Oppanna.com

ಪರಿಸರ – ಆರೋಗ್ಯ – ನಮ್ಮ ಗಣಪ್ಪಣ್ಣ

ಬರದೋರು :   ಪೆಂಗಣ್ಣ°    on   12/09/2010    5 ಒಪ್ಪಂಗೊ

ಪೆಂಗಣ್ಣ°
ಗೆಣಪ್ಪಣ್ಣನ ಸ್ಮರಣೆಂದ ಸುರು ಮಾಡಿತ್ತು.
ಗುರಿಕ್ಕಾರ್ರು ಮಡುಗಿದ ಹೆಸರು ಬಿಂಗಿ.
ಇಂದು ಎಂತೆಲ್ಲ ಬರೆವದು ಹೇಳುವೊ – ಸಮಕಾಲೀನ ಶುದ್ದಿಗೊ.
ಒಂದರ ನಂತರ ಇನ್ನೊಂದು ವಿಚಾರಗಳ ಮಥನ ಮಾಡುವೊ.
ನಾವು ಹವ್ಯಕರು. ಎಲ್ಲಾ ರಂಗಲ್ಲೂ ಇದ್ದೆಯೊ.
ಹಾಂಗೇ, ಈ ಕ್ಷೇತ್ರ.
ಬರವಣಿಗೆ ಪತ್ರಿಕಾ ರಂಗ ಇಲ್ಲಿಯೂ ನಮ್ಮವು ಸೈ.
ತುಂಬಾ ಜನ ಹಿರಿಯೋರು ವಿವಿಧ ವಿಚಾರಂಗಳ ಬರದು ಪುಸ್ತಕ ಮಾಡಿದ್ದವು.
ಅರ್ತಿಕಜೆ ಅಜ್ಜ, ಭರಣ್ಯ ಮಾವ – ಹೀಂಗಿಪ್ಪವು.
ಪತ್ರಿಕಾರಂಗಲ್ಲಿದೇ ಇದ್ದವು.
ಹೆಸರಾಂತ ಕನ್ನಡ ದಿನ ಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರೂ ನಮ್ಮವೇ.
ಸಾಮಾನ್ಯ ವರದಿಗಾರ ಆಗಿ ಪತ್ರಿಕಾರಂಗ ಪ್ರವೇಶಿಸಿ, ಕನ್ನಡಪ್ರಭದ ಅತ್ಯಂತ ಕಿರಿಯ ಸಂಪಾದಕರೂ ನಮ್ಮೋರೇ – ಶಿವಸುಬ್ರಹ್ಮಣ್ಯ.
ಇನ್ನು ನೀರಿನ ಬಗ್ಗೆ ಬರೆವ ಶ್ರೀಪಡ್ರೆ, ಭಡ್ತಿ – ಇನ್ನೂ ಹಲವು ಜನಂಗೊ ಈ ರಂಗಲ್ಲಿ ಇದ್ದವು.
ಬೇರೆಬೇರೆ ಭಾಷೆಲೂ ಬರೆತ್ತವು.
ನಮ್ಮ ಒಪ್ಪಣ್ಣನ ಬೈಲು ಹವ್ಯಕ ಭಾಶೆಲಿ ಇಪ್ಪಂತ ಪತ್ರಿಕೆ ಹೇಳಿರೂ ತಪ್ಪಲ್ಲ.
ಇಲ್ಲಿ ಈಗ ಸುಮಾರು ೪೦ ಜೆನ ಬೇರೆ ಬೇರೆ ವಿಚಾರಂಗಳಲ್ಲಿ ಬರೆತ್ತವು. ಒಟ್ಟಿಂಗೆ ಆನುದೇ ಬರವಲೆ ಸುರು ಮಾಡಿದ್ದೆ.
ನಿನ್ನೆ ಕೊಡೆಯಾಲಲ್ಲಿ ಸುಮಾರು ಗೆಣಪ್ಪಣ್ಣಂಗಳ ನೋಡಿಕಿ ಬಂದೆ.
ಸಂಘನಿಕೇತನದ ಆಳೆತ್ತರದ ಗೆಣಪ್ಪಣ್ಣನ ಹಿಡಿದು, ಕೊಟ್ಟಾರ, ಕುದ್ರೋಳಿ, ಕದ್ರಿ, ಮಂಗಳಾದೇವಿ ಎಲ್ಲಾ ಕಡೆ ಹೋಗಿ ಬಂದೆ.
ಒಳ್ಳೆ ರೀತಿಲಿ ಕಾರ್ಯಕ್ರಮಂಗೊ ನಡೆತ್ತಾ ಇದ್ದು.
ದೇವರ ಆಶೀರ್ವಾದ ಪಡೆದು ಮುಂದುವರಿಯುವ.
ಗಣೇಶೋತ್ಸವ ಆಚರಣೆ ಸಂದರ್ಭಲ್ಲಿ ಈ ವಿಚಾರಂಗೊ ನೆಂಪಾತು.
ಮೂರ್ತಿಯ ತಯಾರಿ ಮಾಡುವಗ ಪರಿಸರಕ್ಕೆ ಹಾನಿ ಅಪ್ಪದರ ಬಗ್ಗೆ ಗಮನ ಕಮ್ಮಿ ಮಾಡ್ತಾ ಇದ್ದವು ಜನಂಗೊ.
ಸಾಧ್ಯವಾದಷ್ಟು ಪರಿಸರಕ್ಕೆ ತೊಂದರೆ ಆಗದ್ದ ರೀತಿಲಿ ಮಣ್ಣಿನ ಗಣಪತಿಯ ಮಾಡುದು ಸಮ ಅಲ್ಲದಾ?
ಆ ಬಗ್ಗೆ ಎಲ್ಲರೂ ಗಮನ ಕೊಡುವ.
ಇಂದ್ರಾಣ ಊರು: ಕೊಡೆಯಾಲ.
~
ಪೆಂಗ ಪ್ರಮ್ ಬೈಲು.
bingi.penga@gmail.com

5 thoughts on “ಪರಿಸರ – ಆರೋಗ್ಯ – ನಮ್ಮ ಗಣಪ್ಪಣ್ಣ

  1. ಊರಿಲಿ ಹೆಂಗಿರ್ತ ಕಾರ್ಯಕ್ರಮಂಗೋ ನಡೆತ್ತಾ ಇದ್ದು ಭಾವಾ? ಯಕ್ಷಗಾನ,ತಾಳಮದ್ದಲೆ ಇತ್ತೋ?

    1. ಎನಗೆ ಅರ್ಥ ಆತಿಲ್ಲೆನ್ನೇ ರಘು !!!

      1. ಪೆಂಗ ಭಾವ ಊರಿಲಿ ಒಳ್ಳೆ ಕಾರ್ಯಕ್ರಮ ನಡೆತ್ತಾ ಇದ್ದು ಹೇಳಿದ° ಅಲ್ಲದೋ.ಎನ್ನ ಲೆಕ್ಕಲ್ಲಿ ಒಳ್ಳೆ ಕಾರ್ಯಕ್ರಮ ಹೇಳಿರೆ ಆಟವುದೇ,ತಾಳಮದ್ದಳೆದೆ !! ಹಾಂಗೆ ಕೇಳಿದೆ.ದುಬಾಯಿಲಿ ಆಟ ಇದ್ದೋ??

    1. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಷಯ ಅಲ್ಲದೋ. ಒಂದು ದೊಡ್ಡ ಗಣಪತಿಯ ಮಾಡಿ ಎಲ್ಲೋರ ಭಕ್ತಿಯ ಒಂದೇ ಕಡೆ ಕೇಂದ್ರಿಕರಿಸಿದರೆ ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×