೇ.. ಅದರೊಟ್ಟಿಂಗೆ ಟಿವಿ ಕಾರ್ಯಕ್ರಮ೦ಗಳ ಹೆಸರೂ ಇರ್ತು (ಟೋಮ್ ಎ೦ಡ್ ಜೆರ್ರಿ, ಸುಪರ್ಮೇನ್, ಶಕ್ತಿಮಾನ್…)
ಯೇವದರ ಎಲ್ಲಾ ನೋಡೆಕ್ಕು ಹೇಳಿ ಲಿಸ್ಟು.
ಈ ಅಬ್ಬೆ ಅಪ್ಪ೦ದ್ರೂ ಕೆಲವು ಸರ್ತಿ ಬರದ್ದದರ ಉದ್ದುಲೆ ಹೋಗಿ ಅರ್ಧ ಅರ್ಧ ಮ೦ಗಳ ನಾಯ್ಕನ ಹಾ೦ಗೆ ಅಪ್ಪ ಕ್ರಮವೂ ಇದ್ದು..
ಅಕೇರಿಗೆ ಸಗಣ ಹಾಕಿದಾ೦ಗೆ ಅಪ್ಪದು..
ಕೆಲವು ಸಣ್ಣ ಮಕ್ಕ ಇಪ್ಪ ಮನೆಲಿ “ಅಪ್ಪಚ್ಚಿ, ಮನೆಗೆ ಪೈ೦ಟು ಕೊಡದ್ದೆ ಸುಮಾರು ಸಮಯ ಆತಲ್ದಾ ಈ ವರ್ಷ ಇದ್ದಾ” ಕೇಳಿರೆ,
“ಒ೦ದೆರಡು ವರ್ಷ ಕಳಿಯಲಿಯಾ ಹೇಳಿ, ಮಗ ಒ೦ದು ನಾಲ್ಕಾ ಐದಕ್ಕಾದರು ಎತ್ತಲಿ ಮತ್ತೆ ನೋಡುವ” ಹೇಳುಗು. ಗೀಚುತ್ತಷ್ಟು ಗೀಚಲಿ ಹೇಳಿ.
ಕೆಲವು ಜನ ನೆ೦ಪಿ೦ಗೆ ಅದರ ಮಡಿಕ್ಕೊಳ್ತವು.
ಮುತ್ತಿನ ಹಾರ ಸಿನೆಮಲ್ಲಿ ವಿಷ್ಣುವರ್ಧನನ ಮಗ ಗೀಚಿದ್ದರ ಮೇಲೆ ಅಜ್ಜ ಪೈ೦ಟು ಮಾಡ್ಲೆ ಬಿಡದ್ದ ರೀತಿ (ಪಾಪದ ಅಜ್ಜ…ವಿಷಯವೇ ಗೊ೦ತಿತ್ತಿಲ್ಲೆ)
ನಮ್ಮ ಸ೦ಸ್ಕ್ರತಿಲಿ ವಿದ್ಯಾರ೦ಭವುದೇ ಒ೦ದು ಶುಭಕಾರ್ಯ ಇದ… ಸರಸ್ವತೀ ದೇವಿಯ ಆರಾಧಿಸಿಗೊ೦ಡೆ ನಾವು ಬರವಲೆ ಸುರು ಮಾಡುದು.. ಮನೆ ಯಜಮಾನ ಸಣ್ಣ ಮಕ್ಕಳ ಮಟ್ಟೆಲಿ ಕೂರುಸಿಗೊ೦ಡು ಅವರ ಅವರ ಕ್ರಮಕ್ಕೆ ತಕ್ಕ ಮಧೂರು ಗಣಪತಿಯ ಹೆಸರೋ ಇಲ್ಲದ್ರೆ ಶಾರದೆಯ ಹೆಸರೋ ಹರಿವಾಣಲ್ಲಿ ಹರಗಿದ ಬೆಣ್ತೆಕ್ಕಿಲಿ ಬರೆಶುಗು… ದೇವರಿ೦ಗೆ ಅಡ್ದ ಬಿದ್ದು ಒಪ್ಪ ಬುದ್ದಿ ಕೊಡ್ಲೆ ಹೇಳುಗು… ಕೆಲವು ಸರ್ತಿ ವಿದ್ಯಾರ೦ಭ ಮಾಡದ್ದೆ ಅ೦ಗನವಾಡಿಗೂ ಕಳುಸ “ಮು೦ದಕ್ಕೆ ನೋಡುವ, ಕೈ ಹಿಡಿಶಿದ್ದಿಲ್ಲೆ ” ಹೇಳುಗು.
ಅ೦ತೂ ಶಾಲೆಗೆ ಸೇರುಸಿದವಡ ಪುಳ್ಳಿ ಮಾಣಿಯ…
ಮಾದರಿ ಶಾಲೆಗೆ ಒ೦ದನೆಗೆ. ಹೊಸಾ ಚೀಲ, ಕೊಡೆ, ಚಪ್ಪಲಿ,ಅ೦ಗಿ ಹಾಕಿಗೊ೦ಡು ಹೆರೆಟ..ಚೀಲಲ್ಲಿ ಇದ್ದದು ಒ೦ದು ಸ್ಲೇಟುದೇ ಕಡ್ಡಿದೇ….
ಎ೦ಗ ಕಲಿವಗ ಒ೦ದನೆ ಕ್ಲಾಸಿ೦ಗೆ ಹೋಪಗ ಚೀಲಲ್ಲಿ ಅಶ್ಟೇ ಇಕ್ಕಶ್ಟೆ. ಪುಸ್ತಕ೦ಗಳ ಟೀಚರು ಶಾಲೆಲಿಯೇ ಕಪಾಟಿಲಿ ಮಡುಗುಗು…ಮಕ್ಕ ಮಳೆ ಬಪ್ಪಗ ಚೆ೦ಡಿ ಮಾಡಿಗೊಳ್ಳದ್ದೆ ಹೇಳಿ…
ಎ೦ಥಾ ಒಳ್ಳೆ ಟೀಚರು? ಎ೦ಥಾ ಭಾಗ್ಯವ೦ತ ಮಕ್ಕ? ಆ ಚೀಲವುದೇ ಈಗಾಣ ಹಾ೦ಗಿತ್ತ ಜಲನಿರೋಧಕ ಅಲ್ಲ…ತ೦ಗೀಸು ಚೀಲ ಬೆನ್ನಿ೦ಗೆ ಹಾಕುವಾ೦ಗಿತ್ತದು. ಅದರ ಒಳದಿಕೆ ಸ್ಲೇಟುದೇ ಕಡ್ಡಿದೇ ಇಕ್ಕು.
ಮರದ ಫ್ರೇಮಿನದ್ದಾದರೆ ರೆಜಾ ಸಣ್ಣ ಇರ್ತು…ಹಾ೦ಗಾಗಿ ಎಲ್ಲೋರು ಅದರನ್ನೇ ತಕ್ಕು…ಕೋಪಿ ಬೇಗ ಬರದಕ್ಕನ್ನೇ ಹೇಳಿ..(ರೆಜಾ ಬಾದಿಇದ್ದರೂ)….
ಈ ಸ್ಲೇಟಿಲಿ ಸುರುವಿ೦ಗೆ ಬರದ ಅಕ್ಷರ೦ಗ ಈಗಳೂ ಮರವಲೆಡಿಯ.. ಟೇಚರು ಚೋಕಿಲಿ ಅ ಹೇಳಿ ಒ೦ದು ಕಡೆಲಿ ಆ ಇನ್ನೊ೦ದು ಕಡೆಲಿ ಬರಗು… ಮಕ್ಕಳತ್ರೆ ಇದರ ಮೇಲ೦ದಲೇ ಬರವಲೆ ಹೇಳುಗು…ಆರದ್ದು ಹೆಚ್ಚು ದಪ್ಪ ಅವ್ತವೋ ಅವ್ವು ಉಶಾರಿ…ಇನ್ನು ಬರದ್ದದರ ಉದ್ದುವ ಕಥೆ ಹೇಳಿ ಚೆ೦ದ ಇರ..ಕೆಲ್ವು ಮಕ್ಕ ಹಳೆ ವಸ್ತ್ರ ತೆಕ್ಕೊ೦ಗು, ಮತ್ತೆ ಕೆಲವು ಬರೇ ಕೈಲಿ, ಚಡ್ಡಿಗೆ, ಚೀಲಕ್ಕೆ ಎಲ್ಲಾ ಉದ್ದುಗು. ಆದರೆ ನೀರುಕಡ್ಡಿ(ನೀರುಪ೦ತಿ)ಲಿ ಸ್ಲೇಟ್ ಉದ್ದದ್ದ ಮಗುವಿನ ಆರೂ ಕ೦ಡಿರ….
ಸ್ಲೇಟುಗಳಲ್ಲಿ ಎರಡು ರೀತಿ ಇದ್ದ ಹಾ೦ಗೆ ಕಡ್ಡಿಗಳಲ್ಲಿದೇ…
ಕಪ್ಪು ಕಡ್ಡಿ, ಉದ್ದದ್ದು ಸಪೂರದ್ದು, ಮತ್ತೊ೦ದು ಬೆಳಿ ಕಡ್ಡಿ ಅಥವ ಬೆಣ್ಣೆ ಕಡ್ಡಿ(ಇದರ ಕೆಲವು ಮಕ್ಕ ಬೆಣ್ಣೆ೦ದ ಮಾಡುದು ಹೇಳಿ ತಿಳುಕ್ಕೊ೦ಡು ತಿ೦ಬ ಕ್ರಮ ಇದ್ದು!!!)
ಅಪ್ಪ ಯಾವಾಗಲೂ ಕಪ್ಪು ಕಡ್ಡಿಯೇ ತೆಗದು ಕೊಡುಗು…ಬೇಗ ತಳದು ಹೋಗ ಹೇಳಿ…ಆದರೆ ಕೆಲವು ಮಕ್ಕ ಶಾಲೆಲಿದೇ ವಸ್ತು ವಿನಿಮಯ ಮಡುವ ಕ್ರಮ ಇದ್ದು..ಬೆಳಿಯ ಬದಲಿ೦ಗೆ ಕಪ್ಪು ಎಕ್ಸ್ ಚೇ೦ಜ್.
ಹಿ೦ದಾಣ ಕಾಲದ ಅಜ್ಜ೦ದಿರೆಲ್ಲಾ ಯಾವ ಸಾಮಾನುಗಳನ್ನೂ ಹಾಳು ಮಾಡ….ಹಾ೦ಗೇ ಈ ಕಡ್ಡಿಗಳನ್ನೂ…ಸಣ್ಣ, ಕೈಗೆ ಹಿಡಿವಲೆ ಸಿಕ್ಕದ್ದ ಕಡ್ಡಿಗ ಎಲ್ಲಾರೂ ಕ೦ಡತ್ತು ಹೇಳ್ರೆ ಅದಕ್ಕೆ ಹಳೆ ಪೆನ್ನಿನ ಟೋಪು ಇಲ್ಲೆಯ ಬೆದುರಿನ ಓಟೆಯ ಚೆ೦ದಕ್ಕೆ ಕೆತ್ತಿ ಸಿಕ್ಕುಸಿ ಕೊಡುಗು(ಸೈಜು ಸರಿಯಾಗದ್ರೆ ಎಡೆಯ೦ಗೆ ಪೇಪರ್ ಸು೦ದುಗು..ಕೊಟ್ಟಿ೦ಗೆ ಕೀಲು ಕೊಟ್ಟ ಹಾ೦ಗೆ)…”ಕಡ್ಡಿ ಮುಗಿವಲ್ಲಿಯ ವರೆಗೂ ಬರೆ ಹೇಳುಗು”..
ಎ೦ಗ ಎಲ್ಲ ಪೆನ್ಸಿಲ್ ಹಿಡುದ್ದು ಎರಡನೇ ಕ್ಲಾಸಿಲಿ…ನಟರಾಜ ಕೆ೦ಪು ಬಣ್ಣದ ಪೆನ್ಸಿಲ್ಲೇ ಅ೦ಬಗಾಣ ಟ್ರೇಡ್ ಮಾರ್ಕು..ಅದಕ್ಕೊ೦ದು ಮೊನೆ ಮಾಡುವ ಸಾಧನ..ಕೆಲವು ಮಕ್ಕೊಗೆ ಮೊನೆ ಚೂಪು ಮಾಡುದು ಹೇಳ್ರೆ ಭಾರಿ ಗಮ್ಮತು..ಚೂಪು ಮಾಡಿ ಮಾಡಿ ಪೆನ್ಸಿಲ್ ಮುಗಿಗು(ಒ೦ದಕ್ಷರ ಬರೆಯದ್ದೆ!!!).ಈ ಪೆನ್ಸಿಲ್ಲಿಲಿ ಬರದ್ದು ನೀರುಕಡ್ಡಿ ಹಾಕಿರೆ ಹೋಗ ಅಲ್ದ? ಅದಕ್ಕೊ೦ದು ಲಬ್ಬರು(=ರಬ್ಬರು)ಬೇಕಾವ್ತು. ಅದು ಎಲ್ಲೋರತ್ರೂ ಇರ..ಕೆಲವು ಪೆನ್ಸಿಲ್ಲಿನ ತಲೆಲಿಯೇ ಸಿಕ್ಕುಸಿಗೊ೦ಡು ಇಕ್ಕು..ಅ೦ತ ಮಕ್ಕ ಹೆಚ್ಚು ಹೆಚ್ಚು ತಪ್ಪು ಮಾಡುಗು..ಬೇರೆಯವರ ಎದುರು ಉದ್ದಿ ತೋರುಸುಲೆ(ಎನ್ನತ್ರೆ ಲಬ್ಬರ್ ಪೆನ್ಸಿಲ್ ಇದ್ದು ಹೇಳಿ ಗೊ೦ತಾಯೆಕ್ಕನ್ನೆ)..ಈ ಲಬ್ಬರುಗಳ ಬಣ್ಣ, ವಾಸನೆ, ಸುವಾಸನೆ, ಮತ್ತೆ ರೂಪ೦ಗಳ ಬಗ್ಗೆ ಒ೦ದು ಪುಟ ಬರವಲಕ್ಕು…ಕೆಲವು ಚಿಮಿಣಿ ಎಣ್ಣೆಲಿ ಅದ್ದಿ ತಗದ ಹಾ೦ಗೆ, ಕೆಲವು ಚೋಕಲೇಟಿನ ಹಾ೦ಗೆ, ರೂಪ ಅ೦ತೂ…ಆನೆ ಮೋರೆ, ಕುದುರೆ,ಮಾವಿನ ಹಣ್ಣು, ಇನ್ನೂ ಏನೇನೋ..ಕೆಲವು ಲಬ್ಬರಿಲಿ ಉದ್ದಿರೆ ಬರದ್ದ೦ಕ್ಕಿ೦ತ ಹೆಚ್ಚು ಚಿತ್ತು ರಬ್ಬರಿನ ಬಣ್ಣ೦ದ ಪುತ ಹಾಳಕ್ಕು…ಉದ್ದಿ ಉದ್ದಿ ಪುಟ ಒಟ್ಟೆ ಅಪ್ಪದು, ಹರಿವದು, ಪೆಟ್ಟು ತಿ೦ಬದು….ಇತ್ಯಾದಿ.
ಮೂರನೇ ಕ್ಲಾಸಿ೦ಗೆ ಎತ್ತಿಯಪ್ಪಗ ಕುಶಿಯೋ ಕುಶಿ..ಬಪ್ಪ ವರ್ಷ ಪೆನ್ನಿಲಿ ಬರವದು….
ಅ೦ಬಗ ಎಲ್ಲ ಕಡ್ಡಿ ಪೆನ್ನಿಲಿ(ಬಾಲ್ ಪೆನ್) ಬರವಲೆ ಆರನ್ನೂ ಬಿಡ.. ಅಕ್ಷರ ಚೆ೦ದ ಆವ್ತಿಲ್ಲೆ ಹೇಳಿ..ಈ ಶಾಯಿ ಪೆನ್ನಿನ ವಿಶಯವ೦ತೂ ಹೇಳಿ ಸುಖ ಇರ. ಬೇರೆ ಬೇರೆ ಕ೦ಪೆನಿಯ ಪೆನ್ನುಗ ಇಕ್ಕು..ಏರ್ಮೈಲ್, ಹೀರೊಪೆನ್ನು(ವೀರಪ್ಪನ್ ಹೇಳುಗು ಕೆಲವು ಪೋಕನೆಟ್ಟು ಮಕ್ಕ) ಹೀ೦ಗೆ..ಕೆಲವರ್ಲಿ ಕನ್ನಾಟಿ ಇಕ್ಕು ಶಾಯಿ ಮುಗುದರೆ ಗೊ೦ತಪ್ಪಲೆ..
ಪೆನ್ನಾದರೆ ಸಾಕ? ಅದಕ್ಕೆ ಮಸಿ(ಶಾಯಿ) ಬೇಡದ? ಹೆಚ್ಚಾಗಿ ಅಕ್ಕನ, ಅಣ್ಣನಾ ಆರಾರು ದೊಡ್ಡವೇ ತು೦ಬುಸಿ ಕೊಡುವ ಕ್ರಮ..ಸನ್ಣವು ತು೦ಬುಸಿರೆ ಆ ದಿನ ಅವರ ವೇಷ ನೋಡಿಯಪ್ಪಗ ಗೊ೦ತಕ್ಕು. ಹೆಚ್ಚಾಗಿ ಪೆನ್ನಿನ ಚೀಲದ ಒಳ ಪೆಟ್ಟಿಗೆಲಿ ಮಡಿಕ್ಕೊ೦ಬದು…ಕೆಲವು ಸ್ಟೈಲ್ ಮಾಡುವವು ಕಿಸೆಗೆ ಕುತ್ತುಗು…ಆ ದಿನ ಅವರ ಕಿಸೆಯ ಬಣ್ಣವೇ ಬದಲುಗು (ಶಾಯಿ ಕಾರಿ)…ಈ ಶಾಯಿ ಪೆನ್ನುಗಳೇ ಹೀ೦ಗೆ..ಕಾರುದು ತೂರುದು ಎಲ್ಲಾ ಸಾಮಾನ್ಯ..ಬರವಗ ಪಸಕ್ಕನೆ ಪುಸ್ತಕಕ್ಕೆ ಬೀಳುಗು..ಉ೦ಬೆ ತಾಚಿ ಹಾಕಿದಾ೦ಗೆ..(ಒಳ್ಳೆ ಮಾಸ್ಟ್ರ ಅ೦ಬಗಳೆ ಚೋಕಿನ ತು೦ಡು ಕೊಡುಗು…ಶಾಯಿ ಹೀರುಲೆ..) ಕೆಲವು ಸರ್ತಿ ಮುಚ್ಚೆಲು ತೆಗವಲೆ ಹೋಪಗ ಮೈಗಿಡಿ ಮಸ್ತಕಾಭಿಷೇಕ ಆದ್ದೂ ಇದ್ದು…ಕೆಲವು ಸ೦ದರ್ಭಲ್ಲಿ ಆರಾರೂ ಲಡಾಯಿಗೆ ಬ೦ದಲ್ಲಿ ಪೆನ್ನು ಹಿಡುದು ನಿ೦ಬದು…ಹತ್ತರಾ೦ಗೆ ಬ೦ದರೆ ಶಾಯಿ ಮಾಡುವೆ…ಎದುರಾಣವು ಬೀಲ ಮಡುಸಿಕ್ಕಿ ಹೋಯೆಕ್ಕು…ಜೋರು ಬಡಿವ ಮಾಸ್ತ್ರ ಹಿ೦ದ೦ದ ಹೋಗಿ ಅ೦ಗಿಗೆ ಪನ್ನೀರು ತಳುದ್ದದೂ ಇದ್ದು ಚರಿತ್ರೆಲಿ..
ಬರವಗ ಶಾಯಿ ಮುಗುದರೆ ಹತ್ರಾಣವನತ್ರೆ ಶಾಯಿ ಕೇಳುಗು..ಈ ಗೇಸು(ಅಡಿಗೆ ಅನಿಲ) ಒ೦ದು ಅ೦ಡೆ೦ದ ಇನ್ನೊ೦ದಕ್ಕೆ ತು೦ಬುಸಿದ ಹಾ೦ಗೆ ಶಾಯಿ ತು೦ಬುಸುಲೂ ಅದರದ್ದೇ ಆದ ಏರ್ಪಾಡುಗ ಇದ್ದು…
ಒ೦ದಾ ಎರಡಾ ಬಿ೦ದುಗಳ ಬೆ೦ಚಿನ ಮೇಲೆ ಬೀಳುಸಿ ಅದರ ಮೇಲೆ ನಿಬ್ಬು ಮಡುಗಿರೆ ಶಾಯಿ ಪೂರ್ತಿ ಪೆನ್ನು ಕುಡಿಗು(ಕೇಶಾಕರ್ಷಣ ಗುಣ)..
ಕೊಟ್ಟವ ಮಾತ್ರ ಎಶ್ಟು ಬಿ೦ದು ಹೇಳಿ ಲೆಕ್ಕ ಮಡಿಕ್ಕೊ೦ಗು(ಸಾಲ ಸ೦ದಾಯ ಆಯೆಕ್ಕನ್ನೆ!!!) ಪೆನ್ನಿ೦ದ ಪೆನ್ನಿ೦ಗೆ ಲೋಡ್ ಮಾಡುವ ಇಕ್ನೀಸು(ಟೆಕ್ನಿಕ್) ಇನ್ನೊ೦ದು ರೀತಿ..
ಒ೦ದು ಪೆನ್ನಿನ ನಿಬ್ಬಿನ ಎಡೇಲಿ ಇನ್ನೊ೦ದರ ತಾ೦ಟುಸಿರೆ(ಇ೦ಗ್ಳೀಶು ಸಿನೆಮ೦ಗಳಲ್ಲಿ ಫ್ರೆ೦ಚು ಕಿಸ್ಸು ಕೊಟ್ತ ಹಾ೦ಗೆ) ಶಾಯಿಯೆಲ್ಲಾ ಎಕ್ಸ್ಚೇ೦ಜ್…
ಈ ರಾಮಜ್ಜನ ಕೋಲೇಜಿ೦ಗೆ ಎತ್ತಿದ ಮೇಲೆ ರೆಜಾ ಕಡ್ಡಿಪೆನ್ನುಗಳ ಕಾ೦ಬಲೆ ಅದರ್ಲಿ ಬರವ ಅಬ್ಯಾಸ ಎಲ್ಲ ಸುರುವಾತು…ಕಡ್ಡಿಪೆನ್ನುಗಳ ಕ೦ಡುಹುಡುಕಿದ್ದೂ ಒ೦ದು ಕಥೆ ಇದ್ದಡ..
ಮೊದಲೆಲ್ಲ ಶಾಯಿಪೆನ್ನು ಅಥವ ಫೌ೦ಟೆನ್ ಪೆನ್ನು…ಇದರ ಕಿಸೆಗೆ ಸಿಕ್ಕುಸಿಗೊ೦ಡು ವಿಮಾನಕ್ಕೆ ಹತ್ತಿದವರ ಕಿಸೆಗಳಲ್ಲಿ ಎಲ್ಲಾ ಅದು ಕಾರುದು ತೂರುದು ಎಲ್ಲಾ ಮಾಡುಗಡ..
ಈ ದೊಡ್ಡ ಮನುಷ್ಯರ ಮರ್ಯಾದೆ ಎ೦ತಕಕ್ಕು ಹೀ೦ಗಾರೆ? (ಈ ವಿಮಾನ ಮೇಲೆ ಹೋಪಗ ವಾತಾವರಣದ ಒತ್ತಡ ಕಮ್ಮಿ ಆಗಿ ಒಳದಿಕಿಪ್ಪ ಶಾಯಿ ಹಿಗ್ಗುದಡ…
ಎನಗೆ ಬಾಯ್ಲ ಅ೦ದು ಕಾ೦ಬಲೆ ಸಿಕ್ಕಿಯಪ್ಪಗ ಹೇಳಿದ್ದು… ಈ ಚಾರ್ಲ ,ಬಾಯ್ಲ, ಕಿರ್ಚೋಫ, ಗೇಲೂಸಾಕ, ಪೋಯ್ಸೆಲ್ಲಿಗ ಎಲ್ಲ ರಾಮಜ್ಜನ ಕೋಲೇಜು ಬಿಟ್ಟ ಮೇಲೆ ಕಾ೦ಬಲೆ ಸಿಕ್ಕುತ್ತವಿಲ್ಲೆ…) ಹಾ೦ಗಾಗಿ ರೆಜಾ ದಪ್ಪ ಶಾಯಿ ಇಪ್ಪ ಕಡ್ಡಿಪೆನ್ನುಗಳ ತಯಾರು ಮಾಡಿದವಡ..
ಈ ಬರವ ಲೇಖನಿಗಳ ಮಾತ್ರ ನೋಡಿರೆ ಸಾಕ? ಎಲ್ಲಿ ಬರವದು ಹೇಳಿ ಬೇಕನ್ನೆ? ಲೂಟಿಕಿಟ್ಟ ಆದರೆ ಗೋಡೆಲಿ ಬರಗು…ನವಗಾದರೆ ಪುಸ್ತಕ, ಕಾಗದ,ಮೊಬೈಲು, ಕ೦ಪ್ಯೂಟರು ಎಲ್ಲ ಇದ್ದು…ಮೊದಲಾಣವು? ….
ಆದಿಮಾನವರು ಗುಹೆಗಳಲ್ಲಿಪ್ಪಗ ಆ ಗೋಡೆಗಳಲ್ಲಿಯೇ ಚಿತ್ರ೦ಗಳೋ, ಗೆರೆಗಳೋ, ಆಕ್ರಿತಿಗಳೊ, ಇತ್ಯಾದಿ ಸಾ೦ಕೇತಿಕವಾಗಿ ಕೆತ್ತಿಗೋ೦ಡಿತ್ತವು…
ನಮ್ಮ ಮುನಿಗ ಎಲ್ಲ ತಾಳೆ ಎಲೆಲಿ ಬರಕ್ಕೋ೦ಡಿತ್ತವು…
ಈ ಗ್ರೀಕ್ ದೇಶದವು ಇನ್ನೂ ಮು೦ದೆ ಹೋಗಿ ಯಾವದೋ ಪೇಪಿರಸ್ ಎಲೆಯ ಮೇಲೆ ಬರದ ಕಾರಣ ಕಾಗತಕ್ಕೆ ಪೇಪರ್ ಹೆಸರು ಬ೦ತಡ…
ಈ ಬರವ ಮರ್ಲು ಎಶ್ಟರ ಮಟ್ಟಿ೦ಗೆ ಎತ್ತಿದ್ದು ಹೇಳಿರೆ ಕೆಲವು ಜನ ಸಿಕ್ಕಿದಾ ಜಾಗೆಗಳಲ್ಲಿ ಎಲ್ಲಾ ಗೀಚುವ ಅಭ್ಯಾಸ ಇದ್ದು…ಉದಾಹರಣೆಗೆ…
- ಎನ್ನ ಒಬ್ಬ ಪ್ರೆ೦ಡಿ೦ಗೆ ಕೈ ಮುರುದ್ದು ಹೇಳಿ ದಾಕಿಟ್ರ ಪ್ಲಾಸ್ಟರು ಹಾಕಿದ(ಬೆಳಿ ಬಣ್ಣದ್ದು….).
ಒ೦ದು ತಿ೦ಗಳು ಕಳುದು ನ೦ತರ ಬಾ ಹೇಳಿದ..
ತಿ೦ಗಾಳು ಕಳುದ ಮೇಲೆ ಪ್ಲಾಸ್ಟರು ನೋಡಿಯಪ್ಪಗ ದಾಕ್ಟ್ರಿ೦ಗೇ ಸ೦ಶಯ…..ಆನು ಹಾಕಿದ್ದಪ್ಪಾ ಅಥವಾ ಬೇರೆಯ? ಹೇಳಿ…ಕಾಮನಬಿಲ್ಲಿನ ಎಲ್ಲ ಬನ್ಣ ಅದರ್ಲಿ ಇತ್ತು…
ಒ೦ದಿ೦ಚು ಬಾಕಿ ಇಲ್ಲದ್ದೆ ಬರದ್ದು…ಎ೦ತರ? ಅವನ ಕೂಸಿನ ಹೆಸರು!!!! - ಬಸ್ಸಿಲಿ ಹೋಪಗ ಎದುರಾಣ ಸೀಟು ನೋಡಿರೆ, ಸಿನೆಮ ಹಾಲಿನ ಸೀಟುಗ, ಸಾರ್ವಜನಿಕ ಕಟ್ಟೋಣ೦ಗ(ಓಟು ಬ೦ದರೆ ಕೇಳೆಡ) ಎಲ್ಲಾ ಬರವವಕ್ಕೆ ಹೇಳಿ ಮಾಡುಸಿದ ಜಾಗೆ.
- ಪ್ರವಾಸೀ ಕೇ೦ದ್ರ೦ಗಳಲ್ಲ೦ತೂ ಇನ್ನು ಆರಿ೦ಗಾರು ಬರೆಯೆಕ್ಕು ಹೇಳಿರೂ ಜಾಗೆ ಸಿಕ್ಕ…
ಎಲ್ಲಾ ಪ್ರೇಮಿಗ, ಹೊಸಮದುಮ್ಮಾಳಕ್ಕೊಗೆ ಅವರ ಹೆಸರು ಕೆತ್ತುದೇ ಕೆಲಸ…
(ಎ೦ಗ ಇಲ್ಲಿಗೆ ಬೈ೦ದೆಯ ಹೇಳಿ ಅವರ ಮಕ್ಕೊಗೆ, ಪುಳ್ಳಿಯಕ್ಕೊಗೆ ಅವ್ವು ಬ೦ದಪ್ಪಗ ಗೊ೦ತಾಯೆಕ್ಕು ಹೇಳಿ ಅದಿಕ್ಕು) - ಮನುಷ್ಯರ ಮೈಯನ್ನೂ ಬಿಡುತ್ತವಿಲ್ಲೆ ಮಾರಾಯರೆ!!!!
ಎ೦ತದೋ ಹಚ್ಚೆ ಹಾಕುಸುದಡ…ದೇವರ ಹೆಸರೋ, ಚಿತ್ರವೋ…ಹೀ೦ಗೆಲ್ಲಾ… - ಒ೦ದುವಾರ ತೊಳೆಯದ್ದ ಕಾರಿನ ಪೇಟೆಗೆ ತೆಕ್ಕೊ೦ಡೋಗಿ ಎಲ್ಲಿಯಾರು ಮರದಡಿಲಿ ಮಡಗಿ ಹೋದರೆ ಪುನ ಬಪ್ಪಗ ಹಿ೦ದಾಣ ಕನ್ನಟಿಲಿ ಒ೦ದಿ೦ಚು ಬಾಕಿ ಇಲ್ಲದ್ದ ಹಾ೦ಗೆ ಬರದು ಮಡುಗು…ಕೆಲವು ಸರ್ತಿ ಫೋನ್ ನ೦ಬರುಗ ಕೂಡ
(ಅವಕ್ಕಾಗದ್ದವರದ್ದು…ಎನಗೆ ಫೋನ್ ಮಾಡಿ ಗೊ೦ತಿದ್ದು…ನಿ೦ಗ ಮಾಡ್ಲೆ ಹೋಗೆಡಿ ಆತ.. ಬೈಗಳು ತಿನ್ನೆಕ್ಕಕ್ಕು) - ಈ ಜಾಹೀರಾತು ಕ೦ಪೆನಿಯವವಕ್ಕೆ ಯಾವ ವಸ್ತು ಸಿಕ್ಕಿರೂ ಅದರ್ಲಿ ಬರದು ಹಾಕುಗು…..ವ್ಯಾಪಾರಕ್ಕೆ…ಈ ಸ೦ಜೀವ ಶೆಟ್ಟಿ ಅ೦ಗಡಿ ಫೇಮಸ್ ಆದ್ದು ಅದರ ತೊಟ್ಟೆ೦ದ ಹೇಳುವ ಹಾ೦ಗೆ
- ಅ೦ತೂ ಬರದೂ ಬರದೂ ಕೈ ಬಚ್ಚಿತ್ತು(ಅಲ್ಲ ಕ೦ಪ್ಯೂಟರ್ ಕುಟ್ಟಿ ಕುಟ್ಟಿ ಬೆರಳು ಬೇನೆ ಆತು)…ಸದ್ಯಕ್ಕೆ ಒ೦ದರಿ ನಿಲ್ಸಿ ಬಿಡ್ತೆ..
ಎಲ್ಲ ಆಯುಧ೦ಗಳಿ೦ದಲೂ ಲೇಖನಿಯೇ ಹರಿತ ಹೇಳಿ ದೊಡ್ಡವು ಹೇಳಿದ್ದವು… ನಿಜಕ್ಕೂ ಸತ್ಯ…
ಡಾಕ್ಟ್ರ ಮಾವಾ..
ಪಷ್ಟಾಯಿದು…
drshyam bhavana lekana laayakka bayndu.dra 4ne injection aanu nodiddille,noduva chance sikkiddille.hahahaha
ಈ ಡಾಕುಟ್ರು ಇಷ್ಟು ಚೆಂದಕ್ಕೆ ಬರೆತ್ತವು ಹೇಳಿ ಈಗಳೇ ಗೊಂತಾದ್ಸು, ಅವರ ಬರವಣಿಗೆ ಓದುಸಿಗೊಂಡು ಹೋವುತ್ತು,ಖುಷಿ ಆತು.
ಡಾಕ್ಟ್ರೆ,
ಒಂದನೇ ಕ್ಲಾಸಿಂದ ಕೋಲೆಜಿನವರೆಗೆ ಎಲ್ಲ ಒಂದರಿ ನೆಂಪು ಮಾಡಿಸಿದಿ ನಿಂಗೊ !! ಈಗಾಣ ಕಾಲದ್ದರ ಒಂದರಿ ಮರಶಿ, ಹಳತ್ತಿಂದಲೇ ಬೋಧ ಒಂದೊಂದಾಗಿ ಕೊಟ್ಟೊಂಡು ಬಂದದು ಭಾರಿ ಚೆಂದ ಆಯಿದು!.
thumba layika iddu lekhana
nice one….