Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಮೊನ್ನೆ ರಜ್ಜ ಪಷ್ಪಂಗಳ ಪಟ ತೋರುಸಿದೆ.
ಇನ್ನೊಂದು ರಜ ಇಲ್ಲಿದ್ದು.
ನೋಡಿ, ಹೇಂಗಿದ್ದು ಹೇಳಿ, ಆತಾ?
~
ಅಡ್ಕತ್ತಿಮಾರು cheap raybans sunglassesಮಾವ°
reach.snbhat@gmail.com
mava ella photos laikiddu…. enage hogala photo helire bari ista. tumba laika baindu…..
thumba layka baindu mava..ella photographer kai mahime..
ಪಟಂಗೊ ಎಲ್ಲ ಚೆಂದ ಬಂದರೂ ಚೆಂದ ಬಯಿಂದಿಲ್ಲೆ ಹೇಳಿ ಹೇಳುತ್ತದು ಚೆಂದ ಅಲ್ಲ, ಅಲ್ಲದೋ ? ಪಟಂಗೊ ಎಲ್ಲ ಚೆಂದ ಬಯಿಂದಾತೋ.
@ದೊಡ್ದಭಾವ….14ನೆ ಪಟಲ್ಲಿಪ್ಪದು ನಿಂಗ ಹೇಳಿದಾಂಗೆ ಇದ್ದು..7 ನೇ ದರ ಬಗ್ಗೆ ಮೇಲೆ ಬರದ್ದೆ..
ಅದು ೧೪ ನೇ ಪಟಲ್ಲಿಪ್ಪದು ಎನಗೆ ಗೊಂತಿಪ್ಪ ಹಾಂಗೆ ಹೂಗು ಅಲ್ಲ. ಅದು ರಂಗುಮಾಲಿ. ಅದರ ಒಡದರೆ ತುಂಬಾ ಹರಳು ಕಾಯಿಗೊ ಇರ್ತು. ಕೈಲಿ ಒಂದರಿ ತಿಕ್ಕಿರೆ ಕೈ ಪೂರಾ ಕೆಂಪಕ್ಕು, ಎನ್ನ ನಂಬಿಕೆ ಸರಿಯೊ…?
waaaaaaw.. ಎಲ್ಲಿ ಸಿಕ್ಕುತ್ತು ಅಜ್ಜಾ… ಎನಗೆ ಬೇಕು ಸೂಡುಲೆ..
7 ನೇದು ಎಂತ ಹೂಗು ಗೊಂತಯ್ದಿಲ್ಲೇ
ಕಳಾಯಿ ಅಜ್ಜಿ… ನಿಂಗಳುದೆ ಇದ್ದಿರಾ ಬೈಲಿಲಿ…
ನಿಂಗಳ ಎಲ್ಳೋರ ಒಪ್ಪಕ್ಕೆ ಎನ್ನದೂ ಒಂದು ದೊಡ್ಡ ಒಪ್ಪ…..
4ನೇದು ಗೊಂತಾತು 🙂
excellent…ಪ್ರತಿಯೊಂದೂ ಒಂದಕ್ಕಿಂತ ಒಂದು ಸುಂದರ 🙂 ಅದರ ನೋಡುವ ನಿಂಗೊಗೆ, ನಿಂಗಳ ಕಣ್ಣುಗೊಕ್ಕೆ, ಮನಸ್ಸಿಂಗೆ, ಮತ್ತೆ ನಿಂಗಳ ಕ್ಯಾಮರಾಕ್ಕೆ..hats off!!
4ನೇ ಪಟ ಯಾವುದು? ಗೊಂತಾಯ್ದಿಲ್ಲೆ…
ಧನ್ಯವಾದಂಗ.ನಮ್ಮ ಡಾಗುಟ್ರಕ್ಕನ ಪಟ ತೆಗೆಯೆಕ್ಕಾತನ್ನೆ…ಹೇಂಗಪ್ಪ ತೆಗವದು?ಮಾಸ್ಟ್ರಮಾವನ ಮಗನ ಮದುವೆಲಿ ಕಾಂಬ ಆಗದ?
ಖಂಡಿತಾ ಮಾವ.. ಆನು ಒಂದು ಸರ್ತಿ ನಿಂಗಳ ಕೆಮರ ಮಹಾಶಯನ ಕಣ್ಣಿಂಗೆ ಕಾಂಬಲೆ ಸಿಕ್ಕುತ್ತೆ.. 🙂
4 ನೇ ದು ಕೆಸವಿನ ಹೂಗು ಪತ್ರೊಡೆ ಸೊಪ್ಪಿನ ಹೂಗು..
ಒಹ್ ಅಪ್ಪಾ!!!!!!!!!!!!!!
ಎಲ್ಲಾ ಪಟಂಗೊ ಚೆಂದ ಬೈಂದು ಮಾವ..
ಮಾವ… ೪ನೆದು ಎಂತರ?
ಕೇದಗೆಯಾ?
15 ನೇ ಪಟ ಗೆಂಟಿಗೆ ಹೂಗು ಅದರ ಎನ್ನ ಕೆಮರ ದೊಡ್ದಕ್ಕೆ ತೋರುಸಿದ್ದು.
ಪಟ 7 ಅದು ಕಲ್ಲು ಶುಂಟಿ ಹೂಗು ನಾವು ಉಪಯೋಗಿಸುವ ಶುಂಟಿಯ ಹಾಂಗೆ ಇಪ್ಪ ಗೆಂಡೆ ಕೂಡ ಅದರಲ್ಲಿ ಆವುತ್ತು.ಗೆಂಡೆ ತಂಬ್ಳೀ ಮಾಡುಲೆ ಆವುತ್ತು.ಮದ್ದಿಂಗೆ ಕೂಡಾ ಉಪಯೋಗ ಇಪ್ಪಂತಾದ್ದು.ಹೆಚ್ಹಿಗೆ ಬೇಕಾರೆ ನಮ್ಮ ಡಾಗುಟ್ರಕ್ಕ ಹೇಳುಗು ಅಲ್ಲದ…
ಅಡ್ಕತ್ತಿಮಾರು ಅಣ್ಣನ ಕೆಮರಾದ ಕಣ್ಣು ಲಾಯಿಕ ಇದ್ದು. ಪಟಂಗೊ ಭಾರೀ ಲಾಯಿಕ ಬಯಿಂದು.
7 ಮತ್ತೆ 15 ರ ಬಗ್ಗೆ ವಿವರ ಬೇಕಿತ್ತು
ಮಾವಾ .. ಪಟ ೭ರ ಹೂಗಿನ ಬಗ್ಗೆ ರಜ್ಜ ವಿವರ ಕೊಡ್ತೀರಾ?
ದಾಸನ,ಲಂಬಾನ ಎಲ್ಲ ಸೂಡಿದವರ ಮೈಕು ಕಟ್ಟಿಗೊಂಡು ತಿರುಗುತ್ತವು ಹೇಳಿ ತಮಾಷೆ ಮಾಡಿಗೊಂಡಿದ್ದದು ನೆನಪ್ಪಾವುತ್ತಿಲ್ಲೆಯಾ ಭಾವಾ..
ಅದಾ ಒಂದೊಂದೇ ಹೆರ ಬೀಳ್ತದಾ….. ಇಲ್ಲದ್ದರೆ ಹಿಂದಂದ ಎಲ್ಲಾ ಹೇಳಿರೆ, ಯಾವ ಕೂಸಿಂಗೆ ಗೊಂತಕ್ಕು? ಆನು ಸೂಡಿಪ್ಪಾಗ ಅಜ್ಜಕಕಾನ ಭಾವಂದೇ, ನೆಗೆಗಾರಂದೇ ಮುಸು ಮುಸು ಮಾಡ್ಯೊಂಡು ಇತ್ತಿದ್ದವು….ತಮಾಷೆ ಮಣ್ಣ ಮಾಡಿದ್ದೋ ಎಂತದೋ ಎನಗರಡಿಯ…..
ಚೆನ್ನಬೆಟ್ಟಣ್ಣ, ಉಮೇದಿಲಿ ದಾಸನ,ಲಂಬಾನ,ಕಿಸ್ಕಾರ ಎಲ್ಲ ಸೂಡುಸುಲೆ ಹೇರಡೆಡಾ…
ಎಂತಾರು ಅನುಭವ ಆಯಿದಾ ಭಾವ
ವಾ…!
ಎನಗೆ ಇದಲ್ಲಿ ಯಾವ ಹೂಗಿನ ಎನ್ನ ಹೆಂಡತಿಗೆ ಸೂಡ್ಸುದು ಹೇಳಿ ಕಂಪ್ಯೂಸು ಅವ್ತಾ ಇದ್ದು
ಆಹ್!! ಬಂಗಾರದಂತಾ ಮಾತು.
11ನೇದು ಸದ್ಯಕ್ಕೆ ಬೇಡ, ನಾಚಿಗೆ ಜೋರಕ್ಕು ಮತ್ತೆ.. 😉
ನೆಗೆಗಾರಣ್ಣ ಸೂಡ್ಸಿ ನೋಡಿದ್ದನೋ ಹೇಳಿ ಕಾಣ್ತು….. 😉
ಕೊಟ್ಟು ಗೊಂತಿದ್ದಡ ಮೊನ್ನೆ ಸಿಕ್ಕಿ ಹೇಳಿದ ಆತೊ
ಚೆನ್ನಬೆಟ್ಟಣ್ಣ,ನಿಂಗಳ ಹೆಂಡತಿಯ ಚೆಂದವ ನೋಡಿ ಅಪ್ಪಗ ಈ ಹೂಗುಗೊ ನಾಚಿ ನೀರಕ್ಕು.. 🙂 ಹಾಂಗಾಗಿ ಬೈಲಿಂದ ಕೊಯಿಕ್ಕೊಂಡು ಹೊದರೂ ಪ್ರಯೋಜನ ಆಗದೊ ಹೇಳಿ!!!!
ನಿಂಗೊಗೆ ಹಾಂಗೆಂತಾರು ಆಯಿದೋ.. ಒಪ್ಪ್ಪಣ್ಣಂಗೆ ಡೌಟಡ. ಕೇಳುಲೆ ನಾಚಿಕೆ ಆವುತ್ತು ಹೇಳಿದ
ಚೆನ್ನಬೆಟ್ಟಣ್ಣಾ.. ಪೈಪ್ಪಿಲಿ ನೀರು ಬಾರದ್ದರೆ ಮೀವಲೆ ಬೇಕಪ್ಪಷ್ಟು ಹೂಗು ಕೊಯಿಕ್ಕೊಂಡು ಹೋಪೊದು ಒಳ್ಳೇದೋ ಹೇಳಿ..
ಅದು ಒಳ್ಳೆದು.. ದಾಸನ ಹೆಚ್ಚು ಕೊಯಿಕ್ಕೊಳ್ಳಿ..ತಲೆಗೆ ಹಾಕಿ ಮಿಂದರೆ ತಂಪು..ಕೂದಲಿಂಗೆ ಸೊಂಪು… 🙂
ಪಾಪ!
ಇನ್ನು ತಲಗೆ ಮೀಶುದೊಂದು ಕೆಲಸ ಆತು ಧರ್ಮಕ್ಕೇ..
ಅದಕ್ಕೇ ಹೇಳುದು, ಅರಡಿಯದ್ದೆ ಒಪ್ಪಕೊಟ್ರೆ ಕೊರಳಿಂಗೆ ಬತ್ತು ಹೇಳಿಗೊಂಡು! 😉
ನೆಗೆಗಾರಂಗೆ ತಲಗೆ ಮೀವ ಅಭ್ಯಾಸ ಇಲ್ಲೆ ಆದಿಕ್ಕು?????????? 😉
ಅವಂಗೆ ಮೀವ ಅಭ್ಯಾಸ ಇದ್ದನ್ನೆ , ಅದು ಸಾಕು ದಿನಾ ತಲಗೆ ಮಿಂದು ನೀರು ಹಾಳುಮಾಡುದೆಂತಕಪ್ಪ.
ಅಮೇರಿಕಾಲ್ಲಿ ಚಳಿಗೆ ನಾಕು ದಿನ ಮೀಯದ್ರೂ ತೊಂದರೆ ಇಲ್ಲೆಡ. ಪುತ್ತೂರು ಭಾವ ಹೇಳಿಯೊಂಡು ಇತ್ತಿದ್ದ.
ಅದಕ್ಕೆ ಹಾಂಗಾರೆ ಒಪ್ಪಣ್ಣ ಹೇಳಿಯೊಂಡಿದ್ದದು “ಆನುದೇ ಕೊಳಚಿಪ್ಪು ಬಾವಂದೆ ಇನ್ನು ಅಮೆರಿಕಕ್ಕೆ ಹೋಪದು” ಹೇಳಿ….
ಮಾಷ್ಟ್ರುಮಾವನ ಮಗ ಟಿಕೇಟು ಕಳುಶಿದ ಕೂಡ್ಲೆ ಅಮೇರಿಕಾಕ್ಕೆ ಹೆರಡುದೆ. 😉
ಕೊಳಚ್ಚಿಪ್ಪು ಮಾವ, ಕಲ್ಮಡ್ಕಜ್ಜಿ ಎಂತ ಮಾಡ್ತ ಇದ್ದವು..?
{ ನೆಗೆಗಾರಂಗೆ ತಲಗೆ ಮೀವ ಅಭ್ಯಾಸ ಇಲ್ಲೆ ಆದಿಕ್ಕು }
ಇದ್ದಪ್ಪಾ ಇದ್ದು!
ನಾಳ್ತು ದೀಪಾವಳಿ ಬತ್ತು ನವೆಂಬ್ರಲ್ಲಿ. ಸರೀ ಒಂದೊರಿಶ ಆವುತ್ತು, ಅಂಬಗ ಮೀಯೆಕ್ಕು.
ಅಂತೇ ಅಂತೇ ಹೇಳುಲಾಗ ಒಪ್ಪಕ್ಕೋ.. ಬೇಜಾರಾವುತ್ತು! 🙁
ಎನ್ನ ಬೋಳು ತಲೆಗೆ ನೊಂಪು,ಬೇಡ ಬೇರೆ ಗೊಂಪು…
{ ಎನ್ನ ಬೋಳು ತಲೆಗೆ ನೊಂಪು,ಬೇಡ ಬೇರೆ ಗೊಂಪು }
ಯೇ ಮುಳಿಯಭಾವ,
ನಿಂಗೊ ಗೊಂಪು ಹಾಕಿಯೇ ನೊಂಪಾದ್ದೋ ಹೇಳಿಗೊಂಡು!
ದೊರಾಗಿನ ಹೊಯಿಗೆಯೋ ಮಣ್ಣ ಹಾಕಿದ್ದರೆ ತಲೆ ಬೋಳಾವುತಿತಿಲ್ಲೆಯೋ ಹೇಳಿಗೊಂಡು!!
ನೆಗೆಗಾರ ಭಾವಾ.. ಈಗಳೇ ಮೋರೆ ಎಲ್ಲಿವರೆಗೆ ತೊಳವೊದು ಹೇಳಿ ಗೊಂತಾವುತ್ತಿಲ್ಲೇ.. ಹೇಳಿ ತಲೆ ತೊರುಸಿಗೊಂಡಿದ್ದೆ..ಇನ್ನು ಎನ್ನ ತಲೆಗೆ ನಿಂಗೊ ಹೇಳಿದ ಪ್ರಯೋಗ ಮಾಡಿರೆ ಚೆಪ್ಪೆ ಹೋಕೋ ಹೇಳಿ.
{ ತಲೆ ತೊರುಸಿಗೊಂಡಿದ್ದೆ.. }
ಎಲ್ಲಿಯವರೆಗೆ? 😉
ಮೋರೆಯವರೆಗೆ. ಗಡಿ ನಿಘಂಟಾಯೆಕ್ಕಷ್ಟೇ..
ಧನ್ಯವಾದಂಗ…
super!
ವಾ ಮಾವ!!!! ನಿಂಗಳ ಕ್ಯಾಮರದ ಕಣ್ಣಿಂಗೆ ಭಯಂಕರ ಚೆಂದ ಚೆಂದದೋರು ಮಾತ್ರ ಬೀಳುದಾಳ ಹೇಳಿ!!!! ಇವೆಲ್ಲಾ ಬಿನ್ನಾಣ,ವೈಯಾರ ತೋರ್ಸಿಗೊಂಡು ಸುಂದರಿ ಪಟ್ಟ ಆರಿಂಗೆ ಸಿಕ್ಕುಗಪ್ಪಾ ಹೇಳಿ ಕಾದು ನಿಂದ ಹಾಂಗೆ ಇದ್ದು… 😉 😉
ನಿಂಗಳ ಪಟ ಅವು ತೆಗದ್ದವಿಲ್ಲೆ ಹೇಳಿ ಹೀಂಗೆ ಹೇಳುದಾ ನಿಂಗೊ? 😉
ಏ°?
ಅಪ್ಪು ಮತ್ತೆ.. ಎಂಗೊ ಎಲ್ಲಾ ಮೇಲಾಣ ಸುಂದರಿಯರಷ್ಟು ಚೆಂದ ಇಲ್ಲೆ..ಹಾಂಗಾಗಿ ಕೆಮರದ ಕಣ್ಣು ಇತ್ಲಾಗಿ ನೋಡಿದ್ದೆ ಇಲ್ಲೆ!!!! ಮಾವ ಎನ್ನ ಪಟ ತೆಗೆತಿತ್ತವಾ ಏನೊ,ಆದರೆ ಅವರ ಕೆಮರ ಮಹಾಶಯಂಗೆ ಎಂಗಳ ಎಲ್ಲಾ ಕಾಣ್ತಿಲ್ಲೆನ್ನೇ!!! 😉 😉
Soumyakka,
kaige sikkida mulamugala Morage mettuva badalu ,E hogugala yesaru Upayogisidare namma soundarya yentaru jaasti akko ??