ಶಂಭೋ ತವಾರಾಧನಮ್
ದೇವರ ಪೂಜೆ ಮಾಡೆಕು ಹೇಳಿ ಆತು ಒಬ್ಬ ಭಕ್ತಂಗೆ.
ಭಕ್ತ ಹೆಚ್ಚು ಯೋಚನೆ ಮಾಡಿದ್ದನೇ ಇಲ್ಲೆ! ಅವ° ಓ ಶಿವನೇ! ಪೂಜೆ ಮಾಡ್ತೆ ಹೇಳಿ ಸಂಕಲ್ಪ ಮಾಡಿದ°.
ಪೂಜೆ ಮಾಡೆಕಾರೆ ದೇವರು ಬೇಕನ್ನೆ? ಎಲ್ಲಿದ್ದ° ?
ಅದಕ್ಕೆ ಹೆಚ್ಚು ಯೋಚನೆ ಮಾಡ್ಳೆಂತ ಇದ್ದು? ಅವ° ಹೇಳ್ತ° – ತಾನೇ ಇಪ್ಪಗ ಬೇರೆ ಆರಾರು ಬೇಕೊ? ಹುಡ್ಕಿಯೋಂಡು ಬೇರೆಲ್ಲಿಗಾರು ಹೋಪದೆಂತಕೆ ?!
ದೇವರ ಪೂಜಿಸೆಕಾರೆ ಹೆಚ್ಚು ಬಂಡವಾಳವೇ ಬೇಡ! ಮನಸ್ಸೊಂದಿದ್ದರೆ ಸಾಕು. ಬಾಕಿ ಎಲ್ಲ ಸಿಕ್ಕಿದಾಂಗೆ.
ಹೇಂಗದು? ಆ ಮಾನಸ ಪೂಜೆ ಹೇಂಗೆ?
ಹೀಂಗೆ —
ಆತ್ಮಾ ತ್ವಂ, ಗಿರಿಜಾ ಮತಿಃ , ಸಹಚರಾಃ ಪ್ರಾಣಾಃ, ಶರೀರಂ ಗೃಹಂ,
ಪೂಜಾ ತೇ ವಿಷಯೋಪಭೋಗರಚನಾ, ನಿದ್ರಾ ಸಮಾಧಿಸ್ಥಿತಿಃ ||
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ, ಸ್ತೋತ್ರಾಣಿ ಸರ್ವಾ ಗಿರೋ ,
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||
ಅರ್ಥ ಆಯಿದಿಲ್ಲೆಯೋ? ಇದಾ ನೋಡುವ°
ಶಂಭೋ = ಓ! ಶಂಭುವೇ!
ಆತ್ಮಾ ತ್ವಂ = ಆನೇ ನೀನು
ಶಿವ° ಹೇಳಿರೆ ಶಿವ° ಮಾಂತ್ರ ಅಲ್ಲನ್ನೆ ! ಅವ° ಕುಟುಂಬ ಸಮೇತನಾಗಿಯೇ ಅಲ್ಲದೊ ಇಪ್ಪದು? ಪಾರ್ವತಿಯೂ ಒಟ್ಟಿಂಗೆ ಬೇಕು!
ಆತ್ಮವೇ ಶಿವ° ಹೇಳಿ ಆದರೆ , ಅಂಬಗ ಪಾರ್ವತಿ ಆರು?
ಗಿರಿಜಾ ಮತಿಃ = (ಎನ್ನ) ಬುದ್ಧಿಯೇ ಗಿರಿಜೆ.
ಶಿವ° ಇಪ್ಪಗ ಅವನೊಟ್ಟಿಂಗೆ ಅವನ ಸಹಚರ-ಗಣಂಗಳೂ ಇರೆಕು, ಅವ್ವೆಲ್ಲ ಆರು?
ಸಹಚರಾಃ ಪ್ರಾಣಾಃ = ಪ್ರಾಣಂಗಳೇ ಆ ಸಹಚರಂಗ.
ಶಿವನ ಮನೆ ಯಾವುದು?
ಶರೀರಂ ಗೃಹಂ = ದೇಹವೇ ಮನೆ |
ಪೂಜೆ ಮಾಡುವದು ಹೇಳಿರೆ ಹೇಂಗೆ?
ವಿಷಯೋಪಭೋಗ ರಚನಾಃ =ವಿವಿಧ ವಿಷಯಾಸಕ್ತಿ-ಉಪಭೋಗಂಗಳೇ
ತೇ ಪೂಜಾ = ನಿನ್ನ ಪೂಜೆ ।
ನಿದ್ರಾ ಸಮಾಧಿ ಸ್ಥಿತಿಃ = ನಿದ್ರೆಯೇ ಸಮಾಧಿ ಸ್ಥಿತಿ ||
ಹಾಂಗಾರೆ ದೇವರಿಂಗೆ ಸುತ್ತು ಬಪ್ಪದು ಹೇಂಗೆ?
ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ = ಕಾಲ್ನಡಿಗೆಯೇ ನಿನ್ನ ಪ್ರದಕ್ಷಿಣೆ.
ನಿನ್ನ ಹೊಗಳುವದು ಹೇಂಗಪ್ಪ?
ಸರ್ವಾಃ ಗಿರಃ = ಎನ್ನ ಎಲ್ಲಾ ಮಾತುಗಳೇ |
ಸ್ತೋತ್ರಾಣಿ = (ನಿನ್ನ ಕುರಿತಾದ) ಸ್ತೋತ್ರಂಗ
ಇದೇ ರೀತಿಲ್ಲಿ,
ಯದ್ಯತ್ಕರ್ಮ = ಯತ್+ಯತ್+ಕರ್ಮ = ಯಾವ್ಯಾವ ಕೆಲಸ
ಕರೋಮಿ = ಮಾಡ್ತನೋ
ತತ್ತದಖಿಲಂ=ತತ್+ತತ್+ಅಖಿಲಂ = ಅದೆಲ್ಲವುದೆ
ತವಾರಾಧನಮ್=ತವ+ಆರಾಧನಮ್=ನಿನ್ನ ಆರಾಧನೆ ।
ಹೀಂಗೆ ಮನಸ್ಸಿಲ್ಲಿಯೇ ಪೂಜೆ ಮಾಡ್ತೆ ಹೇಳಿ ಗ್ರಹಿಸಿಯೊಂಡು ದೇವರ ಆರಾಧಿಸುತ್ತ.
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ ||
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||
ಭಕ್ತ ದೇವರ ಚೆಪ್ಡಿ ಮಾಡಿದ್ದದೊ? 🙂
ಇದು ಪೂಜೆ ಮಾಡ್ಲೆ ಉದಾಸನ ಆಗಿ ಹೇಳಿದ್ದಲ್ಲ ಆತೊ?
ನಾವು ಮಾಡುವದೆಲ್ಲ ಶಿವನ ಸೇವೆಯೇ ಹೇಳಿ ತಿಳ್ಕೊಂಬದು ಎಂತಕೆ?
ತಪ್ಪು ಮಾಡ್ಳೆ ಲೈಸೆನ್ಸಿಂಗೆ ಬೇಕಾಗಿ ಅಲ್ಲ. ತನ್ನಲ್ಲಿ ದೈವತ್ವದ ಭಾವನೆ ತುಂಬಿ ತಪ್ಪು ಮಾಡದ್ದಿಪ್ಪ ಹಾಂಗಪ್ಪಲೆ!
ಇನ್ನು ಚೂರ್ಣಿಕೆ ಹೇಳ್ವಗ ಅರ್ಥವೂ ಮನಸ್ಸಿಲ್ಲಿ ಇರಲಿ, ಅಕ್ಕನ್ನೆ?
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ತುಂಬಾ ಚೆಂದಕೆ ಅರ್ಥ ವಿವರಣೆ ಮಾಡಿದ್ದೆ..ಶ್ಲೋಕವ ಭಕ್ತಿಲಿ ಹೇಳಿಂಡಿದ್ದತ್ತಷ್ಟೆ ವಿನಃ ಅರ್ಥ ಗೊಂತಿದ್ದತ್ತಿಲ್ಲೆ..ಧನ್ಯವಾದಂಗೊ
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ ||
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||
ವಿವರಣೆ ಕೊಟ್ಟಪ್ಪಗ, ಶ್ಲೋಕಲ್ಲಿ ಬಪ್ಪ ಸಮರ್ಪಣಾ ಮನೋಭಾವ ಸರಿಯಾಗಿ ಅರ್ಥ ಆತು.
ಕುಮಾರ ಮಾವ ಹೇಳಿದ ಹಾಂಗೆ, ಪಿಂಕು ಕಲರಿಂದ ನೀಲಿ ಕಲರಿಂಗೆ ಬಂದಪ್ಪಗ ಸರೀ ಅರ್ಥ ಆತು. ಚೂರ್ಣಿಕೆಯ ಪೂರ್ಣ ಸ್ವಾರಸ್ಯ ಎರಡ್ಣೇ ಸರ್ತಿ ಓದಿಯಪ್ಪಗ ಸಿಕ್ಕಿತ್ತು. ನಾವು ಮಾಡ್ತ ಕಾರ್ಯಂಗೊ ಎಲ್ಲವುದೆ ದೇವರ ಪೂಜೆ ಹೇಳಿ ಗ್ರೇಶಿದ ಕವಿಯ ಕಲ್ಪನೆ ಅದ್ಭುತ. ಸುಭಾಷಿತಂಗಳ ಅರ್ಥ ವಿವರಣೆ ಕೊಡ್ತಾ ಇಪ್ಪ ಮಹೇಶಣ್ಣನ ಕಾರ್ಯ ಸ್ತುತ್ಯರ್ಹ.
ಭಾರೀ ಲಾಯ್ಕ ವಿವರಣೆ ಮಹೇಶಣ್ಣ. ನಿಜವಾಗಿ ನಿಂಗೊ ಈ ಬೈಲಿನ ದೊಡ್ಡ ಆಸ್ತಿ.ಎಷ್ಟೋ ಸರ್ತಿ ಕೇಳಿದ ಸ್ತೋತ್ರ ಆದರೂ ಇದರ ಒಳ ಅರ್ಥ ಎನಗೆ ಗೊಂತಾದ್ದು ಈಗಲೇ.
ನಮ್ಮ ಎಲ್ಲ ಕೃತಿಗೊ ದೇವರಿಂಗೆ ಅರ್ಪಣೆ ಹೇಳುದು ತಿಳಿದರೆ ಕೆಟ್ಟ ಕೆಲಸ ಮಾಡುಲಾಗ ಹೇಳುವ ಎಚ್ಚರ ಬಕ್ಕು ಅಲ್ಲದೊ?
ಚೆನ್ನೈಭಾವನ ಒಪಕ್ಕೆ ಎನ್ನದನ್ನೂ ಸೇರ್ಸುತ್ತೆ.
ಸುಭಾಷಿತಂಗಳ ಅರ್ಥ ಮನದಟ್ಟಾಯೆಕ್ಕು. ಮೇಲೆ ಕೆಂಪು ಶಾಯಿಲಿ ಬರದ್ದರ ಓದುವಾಗ ಸ್ವಾರಸ್ಯ ಗೊಂತಾಯಿದಿಲೆ. ಕೆಳ ನೀಲಿ ಶಾಯಿಲಿ ಬರದ್ದು ಓದುವಾಗಳೇ ಸ್ವಾರಸ್ಯ ಆದ್ದದು ಎನಗೆ.
ಒಂದೊಂದಾಗಿ ಅರ್ಥಸಹಿತ ವಿವರಣೆಗೊ ಬತ್ತಾ ಇರಳಿ ಹೇಳಿ ಕೋರಿಕೆ.
ಚೂರ್ಣಿಕೆಯೂ ಕಲ್ತ ಹಾ೦ಗಾತು,ಅರ್ಥವೂ ಮನದಟ್ಟಾತು.ಇನ್ನಾಣ ಜೆ೦ಬ್ರ೦ದ ಮದಲು ಕಲ್ತು ಆಯೇಕು.
(ತಪ್ಪು ಮಾಡ್ಳೆ ಲೈಸೆನ್ಸಿಂಗೆ ಬೇಕಾಗಿ ಅಲ್ಲ. ತನ್ನಲ್ಲಿ ದೈವತ್ವದ ಭಾವನೆ ತುಂಬಿ ತಪ್ಪು ಮಾಡದ್ದಿಪ್ಪ ಹಾಂಗಪ್ಪಲೆ! ) ನಿಜ.ಎಲ್ಲಾ ಅವನ ಇಷ್ಟದ ಹಾ೦ಗೆಯೇ ನೆಡವೊದು ಹೇಳಿ ತಪ್ಪು ಮಾಡುಲಾಗನ್ನೆ.ದೇವರ ಸೇವೆ ಹೇಳುವ ಅರ್ಥಲ್ಲೇ ನಮ್ಮ ಕೆಲಸ ,ಆಸಕ್ತಿ,ಮಾತುಗೊ ಇರೇಕು.
ಇನ್ನೂ ಬರಳಿ ಚೂರ್ಣಿಕೆಗೊ,ಸುಭಾಷಿತ೦ಗೊ.
ಇದೇ ಬೇಕಾದ್ದು. ಬಾಕಿ ಎಂತ ಮಾಡ್ತೋ ಇಲ್ಯೋ… ಶ್ಲೋಕಂಗಳ ಭಾವಾರ್ಥ ಅಗತ್ಯ ಆಯೇಕು. ಚೊಕ್ಕ ಆಯ್ದು ಶುದ್ದಿ.
ಅದಕ್ಕೇ …. ಹೇಳುವದು.. “ಬರ್ಲಿ ಇನ್ನೂ ಇನ್ನೂ” ಹೇಳಿ – ‘ಚೆನ್ನೈವಾಣಿ’
ಅಪ್ಪು… ಮಾನಸ ಪೂಜೆ ತುಂಬಾ ತುಂಬಾ ಉಪಯುಕ್ತವಾದ ವಿಧಾನ. ಇಂದು ಎಲ್ಲ ಅಸಲಿ,ನಕಲಿಗಳ ನಡುವೆ ಎಲ್ಲಿ ಅಸಲಿ ದೇವರು ಇದ್ದ ಹೇಳಿ ಹುಡುಕುಲೆ ತುಂಬಾ ಕಷ್ಟ ಆವುತ್ತು… ನಮ್ಮೊಳ ಇಪ್ಪ ದೇವರ ಕಂಡುಗೊಂಡರೆ ಮತ್ತೆ ಒಳುದೆಲ್ಲ ಕಡೆ ಇಪ್ಪ ದೇವರ ನೋಡುಲೆ ಸುಲಭ ಆವುತ್ತು. ನಮ್ಮೊಳ ಇಪ್ಪ ದೇವರ ಕಂಡುಗೊಮ್ಬಲೇ ಈ ‘ಮಾನಸ ಪೂಜೆ’ ಅತ್ಯುತ್ತಮ ವಿಧಾನ. ಮಹೇಶಣ್ಣನ ಲೇಖನ ಉತ್ತಮವಾಗಿ ಮೂಡಿ ಬಯಿಂದು.
ಒಪ್ಪ. 🙂