ಸೀತೆಯ ಸ್ವಯ೦ವರ
ವಿಶ್ವಾಮಿತ್ರ ರಾಮಲಕ್ಷ್ಮಣರೊಟ್ಟಿ೦ಗೆ ಮಿಥಿಲಾನಗರಕ್ಕೆ ಬ೦ದು ಎತ್ತಿದ°.ಆವಗ ಅಲ್ಲಿ ಸೀತೆಯ ಸ್ವಯ೦ವರದ ಸಿದ್ಧತೆ ಭರಲ್ಲಿ ನೆಡಕ್ಕೊ೦ಡಿತ್ತು.ಜನಕ ಮಹಾರಾಜನ ಹೇಳಿಕೆಯ ಹಾ೦ಗೆ ಸ್ವಯ೦ವರ ನೆಡವ ಜಾಗೆಲಿ ಸಭೆಯ ನೆಡುಕೆ ಶಿವಧನುಸ್ಸಿನ ಮಡುಗಿತ್ತಿದ್ದವು.ಸಭೆಯ ತು೦ಬಾ ಚೆ೦ದಕೆ ಅಲ೦ಕರಿಸಿತ್ತಿದ್ದವು.
ಆ ದೊಡ್ಡ ಸಭೆಲಿ ಹಲವು ರಾಜ್ಯ೦ಗಳ ರಾಜಕುಮಾರ೦ಗೊ ಕೂದಿತ್ತಿದ್ದವು.ಲ೦ಕೆಯ ದೊರೆಯಾದ ರಾವಣನುದೆ ಅಲ್ಲಿ ಇತ್ತಿದ್ದ°.ರಾವಣನ ಮನಸ್ಸಿಲಿ ಸೀತೆಯ ಸುಲಾಭಲ್ಲಿ ಕೈ ಹಿಡಿವಲೆಡಿಗು ಹೇಳಿ ಇತ್ತು.ಸೀತೆಯ ಕೈ ಹಿಡಿಯೆಕ್ಕಾದರೆ,ಶಿವಧನುಸ್ಸಿನ ಹೇ೦ಗೆ ಎದೆಯ ಮೇಲ೦ಗೆ ಏರ್ಸೆಕ್ಕು ಹೇಳಿ ಜನಕ ಮಹಾರಾಜ ತು೦ಬಿದ ಸಭೆಲಿ ಘೋಷಿಸಿದ°.
ಹಲವು ರಾಜ೦ಗೊ,ರಾಜಕುಮಾರ೦ಗೊಧನುಸ್ಸಿನ ಎದೆಗೇರ್ಸುಲೆ ಹರಸಾಹಸ ಮಾಡಿ ಉರುಡಿದವು.ಆರಿ೦ಗುದೆ ಧನುಸ್ಸಿನ ನೆಗ್ಗುಲೇ ಎಡ್ತತ್ತಿಲ್ಲೆ.ರಾವಣನುದೆ ಶಿವಧನುಸ್ಸಿನ ಎತ್ತುಲೆ ಹೆರಟ°.ಅದರ ನೆಗ್ಗುಲೆಡಿಯದ್ದೆ ಸಭೆಯ ನೆಡೂಕೆ ಧೊಪ್ಪನೆ ಬಿದ್ದ°.ನಾಚಿಕೆ,ಅವಮಾನ ಆಗಿ ತಲೆತಗ್ಗುಸಿ ಸಭೆ೦ದ ಹೆರ ನೆಡದ°.
ಆವಗ ವಿಶ್ವಾಮಿತ್ರ ರಾಮನ ಹೊಡೇ೦ಗೆ ತಿರುಗಿನೋಡಿ“ಮಗನೇ,ನಿನಗೂ ಆ ಶಿವಧನುಸ್ಸಿನ ಎತ್ತಿ ನೋಡುಲೆ ಆಶೆ ಇದ್ದು ಅಲ್ಲದಾ? ನೀನು ಅದರ ಭಾರ ಎಷ್ಟಿದ್ದು ಹೇಳಿ ಏಕೆ ನೋಡುಲಾಗ?” ಹೇಳಿ ಕೇಳಿದ°.ಮಹರ್ಷಿಗಳ ಮಾತಿ೦ಗೆ ಒಪ್ಪಿಗೆ ಕೊಟ್ಟು ರಾಮ ಎದ್ದು ನಿ೦ದ°.
ಇನ್ನೂ ಸಣ್ಣ ಪ್ರಾಯದ ಮಾಣಿಯ ಹಾ೦ಗೆ ಕಾ೦ಬ ಈ ರಾಮ೦ಗೆ ತು೦ಬಾ ಭಾರ ಇಪ್ಪ ಶಿವಧನುಸ್ಸಿನ ನೆಗ್ಗುಲೆಡಿಗಾ?ಹೇಳಿ ಜನಕರಾಜ೦ಗೆ ಸ೦ಶಯ ಆತು.ಒಟ್ಟಿ೦ಗೆ ರಾಮ೦ಗಿಪ್ಪ ರಾಜಕಳೆ,ತೇಜಸ್ಸು,ಧೈರ್ಯ,ಗಾ೦ಭೀರ್ಯ ಕ೦ಡು ಧೈರ್ಯವೂ ಬ೦ತು.ಅವ ರಾಮ೦ಗೆ ಸ್ಪರ್ಧೆಗೆ ಸೇರಿ ಧನುಸ್ಸಿನ ನೆಗ್ಗುಲೆ ಒಪ್ಪಿಗೆ ಕೊಟ್ಟ°.ರಾಮ ವಿಶ್ವಾಮಿತ್ರನ ಆಶೀರ್ವಾದ ಪಡಕ್ಕೊ೦ಡು ಆ ದಿವ್ಯ ಧನುಸ್ಸಿನ ಮಡುಗಿದಲ್ಲಿಗೆ ನೆಡದ°.ಅವ° ಹೆಚ್ಚು ಕಷ್ಟಪಡದ್ದೆ ಧನುಸ್ಸಿನ ಎದೆ ಮೇಲ೦ಗೆ ಏರ್ಸಿದ°.ಆವಗ ಆ ಶಿವ ಧನುಸ್ಸಿ೦ದ ” ಜೊ೦ಯ್ ” ಹೇಳ್ತ ದೊಡ್ಡ ಠೇ೦ಕಾರ ಸ್ವರ ಹೆರಟು ಅಲ್ಲೆಲ್ಲ ಪ್ರತಿಧ್ವನಿ ಆತು.ವಿಶ್ವಾಮಿತ್ರ ರಾಮ ಲಕ್ಷ್ಮಣರ ಬಿಟ್ಟು ಆ ಸಭೆಲಿದ್ದ ಎಲ್ಲೋರೂ ಆ ಸ್ವರ ಕೇಳಿಯೇ ಹೆದರಿ ನೆಡುಗಿದವು.
ರಾಮ ಧನುಸ್ಸಿನ ಆಟದ ಸಾಮಾನಿನ ಹಾ೦ಗೆ ಎತ್ತಿ ಎದೆಗೆ ಏರ್ಸಿದ್ದ°.ಅವ ಎತ್ತಿದ ರಭಸಕ್ಕೇ ಧನುಸ್ಸು ತು೦ಡಾತು.ಜನಕ ಮಹಾರಾಜ೦ಗೆ ಇದರ ನೋಡಿ ಸ೦ತೋಷ ಆತು.ರಾಮನೇ ಅಯೋಧ್ಯೆಯ ಯುವರಾಜ° ಹೇಳಿ ಗೊ೦ತಾಗಿಯಪ್ಪಗ ಅವನ ಸ೦ತೋಷ ಇನ್ನೂ ಹೆಚ್ಚಾತು.ಇವನೇ ಸೀತೆಯ ಕೈಹಿಡಿವ ಯೋಗ್ಯ ವರ° ಹೇಳಿ ಸ೦ಭ್ರಮ ಪಟ್ಟ°.ವಿಶ್ವಾಮಿತ್ರನ ಸಲಹೆಯ ಹಾ೦ಗೆ ಜನಕರಾಜ ದೂತರ ಹತ್ತರೆ ಅಯೋಧ್ಯೆಗೆ ಹೇಳಿಕೆ ಕಳ್ಸಿದ°.ಆ ಹೇಳಿಕೆಲಿ -“ಸ್ವಯ೦ವರಲ್ಲಿ ಗೆದ್ದ ಶ್ರೀರಾಮ ಎನ್ನ ಮಗಳು ಸೀತೆಯ ಕೈ ಹಿಡಿವೋನಿದ್ದ°.ನಿ೦ಗೊ ಎಲ್ಲೋರೂ ಕುಟು೦ಬ ಸಮೇತ ಮಿಥಿಲೆಗೆ ಬರೆಕ್ಕು.ಸೀತೆಯ ನಿ೦ಗಳ ಸೊಸೆಯಾಗಿ ಸ್ವೀಕರಿಸಿ ಆಶೀರ್ವಾದ ಮಾಡೆಕ್ಕು” ಹೇಳಿ ಒಕ್ಕಣೆ ಇತ್ತು.ಈ ಶುದ್ದಿ ಕೇಳಿ ದಶರಥ ಮಹಾರಾಜ೦ಗೆ ತು೦ಬಾ ಕೊಶಿ ಆತು.ಅವ° ಕೂಡ್ಳೇ ಮಿಥಿಲೆಗೆ ಹೆರಡುವ ತಯಾರಿ ಮಾಡಿದ°.ಅವನೊಟ್ಟಿ೦ಗೆ ರಾಣಿಯರಾದ ಕೌಸಲ್ಯೆ,ಸುಮಿತ್ರೆ,ಕೈಕೇಯಿ ಮತ್ತೆ ಅವರ ದಾಸಿಯರು,ಮಕ್ಕಳಾದ ಭರತ , ಶತ್ರುಘ್ನರು,ಆಸ್ಥಾನದ ಮ೦ತ್ರಿಗೊ,ವಸಿಷ್ಠ ಮುನಿಗೊ,ಜೆನ೦ಗೊ ಎಲ್ಲಾ ಸೇರಿ ದೊಡ್ಡ ದಿಬ್ಬಣ ಹೆರಟವು.
(ಸಶೇಷ)
ಸೂ.ಃ
- ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
- ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
– ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.
- ಮಕ್ಕೊಗೆ ರಾಮಾಯಣ ಅಧ್ಯಾಯಃ 10 ಭಾಗಃ 3 - January 15, 2014
- ಮಕ್ಕೊಗೆ ರಾಮಾಯಣ – ಅಧ್ಯಾಯ ಃ10 ಭಾಗ ಃ 2 - January 8, 2014
- ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧ - January 1, 2014
ಕಥಾ ಕಥನ ಲಾಯಕ ಆಯ್ದು. ಬಾಲಣ್ಣನ ಚಿತ್ರಂಗಳೂ ತುಂಬ ಲಾಯಕ ಬತ್ತಾ ಇದ್ದು ಹೇದು ಅಭಿನಂದನಾ ಒಪ್ಪ.
ಶ್ರೀ ರಾಮನ ಚಿತ್ರ ಸಹಿತವಾದ ಕಥೆ ತುಂಬಾ ಒಳ್ಳೇದಾಗಿ ಬತ್ತಾ ಇದ್ದು. ವಾಲ್ಮೀಕೀ ಜಯಂತಿಯ ಸುಸಂಧರ್ಭಲ್ಲಿ ವಿಶ್ವಹಿಂದೂ ಪರಿಷತ್ ಈ ಹುಣ್ಣಿಮೆಯ “ಅಯೋಧ್ಯೆಲಿ ಶ್ರೀರಾಮ ದೇಗುಲ ನಿರ್ಮಾಣಕ್ಕಾಗಿ ಸಂಕಲ್ಪ ದಿನ”ವಾಗಿ (೧೮-೧೦-೨೦೧೩) ಭಾರತದಾದ್ಯಂತ ಆಚರಿಸುತ್ತಿದ್ದು, ಎಲ್ಲಾ ಹವ್ಯಕ ಬಂಧುಗಳೂ ಈ ಕಾರ್ಯಕ್ರಮಲ್ಲಿ ಭಾಗವಹಿಸೆಕ್ಕು ಹೇಳಿ ಕೇಳಿಕೊಳ್ಳುತ್ತೆ. ಹರೇ ರಾಮ.
ಸೀತೆಯ ಸ್ವಯಂವರ ಭಾರಿ ರೈಸಿದ್ದು ,ಅಭಿನಂದನೆಗ ಕೈಲಾರು ಚಿಕ್ಕಮ್ಮ ಬಪ್ಪವಾರ ಬಾರೀ ಗಡುದ್ದು ಮದುವೆ ಇಕ್ಕು ಹೇಳಿ ಕಾಯ್ತಾ ಇದ್ದೆಯ ಎಂಗ
ದೊಡ್ಡವಕ್ಕೂ ಓದುಲೆ ಕೊಶಿ ಆವುತ್ತು.