Oppanna.com

ಪ್ರಕೃತಿ – ಪ್ರಕೃತ – ಪ್ರವರ್ತಕ

ಬರದೋರು :   ಪೆಂಗಣ್ಣ°    on   13/09/2010    6 ಒಪ್ಪಂಗೊ

ಪೆಂಗಣ್ಣ°

ಗಣಪ್ಪಣ್ಣನ ಮಾತಾಡ್ಸಿ ರಜಾ ಕದ್ರಿಲಿ ಆಟ ನೋಡಿಕ್ಕಿ ನಮ್ಮ ಗಾಡಿ ಹೆರಟತ್ತು ಕಡೂರಿಂಗೆ.
ಹಬ್ಬದ ಗೌಜಿಂದ ಬೊಬ್ಬೆಯ ಗೌಜಿಗೆ..
ಅದೇ ಓಟಿನ ಬೈಲು ನಮ್ಮ ಕಡೂರು.
ಇಂದಲ್ಲಿ ಮತದಾನ. ನಿನ್ನೆ ಹಿಂಸಾತಾಣ.
ಎಂತ ಹೇಳೆಕ್ಕು ಈ ಬಗ್ಗೆ.
ನಮ್ಮ ಆಳುವ ಜೆನವ ಆಯ್ಕೆಗೆ ಎಷ್ಟು ಜಗಳ. ಅಲ್ಲಿ ಪಕ್ಷಭೇಧ ಇಲ್ಲೆ.. ಎಲ್ಲೋರು ಒಂದೇ..
ಎಲ್ಲೋರು ಬಾಯಿಗೆ ಬಂದದ್ದರ ಮಾತಾಡಿಯೊಂಡಿತ್ತವಡ ಹಬ್ಬದ ದಿನ ಕೂಡಾ.
ಪುಣ್ಯಕ್ಕೆ ಆನು ಅಲ್ಲಿಗೆ ತಲ್ಪುವಾಗ ಎಲ್ಲರ ಹೆರ ಕಳ್ಸಿದ್ದವು.
ಹಾಂಗೆ ಹೇಳೆಕ್ಕಷ್ಟೆ.. ನೀತಿಸಂಹಿತೆ ಉಲ್ಲಂಘನೆ ಆವುತ್ತು ಹೇಳಿದ ಮೇಲೆಯೆ ಹೆರಟದ್ದಡ ಎಲ್ಲೋರು.
ಎಂತಾ ವಿಪರ್ಯಾಸ. ಇವು ಎಂತಾ ಆಡಳಿತ ಮಾಡಗು. ಆ ದತ್ತನೇ ಹೇಳೆಕ್ಕಷ್ಟೆ..
ಚಿಕ್ಕಮಗಳೂರು ಜಿಲ್ಲೆ ಸುಂದರ ಜಿಲ್ಲೆ..
ಕರುನಾಡಿನ ಪ್ರಸಿದ್ದ ಪ್ರವಾಸಿ ತಾಣಂಗ ಇಪ್ಪ ನಾಡು.
ಒಟ್ಟಿಂಗೆ ದತ್ತಪೀಠದ ಹೆಸರಿಲಿ ಗಲಾಟೆಯೂ ಇಕ್ಕು..
ಸಮಸ್ತ ಹಿಂದೂ ಸಮಾಜ ಎಲ್ಲಿ ಪ್ರವರ್ಧಮಾನಲ್ಲಿ ಇದ್ದೋ ಅಲ್ಲಿ ಗಲಾಟೆ ಶುರು ಮಾಡುಗು ಭಗದತ್ತಂಗ.
ನಾವೆಲ್ಲ ಇದರ ತಡೆವಲೆ ಒಂದಪ್ಪದು ಯೇವಾಗಲೋ..
ಅಂತೂ ಎನ್ನ ಕೆಲಸ ಸುದ್ದಿ ಸಂಗ್ರಹವೇ ಅಲ್ಲದೋ. ಅಲ್ಲಿ ತಲುಪಿಯಪ್ಪಗ ಸಿಕ್ಕಿದ ಸುದ್ದಿ.
ಪೈಸೆ, ಕಳ್ಳು ಕೊಟ್ಟು ಜನರ ಮತ ಪಡೆಯುವ ಕಾರ್ಯದ್ದೆ.
ಮನಸ್ಸಿಲಿ ಎರಡು ಚಿಂತನೆ. ಯಾವುದು ಸರಿ ಹೇಳ್ತದು ಇನ್ನೂ ಅರ್ಥ ಆವುತ್ತಾ ಇಲ್ಲೆ..
೧. ಜನ ಪೈಸೆ ಕಳ್ಳಿಂಗೆ ಕಾದೋಂಡಿರ್ತವೋ
೨. ಜನನಾಯಕ ಎನ್ನ ಕೈಯೆಷ್ಟು ಮೇಲೆ ಹೇಳುದರ ತೋರ್ಸುಲೆ ಕಾದೋಂಡಿರ್ತವೋ..!
ಶಾಂತಿ, ಸೌಹಾರ್ದತೆಲಿ ನಡೆವ ಮತದಾನವ ಕಾಂಬ ದಿನ ಎಂದೋ.
ಕಳ್ಳು, ಪೈಸೆ ಹಂಚದ್ದೆ, ನಡೆವ ಚುಣಾವಣೆ ಕಾಂಬಲೆಡಿಗೋ.
ಯಾವುದೇ ಪಕ್ಷ, ಯಾವನೇ  ವ್ಯಕ್ತಿ ಆಗಿರಲಿ..
ನ್ಯಾಯಯುತವಾಗಿ ಚುಣಾವಣೆ ಎದುರಿಸಿ ಗೆಲ್ಲೆಕ್ಕು ಅಲ್ಲದೋ..
ಅವಾಗ “ಜನಸೇವೆಯೆ ಜನಾರ್ದನ ಸೇವೆ”  ಹೇಳುದಕ್ಕೆಅರ್ಥ ಬಕ್ಕು.
ಇಂದ್ರಾಣ ಊರು: ಕಡೂರು, ಚಿಕ್ಕಮಗಳೂರು ಜಿಲ್ಲೆ.
~
ಪೆಂಗ ಪ್ರಮ್ ಬೈಲು.
bingi.penga@gmail.com

6 thoughts on “ಪ್ರಕೃತಿ – ಪ್ರಕೃತ – ಪ್ರವರ್ತಕ

  1. ಯೇ ಬಿಂಗಿ ಮಾಣಿ!!
    ನೀ ಯೆನ್ನಂದಲೂ ಬಿಂಗಿ ಮಾತಾಡ್ತೆನ್ನೆ ಮಾಣೀ.. 😉
    ನೀರ್ಕಜೆ ಚಿಕ್ಕಮ್ಮ ಬೈತ್ತವು ನೋಡು!
    ಬಂಡಾಡಿ ಅಜ್ಜಿಯತ್ತರೆದೇ ಪರಂಚುಸದ್ದೆ ಬಿಡೆ ನಿನಗೆ..

    1. ಚೆ ನೆಗೆ ಮಾಣೀ
      ಅವು ಬಪ್ಪಗ ನೋಡೂವೊ..
      ಬೈಲಿನ ಹೆಮ್ಮಕ್ಕ ಆರು ಕಾಣ್ತವಿಲ್ಲೆ ಈಗ..
      ಗೋಕರ್ಣಕ್ಕೆ ಹೊಯಿದವೊ ಎಂತ್ಸು.. ಕುಂಕುಮಾರ್ಚನೆ ಮಾಡುಲೆ..

  2. ಸಮಾಜ ಸೇವೆಯೂ ಒಂದು ವೈವಾಟು ಆದ ಕಾಲ ಅಲ್ಲದೋ ಭಾವಾ..
    ಮಹಾತ್ಮ ಗಾಂಧಿ ಈಗ ನೆಡೆತ್ತಾ ಇಪ್ಪ ಅವಸ್ಥೆಗಳ ನೋಡಿ ಸ್ವರ್ಗಲ್ಲಿಯೂ ಬಳ್ಳಿ ತೆಕ್ಕೊಂಗೋ ಹೇಳಿ ,ಅಲ್ಲದೋ. ನಮ್ಮ ಹೆರಿಯೋರು ಕಷ್ಟಲ್ಲಿ ಒದಗಿಸಿದ ಸ್ವಾತಂತ್ರ್ಯವ ಹೆಂಗೆ ಸ್ವೇಚ್ಛಾಚಾರ ಆಗಿ ಪರಿವರ್ತನೆ ಮಾಡಿದವು ನಮ್ಮ ಪ್ರತಿನಿಧಿಗೊ ಆದ ಈ ನಾಯಕರು, ಹೇಳಿ ನೋಡೊಗ ಬೇಜಾರು ಆವುತ್ತು. ಪ್ರಜಾಪ್ರಭುತ್ವದ ಹೆಸರಿಲಿ ಪ್ರಜೆಗಳ ಮೇಲೆ ಪ್ರಭುತ್ವದ ಪ್ರಯತ್ನ ಪಕ್ಷಭೇದ ಇಲ್ಲದ್ದೆ ಮಾಡುತ್ತಾ ಇದ್ದವು ನಮ್ಮ ನಾಡಿನ ಭಕ್ಷಕರು.
    ಕಳ್ಳು,ನೋಟಿನ ಚುನಾವಣೆಗೊ ನಿಲ್ಲೆಕ್ಕಾರೆ ( ಕಮ್ಮಿ ಆಯೆಕ್ಕಾರೆ) ನಮ್ಮ ದೇಶದ ವಿದ್ಯಾವಂತರು ಮಾಡಲು ವೋಟು ಹಾಕುಲೆ ಶುರು ಮಾಡೆಕ್ಕು. ಈ ಮದಲೇ ಶುರು ಮಾಡಿದವು ಒಳುದೋರನ್ನೂ ಸೇರುಸಿಗೊಲ್ಳೆಕ್ಕು.ವೋಟು ಹಾಕುತ್ತ ವಿದ್ಯಾವಂತರ ಪಕ್ಷ ಗಟ್ಟಿ ಆದಷ್ಟು ಪ್ರಾಮಾಣಿಕ ಚುನಾವಣೆಗೊ ನೆಡಗು.
    ವಿದ್ಯಾಭ್ಯಾಸ ಇಲ್ಲದ್ದ ಪ್ರಜ್ಞಾವಂತರು ನಮ್ಮಲ್ಲಿ ಬೇಕಾದಷ್ಟು ಜೆನ ಇದ್ದವು.ಅವು ಈ ನೋಟಿನ ಆಮಿಷಕ್ಕೆ ಸಿಕ್ಕವು.ಅವು ಯೋಗ್ಯತೆ ಇಪ್ಪೋರನ್ನೇ ಆಯ್ಕೆ ಮಾಡುಲೆ ಪ್ರಯತ್ನ ಮಾಡುತ್ತವು. ಈಗ ಆ ಆಯ್ಕೆಯ ಸ್ವಾತಂತ್ರ್ಯವೂಇಲ್ಲೆ ಹೇಳೋದು ನಮ್ಮ ದುರಾದೃಷ್ಟ ,ಅಲ್ಲದೋ??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×