Oppanna.com

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2

ಬರದೋರು :   ದೀಪಿಕಾ    on   22/02/2012    23 ಒಪ್ಪಂಗೊ

ದೀಪಿಕಾ

ಬೈಲಿಲಿ ದೀಪಿ ಅಕ್ಕ° ಮಂಕುತಿಮ್ಮನ ಕಗ್ಗದ ಎರಡನೆ ಕಂತು ಕೊಡ್ತಾ ಇದ್ದವು.
ಎಲ್ಲೋರೂ ಕೇಳಿ ಕೂಸಿನ ಪ್ರೋತ್ಸಾಹಿಸಿ.

ಸುರುವಿಂಗೆ ಕಲ್ತು ಹಾಡಿದ ಕಗ್ಗಂಗಳ ಎಲ್ಲೋರೂ ಇಷ್ಟ ಪಟ್ಟು ಇನ್ನಷ್ಟು ಬೈಲಿಲಿ ಬರೆಕ್ಕು ಹೇಳುವ ಆಶಯ ವ್ಯಕ್ತ ಪಡಿಸಿದ್ದಿ.
ಎಲ್ಲೋರ ಪ್ರೋತ್ಸಾಹ ಕಂಡು ತುಂಬಾ ಖುಷಿ ಆತು. ಕಗ್ಗವ ಎನ್ನಂದಾದಷ್ಟರ ಮಟ್ಟಿಂಗೆ ಬೈಲಿಲಿ ತಪ್ಪ ಪ್ರಯತ್ನ ಮಾಡ್ತೆ. ಜೀವನ ತತ್ತ್ವವ ನವಗೆ ಸರಳವಾಗಿ ಗುಂಡಜ್ಜ° ತೋರುಸಿ ಕೊಟ್ಟಿದವು.
ರತ್ನತುಲ್ಯವಾದ ಸಾವಿರದ ಕಗ್ಗಂಗಳಲ್ಲಿ ಆಯ್ದ ಐದು ಕಗ್ಗಂಗ:

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ।
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ।
ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಭೂಮಿಲಿ ಚಿಗುರಿಗೊಂಡಿಪ್ಪ ಹುಲ್ಲಿಂಗೆ ಹಸುರು ಬಣ್ಣ ಎಲ್ಲಿಂದ ಬಂತು? ಹುಲ್ಲಿನ ಬೇರಿಂದಲಾ? ಅದು ಹೊಂದಿಗೊಂಡಿಪ್ಪ ಮಣ್ಣಿಂದಲಾ? ಬೆಳಕು ಕೊಡುವ ಸೂರ್ಯಂದಲಾ, ತಂಪು ಕೊಡುವ ಚಂದ್ರಂದಲಾ? ನೀರಿಂದಲಾ? ಹಸುರಿನ ನೋಡಿ ತಣಿವ ನಿನ್ನ ಕಣ್ಣಿನ ಪುಣ್ಯಂದ ಆಗಿಕ್ಕೋ ಈ ಯಾವ ಒಂದು ಗುಣಂದ ಬಂದಿಕ್ಕು ಹಸುರು ಬಣ್ಣ? ಪ್ರಕೃತಿಲಿ ಹಸುರು ಗುಣ ಬಪ್ಪಲೆ ಕಾರಣ ಹಲವಿದ್ದು! ಒಂದೇ ಅಲ್ಲ!!

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ – ಮಂಕುತಿಮ್ಮ ॥
ಹಿಮಾಲಯ ಪರ್ವತ ಹೆರ ಹಿಮಶೀತಂದ ಕೂಡಿದ್ದರೂ ಕೂಡಾ ಅದರೊಳ ಚೈತನ್ಯ ಹೇಳ್ತ ಅಗ್ನಿಕಣಂಗ ಇದ್ದು. ಈ ಅಗ್ನಿ ಭೂಮಿಯ ಒಳವೇ ನಿಶ್ಚಲವಾಗಿಯೇ ಇದ್ದುಗೊಂಡು ಭೂಮಿಗೆ ಹಿತ ಕೊಡ್ತು. ಆ ಸಾತ್ತ್ವಿಕ ಗುಣ ಅತ್ಯಂತ ಗಂಭೀರವಾದ್ದದು. ಇದು ನವಗೆ ಒಂದು ವೇದನಿಧಿಯಾಗಿದ್ದು. ನಮ್ಮೊಳ ಇಪ್ಪ ಜ್ಞಾನನಿಧಿ ಕೂಡಾ ಈ ಅಗ್ನಿಯ ಹಾಂಗೆ ಶಾಂತವಾಗಿರೆಕ್ಕು, ಸಂದರ್ಭಕ್ಕೆ ಹಿಗ್ಗದ್ದೆ – ಕುಗ್ಗದ್ದೆ ಸಾತ್ತ್ವಿಕವಾಗಿ ಸಮಾನವಾಗಿರೆಕ್ಕು. ಅಂಬಗ ನಮ್ಮ ಜೀವನವೂ ಹಿಮಾಲಯದ ಮಹಿಮೆಯ ಹಾಂಗೆ ಉನ್ನತವೂ, ಗರಿಮೆಯೂ ಹೊಂದುಗು.

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥
ಆರು ಋತುಗಳ ಚಕ್ರ ತಿರುಗುತ್ತಾ ಇರ್ತು. ಕಾಲಯಮನ ಮನಸ್ಸೂ ಕೂಡಾ ಕರಗುಗು. ಸತ್ತು ಮಣ್ಣಾದವಂದ ಹೊಸತ್ತು ಹುಲ್ಲು ಚಿಗುರಿ ಬಂದು ಅಬ್ಬೆಭೂಮಿ ಗರ್ಭ ಧರಿಸುತ್ತು. ಸತ್ತ ಜೀವ ಪುನಾ ಜೀವ ತಾಳ್ತು. ಪ್ರಕೃತಿಲಿ ಇದೇ ಕೃಷಿ ನಿರಂತರವಾಗಿ ಸಹಜವಾಗಿಯೇ ಆವುತ್ತಾ ಇರುತ್ತಲ್ಲದಾ?

ಅಡಿ ಜಾರಿ ಬೀಳುವುದು, ತಡವಿಕೊ೦ಡೇಳುವುದು |
ಕಡುಬ ನು೦ಗುವುದು, ಕಹಿ ಮದ್ದ ಕುಡಿಯುವುದು ||
ದುಡುಕಿ ಮತಿ ತಪ್ಪುವುದು, ತಪ್ಪನೊಪ್ಪನ್ನುವುದು |
ಬದುಕೆ೦ಬುದಿದು ತಾನೆ -ಮ೦ಕುತಿಮ್ಮ ||
ಅಜೆ ತಪ್ಪಿ ಬೀಳುದು, ಬಿದ್ದಲ್ಲಿಂದ ಪರಡಿ ಏಳುದು ಹಾಂಗೆಯೇ ಮಿತಿಮೀರಿ ಕಡುಂಬು (ಕಡುಬು, ಕೊಟ್ಟಿಗೆ) ತಿಂದು ಆರೋಗ್ಯ ಹಾಳಪ್ಪಗ ಕೈಕ್ಕೆ ಮದ್ದು ತಿಂಬದು, ಬುದ್ಧಿಗೆಟ್ಟು ದುಡುಕಿ ಮಾತಾಡಿ, ತಪ್ಪು ತಿದ್ದಿಗೊಂಬದು. ನಮ್ಮ ಬದುಕ್ಕು ಹೇಳಿದರೆ ಹೀಂಗೇ ಅಲ್ಲದಾ?

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವ೦ತೆ ||
ಬಾಳನೀ ಜಗದ ಮ೦ತುವು ಕಡೆಯಲೇಳುವುದು |
ಆಳದಿ೦ದಾತ್ಮಮತಿ – ಮ೦ಕುತಿಮ್ಮ ||
ಹಾಲಿನ ಕಾಸಿ, ಹೆಪ್ಪು ಹಾಕಿ ಮೊಸರು ಮಾಡಿ ಕಡದಪ್ಪಗ ಮೊದಲು ಕಾಣದ್ದೇ ಇಪ್ಪ ಬೆಣ್ಣೆ ತೇಲಿ ಬಪ್ಪ ಹಾಂಗೆ, ನಮ್ಮ ಬದುಕ್ಕಿನ ಜಗತ್ತು ಹೇಳುವ ಮಂತು ಕಡದಪ್ಪಗ ನಮ್ಮ ಅಂತರಾಳಂದ ಆತ್ಮಮತಿ ಹೇಳುವ ಬೆಣ್ಣೆ ಹಗುರವಾಗಿ ತೇಲಿ ಬತ್ತು!!

ಧ್ವನಿ:

[audio:audio/mankutimmanakagga/Manku-Timmana-Kagga-2.mp3]

23 thoughts on “ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2

  1. ನಮ್ಮ ಬೈಲಿಲ್ಲಿ ಅರ್ಥವತ್ತಾದ ಬೇಸಾಯ ನೆಡೆತ್ತಾ ಇದ್ದು ಹೇಳ್ವದಕ್ಕೆ ಇದೇ ಜ್ವಲ೦ತ ಸಾಕ್ಷಿ. “ಬೆಳೆಯ ಸಿರಿ ಮೊಳಕೆಯಲ್ಲಿ” ನಿ೦ಗಳಾ೦ಗಿರ್ತವರಿ೦ದಲೇ ಒಳ್ದು. ಒಳ್ಳೆಯ ಸಾಧನೆ ಮಾಡ್ತಾ ಇದ್ದಿ. ತು೦ಬಾ ಸ೦ತೋಷ. ಇದರ ಬಿಡೇಡಿ. ಒಳ್ಳೆ ಪ್ರತಿಭೆ ಇದ್ದು. ಮು೦ದುವರಿಸಿ. ಸಾಧ್ಯವಾದರೆ “ಮರುಳು ಮುನಿಯನ ಕಗ್ಗ” ಕ್ಕೂ ಲಗ್ಗೆ ಹಾಕಿ. ನಿ೦ಗೊಗೆ ಹಾ೦ಗು ಮರೆಲಿ ನಿ೦ದೊ೦ಡು ಮೌನಲ್ಲಿ ನಿ೦ಗಳಾ೦ಗಿಪ್ಪ ಮೊಗ್ಗಗಳ ಅರಳುಸುವ ಕೆಲಸ ಮಾಡುವ ಶ್ರೀ ಅಕ್ಕಗುದೆ ಅಭಿನ೦ದನೆ ಹಾ೦ಗೂ ಧನ್ಯವಾದ೦ಗೊ.
    ಇತಿ ಶುಭಾಶಯ,
    ಉಡುಪುಮೂಲೆ ಅಪ್ಪಚ್ಹಿ.

  2. ನಮ್ಮ ಬೈಲಿಲ್ಲಿ ಅರ್ಥವತ್ತಾದ ಬೇಸಾಯ ನೆಡೆತ್ತಾ ಇದ್ದು ಹೇಳ್ವದಕ್ಕೆ ಇದೇ ಜ್ವಲ೦ತ ಸಾಕ್ಷಿ. “ಬೆಳೆಯ ಸಿರಿ ಮೊಳಕೆಯಲ್ಲಿ” ನಿ೦ಗಳಾ೦ಗಿರ್ತವರಿ೦ದಲೇ ಒಳ್ದು. ಒಳ್ಳೆಯ ಸಾಧನೆ ಮಾಡ್ತಾ ಇದ್ದಿ. ತು೦ಬಾ ಸ೦ತೋಷ. ಇದರ ಬಿಡೇಡಿ. ಒಳ್ಳೆ ಪ್ರತಿಭೆ ಇದ್ದು. ಮು೦ದುವರಿಸಿ. ಸಾಧ್ಯವಾದರೆ “ಮರುಳು ಮುನಿಯನ ಕಗ್ಗ” ಕ್ಕೂ ಲಗ್ಗೆ ಹಾಕಿ. ನಿ೦ಗೊಗೆ ಹಾ೦ಗು ಮರೆಲಿ ನಿ೦ದೊ೦ಡು ಮೌನಲ್ಲಿ ನಿ೦ಗಳಾ೦ಗಿಪ್ಪ ಮೊಗ್ಗಗಳ ಅರಳುಸುವ ಕೆಲಸ ಮಾಡುವ ಶ್ರೀ ಅಕ್ಕಗುದೆ ಅಭಿನ೦ದನನೆ ಹಾ೦ಗೂ ಧನ್ಯವಾದ೦ಗೊ.
    ಇತಿ ಶುಭಾಶಯ,
    ಉಡುಪುಮೂಲೆ ಅಪ್ಪಚ್ಹಿ.

  3. “ಮ೦ಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ” ಈ ಮಾತನ್ನ ಹೇಳ್ದವು ಶ್ರೀ ಸ್ವಾಮಿ ಬ್ರಹ್ಮಾನ೦ದಜಿ. ಇದು ಕನ್ನಡ ಆಧ್ಯಾತ್ಮದ ಮೇರು ಕೃತಿ, ಇದು ಕನ್ನಡದಲ್ಲಿ ಪಡೆಯಕ್ಕೆ ನ೦ಗ್ಳು ಅದೃಷ್ಟವ೦ತ್ರು. ಇವತ್ತು ಡಿವೀಜಿ ಎನ್ನ ಪ್ರಾಥಸ್ಮರಣೀಯರೂ ಹೌದು. ಎನ್ನ ಜೀವನ ಪಥದಲ್ಲಿ ಸೋಲಿನ ಹಾದಿಗೆ ಹೋದಾಗಲೆಲ್ಲಾ ಮತ್ತೆ ಗೆಲುವಿನ ಹಾದಿ ತೋರ್ಸಿದ್ದು ಇದೇ ಮ೦ಕುತಿಮ್ಮನ ಕಗ್ಗ. ಎನಗೆ ಜೀವನದ ಆಳವನ್ನು ಸಣ್ಣ ವಯಸ್ಸಿನಲ್ಲೇ ತೋರ್ಸಿದ್ದು ಕೂಡ ಇದೇ ಮ೦ಕುತಿಮ್ಮನ ಕಗ್ಗ. ಅ೦ಥಾ ಶಬ್ದಮಿತಿಗೆ ನಿಲುಕದ ಕೃತಿಗೆ ಶತ ಶತ ಪ್ರಣಾಮಗಳು. ಅದನ್ನ ಮತ್ತೆ ಒಪ್ಪಣ್ಣನ ಬೈಲಲ್ಲಿ ಕಾಣ್ಸಿದ್ದಕ್ಕೆ ನಿ೦ಗ್ಳಿಗೆ ಧನ್ಯವಾದ.
    ನಿ೦ಗ್ಳು ಮೊದಲ ಪ್ಯಾರಾದಲ್ಲೇ ಹೇಳಿದ ಹಾ೦ಗೆ “ರತ್ನತುಲ್ಯವಾದ ಸಾವಿರದ ಕಗ್ಗಂಗಳಲ್ಲಿ ಆಯ್ದ ಐದು ಕಗ್ಗಂಗ” ವಾವ್! ಅದಷ್ಟೇ ಸಾಕು ಇದರ ಮೌಲ್ಯದ ಆಳವನ್ನ ಹೇಳಕ್ಕೆ. ಇ೦ಥಾ ಅಧ್ಬುತ ಪದ್ಯಗಳನ್ನ ಇಷ್ಟು ಸಣ್ಣ ಹೆರೆಯದಾಗೇ ಓದಿ ಅರ್ಥ ಮಾಡ್ಕ೦ಡು ಅದನ್ನ ಸರಾಗವಾಗಿ ಸುಶ್ರಾವ್ಯವಾಗಿ ಹಾಡಕ್ಕೆ ಉಚ್ಛ ಸ೦ಸ್ಕಾರ ಬೇಕು, ನಿ೦ಗಳ ಅಪ್ಪ-ಅಮ್ಮ ರಾಶಿ ಪುಣ್ಯವ೦ತರು. ಅದರ ಅರ್ಥವನ್ನೂ ಹವಿಗನ್ನಡದಲ್ಲೇ ಬರೆದದ್ದು ಎ೦ಗಳ ಅದೃಷ್ಟ. ಇವತ್ತಿನ ಪಾಶ್ಚಿಮಾತ್ಯ ಪೋಷ್ ಸ೦ಸ್ಕೃತಿಯ ಕತ್ತಲಲ್ಲಿ ಕರಗಿ ಹೋಗ್ತಾ ಇಪ್ಪ ನಮ್ಮ ಸ೦ಸ್ಕೃತಿಗೆ ನಿ೦ಗ್ಳ೦ತಾ ಪ್ರಕಾಶಮಾನ ದೀಪಗಳ ಅಗತ್ಯ ಇದ್ದು.
    ಮೊದ್ಲು ಪದ್ಯವನ್ನ ಧ್ವನಿಯಲ್ಲಿ ಕೇಳ್ದಾಗ ರತ್ನಮಾಲಾ ಹಾಡಿದ್ದಕ್ಕೆ ನಿ೦ಗ ಅರ್ಥ ಬರೆದದ್ಧು ಅ೦ತ ಅ೦ದು ಕೊ೦ಡಿದ್ದಿ. ನ೦ತ್ರ ನಿ೦ಗ್ಳ ವ್ಯಗ್ತಿ ವಿವರ ನೋಡಿದ್ಮೇಲೆ ಗೊತ್ತಾಗಿ ರಾಶಿ ಕೊಶಿ ಆತು. ಬವುಷ ರತ್ನಮಾಲಾ ಪ್ರಕಾಶ್ ಇದನ್ನ ಕೇಳಿಶ್ಕೊ೦ಡ್ರೆ ಅಸೂಯೆ ಪಡಲು ಸಾಧ್ಯತೆ ಇದ್ದು! ನಿ೦ಗಳ ಶಾರೀರಕ್ಕೆ ಮಾಧುರ್ಯವಷ್ಟೇ ಅಲ್ಲ, ಗಾ೦ಭೀರ್ಯ-ಆಳ ಇದ್ದು. ಕಷ್ಟ ಆದ್ರೂ ನಿಲ್ಸಡಿ, ಅಭ್ಯಾಸ ಮಾಡಿ ’ಮತ್ತೊ೦ದು ರತ್ನಮಾಲ” ಹವಿಕ೦ಗಳ ಮನೆಯಿ೦ದ ಹುಟ್ಟಿಬರ್ಲಿ. ಇವತ್ತಿನ ಎಲೆಕ್ಟ್ರಾನಿಕ್ ಮಾಧ್ಯಮದ ಸುನಾಮಿಗೆ ಕೊಚ್ಚಿ ಹೋಗ್ತಿಪ್ಪ ವಿದ್ಯಾರ್ಥಿಗಳಿಗೆ, ಎ೦ಜಿನಿಯರಿ೦ಗ್ ಸೀಟು ಸಿಕ್ಕರೇ ನೆಲದಿ೦ದ ಎರೆಡಡಿ ಮೇಲೆ ನಡೆವ ಮಾಡರ್ನ ಮಕ್ಕಳಿಗೆ ನಿ೦ಗ್ಳು ಒ೦ದು ಪಾಠ. ಎ೦ಜಿನಿಯರಿ೦ಗ್, ಸ೦ಗೀತ, ನೃತ್ಯ ಇದ್ನಲ್ಲಾ ಬೇಲೆನ್ಸ್ ಮಾಡ್ತಿಪ್ಪದು ನಿಜಕ್ಕೂ ಭೇಶ್! ನಿ೦ಗ್ಳಿಗೆ, ನಿ೦ಗ್ಳ ಬೆನ್ನ ಹಿ೦ದೆ ನಿ೦ತಿಪ್ಪವುಕ್ಕೆ ಅಭಿನ೦ದನೆ, ನಮನಗಳು.

    1. ನಿ೦ಗೊಳ ಪ್ರೋತ್ಸಾಹದ ಒಪ್ಪವ ನೋಡಿ ತು೦ಬಾ ಖುಶಿ ಆತು.ಧನ್ಯವಾದ.
      ಆನು ಹಾಡಿ ಕಳ್ಸಿದ ಕಗ್ಗ೦ಗೊಕ್ಕೆ ಚೆ೦ದಕ್ಕೆ ಅರ್ಥ ಬರದು ಕೊಟ್ಟವ್ವು ಶ್ರೀಅತ್ತೆ.
      ಹಾ೦ಗಾಗಿ ಶ್ರೀ ಅತ್ತೆ ಮತ್ತೆ ಒಪ್ಪಣ್ಣ ಮಾವ೦ಗು ಎನ್ನ ಧನ್ಯವಾದ.

  4. ಲಾಯ್ಕಾ ಆಯಿದು ದೀಪಿಕಾ…ಒಳ್ಳೆ ಪ್ರಯತ್ನ
    ಅಭಿನಂದನೆಗೋ…

  5. ದೀಪಿಕಾನ ಸ್ವರಲ್ಲಿ ಮಂಕುತಿಮ್ಮನ ಪದಂಗೊ ಚೆಂದಕೆ ಬಯಿಂದು. ಉತ್ತಮ ರಾಗ ಸಂಯೋಜನೆ, ಅರ್ಥವನ್ನೂ ನೋಡ್ತಾ ಕೇಳಲೆ ಲಾಯಕಿದ್ದು. ಪ್ರತಿವಾರವುದೆ ಬೈಲಿಂಗೆ ಹೀಂಗಿಪ್ಪದು ಬತ್ತಾ ಇರಳಿ.

  6. ಕೇಳಿ ಪ್ರೊತ್ಸಾಹದ ಒಪ್ಪ ಕೊಟ್ಟ ನಿ೦ಗೊಗೆ ಧನ್ಯವಾದ ಮಾವ.

  7. ಒಳ್ಳೆ ಭಾವಂದ ಸುಶ್ರಾವ್ಯವಾಗಿ ಹಾಡಿದ್ದು ಕೇಳಲೆ ಕೊಶೀ ಆವ್ತು.
    ತತ್ವ ಪದಂಗೊ ಹೀಂಗೆ ಬತ್ತಾ ಇರಳಿ.

  8. ವಾಹ್ ಅದ್ಭುತ ದೀಪಿ ಅಕ್ಕ! ಐದ್ನೇ ಕಗ್ಗ ಅಂತೂ ಸೂಪರ್‍! ತುಂಬಾ ತುಂಬಾ ಧನ್ಯವಾದಂಗೊ.

  9. ಬೈಲಿಂಗೆ ಇನ್ನೊಂದು “ಭಗವದ್ಗೀತೆ” ಬತ್ತಾ ಇಪ್ಪದು ಕೊಶಿ ಆತು.

    1. ನಿ೦ಗೊಗೆ ಕೊಶಿ ಆದ್ದರ ನೋಡಿ ಎನಗೂ ಕೊಶಿ ಆತುಃ-)

  10. ಬೈಲಿನ ಜ್ಹಾನ ದೀಪವ ಬೆಳಗುತ್ತಾ ಇಪ್ಪ ದೀಪಿಗೆ ಹಾಂಗೂ ಕಾರಣರಾದ ಎಲ್ಲೋರಿಂಗೂ ಅನಂತ ಧನ್ಯವಾದ…

    1. ಓದಿ,ಕೇಳಿ ಪ್ರೊತ್ಸಾಹಿಸಿದ ನಿ೦ಗೊಗೂ ಧನ್ಯವಾದ.

  11. ದೀಪಿಅಕ್ಕ.! ಅದ್ಬುತ.. ಬಾರಿಲಾಯಕೆ ರಾಗಲ್ಲಿ ಹಾಡು ಹೇಳಿ, ಕಗ್ಗವ ಅರ್ಥ ಸಮೇತ ಬದ್ದು ಕ೦ಡು ಬಾರಿ ಕೊಶಿಯಾತು.
    ಧನ್ಯವಾದಂಗೊ- ದೀಪಿಅಕ್ಕ೦ಗು,
    ಲಾಯಕೆ ಅರ್ಥ ಬರದು ಕೊಟ್ಟ ಶ್ರೀಅಕ್ಕ೦ಗು. 🙂

    1. ಧನ್ಯವಾದ..
      ಅಪ್ಪು ಅರ್ಥ ಬರದು ಕೊಟ್ಟ ಶ್ರೀಅಕ್ಕ೦ಗೆ ಎನ್ನ ಪರವಾಗಿಯೂ ಧನ್ಯವಾದ 🙂

  12. ಲಾಯಕ ಆಯ್ದು ಅಕ್ಕೊ.
    ಮಂಕುತಿಮ್ಮನ ಕಗ್ಗ ನಮ್ಮ ಬದುಕ್ಕಿನ ಜಗತ್ತಿನ ಒಳ್ಳೆ ತತ್ವ ಮತ್ತು ಸಾರವ ಸಾರುತ್ತು ಮತ್ತು ನಿಂಗಳ ಸುಶ್ರಾವ್ಯ ಧ್ವನಿ ಸಹಿತ ಶುದ್ದಿ ವಿವರಣೆ ಓದುವಾಗ ಹೃದಯಸ್ಪರ್ಶಿ ಆವ್ತು ಎಂಬುದಾಗಿಯೂ., ಧಾರವಾಹೀಯಾಗಿ ಇನ್ನೂ ಬರುತ್ತಾ ಇರಲಿ ಹೇದು ಹೇಳಿತ್ತು -‘ಚೆನ್ನೈವಾಣಿ’

    1. ನಿ೦ಗೊಳ ಪ್ರೋತ್ಸಾಹಕರ ಒಪ್ಪಕ್ಕೆ ಧನ್ಯವಾದ ಮಾವ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×