Oppanna.com

ಏನು ಎಂತ ಹೇಳ್ತು? – ಒಂದು ಸುಭಾಷಿತ

ಬರದೋರು :   ಡಾಮಹೇಶಣ್ಣ    on   10/01/2014    4 ಒಪ್ಪಂಗೊ

ಏನು ಎಂತ ಹೇಳ್ತು? 

ಕೆಲವೆಲ್ಲ ಹೇಳದ್ರುದೆ ಗೊಂತಾವ್ತಡ. ಬೈಲಿಲ್ಲಿ ಕಾಣದ್ದೇ ಇದ್ದರೆ ಬೇರೆಂತದೋ ಅಂಬೆರ್ಪಿಲ್ಲಿ ಇದ್ದ ಹೇಳಿ ಗೊಂತಾವ್ತಲ್ಲದ ಹಾಂಗೆ!
ಹಾಂಗೆ ಹೇಳುವ ಒಂದು ಸುಭಾಷಿತ ಇಲ್ಲಿದ್ದು

ಆಚಾರಃ ಕುಲಮಾಖ್ಯಾತಿ

ದೇಶಮಾಖ್ಯಾತಿ ಭಾಷಣಮ್|

ಸಂಭ್ರಮಃ ಸ್ನೇಹಮಾಖ್ಯಾತಿ

ವಪುರಾಖ್ಯಾತಿ ಭೋಜನಮ್||

 ಇಲ್ಲಿ ನಾಲ್ಕು ವಾಕ್ಯಂಗ ಇದ್ದು –

೧) ಆಚಾರಃ ಕುಲಮಾಖ್ಯಾತಿ,  ೨) ಭಾಷಣಂ ದೇಶಮಾಖ್ಯಾತಿ, ೩) ಸಂಭ್ರಮಃ ಸ್ನೇಹಮಾಖ್ಯಾತಿ, ೪) ವಪುಃ ಭೋಜನಮ್ ಆಖ್ಯಾತಿ||

ಇಲ್ಲಿ ಕೆಲವು ಪದವ ವಿಂಗಡಿಸಿ ನೋಡುವೊ.

ಕುಲಮಾಖ್ಯಾತಿ = ಕುಲಮ್ + ಆಖ್ಯಾತಿ

ದೇಶಮಾಖ್ಯಾತಿ = ದೇಶಮ್ + ಆಖ್ಯಾತಿ

ಸ್ನೇಹಮಾಖ್ಯಾತಿ = ಸ್ನೇಹಮ್ + ಆಖ್ಯಾತಿ

ವಪುರಾಖ್ಯಾತಿ = ವಪುಃ + ಆಖ್ಯಾತಿ

ಇದರ ಎಲ್ಲಾ ಗೆರೆಲ್ಲಿಯುದೆ ‘ಆಖ್ಯಾತಿ’ ಹೇಳಿ ಒಂದು ಶಬ್ದ ಇದ್ದಲ್ಲದಾ! ಇದು ಕ್ರಿಯಾಪದ.
‘ಆಖ್ಯಾತಿ’ ಶಬ್ದದ ಅರ್ಥ ‘ಹೇಳ್ತು’, ‘ತಿಳಿಯಪಡಿಸುತ್ತು’ ಹೇಳಿ.
ಆಖ್ಯಾನ – ಈ ಶಬ್ದವ ಕೇಳಿ ಗೊಂತಿಕ್ಕು. ಯಕ್ಷಗಾನ ಪ್ರಸಂಗಲ್ಲಿ ‘ಲಲಿತೋಪಾಖ್ಯಾನ’, …ಇತ್ಯಾದಿ ಹೆಸರು ಕೇಳಿಪ್ಪಿ. ಆಖ್ಯಾನ ಅರ್ಥಾತ್ ‘ಹೇಳುವದು’, ‘ಕಥೆ’ ಹೇಳಿ ಅರ್ಥ.
ವ್ಯಾಖ್ಯಾನ ಹೇಳುವ ಶಬ್ದವನ್ನೂ ಕೇಳಿ ಗೊಂತಿದ್ದು ನವಗೆ. ವಿಶೇಷವಾಗಿ ಯಾವುದಾದರೂ ವಿಚಾರವ ತಿಳಿಯಪಡಿಸುವದಕ್ಕೆ ‘ವ್ಯಾಖ್ಯಾನ’ ಹೇಳಿ ಹೇಳ್ವದು.
ಈಗ ಸುಭಾಷಿತದ ಪ್ರತಿಯೊಂದು ವಾಕ್ಯವನ್ನುದೆ ನೋಡುವೊ.
ಆಚಾರಃ ಆಖ್ಯಾತಿ

ಆಚಾರಃ ಆಖ್ಯಾತಿ = ನಡವಳಿಕೆ ಹೇಳ್ತು. ಎಂತ ಹೇಳ್ತು?

ಆಚಾರಃ ಕುಲಮ್ ಆಖ್ಯಾತಿ

ಆಚಾರಃ ಕುಲಮ್ ಆಖ್ಯಾತಿ= ನಡವಳಿಕೆ ಕುಲದ ಬಗ್ಗೆ ಹೇಳ್ತು.

ಒಬ್ಬನ ನಡವಳಿಕೆಯ ನೋಡಿ ಅವನ ಕುಲ ಹೇಂಗಿಪ್ಪದು ಹೇಳಿ ಗೊಂತಾವ್ತು!

ಭಾಷಣಮ್ ಆಖ್ಯಾತಿ

ಭಾಷಣಮ್ ಆಖ್ಯಾತಿ= ಮಾತು ಹೇಳ್ತು. ಎಂತ ಹೇಳ್ತು?

ಭಾಷಣಂ ದೇಶಮ್ ಆಖ್ಯಾತಿ = ಮಾತು ನಮ್ಮ ಊರಿನ ಬಗ್ಗೆ ಹೇಳ್ತು. ಮಾತಾಡುವ ಭಾಷೆ, ಉಚ್ಚಾರಣೆ, ರೀತಿಯ ನೋಡಿ ‘ಇವ ಈ ಊರಿಂದ ಬಂದದು’ ಹೇಳಿ ಗೊಂತಾವ್ತಲ್ಲದ!

ಸಂಭ್ರಮಃ ಆಖ್ಯಾತಿ

ಸಂಭ್ರಮ ಹೇಳಿರೆ ಒಂದು ರೀತಿಯ ಕನ್ಫ್ಯೂಶನ್, ಗಡಿಬಿಡಿ. ಎಂತ ಮಾಡೆಕು? ಅದು ಮಾಡೆಕೊ, ಇದು ಮಾಡೆಕೊ ಹೇಳಿ ಅಪ್ಪದೇ ಸಂಭ್ರಮ. ಸಂಭ್ರಮ ಎಂತ ಹೇಳ್ತಡ?

ಸಂಭ್ರಮಃ ಸ್ನೇಹಮ್ ಆಖ್ಯಾತಿ

ಸಂಭ್ರಮ ಸ್ನೇಹವ, ಪ್ರೀತಿಯ ತೋರುಸುತ್ತು. ಪ್ರೀತಿಪಾತ್ರರು ಮನೆಗೆ ಬಂದಪ್ಪಗ ಸಂಭ್ರಮ ತೋರುಸುವದು ಸಹಜ. ವಿಶೇಷವಾಗಿ ಸಣ್ಣ ಮಕ್ಕಳಲ್ಲಿ, ಪ್ರಾಯ ಆದವರಲ್ಲಿ ಇದು ವ್ಯಕ್ತ ಆವ್ತು.

ವಪುಃ ಆಖ್ಯಾತಿ

ವಪುಃ ಆಖ್ಯಾತಿ = ಶರೀರ ಹೇಳ್ತು. ಎಂತ ಹೇಳ್ತಡ?

ಶರೀರ ನೋಡಿರೆ ಗೊಂತಾವ್ತಿಲ್ಲೆಯಾ? ಇವ ಸರೀ ಉಣ್ತನೋ ಇಲ್ಲೆಯೋ ಹೇಳಿ. ವ್ಯಕ್ತಿಯ ಶರೀರ ನೋಡಿ ಅವನ ಆಹಾರ ಕ್ರಮ ಹೇಂಗೆ ಹೇಳಿ ಅಂದಾಜು ಮಾಡ್ಳೆಡಿಗು. ಹಾಂಗಾಗಿ ಹೇಳ್ತವು – ‘ವಪುಃ ಭೋಜನಮ್ ಆಖ್ಯಾತಿ’  ಹೇಳಿ.

ಸರೀ ಅರ್ಥ ಆತಲ್ಲದಾ! ಈಗ ಪುನಾ ನೆಂಪು ಮಾಡಿ ಹೇಳಿ –

  • ಆಚಾರಃ ಕಿಮ್ ಆಖ್ಯಾತಿ?
  • ಭಾಷಣಂ ಕಿಮ್ ಆಖ್ಯಾತಿ?
  • ಸಂಭ್ರಮಃ ಕಿಮ್ ಆಖ್ಯಾತಿ?
  • ವಪುಃ ಕಿಮ್ ಆಖ್ಯಾತಿ?
    • ಕಃ ಕುಲಮ್ ಆಖ್ಯಾತಿ?
    • ಕಿಂ ದೇಶಮ್ ಆಖ್ಯಾತಿ?
    • ಕಃ ಸ್ನೇಹಮ್ ಆಖ್ಯಾತಿ?
    • ಕಿಂ ಭೋಜನಮ್ ಆಖ್ಯಾತಿ?

ಈಗ ಪುನಃ ಒಂದರಿ ಸುಭಾಷಿತವ ಹೇಳುವೊ.

ಆಚಾರಃ ಕುಲಮಾಖ್ಯಾತಿ ದೇಶಮಾಖ್ಯಾತಿ ಭಾಷಣಮ್|

ಸಂಭ್ರಮಃ ಸ್ನೇಹಮಾಖ್ಯಾತಿ ವಪುರಾಖ್ಯಾತಿ ಭೋಜನಮ್||

 ————

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

4 thoughts on “ಏನು ಎಂತ ಹೇಳ್ತು? – ಒಂದು ಸುಭಾಷಿತ

  1. ಒಳ್ಳೆ ಪಾಠ. ಈ ಅನುಷ್ಟುಪ್ಪಿನ ಅರ್ಥ ಬಿಡುಸಿ ಹೇಳಿಕೊಟ್ಟಪ್ಪಗ ಕಂಠ ಪಾಠ ಮಾಡ್ಲೆ ಸುಲಾಭ ಆತು .

  2. ಇಟ್ಟೊಳ್ಳೆ ಪಾಠವ ಕೇಳದ್ದೆ ಅಲ್ಪ ಸಮಯ ಆತು. ಸಮ್ಯಕ್ ಆಖ್ಯಾತಃ
    ನಾಳಂಗಂಗೆ ಒಂದು ಒಳ್ಳೆ ಶುಭಾಶಿತವ ಹುಡ್ಕ್ಯೊಂಡಿತ್ತಿದ್ದೆ. ಇದರ್ನೇ ನಕಲುಮಾಡ್ವದಿನ್ನು 😀

  3. ಕೆಲವೆಲ್ಲ ಹೇಳದ್ರು ಗೊಂತಾವುತ್ತು.ಈಗ ಹೇಳಿದ್ದದೂ ಗೊಂತಾತು.ಪಾಠ ಮಾಡಿದ್ದದು ಭಾರೀ ಲಾಯ್ಕಾಯಿದು ಮಹೇಶ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×