Oppanna.com

ಕಮಲಭವನ ಪ್ರಿಯ ರಾಣಿ

ಬರದೋರು :   ದೀಪಿಕಾ    on   20/10/2012    17 ಒಪ್ಪಂಗೊ

ದೀಪಿಕಾ

ಊರ್ಲಿ ನವರಾತ್ರಿ ಉತ್ಸವ ಗೌಜಿಲಿ ನಡೆತ್ತಾಂಗೆ ನಮ್ಮ ಬೈಲಿಲ್ಲಿಯೂ ಎಡಿಗಾಷ್ಟು ಮಟ್ಟಿಂಗೆ ನಮ್ಮ ಶ್ರೀ ಅಕ್ಕನ ನೇತೃತ್ವಲ್ಲಿ ನಡೆತ್ತಾ ಇಪ್ಪದು ನಿಂಗೊಗೆಲ್ಲ ಗೊಂತಿಪ್ಪದೆ.
ಇಂದ್ರಾಣ ಶುದ್ದಿಗೆ ನಮ್ಮ ದೀಪಿಕಾ ಅಕ್ಕ°  ‘ಕಮಲಭವನ ರಾಣಿ’ ಹಾಡಿನ ಶುಶ್ರಾವ್ಯವಾಗಿ ಹಾಡಿದ್ದು ಇಲ್ಲಿದ್ದು.
ಬನ್ನಿ., ಕೇಳಿ ಪ್ರೋತ್ಸಾಹಿಸುವ°.

– ಗುರಿಕ್ಕಾರ°

ಕಮಲಭವನ ಪ್ರಿಯ ರಾಣಿ  

ಕಮಲಭವನ ಪ್ರಿಯ ರಾಣಿ
ವಿಮಲ ಮತಿಯೆ ನೀ ಕರುಣಿಸು ಜಾಣಿ ||
 
ಅ೦ತರ೦ಗದ ತ೦ತಿಯ ಮಿಡಿಸೌ
ನಿ೦ತು ಜಿಹ್ವೆಯಿ೦ ಹರಿಗುಣ ನುಡಿಸೌ
ಕ೦ತು ಜನಕನಿ೦ದ ಯವನ ಕಾಣಿಸೌ
ಸ೦ತತ ಶಾರದೆ ವೀಣಾ ಪಾಣಿ ||
 
ವಿವಿದ ಭಾಷೆಗಳ ಒಡತಿಯಾಗಿ ನೀ
ವಿವಿದ ಬಣ್ಣಗಳ ಕ೦ಗಳು ಹೊಳೆಯಲು
ಪವಡಿಸಿ ಗರಿಗಳ ಪಸರಿಸಿ ಕುಣಿಯಲು
ನವಿಲನೇರುವಾ ಪನ್ನಘವೇಣಿ ||
 
ಪ್ರೇರಿಸರ್ಥಗರ್ಭದ ನುಡಿಗಳನು
ತೋರಿಸಿ ಪದ್ಯದ ರಚಿತ ರೀತಿಯನು
ಚಾರು ಚರಣಗಳಿಗೆರಗುವೆ ಗದುಗಿನ
ವೀರ ನಾರಾಯಣನ ಸೊಸೆಯೆ ಸುವಾಣಿ ||
ನಮ್ಮ ದೀಪಿ ಅಕ್ಕ ಹಾಡಿದ್ದರ ಕೇಳ್ಳೆ –

Kamalabhavana Priya Rani – by Deepika Bhat 

17 thoughts on “ಕಮಲಭವನ ಪ್ರಿಯ ರಾಣಿ

  1. ಒಪ್ಪ ಕೊಡ್ಳೆ ರಜಾ ತಡವಾತು. ಕ್ಷಮಿಸಿ. ದೀಪಿಕನ ಹಾಡು ಈಗ ಕೇಳಿದೆ ಅಷ್ಟೆ. ಕಮಲಭವನ ಪ್ರಿಯ ರಾಣಿ ಹಾಡು ಅದರ ಮಧುರ ಕಂಠಲ್ಲಿ ಚೆಂದಕೆ ಮೂಡಿ ಬಯಿಂದು, ಸೊಗಸಾಯಿದು. ಅಂಬಗಂಬಗ ದೀಪಿಕನ ಹಾಡುಗೊ ಬೈಲಿಂಗೆ ಬತ್ತಾ ಇರಳಿ.

  2. ಈ ಪದ್ಯವ ದೀಪಿಅಕ್ಕನ ಮಧುರ ಕ೦ಠದಲ್ಲಿ ಕೇಳುವಾ ಅ೦ದ್ರೆ, ಆ ಕೊ೦ಡಿ ತಪ್ಪೋದು ಅ೦ತ ಕಾಣ್ತು.
    ಬಹುಶಃ upload ಆಯ್ದಿಲ್ಲೆಯೊ?

  3. ನವರಾತ್ರಿಯ ಹಬ್ಬದ ಸಮಯಲ್ಲಿ ದಿನಕ್ಕೊಂದು ಸಂಗ್ರಹಯೋಗ್ಯ ಕೃತಿಗಳ ಕೊಡ್ತಾ ಇಪ್ಪದಕ್ಕೆ ಧನ್ಯವಾದಂಗೊ.
    ದೀಪಿಕಾ ಸ್ವರಲ್ಲಿ ಕೇಳಲೆ ಕೊಶೀ ಆವ್ತು.

  4. ನವರಾತ್ರಿಯ ಗೌಜಿಗೆ ದೀಪಿ ಅಕ್ಕನ ಪದ್ಯ ಲಾಯ್ಕ ಆಯಿದು..ಹಾಡಿದ್ದು ಸೂಪರ್…

  5. ಬೈಲಿಲಿಯೂ ನವರಾತ್ರಿ ಸ೦ಭ್ರಮ.ದೀಪಿಕನ ಹಾಡು ಸುಮಧುರ,ಭಕ್ತಿಪೂರ್ಣ.ಕೃತಿ ರಚನೆ ಆರದ್ದು?

    1. ಧನ್ಯವಾದ ರಘುಮಾವ..ಇದು ಹುಯಿಲಗೊಳ ನಾರಾಯಣ ರಾವ್ ಅವರ ರಚನೆ.(ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪದ್ಯ ಬರದೊರು)

  6. ಇಡೀ ಕೇಳುಲೆ ಎಡಿಗಾಯ್ದಿಲ್ಲೆ. internet ಸಮಸ್ಯೆ ಇದ್ದು ಎಂಗಳಲ್ಲಿ. ತುಂಬಾ ಲಾಯ್ಕಾಯ್ದು ದೀಪಿಕಾ 🙂

  7. ಬೈಲಿನ ಒಪ್ಪಕ್ಕ ಒಪ್ಪಕೆ ಹಾಡಿದ್ದರ ಕೇಳಿ ಖುಷಿ ಆತು.

  8. ತುಂಬ ಖುಷಿಯಾವ್ತು ಕೇಳ್ಳೆ. ಆಹ್ಲಾದಕರ ಸ್ವರ ದೀಪಿಕಕ್ಕಂದು.

    ತುಂಬ ಒಳ್ಳೆ ಪದ್ಯ.

    “ಜಾಣಿ” ಈ ಶಬ್ದದ ಅರ್ಥ ಎಂತದು?
    “ಯವನ” ಇದುದೆ ಗೊಂತಾಯಿದಿಲ್ಲೆ.

    {ಪನ್ನಘವೇಣಿ} ಇದು ಪನ್ನಗವೇಣಿ ಹೇಳಿ ಆಯೆಕು.
    “ಗರಿಗಳ” ಹೇಳಿ ಇಪ್ಪದು ಹಾಡುವಗ ಗರಿಗಳು ಹೇಳಿ ಆಯಿದು ಅಲ್ಲದ?

    ಮಿಡಿಸೌ, ನುಡಿಸೌ, ಕಾಣಿಸೌ — ಇದು “ಮಿಡಿಸು, ನುಡಿಸು, ಕಾಣಿಸು” ಹೇಳಿ ಆಯೆಕೋ?

    1. ಧನ್ಯವಾದ ಮಾವ..
      ಜಾಣಿ ಹೇಳಿರೆ ಎಲ್ಲವನ್ನೂ ತಿಳಿದವಳು ಹೇಳಿ ಅರ್ಥ ಅಡ್ಡ.
      ಯವನ ಹೇಳಿರೆ ಯಮ ಹೇಳಿ ಅರ್ಥ ಬತ್ತಡ್ಡ..
      ಇದು ಹುಯಿಲಗೊಳ ನಾರಾಯಣ ರಾವ್ ಅವು ಹಳೆಗನ್ನಡಲ್ಲಿ ಮಾಡಿದ ರಚನೆ
      ಪನ್ನಘವೇಣಿ-ಅಪ್ಪು ಇದು ತಪ್ಪಿದ್ದು
      ಗರಿಗಳ-ಇದು ಬರವಗ ತಪ್ಪಿದ್ದು..ಅದು ನಿಜವಾಗಿ “ಗರಿಗಳು” ಆಯಕಾದ್ದು
      ಮಿಡಿಸೌ, ನುಡಿಸೌ, ಕಾಣಿಸೌ ಇದು ಹೀ೦ಗೇ ಆಯಕಾದ್ದಡ್ಡ..ಮಿಡಿಸು, ನುಡಿಸು, ಕಾಣಿಸು ಅಲ್ಲ.

      1. ಹಾಡಿದ್ದು ಲಾಯ್ಕ ಆಯಿದು.
        ಯವ[ಜವ] ಹೇಳಿರೆ ಯಮ ಹೇಳಿ ಉಪಯೋಗಿಸಿದ್ದು ಆದರೆ,ವಿಷ್ಣುವಿನ ಕೈಲಿ ಎನ್ನ ಮರಣ ಆಗಲಿ ಹೇಳಿ ಕೋರುದೊ? ಬಹಳ ಕುತೂಹಲಕಾರಿ.
        ಮಿಡಿಸೌ,ನುಡಿಸೌ,ಕಾಣಿಸೌ -ಇದು ಸರಿಯಾದ ರೂಪಂಗಳೆ ಸರಿ,ಅನುಮಾನ ಇಲ್ಲೆ. ಹಳೆ ಮೈಸೂರಿಲಿ-ಕಾಯೌ ಶ್ರೀಗೌರಿ ಕರುಣಾಲಹರೀ-ಹೇಳುವ ಪ್ರಾರ್ಥನೆ ಇತ್ತು.ಹಳೆ ಕನ್ನಡಲ್ಲಿ ಈ ರೂಪ ಇದ್ದು.
        ತುಂಬಾ ಲಾಯ್ಕ ಪದ್ಯ ಕೊಟ್ಟದಕ್ಕೆ ಧನ್ಯವಾದ.

  9. ಬೈಲಿಲಿ ನವರಾತ್ರಿ ಮಹೋತ್ಸವಕ್ಕೆ ದೀಪಿಕ್ಕ ಹಾಡಿದ್ದು ಒಳ್ಳೆ ಲಾಯಕ ಆಯ್ದು ಅಕ್ಕೋ. ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×