Oppanna.com

ಕಾಲು ಒಡವದಕ್ಕೆ ಮದ್ದು

ಬರದೋರು :   ವಾಣಿ ಚಿಕ್ಕಮ್ಮ    on   28/11/2012    15 ಒಪ್ಪಂಗೊ

ವಾಣಿ ಚಿಕ್ಕಮ್ಮ
Latest posts by ವಾಣಿ ಚಿಕ್ಕಮ್ಮ (see all)

ನಮ್ಮ ನಿತ್ಯ ಉಪಯೋಗಿಸುವ ಸಾಮಾನಿಲಿ ಕೆಲವು ಮದ್ದಿನ ವಿಷಯಂಗೋ ಇರ್ತು.
ಅದು ನವಗೆ ಅದರ ಉಪಯೋಗಿಸಿ ಅದರ ಪ್ರಯೋಜನ ಪಡದಪ್ಪಗ ಗೊಂತಪ್ಪದು.

ಒಡದ ಕಾಲು ನೊಂಪಕ್ಕು!

ಚಳಿಗಾಲ ಸುರುವಪ್ಪಗ ವಾತಾವರಣದ ಉಷ್ಣಕ್ಕೆ ಕಾಲು ಒಡವ ಸಮಸ್ಯೆ ಸುರು ಆವ್ತು.
ಕಾಲು ಒಡವದರಿಂದ ನಾವು ತುಂಬಾ ಹಿಂಸೆ ಅನುಭವಿಸೆಕ್ಕಾವ್ತು. ಅದರಲ್ಲೂ ಸೀರೆ ಸುತ್ತುವ ಹೆಮ್ಮಕ್ಕೊಗೆ ಕಾಲು ಒಡದ್ದಕ್ಕೆ ಸೀರೆಯ ನೂಲು  ಸಿಕ್ಕಿ ಎಳವದರಿಂದ ಒಳ್ಳೆತ ಬೇನೆಯೂ ಆವ್ತು, ಸೀರೆಯೂ ಹಾಳಾವ್ತು ಅಲ್ಲದೋ?

ಅದಕ್ಕೆ ನಮ್ಮಲ್ಲಿ ನಿತ್ಯ ಉಪಯೋಗಿಸುವ ಒಂದು ವಸ್ತುವಿಲಿ ಪರಿಹಾರ ಇದ್ದು.
ಈ ಮದ್ದಿನ ಎನ್ನ ಸಣ್ಣ ಮಾವನೋರ ಮಗಳು ನೆಲ್ಲಿಗುರಿ ಪುಷ್ಪತ್ತಿಗೆ ಹೇಳಿದ್ದು.
ಈ ಮದ್ದಿಲಿ ಎನಗೆ ತುಂಬಾ ಪ್ರಯೋಜನ ಆಯಿದು. ಈ ಮದ್ದು ಯಾವದು ಗೊಂತಿದ್ದಾ??

ನಾವು ಕರೆಂಟು ಹೋದಿಪ್ಪಗ ರಜ್ಜ ಹೊತ್ತಿಂಗೆ ಹೊತ್ತುಸುವ ಕ್ಯಾಂಡಲ್ (ಮೇಣದ ಬತ್ತಿ). ಎನಗೆ ಈ ಮದ್ದಿಲಿ ಒಂದು ವಾರಲ್ಲಿ ಕಡಮ್ಮೆ  ಆಯಿದು.

ಮದ್ದು ತಯಾರ್ಸುವ ಕ್ರಮ:
ಎರಡು ಅಥವಾ ಮೂರು ಕ್ಯಾಂಡಲ್ ನ ಲಾಯಿಕಲ್ಲಿ ಹೊಡಿಮಾಡಿಗೊಳೆಕ್ಕು.
ಬೆಶಿ ಮಾಡಿದ ಕಾಲು ಕುಡ್ತೆ ಎಳ್ಳೆಣ್ಣೆಗೆ ಕ್ಯಾಂಡಲ್ ಹೊಡಿಯ ಹಾಕಿ ತೊಳಸೆಕ್ಕು; ಮೇಣ ಕರಗೆಕ್ಕು.
ತಣಿವಾಗ ಗಟ್ಟಿ ಆವ್ತು; ಕರಡಿಗೆಲಿ ತುಂಬುಸಿ ಮಡುಗಿದರೆ ಆತು.

ಇದರ ಕಿಟ್ಟುವ ಮೊದಲು ನವಗೆ ತಡವಲೆ ಎಡಿಗಪ್ಪಷ್ಟು ಬೆಶಿ ನೀರಿಲಿ 10 ನಿಮಿಷ ಕಾಲಿನ ಅದ್ದಿ ಮಡುಗೆಕ್ಕು.
ಮತ್ತೆ ಚೆಂಡಿ ತೆಗದು ಈ ಮದ್ದಿನ ಕಿಟ್ಟೆಕ್ಕು.

ಕಾಲು ಒಡದು ಬೇನೆ ಆದವು ಈ ಮದ್ದಿನ ಒಂದರಿ ಮಾಡಿ.
ನಿಂಗಳ ಪೈಕಿಲಿ ಹೀಂಗೆ ಆರಿಂಗಾರೂ ಆದವಕ್ಕೆ ಹೇಳಿ ಆತೋ?

15 thoughts on “ಕಾಲು ಒಡವದಕ್ಕೆ ಮದ್ದು

  1. ಇದು ಉಪಯುಕ್ತವಾದ ಶುಧ್ಧಿ ಚಿಕ್ಕಮ್ಮಾ….

    1. ಚಿಕ್ಕಮ್ಮ,
      ಹರೇ ರಾಮ; ಇದೇ ವಿಧಾನಲ್ಲಿ ಎನ್ನಬ್ಬೆ ಜೇನ ಮೇಣ೦ದ ” ಪೇಸ್ಟ್ “ನಾ೦ಗೆ ಮಾಡಿ ಕಾಲೊಡಕ್ಕಿ೦ಗೆ ಉದ್ದುತಿತು.ಅದರಿ೦ದ ಬೇನೆ ಎರಡು ದಿನಲ್ಲಿ ಗುಣ ಆವುತಿತು.ನಿ೦ಗೊ ಹೇಳಿದ ಈ ಮದ್ದು ಸಕಾಲಿಕ. ಇ೦ಥ ಮನೆ ಮದ್ದುಗೊ ನಮ್ಮ ಬೈಲಿಲ್ಲಿ ಮತ್ತಷ್ಟು ಬ೦ದೊ೦ಡಿರಲಿ ಹೇದು ಹಾರೈಕೆ. ನಿ೦ಗಳ ಸತ್ಕಾರ್ಯಕ್ಕೆ ಒ೦ದೊಳ್ಳೆ ಒಪ್ಪ+ ಧನ್ಯವಾದ. ನಮಸ್ತೇ….

      1. ಹರೇರಾಮ,ನಿಂಗಳ ಒಪ್ಪಂದ ಎಂಗೊಗೆ ಹೀಂಗಿಪ್ಪ ಹಳೇ ಮನೆ ಮದ್ದುಗಳ ನೆಂಪು ಮಾಡಿ ಬೈಲಿಲಿ ಶುದ್ಧಿ ಹೇಳುಲೆ ಪ್ರಯತ್ನ ಮಾಡ್ತೆ…

  2. ಅಬ್ಬೆ….ಇಲ್ಲಿ ಚಳಿ ಸುರು ಆಯಿದು……ಇದು ಬೇಕಾಕ್ಕು ರಜ್ಜ ಸಮಯಲ್ಲಿ….

  3. ನನ್ನ ಅತ್ತೆನೂ ಈ ಮದ್ದು ಮಾಡ್ತಾ ಇರ್ತು. ತುಂಬಾ ಲಾಯ್ಕ ಆಗ್ತು ಹೇಳಿ ಹೇಳ್ತಾ ಇರ್ತು.ವಾಣಿ ಚಿಕ್ಕಮ್ಮ ನೀ ಹೇಳಿದ್ದು ತುಂಬಾ ಒೞೇದಾತು.

  4. ಜೇನು ಮೇಣ ಇನ್ನೂ ಲಾಯಕ ಆವುತ್ತು ಹೇಳ್ತವು ವಾಣಿ ಅಕ್ಕ ,ಬಾಕಿ ಎಲ್ಲಾ ನಿಂಗೊ ಹೇಳಿದ ಹಾಂಗೇ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×