- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಅದಾ ಈ ಪೆಂಗ ಎತ್ಲಾಗಿ ಹೋಯಿದ ಗ್ರೇಶಿದಿರೋ, ಇದ್ದೆಪ್ಪಾ ಇದ್ದೆ. ಕುಂಬ್ಳೆ ಅತ್ತೆ ಮನೆಲಿ ನಾಕು ದಿನ ಮನೆ ಪಾರ ಕೂತು ಹೆರಟಪ್ಪಗ ಜೋರು ಮಳೆ ಶುರು. ಹಾಂಗೆ ರಜ ಮನೆಲೆ ಕೂದೊಂಡಿತ್ತಿದ್ದೆ ಒಟ್ಟಿಂಗೆ ಹಬ್ಬವೂ ಹತ್ರ ಇತ್ತು. ಪುರುಸೋತ್ತೆ ಇಲ್ಲೆ. ಅತ್ಲಾಗಿ ಕೆಲಸದ ಮೇಲೆ ಉತ್ತರದ ದೇಶಂಗಕ್ಕೂ ಹೋಗಿ ಬಂದೆ. ಹಾಂಗೆ ಬೆಂಗಳೂರು ಮುಟ್ಟಿ ಪೆರ್ಲದಣ್ಣನ ಮನೆಗೆ ಹೋದೆ. ಸುಲಾಭಲ್ಲಿ ಸಿಕ್ಕುವ ಜೆನ ಹೇಳಿರೆ ಅವನೇ ಇದಾ. ಆ ದಿನ ಬೇರೆ ಕನ್ನಡ ರಾಜ್ಯೋತ್ಸವ ದಿನ. ಪೂರಾ ಬೆಂಗಳೂರು ಸಂಬ್ರಮಲ್ಲಿ ಇತ್ತು. ಪೆರ್ಲದಣ್ಣನ ನಳಪಾಕವ ಉಂಡಾತು. ಮತ್ತೆ ಎಂತ ಮಾಡುದು ಅವನ ಕಂಪ್ಯೂಟರಿಲೇ ಟಿ.ವಿ. ಬತ್ತು. ನೋಡುಲೆ ಶುರು ಮಾಡಿದೆಯ.
ಕರುನಾಡಿಲಿ ನೇರ ಸುದ್ದಿಗೆ ಹೆಸರುವಾಸಿಯಾದ ಚಾನೆಲ್. ‘ಸಿರಿಗನ್ನಡಂ ಗೆಲ್ಗೆ’ ಹೇಳಿ ಕಾರ್ಯಕ್ರಮ. ಹಳ್ಳಿ ಹುಡುಗ ಬೆಂಗಳೂರಿನ ಮಹಾತ್ಮ ಗಾಂದ್ದಿ ಮಾರ್ಗಕ್ಕೆ ಬಂದು, ಒಂದು ವಿಳಾಸ ಹುಡ್ಕುವ ಬಗ್ಗೆ ಕಾರ್ಯಕ್ರಮ. ಎಲ್ಲೋರು ಎನಗೆ ಕನ್ನಡ ಅರಡಿಯ ಹೇಳುವವೆ, ಒಂದು ಜೆನ ಅಂತೂ ಅದೇ ಚೀಟಿಲಿ ಆಂಗ್ಲ ಭಾಷೆಲಿ ಬರದು ಕೊಟ್ಟತ್ತು. ಚೆಂದದ ನಿರೂಪಕಿ ಅಕೇರಿಗೆ ಹೇಳಿತ್ತು, ಈ ಕಾರ್ಯಕ್ರಮದ ಆಶಯ ಕರ್ನಾಟಕಲ್ಲಿ ಅದರಲ್ಲೂ ರಾಜಧಾನಿಲಿ ಕನ್ನಡ ಉಳುಶೆಕ್ಕು ಬೆಳೆಶೆಕ್ಕು ಹೇಳಿ.
ಅಪ್ಪೊ ಕಂಡತ್ತು, ಅದೇ ಚಾನೆಲಿಲಿ ಬಪ್ಪ ಕಾರ್ಯಕ್ರಮಂಗಳ ಹೆಸರುಗೋ ಹೀಂಗೆ ಇದ್ದು- ‘ನ್ಯೂಸ್ ಹವರ್’, ‘ಟಾರ್ಗೆಟ್ಟು’, ಮೆಗಾ ಪೈಟ್’, ‘ಪಿಟ್ ಆಂಡ್ ಪೈನ್’, ‘ಆಕ್ಷನ್ ರಿಪ್ಲೆ’, ‘ಬಾಲಿವುಡ್ ಬಾತ್’ ಇನ್ನೂ ಹಲವು ಇದ್ದು. ಮಾಧ್ಯಮಂಗೋ ಇಪ್ಪದೇ ಜನಗೊಕ್ಕೆ ಮಾಹಿತಿ ಕೊಡುಲೆ, ಹೇಳುತ್ತ ಚಾನೆಲ್ನ ಕಾರ್ಯಕ್ರಮಂಗಳ ಹೆಸರುಗ ಹೀಂಗೆ ಇದ್ದರೆ ಜೆನ ಕಲಿವದು ಅದನ್ನೆ ಅಲ್ಲದೋ? ಇನ್ನು ಅವಾಗವಗ ಈ ವಾರ್ತೆ ಓದುವವು ಹೇಳುದು ‘ಟಾಂಕ್ ಯೂ’.
ಕರುನಾಡಿಲಿ ಕನ್ನಡ ಉಳಿಯೆಕ್ಕಾದರೆ ಎಲ್ಲರೂ ಅದರಲ್ಲಿ ಭಾಗಿಯಾಗೆಗಡದ. ಆನು ಸರಿ ಇದ್ದರೆ ಅಲ್ಲದೋ ಉಳುದುವರ ಸರಿ ಮಾಡುದು. ಉಮ್ಮಪ್ಪ..
ಇನ್ನು ಅದೇ ದಿನ ಘನತೆವೆತ್ತ ರಾಜ್ಯ ಸರ್ಕಾರ ಪ್ರಶಸ್ತಿ ಕೊಟ್ಟತ್ತು. ಒಳ್ಳೆ ವಿಚಾರವೇ. ಹೀಂಗೆ ಎಂತಕೆ ಬಾವ ಹೇಳ್ತಿರೋ. ಸಾಧಾರಣವಾಗಿ ಒಂದು ವಿಷಯಲ್ಲಿ ಮಾಗಿದ ಹಿರಿಚೇತನಕ್ಕೆ ಪ್ರಶಸ್ತಿ ಕೊಡುದು. ಇಲ್ಲಿ ಸರ್ಕಾರಕ್ಕೆ ಆರಿಂಗೆಲ್ಲಾ ಬೇಕೋ ಅವಕ್ಕೆ ಕೊಟ್ಟತ್ತು. ನಮ್ಮ ಮಾಧ್ಯಮದ ಜೆನಂಗಕ್ಕೂ ಕೊಟ್ಟತ್ತು. ಸಾಮಾನ್ಯಂದ ಅಸಾಮಾನ್ಯನವರೆಗೆ. ಇನ್ನೊಂದು ವಿಷಯ ಇದ್ದು. ಈ ವಿಶಯ ಯಾವ ಮಾಧ್ಯಮದವೂ ಹೇಳಿದ್ದವಿಲ್ಲೆ ಕಾಣ್ತು. ಎನ್ನ ಹಳೆ ಬಿಂಗಿಲಿ ಹವ್ಯಕ ಸಂಪಾದಕರುಗಳ ಬಗ್ಗೆ ಬರೆದ್ದೆ. ಅದರಲ್ಲಿ ಒಬ್ಬರು ‘ಕನ್ನಡಪ್ರಭದ ಶಿವಣ್ಣ’. ಅವಕ್ಕೂ ಕೊಡ್ತೆಯ ಹೇಳಿದ್ದವಡ ಸರ್ಕಾರದ ಜೆನ. ಅವ್ವು ಒಂದೇ ಮಾತು ಹೇಳಿದ್ದು ‘ಎನಗೆ ಬೇಡ – ಆ ಮಟ್ಟಕ್ಕೆ ಬಪ್ಪಲೆ ಎನಗೆ ಇನ್ನು ಸಮಯ ಬೇಕು’ ಹೇಳಿ. ಎಷ್ಟು ಜೆನಂಗೋ ಹೀಂಗೆ ಹೇಳುಗು. ಎಲ್ಲರೂ ಎನಗೆ ಸಿಕ್ಕಿದ್ದಿಲ್ಲೆ ಹೇಳುವವೇ. ಹಾಂಗಾಗಿ ಅವಕ್ಕೆ ಮನಸಾ ಅಭಿವಂದನೆ..
ಇನ್ನು ಓಬಾಮನ ಸುದ್ದಿ. ಬಾರಿ ರೈಸುತ್ತಾ ಇದ್ದು ಈಗ. ಅದೆಂತಕೆ ಬಪ್ಪದು. ಮೊದಲಿಂದಲೂ ಆ ದೇಶದವರ ಕೆಲಸ ಇನ್ನೊಬ್ಬನ ಕೆಳ ಹಾಕಿ ಆನು ಮೇಲೆ ಹೇಳುದು. ಭಾರತವ ರಜಾ ಒಳ ಹಾಕಿಕೊಳ್ಳದ್ದರೆ ಮಧ್ಯಪ್ರಾಚ್ಯ ದೇಶಂಗಳ ಭಾರತ ಒಳ ಹಾಕಿಯೊಂಡರೆ ಹೇಳಿ ಹೆದರಿಕೆ. ಅಲ್ಲಿಯ ಪೆಟ್ರೋಲು. ಅದರಡಿಲಿ ಇಪ್ಪ ಯುರೇನಿಯಂ [ಒಂದು ಮಾಹಿತಿ ಪ್ರಕಾರ ಐನೂರು ವರ್ಶಕ್ಕೆ ಬೇಕಪ್ಪಷ್ಟು ಯುರೇನಿಯಂ ಕಮ್ಮಿಲಿ ಇದ್ದಡ ಅಲ್ಲಿ ಪೆಟ್ರೊಲು ಗಣಿಯ ಅಡಿಲಿ], ಸಿಕ್ಕನ್ನೇ. ಅದಕ್ಕೆ ಈಗ ಹೇಂಗೂ ಸೋನೆ ಅತ್ತೆ ಇಪ್ಪದು ಸುಲಾಭಲ್ಲಿ ವ್ಯವಾರ ಮಾಡುಲಕ್ಕು ಹೇಳಿ ಇಷ್ಟು ಬೇಗ ಬಂದದಡಾ. ಇದರ ಬಗ್ಗೆ ತುಂಬಾ ಇದ್ದು ಬರೆವಲೆ ಇನ್ನೊಂದರಿ ಹೇಳ್ತೆ ಅಕ್ಕೋ.
ಎಲ್ಲಾರಿಂಗೂ ದೀಪಾವಳಿ ಶುಭ ತರಲಿ.
~
ಪೆಂಗ ಪ್ರಮ್ ಬೈಲು.
bingi.penga@gmail.com
ಪೆಂಗಣ್ಣಾ..
ನೀನು ಶುದ್ದಿ ಹೇಳಿದ್ದೇ ಹೇಳಿದ್ದು, ಅದು ಬೆಂಗುಳೂರಿಂಗೂ ಬಯಿಂದಿಲ್ಲೆ, ವಿದಾನಸೌಧಕ್ಕೂ ಬಯಿಂದಿಲ್ಲೆ!
ಅಲ್ಲದೋ?
ಏ ಬೋಸ ಭಾವ ನೀನು ಹಿ೦ಗೆಲ್ಲ ಬರದರದ ನಿನ್ನ ಬೋಸ ಹೇಳಿ ಹೇಳುವದು.ನಿನಗೆ ಶರ್ಮಪ್ಪಚ್ಚಿಯತ್ರೋ ರಘು ಭಾವನತ್ರೊ ಕೆಳಿಯೊ೦ಬಲಾವುತೀತಾನೆ ಒಬಾಮ ಹೇಳಿರೆ ಅಮೇರಿಕದ ಅದ್ಯಕ್ಷ೦.ಕರೆ೦ಟು ಹೋತದ ಹಾ೦ಗಾಗಿ ಇನ್ನು ನಿಲ್ಲುಸದ್ದೆ ನಿವ್ರುತ್ತಿ ಇಲ್ಲೆ.ಬಾಕಿ ಇನ್ನೊ೦ದಾರಿ ಬರೆತ್ತೆ.ಒಪ್ಪ೦ಗಳೊಟ್ಟಿ೦ಗೆ.
ಲೇಖನ ಬರದ್ದು ಲಾಯಿಕ್ಕ ಆಯಿದು……..
ಓಬಾಮನ ಹಸರು ಕೇಳಿದ ಹಾ೦ಗೆ ಆವುತನ್ನೆಪ್ಪ, ಅದು, ಯಾವ ಜನ???
ಹಾ…. “ನೊಬೆಲ್ ” ಸಿಕ್ಕಿದ ಜನ ಅಲ್ಲಾದ ?? ಟಿ.ವಿ. ಲಿ ಪುರಾ ಅದರದ್ದೆ ಶುದ್ದಿಯೆ, ಎ೦ತ ತಿ೦ತು, ಎಲ್ಲಿಗೆ ಹೊಸ್ಸು, ಬತ್ಸು.. ಅದುವೆ.. ಬೇರೆ ಎ೦ತ್ಸು ಇಲ್ಲೆ…
ಬೋಚನ ಬಿಟ್ಟರೆ ಒಬಾಮಂಗೆ ರಾಜೋತ್ಸವ ಪ್ರಶಸ್ತಿಯನ್ನೂ ಕೊಟ್ಟಿಕ್ಕುಗು..ಒಬಾಮ ಹಾರುತ್ಸ ಶುದ್ದಿ ನೋಡಿದ್ದಿಲ್ಲೆಯೋ??
ಅದಕ್ಕೆ ಕನ್ನಡ ಮಾತಾಡ್ಲೆ ಗೊ೦ತಿದ್ದಾ??? ಓ.. ಅ೦ಗ ಕೊಡ್ಲಕ್ಕೊ ಎನ್ನೊ.. !! 😉
ಕರ್ಣಾಟಕಲ್ಲಿಪ್ಪ ಕೆಲವು ಕನ್ನಡಿಗರಷ್ಟು ಗೊಂತಿದ್ದಡ!! ಉಟ್ಟು ಓರಾಟಗಾರ ಹೇಳಿ ಕಾಣುತ್ತು.ಹೇಂಗೆ ಕೊಡುಸೊದೋ ಒಂದು ಪ್ರಶಸ್ತಿ?
ದೀಪಾವಳಿ ಆಚರಣೆಗೆ ಒಬಾಮ ಬಂದದು ಹೇಳಿ ಕಾಣ್ತು. ಒಟ್ಟು ಮೂರು ದಿನದ ಪ್ರವಾಸ ಅಡ!!ಹಬ್ಬ ಮುಗುದ ಹಾಂಗೆ ಅಪ್ಪನ ಮನಗೆ ಹೋವುತ್ತಡ!!
Penga anna.ninga budhivanta ata.. Obamana baggeyu america baggeyu heliddu olledayidu