Oppanna.com

ಅನುರಾಗ ರಾಗ

ಬರದೋರು :   ಡಾಮಹೇಶಣ್ಣ    on   13/06/2014    17 ಒಪ್ಪಂಗೊ

ನಮಸ್ಕಾರ,
ಇಲ್ಲೊಂದು ಅನುರಾಗಗೀತೆ ಇದ್ದು.
ಒಂದರಿ ಕೇಳಿ ಹೇಂಗಿದ್ದು ಹೇಳ್ತೀರಾ?
ಪದ್ಯದ ಗೀತರೂಪ ಇಲ್ಲಿದ್ದು. ಸರಳಿ ಈಶ್ವರಪ್ರಕಾಶಣ್ಣ ಚೆಂದಕೆ ಹಾಡಿ ಕೊಟ್ಟದು.

ಸಾಹಿತ್ಯವ ಸ್ಪುಟವಾಗಿ ಕೇಳ್ಳೆ –
https://soundcloud.com/oppanna3/anuraga-raga-1
ಪದ್ಯದ ಲಿಖಿತರೂಪ ಇಲ್ಲಿದ್ದು. ಸರಳ ಸಂಸ್ಕೃತಲ್ಲಿದ್ದು. ಶಬ್ದದ ಅರ್ಥ ಗೊಂತಾಗದ್ರೆ ಕೇಳಿ.

ಅನುರಾಗ-ರಾಗ

 
ಅಮರಾವತಿ-ಸಂಜಾತೇ! ರಾಗಾಮೃತಧಾರಿಣಿ ಹೇ!
ಕ್ಷಿತಿತಲಮಾಗತ-ಲಜ್ಜಾವತಿ ಸುಂದರಿ!
ಪ್ರಿಯೇ ಪ್ರಿಯೇ ಹೇ ಪ್ರಿಯೇ! ಪ್ರಿಯೇ ಪ್ರಿಯೇ ಹೇ ಪ್ರಿಯೇ!
 
ಸೌದಾಮಿನೀ-ಕಾಂತಿರೂಪೇ। ಕ್ಷಣೇ ಕ್ಷಣೇ ದೃಶ್ಯಮಾನೇ।
ಚಂಚಲಾ ಚ ವಲ್ಲರೀವ ಮೋಹಯಸಿ ಶೋಭಮಾನೇ।
ಚಂಚಲಂ ನೇತ್ರಯುಗಲಂ ಸೂಚಯತಿ ಕಿಮಪಿ ಸತ್ಯಂ।
ಬಿಂಬಫಲವರ್ಣಾವೋಷ್ಠೌ ಧಾರಯತೋ ಮಧು ಮಧುರಂ।
 
ಆ.. ಕೋಕಿಲೋಪಿ ಲಜ್ಜತೇ ಹ ಗಾನಮಧುರೇ।
ರಾಜತೇ ನ ಹರಿಣೀ ಚಂಚಲಾಕ್ಷಿ!
ಸ್ವಾಂತಂ ಅರ್ಪಿತಮಹಂ ತವ ಕಾಮಯೇ ಪ್ರೀತಿಮ್। ಪ್ರಿಯೇ ಪ್ರಿಯೇ…
 
ನೇತ್ರೇಣ ವೀಕ್ಷಣೇನ ಮಾ ಪ್ರಹರ ಸೌಮ್ಯವದನೇ।
ಕ್ರಿಯತೇನುರಾಗಪೂಜಾ ವಸ ಮಮ ಹೃದಯೇ ಸದನೇ।
 
ಭಂಗಿತಃ ಭ್ರೂಧನುಷಃ ಪ್ರೇಷ್ಯತೇ ಹಿ ಪ್ರೇಮಶರಃ।
ನ ಸಹೇ ಸಖಿ ತೇ ವಿರಹಂ; ಮಾರಯತಿ ಮಾರಶರಃ।
 
ಹೇ ಅಪಹೃತ್ಯ ಹೃದಯಂ ಕುತ್ರ ಧಾವಸಿ?
ಹಾ!.. ಅಂತತೋ ಗುಪ್ತಾ ಮಮ ಮನಸಿ।
ಮಮ ಜೀವನ-ಬಂಧನಮನುಭವ ಚೋರೇ। ಪ್ರಿಯೇ ಪ್ರಿಯೇ…
 
ಮಾಲಯಾ ಮಲ್ಲಿಕಾಯಾ ಭೂಷಯಾಮಿ ಕೇಶರಾಶಿಂ
ರಾಗಿಣಾ ವಚಸಾ ಸಾಕಂ ತೋಷಯಾಮಿ ತೇ ಚಿತ್ತಂ।
ಚಾಲಯಾವ ಜೀವಯಾನಂ ಸಂಚರಾವ ಸರಸೇ ವಿರಸೇ।
ವಿಹರಾವ ಸಕಲೇ ಭುವನೇ ಶ್ರಾವಯಾನುರಾಗ-ರಾಗಂ
 
ಹಂಸವರ್ಣೇ! ವದ ವದ ಪ್ರೇಮಮಂತ್ರಂ
ಧರ್ಮಸಹಿತಮ್ ಆಪ್ನುಯಾವ ಕಾಮಮರ್ಥಂ
ಸಾರ್ಥಂ ಜೀವಂ ಕುರು ಭವ ಅರ್ಧಾಂಗಿನಿ ಹೇ। ಪ್ರಿಯೇ ಪ್ರಿಯೇ! …
 
ಅಮರಾವತಿ-ಸಂಜಾತೇ! ರಾಗಾಮೃತಧಾರಿಣಿ ಹೇ!
ಕ್ಷಿತಿತಲಮಾಗತ-ಲಜ್ಜಾವತಿ ಸುಂದರಿ!
ಪ್ರಿಯೇ ಪ್ರಿಯೇ ಹೇ ಪ್ರಿಯೇ! ಪ್ರಿಯೇ ಪ್ರಿಯೇ ಹೇ ಪ್ರಿಯೇ!
 
 

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

17 thoughts on “ಅನುರಾಗ ರಾಗ

  1. ಮಹೇಶ + ಈಶ್ವರ =ಮಹೇಶ್ವರ ರ ಕವಿತೆ ಮತ್ತು ಗಾಯನ ಎರಡುದೇ ಲಾಯಕ ಆಯಿದು . ಇವಿಬ್ರುದೇ ನಮ್ಮ ನೀರ್ಚಾಲಿನ ಶಾಲೆಯ ಮಕ್ಕೊ ಹೇಳಿ ಹೇಳ್ಲೆ ಎನಗೆ ತುಂಬಾ ಕೊಶಿ ಆವ್ತಿದಾ .ಇನ್ನುದೆ ಇಂತಾ ಸತ್ಕೃತಿ ಗೊ ಬೈಲಿಂಗೆ ಬರಲಿ .ಶುಭಾಶಯಂಗೊ- ಮಹೇಶ ,ಪ್ರಕಾಶ .

  2. ಎನ್ನ ಕಂಪ್ಯೂಟರ್ ಲಿಪ್ಪ ಪದ್ಯ ಗಳಲಿ no ೧ . ಕೆ ಳ ಲೆ- ಸಿನೆಮ ಪದ್ಯ ಕಿಂನ್ತ ಎಸ್ಟೋ ಒಳ್ಳೆಯದು

  3. ಅನುರಾಗ ಗೀತೆ ಲಾಯಿಕ ಆಯಿದು. ಹಾಡಿದ್ದು ಕೂಡಾ ತುಂಬಾ ಲಾಯಿಕಾ ಆಯಿದು.

  4. ಹಿಂದಿ ಪದ್ಯಕ್ಕೆ ಸಂಸ್ಕೃತಲ್ಲಿ ಮಾತು ಬರದ ಹಾಂಗೆ ಇದ್ದನ್ನೆ.. ಪ್ರಿಯಾ ಪ್ರಿಯಾ ಓ ಪ್ರಿಯಾ.. ಹಾಡಿದ್ದು ಲಾಯಕಾಯಿದು.

  5. ಅಂತೂ ಈಗ ಆದರೂ ಒಂದು ಅನುರಾಗ ಗೀತೆ ಬರವಲೆ ಮನಸ್ಸು ಬಂತನ್ನೆ!ಒಳ್ಳೆದಾಯಿದು ಮಹೇಶ.ಹಾಡುದೆ ರಾಗಭರಿತವಾಗಿದ್ದು.ಅಭಿನಂದನೆ.ಬಾಕಿ ನಾಳಂಗೆ.

  6. ಸಂಸ್ಕೃತ ಭಾವಗೀತೆ ಆನು ಶುರೂ ಕೇಳೋದು . ಶೃಂಗಾರ ಕಾವ್ಯಂಗೊ ಇಪ್ಪದು ಗೊಂತಿದ್ದು. ಡಾ. ಮಹೇಶಣ್ಣನ ಹೊಸ ಪ್ರಯತ್ನಕ್ಕೆ ಅಭಿನಂದನೆಗೊ. ಹಾಡಿದ್ದೂ ಲಾಯಿಕ್ಕಾಯಿದು.

    1. ಸಂಸ್ಕೃತಲ್ಲಿ ಬರದರೆ ಲಾಲಿತ್ಯ ಬತ್ತಿಲ್ಲೆ ಹೇಳಿ ಕೆಲವರ ಆಕ್ಷೇಪ ಇತ್ತು. ಹಾಂಗಾಗಿ ಸಿನೆಮಾ ಪದ್ಯದ ಹಾಂಗೆ ಬರವಲೆ ಪ್ರಯತ್ನ ಮಾಡಿದ್ದದು. ನಿಂಗಗೆ ಎಂತ ಅನಿಸಿತ್ತೋ!
      —-
      ಕೆಲವು ಶಬ್ದಾರ್ಥಂಗ-
      ಆ.. ಕೋಕಿಲೋಪಿ ಲಜ್ಜತೇ ಹ ಗಾನಮಧುರೇ। (ಮಧುರವಾಗಿ ಹಾಡುವವಳೇ! (ನಿನ್ನ ಮುಂದೆ) ಕೋಗಿಲೆಯೂ ನಾಚಿತ್ತು.)
      ರಾಜತೇ ನ ಹರಿಣೀ ಚಂಚಲಾಕ್ಷಿ! (ಚಂಚಲಾಕ್ಷಿಯೇ! ಜಿಂಕೆಯೂ ಚೆಂದ ಕಾಣ್ತಿಲ್ಲೆ (ನಿನ್ನ ಮುಂದೆ)!)
      ಸ್ವಾಂತಂ ಅರ್ಪಿತಮಹಂ ತವ ಕಾಮಯೇ ಪ್ರೀತಿಮ್। ಪ್ರಿಯೇ ಪ್ರಿಯೇ…(ಹೃದಯವನ್ನೇ ಅರ್ಪಿಸಿದ್ದೆ. ಬಯಸುತ್ತೆ ನಿನ್ನ ಪ್ರೀತಿಯ…..)

      1. ಎನಗೆ ಸಿನೆಮಾ ಪದ್ಯದ ಹಾಂಗೆ ಅನಿಸಿದ್ದಿಲೆ. ಕನ್ನಡದ ಭಾವಗೀತೆಗೆ ತುಂಬ ಹತ್ತರೆ iddu. ರಾಗವೂ ಲಯಿಕಿದ್ದು. ಬಹುಶಃ ಬೇರೆ ರಾಗಲ್ಲಿಯೂ ಹಾಡುಲೆ ಅನುಕೂಲ ಅಕ್ಕು ಕಾಣುತ್ತು. ಒಂದು ಗೆರೆ ಮಾಂತ್ರ ಎನಗೆ ಅಷ್ಟು ಕೊಶಿ ಆಗದ್ದದು, ಪ್ರಶ್ನಾತ್ಮಕ ಇಪ್ಪ ಕಾರಣ.
        (ಹೇ ಅಪಹೃತ್ಯ ಹೃದಯಂ ಕುತ್ರ ಧಾವಸಿ?) – ಈ ಪದ್ಯವ ಪೂರ್ತಿ , ಒಬ್ಬ ಪ್ರಿಯತಮನ “ಸ್ವಗತ” ಇಪ್ಪ ಹಾಂಗೆ ಮಾಡಿರೆ ಹೇಂಗಕ್ಕು..?

  7. ಅನುರಾಗ ಭಾವಕ್ಕೆ ಶ್ರುತಿ ಸೇರಿತ್ತು. ಪದ್ಯ – ಹಾಡು ರೈಸಿತ್ತು.
    ಅಭಿನ೦ದನೆ ಮಹೇಶ,ಈಶ್ವರ ಪ್ರಕಾಶಣ್ಣ೦ಗೆ.

    1. ಕವಿಗೊಕ್ಕೆ ಮುದ ನೀಡಿರೆ ಪದ್ಯ ಸಾರ್ಥಕ ಆದ ಹಾಂಗೆ!
      —-
      ಕೆಲವು ಶಬ್ದಾರ್ಥಂಗ-
      ವಲ್ಲರೀ ಇವ = ಬಳ್ಳಿಯಂತೆ
      ಶೋಭಮಾನೇ = ಶೋಭಿಸುವವಳೇ
      ಮೋಹಯಸಿ = ನೀನು ಮರುಳು ಮಾಡ್ತೆ.
      ಬಿಂಬಫಲ-ವರ್ಣೌ = ತೊಂಡೆಹಣ್ಣಿನ ಬಣ್ಣದ

  8. ಹರೇ ರಾಮ; ಸಾಹಿತ್ಯ ಹಾ೦ಗೂ ಹಾಡುದೇ ಬಾರೀ ಲಾಯಕಕ್ಕೆ ಮೂಡಿ ಬಯಿ೦ದು.ಅಭಿನ೦ದನಗೊ ಮಹೇಶಣ್ಣ.

  9. ಅರ್ಥ ಗೊಂತಗದ್ರೂ ಭಾವನ ಭಾವ ಗೊಂತಾತು 🙂
    ಲಾಯ್ಕಿದ್ದು. ನಿಂಗಳೇ ಬರದ್ದಾ ?

    1. ಅಪ್ಪು, ಮಂಗ್ಳೂರ ಮಾಣಿಗೆ ಕೊಶಿಯಾದರೆ ನವಗುದೆ ಕೊಶಿಯೆ !
      ಮಾಣಿಗೆ ಅರ್ಥ ಅಪ್ಪಲೆ ಶಬ್ದಾರ್ಥ –
      ಅಮರಾವತಿಸಂಜಾತೆ = ಸ್ವರ್ಗಲ್ಲಿ ಹುಟ್ಟಿದೋಳು
      ರಾಗಾಮೃತಧಾರಿಣಿ = ಪ್ರೀತಿಯ ಅಮೃತವ ಹಿಡ್ಕೊಂಡವಳು
      ಕ್ಷಿತಿತಲಮಾಗತ = ಭೂಮಿಗೆ ಬಂದ
      ಸೌದಾಮಿನೀ = ಮಿಂಚು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×