Oppanna.com

ಮಹಿಷಾಸುರನ ಅವಸಾನ : ದೇವಿಮಹಾತ್ಮೆ -04

ಬರದೋರು :   ಗೋಪಾಲಣ್ಣ    on   05/12/2011    6 ಒಪ್ಪಂಗೊ

ಗೋಪಾಲಣ್ಣ

<< ಹಿಂದಾಣ ಸಂಚಿಕೆ: ಮಹಿಷಾಸುರನ ಉತ್ಪತ್ತಿ, ವಿಕ್ರಮ
ಮುಂದೆ ಓದಿ..

ಮಹಿಷಾಸುರನ ಅವಸಾನ ಮಧ್ಯಮ ಚರಿತಮ್-ಉತ್ತರಾರ್ಧ

ಮಹಿಷಾಸುರಂದಾಗಿ ಸೋತು ಹೋದ ದೇವತೆಗೊ ಇಪ್ಪಲೆ ಜಾಗೆ ಇಲ್ಲದ್ದೆ, ಬ್ರಹ್ಮನ ಮೊರೆಹೊಕ್ಕವು. ಮತ್ತೆ ಶಿವನನ್ನೂ ಕಂಡವು.
ದೇವತೆಗೊ,ಬ್ರಹ್ಮ,ಶಿವ ಎಲ್ಲಾ ಸೇರಿ ವಿಷ್ಣುವಿನ ಕಂಡವು.
ಹೀಂಗೆ ತ್ರಿಮೂರ್ತಿಗೊ ಒಂದು ಸೇರಿ ಅಪ್ಪಾಗ ವಿಶೇಷ ಸಂಗತಿ ಆಗದ್ದೆ ಹೋಗ!
ಅದೇ ಸಮಯಲ್ಲಿ ಬ್ರಹ್ಮ,ವಿಷ್ಣು,ಮಹೇಶ್ವರರ ಮೋರೆಗಳಿಂದ ಮಹಾ ತೇಜಸ್ಸು ಹೆರಬಂತು, ದೇವತೆಗಳ ಶರೀರಂದಲೂ ಅದೇ ರೀತಿ ತೇಜಸ್ಸು ಹೆರ ಬಂದು ಕನ್ಯಾರೂಪ ಆತು, ಸಾಕ್ಷಾತ್ ಜಗನ್ಮಾತೆ!
ಎಲ್ಲರಿಂಗೂ ಸಂತೋಷ ಆತು-
ಇಡೀ ಜಗತ್ತಿನ ಅಬ್ಬೆ,ಆಧಾರಶಕ್ತಿ ರೂಪಿಣಿ ದೇವಿಯ ಕಂಡು !
ದೇವತೆಗೊ ಎಲ್ಲರೂ ಅವರವರ ಬಾಬತ್ತು ಬೇರೆಬೇರೆ ಆಯುಧಂಗಳ ಸೃಷ್ಟಿ ಮಾಡಿ ದೇವಿಗೆ ಕೊಟ್ಟವು.

ಅದರ ಸ್ವೀಕರಿಸಿ ದೇವಿ ಅಟ್ಟಹಾಸ ಮಾಡಿತ್ತು.
ರಕ್ಕಸರ ಎದೆ ನಡುಗಿತ್ತು.ದೇವಿ ಇದ್ದಲ್ಲಿಗೆ ಓಡಿ ಬಂದವು.
ಎಂತೆಂತ ರಕ್ಕಸರು!
ಚಿಕ್ಷುರ,ಅಸಿಲೋಮ,ಚಾಮರ,ಬಿಡಾಲ-ಎಲ್ಲಾ ದೊಡ್ಡ ಮಾಯಾವಿಗೊ. ಲಕ್ಷಗಟ್ಟಲೆ ರಾಕ್ಷಸಸೈನ್ಯ ಬೇರೆ.

ದೇವಿಯ ಮೈಂದಲೂ ಹಲವು ಗಣಂಗಳೂ ಹುಟ್ಟಿದವು.ಯುದ್ಧಕ್ಕೆ ಇಳಿದವು.
ದೇವಿಯ ವಾಹನ ಸಿಂಹವೂ ಕೂಡಾ ಭಾರೀ ಪರಾಕ್ರಮ ತೋರಿಸಿ, ಆ ಅಸುರ  ಸೈನ್ಯವ ನಾಶ ಮಾಡಲೆ ಸುರು ಮಾಡಿತ್ತು.
ಮಹಿಷಾಸುರನ ಸೇನಾಪತಿ ಚಿಕ್ಷುರ ಹುಂಕಾರ ಮಾತ್ರಂದ ಹತ ಆದ. ಮತ್ತೆ ಚಾಮರ, ಉದಗ್ರ, ಉದ್ಧತ, ಉಗ್ರಾಸ್ಯ, ದುರ್ಧರ, ದುರ್ಮುಖ -ಹೇಳಿ ಲೆಕ್ಕ ಇಲ್ಲದಷ್ಟು ರಕ್ಕಸರ ದಮನ ಆತು.
ಮಹಾದೇವಿ ಮಾಯಾವಿಗೊಕ್ಕೆ ಅವಕ್ಕೆ ಯಾವ ಕ್ರಮ ಆಯೆಕ್ಕೊ ಅದೇ ರೀತಿಯ ಮಾಯೆಂದ ಅವರ ನಾಶ ಮಾಡಿಯೊಂಡು ಹೋತು.
ಒಬ್ಬೊಬ್ಬನ ಅಂತ್ಯ ಒಂದೊಂದು ರೀತಿ.

ಹೀಂಗೆ ತನ್ನ ಸೈನ್ಯ ಕ್ಷೀಣ ಅಪ್ಪಾಗ ಗೋಣನೇ ಆದ ಮಹಿಷಂಗೂ ಚಳಿ ಹುಟ್ಟಿತ್ತು.
ತನ್ನ ಉಗ್ರ ರೂಪಂದ ದೇವಗಣಂಗಳ ಹೆದರಿಸಿದ.
ಅವ ಬೇರೆ ಬೇರೆ ರೂಪಲ್ಲಿ ಯುದ್ಧ ಮಾಡಿದ. ಸಿಂಹ,ಆನೆ-ಮುಂತಾದ ಮಾಯಾ ರೂಪ ತಾಳಿದ.
ಕಡೆಂಗೆ ಗೋಣ ರೂಪಲ್ಲೇ ಕೊಂಬಿಂದ ಕಲ್ಲು ಬಂಡೆಗಳ ಕಿತ್ತು ದೇವಿಯ ಮೇಲೆ ಹಾಕಿದ. ನೆಲಕ್ಕವ ಕೆರೆದು ಧೂಳು ಎಬ್ಬಿಸಿದ.
ಸೋಲುತ್ತಾ ಬಪ್ಪಾಗ ಜನಂಗೊನಿಜರೂಪಲ್ಲೇ ಇರುತ್ತವು-ಅವರ ಪ್ರಭಾವಳಿ ಕಳಚಿ ಬೀಳುತ್ತು.

ದೇವಿ ಉತ್ತಮವಾದ ಮಧು ಪಾನ ಮಾಡಿ, ಆ ರಾಕ್ಷಸನ ಕೆಳ ಬೀಳಿಸಿ ಅವನ ಎದೆಗೆ ತ್ರಿಶೂಲ ಹಾಕಿ, ಅವನ ಪ್ರಾಣವ ತೆಗೆದತ್ತು.
ದುಷ್ಟ ಸಂಹಾರಕ್ಕೆ ಎಂತ ಮಾಡೆಕ್ಕು-ಹೇಳಿ ದೇವಿಗೆ ಗೊಂತಿದ್ದು
.

ಮಹಿಷಾಸುರ ಎಂಬಂತ  ದುಷ್ಟ ಹೀಂಗೆ ಸತ್ತ ಮೇಲೆ,ದೇವತೆಗೊ ವಿಧ ವಿಧವಾಗಿ ದೇವಿಯ ಸ್ತೋತ್ರ ಮಾಡಿದವು,
ದೇವಿ ಕೇಳಿತ್ತು-“ಮಕ್ಕಳೇ,ನಿಂಗೊಗೆ ಎಂತ ಬೇಕು-ಕೇಳಿ ,ವರ ಕೊಡುತ್ತೆ”
ದೇವತೆಗೊ-“ಅಮ್ಮಾ,ಬೇರೆ ಎಂತದೂ ಬೇಡ,ಯಾವತ್ತು ಎಂಗೊಗೆ ಸಂಕಟ ಬತ್ತೊ ಆವಾಗ ನೀನು ಎಂಗಳ ಕಾಪಾಡೆಕ್ಕು“ಹೇಳಿ ಕೇಳಿದವು.

ಲೋಕ ಮಾತೆಯೇ ರಕ್ಷಣೆಗೆ ಇದ್ದು ಹೇಳಿ ಖಾತ್ರಿ ಮಾಡಿದ ಮೇಲೆ ಇನ್ನೇನು ಬೇಕು?

ಸರಿ-ಹೇಳಿ ದೇವಿ ಅಂತರ್ಧಾನ ಆತು.

ಇನ್ನೂ ಇದ್ದು… >>

~*~*~*~

ಸೂ: ದೇವಿಮಹಾತ್ಮೆಯ ಹಿಂದಾಣ ಕಂತುಗೊ:

ನಿಂಗಳೂ ಓದಿ, ನಿಂಗಳ ಮಕ್ಕೊಗೂ ಕತೆ ಹೇಳಿ…

6 thoughts on “ಮಹಿಷಾಸುರನ ಅವಸಾನ : ದೇವಿಮಹಾತ್ಮೆ -04

  1. [ಹೀಂಗೆ ತ್ರಿಮೂರ್ತಿಗೊ ಒಂದು ಸೇರಿ ಅಪ್ಪಾಗ ವಿಶೇಷ ಸಂಗತಿ ಆಗದ್ದೆ ಹೋಗ!]

    ನಮ್ಮಲ್ಲಿಪ್ಪ ಇಚ್ಚಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಸೇರಿದರೂ ವಿಶೇಷ ಸಂಗತಿಗೋ ಆವುತ್ತು ಅಲ್ಲದೋ ಗೋಪಾಲಣ್ಣ.
    ಈಗಾಣ ಕಾಲಲ್ಲಿ ಅಬ್ಬೆ ನಮ್ಮ ಕೆಲಸಕ್ಕೆ ಪೂರಕ ಆಗಿ ನಿಲ್ಲುತ್ತು ಈ ಮೂರೂ ಶಕ್ತಿಗಳ ನಾವು ಒಂದು ಗೂಡಿಸಿ ಕೆಲಸ ಮಾಡಿದರೆ!!!

    [ಸೋಲುತ್ತಾ ಬಪ್ಪಾಗ ಜನಂಗೊನಿಜರೂಪಲ್ಲೇ ಇರುತ್ತವು-ಅವರ ಪ್ರಭಾವಳಿ ಕಳಚಿ ಬೀಳುತ್ತು.]

    ಸಾವಿರದ ಒಂದು ಮಾತು ಇದು..
    ಯಶಸ್ಸಿನ ಅಮಲಿಲಿ ಎಲ್ಲೋರೂ ಅವರ ಸ್ವಂತಿಕೆಯ ಮರೆತ್ತವು. ಸೋಲುತ್ತಾ ಬಪ್ಪಗ ಆ ಮಾಯೆ ಹರುದು ಅವರ ನಿಜ ಸ್ವರೂಪ ಮಾಂತ್ರ ಅವರ ಒಟ್ಟಿಂಗೆ ಇರ್ತು ಅಲ್ಲದಾ?

    ಗೋಪಾಲಣ್ಣ, ಮಹಿಷಾಸುರನ ಅಂತ್ಯದ ಕತೆ ಲಾಯ್ಕಾಯಿದು.
    ಧನ್ಯವಾದ.

  2. ಲೋಕ ಮಾತೆಯೇ ರಕ್ಷಣೆಗೆ ಇದ್ದು ಹೇಳಿ ಖಾತ್ರಿ ಮಾಡಿದ ಮೇಲೆ ಇನ್ನೇನು ಬೇಕು?-
    ಲಾಯಿಕ ಆಯಿದು ನಿರೂಪಣೆ

  3. ಆಹಾ.. ಕತೆ ರೈಸುತ್ತಾ ಇದ್ದು!

    ಯಪ್ಪ, ‘ದುರ್ ದುರ್..ದುಸ್ ದುಸ್..’ ಹೇಳಿ ಆ ರಕ್ಕಸಂಗಳ ಹೆಸರು ಕೇಳುವಗಳೇ ಮೈ ಅಕ್ಕಿಕಟ್ಟಿದಾಂಗೆ ಆವ್ತು..!!

  4. ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನೀ ।
    ಗುಣಾಶ್ರಯೇ ಗುಣಮಯೇ ನಾರಾಯಣೀ ನಮೋsಸ್ತು ತೇ ॥

    ಸೃಷ್ತಿ-ಸ್ಥಿತಿ-ವಿನಾಶಂಗಳ ಮಾಡಬಲ್ಲ ಶಕ್ತಿಸ್ವರೂಪಳೇ, ಸನಾತಳೇ, ತ್ರಿಗುಣಂಗೊಕ್ಕೆ ಆಶ್ರಯಳೇ, ತ್ರಿಗುಣಮಯಳೇ, ನಾರಾಯಣಿಯೇ, ನಿನಗೆ ನಮಸ್ಕಾರ.

    ಲಾಯಕ ಆಯ್ದು ಗೋಪಾಲಣ್ಣ.

  5. ನಾವು ಹವ್ಯಕರೆಲ್ಲ ಸೇರಿ ಈ ಅಮ್ಮನ ಪ್ರಾರ್ಥನೆ ಮಾಡಿರೆ ಈಗ ಪುನಃ ರಕ್ಷಣೆ ಮಾಡುಲೆ ಬಾರದ್ದೆ ಇಕ್ಕೋ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×