Oppanna.com

ಇಂದು ಯುಗಾದಿ – ಪಂಚಾಂಗ ಸುರುವಪ್ಪ ದಿನ

ಬರದೋರು :   ಡಾಮಹೇಶಣ್ಣ    on   11/04/2013    5 ಒಪ್ಪಂಗೊ

ಇಂದು ಚಾಂದ್ರಮಾನ ಸಂವತ್ಸರದ ಆರಂಭ. ಯುಗಾದಿ ಹೇಳಿ ಪ್ರಸಿದ್ಧವಾದ ದಿನ.

ಕಲಿಯುಗಲ್ಲಿ 5114 ವರ್ಷ ಕಳುದು 5115ನೇ ವರ್ಷ ಸುರುವಾತು.

ಶಾಲಿವಾಹನ ಶಕಲ್ಲಿ  – 1935 ವರ್ಷ ಕಳಾತು. 1936 ನೇದು ಈಗ.

`ವಿಜಯ’ ಸಂವತ್ಸರ ಹೇಳಿ ಈ ಸಂವತ್ಸರದ ಹೆಸರು.

ಈ ವರ್ಷಲ್ಲಿ ಚೈತ್ರಮಾಸ ಸುರುವಾತು. ಶುಕ್ಲಪಕ್ಷದ ಪ್ರತಿಪತ್ (ಪಾಡ್ಯ) ತಿಥಿ ಇಂದು. ವಸಂತ ಋತುವಿನ ಆರಂಭ.

ಹೊಸ ವೈಜಯಂತೀ ಪಂಚಾಂಗ ಇಂದಿಂದ ಲಾಗೂ ಅಪ್ಪದು. ವೈಜಯಂತೀ ಪಂಚಾಂಗಕ್ಕೆ ೯೭ ವರ್ಷ ಆತಡ.

078

ಹೊಸವರ್ಷದ ಆಚರಣೆ ಹೇಂಗೆ ಹೇಳಿ ಹೇಳಿದ್ದವು ಪಂಚಾಂಗಲ್ಲಿ.

ಮನೆಯ ಅಲಂಕರಿಸೆಕು, ಹೊಸವಸ್ತ್ರವ ಧರಿಸೆಕು. ವಾದ್ಯ-ಸಂಗೀತಂಗಳ ಕೇಳೆಕು, ಸಂತೋಷಲ್ಲಿ ಇರೆಕು… ಹೇಳಿ.

ಹಾಂಗೆಯೇ ಆರೋಗ್ಯಕ್ಕಾಗಿ  –

ಪಾರಿಭದ್ರಸ್ಯ ಪತ್ರಾಣಿ ಕೋಮಲಾನಿ ವಿಶೇಷತಃ

ಸುಪುಷ್ಪಾಣಿ ಸಮಾನೀಯ ಚೂರ್ಣಂ ಕೃತ್ವಾ ವಿಧಾನತಃ।

ಮರೀಚಿಹಿಂಗುಲವಣಜೀರಕೇಣ ಚ ಸಂಯುತಂ

ಅಜಮೋದಾಯುತಂ ಕೃತ್ವಾ ಭಕ್ಷಯೇತ್ ರೋಗಶಾಂತಯೇ॥

“ಕಹಿಬೇವಿನ ಚಿಗುರು ಎಲೆಗಳ ಹೂವಿನ ಸಹಿತ ತಂದು ಕ್ರಮಲ್ಲಿ ಹೊಡಿ ಮಾಡಿ ಗೆಣಮೆಣಸು, ಇಂಗು, ಉಪ್ಪು, ಜೀರಕ್ಕಿ ಮತ್ತು ಅಜಮೋದ (ಓಮ) ವ ಸೇರುಸಿ ತಿನ್ನೆಕು – ಆರೋಗ್ಯಕ್ಕೆ ಬೇಕಾಗಿ ”

ಬೇವು+ಬೆಲ್ಲ+ಇಂಗು+ಜೀರಿಗೆ+ಉಪ್ಪು+ಗೆಣಮೆಣಸು+ಓಮ ದ ಪಾಕ
ಬೇವು+ಬೆಲ್ಲ+ಇಂಗು+ಜೀರಿಗೆ+ಉಪ್ಪು+ಗೆಣಮೆಣಸು+ಓಮ

ಈ ದಿನ ಪಂಚಾಂಗ ಓದೆಕು ಹೇಳಿ ಕ್ರಮ ಅಡ. ಪಂಚಾಂಗ ಶ್ರವಣ ಮಾಡೆಕಡ.

ಇಂದು – ವಿಜಯಸಂವತ್ಸರದ ಉತ್ತರಾಯಣವಸಂತಋತುವಿನ ಚೈತ್ರ ಮಾಸದ ಶುಕ್ಲಪಕ್ಷಲ್ಲಿ ಸುರುವಾಣ (ಪ್ರತಿಪತ್) ದಿನ.

ಇಂದ್ರಾಣ ಪಂಚಾಂಗ –

ತಿಥಿ – ಪ್ರತಿಪತ್

ವಾರ – ಗುರುವಾರ

ನಕ್ಷತ್ರ – ಅಶ್ವಿನೀ

ಯೋಗ – ವಿಷ್ಕಂಭ

ಕರಣ – ಬವ

ಈ ವರ್ಷದ ಮಂತ್ರಿಮಂಡಲ ಹೇಂಗಿಪ್ಪದು ಹೇಳಿಯೂ ಹೇಳ್ತವು. ಹೀಂಗಿದ್ದಡ –

ರಾಜ – ಗುರು

ಮಂತ್ರೀ – ಶನಿ

ಸೇನಾಧಿಪತಿ – ಶುಕ್ರ

ಧಾನ್ಯಾಧಿಪತಿ – ಸೂರ್ಯ

ಮೇಘಾಧಿಪತಿ – ಶುಕ್ರ

ಇವರ ಆಡಳಿತ ಹೇಂಗಿರ್ತು, ದೇಶದ ಪರಿಸ್ಥಿತಿ ಎಂತಕ್ಕು, ಈ ವರ್ಷ ಎಂತಾವ್ತು ಹೇಳಿ ಹೆಚ್ಚಿನ ವಿವರಣೆಯ ನಮ್ಮ ಪಂಚಾಂಗಲ್ಲಿ ಕೊಟ್ಟಿದವು. ಓದಿ.

ಎಲ್ಲೋರಿಂಗುದೆ ಶುಭಾಶಯಂಗ.

ಸರ್ವೇ ಭವಂತು ಸುಖಿನಃ

ಸರ್ವೇ ಸಂತು ನಿರಾಮಯಾಃ।

ಸರ್ವೇ ಭದ್ರಾಣಿ ಪಶ್ಯಂತು

ಮಾ ಕಶ್ಚಿತ್ ದುಃಖಭಾಗ್ ಭವೇತ್॥

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

5 thoughts on “ಇಂದು ಯುಗಾದಿ – ಪಂಚಾಂಗ ಸುರುವಪ್ಪ ದಿನ

  1. ಎಲ್ಲೋರಿಂಗೂ ‘ಯುಗಾದಿ’ಯ ಹಾರ್ದಿಕ ಶುಭಾಶಯಂಗೋ.

  2. ಯುಗಾದಿ ಹೊಸ ಹರುಷವ ತರಳಿ.ಸನ್ಮನಸ್ಸುಗೊಕ್ಕೆ ವಿಜಯ ಸಿಕ್ಕಲಿ.
    ಶುಭಾಶಯ೦ಗೊ.

    1. ಚ೦ದ್ರಮಾನ ಯುಗಾದಿಯ ಈ ಶುಭಗಳಿಗೆಲಿ ಎಲ್ಲರಿ೦ಲೂ ಶುಭಾಶಯ೦ಗ.ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×