- ಶೃ೦ಗಪುರಾಧೀಶ್ವರೀ ಶಾರದೆ - October 22, 2012
- ಕಮಲಭವನ ಪ್ರಿಯ ರಾಣಿ - October 20, 2012
- ಕಲ್ಯಾಣಿ ಗೀರ್ವಾಣಿ ವೀಣಾಪಾಣಿ - October 16, 2012
ಶರವನ್ನವರಾತ್ರಿ ಊರ್ಲಿ ಭರ್ಜರಿಯಾಗಿ ನಡೆತ್ತಾ ಇದ್ದು. ದಸರಾ ಗೌಜಿ ಮತ್ತೊಂದು ಹೊಡೆಲಿ ನಡೆತ್ತಾ ಇದ್ದು. ಉಡುಪುಮೂಲೆ ಅಪ್ಪಚ್ಚಿ, ಬೆಟ್ಟುಕಜೆ ಮಾಣಿ, ದೀಪಿಕ್ಕ ಬೈಲಿಲಿ ನಮ್ಮೊಟ್ಟಿಗೆ ನಡೆಶುತ್ತಾ ಇದ್ದವು.
ಇಂದ್ರಾಣ ಶುದ್ದಿಗೆ ವಿದ್ಯಾಬುದ್ಧಿಪ್ರದಾಯಿನಿ ‘ಶಾರದೆ’ ಕುರಿತು ಒಂದು ಕೀರ್ತನೆ ನಮ್ಮ ದೀಪಿಕಾ ಅಕ್ಕನ ದ್ವನಿಲಿ. ಕೇಳಿ ಹೇಂಗಾಯ್ದು ತಿಳಿಶಿಕ್ಕಿ ಆಗದ? ಎಲ್ಲೋರಿಂಗೂ ಶಾರದಾಮಾತೆ ಕೃಪೆದೋರ್ಲಿ.
– ಗುರಿಕ್ಕಾರ.
ShrungapurAdhIshwari – By Deepika Bhat
ಶೃ೦ಗಪುರಾಧೀಶ್ವರೀ ಶಾರದೆ
ಶೃ೦ಗಪುರಾಧೀಶ್ವರೀ ಶಾರದೆ
ಶುಭ ಮ೦ಗಳೆ ಸರ್ವಾಭೀಷ್ಠ ಪ್ರದೇ ॥
ಶ೦ಕರ ಸನ್ನುತೆ ಶ್ರೀಪದ್ಮ ಚರಣೆ
ಸಕಲ ಕಲಾ ವಿಶಾರದೆ ವರದೆ
ಸಲಹೆಮ್ಮ ತಾಯೇ ಸಾಮಗಾನ ಪ್ರಿಯೇ ॥
ಕರುಣಿಸೆಮ್ಮ ಶೃತಿ ಗತಿಗಳ ಮಾತೆ
ಕಮನೀಯ ಸಪ್ತಸ್ವರ ಸುಪೂಜಿತೆ
ಕಾವ್ಯ ಗಾನ ಕಲಾಸ್ವರೂಪಿಣಿ
ಕಾಮಿತ ದಾಯಿನಿ ಕಲ್ಯಾಣಿ ಜನನಿ ॥
ಸುಮಧುರ ಸ್ವರಲ್ಲಿ ದೀಪಿಕಾ ಹಾಡಿದ ಶಾರದೆಯ ಹಾಡು ಕೇಳಿ ತುಂಬಾ ಕೊಶಿ ಆತು. ಬಹಳ ಚೆಂದಕೆ ಹಾಡಿದ್ದು, ಲಾಯಕಾಯಿದು.
ಎಲ್ಲೋರಿ೦ಗು ಧನ್ಯವಾದ. ಮುಖ್ಯವಾಗಿ ಈ ಶುದ್ದಿಗಳ ಬೈಲಿಲಿ ಹಾಕುಲೆ ಪ್ರೋತ್ಸಾಹಿಸುತ್ತಾ ಇಪ್ಪ ಶ್ರೀ ಅಕ್ಕ೦ಗೆ ವಿಶೇಷ ಧನ್ಯವಾದ.
ಶಾರದಾ ಶಾರದಾಂಭೋಜ ವದನಾ ವದನಾಂಬುಜೇ ಸರ್ವದಾ ಸರ್ವದಾಸ್ಮಾಕಂ ಸನ್ನಿಧಿಂ ಸನ್ನಿಧಿಂ ಕುರು…ಪದ್ಯ ಲಾಯ್ಕ ಆಯ್ದು..
ಹಾಡಿದ್ದು ಲಾಯಕಾಯಿದು. ಈ ಹಾಡಿನ ಬರದವಾರು? ರಚನೆಯೂ ಲಾಯಕಿದ್ದು. ಶುಭಾಶಯ೦ಗೊ ಹಾ೦ಗು ಧನ್ಯವಾದ೦ಗೊ.
ದೀಪಿಕಾ, ಅಭೀಷ್ಟ ಹೇಳುವ ಶಬ್ದ ಮಹಾಪ್ರಾಣ ಅಲ್ಲನ್ನೆ. ಇದು ಕೇವಲ ಸೂಚನೆ.ತಪ್ಪು ಭಾವಿಸೆಡಾ.ನಿನ್ನ ಶ್ರುತಿ ಜ್ಞಾನ ಹಾ೦ಗು ಕ೦ಠಶ್ರೀ ಲಾಯೆಕಿದ್ದು. ಹಾಡುಗಾರಿಕೆಲಿ ಒಳ್ಳೆ ಭವಿಷ್ಯ ಇದ್ದು. ನಿನಗೆ ಶುಭವಾಗಲಿ ಹೇಳಿ ವಾಗ್ದೇವತೆ ಪಾದಲ್ಲಿ ಬೇಡ್ಯೋಳ್ತೆ. ನಮಸ್ತೇ…
ನಿ೦ಗೊಳ ಆಶೀರ್ವಾದ ನೋಡಿ ತು೦ಬಾ ಖುಶಿ ಆತು..
{ತಪ್ಪು ಭಾವಿಸೆಡಾ}- ತಪ್ಪು ಭಾವಿಸುಲೆ ಎ೦ತದೂ ಇಲ್ಲೆ ಅಪ್ಪಚ್ಚಿ. ಎಷ್ಟೋ ಸರ್ತಿ ತಪ್ಪಾವ್ತು.ನಿ೦ಗೊ ಎಲ್ಲ ತಿದ್ದಿದರೆ ಮತ್ತಾಣ ಸರ್ತಿಗೆ ಅದರ ಸರಿ ಮಾಡಿಗೊ೦ಬಲಾವ್ತು.
ಮತ್ತೆ ಇದರ ರಚನೆ ಮಾಡಿದ್ದು ಆರು ಹೇಳಿ ಗೊ೦ತಿಲ್ಲೆ..ಆನು ಪ್ರೈಮರಿ ಲಿ ಇಪ್ಪಗ ಎನ್ನ ಸ೦ಗೀತ ಮಾಷ್ಟ್ರು ಕಲಿಸಿದ್ದು..ಹಾ೦ಗಾಗಿ ಗೊ೦ತಿಲ್ಲೆ..ತಿಳಿವಲೆ ನೋಡ್ತೆ.ಗೊ೦ತಾರೆ ತಿಳಿಶುತ್ತೆ.
ಹಾಡಿದ್ದು ಲಾಯಕ ಆಯ್ದಕ್ಕೊ. ಶಾರದೆ ಎಲ್ಲೋರಿಂಗೂ ಸನ್ಮತಿಯನೀಡಲಿ ಹೇಳಿ ಬೈಲಿಲ್ಲಿಯೂ ಪ್ರಾರ್ಥಿಸಿಗೊಂಬೊ.