Oppanna.com

ಗುರುಪೂರ್ಣಿಮಾ

ಬರದೋರು :   ಡಾಮಹೇಶಣ್ಣ    on   29/06/2012    6 ಒಪ್ಪಂಗೊ

ಗುರುಃ

ಶ್ರೀಗುರುಭ್ಯೋ ನಮಃ

ಕಃ  ಗುರುಃ  ?

ಅಧಿಗತವಿದ್ಯಃ  ಶಿಷ್ಯಹಿತಾಯ ಉದ್ಯತಃ ಸತತಮ್ ॥

ಗುರು ಹೇಳಿರೆ ಆರು?

ಅಧಿಗತವಿದ್ಯಃ = ವಿದ್ಯೆಯ ಚೆನ್ನಾಗಿ ಅರಗಿಸಿಕೊಂಡವ

ಅಷ್ಟು ಮಾಂತ್ರ ಇದ್ದರೆ ಸಾಲಡ!  ಇನ್ನೊಂದು ಗುಣವೂ ಬೇಕಡ! (ಕೇವಲಂ ತತ್ ನ ಪರ್ಯಾಪ್ತಮ್। ಅನ್ಯಃ ಏಕಃ ಗುಣಃ ಅಪಿ ಆವಶ್ಯಕಃ )

ಅದೆಂತದು? (ಕಿಂ ತತ್?)

ಶಿಷ್ಯಹಿತಾಯ ಉದ್ಯತಃ ಸತತಮ್ = ಸತತವಾಗಿ ಶಿಷ್ಯನ ಹಿತಕ್ಕಾಗಿ ಪ್ರಯತ್ನ ಪಡುವವ

ಏತಾದೃಶಾಃ  ಗುರವಃ  ಸಂತಿ ವಾ?  ಅತ್ಯಂತಂ ವಿರಲಾಃ  ಖಲು?

ಹೀಂಗಿಪ್ಪ ಗುರುಗೊ ಇದ್ದವಾ?  ಅತ್ಯಂತ ವಿರಳ ಅಲ್ಲದ?

ಉಪರಿತನಂ  ವಾಕ್ಯಂ  ಪ್ರಶ್ನೋತ್ತರರತ್ನಮಾಲಿಕಾಯಾಂ  ದೃಶ್ಯತೇ । (ಮೇಲಾಣ ವಾಕ್ಯ  ಪ್ರಶ್ನೋತ್ತರರತ್ನಮಾಲಿಕೆಲ್ಲಿ  ಕಾಣ್ತು)

~~~~~~~~

ಅಸ್ಮಾಕಂ ಸಂಸ್ಕೃತ್ಯಾಂ  ಗುರೋಃ ಬಹು ಮಹತ್ತ್ವಮ್ ಅಸ್ತಿ। ಸತ್ಯಂ ವಾ?

ನಮ್ಮ ಸಂಸ್ಕೃತಿಲ್ಲಿ ಗುರುವಿಂಗೆ ತುಂಬ ಮಹತ್ತ್ವ ಇದ್ದು । ಅಪ್ಪೊ?

ಕೇವಲಂ ಅಸ್ಮಾಕಂ ಗುರುಃ ಏವ ನ। ಗುರೋಃ ಗುರೋಃ ಗುರೋಃ….ಗುರುಃ ಅಪಿ ಪೂಜ್ಯಃ ಏವ।

ಕೇವಲ ನಮ್ಮ ಗುರು ಮಾಂತ್ರ ಅಲ್ಲ; ಗುರುವಿನ ಗುರುವಿನ ಗುರುವಿನ….ಗುರುವೂ ಪೂಜ್ಯನೇ ।

ಅತಃ ಗುರೂಣಾಂ ಪರಂಪರಾಂ ವಯಂ ವಂದಾಮಹೇ ಇತಿ ಅಸ್ಮಾಕಂ ಸಂಪ್ರದಾಯಃ ।

ಹಾಂಗಾಗಿ ಗುರುಗಳ ಪರಂಪರೆಯನ್ನೇ ನಾವು ಗೌರವಿಸುವದು ನಮ್ಮ ಸಂಪ್ರದಾಯ.

ಗುರುಪರಂಪರಾ

ಅಸ್ಮಾಕಂ ಗುರುಪರಂಪರಾಯಾಃ ಆರಂಭಃ ಕುತ್ರ ಅಸ್ತಿ?

ನಮ್ಮ ಗುರುಗಳ ಪರಂಪರೆಯ ಆರಂಭ ಎಲ್ಲಿ?

ಶಿವಃ ಅಸ್ಮಾಕಂ ಗುರುಪರಂಪರಾಯಾಂ  ಪ್ರಥಮಃ ಇತಿ ವದಂತಿ।

ಶಿವದೇವರು ನಮ್ಮ ಗುರುಪರಂಪರೆಲ್ಲಿ  ಪ್ರಥಮ ಹೇಳಿ ಹೇಳ್ತವು.

ಗುರುಪರಂಪರಾಯಾಃ ಮಧ್ಯೇ ಕಃ ಪ್ರಮುಖಃ ಅಸ್ತಿ?

ಗುರು ಪರಂಪರೆಯ ಮಧ್ಯಲ್ಲಿ ಆರು ಪ್ರಮುಖವಾಗಿ ಇದ್ದವು?

ಸಾ ಗುರುಪರಾ ಕುತ್ರ ಪರ್ಯಂತಂ ಅಸ್ತಿ? ಅಸ್ಮಾಕಂ ಆಚಾರ್ಯಪರ್ಯಂತಂ ಅಸ್ತಿ ।

ಆ ಗುರುಪರಂಪರೆ ಎಲ್ಲಿವರೆಗೆ ಇದ್ದು? ನಮ್ಮ ಆಚಾರ್ಯರವರೆಗೆ ಇದ್ದು.

ಶ್ಲೋಕಂ ಪಶ್ಯಂತು – ಶ್ಲೋಕವ ನೋಡಿ

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್॥

ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್॥

ಅರ್ಥಃ

ಗುರುಪರಂಪರಾಂ ವಂದೇ = ಗುರುಗಳ ಪರಂಪರೆಯ ವಂದಿಸುತ್ತೆ.

ಸದಾಶಿವಸಮಾರಂಭಾಂ = ಸದಾಶಿವನಿಂದ ಮೊದಲ್ಗೊಂಡ

ಶಂಕರಾಚಾರ್ಯಮಧ್ಯಮಾಂ = ಶಂಕರಾಚಾರ್ಯರು ಮಧ್ಯಲ್ಲಿಪ್ಪಂತಹ

ಅಸ್ಮದಾಚಾರ್ಯಪರ್ಯಂತಾಂ = ನಮ್ಮ ಗುರುಗಳ ವರೆಗೆ ಇಪ್ಪ

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ ಅಸ್ಮದಾಚಾರ್ಯಪರ್ಯಂತಾಂ ಗುರುಪರಂಪರಾಂ ವಂದೇ = ಸದಾಶಿವನಿಂದ ಸುರುವಪ್ಪ ಶಂಕರಾಚಾರ್ಯರು ಮಧ್ಯಲ್ಲಿಪ್ಪ ನಮ್ಮ ಗುರುಗಳ ವರೇಗೆ ಬಪ್ಪ ಗುರುಗಳ ಪರಂಪರೆಯ ವಂದಿಸುತ್ತೆ.

ಗುರುಪೂರ್ಣಿಮಾ

ಗುರುಪೂರ್ಣಿಮಾ ಕದಾ ಅಸ್ತಿ?

(ಗುರುಪೂರ್ಣಿಮೆ ಯಾವಗ?)

ಆಷಾಢಮಾಸಸ್ಯ  ಪೂರ್ಣಿಮಾ `ಗುರುಪೂರ್ಣಿಮಾ ‘ ಇತಿ ಪ್ರಸಿದ್ಧಾ  ಅಸ್ತಿ ।

ಆಷಾಢ ತಿಂಗಳಿನ ಹುಣ್ಣಮೆ `ಗುರುಪೂರ್ಣಿಮಾ ‘ ಹೇಳಿ  ಪ್ರಸಿದ್ಧ ।

ಅಗ್ರಿಮ-ಮಂಗಲವಾಸರೇ ಗುರುಪೂರ್ಣಿಮಾ ।

ಬಪ್ಪ ಮಂಗಳವಾರದಂದು ಗುರುಪೂರ್ಣಿಮೆ.

ಗುರುಪೂರ್ಣಿಮಾಂ  ವ್ಯಾಸಪೂರ್ಣಿಮಾ ಇತಿ ಅಪಿ ವದಂತಿ ।

ಗುರುಪೂರ್ಣಿಮೆಯ ವ್ಯಾಸಪೂರ್ಣಿಮೆ ಹೇಳಿಯೂ ಹೇಳ್ತವು.

ವ್ಯಾಸಮಹರ್ಷೇಃ  ಜನನಮ್ ಆಷಾಢಪೂರ್ಣಿಮಾಯಾಂ ಅಭವತ್।

ವ್ಯಾಸಮಹರ್ಷಿಯ ಜನನ ಆಷಾಢಪೂರ್ಣಿಮೆಯಂದು ಆತು.

ವ್ಯಾಸಮಹರ್ಷಿಃ ಬ್ರಹ್ಮಸೂತ್ರಾಣಿ ರಚಿತವಾನ್।  ಶಂಕರಾಚಾರ್ಯಃ ಬ್ರಹ್ಮಸೂತ್ರಸ್ಯ ವ್ಯಾಖ್ಯಾನಂ ಕೃತವಾನ್ ।

ವ್ಯಾಸಮಹರ್ಷಿ  ಬ್ರಹ್ಮಸೂತ್ರಂಗಳ  ರಚಿಸಿದ(ವು) । ಶಂಕರಾಚಾರ್ಯ(ರು) ಬ್ರಹ್ಮಸೂತ್ರದ ವ್ಯಾಖ್ಯಾನ ಮಾಡಿದವು।

ಶಂಕರಾಚಾರ್ಯಸ್ಯ ಗುರುಃ ಕಃ ಆಸೀತ್ ? ಜಾನಾತಿ ವಾ?

ಶಂಕರಾಚಾರ್ಯರ ಗುರು ಆರು? ಗೊಂತಿದ್ದಾ?

ಗೋವಿಂದಭಗವತ್ಪಾದಃ ಶಂಕರಾಚಾರ್ಯಸ್ಯ ಗುರುಃ ।

ಗೋವಿಂದಭಗವತ್ಪಾದರು ಶಂಕರಾಚಾರ್ಯರ ಗುರುಗಳು.

——-

ಶ್ಲೋಕಃ

ಗುರುರ್ಬಂಧುರಬಂಧೂನಾಂ ಗುರುಶ್ಚಕ್ಷುರಚಕ್ಷುಷಾಂ ।

ಗುರುಃ ಪಿತಾ ಚ ಮಾತಾ ಚ ಸರ್ವೇಷಾಂ ನ್ಯಾಯವರ್ತಿನಾಮ್ ॥

ಪದವಿಭಾಗಃ

ಗುರುರ್ಬಂಧುರಬಂಧೂನಾಂ=ಗುರುಃ + ಬಂಧುಃ + ಅಬಂಧೂನಾಂ

ಗುರುಶ್ಚಕ್ಷುರಚಕ್ಷುಷಾಂ = ಗುರುಃ+ಚಕ್ಷುಃ+ಅಚಕ್ಷುಷಾಂ

ಅರ್ಥಃ

ಅಬಂಧೂನಾಂ = ಬಾಂಧವರಿಲ್ಲದ್ದವಕ್ಕೆ

ಗುರುಃ ಬಂಧುಃ = ಗುರುವು ಬಂಧು

ಅಚಕ್ಷುಷಾಂ = ಕಣ್ಣಿಲ್ಲದ್ದವಕ್ಕೆ

ಗುರುಃ+ಚಕ್ಷುಃ = ಗುರುವು ಕಣ್ಣು

ನ್ಯಾಯವರ್ತಿನಾಂ = ನ್ಯಾಯಮಾರ್ಗಲ್ಲಿಪ್ಪವಕ್ಕೆ

ಸರ್ವೇಷಾಂ=ಎಲ್ಲೋರಿಂಗುದೆ

ಗುರುಃ ಪಿತಾ ಚ ಮಾತಾ ಚ = ಗುರುವು ಅಮ್ಮನೂ ಅಪ್ಪನೂ.

ಬಂಧುಗಳಿಲ್ಲದ್ದವಕ್ಕೆ ಗುರುವೇ ಬಂಧು, ಕಣ್ಣಿಲ್ಲದ್ದವಕ್ಕೆ ಗುರುವೇ ಕಣ್ಣು, ನ್ಯಾಯಮಾರ್ಗಲ್ಲಿಪ್ಪವಕ್ಕೆ ಗುರುವು ಅಪ್ಪ-ಅಮ್ಮನ ಹಾಂಗೆ.

—-

ಶ್ಲೋಕಃ

ಗುರುರಾದಿರನಾದಿಶ್ಚ ಗುರುಃ ಪರಮದೈವತಂ ।
ಗುರೋಃ ಪರತರಂ ನಾಸ್ತಿ ತಸ್ಮೈ  ಶ್ರೀ ಗುರವೇ ನಮಃ ।।

ಪದವಿಭಾಗಃ –

ಗುರುರಾದಿರನಾದಿಶ್ಚ = ಗುರುಃ+ಆದಿಃ+ಅನಾದಿಃ+ಚ

ಗುರುಃ ಆದಿಃ = ಗುರುವೇ ಆರಂಭ

ಗುರುಃ ಅನಾದಿಃ ಚ= ಗುರುವು ಆರಂಭ ಇಲ್ಲದ್ದವನುದೆ.

ಗುರುಃ ಪರಮದೈವತಂ = ಗುರುವು ದೊಡ್ಡ ದೇವರು.

ಗುರೋಃ ಪರತರಂ ನಾಸ್ತಿ = ಗುರುವಿಂದಲೂ ಮೇಲಾಣದ್ದು  ಏನೂ ಇಲ್ಲೆ

ತಸ್ಮೈ ಶ್ರೀಗುರವೇ ನಮಃ = ಆ  ಶ್ರೀಗುರುವಿಂಗೆ ನಮಸ್ಕಾರ.

ಎಲ್ಲದಕ್ಕುದೆ ಆರಂಭ ಗುರು. ಆ ಗುರುವಿಂಗೆ ಆರಂಭ ಹೇಳಿ ಇಲ್ಲೆ; ಅವ ಅನಾದಿ. ಗುರುವಿಂದ ಮೇಲಾಣದ್ದು ಎಂತದೂ ಇಲ್ಲೆ.  ಹಾಂಗಿಪ್ಪ ಆ ಗುರುವಿಂಗೆ ನಮಸ್ಕಾರ.

—–

ಶ್ಲೋಕಃ

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ।

ಚಕ್ಷುರುನ್ಮೀಲಿತಂ ಯೇನ ತಸ್ಮೈ  ಶ್ರೀಗುರವೇ ನಮಃ ॥

ಪದವಿಭಾಗಃ

ಅಜ್ಞಾನ-ತಿಮಿರ-ಅಂಧಸ್ಯ  ಜ್ಞಾನ-ಅಂಜನ-ಶಲಾಕಯಾ

ಚಕ್ಷುಃ+ಉನ್ಮೀಲಿತಂ = ಚಕ್ಷುರುನ್ಮೀಲಿತಂ

ಅರ್ಥಃ

ತಿಮಿರಂ = ಅಂಧಕಾರಃ

ಅಂಜನಂ = ಕಣ್ಣಿಂಗೆ ಹಾಕುವ ಮದ್ದು

ಶಲಾಕಾ = ಕಡ್ಡಿ (ಕಣ್ಣಿನ ರೆಪ್ಪೆಯ ಬಿಡುಸಲೆ ಉಪಯೋಗುಸುವ ಕಡ್ಡಿ ?)

ಅಜ್ಞಾನತಿಮಿರಾಂಧಸ್ಯ = ಅಜ್ಞಾನ ಹೇಳುವ ಕತ್ತಲೆಂದ ಕುರುಡಾದವನ

ಚಕ್ಷುಃ = ಕಣ್ಣು

ಜ್ಞಾನಾಂಜನಶಲಾಕಯಾ = ಜ್ಞಾನವೆಂಬ ಮದ್ದಿನ ಕಡ್ಡಿಯ ಉಪಯೋಗಿಸಿ

ಯೇನ ಉನ್ಮೀಲಿತಂ = ಆರಿಂದ ತೆರೆಯಲ್ಪಟ್ಟಿದೋ

ತಸ್ಮೈ ಶ್ರೀಗುರವೇ = ಆ ಶ್ರೀಗುರುವಿಂಗೆ

ನಮಃ = ನಮಸ್ಕಾರ.

ಅಜ್ಞಾನದ ಕತ್ತಲೆಲ್ಲಿ ಕುರುಡಾದವನ ಕಣ್ಣಿನ ಜ್ಞಾನವೆಂಬ ಮದ್ದಿನ ಕಡ್ಡಿಯ ಉಪಯೋಗಿಸಿ ಯಾರು ತೆರೆಸಿದವೋ ಆ ಗುರುವಿಂಗೆ ನಮಸ್ಕಾರ.

——

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

6 thoughts on “ಗುರುಪೂರ್ಣಿಮಾ

  1. ಸರ್ವೇಷಾಂ ಗುರುಪೂರ್ಣಿಮಾಯಾ: ಶುಭಾಶಯಾ:| ಗುರುಪೂರ್ಣಿಮಾಯಾ: ಅವಸರೆ ಏತತ್ ದೃಷ್ಟ್ವಾ ಅತೀವ ಸಂತೋಷಂ ಭವತಿ|ಗುರೋರ್ಮಹಿಮಾ ಅವರ್ಣನೀಯಂ| ಧನ್ಯವಾದಾ:| ಗುರುಚರಣಯೋ: ಅನಂತ ಪ್ರಣಾಮಾನಿ|

  2. ಗುರುಪರ೦ಪರೆ,ಗುರುಗಳ ಹಿರಿಮೆ ಸಾರುವ ಚೆ೦ದದ ಶ್ಲೋಕ೦ಗೊ.

  3. ಗುರುವಿನ ಮಹತ್ವದ ಜೊತೆಗೆ ಗುರುವಿಂಗೆ ಇರೆಕ್ಕಾದ ಅರ್ಹತೆ ಹಾಗೂ ಜವಾಬ್ದಾರಿಯ ಸರಳ ಸಂಸ್ಕ್ರತ ಶ್ಲೂಕಗಳಲ್ಲಿ ವಿವರಿಸಿದಕ್ಕೆ ಧನ್ಯವಾದಂಗೊ.ಗುರುವಿಂಗೆ ಇಷ್ತು ಗುರುತರವಾದ ಜವಾಬ್ದಾರಿ ಇದ್ದು ಹೇಳಿ ಗೊಂತೆ ಇತ್ತಿಲ್ಲೆ.

  4. ಶ್ರೀ ಗುರುಭ್ಯೋ ನಮಃ. ಧನ್ಯವಾದಂಗೊ ಮಹೇಶಣ್ಣ.

  5. ಶ್ರೀ ಗುರುಭ್ಯೋ ನಮಃ ।

    ಗುರುಪೂರ್ಣಿಮಾ ಶುಭಾಶಯಾಃ ।

    ಗುರುಪೂರ್ಣಿಮಾಯಾಃ ಶುಭಾವಸರೇ, ಗುರುಪರಂಪರಾಯಾಃ ತಥಾ ಗುರುಪೂರ್ಣಿಮಾಯಾಃ ವಿಷಯೇ ಭವತಾ ಕಿಂಚಿತ್ ಉಕ್ತಂ ನಿಶ್ಚಯೇನ ಸುಬೋಧಾಃ ವಿಷಯಾಃ । ಧನ್ಯವಾದಾಃ ॥

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×