ಪುಸ್ತಕ ಪರಿಚಯ
ಹವಿಗನ್ನಡ ಕತೆಗಳ ಸುರಗಿ, ಸಂಪಿಗೆ, ಕೇದಗೆ.
ಪ್ರಧಾನ ಸಂಪಾದಕರು: ಡಾ.ಹರಿಕೃಷ್ಣ ಭರಣ್ಯ.
ಸಂಪಾದಕರು ಡಾ.ನಾ.ಮೊಗಸಾಲೆ
–ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಸಣ್ಣಾದಿಪ್ಪಗಂದಲೇ ಅಜ್ಜ , ಅಜ್ಜಿಯಕ್ಕಳಿಂದ ಕಥೆ ಕೇಳಿಗೊಂಡು ಬೆಳವದು ಇಪ್ಪುದೇ. ಅವು ರಾಮಾಯಣ ಮಹಾಭಾರತ ವ ನಮ್ಮ ಹವ್ಯಕ ಭಾಷೆಲ್ಲೇ ಹೇಳುಗು. ಹಾಂಗಾಗಿ ನವಗೆ ಹವ್ಯಕಲ್ಲಿ ಕಥೆ ಕೇಳುದು ಹೇಳುದು ಹೊಸತಲ್ಲ ಅಲ್ಲದಾ?
ಆದರೆ ಕಥೆ ಪುಸ್ತಕ ಹವ್ಯಕಲ್ಲಿ ! ಅಪ್ಪು ಈ ಸರ್ತಿ ಹವ್ಯಕ ಕಥೆ ಓದುವವಕ್ಕೆ ಒಂದು ಬಂಪರ್ ಉಡುಗೊರೆ ಇದ್ದು ಗೊತ್ತಿದ್ದಾ? ಹಿರಿಯರಾದ ಡಾ.ನಾ.ಮೊಗಸಾಲೆಯವುದೇ , ಡಾ.ಹರಿಕೃಷ್ಣ ಭರಣ್ಯ ಅವುದೇ ಯೋಚನೆ ಮಾಡಿ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದವು. ಅಲ್ಲಿ ಇಲ್ಲಿ ಹರಡಿಕೊಂಡಿಪ್ಪ ಎಲ್ಲಾ ಹವ್ಯಕರ ಮಾತಾಡಿಸಿ ಒಂದೊಂದು ಕಥೆ ಬರವಲೆ ಹೇಳಿದವು. ಪ್ರಾಂತ್ಯ ಬದಲಾದ ಹಾಂಗೆ ಭಾಷೆ ನಮೂನೆಯೂ ಬೇರೆ ಬೇರೆ ಇರ್ತು. ಎಲ್ಲರೂ ಖುಷಿಲಿ ಬರದವು ಕಳುಹಿಸಿದವು. ಹೀಂಗೆ ಬಂದ ಕಥೆಗೊ ಗ್ರಹಿಸಿದ್ದಕ್ಕಿಂತ ಜಾಸ್ತಿ ಆತು. ಹಾಂಗಾಗಿ ಒಂದೇ ಪುಸ್ತಕ ಮಾಡುವ ಬದಲು ಮೂರು ಮಾಡುವ ಯೋಚನೆ ಬಂತು. ಇದು ಸುರಗಿ, ಸಂಪಿಗೆ, ಕೇದಿಗೆ ಕಥಾಸಂಪುಟ ಹುಟ್ಟಿಕೊಂಡ ಕಥೆ.
ಈ ಮೂರು ಕಥೆ ಪುಸ್ತಕಲ್ಲಿ ಹಲವು ದೊಡ್ಡ ಕಥೆಗಾರರೊಟ್ಟಿಗೆ ಸಣ್ಣ ಲೇಖಕರೂ ಬರದ್ದವು. ಸುರು ಕಥೆ ಬರದವು ಇದ್ದವು. ಬೇರೆ ಭಾಷೆಗಳಲ್ಲಿ ಪ್ರಸಿದ್ಧರಾಗಿದ್ದರೂ ಹವ್ಯಕಲ್ಲಿ ಇದು ಮೊದಲ ಪ್ರಯತ್ನ ಹೇಳಿದವೂ ಇದ್ದವು.
ಇಲ್ಲಿನ ಕಥಾ ವಸ್ತುಗಳ ನೋಡಿರೆ ನಮ್ಮ ಮನೆಯ ಕಥೆಯೇ ಹೇಳುವ ಹಾಂಗಾವುತು. ಒಟ್ಟು ೧೫೦ ಕಥೆಗೊ ಇದ್ದು. ನೂರೈವತ್ತು ಕಥೆಗಳ ಪಾಲು ಮಾಡಿ ಮೂರು ಪುಸ್ತಕ ಮಾಡಿದ್ದವು.
ಓದುವ ಮನಸಿಗೆ ಒಳ್ಳೆಯ ಔತಣ ಈ ಹವಿಗನ್ನಡ ಕತೆ ಪುಸ್ತಕ. ಎಲ್ಲರೂ ತಪ್ಪದ್ದೇ ಓದಿ ಒಂದರಿ ಆತಾ
ಈ ಪುಸ್ತಕಂಗೊ ಮಂಗಳೂರಿಲ್ಲಿ ದೃಷ್ಟಿ ಓಪ್ಟಿಕಲ್ಸ್ ಇವರಲ್ಲಿ ಸಿಕ್ಕುತ್ತು.
ವಿಳಾಸ: ಗೀತಾ ಸ್ಟೋರ್ಸ್ ಬಿಲ್ಡಿಂಗ್, ಕಂಕನಾಡಿ ಬೆಂದೂರ್ ವೆಲ್, ಮಂಗಳೂರು
ಸಂಪರ್ಕಕ್ಕೆ:- ಕಿಶೋರ್ ವೈ, 9480004549/ 94481424922
1. ಸುರಗಿ, 36 ಕತೆಗೊ, ಬೆಲೆ ರೂ 400/=
2. ಸಂಪಿಗೆ, 52 ಕತೆಗೊ, ಬೆಲೆ ರೂ 400/=
3. ಕೇದಿಗೆ, 64 ಕಎಗೊ, ಬೆಲೆ ರೂ 480/=
ಮೂರು ಪುಸ್ತಕಂಗಳ ಒಟ್ಟಿಂಗೆ ತೆಕ್ಕೊಳ್ತವಕ್ಕೆ ರಿಯಾಯತಿಲಿ ಕೆಲವೇ ದಿನ ರೂ 1000/= ಮಾತ್ರ.
–ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಳಾಸ
ಅಶ್ವಿನಿ ಕೆ.ಎನ್
ಶಾರದಾ ನಿಲಯ
ಬಾಳಿಲ
ಸುಳ್ಯ ತಾಲ್ಲೂಕು
೫೭೪೨೧೨
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021