ಇಂದು ವಿವೇಕಾನಂದ ಜಯಂತಿ. ಯುವ ಜನತೆಯ ಪ್ರತೀಕವಾದ ಸ್ವಾಮೀ ವಿವೇಕಾನಂದರಹುಟ್ಟಿದ ದಿನ.
ಆ ಪ್ರಯುಕ್ತ ಶ್ರೀ ಅಕ್ಕ ಬರದ ಪರಿಚಯಾತ್ಮಕ ಶುದ್ದಿ.
~
ಗುರಿಕ್ಕಾರ
ಜನವರಿ ಹನ್ನೆರಡು ಹೇಳಿದ ಕೂಡ್ಲೇ ನೆನಪ್ಪಿಂಗೆ ಬಪ್ಪದು ಚಿರಂಜೀವಿಯಾದ ಭಾರತವ ಜಗತ್ತಿಲಿ ಎಲ್ಲೋರೂ ಗೌರವಲ್ಲಿ ನೋಡುವ ಹಾಂಗೆ ಮಾಡಿದ ಸ್ವಾಮೀ ವಿವೇಕಾನಂದರ ಜನ್ಮ ದಿನ. ಸರಿಯಾಗಿ 149 ವರ್ಷಂಗಳ ಹಿಂದೆ ಭಾರತದ ಈ ಪುಣ್ಯ ಭೂಮಿಲಿ ಅವತರಿಸಿದ ಮಹಾನ್ ಚೇತನ. ಭುವನೇಶ್ವರೀ ದೇವಿಯ ಗರ್ಭ ಸಂಜಾತ ಆದರೂ ಬೆಳದದ್ದು ಭಾರತಾಂಬೆಯ ಕಣ್ಮಣಿಯಾಗಿ. ಈ ವರ್ಷ ಸ್ವಾಮೀ ವಿವೇಕಾನಂದರ ನೂರೈವತ್ತನೇ ಜನ್ಮ ವರ್ಷ. ಹುಟ್ಟುವಾಗಿನ ಹೆಸರು ನರೇಂದ್ರ ಹೇಳಿದರೆ ರಾಜ ಹೇಳ್ತ ಅರ್ಥದ ಹಾಂಗೆ ಸಣ್ಣ ಆದಿಪ್ಪಗಳೇ ಪ್ರಾಯಕ್ಕೆ ಮೀರಿದ ಗಾಂಭೀರ್ಯವೂ, ಅಸಾಮಾನ್ಯ ವ್ಯಕ್ತಿತ್ವವೂ ಇದ್ದುಗೊಂಡು, ಕಾಲಕ್ರಮಲ್ಲಿ ದೈವವ ದೈವತ್ವವ ಸಾಕ್ಷಾತ್ಕಾರ ಮಾಡಿದ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯತ್ವವ ಸ್ವೀಕಾರ ಮಾಡಿ ಸ್ವಾಮೀ ವಿವೇಕಾನಂದರಾದವು. ರಾಮಕೃಷ್ಣರು ಮಹಾವಿಷ್ಣುವಿನ ಹಾಂಗೆ ಆದರೆ ವಿವೇಕಾನಂದರು ಸುದರ್ಶನ ಚಕ್ರದ ಹಾಂಗೆ!! ಗುರುವಿನ ಶಕ್ತಿ ಧಾರೆಯಾಗಿ ಪಡದ ವಿವೇಕಾನಂದರು ಜಗತ್ತಿನ ಅದರಲ್ಲಿಯೂ ಭಾರತದ ಜನಂಗಳ ವಿವೇಚನಾ ಶಕ್ತಿಯ, ವಿಮರ್ಶಾ ಮನೋಭಾವವ, ವೈಚಾರಿಕ ಗುಣವ ಬೆಳೆಸಿ ಎಲ್ಲರಲ್ಲಿಯೂ ವಿವೇಕ ಜಾಗೃತ ಅಪ್ಪ ಹಾಂಗೆ ಮಾಡಿದವು.
ರಾಮಕೃಷ್ಣರ ದೇಹತ್ಯಾಗದ ನಂತರ ವಿವೇಕಾನಂದರು ಭಾರತ ಭೂಭಾಗವ ಇಡೀ ಕಾಲ್ನಡಿಗೆಲಿ ಸಂಚಾರ ಮಾಡಿ, ದೇಶದ ನಿಜ ರೂಪವ ಕಂಡವು. ಕಲ್ಕತ್ತಂದ ದಕ್ಷಿಣದವರೆಗೆ ಪರಿವ್ರಾಜಕರಾಗಿ ತಿರುಗಿದ್ದದರಲ್ಲಿ ಅವು ಕಂಡದು ನಮ್ಮ ದೇಶದ ಹಳ್ಳಿಗಳ, ಬಡತನಲ್ಲಿ ಇಪ್ಪ ಮನುಷ್ಯರ, ಎಲ್ಲಾ ಕಡೆ ಕಾಡುತ್ತಾ ಅಸ್ಪೃಶ್ಯತೆ, ಜಾತೀಯತೆ ಇದರ ಎಡೆಲಿಯೂ ನಮ್ಮ ದೇಶ ಶ್ರೀಮಂತ ಭಾವನೆಯ ಮನುಷ್ಯರಿಂದ ತುಂಬಿದ ದೇಶ ಹೇಳಿ ಮನಗಂಡವು. ಸ್ವಾಮೀ ವಿವೇಕಾನಂದರ ಕಂಡಪ್ಪಗ ಅವರ ವರ್ಚಸ್ಸಿಲಿ ಇದ್ದ ದೈವತ್ವವ ಕಂಡು ಎಲ್ಲೋರೂ ಅವರ ಮಾತಾಡ್ಸುಲೆ, ಅವರವರ ಕಷ್ಟಂಗಳ ಹೇಳುಲೆ ಕಾದು ಕೂದುಗೊಂಡು ಇತ್ತಿದ್ದವು. ಅವರ ಮಾತಿಲಿ ಕಷ್ಟಂಗೊಕ್ಕೆ ಪರಿಹಾರ ಕಂಡುಗೊಂಡು ಇತ್ತಿದ್ದವು. ದೇಶ ಸುತ್ತಿದ ಸ್ವಾಮೀ ವಿವೇಕಾನಂದರಿಂಗೆ ನಮ್ಮ ಜನಂಗ ಅನ್ಯರ ದಾಸ್ಯಲ್ಲಿ ಸಿಕ್ಕಿದ್ದದರ ನೋಡಿ ತೀವ್ರವಾಗಿ ನೊಂದುಗೊಂಡವು. ದೇಶದ ಜನಂಗಳ ಅಸಹಾಯಕತೆ ನೋಡಿ ಕನ್ಯಾಕುಮಾರಿಯ ಹತ್ತರೆ ಭೋರ್ಗರೆವ ಸಮುದ್ರದ ನೀರಿಂಗೆ ಹಾರಿ ಅಲ್ಲಿಪ್ಪ ಬಂಡೆಲಿ ನಿಂದು ದೇಶದ ಬಗ್ಗೆ ಧ್ಯಾನ ಮಾಡಿದವು. ಆ ಸಮಯಲ್ಲಿ ಅವಕ್ಕೆ ಭಾರತದ ಬಗ್ಗೆ ಪಶ್ಚಿಮಲ್ಲಿ ವಿಚಾರ ಹರಡೆಕ್ಕು. ನಮ್ಮ ದೇಶದ ಹಿರಿಮೆ ವಿದೇಶದ ಜನಮನಲ್ಲಿ ಹರಡೆಕ್ಕು ಹೇಳಿ ಅನುಭವಜ್ಞಾನ ಗೋಚರ ಆಗಿ, ಚಿಕಾಗೊಲ್ಲಿ ನಡವ ಸರ್ವ ಧರ್ಮ ಸಮ್ಮೇಳನಕ್ಕೆ ಹೋವುತ್ತವು. ಕ್ರೈಸ್ತ ಮಿಷನರಿಗಳ ವಿರುದ್ಧ ಯಾವ ಹೆದರಿಕೆಯೂ ಇಲ್ಲದ್ದೆ ಅವರ ದೇಶಲ್ಲಿ, ಅವರ ಮಣ್ಣಿಲಿಯೇ ಮಾತುಗಳ ಹೇಳಿದವು. ಅವರ ಅತ್ಯಾಚಾರಂಗಳ ಜಗತ್ತಿಂಗೆ ಬಿಡಿಸಿ ಬಿಟ್ಟವು. ಕಂಚಿನ ಕಂಠದ ಈ ಸ್ವಾಭಿಮಾನಿ ಸನ್ಯಾಸಿಯ ಕಾಲಿಂಗೆ ಬಿದ್ದತ್ತು ಲೋಕ ಎಲ್ಲಾ!! ಭಾರತದ ವಿರುದ್ಧ, ಧರ್ಮದ ವಿರುದ್ಧ ಮಾತಾಡಿದವಕ್ಕೆ ಕೆಲವು ಸರ್ತಿ ನಯವಾಗಿ, ಕೆಲವು ಸರ್ತಿ ಖಾರವಾಗಿ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದ್ದವು.
ನಾಲ್ಕು ವರ್ಷ ಅಮೆರಿಕಾಲ್ಲಿ ಇದ್ದು ವೇದಾಂತ ತತ್ತ್ವವ ಪ್ರಚಾರ ಮಾಡಿ ವಾಪಸು ಭಾರತಕ್ಕೆ ಬಂದು ಸ್ವಾಮೀ ವಿವೇಕಾನಂದರು ಭಾರತದ ಯುವ ಶಕ್ತಿಯ ಜಾಗೃತ ಮಾಡಿದವು. ಸ್ವಾತಂತ್ರ್ಯದ ಚಳುವಳಿಗೆ ಅಡಿಪಾಯ ಅಪ್ಪ ಹಾಂಗೆ ಜನಂಗಳ ಮನಸ್ಸಿನ ಏಕ ರೂಪಕ್ಕೆ ತಂದವು. ಅದ್ವೈತ ತತ್ತ್ವವ ನಂಬಿ ಪ್ರಚಾರ ಮಾಡಿದವು. ಸೇವೆಯ ಮೂಲಕ ಹಿಂದೂ ಧರ್ಮವ ಗಟ್ಟಿ ಮಾಡಿದವು. ರಾಮಕೃಷ್ಣ ಸೇವಾ ಸಮಿತಿಯ ಮೂಲಕ ಕ್ರಾಂತಿಯನ್ನೇ ತಂದವು. ಉಪನಿಷತ್ತಿನ ಮಾತುಗಳನ್ನೇ ಉದ್ಧರಿಸಿ ಜನಂಗಳ ಎಚ್ಚರಿಸಿ ಅವರ ಮಾತುಗ ಧ್ಯೇಯ ವಾಕ್ಯಂಗ ಅಪ್ಪ ಹಾಂಗೆ ಮಾಡಿದವು. ಎಲ್ಲಾ ಜನಂಗೊಕ್ಕೆ ಮನುಷ್ಯರ ಪ್ರೀತಿ ಮಾಡೆಕ್ಕು ಹೇಳಿ ತೋರ್ಸಿ ಕೊಟ್ಟವು. ಭಗವಂತನ ಸೇವೆ ಹೇಳಿದರೆ ಜನಂಗಳ ಸೇವೆ ಹೇಳಿ ಇಡೀ ಸಮುದಾಯಕ್ಕೆ ಸಮಾಜಕ್ಕೆ ಕೆಲಸ ಮಾಡಿ ತೋರ್ಸಿ ಕೊಟ್ಟವು.
ಇಂದ್ರಾಣ ಈ ಪುಣ್ಯ ಪಾವನ ದಿನ ಸ್ಫೂರ್ತಿ ಶಕ್ತಿಯಾಗಿ ನಮ್ಮ ದೇಶದ ಯುವಕರ ರೂಪಲ್ಲಿ ಹರಿತ್ತಾ ಇಪ್ಪ ವಿವೇಕಚೇತನವ ಒಂದರಿ ನೆಂಪು ಮಾಡುವ°..
ಸ್ವಾಮೀ ವಿವೇಕಾನಂದರ ಜನ್ಮ ಆಗಿ ಇಷ್ಟು ವರ್ಷ ಆದರೂ ಕೂಡಾ ನಿತ್ಯ ಜನಂಗಳ ಮನಸ್ಸಿಲಿ ಇಪ್ಪ ದೇಶ ಭಕ್ತಿಲಿ, ಮಾಡುವ ದೇಶಸೇವೆಲಿ ಇಪ್ಪ ವಿವೇಕಾನಂದರ ಅದಮ್ಯ ಶಕ್ತಿಗೆ ವಂದಿಸಿ ಎಲ್ಲರ ವಿವೇಕ ಜಾಗೃತ ಆಗಿ ಯಾವಾಗಲೂ ಭಾರತದ ಶಕ್ತಿ ಪ್ರಜ್ವಲಿತ ಅಪ್ಪ ಹಾಂಗೆ ಆಗಲಿ ಹೇಳಿ ಒಂದು ಹಾರಯಿಕೆ..
34 thoughts on “ವಿವೇಕ ಚೇತನ : ಸ್ವಾಮೀ ವಿವೇಕಾನಂದರ ಜನ್ಮದಿನ”
ಅಕ್ಕ ಶುದ್ದಿ ಭಾರಿ ಒಳ್ಳೆದಾಯಿದು. ಇಂದು ಓದಿದ್ದಷ್ಟೆ. ಯುವಜನೋತ್ಸವಲ್ಲಿ ಭಾಗವಹಿಸಿದಷ್ಟು ಜನಂಗೊಕ್ಕಾದರೂ ವಿವೇಕಾನಂದರ ಧ್ಯೇಯೋದ್ದೇಶಂಗ ಅರ್ಥ ಆದರೆ ಇಡೀ ದೇಶಲ್ಲಿ ಒಂದು ಹೊಸ ಕ್ರಾಂತಿಯೇ ಆಗಿ ಹೋಕು.
ಆವಗಾವಗ ಓದಿ,ನೆ೦ಪು ಮಡುಗಿ ಹೆಮ್ಮೆ ಪಡೆಕ್ಕಾದ ಶುದ್ದಿ. ದೇಶ ಧರ್ಮದ ಮೇಲೆ ಶ್ರದ್ಧೆ ಭಕ್ತಿ ಬೆಳೆಸಿಗೊ೦ಬಲೆ ವಿವೇಕ ವಚನ೦ಗೊ ಸ್ಪೂರ್ತಿ ನೀಡಲಿ.
ರಘು ಭಾವ°,
ಧನ್ಯವಾದ. ನಿಂಗೋ ಹೇಳಿದ ಹಾಂಗೆ ಎಲ್ಲೊರೂ ಹೆಮ್ಮೆ ಪಡೆಕ್ಕು. ಹೀಂಗಿಪ್ಪ ಸುಪುತ್ರಂಗ ನಮ್ಮ ದೇಶಲ್ಲಿ ಹುಟ್ಟಿದ್ದವು ಹೇಳಿ!! ವಿವೇಕ ವಚನಂಗೋ ಎಲ್ಲೋರಿಂಗೂ ಸ್ಫೂರ್ತಿ ಕೊಡಲಿ..
[ವಿವೇಕ ವಚನ೦ಗೊ]
ಭಾವ, ನಿಂಗಳ ಮನೆಂದ ಒಂದು ವಿವೇಕ ವಚನ ಬಂದುಗೊಂಡಿತ್ತು. ಈಗ ಸುಮಾರು ಸಮಯಂದ ಕಾಣ್ತಿಲ್ಲೆ. ಒಂದರಿ ಬೈಲಿನ ಹೊಡೆಂಗೆ ಬಪ್ಪಲೆ ಹೇಳ್ತಿರಾ? 😉 😉
ಅಕ್ಕಾ,
ಆ ಚೇತನ ಎಲ್ಲಿದ್ದ° ಹೇಳಿ ಕೂಡ್ಲೆ ನೋಡ್ತೆ !
ದಿಕ್ಕು ತಪ್ಪಿ ಹೊವ್ತಾ ಇಪ್ಪ ಯುವ ಜನಾಂಗಂಗೊಕ್ಕೆ, ವಿವೇಕ ವಾಣಿಯ ಅಗತ್ಯ ಖಂಡಿತಾ ಇದ್ದು.
೧೫೦ ನೆ ಜನ್ಮ ದಿನದ ಸಂದರ್ಭಲ್ಲಿ ಸಕಾಲಿಕ ಲೇಖನ.
ಅಪ್ಪಚ್ಚಿ,
ತುಂಬಾ ಧನ್ಯವಾದ.
[ದಿಕ್ಕು ತಪ್ಪಿ ಹೊವ್ತಾ ಇಪ್ಪ ಯುವ ಜನಾಂಗಂಗೊಕ್ಕೆ, ವಿವೇಕ ವಾಣಿಯ ಅಗತ್ಯ ಖಂಡಿತಾ ಇದ್ದು.]
ಬೈಲಿಲಿ ಎಂಗೋ ದಾರಿ ತಪ್ಪದ್ದ ಹಾಂಗೆ ನಿಂಗೋ ಅಂಬಗಂಬಗ ‘ವಿವೇಕವಾಣಿ’ ಹೇಳ್ತ ಹಾಂಗೋ!! 🙂 😉
ಹರೇ ರಾಮ ಶ್ರೀ ಅಕ್ಕ…….
ಲೇಖನ ತು೦ಬಾ ಚೆ೦ದ ಆಯ್ದು…..
ಆನು ವಿವೇಕಾನ೦ದ ಸ೦ಸ್ಥೆಲಿ ವಿದ್ಯಾಭ್ಯಾಸ ಮಾಡಿದ್ದು ಹೇಳಿ ಹೆಮ್ಮೆ ಆವ್ತಾ ಇದ್ದು….
ಪುಟ್ಟಕ್ಕೋ..,
ಧನ್ಯವಾದ ಒಪ್ಪಕ್ಕೆ.
[ವಿವೇಕಾನ೦ದ ಸ೦ಸ್ಥೆಲಿ ವಿದ್ಯಾಭ್ಯಾಸ ಮಾಡಿದ್ದು ]
ಕಲ್ತ ಸಂಸ್ಥೆಯ ಹೆಸರಿನ ಮಹತ್ವವ ತಿಳ್ಕೊಂಡು ಆ ಮಹತ್ತಿಂಗೆ ತಕ್ಕ ಮಕ್ಕೋ ಕಲ್ತು ಮುಂದೆ ಒಳ್ಳೆಯ ಜೀವನ ಮಾಡಿದರೆ ಯಾವ ಸಂಸ್ಥೆಯ ವಿವೇಕಾನಂದ ಹೇಳುವ ಮಹಾನ್ ವ್ಯಕ್ತಿಯ ಹೆಸರಿಲಿ ಕಟ್ಟಿದ್ದವೋ, ಆ ಸಂಸ್ಥೆಯ ಮೂಲ ಕಾರಣಕರ್ತರಿಂಗೆ ಸಂತೋಷ ಅಕ್ಕು.
ಸಕಾಲಿಕ ಲೇಖನ ಶ್ರೀಅಕ್ಕ .ಚೆಂದಕೆ ಬರದ್ದಿ. ಎನಗೆ ನೆಟ್ ಸರಿ ಇಲ್ಲದ್ದೆ ೩ ದಿನಂದ ನೋಡುಲೆ ಆಯಿದಿಲ್ಲೆ.
ಧನ್ಯವಾದ ವಿದ್ಯಾ!
ನಿನ್ನ ಪುರುಸೋತ್ತಿಲಿ ಬೈಲಿಂಗೆ ಬಂದು ಎಲ್ಲೋರ ಶುದ್ದಿಗೆ ನೀನು ಒಪ್ಪ ಬರವದೇ ಎನಗೆ ಕೊಶಿ!! :-):-)
ಭಾರತದ ಗೌರವ ಜಗತ್ತಿಲಿ ಹೆಚ್ಚಿಸಿದ ಸ್ವಾಮಿ ವಿವೇಕಾನಂದರಿಂಗೆ ನಾವು ನಿಜಾರ್ಥಲ್ಲಿ ಗೌರವ ಕೊಡೆಕ್ಕಾರೆ ಅವರ ಜೀವನವ, ಅವು ಸಾರಿದ ಮೌಲ್ಯಂಗಳ ನಮ್ಮ ಮುಂದಿನ ಪೀಳಿಗೆಗೆ ತಿಳಿಶಿ ಕೊಡೆಕ್ಕು. ಎಷ್ಟೋ ಸರ್ತಿ ಇದು ನಮ್ಮಂದ ಸಾಧ್ಯ ಇದ್ದ ಹೇಳುವ ಅನುಮಾನದೇ ಬತ್ತು. ಈಗ ಅಜ್ಜಿ ಅಜ್ಜಂದ್ರು ಕತೆ ಹೇಳುದೂ ಕಮ್ಮಿ ಆಯಿದು. ಹಾಂಗಾಗಿ ಎಂತದಪ್ಪಾ ಹೇಳಿ ಒಂದು ಆತಂಕ.
ಸಿಂಧೂ,
ನಿಂಗೋ ಹೇಳಿದ ಆತಂಕ ಈಗಾಣ ಎಲ್ಲರಲ್ಲಿ ಇದ್ದು. ನಮ್ಮ ನಮ್ಮ ಕೈಲಿ ಆದಷ್ಟು ಅವು ತೋರ್ಸಿ ಕೊಟ್ಟ ಮೌಲ್ಯಂಗಳ ಜೀವನಗತ ಮಾಡುವ ಪ್ರಯತ್ನ ಮಾಡುಲಕ್ಕು ಅಲ್ಲದಾ?
[ಅಜ್ಜಿ ಅಜ್ಜಂದ್ರು ಕತೆ ಹೇಳುದೂ ಕಮ್ಮಿ ಆಯಿದು.]
ಮನೆಗಳಲ್ಲಿ ಅಜ್ಜ ಅಜ್ಜಿಯಕ್ಕಳೇ ಇಲ್ಲೆ!!! ಈಗ ಅವರ ಜಾಗೆಯ ಟಿ. ವಿ ತುಂಬಿದ ಹಾಂಗೆ ಇದ್ದು. ಕತೆಯಂತೂ ಹೇಳಿದರೆ ಕೇಳುಲೆ ಮಕ್ಕೊಗೆ ಪುರುಸೋತ್ತೇ ಇರ್ತಿಲ್ಲೆ ಅಲ್ಲದಾ? ಅಷ್ಟು ಕ್ಲಾಸ್ ಗಳಲ್ಲಿ ಇರ್ತವು ಅವು!!
ಶ್ರೀ ಅಕ್ಕಾ..
ತುಂಬ ಚೆಂದದ ಲೇಖನ..
ಇವರ ಜನ್ಮದಿನವ ಯುವ ದಿನ ಹೇಳಿ ಆಚರಿಸುತ್ತಲ್ಲ ನಾವು??? ಖುಶಿ ಆತು ಲೇಖನ ಓದಿ..
ಸ್ವಾಮಿ ವಿವೇಕಾನಂದರ ಆದರ್ಶವಾಗಿ ಮಡಿಕ್ಕೊಂಡು ೩ ಮುಖ್ಯ ಸಂಘಟನೆಗೊ ಸಮಾಜಲ್ಲಿ ಕೆಲಸ ಮಾಡ್ತ ಇದ್ದು.
೧. ರಾಮಕೃಷ್ಣಾಶ್ರಮ – ಮಕ್ಕೊಗೆ ಸಂಸ್ಕಾರ ಕೊಟ್ಟು ಒಳ್ಳೆ ವ್ಯಕ್ತಿಗೊ ಅಪ್ಪ ಹಾಂಗೆ ಮಾಡ್ತಾ ಇದ್ದು
೨. ವಿವೇಕಾನಂದ ಕೇಂದ್ರ – ಕೋಲೇಜಿಂಗೆ ಹೋಪ ಯುವಕರಲ್ಲಿ ದೇಶದ ಬಗ್ಗೆ ಜಾಗೃತಿ ಮಾಡುಸುಲೆ, ಮತ್ತು
೩. ಡಿವೈನ್ ಪಾರ್ಕ್ – ಸಾಮಾಜಿಕವಾಗಿ, ಮನೆ ಮನೆಲಿ ವಿವೇಕಾನಂದರ ವಿಚಾರಂಗಳ ಹೇಳ್ಲೆ.
ಇಂಥವು ಇನ್ನೂ ಬೇಕು ನವಗೆ..
ಮಂಗ್ಳೂರು ಮಾಣಿ..,
[ಇವರ ಜನ್ಮದಿನವ ಯುವ ದಿನ ಹೇಳಿ ಆಚರಿಸುತ್ತಲ್ಲ ]
ಅಪ್ಪು. ನಿನ್ನ ಹಾಂಗೆ ಇಪ್ಪ ಜವ್ವನಿಗರ ಶಕ್ತಿ ದೇಶಸೇವೆಗೆ ತೊಡಗಿಸಿಗೊಳ್ಳಲಿ ಹೇಳ್ತ ಉದ್ದೇಶ. ನೀನು ಹೇಳಿದ ಹಾಂಗೆ ಈ ಎಲ್ಲ ಸಂಸ್ಥೆಗಳೂ ಕೂಡಾ ಜನಸೇವೆ ಮಾಡ್ತಾ ಇದ್ದವು.
ಧನ್ಯವಾದ ಮಗನೇ! 🙂
🙂
ವಿವೇಕಾನಂದ ಜಯಂತಿ ದಿನಕ್ಕೆ ಸರಿಯಾಗಿ, ಶ್ರೀ ಅಕ್ಕನ ವಿಶೇಷ ಲೇಖನ ಲಾಯಕಾತು. ಧನ್ಯವಾದಂಗೊ.
ಬೊಳುಂಬು ಮಾವ°,
ಒಪ್ಪಕ್ಕೆ ಧನ್ಯವಾದಂಗೋ.
ವಿವೇಕಾನಂದರ ಚಿಕಾಗೋ ಭಾಷಣದ ನಂತರ ನಮ್ಮ ದೇಶಲ್ಲಿ ಸ್ವದೇಶಿ ಚಳವಳಿಗೆ ಬಲ ಬಂತು[.೧೧-೯-೧೮೯೩]
ಅಮೇರಿಕಾದ ಅವಳಿ ಕಟ್ಟಡ ನಾಶದ ಮತ್ತೆ ಭಯೋತ್ಪಾದನೆ ವಿರುದ್ಧ ಹೋರಾಟ ಬಲ ಆತು[೧೧-೯-೨೦೦೧]
ಎರಡೂ ಸೆ.೧೧ಕ್ಕೆ ಆದ್ದು ವಿಶೇಷ.[ಕಾಕತಾಳೀಯ ಅಷ್ಟೆ].
ಸಕಾಲಿಕ ಲೇಖನ.
ಗೋಪಾಲಣ್ಣ,
ಈ ಎರಡೂ ತಾರೀಕಿನ ವಿಶೇಷವ ತೋರ್ಸಿದಿ. ಕಾಕತಾಳೀಯ ಆದರೂ ಎರಡೂ ಕೂಡಾ ಚರಿತ್ರೆಯ ತುಂಬಾ ಪ್ರಮುಖ ದಿನಂಗ ಅಲ್ಲದಾ?
ಧನ್ಯವಾದ ಗೋಪಾಲಣ್ಣ ಒಪ್ಪಕ್ಕೆ.
ಸಕಾಲಿಕ ಶುದ್ದಿಗೊಂದು ಒಪ್ಪ. ಇಂತಹ ಅನೇಕ ಶಕ್ತಿ ಚೇತನ ಭಾರತಕ್ಕೆ ತೀರಾ ಅಗತ್ಯ ಇದ್ದು.
ಚೆನ್ನೈ ಭಾವ,
ಸತ್ಯವಾದ ಮಾತು ನಿಂಗಳದ್ದು. ಎಲ್ಲರ ಒಳ ಇಪ್ಪ ಈ ಶಕ್ತಿ ಚೇತನಂಗೋ ಜಾಗೃತ ಆದರೆ ದೇಶಲ್ಲಿ ಸುಮಾರು ವಿವೇಕ ಚೇತನಂಗ ಕಾಂಗು!!
ವೀವೇಕಾನಂದರ ೧೫೦ನೇ ಜನ್ಮದಿನದಂದಿಗೆ ನಿಂಗಳ ಶುದ್ದಿ ಸಕಾಲಿಕ. ಓ ಇದಾ..ನಿಂಗೊ ಕಳುದೊರಿಶ ಬರದ್ದರ ನಿನ್ನೆ ಓದಿದ್ದದು, ಈಗ ಹಳೆ ಶುದ್ದಿಗೊ ಮೇಕಟೆಯೇ ಬತ್ತಿದ ಒಂದೊಂದಾಗಿ..ಹಾಂಗಾಗಿ ಹುಡ್ಕೆಕಾದ್ದಿಲ್ಲೆ.
ಧನ್ಯವಾದ ಕುಮಾರಣ್ಣ.
ಕಳುದೊರಿಶ ಬರದ್ದದರ ಓದಿದ್ದಕ್ಕೂ ಕೂಡಾ ಧನ್ಯವಾದಂಗೋ!! 🙂 🙂
“ಸ್ವಾಮೀ ವಿವೇಕಾನಂದರ ಜನ್ಮ ಆಗಿ ಇಷ್ಟು ವರ್ಷ ಆದರೂ ಕೂಡಾ ನಿತ್ಯ ಜನಂಗಳ ಮನಸ್ಸಿಲಿ ಇಪ್ಪ ದೇಶ ಭಕ್ತಿಲಿ, ಮಾಡುವ ದೇಶಸೇವೆಲಿ ಇಪ್ಪ ವಿವೇಕಾನಂದರ ಅದಮ್ಯ ಶಕ್ತಿಗೆ ವಂದಿಸಿ ಎಲ್ಲರ ವಿವೇಕ ಜಾಗೃತ ಆಗಿ ಯಾವಾಗಲೂ ಭಾರತದ ಶಕ್ತಿ ಪ್ರಜ್ವಲಿತ ಅಪ್ಪ ಹಾಂಗೆ ಆಗಲಿ” ಹೇಳುವ ಶ್ರೀ ಅಕ್ಕನೊತ್ತಿನ್ಗೆ ಸೇರಿ ನಮ್ಮದೂ ಪ್ರಾರ್ಥನೆ…
ಇದು ಸಾಧ್ಯ ಆಯೆಕ್ಕಾರೆ ನಮ್ಮೊಳ ಇಪ್ಪ ಆತ್ಮ ಶಕ್ತಿ,ಆತ್ಮ ಜ್ಹಾನ ಜಾಗೃತ ಆಯೆಕ್ಕು… ‘ಆತ್ಮ ಜ್ಹಾನ’ ಹೇಳಿರೆ “ನಮ್ಮೊಳ ದೇವರಿದ್ದ… ಅದೇ ದೇವರು ಎಲ್ಲೋರೊಳವೂ,ಎಲ್ಲೆಲ್ಲೂ ಇದ್ದ…”. ಈ ಜ್ಹಾನವ ಪಡದ ಕೂಡಲೇ ನಾವು ಎಲ್ಲೋರನ್ನೂ ಸಮಾನವಾಗಿ ಪ್ರೀತಿಸುಲೇ ಸುರು ಮಾಡುತ್ತು… ಇದರಿಂದ ನಾವು ಕಳಕ್ಕೊಮ್ಬಲೇ ಏನೇನೂ ಇಲ್ಲೇ… ಆದರೆ ಇಡೀ ಜಗತ್ತನ್ನೇ ಪಡಕ್ಕೊಳ್ಳುತ್ತು…
‘ಆತ್ಮ ಜ್ಹಾನ’ ಹೇಳಿ ದೊಡ್ಡ ಶಬ್ದ ಹೇಳಿಯಪ್ಪಗ ಅದೆಂತದೋ ವಿಚಿತ್ರ ಕೇಳುಸುತ್ತು ಅಷ್ಟೇ… ಸಾಮಾನ್ಯ ಜ್ಹಾನಲ್ಲಿ ಹೇಳುಲೇ ಪ್ರಯತ್ನ ಮಾಡುತ್ತೆ… ಉದಾಹರಣೆಗೆ ಒಪ್ಪಣ್ಣ ಈ ಬೈಲಿಲ್ಲಿಪ್ಪ ಪ್ರತಿಯೊಬ್ಬನನ್ನೂ ಅವನ ಎಷ್ಟು ಪ್ರೀತಿಸುತ್ತನೋ ಅಷ್ಟೇ ಪ್ರೀತಿಸುತ್ತ… ಹಾಂಗಾಗಿ ಬೈಲಿನವರ ಹತ್ತರೆ ಎಂತೆಲ್ಲ ಇದ್ದೋ ಅದೆಲ್ಲ ಒಪ್ಪಣ್ಣನ ಆಸ್ತಿ. ಒಪ್ಪಣ್ಣ ಕೊಟ್ಟದು ಪ್ರೀತಿ ಮಾಂತ್ರ… ಪಡಕ್ಕೊಂಡದು ಇಡೀ ಬೈಲು…
ಜಯಶ್ರೀ ಅಕ್ಕೋ,
ನಿಂಗಳ ಪ್ರೀತಿಯ ಒಪ್ಪಕ್ಕೆ ಧನ್ಯವಾದ.
[ನಮ್ಮೊಳ ಇಪ್ಪ ಆತ್ಮ ಶಕ್ತಿ,ಆತ್ಮ ಜ್ಹಾನ ಜಾಗೃತ ಆಯೆಕ್ಕು… ‘ಆತ್ಮ ಜ್ಹಾನ’ ಹೇಳಿರೆ “ನಮ್ಮೊಳ ದೇವರಿದ್ದ… ಅದೇ ದೇವರು ಎಲ್ಲೋರೊಳವೂ,ಎಲ್ಲೆಲ್ಲೂ ಇದ್ದ…”.]
ಈ ತತ್ತ್ವವನ್ನೇ ವಿವೇಕಾನಂದರು ಲೋಕಕ್ಕೆ ಹೇಳಿದ್ದು!! ಅವು ಅದರ ಅನುಭವಿಸಿಯೇ ಪ್ರಚಾರ ಮಾಡಿದ್ದದು!
[‘ಆತ್ಮ ಜ್ಹಾನ’]
ಅಕ್ಕೋ, ಆತ್ಮ ಜ್ಞಾನ ಹೇಳಿದರೆ ಆತ್ಮ ಸ್ವರೂಪದ ತಿಳುವಳಿಕೆ ಅಥವಾ ಸ್ವರೂಪದ ತಿಳುವಳಿಕೆ. ಪ್ರತಿಯೊಬ್ಬಂದೇ ಅವರವರ ಬಗ್ಗೆ, ಅವರವರ ಜನ್ಮಕಾರಣದ ಬಗ್ಗೆ ತಿಳ್ಕೊಂಬ ಪ್ರಯತ್ನ ಮಾಡೆಕ್ಕು ಹೇಳ್ತ ತತ್ತ್ವ. ಇದಕ್ಕೆ ನವಗೆ ದಾರಿಗೋ ಸುಮಾರಿದ್ದು. ನಮ್ಮ ನಮ್ಮ ಕಾರ್ಯಗಳ ಒಟ್ಟಿಂಗೆ ಜೀವನ ದಾರಿಯ ನಡದು, ಮನುಷ್ಯನಾಗಿ ಹುಟ್ಟಿದ ಮತ್ತೆ ಮಾಡೆಕ್ಕಾದ ಎಲ್ಲಾ ಕರ್ತವ್ಯಂಗಳ ಮಾಡಿಗೊಂಡು ತನ್ನ ಜನ್ಮಸಾರ್ಥಕ್ಯವ ಪಡಕ್ಕೊಂಬ ರೀತಿ. ನವಗೆ ಎಲ್ಲೋರಿಂಗೂ ಪ್ರತ್ಯೇಕವಾಗಿಯೇ ಈ ಅವಕಾಶವ ದೇವರು ಕೊಟ್ಟು ಕಳುಗಿದ್ದವು ಈ ಭೂಮಿಗೆ. ನಮ್ಮ ಸಾಧ್ಯತೆಗೆ ತಕ್ಕ ಜೀವನ ಸಾಧನೆ ಮಾಡುದರ ಶ್ರೀ ಗುರುಗಳೂ ಅಂಬಗಂಬಗ ಹೇಳ್ತಾ ಇರ್ತವು ಅಲ್ಲದಾ? ಎಲ್ಲೋರಿಂಗೂ ಆತ್ಮ ಜ್ಞಾನ ಪಡವ ಹಾಂಗೆ ಆಗಲಿ ಅಲ್ಲದಾ ಅಕ್ಕೋ!!
ಸಕಾಲಿಕ ಲೇಖನ ಅಕ್ಕ…
ಹರೀಶೋ….,
[ಅಕ್ಕ…]
🙂
ಧನ್ಯವಾದ ಮಗನೆ!! 😉 ಎಂತ ಸುದ್ದಿ ಇಲ್ಲೆ? ಬೈಲಿಂಗೆ ಬತ್ತಾ ಇರು ಯಾವಾಗಲೂ….
ಖ೦ಡಿತ ಚಿಕ್ಕಮ್ಮ, ಕಮೆ೦ಟು ಹಾಕದ್ರು, ದಿನಕ್ಕೊ೦ದರಿ ಒಪ್ಪಣ್ಣ ನ ನೋಡದ್ದೆ ಒರಗುಲೆ ಇಲ್ಲೆ…
ಸಕಾಲಿಕ ಲೇಖನಕ್ಕೆ ಒಪ್ಪ೦ಗೊ.
ಇ೦ದು ಎಷ್ಟೋ ಜನ ಈ ಮಹನೀಯ ವ್ಯಕ್ತಿತ್ವದ ಬಗ್ಗೆಯೂ, ಅವು ಮಾಡಿದ ಚಿಕಾಗೋ ಭಾಷಣದ ಬಗ್ಗೆಯೂ ಉದ್ದುದ್ದ ಮಾತಾಡ್ತರೂ, ಹೆಚ್ಚಿನವಕ್ಕೂ ಗೊ೦ತಿಪ್ಪದು, ಕೇಳಿಪ್ಪದು ಅವು ಭಾಷಣಲ್ಲಿ ಸುರೂವಿ೦ಗೆ ಹೇಳಿದ ೩ / ೪ ಶಬ್ದ೦ಗೊ ಅಷ್ಟೇ. ಎನಗುದೆ ಕೆಲವು ವಾರ ಮೊದಲಿನವರೆಗೆ ಈ ಭಾಷಣದ ಪೂರ್ಣ ರೂಪ (ಧ್ವನಿ ಮಾ೦ತ್ರ) ಕೇಳ್ತ ಅವಕಾಶ ಸಿಕ್ಕಿತ್ತಿದ್ದಿಲ್ಲೆ. ಅದರ ಒ೦ದರಿ ಎಲ್ಲೋರುದೆ ಕೇಳೆಕು.
ಗಣೇಶಣ್ಣ,
ತುಂಬಾ ಧನ್ಯವಾದಂಗೋ. ನಿಂಗೋ ಹೇಳಿದ್ದು ಸರಿ. ಅವು ಮಾತಾಡಿದ ಸುರುವಾಣ ಸಾಲುಗೋ ಮಾಂತ್ರವೇ ಎಲ್ಲೋರಿಂಗೂ ನೆಂಪಿಪ್ಪದು. ಎಲ್ಲ ದಿಕ್ಕಂದ ಸಿಕ್ಕುವ ಒಳ್ಳೆದರ ನಾವು ತೆಕ್ಕೋಳ್ಳೆಕ್ಕು ಅಲ್ಲದಾ?
ಶ್ರೀ ಅಕ್ಕಾ.. ಎನ್ನ ಅಣ್ಣಾ ಹೇಳೆಡಿ, ತಮ್ಮ ಹೇಳಿರೆ ಸಾಕು.. ಪ್ರಾಯಲ್ಲಿಯುದೆ, ಪಕ್ವತೆಲಿಯುದೆ, ಅನುಭವಲ್ಲಿಯುದೆ ಎಲ್ಲದರಲ್ಲುದೆ ಆನು ತಮ್ಮನೇ..

ಆತು ಗಣೇಶಾ!!! 🙂
ಪ್ರಾಯ ಸೂಚಕವಾಗಿ ನಿನ್ನ ಅಣ್ಣ ಹೇಳಿದ್ದದಲ್ಲ, ಪ್ರೀತಿಪೂರ್ವಕವಾಗಿ ಆತೋ!! 🙂
ಅಕ್ಕೋ ಒಪ್ಪ ಆಯಿದು,
ಪೇಪರಿಲಿ ಎಲ್ಲ ಕಂಡತ್ತು, ಬಯಲಿಲಿ ಏಕೆ ಎಂತದೂ ಶುದ್ದಿ ಇಲ್ಲೆ ಹೇಳಿ ಗ್ರೇಶಿಗೊಂಡಿಪ್ಪಗಳೇ ಅಕ್ಕನ ಶುದ್ದಿ ಬಂತದಾ ಕೊಶೀ ಆತು,
ಕೊಡೆಯಾಲಲ್ಲಿ ನಡವ ಯುವಜನೋತ್ಸವದ ಹೇಳಿಕೆ ಪೇಪರಿಲಿ ಹಾಕಿದ್ದರಲ್ಲಿ- ವಿವೇಕಾನಂದರ ಪಟ ಹಾಕಿದ್ದವು ಎಂತೆಲ್ಲ ಮಾಡ್ತವು ನೋಡೆಕಷ್ಟೆ
ಧನ್ಯವಾದ ಮಾಣಿ ನಿನ್ನ ಪ್ರೀತಿಯ ಒಪ್ಪಕ್ಕೆ! ಯುವಜನೋತ್ಸವ ಲಾಯ್ಕಾಯಿದಡ್ಡ ಅಲ್ಲದಾ?