- ಪರಶಿವ ಪ್ರಸಂಗ - February 21, 2012
- ನಾಕು ನಾಕು ಸಾಲು - February 14, 2012
- ಒಂದು ಕೋಳಿಯ ಕಥೆ.. - March 8, 2011
ರಾಮದೇವರು ಲಂಕಗೆ ಸೇತುವೆ ಕಟ್ಟಲೆ ಹೆರಟ°. ಕಿಷ್ಕಿಂಧೆಯ ಮಂಗಂಗೊ ಎಲ್ಲ ಅವನ ಸಕಾಯಕ್ಕೆ ಬಂದವು.
ಸಮುದ್ರಕ್ಕೆ ಸೇತುವೆ ಕಟ್ಟಲೆ ಎಲ್ಲಾ ಕಡೆಂದಲೂ ಬಂಡೆ ಕಲ್ಲು ಮಣ್ಣು ತಂದು ತಂದು ಹಾಕಿದವು.
ಕುಂಞಿ ಮಂಗಂಗೊ ಅವಕ್ಕೆ ಎಡಿಗಾದಷ್ಟು ತಂದು ಹಾಕಿದವು. ಹಾಕಿಕ್ಕಿ ನೀರಿಲ್ಲಿ ಕೈಕಾಲು ಅದ್ದಿ ಚಳಪಳ ಮಾಡಿಕ್ಕಿ ತಿರುಗಿ ಹೋಗಿ ತಂದು ಹಾಕಿಯೋಂಡಿತ್ತಿದ್ದವು.
ಯೆಜಮಾನ ಮಂಗಂಗೊ ಆಟ ಆಡಿಂಡು ಕೂರುಸ್ಸಕ್ಕೆ ಜೋರು ಮಾಡುವಗ ಎಂಗೊ ಒಂದು ಸರ್ತಿ ಕಲ್ಲು ಮಣ್ಣು ತಂದು ಹಾಕಿಕ್ಕಿ ರೆಜಾ ನೀರಾಟ ಆಡಿರೆ ಮತ್ತೆ ಮದಲಿಂದಲೂ ಎರಟಿ ಉತ್ಸಾಹ ಬತ್ತು ಅಂಬಗ ಎರಟಿ ಕೆಲಸ ಆವ್ತು ಹೇದು ಸಮಜಾಯಿಷಿ ಕೊಟ್ಟವು.
ಸುಗ್ರೀವಾದಿಗೊಕ್ಕೂ ಅದು ಸರಿ ಕಂಡತ್ತು.
ಇವರ ಉತ್ಸಾಹವೂ ಕೆಲಸವೂ ಶಕ್ತಿಯೂ ಕಂಡು ರಾಮದೇವರಿಂಗೆ ಕೊಶಿ ಆತು.
ಅವಕ್ಕೆ ಉಪಕಾರ ಆವ್ತ ಹಾಂಗೆ ಎಂತಾರೂ ಒಂದು ವರ ಕೊಡೇಕು ಹೇದು ತೋರಿ, ಅವು ಕೇಟದಲ್ಲ ಇವ° ಆಗಿ ಕೊಟ್ಟದು.
ನಿಂಗೊ ಹಿಡುದ್ಸೆಲ್ಲಾ ಕಬ್ಬಿಣ ಆಗಲಿ, ಕಚ್ಚಿದ್ಸೆಲ್ಲ ಕಬ್ಬಾಗಲಿ ಹೇದು ವರ ಕೊಟ್ಟ°.
ಕುಜುವೆಯದ್ದೊ ಬಪ್ಪಂಗಾಯಿದೊ ಮೇಣ ಸಾನು ಅವಕ್ಕೆ ಮೆಚ್ಚುತ್ತು.
ಅವು ರಾಮದೇವರ ಭಕ್ತಂಗೊ. ಬೇಟೆಗಾರಂಗೊ ಬೇಟೆಲಿ ಗುಂಡು ಹೊಡದರೆ ಮರಂದ ಬೀಳುವಾಗಲೂ ಅವು ಕೈಮುಗುಕ್ಕೊಂಡೇ ಇರ್ತವು.
ಅವಕ್ಕೆ ಪೂಜೆ ಮಾಡ್ತವು.
ಎಲ್ಲಾ ಮಂಗಂಗಳ ಪ್ರತಿನಿಧಿಸುತ್ತ ಹನುಮಂತಂಗೆ ಗುಡಿ ಕಟ್ಟಿ ಪೂಜೆ ಮಾಡುತ್ತವು.
ಕುಂಡೇಚ…! ಅದಕ್ಕೆ ಎಷ್ಟು ಮಣ್ಣು ತಪ್ಪಲೆಡಿಗು…?
ಅಂದರೂ ಎಡಿಗಾಷ್ಟು ಕೆಲಸ ಮಾಡೇಕು ಹೇದು ಒಂದಾರಿ ನೀರಿಲ್ಲಿ ಮೈ ಚೆಂಡಿ ಮಾಡುಸ್ಸು ಹೊಯಿಗೆಲಿ ಹೊಡಚ್ಚುಸ್ಸು, ನೀರಿಂಗೆ ಹೋಗಿ ಅದ್ದುಸ್ಸು.
ಹೀಂಗೇ ಮಾಡಿಂಡು ಇದ್ದತ್ತು.
ಅದರ ಕಂಡು ರಾಮದೇವರಿಂಗೆ ಕೊಶಿ ಆಗಿ, ಅದರ ಕೈಲಿ ನೆಗ್ಗಿ, ಬಲಕೈ ಮೂರು ಬೆರಳಿಲ್ಲಿ ಅದರ ಬೆನ್ನು ಉದ್ದಿದ°.
ಅದದ ಈಗ ಕುಂಡೇಚನ ಮೈಲಿ ಮೂರು ಬರೆ ಕಾಣುಸ್ಸು.
ಏವದು ಹೇದರೆ ಕೋಳಿ.
ಎನ್ನ ಜೊಟ್ಟಿಂಗೆ ಮಣ್ಣಕ್ಕು ಹೇದಂಡು ಅದು ಬಯಿಂದೇ ಇಲ್ಲೆ.
ಹಾಂಗಾಗಿ ಅದಕ್ಕೆ ಶಾಪ – ಮನಿಷರ ಕೈಲೇ ನಿನಗೆ ಮರಣ ಹೇದು.
ತೊಂಡಾಗಿ ಸಾವಲೆ ಕಾಯ್ತವಿಲ್ಲೆ.
ಅದರಿಂದ ಮದಲೆ ಅದರ ಪೊಜಕ್ಕಿ ಮುಗುಶುತ್ತವು, ಅಲ್ದೋ…?
nice writing. btw, amerika lli kunDEcha nge bennilli bare ille. kunDEcha iddu. howell, new jersey li engaLa madalaaNa mane ya hinde maralli mEle keLa hOgyonDu itthu, lawn lli mane hatthare yoo kelavu sarthi ODaadugu.
ನನಗೆ ಒಟ್ಟು ಉಳಿಗಾಲ ಇಲ್ಲೆ!
ಕಥೆ ಅಧ್ಬುತ ಇದ್ದು….
ಅಳಿಲ ಸೇವೆಯ ಶ್ರೀರಾಮ ಗುರುತಿಸಿದರೆ ಅದಕ್ಕೆ ಅದರಿಂದ ದೊಡ್ಡ ಭಾಗ್ಯ ಎಂಥ ಬೇಕು? ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಓಹೋಹೋ! ಇಷ್ಟು ಹಾಂಕಾರ ಇದ್ದೊ ಕೋಳಿಗೆ?!
ಅಂಬಗ ಅದರತ್ರೆ ಕೇಳದ್ದೆ (ನಾವಲ್ಲ, ಕೋಳಿಯ ತಿಂಬ ಅಭ್ಯಾಸ ಇಪ್ಪೋರು) ಬೆಂದಿಗೆ ಮಸಾಲೆ ಅರವದರಲ್ಲಿ ಯೇವ ತಪ್ಪೂ ಇಲ್ಲೆ
ಕಥೆ ಲಾಯಿಕ್ಕಲಿ ಹೇಳಿದ್ದಿ ಮಾವ.. ತುಂಬಾ ಖುಷಿ ಆತು ಓದಿ… ಮುಂದಾಣ ನೀತಿ ಕಥೆಗೆ ಕಾಯ್ತಾ ಇರ್ತೆ… ಃ)
ದೊಡ್ಡಮಾವಾ,
ಭಾರೀ ಅಪ್ರೂಪ ಆಯಿದಿಯನ್ನೆ.
ಲಾಯ್ಕಾಯಿದು ನೀತಿ ಕತೆ. ಸಣ್ಣಾಗಿಪ್ಪಗ ಅಜ್ಜಿ ಈ ಮ೦ಗ೦ದು,ಕು೦ಡೆಚ್ಚ೦ದು ಕತೆ ಹೇಳಿತ್ತಿದ್ದವು.ಅವಕ್ಕೆ ಕೋಳಿ ಕತೆ ಗೊ೦ತಿತ್ತಿಲ್ಲೆಯೋ ಹೇಳಿ ಸ೦ಶಯ.
ಏ ಚೆನ್ನೈ ಭಾವಾ..
ಈಗ ಎಂಗಳಲ್ಲಿ, ಕೇರಳಾದ ಮಾವಿನ ಕಾಯಿ ಕೆತ್ತೆ ಹಾಕುವ ನಮುನೆ ದು ಬಪ್ಪಲೆ ಸುರು ಆಯಿದು. ತಲಗೆ ಮೆಣಸು ಅರವಶ್ಟು ಯೆಜಮಾಂತಿಗೆ ಉಪದ್ರ ಕೊದ್ತಿಲ್ಲೆಪ್ಪ ಆನು !
ದೊಡ್ಡಮಾವನ ಕಥೆ ಓದಿ ಆನೂ ‘ರಾಮ ರಾಮಾ ” ಹೇದೆ ರಜಾ ದೊಡ್ಡಕೆ..
ಮೆಣಸು ಹೊರುಕ್ಕೊಂಡಿದ್ದ ಯೆಜಮಾಂತಿ ಒಂದು ಕೈಲಿ ಸಟ್ಟುದಗ, ಇನ್ನೊಂದರಲ್ಲಿ ಒಂದು ಚೆಂಬು ನೀರೂ ಹಿಡುಕ್ಕೊಂಡು ಓಡಿ ಬಂತು! ಕಥೆ ತೋರಿಸಿದ ಮೇಲೆ ಈಗ ಸಮಾಧಾನ ಆತು ! ಮೆಣಸಿನ ಖಾರವೂ ರಜಾ ತಗ್ಗಿತ್ತು !
ಎಂತೇ ಆಗಲಿ ಸುಮಾರು ಹೊಸ ಹೊಸ ಸಂಗತಿಗೊ ಇಲ್ಲಿ ಸಿಕ್ಕುತ್ತು .
‘ ಮೆಣಸು ಹೊರುಕ್ಕೊಂಡಿದ್ದ ಯೆಜಮಾಂತಿ …. ‘ – ಇದು ಲಾಯ್ಕ ಆಯ್ದೀಗ. ಎಲ್ಯಾರು ಕೊದಿಲಿಂಗೆ ಉಪ್ಪು ಹಾಕುವ , ಮೆಣಸಿನ ಹುಡಿ ಹಾಕುವ (ಹಾಕಲಿದ್ದೋ ಎನಗೊಂತಿಲ್ಲೆ) ಸಮಯ ಆಗಿರುತ್ತಿದ್ರೆ ಬಾಲಣ್ಣ…!!
ದೊಡ್ಡಮಾವ°, ಕತೆ ಒಪ್ಪ ಒಪ್ಪ ಆಯಿದು. ನಿಂಗೋ ಹೇಳಿ ಅಪ್ಪಗ ಮಂಗಂಗೊಕ್ಕೆ ಸಿಕ್ಕಿದ ವರ ಎಂತದು ಹೇಳಿ ಗೊಂತಾದ್ದು!!! ಸುಮ್ಮನೆ ಅಲ್ಲ ನಮ್ಮ ತೋಟಲ್ಲಿ ಬೆಳದ್ದದು ಎಲ್ಲವೂ ಮಂಗಂಗೆ ಕೊಶೀ ಅಪ್ಪದು!!! ರಾಮನೇ ದಾರಿ ತೋರ್ಸೆಕ್ಕಷ್ಟೆ!!
ನಿಂಗೋ ಹೇಳಿದ ಕತೆ ಯಾವ ಕಾಲಕ್ಕುದೇ ಒಂದು ಬುದ್ಧಿ ಅಲ್ಲದಾ? ಒಬ್ಬ° ಒಳ್ಳೆ ಕೆಲಸ ಮಾಡ್ತಾರೆ ನಾವು ನಮ್ಮಂದ ಆದಷ್ಟು ಸೇರೆಕ್ಕು. ಆಗದ್ದರೆ ತಳಿಯದ್ದೆ ಕೂರೆಕ್ಕು. ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಕ್ಕುಗು!! ಮಾಡದ್ದರೆ ಪ್ರತಿಫಲ ಸಿಕ್ಕಿಯೇ ಸಿಕ್ಕುಗು!!
ಲಾಯ್ಕಾಯಿದು ಮಾವ° ಕತೆ. ಮುಂದಾಣದ್ದು ಆರ ಕತೆ?
ನಿಂಗಳ ಮಂಗ ಬಂದರೆ ಬೊಂಡ ಒಂದೂ ಮಡುಗುತ್ತವಿಲ್ಲೆನ್ನೆಪಾ. ಎಂತಾರು ರಾಮ ಇದಕ್ಕೊಂದು ಏರ್ಪಾಡು ಮಾಡಿಕ್ಕೆಕ್ಕಾತು.
ಕತೆ ಲಾಯಕ್ಕಾಯಿದು…ಕೋಳಿಯ ಕತೆ ಮುಗುದ್ದೆ ಅಂಬಗ ಅಲ್ಲದ?
ಕೋಳಿಗೆ ಹಾಂಗೆ ಆಯೆಕ್ಕು…
ಕತೆ ಪಶ್ಟಾಯಿದು ಭಾವಯ್ಯ. ಕೋಳಿಯ ಬಗ್ಗೆ ಹೊಸ ಒಂದು ಕತೆ ಕೇಳಿದ ಹಾಂಗೆ ಆತು. ಹೀಂಗೊಂದು ಕತೆ ಈಗ ನೆಂಪಾವುತ್ತಿದ.
ಇದು ಸೌಳಿ (ಉರಿ) ಎರುಗಿನ ಕತೆ. ಅದು ತಪಸ್ಸು ಮಾಡಿ, ದೇವರು ಪ್ರತ್ಯಕ್ಷ ಅಪ್ಪಗ ದೇವರ ಹತ್ರೆ (ಭಸ್ಮಾಸುರ ಕೇಳಿದ ಹಾಂಗೆ) ಆನು ಕಚ್ಚಿದರೆ ಸಾಯೆಕು ಹೇಳಿ ಕೇಳಿತ್ತಾಡ. ದೇವರು ನೆಗೆ ನೆಗೆ ಮಾಡಿ ಆಗಲಿ ಹೇಳಿದ ಆಡ. ವರ ಸ್ಯಾಂಕ್ಷನ್ ಆತು. ಉರಿ, ವರ ಕೇಳ್ತ ಗಡಿಬಿಡಿಲಿ ಅದು ಕಚ್ಚಿ ಅಪ್ಪಗ ಆರು ಸಾಯೆಕು ಹೇಳಿ ಹೇಳಿತಿಲ್ಲೆ ಆಡ. ಈಗ ನೋಡಿ, ಉರಿ ಕಚ್ಚಿ ಅಪ್ಪಗ ನಾವು ಅದರ ಹಿಸುಕಿ ಹಾಕುತ್ತು, ಹಾಂಗಾಗಿ ಅದೇ ಸತ್ತು ಹೋವುತ್ತು. ದೇವರು ಕೊಟ್ಟ ವರ ಅದಕ್ಕೇ ತಿರುಗಿ ಬಿದ್ದತ್ತು. ಹಾಂಕಾರ ಇಪ್ಪಲಾಗ ಹೇಳಿ ಈ ಕತೆಯ ತಾತ್ಪರ್ಯ.