Latest posts by ಪೆಂಗಣ್ಣ° (see all)
- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಬೆಂಗಳೂರು: ನಮ್ಮ ಅಬ್ಬೆ ಭಾಶಒಪ್ಪಣ್ಣ ನೆರಕರೆ ಪ್ರತಿಷ್ಠಾನ ಪ್ರಕಟ ಮಾಡಿದ, ಒಪ್ಪಣ್ಣ ಬೈಲಿಲಿ ಹೇಳಿದ ಶುದ್ದಿಗಳ ಸಂಗ್ರಹ ಒಪ್ಪಣ್ಣನ ಒಪ್ಪಂಗೊ-ಒಂದೆಲಗ°, ಇದರೊಟ್ಟಿಂಗೆ ನಮ್ಮ ಚೆನ್ನೈ ಭಾವ ಬೈಲಿಲಿ ಹೇಳಿದ ’ಹದಿನಾರು ಸಂಸ್ಕಾರಂಗೊ’ ಪುಸ್ತಕಂಗಳ ನಮ್ಮ ಗುರುಗ ಗಿರಿನಗರದ ಶ್ರಿರಾಮಾಶ್ರಮದಲ್ಲಿ ಶನಿವಾರ ಲೋಕಾರ್ಪಣೆ ಮಾಡಿದವು. ಇದೇ ಸಂದರ್ಭದಲ್ಲಿ ’ಬೈಲು ಮುದ್ರೆ’ಯನ್ನೂ ಬಿಡುಗಡೆ ಮಾಡಿ ಗುರುಗೊ ಆಶೀರ್ವಾದ ಮಾಡಿದವು.
ಕಾರ್ಯಕ್ರಮದ ಪೂರ್ತಿ ವರದಿ ಸದ್ಯಲ್ಲೇ ಬತ್ತು.
ಪುಸ್ತಕದ ವಿವರಂಗ:
೧. ಒಪ್ಪಣ್ಣನ ಒಪ್ಪಂಗೊ-ಒಂದೆಲಗ°
ಮುಖಬೆಲೆ: ೧೩೦ ರೂಪಾಯಿ
ಲೇಖಕ: ಒಪ್ಪಣ್ಣ
೨. ಬೋಧಾಯನೀಯ ಹದಿನಾರು ಸಂಸ್ಕಾರಂಗೊ ಯಾವದು? ಹೇಂಗೆ? ಎಂತಕೆ?
ಮುಖಬೆಲೆ: ೬೦ ರೂಪಾಯಿ
ಲೇಖಕ: ಚೆನ್ನೈ ಭಾವ°
ಎರಡು ಪುಸ್ತಕಂಗಳುದೇ ಲಾಯ್ಕ ಬಯಿಂದು. ಮುಖಪುಟ ವಿನ್ಯಾಸ, ಕಾಗದ, ಮುದ್ರಣ, ಬೈಂಡಿಂಗ್ ಎಲ್ಲದರಲ್ಲೂ ಅಚ್ಚುಕಟ್ಟು. ಒಟ್ಟಾರೆ ಬೈಲಿನ ಪುಸ್ತಕಂಗೊ ಪ್ರಕಟವಾದ್ದದು ತುಂಬ ಕೊಶಿ ಆತು.
ಯೇನ್ಲಾ ಬರೋಡೂಂದು ಗ್ರೇತೊಂದಿತ್ತೆ… ಆಂಡ ಬಾಣಾರು ಮರ್ದ್ ಬುಡ್ಯೆರೆ ಯೆಡ್ಡೆ ಬೊಲಿಕ್ಕಿರಿ ಪಂಡೆರ್… ಅಂಚಾದ್ ಬರ್ರೆ ಆಯಿಜ್ಜಿ…. ಅಣ್ಣೇರ್ನಕ್ಲೇ… ಗುರುಕ್ಕುಲು ಕೇಂಡೆರಾ ಎನಾನ್ …?????
ಅಂದ್.. ಅಂದ್. ಪುರುಸೊತ್ ಆನಗ ಒರ ಬರಾಡ್ ಪಂಡೇರ್.
ಶುಭಾಶಯ೦ಗೊ..
ಪುಸ್ತಕ ತುಂಬಾ ಜನ ತೆಕ್ಕೊಂಡವು, ತೆಕ್ಕೊತ್ತಾ ಇದ್ದವು ಹೇಳಿ ಹೇಳುಲೆ ತುಂಬಾ ಖುಷಿ ಆವ್ತಾ ಇದ್ದು.
ಬೈಲಿಲಿ ತೆರೆಮರೆಲಿ ಇದ್ದರೂ ಕೌಂಟರ್ಲಿ ಸಕ್ರಿಯವಾಗಿ ಚುರುಕಾಗಿ ಇತ್ತಿದ್ದಿ. ರಾಧಕ್ಕ ಉತ್ಸಾಹೀ ಸಕ್ರಿಯ ಕಾರ್ಯಕರ್ತೆ ಹೇಳ್ವದು, ಅದೇ ರೀತಿ ಎಡೆಪ್ಪಾಡಿ ಭಾವನ ಉತ್ಕೃಷ್ಟ ಸೇವೆಯನ್ನೂ ಶ್ರೀ ಸಂಸ್ಥಾನವೇ ಬೈಲ ಸಭೆಲಿ ಪ್ರಸ್ತಾಪಿಸಿದ್ದು ಗಮನಾರ್ಹ. ಹರೇ ರಾಮ.
|| ಹವಿಗನ್ನಡ೦ ಚಿರ೦ ಬಾಳ್ಗೆ; ಗೆಲ್ಗೆ! ||
ಆತ್ಮೀಯ ಒಪ್ಪಣ್ಣಣ್ಣ೦ಗೆ ನಮಸ್ಕಾರ. ಹವ್ಯಕ ಪುಸ್ತಕಗಳ ನಮ್ಮ ಗುರುಗೊ ಲೋಕಾರ್ಪಣೆ ಮಾಡಿದ ಸುದ್ದಿ ಓದಿ ತು೦ಬಾ ಸ೦ತೋಷಾತು. ಆ ದಿನ ಎನಗೆ ನಿ೦ಗಳೊಟ್ಟಿ೦ಗೆ ಇಪ್ಪಲಾಯಿದಿಲ್ಲನ್ನೆ ಹೇಳಿ ಬೇಜಾರಾತು.ನಮ್ಮ ನೆರೆಕರೆಯವರೆಲ್ಲ ಹತ್ತರ೦ದ ಕ೦ಡು ಮಾತನಾಡುವ ಅವಕಾಶ ತಪ್ಪಿ ಹೋತನ್ನೇ ಹೇಳ್ವದೆ ಸ೦ಕಟ;ಎ೦ತ ಮಾಡ್ಲಿ? ಆ ಭಾಗ್ಯ ಎನ್ನ ಪಾಲಿ೦ಗೆ ಇಲ್ಲೆ ಆದಿಕ್ಕು.”ಹಬ್ಬ ತಪ್ಪಿರು, ಹೋಳಿಗೆ ತಪ್ಪ.” ಹೇದು ಗಾದೆಯಿದ್ದನ್ನೆ.ಎನ್ನ ಮಟ್ಟಿ೦ಗೆ ಆಎರಡು ಪುಸ್ತಕ೦ಗಳುದೆ ” ಹಬ್ಬ ಹೋಳಿಗೆ” ಯಿ೦ದಲೂ ಹೆಚ್ಚಿನದು ಹೇಳಿ ತಿಳ್ಕೊ೦ಡು, ಅವೆರಡರ ಒ೦ದೊ೦ದು ಪ್ರತಿಗಳ ಎನಗೆ ಕಾದಿರಿಸೆಕಾಗಿ ವಿನ೦ತಿ.ನಮ್ಮ ಭಾಷೆ, ಸ೦ಸ್ಕೃತಿಗಳ ಉಳ್ಶಿ ಬೆಳಶುವ ಸಾರ್ಥಕ ಅಭಿಯಾನಲ್ಲಿ ಅಳಿಲ (ಕು೦ಡೇಚನ) ಸೇವೆ ಮಾಡ್ಲೆ ಎನಗೆ ಎಡೆ ಮಾಡಿ ಕೊಟ್ಟ ನಮ್ಮ ಒಪ್ಪಣ್ಣ ಪ್ರತಿಷ್ಠಾನದವಕ್ಕೆಲ್ಲರಿ೦ಗೂ ಹೃತ್ಪೂರ್ವಕೆ ಅಭಿವ೦ದನೆ ಹಾ೦ಗೂ ಅಭಿವ೦ದನಗೊ. ನಮಸ್ತೇ. ಮತ್ತೆ, ಮತ್ತೆ…..ಕಾ೦ಬೊ. ಜೈ! ಹವಿಗನ್ನಡ!
ಕಾರ್ಯಕ್ರಮ ಒಪ್ಪಕ್ಕೆ ಕಳುದ್ದು ಭಾರಿ ಸಂತೋಷದ ವಿಷಯ..
namma bayalina oppathammana ogumigilu pusthaka shri gurugo olapumaadi bidugade maadiddu bidugade oppaane santhosha aathu
ಪುಸ್ತಕಂಗೊ ಎಲ್ಲಿ ಸಿಕ್ಕುತ್ತು?ಎನಗೊಂದು ಒಪ್ಪಣ್ಣನ ಒಪ್ಪಂಗೊ ಬೇಕು.
ಕಾರ್ಯಕ್ರಮ ರಾಶೀ ಚೊಲೋ ಆತು. ಗುರುಗಳ ಆಶೀರ್ವಾದ, ಬೈಲಿನವರ ಮುಖತಹ ಭೇಟಿ ಮಾಡಿದ ಆನ೦ದಕ್ಕೆ ಆಹಾ!!! ಹೇಳ್ಳಕ್ಕು ಅಷ್ಟೇ. ಹಿ೦ಗೇ ಹಲವಾರು ಕಾರ್ಯಕ್ರಮ ನಡೆವ೦ಗೆ ಆಗಲಿ ಹೇಳಿ ಹಾರೈಕೆ.
ಒಹೋಯ್ ಪೆ೦ಗಣ್ಣಾ.. ಪುಸ್ತಕದ ವಿವರದಲ್ಲಿ ಒ೦ದು ಬಿಟ್ಟೋಯ್ದು. ಎರಡೂ ಪುಸ್ತಕ ಒಟ್ಟಿಗೆ ತಗ೦ಡ್ರೆ ಬರೀ ರೂ.೧೫೦ ಮಾತ್ರ. 🙂
ಮಾನೀರ್ ಭಾವಾ,
ಅದು ನಿನ್ನೆ,ಇ೦ದು ಎರಡು ದಿನ ಮಾ೦ತ್ರ.
ನಾಳೆ೦ದ ಮುಖಬೆಲೆಲಿ ಪುಸ್ತಕ ಪಡದು ಓದಿ ಹವ್ಯಕ ಸಾಹಿತ್ಯದ ಬೆಳವಣಿಗೆಗೆ ಒಪ್ಪಣ್ಣನ ಬೈಲು ಮಾಡ್ತಾ ಇಪ್ಪ ಈ ಪ್ರಯತ್ನಲ್ಲಿ ಎಲ್ಲೋರು ಕೈ ಜೋಡುಸೆಕ್ಕು ಹೇಳಿ ಎಲ್ಲಾ ಸಾಹಿತ್ಯಪ್ರೇಮಿಗಳ ಹತ್ರೆ ಕೇಳಿಗೊ೦ಬೊದು.
ಓಹ್ ಸರಿ ರಘು ಭಾವಯ್ಯಾ. ಗೊತ್ತಿಲ್ಯಾಗಿತ್ತು. ಎರಡು ಪುಸ್ತಕವೂ ಚೆ೦ದ ಬ೦ಜು. ಒ೦ದೆಲಗ ಪುಸ್ತಕವ೦ತೂ ಎಲ್ಲಿ೦ದ ಬೇಕಾದರೂ ಶುರು ಮಾಡ್ಲಕ್ಕು. ಚೆನ್ನೈ ಭಾವನ ಪುಸ್ತಕ ಸುರುವಿನಿ೦ದ ಶುರು ಮಾಡಿದ್ದೆ. 🙂 ಸಾವ್ಕಾಶ ಓದ್ತಾ ಇದ್ದೆ.
ಹರೇ ರಾಮ । ಅವಿಸ್ಮರಣೀಯ ದಿನ , ಸಂದರ್ಭ ।
ಹೇ೦ಗಾತು ಕಾರ್ಯಕ್ರಮ ಎಲ್ಲಾ? ಬಪ್ಪಲಾಯಿದಿಲ್ಲೆ, ಮಳೆ೦ದಾಗಿ ಚೆ ಚೆ ಒೞೆ ಅವಕಾಶ ಮಿಸ್ ಆತು.