Oppanna.com

ಕೊಡೆಯಾಲ ರಾಮಕಥಾ – ಎರಡನೇ ದಿನ

ಬರದೋರು :   ಪೆಂಗಣ್ಣ°    on   29/01/2012    13 ಒಪ್ಪಂಗೊ

ಪೆಂಗಣ್ಣ°

ಹರೇರಾಮ

ನಿನ್ನೆಯಾಂಗೆ ಶ್ರೀಗುರು ವಚನವ ನಿಂಗೊಗೆ ತಿಳಿಶುವ ಹೊತ್ತಿಲಿ ಏನಾರು ತಪ್ಪುಗೋ ಆದರೆ ಸರಿಪಡಿಸಿ ಹೇಳಿ ಕೇಳುತ್ತಾ ಕಥೆ ಮುಂದುವರೆತ್ತು. ನಿನ್ನೆಯಾಂಗೆ ಗುರುಗೋ ಪರಿವಾರದಣ್ಣಂದ್ರು ವೇದಿಕೆಗೆ ಬಂದವು. ಶ್ರೀಗುರುಗೋ ಸೀತಾ ಸಹಿತ ಶ್ರೀರಾಮಂಗೆ ಪುಷ್ಪಾರ್ಚನೆ ಮಾಡಿ ಶ್ರೀಪೀಠವ ಅಲಂಕರಿಸಿದವು. ಪ್ರಾಯೋಜಕರು ರಾಮಯಣ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿದವು.  ನಂತರ ಪ್ರೇಮಕ್ಕನ ತಂಡದವರ “ಶ್ರೀ ರಾಮ ಜಯರಾಮ” ಪದ್ಯದೊಟ್ಟಿಂಗೆ ಶ್ರೀರಾಮಯಣ ಗ್ರಂಥಕ್ಕೆ ಶ್ರೀಕರಾರ್ಚಿತ ಪೂಜೆ ನಡದತ್ತು. ಅದಾಗಿ ವಿದ್ವಾನಣ್ಣ ಪೀಠಿಕೆಲಿ ದೊಡ್ಡ ವಿಚಾರಂಗಳ ಸುಲಲಿತವಾಗಿ ವಿವರಿಸಿದವು.

ತೇಲಿಸೋ ಇಲ್ಲಾ ಮುಳುಗಿಸೋ ಹಾಡುವುದರೊಟ್ಟಿಂಗೆ ಗೆಣವತಿಯನ್ನು ಮಹಾಬಲೇಶ್ವರನನ್ನೂ ಸ್ಮರಣೆ ಮಾಡಿದವು. ನಿನ್ನೆಯಾಂಗೆ ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು.  ಇನ್ನಾಣದ್ದು ಪ್ರಮುಖ ಹಂತ ಗುರುಗೋ ಹರೇರಾಮ ಹೇಳುತ್ತಾ ಪೀಠಿಕೆಯ ಮುಂದುವರೆಶಿದವು. ರಾವಣನ ಅಂತರಾಳಾಲ್ಲಿ ನೆಲೆಸಿದ ಜಯವಿಜಯರ ಕಥೆ ಹೇಳುಲೆ ಶುರು ಮಾಡಿದವು. ಕೇವಲ ಹೆರಂದ ನೋಡಿ ಯಾರನ್ನೂ ಅವು ಹೀಂಗೆ ಹಾಂಗೆ ಹೇಳುಲಾಗ. ಅವರ ಅಂತರಾಳಲ್ಲಿ ಎಂತ ಇದ್ದು ಹೇಳ್ತದರ ತಿಳಿವ ಪ್ರಯತ್ನ ಮಾಡೆಕ್ಕು ಹೇಳ್ತಾ ಕೆಲವು ಉದಾಹರಣೆ ಕೊಟ್ಟವು. ಹಲಸಿನ ಹಣ್ಣಿಲಿ ಹೆರಂದ ಮಳ್ಳು, ಅದರೊಳ ಮೇಣ ರೆಚ್ಚೆ ಇತ್ಯಾದಿ ಇದ್ದು, ಅದರ ತೆಗೆವ ತಾಳ್ಮೆ ಇದ್ದವಂಗೆ ಮಾಂತ್ರ ಹಣ್ಣು ಸಿಕ್ಕುಗಷ್ಟೆ ಹೇಳಿ ಹೇಳಿದವು. ಅಂಗುಲಿಮಾಲನಲ್ಲಿದ್ದ ಒಳ್ಳೆ ಗುಣವ ಬುದ್ಧನೇ ಗುರುತುಸೆಕ್ಕಾತು. ವಾಲ್ಮೀಕಿ ಕಾಡು ಬೇಡ° ಅಗಿದ್ದವನ ಗುಣವ ನಾರದ ಗುರುತುಸೆಕ್ಕಾತು. ಹೀಂಗೆ ಅನೇಕ ಸಂಗತಿಗೋ ಇದ್ದು. ತಪ್ಪು ಮಾಡದ್ದವು ಯಾರು ಇಲ್ಲೆ. ಹಾಂಗಾಗಿ ತಪ್ಪು ಮಾಡುವವರ ದೂರ ಮಾಡದ್ದೇ ಅವರ ತಿದ್ದುವ ಪ್ರಯತ್ನ ಮಾಡೆಕ್ಕು ಹೇಳುದರ ಹೇಳುತ್ತ

ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? ।
ಆತುಮದ ಪರಿಕಥೆಯನರಿತವರೆ ನಾವು? ॥
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ ।
ನೀತಿ ನಿಂದೆಯೊಳಿರದು –  ಮಂಕುತಿಮ್ಮ  ॥

ಪಾಪವೆಂಬುದದೇನು ಸುಲಭಸಾಧನೆಯಲ್ಲ ।
ತಾಪದಿಂ ಬೇಯದವನ್ ಅದನೆಸಪನಲ್ಲ ॥
ವಾಪಿಯಾಳವ ದಡದಿ ನಿಂತಾತನರಿವನೇಂ? ।
ಪಾಪಿಯೆದೆಯೊಳಕಿಳಿಯೊ –  ಮಂಕುತಿಮ್ಮ  ॥

ರಾವಣನ ಹಳಿವವನೆ, ಜೀವವನೆ ಬಿಸುಡಿಸುವ ।
ಲಾವಣ್ಯವೆಂತಹುದೊ? ನೋವದೆಂತಹುದೊ? ॥
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ ।
ಗಾವಿಲನ ಗಳಹೇನು?‌ –  ಮಂಕುತಿಮ್ಮ  ॥
ಈ ಕಗ್ಗದ ಸಾಲುಗಳ  ನೆನಪು ಮಾಡಿಯೊಂಡವು. ಆ ಕಗ್ಗವ ಪ್ರೇಮಕ್ಕ ಹಾಡಿರೆ, ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು.

ನಾವು ಡೆಲ್ಲಿಗೆ ಹೋಪಲೆ ವಿಮಾನ ಉಪಯೋಗಿಸುತ್ತು. ಬೇರೆ ಹೆರದೇಶಕ್ಕೂ ವಿಮಾನಲ್ಲಿ ಹೋವ್ತವು. ಆದರೆ ಎಂಟು ಕೋಟಿ ಯೋಜನ ದೂರಲ್ಲಿ ಇಪ್ಪ ಸತ್ಯಲೋಕ, ಅಲ್ಲಿಂದ ಹತ್ತು ಕೋಟಿ ಯೋಜನ ದೂರಲ್ಲಿಪ್ಪದು ವೈಕುಂಠ. ಅಲ್ಲಿಗೆತ್ತೆಕಾರೆ ನಮ್ಮ ಭಕ್ತಿ ಸಾಧನೆ ಆ ಮಟ್ಟಲ್ಲಿರೆಕ್ಕು ಹೇಳಿದವು. ಮಧ್ಯಾನ್ನದ ಹೊತ್ತು ಮನುಗಿದ ಸನ್ಯಾಸಿಯ ನಿದ್ದೆ ನಿದ್ದೆಯಲ್ಲ, ಅದು ಪಾರಮಾರ್ಥ ಕಾಂಬದು, ಹಾಂಗೇಳಿ ಎಂಗೋ ನಿಂಗೊಗೆ ಮಧ್ಯಾಹ್ನ ಮಲಗಿ ಒರಗಿ ಹೇಳ್ತದಲ್ಲ. ನಿದ್ದೆಲಿಪ್ಪಗ ಎಂತೂ ಗೊಂತಾಗದ್ದರೆ ಆ ನಿದ್ದೆ ದೇಹಕ್ಕೆ ವಿಶ್ರಾಂತಿ ಕೊಡುಗಷ್ಟೇ ವಿನಹಾ ಸಾಧನೆಯ ಮೆಟ್ಟಿಲಾಗ. ಮುಕ್ತಿ ಪಡೆಯೆಕ್ಕಾರೆ ಮಾನವ ಜನ್ಮವೇ ಆಯೆಕಷ್ಟೆ. ಬೇರೆ ಯಾವ ಜನ್ಮಂದಲೂ ಅದು ಸಾಧ್ಯವಿಲ್ಲೆ ಹೇಳಿಯಪ್ಪಗ ಪ್ರೇಮಕ್ಕ ‘ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ’ ಪದ್ಯವ ಹಾಡಿದವು., ಅದರೊಟ್ಟಿಂಗೆ ಗೋಪಾಲಕೃಷ್ಣ ಹೆಗಡೆ ತಬಲ, ಶ್ರೀಪಾದ ಹೆಗಡೆ ಹಾರ್ಮೋನಿಯಂ ವಿಶ್ವೇಶ್ವರ ಹೆಗಡೆ ಭರತನಾಟ್ಯ ನೀರ್ನಳ್ಳಿ ಮಾವನ ಚಿತ್ರವೂ ಇತ್ತು. ಯಮಸುತರು ಕಾಲ್ಪಿಡಿದೆಳೆವಾಗ ಹೇಳುವ ಸಾಲಿಗೆ ಸರಿಯಾಗಿ ರಾಜಕಾರಣಿಯ ಕೊರಳುಹಿಡಿದೆಳೆವ ಯಮನ ಚಿತ್ರವ ನೀರ್ನಳ್ಳಿ ಮಾವ ಬಿಡುಸಿದವು.

ವಿವಾಹಕ್ಕೋಸ್ಕರ ಕರ್ಧಮ ಘೋರ ತಪಸ್ಸು ಮಾಡಿಯೊಂಡಿತ್ತಿದ್ದ.  ಅದು ಹತ್ತುಸಾವಿರ ವರ್ಷದ ತಪಸ್ಸು ಹೇಳಿ ಹೇಳ್ತಾ ಇಪ್ಪಗ ಹತ್ತರೆ ಬೇರೆ ಕಾರ್ಯಕ್ರಮಲ್ಲಿ ಬೆಡಿ ಹೊಟ್ಟಿಸಿದ ಶಬ್ದ ಕೇಳಿಯಪ್ಪಗ ಅದನ್ನೂ ಉಲ್ಲೇಖಿಸಿ ಹೀಂಗಿಪ್ಪ ತೊಂದರೆಗೊಕ್ಕೆವಿಚಲಿತನಾಗದ್ದೇ ಮಾಡಿದ ತಪಸ್ಸು ಹೇಳಿ ಆ ಸಂದರ್ಭವನ್ನೂ ಬಳಶಿಯೊಂಡವು. ಕರ್ಧಮನ ತಪಸ್ಸಿಂಗೆ ಒಲಿದ ದೇವರು ಅವನ ಆಶಯದಂತೆ ಯೋಗ್ಯೆ ಕನ್ಯೆಯಾಗಿ ಸ್ವಯಂಭೂ ಮನುವಿನ ಮಗಳು ದೇವಹೂತಿ ಸಿಕ್ಕಿತ್ತು ಹೇಳಿದವು. ಇದರ ಮಧ್ಯೆ ಈ ಕಾರ್ಯಲ್ಲಿ ನಾರದನ ಪಾತ್ರವನ್ನೂ ವಿವರಿಸಿದವು. ನಾರದ ದೇವಹೂತಿಗೆ ಕರ್ಧಮನ ವಿಚಾರ ಹೇಳಿ, ಸ್ವಯಂಭೂ ಮನು ಕರ್ಧಮನಲ್ಲಿಗೆ ಪತ್ನೀ ಮಗಳೂ ಸಹಿತ ಬಪ್ಪ ಹಾಂಗೆ ಮಾಡಿದ. ಕರ್ಧಮ ಎಲ್ಲಾ ರೀತಿಯ ಉಪಚಾರ ಮಾಡಿ ಎನ್ನಂದೆಂತಾಯೆಕ್ಕು ಕೇಳಿಯಪ್ಪಗ ಮನು ಎನ್ನ ಮಗಳ ಮದುವೆ ಆಯೆಕ್ಕು ಹೇಳ್ತ. ಅವಾಗ ಕರ್ಧಮ ಅವಕ್ಕೆ ಇಂತಾ ಕೂಸಿನ ಒಪ್ಪದಿಪ್ಪಲೇ ಕಾರಣ ಇಲ್ಲೆ ಹೇಳ್ತಾ ದೇವಹೂತಿಯ ಸೌಂದರ್ಯಕ್ಕೆ ವಿಶ್ವವಸು ವಿಮಾನಂದ ಬಿದ್ದ ಕಥೆಯ ಹೇಳ್ತ. ಇದರ ಶ್ರೀಧರ ಹೊಳ್ಳ  ಬಳಗದವು ರೂಪಕಲ್ಲಿ ತೋರಿಸಿದವು. ಒಟ್ಟಿಂಗೆ ದೇವಹೂತಿ ಅತ್ತೆಯತ್ರೆ  ಕಥೆ ಹೇಳುದರ ವಿವರಿಸುವ ಅತ್ತೆ ಅತ್ತೇ ಬಿತ್ತೇ ಬಿತ್ತೇ ಹೇಳ್ತ ಪದ್ಯವ ಪ್ರೇಮಕ್ಕ ಹಾಡಿದವು. ಕಥೆಯ ಮುಂದುವರೆಸಿ ಮದುವೆ ಆಯೆಕ್ಕಾರೆ  ಕರ್ಧಮ ಒಂದು ಕಂಡಿಶನ್ನು( ಶರ್ತ) ಹಾಕಿತ್ತಿದ್ದ. ಆನು ಮದುವೆ ಅಪ್ಪದು ಸುಖಕ್ಕಾಗಿ ಅಲ್ಲ. ಸಂತಾನಕ್ಕಾಗಿ. ಒಳ್ಳೆ ಸಂತಾನ ಸಿಕ್ಕಿಯಪ್ಪಗ ಆನು ಮುಕ್ತಿ ಮಾರ್ಗವ ಕಂಡುಕೊಳ್ಳುತ್ತೆ ಹೇಳಿ. ಅದಕ್ಕೆ ಒಪ್ಪಿದ ಮೇಲೆ ಮದುವೆ ಆಗಿ ಸಂತಾನವೂ ಆತು. ಮತ್ತೆ ತಪಸ್ಸಿಗೆ ಕೂದ ಕರ್ಧಮನ ಸೇವೆ ಮಾಡ್ತ ಎಷ್ಟೋ ಸಮಯ ಕಳುದ ಮೇಲೆ, ಒಂದು ದಿನ ದೇವಹೂತಿಯ ನೆನಪ್ಪಾಗಿ ಅದು ಬೇಜಾರಿಲಿಪ್ಪದರ ತಿಳ್ಕೊಂಡು ಬಿಂದುಸಾಗರಲ್ಲಿ ಮಿಂದು ಬಪ್ಪಲೆ ಹೇಳ್ತ. ಮಿಂದೆದ್ದು ಬಪ್ಪಗ ಸಾವಿರ ದಾಸಿಯರು ಕಾಣ್ತವು. ಅವು ಅದಕ್ಕೆ ಬೇಕಾದ ಪ್ರತಿಕರ್ಮಂಗಳ ಮಾಡ್ತವು(ಪ್ರತಿಕರ್ಮ ಹೇಳಿರ ಈಗಾಣ ಬಾಷೆಯ ಮೇಕಪ್ಪು, ಚೆಂದ ಕಾಂಬಲೆ ಮಾಡ್ತ ವಿಧಾನಂಗೊ) ಅದಾದ ಮೇಲೆ ಕೇವಲ ದೃಷ್ಟಿ ಮಾತ್ರಂದ ಆ ದಂಪತಿಗೊ ಸಂತಾನ ಭಾಗ್ಯ ಪಡದವು.. ಒಂಭತ್ತು ಪುತ್ರಿಯಕ್ಕೋ. ಜಯ ವಿಜಯಾದಿ ಗೆಂಡು ಮಕ್ಕೋ. ಅಷ್ಟಪ್ಪಗ ದೇವಹೂತಿ ಶರ್ತ ನೆಂಪಾಗಿ ಬೇಜಾರಿಲಿರ್ತು. ಅದ ಸಮಾಧಾನ ಮಾಡುಲೆ ಕರ್ಧಮ ಹೇಳ್ತ ಆನೀಗಳೇ ಹೋವ್ತಿಲ್ಲೆ. ಹೋಯೆಕಾರೆ ಮೊದಲು ಎನ್ನ ಅನುಪಸ್ಥಿತಿಯ ತುಂಬುಲೆ ಸಮರ್ಥ ಜೆನವ ಕೊಡ್ತೆ ಹೇಳಿ. ಹಾಂಗೆ ಹುಟ್ಟಿದವನೇ ಕಪಿಲ. ಕಪಿಲ ಮಹರ್ಷಿಯ ಅಣ್ಣಂದ್ರೇ ಜಯ ವಿಜಯರು. ಅವರ ಪರಿಚಯ ಮಾಡಿಕೊಟ್ಟವು. ಕಪಿಲನ ಗುಣಂಗಳ ಬಗ್ಗೆಯೂ ಹೇಳಿದವು. ಅದರೆಡೆಕ್ಕಿಲಿ ದೇವಸ್ಥಾನದ ಪೂಜೆ ಭಟ್ಟನೂ ಕೆಲಸದವನ ಕಥೆ ಹೇಳಿದವು ನೋಡುವ ದೃಷ್ಟಿ ಒಳ್ಳೆದಿದ್ದರೆ ಕಲ್ಲಿಲಿಯೂ ಶಿವನ ಕಾಂಗು, ಅಲ್ಲದಿದ್ದರೆ ಶಿವನೂ ಕಲ್ಲಾಗಿ ಕಾಂಗು ಹೇಳಿದವು.

ಒಳ್ಳೆತನ ಒಳ್ಳೆ ಮನಸ್ಸು, ಒಳ್ಳೆ ಗುರಿ ಯಾವಗಲೂ ಹಾಂಗೇ ಇರೆಕ್ಕು. ನಮ್ಮ ಗುರಿ ಒಂದೇ ಆಗಿದ್ದರೆ ಮಾತ್ರ ನಾವು ಹಿಮಾಲಯಲ್ಲಿ ಹುಟ್ಟಿ ಸುಮಾರು 2400 ಕಿಮೀ ಹರುದು ಅದಕ್ಕೆ ಎಷ್ಟೋ ಹೊಳೆಗೊ ಸೇರಿರೂ ಒಟ್ಟು ಸೇರ್ಸಿಯೊಂಡು, ಸಾಗರವ ಸೇರ್ತ ಗಂಗೆಯ ನೀರಿನಾಂಗೆ ಆಯೆಕ್ಕು ಹೇಳುವಾಗ ‘ದೇವ ನದಿಯ ಸೇರಲು ನೂರು ಹೊಳೆಗಳು.. ಯಾವುದನೂ ಬೇಡವೆನದೆ ಕೂಡಿಕೊಳುವಳು’ ಹೇಳ್ತ ಪದ್ಯವ ಪ್ರೇಮಕ್ಕ ಹಾಡಿರೆ ಚಿತ್ರ, ನೃತ್ಯವೂ ಇತ್ತು.

ಒಡಹುಟ್ಟಿದವರ ದಡ ಮುಟ್ಟಿಸಿದ ಹೇಳಿರೆ ಮುಕ್ತಿ ಪಡವಲೆ ಸಹಾಯ ಮಾಡಿದ. ದಿನಾಲೂ ಹರಿಯ ಸೇವೆ ಮಾಡುವಾಂಗೆ ಮಾಡಿದವು ಕಪಿಲ ಮುನಿ ಹೇಳಿದವು. “ಮೇರೆ ತಾರ್ ಪ್ರಭುಸೇ ಜೋಡೇ.. ಐಸಾ ಕೋಯಿ ಸಂತ್ ಮಿಲೇ… ಮೇರೆ ಮನ್ ಕೀ ರಾಸ್ತಾ ಮೋಡೇ.. ಐಸಾ ಕೋಯಿ ಸಂತ್ ಮಿಲೇ.. ಹೇಳ್ತ ಪದ್ಯವ ಹಾಡಿದವು ಪ್ರೇಮಕ್ಕ. ನಮ್ಮ ಮನಸ್ಸು ದೇವರ ಕಾಂಬಲೆ ಎಷ್ಟು ತೀವ್ರವಾಗಿರೆಕ್ಕು ಹೇಂಗೆ ನಿರಂತರ ಪ್ರಯತ್ನ ಮಾಡೆಕ್ಕು ಹೇಳುದರ ವರ್ಣನೆ ಮಾಡ್ತಾ ದೇವರ ತೋರ್ಸುಲೆ ಪೀಡಿಸಿಗೊಂಡಿದ್ದ  ಶಿಷ್ಯನ ಗುರುಗಳು ನೀರಿಲಿ ಮುಳುಗಿಶಿ ಮಡಗಿದ ಕಥೆ ಹೇಳಿದವು. ಶಿಷ್ಯಂಗೆ ಉಸಿರಾಡುಲೆ ಕಷ್ಟ ಅಪ್ಪಗ ಅವ ಎಲ್ಲಾ ಶಕ್ತಿಯ ಒಟ್ಟು ಮಾಡಿ ಗುರುಗಳ ದೂಡಿ ಮೇಲೆ ಬಂದನಡ. ಹಾಂಗಿದ್ದ ತೀರ್ವತೆ ಇದ್ದರೆ ಮಾತ್ರಶಕ್ತಿಯ ಕಾಂಬಲೆ ಸಾಧ್ಯ. ನಿರಂತರತೆಯೂ ತೀರ್ವತೆಯೂ ಸಿದ್ದಿಯ ದಾರಿ. ಹೇಳಿ ಹೇಳಿದವು.

ನಿನ್ನ ಧ್ಯಾನದ ಹೊರತು ಅನ್ಯನೆನಹಿಲ್ಲೆನಗೆ ಹೇಳ್ತ ಪದ್ಯಕ್ಕೆ ನೀರ್ನಳ್ಳಿ ಮಾವನ ಚಿತ್ರವೂ ಇತ್ತು. ದೇವರ ದೃಷ್ಟಿ ನಮ್ಮ ಮೇಲೆ  ಯಾವಾಗಲೂ ಇರ್ತು. ಆದರೆ ನಮ್ಮ ದೃಷ್ಟಿ ಅವನ ಮೇಲೆ ಸರಿಯಾಗಿ ಬಿದ್ದರೆ ಮಾಂತ್ರ ದೇವ ಸಮಾಗಮ ಅಪ್ಪಲೆ ಸಾಧ್ಯ. ನಾವು ಅದರ ಮಾಡ್ತಾ ಇಲ್ಲೆ. ಹಾಂಗಾದ ಕಾರಣ ನವಗಾವ್ತಾ ಇಲ್ಲೆ ಹೇಳಿದವು.

ರೊಕ್ಕ ರೊಕ್ಕ ಅದು ದುಃಖವೋ ಸುಖವೋ ಪದ್ಯವ ಪ್ರೇಮ್ಮಕ್ಕ ಹಾಡಿರೆ ತಬಲ ಹಾರ್ಮೋನಿಯಮ್ ಸಾತಿನೊಟ್ಟಿಂಗೆ ಚಿತ್ರವೂ ಇತ್ತು. ಜಯವಿಜಯರಿಂಗೆ ದೈವ ಭಕ್ತಿ ಕೃಪೆಯೊಟ್ಟಿಂಗೆ ಸ್ಥಾನಮಾನಂಗೊ ಸಿಕ್ಕುತ್ತು. ಅಷ್ಟಪ್ಪಗ ಅವು ಮಾಯೆಯ ದೃಷ್ಟಿಗೆ ಬೀಳ್ತವು. ಪೈಸೆಯ ಆಸೆಗೆ ಬಿದ್ದು ಜಗಳ ಮಾಡಿಕೊಳ್ಳುತ್ತವು. ಅಂಬಗ ಕೋಪಲ್ಲಿ ಜಯ ವಿಜಯಂಗೆ ನೀನು ಮೊಸಳೆ ಆಗು ಹೇಳಿ ಶಾಪ ಕೊಡ್ತ. ಆ ಶಾಪ ನಿಜ ಆಯೆಕ್ಕರೆ ಮೊದಲು ವಿಜಯ ಜಯಂಗೆ ನಿನಗೆ ಹಾಂಕಾರ ಮದ ಹೆಚ್ಚಾಯಿದು ಹೇಳಿ ಆನೆ ಆಗು ಹೇಳಿ ಶಾಪ ಕೊಡ್ತ. ಈ ರೀತಿ ಮಾಯೆಯ ವರ್ಣನೆ ಮಾಡ್ತ ಪದ್ಯ ” ಅರಿವಾಗದ ತೆರದಿ ಮಾಯೆ” ಯ ಹಾಡಿದವು. ಇದಾಗಿಕ್ಕಿ ಇಂದ್ರಾಣ ಕಥೆಯ ಉಪಸಂಹಾರ ಮಾಡಿದವು. ಮುಂದಾಣ ಕಥೆಯ ನಾಳೆ ಕೇಳುವೋ. ನಾಳೆಯೂ ಬರೆಕ್ಕು, ನಾಳೆ ನಿಂಗಳೂ ಬರೆಕ್ಕು ಎಂಗಳೂ ಬರೆಕ್ಕು ಹೇಳಿ ಇಂದ್ರಾಣ ಕಥೆಯ ಮುಗುಶಿದವು. ಅದಾದಮೇಲೆ ಜಯವಿಜಯರು ಕರಿ-ಮಕರ ಆದು ಹೇಂಗೆ ಹೇಳ್ತ ರೂಪಕವ ಶ್ರೀಧರ ಹೊಳ್ಳ ತಂಡದವು ನಡೆಶಿಕೊಟ್ಟವು. ನಿನ್ನೆಯ ಹಾಂಗೆ ಜೈ ಜೈ ರಾಮಕಥಾ ಜೈ ಜೈ ರಾಮಕಥಾ ಕ್ಕೆ ಎಲ್ಲರೂ ಎದ್ದು ಕುಣುದವು. ಅಷ್ಟಪ್ಪಗ ಜಿಂಜರಿಸಿದ ಕೈಕಾಲಿಲಿ ಸರಿಯಾಗಿ ರಕ್ತ ಸಂಚಾರ ಅಪ್ಪಲೆ ಶುರು ಆತಿದಾ. ಗುರುಗೋ ರಾಮಯಣ ಗ್ರಂಥಕ್ಕೆ ಪುಶ್ಪಾರ್ಚನೆ ಮಂಗಳಾರತಿ ಮಾಡಿದವು. ಶ್ರೀರಾಮ ಜಯರಾಮ ಹೇಳಿ ಇಂದ್ರಾಣ ಕಾರ್ಯಕ್ರಮಕ್ಕೆ ಮಂಗಳ ಆತು.

ಅದಾಗಿ ಮನಾರ, ಪಂಚಕಜ್ಜಾಯ, ಪಾನಕ ಪ್ರಸಾದ ಇತ್ತು. ಬೈಲಿನೋರು ಸುಮಾರು ಜೆನ ಇಂದೂ ಇತ್ತವು ನಾವು ನಾಳಾಣ ಸುದರಿಕೆಯ ಯೋಚನೆಲಿ ಹೆರಟತ್ತು. ನಾಳೆಯೂ ಇದ್ದೂ..

ಹರೇರಾಮ

ಪಟಂಗೋ:

13 thoughts on “ಕೊಡೆಯಾಲ ರಾಮಕಥಾ – ಎರಡನೇ ದಿನ

  1. ಉತ್ತಮ ನಿರೂಪಣೆ. ರಾಮಕಥೆ ಕಂಡ ಹಾಂಗೇ ಆತು. ಧನ್ಯವಾದಂಗೊ.

  2. ಕುತೂಹಲ ಕಾರಿಯಾಗಿ ಬತ್ತಾ ಇದ್ದು ರಾಮಕತೆ.
    ಎತ್ತರದ ಪೀಠಲ್ಲಿ ಕೂದೊಂಡಿಪ್ಪ ಗುರುಗಳ ಫಟ ಅದ್ಭುತವಾಗಿ ಬಯಿಂದು. ಕಣ್ಣಾರೆ ಕಂಡ ಅನುಭವ ಆತು.
    ಇನ್ನಾಣದಕ್ಕೆ ಕಾವದು ನಾವೆಲ್ಲ ಪೆಂಗಣ್ಣ.

  3. ಒಪ್ಪ ಒಪ್ಪ ಒಪ್ಪ ಒಪ್ಪ ಒಪ್ಪ ಒಪ್ಪ ಒಪ್ಪ ಒಪ್ಪ …
    ಎಷ್ಟು ಒಪ್ಪಕೊಟ್ಟರೂ ಸಾಲನ್ನೆ??
    ತುಂಬ ತುಂಬ ಒಪ್ಪಂಗೊ.

    ಗುರುಗಳ ರಾಮಕಥೆ ಎಷ್ಟು ಗಂಭೀರವೋ, ವಿದ್ವತ್ಪೂರ್ಣವೋ,
    ಅಷ್ಟೇ ಲಾಯಕಕ್ಕೆ ಅಣ್ಣನ ನಿರೂಪಣೆ 🙂

    ಆದಿತ್ಯವಾರ ಆದಕಾರಣ ಇದೀ ದಿನ ಅಲ್ಲೇ ಇಪ್ಪಲಾತು 🙂
    ಸುಮಾರು ೩೫೦ ಜೆನ ಆದಿಕ್ಕು ಅಲ್ಲದ ಅಣ್ಣಾ?
    ಅಷ್ಟು ಜನರೆಡೆಲಿ, ಮಂತ್ರಾಕ್ಷತೆಗಪ್ಪಗ ಗುರುಗೊ ಗುರ್ತ ಹಿಡುದವು..
    “ಹೇಂಗಿದ್ದೆ? ನೀ ಬಂದದು ಗೊಂತಾತು, ಖುಶಿ ಆತು, ಬಂದೊಂಡಿರು..” ಹೇಳುವ ಎಲ್ಲ ಮಾತುಗಳ – ಭಾವನೆಯ “…ಮಾಣಿ…” ಹೇಳುವ ಒಂದು ಶಬ್ದಲ್ಲಿ ಹೇಳಿದವನ್ನೆ.. ಮತ್ತೆ ಮಾತಾಡೆಕೂ ಹೇಳಿಯೇ ತೋರಿದ್ದಿಲ್ಲೆ… 🙂 🙂
    ಮಂತ್ರಾಕ್ಷತೆಯೊಟ್ಟಿಂಗೆ ಗುರುಗೊ ಪ್ರೀತಿಲಿ ಒಂದು ಚಿತ್ತುಪುಳಿಯೂ ಕೊಟ್ಟವು 😉

    ಪೂಜೆಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತ್ತು
    ಹೇ°,
    ಉತ್ತರ ಭಾರತಕ್ಕೆ ಹೋಗಿ ಗುರುಗೂ ರಜ್ಜ ಸಪುರ ಆದವೋ? ಗ್ರೇಶಿದೆ.
    ದೇಹ ಮಾತ್ರ ರಜಾ ಸಪುರ ಆದ್ದು, ಆ ನಮ್ಮ ಗುರುಗಳೊಳ – ಅದೇ ಗುರು ಹೊಸತ್ತಾಗಿ, ಹತ್ತಾಗಿ ನೋರಾಗಿ ಇಪ್ಪ ಹಾಂಗೆ ಕಂಡತ್ತು..
    ಆ ಇಡೀ ನಂತೂರಿನ ಪರಿಸರಲ್ಲಿ ಗುರುಗಳ ಪ್ರಭೆ ಇದ್ದತ್ತು..

    1. ( ಸುಮಾರು ೩೫೦ ಜೆನ ಆದಿಕ್ಕು ಅಲ್ಲದ ಅಣ್ಣಾ? )- ಅದು ಮದ್ಯಾಹ್ನದ ಸಂಗತಿ ರಾಮಕಥಗೆ ಹೊತ್ತೋಪಗ ಜೆನ ಐನೂರರ ಮೇಲೆ ಇತ್ತಿದ್ದವು ಪಾನಕ ಕುಡುಶಿದವರತ್ರೆ ಕೇಳೀರೆ ಗೊಂತಕ್ಕು…..

        1. ಹರೇ ರಾಮ
          ರಾಮಕಥಾ ಸಭಾಂಗಣದ ಒಳ ಒಂದು ಸಾವಿರ ಕುರ್ಶಿ ಹಾಕಿದ್ದು. ಆದಿತ್ಯವಾರ ಆ ಕುರ್ಶಿಗು ತುಂಬಿ ನಂತರ ಶಂಕರಶ್ರೀಲಿ ಇಪ್ಪ ಸುಮಾರು ೨೫೦ ಕುರ್ಶಿ ತರುಸಿ ಅದುದೆ ಸಾಲದ್ದೆ ಲ್ಯೆಬ್ರೆರಿಂದ ೧೦೦ ಕುರ್ಶೀ ತರುಸಿದ ಮೇಲೆ ಬಂದವಕ್ಕೆ ಎಲ್ಲರಿಂಗುದೆ ಕೂಪಲೆ ಜಾಗೆ ಸಾಕಾತು. ಕೆಲವು ಜೆನಂಗೊ ನೆಲಲ್ಲಿ ಸುಮಾರು ೫೦ ಜೆನ ನೆಲಲ್ಲಿ ಕೂದುಂಗೊಂಡಿತ್ತಿದ್ದವು

  4. ಪೆಂಗಣ್ಣೊ… ಒಳ್ಳೆ ಪ್ರಯತ್ನ… ಇಲ್ಲಿಂದಲೇ ರಾಮಕಥೆ ಕೇಳಿದಾಂಗೆ ಆತದಾ….
    ಮುಂದುವರೆಯಲಿ.. ನಿನ್ನ ಕಾರ್ಯ ಶ್ಲಾಘನೀಯ….ಮನನೀಯ

  5. ಕಾರ್ಯಕ್ರಮ ಅದ್ಭುತವಾಗಿ ರಸದೌತಣ ಕೊಟ್ಟಿತ್ತಿದ್ದು.
    ಇಲ್ಲಿ ಯಾವದಕ್ಕೂ ಚ್ಯುತಿ ಬಾರದ್ದ ಹಾಂಗೆ ನಿರೂಪಣೆಯೂ ಅಷ್ಟೇ ಲಾಯಿಕ ಆಯಿದು
    ಪೆಂಗಣ್ಣನ ಈ ಗುರು ಸೇವೆ ನಿರಂತರವಾಗಿರಲಿ
    ಧನ್ಯವಾದಂಗೊ

  6. ಹರೇರಾಮ
    ಇದಾರಪ್ಪಾ ಇಷ್ತು ಚೆಂದಕ್ಕೆ ವಿವರಣೆಯ ಬರವದು. ಒಂದರಿ ರಾಮಕಥಾದ ಮ್ಯೆದಾನಲ್ಫ್ಲಿ ಗುರ್ತ ಮಾಡಿದರೆ ಒಳ್ಫ್ಳೆಯದಿತ್ಫು. ಮತ್ತೆ ಕಾರ್ಯಕ್ಫ್ರಮದ ವಿವರಂಗೊ ಒಪ್ಫ್ಪಣ್ಣಲ್ಲಿ ಸಿಕ್ಕುತ್ತು ಹೇಳಿ ಒಂದು ಸರ್ತಿ ಮ್ಯೆಕ್ಕಲ್ಲಿ ಹೇಳುವ
    ಮರುವಳ ನಾರಾಯಣ

  7. [ಕೇವಲ ಹೆರಂದ ನೋಡಿ ಯಾರನ್ನೂ ಅವು ಹೀಂಗೆ ಹಾಂಗೆ ಹೇಳುಲಾಗ. ಅವರ ಅಂತರಾಳಲ್ಲಿ ಎಂತ ಇದ್ದು ಹೇಳ್ತದರ ತಿಳಿವ ಪ್ರಯತ್ನ ಮಾಡೆಕ್ಕು ] [ಮುಕ್ತಿ ಪಡೆಯೆಕ್ಕಾರೆ ಮಾನವ ಜನ್ಮವೇ ಆಯೆಕಷ್ಟೆ] [ ತಪ್ಪು ಮಾಡುವವರ ದೂರ ಮಾಡದ್ದೇ ಅವರ ತಿದ್ದುವ ಪ್ರಯತ್ನ ಮಾಡೆಕ್ಕು ] – ಮನನಾಟಿದ ವಿಚಾರಂಗೋ. ಕಥೆಯೊಳಗೆ ಕಥೆ ಇನ್ನೂ ಅನೇಕ ವಿಷಯಂಗಳ ತಿಳ್ಕೊಂಬಲೆ ಸಾಧ್ಯವಾತು. ಪಟಂಗಳ ನೋಡಿ ಖುಶಿಪಟ್ಟತ್ತು. ಪೆಂಗಣ್ಣ ಅಲ್ಲಿ ಕೇಂಪು ಹಾಕಿದ್ದು ಸಾರ್ಥಕ ಆತು ಹೇಳಿತ್ತು -ಚೆನ್ನೈವಾಣಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×