ಕೆಲವು ತಿ೦ಗಳು ಮದಲು ಉಡುಪಮೂಲೆ ಅಪ್ಪಚ್ಚಿ ಬೆ೦ಗಳೂರಿ೦ಗೆ ಬ೦ದಿತ್ತಿದ್ದವು.ಎ೦ಗಳ ನೆರೆಕರೆಲಿ ಅವರ ತ೦ಗೆ ಮನೆ ಇಪ್ಪದು.ಹಾ೦ಗೆ ಅಲ್ಲಿ೦ದ ಒ೦ದು ಕೂಕಿಲು ಹಾಕಿಯಪ್ಪಗ ನಾವು ಲೋಕಾಭಿರಾಮ ಮಾತಾಡ್ಲೆ ಅವು ಇಪ್ಪಲ್ಲಿಗೆ ಹೋತು.ಪು೦ಡಿಕಾಯಿ ಅತ್ತೆ,ಹೇಳಿರೆ ಅಪ್ಪಚ್ಚಿಯ ತ೦ಗೆ, ಮಾಡಿದ ಚಾಯ ಕುಡುಕ್ಕೊ೦ಡಿಪ್ಪಗ ಅಪ್ಪಚ್ಚಿ ಚೀಲ೦ದ ಒ೦ದು ಪುಸ್ತಕ ತೆಗದವು ಎನ್ನ ಕೈಗೆ ಮಡಗಿಕ್ಕಿ ” ಮುಳಿಯ ಭಾವ,ಇದರ ಒ೦ದು ಓದಿಕ್ಕು,ಭಾರೀ ಲಾಯ್ಕ ಇದ್ದು” ಹೇಳಿದವು.
ಪುಸ್ತಕ ನೋಡಿರೆ ಪ೦ಡಿಲಿ ಬ೦ದುಗೊ೦ಡಿದ್ದ ”ಯುಗಪುರುಷ” ದ ಹಾ೦ಗೆ ಮಸ್ಕು ಮಸ್ಕು ಬೈ೦ಡಿ೦ದು.ಆದರೆ ಅದರ್ಲಿ ಇದ್ದದು ಯಕ್ಷಗಾನದ ಕಿರೀಟ ವೇಷ.ಹಾ೦ಗಾಗಿ ಒ೦ದು ಎಳಕ್ಕ ಬ೦ದು, ಕೂಡ್ಲೆ ಪುಸ್ತಕ ಬಿಡುಸಿ ಓದಲೆ ಶುರು ಮಾಡಿದೆ.ಸತ್ಯ ಹೇಳ್ತೆ,ಊರಿ೦ದ ಬ೦ದ ಅಪ್ಪಚ್ಚಿ ಕೂದಲ್ಲೇ ಬಾಕಿ,ನಾವು ಮನಿಪ್ಪಣ್ಣನ ಹಾ೦ಗೆ ಇಡೀ ಪುಸ್ತಕ ಉದ್ದಾಕೆ ಓದಿ ಮುಗುಶುವನ್ನಾರ.ಓದಿಕ್ಕಿ ತಲೆ ನೆಗ್ಗಿದವ°,
” ಅಪ್ಪಚ್ಚಿ,ಇದು ಊರಿಲಿ ಪುಸ್ತಕದ ಅ೦ಗಡಿಲಿ ಮಾ೦ತ್ರ ಸಿಕ್ಕುವ ಬಗೆಯೋ?”ಹೇಳಿ ಕೇಳಿದೆ.
ಅಪ್ಪಚ್ಚಿ ” ಇದು ಯೇವ ಅ೦ಗಡಿಲಿಯೂ ಸಿಕ್ಕದ್ದದು.ನಿನಗೆ ಬೇಕಾರೆ..ಇದಾ..ಈ ಎಡ್ರಾಸು ಬರಕ್ಕೋ.ಅಲ್ಲಿಗೆ ಪೈಸೆ ಕಳುಸಿರೆ ತಿ೦ಗಳು ತಿ೦ಗಳು ನಿನ್ನ ಮನೆಗೆ ಪೋಸ್ಟಿಲಿ ಬಕ್ಕು ” ಹೇಳಿದವು.
ತಿ೦ಗಳು ಎರಡು ಕಳಾತು,ನಮ್ಮ ಪ್ರಯಾಣದ ಗಡಿಬಿಡಿಲಿ ಆ ಕೆಲಸ ಅಲ್ಲಿಯೇ ಬಾಕಿ. ಮತ್ತೊ೦ದು ತಿ೦ಗಳು ಕಳುದು ಊರಿ೦ಗೆ ಹೋಗಿಪ್ಪಗ ದೊಡ್ಡಮಾವನ ಒ೦ದರಿ ಕ೦ಡು ಮಾತಾಡ್ಸಿಕ್ಕಿ ಬಪ್ಪ ಹೇಳಿ ಹೋಗಿತ್ತಿದ್ದೆ,ಅವರ ಮನೆಗೆ.ಅಲ್ಲಿ ದೊಡ್ಡಭಾವನ ಮೇಜಿಲಿ ಅದೇ ಪುಸ್ತಕ ಕ೦ಡಪ್ಪಗ ಪಕ್ಕ ನೆ೦ಪಾತು.”ಓಯ್,ಭಾವ.ಎನಗೂ ಈ ಪುಸ್ತಕ ಬೇಕಾತನ್ನೇ” ಹೇಳಿದೆ.ದೊಡ್ಡಭಾವ° ಕೂಡ್ಲೆ ಮೊಬೈಲು ಅಮರ್ಸಿ ಆಚ ಹೊಡೆ ಜೆನದತ್ರೆ ”ನೀವು ಈಗ ಎಲ್ಲಿದ್ದೀರಿ?,ಕು೦ಬಳೆಯೋ,ಈಗ ಬರ್ತೇವೆ”ಹೇಳಿದವು.ಕೂಡ್ಲೆ ಇಬ್ರೂ ಕು೦ಬಳೆಗೆ ಹೋದೆಯ°.ಅಲ್ಲಿ ಎ೦ಗಳ ಕಾದು ನಿ೦ದಿದವು ಈ ಪುಸ್ತಕದ ಸ೦ಪಾದಕ ಶ್ರೀ ನಾ.ಚ೦ಬಳ್ತಿಮಾರ್.
ಅಪ್ಪು,ಆನು ಹೇಳುಲೆ ಹೆರಟದು ” ಕಣಿಪುರ “ ಹೇಳುವ ಮಾಸಪತ್ರಿಕೆಯ ವಿಷಯ.
ಗಡಿನಾಡಿಲಿಪ್ಪ ಕಾಸರಗೋಡು ಜಿಲ್ಲೆಲಿ ಕನ್ನಡ ನಿಧಾನವಾಗಿ ಮರೆಯಾವುತ್ತಾ ಇಪ್ಪ ಈ ಕಾಲಲ್ಲಿ ಕು೦ಬಳೆಲಿ ನಮ್ಮ ಸ೦ಸ್ಕೃತಿ,ಸಾಹಿತ್ಯ,ಲಲಿತಕಲೆಗಳ ಹೊಸ ಪೀಳಿಗೆಗೆ ದಾ೦ಟುಸುವ ಪ್ರಯತ್ನಲ್ಲಿ ಕರಾವಳಿಯ ಕೈಗನ್ನಡಿಯ ಹಾ೦ಗೆ ಈ ಪತ್ರಿಕೆ ರೂಪುಗೊಳ್ಳೆಕ್ಕು ಹೇಳ್ತ ಕನಸಿನ ಹೊತ್ತುಗೊ೦ಡು ಹೆರಟ ಒ೦ದು ವಿಶಿಷ್ಟ ಪತ್ರಿಕೆ.”ನಾವು ಎಷ್ಟು ನೀಡುತ್ತೇವೆ ಎ೦ದಲ್ಲ,ಏನು ನೀಡುತ್ತೇವೆ ಎ೦ಬುದೇ ಮುಖ್ಯ”ಹೇಳುವ ಸ೦ಪಾದಕ ಮ೦ಡಳಿ,ಬಹುವರ್ಣ ಮುದ್ರಣಕ್ಕೋ,ಅತ್ಯುತ್ತಮ ದರ್ಜೆಯ ಕಾಗದಕ್ಕೋ ಪ್ರಾಮುಖ್ಯತೆ ಕೊಡದ್ದೆ ಒಳ ಅಚ್ಚಪ್ಪ ವಿಷಯ೦ಗೊಕ್ಕೆ ತನ್ನೆಲ್ಲಾ ಪರಿಶ್ರಮವ ಹಾಕಿಗೊ೦ಡಿಪ್ಪ ಒ೦ದು ಸದಭಿರುಚಿಯ ಮಾಸಪತ್ರಿಕೆ.
ಆನು ವಿನ೦ತಿ ಮಾಡಿಯಪ್ಪಗ ,ಜನವರಿ 2012 ರಲ್ಲಿ ಪತ್ರಿಕೆ ಶುರುವಾದಲ್ಲಿ೦ದ ಆ ದಿನದ ವರೆಗಾಣ ಎಲ್ಲಾ ತಿ೦ಗಳ ಪುಸ್ತಕ೦ಗಳ ಎನಗೆ ಕೊಟ್ಟವು,ಸ೦ಪಾದಕರು.ಎಲ್ಲಾ ಪ್ರತಿಗಳೂ ಓದಿದ ಮೇಲೆ ಎನ್ನ ಪುಸ್ತಕದ ಕವಾಟಿಲಿ ಭದ್ರವಾಗಿ ಇದ್ದು ಹೇಳಿ ಕೊಶೀಲಿ ಹೇಳ್ತೆ.ಮನ್ನೆ ಮನ್ನೆ ಪರೀಕ್ಷೆಗೆ ಒ೦ದು ವಾರ ಮದಲು ಎನ್ನ ಮಗ ಆ ಪುಸ್ತಕ ಓದೊಗ ನಿಜಕ್ಕೂ ಬೈದ್ದಿಲ್ಲೆ !
ಬಹುಶಃ ಮಾಸಪತ್ರಿಕೆಯ ಶುರುಮಾಡುವ ಹ೦ತಲ್ಲಿ ಚ೦ಬಳ್ತಿಮಾರಣ್ಣ೦ಗೆ ಈ ಪತ್ರಿಕೆ ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆಯಾಗಿ ಬೆಳೆಯೆಕ್ಕು ಹೇಳ್ತ ಉದ್ದೇಶ ಇದ್ದಿಕ್ಕು.ಆದರೆ ಎರಡು ಸ೦ಚಿಕೆ ಕಳುದಪ್ಪಗ ಪತ್ರಿಕೆಗೆ ಒ೦ದು ನಿರ್ದಿಷ್ಟರೂಪ ಬ೦ದ ಹಾ೦ಗೆ ಕ೦ಡತ್ತು.ನೂರಾರು ಸಹೃದಯಿ ಸಾಹಿತ್ಯಪ್ರೇಮಿಗಳ ಮನಸ್ಸಿನ ತುಡಿತಕ್ಕೆ ಸ್ಪ೦ದಿಸುತ್ತಾ ಯಕ್ಷಗಾನವ ತನ್ನ ಕೇ೦ದ್ರಬಿ೦ದುವಾಗಿಸಿ,ನೃತ್ಯ,ಸ೦ಗಿತಾದಿ ಕಲೆಗಳ ಹೊಡೆ೦ಗೆ ದೃಷ್ಟಿ ಹಾಯಿಸಿಗೊ೦ಡು,ನೇಮ,ದೈವಾರಾಧನೆ,ವೈದಿಕ ಆಚರಣೆ ಇತ್ಯಾದಿ ನಮ್ಮ ಸ೦ಸ್ಕೃತಿಯ ಬೆಳೆಶುವ ಪ್ರಯತ್ನ ಈ ಪತ್ರಿಕೆ ಮಾಡ್ತಾ ಇದ್ದು ಹೇಳೊದು ನಿಸ್ಸ೦ದೇಹ.
ಪ್ರಸಿದ್ಧ ಕಲಾವಿದರ ಸ೦ದರ್ಶನ,ಹಳೆ ತಾಳಮದ್ದಳೆಯ ಕೇಸೆಟುಗಳ ಅರ್ಥಗಾರಿಕೆಯ ಅಕ್ಷರಕ್ಕೆ ರೂಪಾ೦ತರ,ತೆರೆಯ ಮರೆಲಿ ಆಗಿ ಹೋದ ಚ೦ದ್ರಗಿರಿ ಅ೦ಬುವಿನ ಹಾ೦ಗಿರ್ತ ಮಹಾನ್ ಕಲಾವಿದರ ಪರಿಚಯ,ವರ್ತಮಾನದ ಮೇರು ಕಲಾವಿದರ ಸ೦ದರ್ಶನ,ನೆರೆಕರೆಲಿ ನೆಡವ ಸಾ೦ಸ್ಕೃತಿಕ ಚಟುವಟಿಕೆಗೊ… ಹೀ೦ಗೆ ಪುಸ್ತಕಲ್ಲಿ ಇಪ್ಪ ಮೂವತ್ತರಿ೦ದ ನಲುವತ್ತು ಪುಟ೦ಗೊ ಆಸಕ್ತಿಲಿ ಓದುಸಿಗೊ೦ಡು ಹೋವುತ್ತು.
ನಮ್ಮ ಬೈಲಿನ ಬಾಲಣ್ಣನ ವ್ಯ೦ಗ್ಯಚಿತ್ರ೦ಗೊ ರೈಸುತ್ತಾ ಇರ್ತು,ಅನುಪಮಕ್ಕ ಅಲ್ಲಿ ಕೆಲವು ಶುದ್ದಿಗಳ ಬರೆತ್ತಾ ಇದ್ದವು ಹೇಳಿ ಹೇಳುಲೆ ಕೊಶಿ ಆವುತ್ತು.
ಇದೆಲ್ಲಾ ಎನ್ನ ವೈಯಕ್ತಿಕ ಅಭಿಪ್ರಾಯ.ಇದಾ,ಈ ತಿ೦ಗಳ ಸ೦ಚಿಕೆಯ ಈ ಶುದ್ದಿಯ ಒಟ್ಟಿ೦ಗೆ ನೇಲುಸಿದ್ದು.ನಿ೦ಗೊಗೆ ಪುಸ್ತಕ ತರುಸಿ ಓದುವ ಆಸಕ್ತಿ ಹುಟ್ಟಿದರೆ ಸ೦ಪಾದಕ ಶ್ರೀ ನಾ.ಚ೦ಬಳ್ತಿಮಾರ್ ಇವರ ನೇರ ಸ೦ಪರ್ಕ ಮಾಡ್ಲಕ್ಕು. ಫೋನು ನ೦ಬ್ರ – ೦9995035627
ಮಾರ್ಚ್ ತಿಂಗಳ ಪತ್ರಿಕೆ ಓದುಲೆ ಸಂಕೋಲೆ
- ಒ೦ದು ಸೀರೆ “ಉಪ್ಪಾಡ” ! - May 30, 2016
- ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ - May 25, 2016
- ಸ೦ತೋಷವ ಬಳುಸುವ “ಅಳಗಸ್ವಾಮಿ” - May 24, 2016
ಕಣಿಪುರ ಒಂದು ಒಳ್ಳೆ ಪತ್ರಿಕೆ. ಮುಳಿಯ ಭಾವ ಹೇಳಿದಾಂಗೇ, ಚಂಬಲ್ತಿಮಾರಣ್ಣನ ವೈಯಕ್ತಿಕ ಪರಿಶ್ರಮಂದ ಬತ್ತ ಪತ್ರಿಕೆ ಇದು. ನಾವು, ನಮ್ಮ ಮಕ್ಕೊ ಎಲ್ಲಾ ಹೀಂಗಿಪ್ಪದರ ರಜ್ಜ ರಜ್ಜಾದರೂ ಓದೆಕ್ಕಪ್ಪ. ಆನು ಇದರ ಸುಮಾರು ಎರಡು ವರ್ಷಂದ ಓದುತ್ತೆ. ಖುಷಿಯ ವಿಷಯ ಎಂತಾಳಿ ಹೇಳಿದರೆ, ಈಗ ಸುಮಾರು ಮನೆಗಳಲ್ಲಿ ’ಕಣಿಪುರ’ ತರ್ಸುತ್ತವೂಳಿ ಕಾಣುತ್ತು. ಅಲ್ಲಿ-ಇಲ್ಲಿ ಹೋದಿಪ್ಪದ ಎದುರು ಮೇಜಿಲಿ ಕಾಂಬಲೆ ಸಿಕ್ಕುತ್ತು.
ಅಪ್ಪಚ್ಚಿ,ತು೦ಬಾ ದೊಡ್ಡ ಮಾತುಗೊ.
ಈ ಪತ್ರಿಕೆಯ ಮದಾಲು ಪರಿಚಯ ಮಾಡಿದವು ನಿ೦ಗೊ.ಒ೦ದು ಧನ್ಯವಾದ ಸಲ್ಲುಸುತ್ತೆ.
ಹರೇ ರಾಮ ಮುಳಿಯಣ್ಣ;ನಿ೦ಗಳ ಸಜ್ಜನಿಕೆ + ಸಹೃದಯತೆ ಕಣ್ಣಾರೆ ಕ೦ಡದ್ದಕ್ಕೆ ಈ ಮಾತುಗೊ ಬ೦ತಿದಾ.ನಿ೦ಗಳ ಈ ಮಾತುದೆ ಅದಕ್ಕೆ ಪೂರಕ. ಈ ಗುಣ ಇ೦ದು ನಾವು ಎಲ್ಲೋಡಿಕ್ಕು ಬೇಕು ಹೇದರೆ ಕಾ೦ಬಲೆ ಸಿಕ್ಕ.ಅ೦ಥ ಅಪರೂಪದ ವೆಕ್ತಿತ್ವದ ಪರಿಚಯ ನಿ೦ಗಳ ಪ್ರಥಮ ಭೇಟಿಲೆ ಎನಗಾತು. ಅದರ ಹಾ೦ಗೆ ಬರದೋತು.ಅಷ್ಟೆ.“ಗುಣಾಃ ಪೂಜಾ ಸ್ಥಾನ೦.” ಹೇದು ಒ೦ದು ಮಾತಿದ್ದನ್ನೆ.ಆ ಅರ್ಥಲ್ಲಿಯೇ ನಿ೦ಗಗೆ ಮತ್ತೊ೦ದಾರಿ ನಮಸ್ಕಾರ ಹೇಳುತ್ತೆ.ಧನ್ಯವಾದ.
ಅಪ್ಪು ಗೋಪಾಲಣ್ಣ.
ಪತ್ರಿಕೆಯ ಯಶಸ್ಸಿ೦ಗೆ ಓದುಗರ ಪ್ರೋತ್ಸಾಹ ಬೇಕು.ಓದುಗರ ಬೆ೦ಬಲ ಸಿಕ್ಕೆಕ್ಕಾರೆ ಪತ್ರಿಕೆಲಿ ವಿಷಯ ಬೇಕು. ಸದ್ಯ ಅ೦ತರ್ಜಾಲ ಮೂಲಕ ಪಾವತಿ ವ್ಯವಸ್ಥೆ ಇಲ್ಲೆ ಹೇಳಿ ಕಾಣುತ್ತು.ಆಜೀವ ಸದಸ್ಯತ್ವ ಹೊ೦ದುವ ದಿನ೦ಗಳ ಈ ಪತ್ರಿಕೆ ಕಾಣಲಿ ಹೇಳಿ ಹಾರೈಸುವ°.
ಪುಸ್ತಕ ಓದಿ ಆತೋ?
Kanipurada ottinge Taranatha vorkadiya Ballirenayya patrike laika batta eddu.
ಅಪ್ಪಪ್ಪು .., ‘ಕಣಿಪುರ’ ಪಷ್ಟಿದ್ದು. ನವಗೆ ನಿನ್ನೆ ಅಂಚೆಲಿ ಬೈಂದು ಒಂದು ಪತ್ರಿಕೆ. ಮೇಗಂದ ಮೇಗೆ ನೋಡಿ ಆತಷ್ಟೇ. ಚಂದಾದಾರರಾಯೇಕು.
(ಅದರ್ಲಿ ವಾರ್ಷಿಕ, ಪೋಷಕ … ಇತ್ಯಾದಿ ಕಂಡತ್ತಷ್ಟೇ ವಿನಾ ಆಜೀವ ಕಂಡತ್ತಿಲ್ಲೆನ್ನೆ ಭಾವ. ಅಂತರ್ಜಾಲ ಮೂಲಕ ಪಾವತಿ ಮಾಡ್ಳೆ ಅವಕಾಶ ಇದ್ದೋ ಗೊಂತಾಯ್ದಿಲ್ಲೆನ್ನೆ)
‘ಕಣಿಪುರ’ ಬೆಳಗಲಿ.
ಮುಳಿಯ ಅಣ್ಣ ಮೆಚ್ಚಿಗ೦ಡು ಬರದವು ಹೇದರೆ, ಮತ್ತೆ ಕೇಳೆಕೊ?ಸ್ವತಃ ಯಕ್ಷಗಾನದ ಸರ್ವಾ೦ಗೀಣ ಕ್ಷೇತ್ರದ ಬಗಗೆ ಆಸಕ್ತಿ ಮಾ೦ತ್ರ ಅಲ್ಲ,ಅದರ ಬಗ್ಗೆ ಅಧಿಕೃತವಾಗಿ ಮಾತಾಡುವ ತಾಕತ್ತಿದ್ದವು.ನಿ೦ಗಳ ಮೆಚ್ಚಿಕೆಯ ಸಹೃದಯ ಮಾತುಗೊ ಓದಿ ತು೦ಬಾ ಕೊಶಿಯಾತು.“ಕವಿಗೆ ಕವಿ ಮುನಿವ೦.” ಹೇಳುವ ಈ ಹಳೆಯ ಮಾತು ಇ೦ದ್ರಾಣ ಯುಗಲ್ಲಿ ನಿ೦ಗಳಾ೦ಗಿರ್ತ ಸುಹೃತ್ಗಳಿ೦ದಾಗಿ “ಕವಿಗೆ ಕವಿ ಮಣಿವ೦.”ಹೇದು ಹೊಸ ವ್ಯಾಖ್ಯಾನವನ್ನೇ ಬರದತ್ತಿದ!ಪತ್ರಿಕೆಯವರ ಪರವಾಗಿ ನಿ೦ಗೊ೦ಗೆ ಹೃತ್ಪೂರ್ವಕ ಧನ್ಯವಾದ೦ಗೊ. ಹರೇ ರಾಮ; ನಮಸ್ತೇ.
kanipura va aanude odidde yakhagana bhutaaradane naagaaraadhane modalada naana vichaarangala barahang iddu enage ista aayidu
ಕಣಿಪುರ ತರಿಸುತ್ತಾ ಇದ್ದೆ. ಯಕ್ಷಗಾನದ ಬಗ್ಗೆ ಲೇಖನಂಗೊ ಇರುತ್ತು.ಲಾಯಿಕಿದ್ದು. ಮುದ್ರಣ ಇನ್ನೂ ಸುಧಾರಿಸೆಕ್ಕು.