- ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live - April 19, 2015
- 2-ನವೆಂಬರ್-2013: "ಸಂಪಾಜೆ ಯಕ್ಷೋತ್ಸವ" ಆಮಂತ್ರಣ - October 24, 2013
- ಜೀವನ ರೂಪಿಸುವ ಶಿಕ್ಷಣದ ಅಭಾವ? - September 10, 2012
ಶ್ರೀ ಶ್ರೀ ರಾಘವೇಶ್ವರ ಭಾರತೀ ಗುರುಗೊ ನಮ್ಮ ಮಕ್ಕೊಗೆ ಒಳ್ಳೆಯ ಶಿಕ್ಷಣ ಸಿಕ್ಕೆಕ್ಕು ಹೇಳ್ತ ಆಶಯಲ್ಲಿ ಮಂಗ್ಳೂರಿಲಿ ಧರ್ಮಚಕ್ರ ಟ್ರಸ್ಟ್ ನ ನೇತೃತ್ವಲ್ಲಿ ಶ್ರೀ ಭಾರತೀ ಕಾಲೇಜಿನ ಪ್ರಾರಂಭ ಮಾಡಿದ್ದವು. ಇದುವರೆಗೆ ಸುಮಾರು ಮಕ್ಕೊ ಇಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜದ ಒಳ್ಳೆಯ ಪ್ರಜಗೊ ಆಗಿ ರೂಪುಗೊಂಡಿದವು. ಹತ್ತು ವರ್ಷದ ಬೆಳವಣಿಗೆಯ ಈ ವಿದ್ಯಾಮಂದಿರ ಇನ್ನೂ ಮೆಟ್ಟಲುಗಳ ಏರುತ್ತಾ ಇದ್ದು.. ಬೆಳೆತ್ತಾ ಇದ್ದು…
ನಂತೂರಿನ ಭಾರತೀ ಕೋಲೇಜಿನ ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ ಲೆಕ್ಕದ ಪೂಜಾ ವಿಧಿ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘ್ವೇಶ್ವರ ಭಾರತೀ ಗುರುಗಳ ಆಶೀರ್ವಾದಂದ ಚೆಂದಕೆ ನಡದತ್ತು. ವೇದಮೂರ್ತಿ ಶಶಿಧರ ಭಟ್ಟರು ಪೂಜಾವಿಧಿಯ ನೆಡೆಶಿ ಕೊಟ್ಟವು. ಕಾರ್ಪೋರೇಶನ್ ಬೇಂಕಿನ ಉಪಮಹಾ ಪ್ರಭಂದಕರಾಗಿಪ್ಪ ನಮ್ಮವೇ ಆದ ಶ್ರೀ ಎಂ. ನಾರಾಯಣ ಭಟ್ರು ಶಂಕುಸ್ಥಾಪನೆ ಮಾಡಿದವು.
ಮುಂದೆ ನಡದ ಸಭಾಕಾರ್ಯಕ್ರಮಲ್ಲಿ ಮಾತಾಡಿದ ನಾರಾಯಣ ಭಟ್ರು, “ನಾವು ಆದರ್ಶ ವ್ಯಕ್ತಿಗೊ ಆಗಿ ಎಲ್ಲಾ ವಿಶಯಂಗಳಲ್ಲಿಯೂ ಮುಂದೆ ಬರೆಕ್ಕು,ನಮ್ಮ ಮನಸ್ಸಿಲಿ ನಾವು ಒಳ್ಳೆದನ್ನೇ ಮಾಡೆಕ್ಕು ಹೇಳ್ತ ವಿಚಾರ ಬರೇಕು , ಗುರುಗಳ ಸಂಕಲ್ಪವ ಪೂರ್ತಿಮಾಡುಲೆ ನಾವೆಲ್ಲೋರೂ ಒಟ್ಟು ಸೇರಿ ಕೆಲಸ ಮಾಡೆಕು” ಹೇಳಿ ಹೇಳಿದವು. “ಪಂಚಮಮ್ ಕಾರ್ಯ ಸಿದ್ದಿ” ಹೇಳ್ತಹಾಂಗೆ ಕಟ್ಟೋಣವ “ಐದು” ಮಹಡಿಗೇರುಸುಲೆ ಶಂಕುಸ್ಥಾಪನೆ ಮಾಡಿದ್ದು, ನಾವು ಅಂದಾಜಿ ಮಾಡಿದ್ದಕ್ಕಿಂತ ಮೊದಲೇ ಕೆಲಸ ಪೂರ್ತಿ ಅಪ್ಪಲೆ ನಾವೆಲ್ಲೋರು ಒಟ್ಟುಸೇರಿ ಕೆಲಸ ಮಾಡುವೊ ಹೇಳಿ ಹೇಳಿದವು.
ಕಾರ್ಯಕ್ರಮಕ್ಕೆ ಅಥಿತಿ ಆಗಿ ಬಂದಿತ್ತಿದ್ದ ಕರ್ನಾಟಕ ವಿಧಾನ ಸಭೆಯ ಸದಸ್ಯನೂ ಉಪಸಭಾಪತಿಯೂ ಆಗಿಪ್ಪ ಯೋಗೇಶ್ ಭಟ್ ಮಾತಾಡಿ, ಸರಕಾರಂದ ಆಯೆಕ್ಕಾದ ಎಲ್ಲಾ ಸಕಾಯಂಗಳನ್ನುದೇ ಶಾಸಕ ಆಗಿಪ್ಪ ಆನು ಮಾಡ್ತೆ, ಈ ಸಂಸ್ಥೆ ವಿದ್ಯೆಯೊಟ್ಟಿಂಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ನಿರ್ಮಾಣ, ಆದ್ಯಾತ್ಮಿಕ ಮೌಲ್ಯಂಗಳನ್ನು ಕೂಡಾ ಅಳವಡುಸಿಗೊಂಡು, ಗುರುಗಳ ಆಶಯ ಈಡೇರ್ತ ಹಾಂಗಾಗಲಿ ಹೇಳಿ ಹಾರೈಸಿದವು. ಜೀವನಕ್ಕೆ ಅಗತ್ಯವಾದ ಅಂಶಂಗಳೊಟ್ಟಿಂಗೆ ವೈದಿಕ ನೆಲೆಯ ಭಾರತೀಯ ಶಿಕ್ಷಣವ ಈ ಸಂಸ್ಥೆ ಕೊಡೆಕ್ಕು ಹೇಳುವ ಆಶೆ ಎನ್ನದು, ಇದಕ್ಕೆ ಸಮಾಜದ ಎಲ್ಲೋರ ಸಹಕಾರ ಬೇಕು ಹೇಳಿ ಕೇಳಿಗೊಂಡವು.
ಪ್ರಾಸ್ತಾವಿಕವಾಗಿ ಮಾತಾಡಿದ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಯಾಗಿಪ್ಪ ಶ್ರೀ ವೈ ವಿ ಮಾವ – “ಭಾರತೀ ವಿದ್ಯಾಸಂಸ್ಥೆ ಹೇಳೀರೆ ಶಿಕ್ಷಣ ಕ್ಷೇತ್ರಲ್ಲಿ ಅನನ್ಯ ಸಾಧನಗೆ ಇಪ್ಪ ಒಂದು ಅಭಿಯಾನದ ಹಾಂಗೆ”, ಗುರುಗಳ ಆಶಯವಾದ “ಸ್ವಸ್ಥ ಸುಂದರ ಸಮಾಜ, ಸಂಸ್ಥಾನದ ವಿಶ್ವಹಿತದ ಚಿಂತನೆಯ ಹಿನ್ನೆಲೆ ಇದರದ್ದು”, ಶ್ರೀ ಗುರುಗಳ ಮಾರ್ಗದರ್ಶನವುದೇ ದೈವಿಕ ನೇತೃತ್ವವುದೇ ಈ ಸಂಸ್ಥೆಯ ವಿಶೇಷ ಹೇಳಿ ಹೇಳಿದವು. ಈ ಶಾಲೆ ಕೇಜಿಂದ ಪೀಜಿ ವರೆಗಾಣ ಎಲ್ಲಾ ವಿಶಯಂಗಳಲ್ಲಿಯೂ ಶಿಕ್ಷಣ ಕೊಡ್ತು ರಾಜ್ಯ ಸರಕಾರದ ಅನುಮತಿ ಇಪ್ಪ ಕನ್ನಡ, ಆಂಗ್ಲ ಮಾದ್ಯಮದ- ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವುದೇ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಇಪ್ಪ ಪದವಿ ಶಿಕ್ಷಣ ಕೊಡ್ತ ವ್ಯವಸ್ಥೆ ಇಲ್ಲಿದ್ದು, ಉದ್ಯೋಗಲ್ಲಿಪ್ಪವರ ಮಕ್ಕಳ ನೋಡಿಗೊಂಬಲೆ ಶಿಶು ಮಂದಿರದ ವ್ಯವಸ್ಥೆಯೂ ಮಾಡಿದ್ದು, ಮುಂದೆ ಸ್ನಾತಕೋತ್ತರ ಶಿಕ್ಷಣ ಕೊಡ್ಲೆ ಚಿಂತನೆ ನಡದ್ದು; ಇದಕ್ಕೆ ಸಮಾಜದ ಎಲ್ಲೋರ ಸಹಕಾರ ಬೇಕು ಹೇಳಿ ಕೇಳಿಗೊಂಡವು.
ಕಾರ್ಯಕ್ರಮದ ಅಧ್ಯಕ್ಷರಾಗಿ- ಆಡಳಿತ ಸಮಿತಿಯ ಅಧ್ಯಕ್ಷರಾದ ಕೆ .ಎಸ್ .ಭಟ್ ಇತ್ತಿದ್ದವು.ಮಂಗಳೂರಿನ ಸಾಂಸದ ಆಗಿಪ್ಪ ನಳಿನ್ ಕುಮಾರ್ ಕಟೀಲು ಬಂದು ಶುಭ ಹಾರೈಸಿದವು. ಶ್ರೀ ಮಠದ ಆಡಳಿತ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಶ್ರೀನಿವಾಸಶಾಸ್ತ್ರಿಗೊ, ಸಮಿತಿ ಸದಸ್ಯರಾಗಿಪ್ಪ ಎನ್. ಜಿ .ಮೋಹನ್,ಎಂ.ಬಿ. ಮುಳಿಯ, ಬಾಲಕೃಷ್ಣ ಭಟ್ ಕಾಕುಂಜೆ, ಗೋಪಾಲ ಕೃಷ್ಣ ಭಟ್ , ಈಶ್ವರ ಭಟ್, ಎನ್. ಕೃಷ್ಣ ಭಟ್, ಕರ್ನಾಟಕ ಬೇಂಕಿನ ಹಿರಿಯ ಪ್ರಭಂದಕರಾಗಿಪ್ಪ ರವೀಂದ್ರ ನಾಥ್, ಶ್ರೀ ಜಿ. ಎನ್. ಭಟ್, ಇತ್ತಿದ್ದವು, ಶ್ರೀ ಕೆ .ಜಿ. ಭಟ್ ಸ್ವಾಗತಿಸಿ , ಶ್ರೀಮತಿ ಉಶಾ ದೇವಿ ವಂದನಾರ್ಪಣೆ ಮಾಡಿದ ಕಾರ್ಯಕ್ರಮವ ಶ್ರೀಮತಿ ಮೋಹನಾ ನಿರ್ವಹಿಸಿದವು.
ಐದು ಮಹಡಿಗಳ ಏರುವ ಮೆಟ್ಟಿಲಿಲಿ ಇಪ್ಪ ಈ ಕಾಲೇಜು ಕಟ್ಟಡದ ಕೆಲಸಂಗಳ ಶ್ರೀ ಗುರುಗಳ ಆಶೀರ್ವಾದಲ್ಲಿ ಶೀಘ್ರಲ್ಲಿ ಪೂರೈಸಿ, ಸಣ್ಣ ಮಕ್ಕಳಿಂದ ಹಿಡುದು ದೊಡ್ಡ ಮಕ್ಕಳ ವರೆಗಿನ ಕಲರವಲ್ಲಿ ಶಾಲೆ ಬೆಳದು ಬೆಳಗಲಿ..
ಸಮಾಜದ ಎಲ್ಲಾ ಬಾಂಧವರಿಂದ ಕಾಲ ಕಾಲಕ್ಕೆ ಸೂಕ್ತ ಸಹಾಯಂಗ ಒದಗಿ ಬಂದು ಕಾಲೇಜು ಅಭಿವೃದ್ಧಿ ಆಗಲಿ..
ಕಾರ್ಯಕ್ರಮದ ಪಟಂಗೊ:
–
ನಿಂಗಳ ಪ್ರೀತಿಯ,
ಅಜ್ಜಕಾನ ಭಾವ
ajjakana.bhava@gmail.com
🙂
ಈ ಸಂಸ್ಥೆ ಒಳ್ಳೆ ರೀತಿಲಿ ಬೆಳದು, ರಾಷ್ಟ್ರ ಮಟ್ಟಲ್ಲಿ ಮಾತ್ರ ಅಲ್ಲದ್ದೆ ಅಂತರ್ ರಾಷ್ಟ್ರೀಯ ಮಟ್ಟಲ್ಲಿಯೂ ಹೆಸರು ಮಾಡಲಿ,
ಶ್ರೀ ಗುರುಗಳ ಆಶೀರ್ವಾದ, ಬಂಧುಗಳ ಸಹಕಾರಂದ ಸಂಸ್ಥೆ ಉನ್ನತವಾಗಿ ಬೆಳಗಲಿ.
ವರದಿಗೆ ಧನ್ಯವಾದ. ಶ್ರೀ ಭಾರತೀ ವಿದ್ಯಾಲಯದ ಈ ಯೋಜನೆಗೆ ಶುಭಾಶಯ೦ಗೊ.
ವರದಿ ಲಾಯಕ ಆಯಿದು ಹೇಳಿ ಅಜ್ಜಕಾನ ಭಾವಂಗೆ ಧನ್ಯವಾದಂಗೋ… ನಾರಾಯಣ ಭಟ್ರು ಹೇಳಿದ ಹಾಂಗೆ “ನಾವು ಆದರ್ಶ ವ್ಯಕ್ತಿಗೊ ಆಗಿ ಎಲ್ಲಾ ವಿಶಯಂಗಳಲ್ಲಿಯೂ ಮುಂದೆ ಬರೆಕ್ಕು,ನಮ್ಮ ಮನಸ್ಸಿಲಿ ನಾವು ಒಳ್ಳೆದನ್ನೇ ಮಾಡೆಕ್ಕು ಹೇಳ್ತ ವಿಚಾರ ಬರೇಕು , ಗುರುಗಳ ಸಂಕಲ್ಪವ ಪೂರ್ತಿಮಾಡುಲೆ ನಾವೆಲ್ಲೋರೂ ಒಟ್ಟು ಸೇರಿ ಕೆಲಸ ಮಾಡೆಕು”… ನಮ್ಮೆಲ್ಲರ ಮನಸ್ಸಿಲ್ಲಿ ಬರಲಿ… ಭಾರತೀ ಕಾಲೇಜ್ ಮತ್ತು ಸಮಾಜ ಬೆಳಗಲಿ…
ಶಂಕುಸ್ಥಾಪನೆಯ ವಿಷಯ ಸವಿವರವಾಗಿ ಸಿಕ್ಕಿತ್ತು. ಶ್ರೀ ಭಾರತೀ ಕಾಲೇಜು ಉನ್ನತವಾಗಿ ಬೆಳದು ಒಂದು ಮಾದರಿ ಸಂಸ್ಥೆಯಾಗಿ ಬೆಳಗಲಿ. ವರದಿಯ ಒದಗುಸಿ ಕೊಟ್ಟ ಅಜ್ಜಕಾನ ಭಾವಂಗೆ ಧನ್ಯವಾದಂಗೊ.
ವರದಿ ಲಾಯಕ ಆಯ್ದು. ಶುದ್ದಿ ಓದಿ ಹೆಮ್ಮೆಯೂ ಸಂತೋಷವೂ ಆತು ಭಾವ. ಸಮಾಜಂದ ಸಮಾಜಕ್ಕಾಗಿ ಕನಸು ಹೊತ್ತಿಪ್ಪ ಈ ಉದ್ದೇಶ ಎಲ್ಲೋರ ಸಹಕಾರಂದ ಸಾಕಾರ ಆಗಲಿ, ಯಥಾಶಕ್ತಿ ಬೈಲಿಂದಲೂ ಸೇರಿ ಸೇವೆ ಮಾಡುವೊ ಹೇಳಿ ಒಪ್ಪ.