Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅನಂತಶಾಸ್ತ್ರಂ ಬಹುಲಾಶ್ಚ ವಿದ್ಯಾ
ಹ್ಯಲ್ಪಶ್ಚ ಕಾಲೋ ಬಹುವಿಘ್ನತಾ ಚ।
ಯತ್ಸಾರಭೂತಂ ತದುಪಾಸನೀಯಂ
ಹಂಸೈರ್ಯಥಾ ಕ್ಷೀರಮಿವಾಂಬುಮಧ್ಯಾತ್।।
ಅನ್ವಯ:
ಅನಂತಶಾಸ್ತ್ರಮ್ (ಅಸ್ತಿ) ವಿದ್ಯಾಃ ಬಹುಲಾಃ (ಸಂತಿ)
ಕಾಲಃ ಹಿ ಅಲ್ಪಃ (ಅಸ್ತಿ) ಬಹುವಿಘ್ನತಾ ಚ (ಅಸ್ತಿ)।
(ತಸ್ಮಾತ್) ಅಂಬುಮಧ್ಯಾತ್ ಹಂಸೈಃ ಯಥಾ ಕ್ಷೀರಂ (ಉಪಾಸ್ಯತೇ ತಥಾ)
ಸಾರಭೂತಂ ಯತ್ (ಅಸ್ತಿ ತತ್) ಉಪಾಸನೀಯಮ್।
ಅರ್ಥ:
ಶಾಸ್ತ್ರಂಗೊಕ್ಕೆ ಕೊನೆಯೇ ಇಲ್ಲೆ, ವಿದ್ಯೆಗೊಕ್ಕೆ ಲೆಕ್ಕವೇ ಇಲ್ಲೆ.
ಆದರೆ ಕಲಿವಲೆ ಇಪ್ಪ ಸಮಯ ಮಾತ್ರ ಅತ್ಯಲ್ಟ. ಜತೆಗೆ ಎಷ್ಟೋ ಎಷ್ಟೋ ವಿಘ್ನಂಗಳುದೇ!!
ಹಾಂಗಾಗಿ ಹಂಸಂಗೊ ಹಾಲುನೀರಿಂದ ಹಾಲಿನ ಮಾತ್ರ ಬೇರ್ಪಡಿಸಿ ಕುಡಿವ ಹಾಂಗೆ ಶಾಸ್ತ್ರಂಗಳಂದ ವಿದ್ಯೆಗಳಂದ ಒಳ್ಳೆಯ ಸಾರ ಮಾತ್ರ ತೆಕ್ಕೊಳ್ಳೆಕ್ಕು .
ನಮ್ಮ ಜೀವಿತಕಾಲವೇ ಅತ್ಯಲ್ಪ! ಅದರಲ್ಲಿ ಜೀವನಪಾಠದ ಒಟ್ಟಿಂಗೆ ಕಲಿವಲೆ ಹಲವು ಅವಕಾಶಂಗೊ ಇದ್ದು. ನವಗೆ ಬೇಕಾದ್ದದರ ಹಂಸದ ಹಾಂಗೆ ತೆಕ್ಕೊಳ್ಳೆಕ್ಕು ಹೇಳ್ತ ವಿಚಾರ ಕೊಟ್ಟದಕ್ಕೆ ಧನ್ಯವಾದ ಡಾಕ್ಟ್ರೇ!!
ಧನ್ಯವಾದಗಳು ಗೋಪಾಲಣ್ಣ
ಒಳ್ಳೆಯ ಸುಭಾಷಿತ