Oppanna.com

ಹವ್ಯಕ ಭಾಷೆಲಿ ಮಕ್ಕಳ "ರಾಮಾಯಣ" – ಅಧ್ಯಾಯ – 01

ಬರದೋರು :   ಕೈಲಾರು ಚಿಕ್ಕಮ್ಮ    on   25/09/2013    12 ಒಪ್ಪಂಗೊ

ನಿಂಗೊಗೆ  ಕೈಲಾರು ಚಿಕ್ಕಮ್ಮನ ಗುರ್ತ ಇದ್ದೋ ?
ಇಪ್ಪ ಹೆಸರು ಸರಸ್ವತಿ ಭಟ್ ಕೈಲಾರು ಹೇಳಿ . ಕೈಲಾರು ಶ್ರೀ ಶಂಕರ ಭಟ್ಟರ ಧರ್ಮಪತ್ನಿ , ದಿವಂಗತ ಕಿನಿಲ ಶ್ರೀಮಹಾಲಿಂಗ ಭಟ್ಟರ ಮಗಳು .
ತುಂಬು ಸಂಸಾರಿ; ಇವರ ನಾಲ್ಕು ಜೆನ ಮಕ್ಕಳೂ ಅಮೆರಿಕಲ್ಲಿ ವಾಸವಾಗಿದ್ದವು.
ಇವರ ಪುಳ್ಳಿಯಕ್ಕೊಗೆ ರಾಮಾಯಣ ಹೇಳಿರೆ ಭಾರೀ ಇಷ್ಟ ,ಅದೂ ನಮ್ಮ ಹವ್ಯಕ ಭಾಷೆಲಿ ಅಜ್ಜಿಯ ಹತ್ರೆ ಕೂದು  ಕೇಳೋದು ಹೇಳಿರೆ ಒರಕ್ಕು ಹಾರಿ ಹೋಕಡ.
ಹೀಂಗೆ ಬಾಯಿಲಿ,ನಮ್ಮ ಭಾಷೆಲಿ ಹೇಳಿದ   ಕಥೆ ಶಾಶ್ವತವಾಗಿ  ಒಳಿಯೆಕ್ಕಾರೆ ಅದರ  ಅಕ್ಷರರೂಪಲ್ಲಿ ತರೇಕು ಹೇಳುವ ಉದ್ದೇಶಂದ ಚಿಕ್ಕಮ್ಮ ವಾಸನ್ ಪಬ್ಲಿಕೇಶನ್ಸ್ ,ಬೆ೦ಗಳೂರು ಇವು ಪ್ರಕಟ ಮಾಡಿದ ಶ್ರೀಮತಿ ರಾಜೇಶ್ವರಿ ಜಯಕೃಷ್ಣ ರು ಬರದ ” ಮಕ್ಕಳಿಗಾಗಿ ರಾಮಾಯಣ ”  ಪುಸ್ತಕವ ಹವ್ಯಕ ಭಾಷೆಗೆ ಅನುವಾದ ಮಾಡಿ ಮಡಗಿದವು.

ಕೈಲಾರು ಚಿಕ್ಕಮ್ಮ, ರಾಮಾಯಣ ಕತೆ ಹೇಳ್ತವು
ಕೈಲಾರು ಚಿಕ್ಕಮ್ಮ, ರಾಮಾಯಣ ಕತೆ ಹೇಳ್ತವು

ಈ  ಹಸ್ತಪ್ರತಿಯ ಅಮೆರಿಕಲ್ಲಿಪ್ಪ ನೆಂಟ್ರಿ೦ಗೆ,ಪುಳ್ಳಿಯಕ್ಕೊಗೆ ಒಸಗೆ ಹೇಳಿ ಕೊಟ್ಟವು.
ಈಗ ಒಪ್ಪಣ್ಣನ ಬೈಲಿನ ಮೂಲಕ ನಮ್ಮ ಎಲ್ಲಾ ನೆಂಟರ ಮನೆಗಳಲ್ಲಿಯೂ ರಾಮಾಯಣದ ಅಮರ ಕಥೆ ಸರಳ ಭಾಷೇಲಿ ಮಕ್ಕೊಗೆ ತಲುಪುವ ಹಾ೦ಗಾಗಲಿ ಹೇಳ್ತ ಆಶಯಲ್ಲಿ ಒಂದು ಹಸ್ತಪ್ರತಿಯ ನವಗೆ ಕೊಟ್ಟಿದವು .
“ವಾಸನ್ ಪಬ್ಲಿಕೇಶನ್ಸ್” ನವರ ಹತ್ರೆ ಬೈಲಿಲಿ ಪ್ರಕಟಿಸುಲೆ  ಒಪ್ಪಿಗೆಯನ್ನೂ ಪಡಕ್ಕೊಂಡಿದವು .

ಹಸ್ತಪ್ರತಿಯ ಬೈಲಿ೦ಗೆ ತಪ್ಪ ಶ್ರಮವ  ಅದಿತಿ ಅಕ್ಕನೂ, ಇ೦ದಿರತ್ತೆಯೂ ಹ೦ಚಿಗೊ೦ಡವು.
ಮಧುರಕಾನನ ಬಾಲಣ್ಣ ಚೆ೦ದದ ಚಿತ್ರ೦ಗಳ ಬರದು ರಾಮಾಯಣದ ದೃಶ್ಯ೦ಗಳ ಕಣ್ಣ ಮು೦ದೆ ತತ್ತಾ ಇದ್ದವು.
ಕೈಜೋಡುಸಿದ ಎಲ್ಲೋರಿಂಗೂ ಧನ್ಯವಾದಂಗೊ.

ಬನ್ನಿ , ಕೈಲಾರು ಚಿಕ್ಕಮ್ಮ ಬರದ  “ಮಕ್ಕೊಗೆ ರಾಮಾಯಣ”ಕಥೆಯ ನಮ್ಮ ಮನೆ ಮಕ್ಕೊಗೆ ಓದಿ ಹೇಳುವ° , ಓದುಸುವ° .
ಮಕ್ಕಳಲ್ಲಿ  ಪುರಾಣ ಪ್ರಜ್ಞೆ ಬೆಳವಲೆ ಚಿಕ್ಕಮ್ಮನ ಈ ಪ್ರಯತ್ನ ಒಂದು ಸ್ಪೂರ್ತಿಯಾಗಲಿ .
~
ಗುರಿಕ್ಕಾರ°
ಬೈಲಿನ ಪರವಾಗಿ

ಮಕ್ಕೊಗೆ ರಾಮಾಯಣ – ಅಧ್ಯಾಯ 01

ರಾಮನ ಜನನ

ಸಾವಿರಾರು ವರ್ಷ೦ಗಳ ಮದಲು ಕೋಸಲ ಹೇಳ್ತ ರಾಜ್ಯಲ್ಲಿ ಅಯೋಧ್ಯೆ ಹೇಳ್ತ ಚೆ೦ದದ ನಗರ ಇತ್ತು.
ಆ ನಗರ ಸರಯೂ ನದಿಯ ಕರೇಲಿತ್ತು. ನಗರಲ್ಲಿ ರಾಜಮಾರ್ಗ೦ಗೊ,ದೊಡ್ಡ ದೊಡ್ಡ ಅರಮನೆಗೊ,ಚೆ೦ದ ಚೆ೦ದದ ಮನೆಗೊ,ಉದ್ಯಾನವನ೦ಗೊ, ತರತರದ ಹೂಗಿನ ತೋಟ೦ಗೊ ಮತ್ತೆ ಚೆ೦ದ ಚೆ೦ದದ ಸಾಲು ಸಾಲು ಅ೦ಗಡಿ ಓಣಿಗೊ ಇತ್ತು.
ಆ ನಗರಲ್ಲಿ ಜೆನ೦ಗೊ ಸುಖ ಸ೦ತೋಷಲ್ಲಿ , ಶಾ೦ತಿ ನೆಮ್ಮದಿಲಿ ಬದುಕ್ಕಿಗೊ೦ಡು ಇತ್ತಿದ್ದವು.
ಕೋಸಲ ರಾಜ್ಯವ ದಶರಥ ಹೇಳ್ತ ರಾಜ ಆಳಿಗೊ೦ಡು ಇತ್ತಿದ್ದ.
ದಶರಥ ರಾಜ° ರಾಜ್ಯದ ಜೆನ೦ಗಳ ಅವನ ಮಕ್ಕಳ ಹಾ೦ಗೆ ಕ೦ಡುಗೊ೦ಡಿತ್ತಿದ್ದ°.
ದಶರಥ ರಾಜ೦ಗೆ ಮೂರು ಜೆನ ಹೆ೦ಡತ್ತಿಯಕ್ಕೊ ಇತ್ತಿದ್ದವು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ಹೇಳಿ ಅವರ ಹೆಸರು. ಕೌಸಲ್ಯೆ ದೊಡ್ಡ ರಾಣಿ.
ರಾಜ ಮೂರು ರಾಣಿಯರನ್ನೂ ಪ್ರೀತಿ ಮಾಡಿಗೊ೦ಡಿತ್ತಿದ್ದ°. ಸಣ್ಣ ರಾಣಿ ಕೈಕೇಯಿ ಹತ್ತರೆ ರಾಜ೦ಗೆ ಹೆಚ್ಚು ಪ್ರೀತಿ.

ಯಜ್ಞಪುರುಷ ದಶರಥಂಗೆ ಪಾಯ್ಸ ಕೊಡುದು - ಚಿತ್ರ: ಬಾಲ ಮಧುರಕಾನನ
ಯಜ್ಞಪುರುಷ ದಶರಥಂಗೆ ಪಾಯ್ಸ ಕೊಡುದು – ಚಿತ್ರ: ಬಾಲ ಮಧುರಕಾನನ

ಇಷ್ಟೆಲ್ಲಾ ರಾಜವೈಭವ೦ಗೊ ಇದ್ದರೂ ,ಪ್ರೀತಿಯ ಹೆ೦ಡತ್ತಿಯಕ್ಕೊ ಇದ್ದರೂ ರಾಜ೦ಗೆ ಮನಸ್ಸಿ೦ಗೆ ನೆಮ್ಮದಿ ಮಾ೦ತ್ರ ಇತ್ತಿಲ್ಲೆ,ಶಾ೦ತಿ ಇತ್ತಿಲ್ಲೆ.
ಏಕೆ ಹೇಳಿರೆ,ರಾಜ೦ಗೆ ಮಕ್ಕೊ ಇತ್ತಿದ್ದವಿಲ್ಲೆ. ಅದೇ ಅವ೦ಗೆ ಚಿ೦ತೆ ಆಗಿತ್ತು.
ರಾಜ೦ಗೆ ಪ್ರಾಯವೂ ಆಯ್ಕೊ೦ಡು ಬ೦ದಿತ್ತು.ಸಿ೦ಹಾಸನಕ್ಕೆ ಮು೦ದಾ೦ಗೆ ಯುವರಾಜ° ಇಲ್ಲೆನ್ನೇ ಹೇಳಿ ರಾಜ ಕೊರಗಿಗೊ೦ಡು ಇತ್ತಿದ್ದ°.
ದಶರಥ ಚಿ೦ತೆಲಿ ಕೊರಗೊದರ ಋಷಿಗೊ,ಮುನಿಗಳಾದ ವಸಿಷ್ಠರು ನೋಡಿದವು.
“ಪುತ್ರಕಾಮೇಷ್ಟಿ ಮಾಡಿ ಮಕ್ಕಳ ಪಡೆ” ಹೇಳಿ ಸಲಹೆ ಕೊಟ್ಟವು. ಮುನಿಗಳ ಸಲಹೆಯ ಹಾ೦ಗೆ ಯಜ್ಞ ವ ಮಾಡ್ಸಿದ°.
ಯಜ್ಞ೦ದಾಗಿ ಅಗ್ನಿದೇವರಿ೦ಗೆ ಸ೦ತೋಷ ಆತು. ಅಗ್ನಿದೇವ ಯಜ್ಞಕು೦ಡ೦ದ ಎದ್ದು ಬ೦ದು ದಶರಥ೦ಗೆ ಪಾಯಸ ತು೦ಬಿದ ಪಾತ್ರವ ಕೊಟ್ಟ°.
“ಮಹಾರಾಜಾ,ಈ ಪಾಯಸಲ್ಲಿ ತು೦ಬ ಶಕ್ತಿ ಇದ್ದು. ಸ್ವರ್ಗಲ್ಲಿಪ್ಪ ದೇವತೆಯರು ಇದರ ತಯಾರು ಮಾಡಿದ್ದವು. ನಿನ್ನ ಹೆ೦ಡತ್ತಿಯಕ್ಕೊಗೆಲ್ಲ ಇದರ ಹ೦ಚಿ ಕೊಡು. ಬೇಗನೆ ನಿನಗೆ ಗೆ೦ಡು ಮಕ್ಕೊ ಆವುತ್ತವು” ಹೇಳಿದ°.
ಅಗ್ನಿದೇವನ ಮಾತು ಕೇಳಿ ದಶರಥ೦ಗೆ ಭಾರೀ ಸ೦ತೋಷ ಆತು.” ವರ ಕೊಟ್ಟ ಅಗ್ನಿದೇವಾ,ನಿ೦ಗಳಿ೦ದ ಎನಗೆ ತು೦ಬಾ ಉಪಕಾರ ಆತು”’ ಹೇಳಿ ರಾಜ ಹೇಳಿದ°.
ರಾಜ° ಅ೦ತಃಪುರಕ್ಕೆ ಹೋಗಿ ಬಟ್ಟಲಿ೦ದ ಪಾಯಸದ ಅರ್ಧ ಭಾಗವ ಕೌಸಲ್ಯೆಗೆ ಕೊಟ್ಟ.
ಒಳುದ ಅರ್ಧ ಭಾಗವ ಸುಮಿತ್ರೆಗೂ ಕೈಕೇಯಿಗೂ ಹ೦ಚಿ ಕೊಟ್ಟ.
ಕೆಲವು ಸಮಯ ಕಳವಗ ಮೂರು ರಾಣಿಯರೂ ಗೆ೦ಡು ಮಕ್ಕಳ ಹೆತ್ತವು. ಕೌಸಲ್ಯೆಯ ಮಗ೦ಗೆ ರಾಮ ಹೇಳಿ ಹೆಸರು.
ಸುಮಿತ್ರೆಯ ಅವಳಿ ಮಕ್ಕೊಗೆ ಲಕ್ಷ್ಮಣ,ಶತ್ರುಘ್ನ ಹೇಳಿ ಹೆಸರು ಮಡಗಿ ಕೈಕೇಯಿಯ ಮಗ೦ಗೆ ಭರತ ಹೇಳಿ ಹೆಸರು ಮಡಗಿದವು.
ದಶರಥ ಮಹಾರಾಜ೦ಗೆ ತು೦ಬಾ ಸ೦ತೋಷ ಆತು. ಅಯೋಧ್ಯೆಯ ಜೆನ೦ಗೊ ಎಲ್ಲ ಹಬ್ಬ ಮಾಡಿ ಸ೦ತೋಷ ಪಟ್ಟವು.
ದಶರಥ೦ಗೆ ಎಲ್ಲಾ ಮಕ್ಕಳೂ ಇಷ್ಟ. ಆದರೆ ರಾಮನ ಹತ್ತರೆ ಅವ೦ಗೆ ಹೆಚ್ಚು ಪ್ರೀತಿ ಇತ್ತು. ಸಣ್ಣಾದಿಪ್ಪಾಗ ರಾಮ ಮುದ್ದು ಮುದ್ದಾಗಿ ತು೦ಬಾ ಚೆ೦ದ ಇತ್ತಿದ್ದ°.
ರಾಜ೦ಗೆ ಯಾವಾಗಳೂ ರಾಮನ ಒಟ್ಟಿ೦ಗೆ ಇಪ್ಪಲೆ ಇಷ್ಟ ಆಯ್ಕೊ೦ಡಿತ್ತು. ರಾಜಕುಮಾರ೦ಗೊ ಎಲ್ಲರ ಮುದ್ದಿನ ಮಕ್ಕಳಾಗಿ ಬೆಳದವು.
ಅವರ ಆಟ೦ಗಳ ನೋಡೊದೇ ಒ೦ದು ಹಬ್ಬ ಆಗಿತ್ತು.
(ಸಶೇಷ)

(ಮುಂದೆಂತಾತು? ಬಪ್ಪ ಬುಧವಾರ ನೋಡುವೊ…)

~*~*~

ಸೂ:

  • ಸರಳ-ಸುಂದರವಾಗಿ ಬರವಣಿಗೆಗೆ ಇಳುಸಿದ ಕೈಲಾರು ಚಿಕ್ಕಮ್ಮಂಗೆ,
  • ಟೈಪು ಮಾಡ್ಳೆ ಸಹಕರುಸಿದ ಅದಿತಿ ಅಕ್ಕಂಗೆ, ಇಂದಿರತ್ತೆಗೆ,
  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.
  • ಮಕ್ಕೊಗೆ ರಾಮಾಯಣ – ಧಾರಾವಾಹಿ ಪ್ರತಿ ಬುಧವಾರ ನಿರೀಕ್ಷಿಸಿ

12 thoughts on “ಹವ್ಯಕ ಭಾಷೆಲಿ ಮಕ್ಕಳ "ರಾಮಾಯಣ" – ಅಧ್ಯಾಯ – 01

  1. We also thank M/s Vasan Publishers for according permission to publish makkoge ramayanada kathe in oppannana bailu

    1. ಹರೇ ರಾಮ; ಅತ್ಯುತ್ತಮ ಕೆಲಸ ಮಾಡ್ತಾಯಿಪ್ಪ ಕೈಲಾರು ಚಿಕ್ಕಮ್ಮ೦ಗೆ ಹಾರ್ದಿಕ ಅಭಿನ೦ದನಗೊ.ಈ ಪ್ರಯತ್ನ ಯಶಸ್ವಿಯಾಗಿ ಸ೦೦ಪನ್ನವಾಗಲಿ ಹೇದು ಹಾರೈಕೆ.

  2. I join my wife saraswathi kailar in thanking all those who were responsible for publishing the makkoge ramayanada kathe and to all those who have given encouraging positive comments.
    My special appriciation (oppa) to saraswathi kailar for her efforts in getting her makkoge ramayanda kathe published in oppannana bailu.
    kailar shankar bhat

  3. ಕೈಲಾರು ಚಿಕ್ಕಮ್ಮಂಗೆ ಬೈಲಿಂಗೆ ಸ್ವಾಗತ… ನಿಂಗಳ ಪ್ರಯತ್ನ ಶ್ಲಾಘನೀಯ.
    ಬೈಲಿಲಿ ಟೈಪಿಸಿದ್ದ ಇಂದಿರತ್ತೆ, ಅದಿತಿ ಅಕ್ಕಂಗೂ, ಪ್ರಕಟಣೆಗೆ ಕಾರಣೀಕರ್ತರಿಂಗೆ ಅಭಿನಂದನೆಗೋ..
    ಹೀಂಗೆ ಮುಂದುವರಿಯಲಿ
    ಹರೇ ರಾಮ
    ~
    ಡಿಬಿವಿ

  4. ಅತ್ಯುತ್ತಮ ಪ್ರಯತ್ನ… ಕಥೆ ಬರದ ಚಿಕ್ಕಮ್ಮಂಗೂ ಬೈಲಿಲಿ ಪ್ರಕಟಣೆಗೆ ಸಹಕರಿಸಿದ ಬೈಲಿನ ನೆಂಟ್ರಿಗೂ ಹಾರ್ದಿಕ ಧನ್ಯವಾದಂಗೊ…

  5. ಹರೆರಾಮ, ಕೈಲಾರು ಚಿಕ್ಕಮ್ಮ ಎನ್ನಭಾವನ ಅತ್ತಗಳು. ಒಪ್ಪಭಾಷೆಲಿಒಪ್ಪವಾಗಿ ಬಂದ ರಾಮಕಥೆಗೆ ಚಿತ್ರಕ್ಕೂ ಒಂದೊಪ್ಪ ಇನ್ನೂಮುಂದುವರಿಯಲಿ

  6. ಕೈಲಾರು ಚಿಕ್ಕಮ್ಮನ ಪ್ರಯತ್ನಕ್ಕೆ ಅಭಿನಂದನೆಗೊ.ಕತೆ ಬರದಷ್ಟೇ ಚೆಂದಕ್ಕೆ ಚಿತ್ರ ಬರದ ಬಾಲಣ್ಣಂಗೂ ನಮನ.

  7. ಸರಳ-ಸುಂದರವಾಗಿ ಬರವಣಿಗೆಗೆ ಇಳುಸಿದ ಕೈಲಾರು ಚಿಕ್ಕಮ್ಮಂಗೆ,
    ಟೈಪು ಮಾಡ್ಳೆ ಸಹಕರುಸಿದ ಅದಿತಿ ಅಕ್ಕಂಗೆ, ಇಂದಿರತ್ತೆಗೆ,
    ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
    ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”ಗೆ
    ಮತ್ತೆ ಇದರ ಬೈಲಿಲಿ ತರುಸಲೆ ಕಂಕಣಬದ್ಧರಾದ ಎಲ್ಲ ಬೈಲನೆಂಟ್ರಿಂಗೆ ಧನ್ಯವಾದಂಗೊ. ಸರಳ ಭಾಷೆಯ ಈ ಪ್ರಯೋಗ ಅನುಪಮ.

  8. ಅಬ್ಬೆಭಾಷೆಲಿ ರಾಮಾಯಣವ ಅನುವಾದ ಮಾಡಿ ನೆ೦ಟ್ರಿ೦ಗೆ,ಮಕ್ಕೊಗೆ ಹ೦ಚಿದ ಚಿಕ್ಕಮ್ಮನ ಈ ಪ್ರಯತ್ನಕ್ಕೆ ಅಭಿನ೦ದನೆ.
    ಸುಲಾಭಲ್ಲಿ ಅರ್ಥ ಆಗಿ,ಮನಸ್ಸಿಲಿ ಅಚ್ಚೊತ್ತಿ ನಿ೦ಬ ಹಾ೦ಗೆ ಅನುವಾದಿಸಿದ ಕತೆ,ಅದರ ಕಣ್ಣಿ೦ಗೆ ಕಟ್ಟುವ ಹಾ೦ಗೆ ಬಾಲಣ್ಣ ಮಾವ ಬಿಡುಸಿದ ಚಿತ್ರ ಎಲ್ಲಾ ಸೇರಿ ಒ೦ದರಿ ತ್ರೇತಾಯುಗಕ್ಕೆ ಹೋದ ಅನುಭವವ ಕೊಟ್ಟತ್ತು.
    ಶ್ರಮಪಟ್ಟ ಎಲ್ಲೋರಿ೦ಗೂ ಧನ್ಯವಾದ.

  9. ಕೈಲಾರು ಚಿಕ್ಕಮ್ಮಂಗೆ ಸುಸ್ವಾಗತ.
    ರಾಮಾಯಣ ಕತೆಯ ಮಕ್ಕೊಗೆ ನಮ್ಮ ಭಾಷೆಲಿ ಕೊಡ್ತಾ ಇಪ್ಪ ನಿಂಗಳ ಆಸಕ್ತಿ ಮತ್ತೆ ಶ್ರಮಕ್ಕೆ ಅಭಿನಂದನೆಗೊ.
    ಬಾಲಣ್ಣನ ರೇಖಾ ಚಿತ್ರ ಭಾರೀ ಲಾಯಿಕ ಆಯಿದು.
    ಮುಂದಾಣ ಕಂತಿನ ನಿರೀಕ್ಷೆಲಿ,

  10. ಕೈಲಾರುಚಿಕ್ಕಮ್ಮ, ಸುಮಾರು ವರ್ಷಗಳ ಮೊದಲೇ ಮಕ್ಕಳ ಹೆಳೆಲಿ ನಿಂಗೊ ಮಾಡಿದ ಈ ಪ್ರಯತ್ನವ ಹೊಗಳೆಕ್ಕಾದ್ದೆ . ನಮ್ಮ ಮನೆಭಾಷೆಲೇ ಮಕ್ಕೊಗೆ ಕಥೆ ಹೇಳಿರೆ ಅದು ತಲೆಗೆ ಹೋಪದೂ , ತಲೆಲಿ ಒಳಿವದೂ ಹೆಚ್ಚು ಅಲ್ಲದಾ? ಮತ್ತೆ ನಿಂಗಲೇ ‘ಟೈಪ್’ ಮಾಡಿದ ಹಾಂಗೆ ಬರದಿತ್ತಿದ್ದಿ- ಚಿತ್ತಿಲ್ಲದ್ದ ‘ನೀಟ್’ ಆಗಿತ್ತಿದ್ದ ಹಸ್ತಪ್ರತಿಯ ನೋಡುವಾಗಳೇ ‘ಅಬ್ಬ! ಎಷ್ಟು ಚೆಂದದ ಅಕ್ಷರ’ ಹೇಳಿ ಕಂಡತ್ತು. ಚಿಕ್ಕಮ್ಮ, ನಿಂಗೊಗೆ ಅಭಿನಂದನೆ ಮತ್ತೆ ಅಭಿವಂದನೆ ಎರಡರನ್ನೂ ಸಲ್ಲುಸುತ್ತೆ.
    ಬಾಲಣ್ಣ, ಅಗ್ನಿದೇವ ದಶರಥಂಗೆ ಪಾಯಸ ಕೊಡುವಾಗ ನಿಂಗಳೂ ಹೋಗಿತ್ತಿದ್ದೀರಾ? ಪಟ ತೆಗದ ಹಾಂಗಾಯಿದು ನಿಂಗೊ ಮಾಡಿದ ಚಿತ್ರ- ಕೈಮುಗುದೆ !

  11. ತುಂಬಾ ಲೈಕ ಇದ್ದು ,ಎನ್ಗೊಗೆ ಸಂನದಿಪ್ಪಗ ಪೆಲತದ್ಕ ಅಜ್ಜಿ ರಾಮಾಯಣ ಮಹಾ ಭಾರತ ಮತ್ತೆ ಯಕ್ಷ ಗಾನದ ಕಥೆ ಗಳ ಹೇಳ್ತಾ ಇದ್ದದು ನೆನಪಾತು ,ಒಳ್ಳೆ ಕೆಲಸ ಮಾಡಿದ್ದಿ ,ಮುಂದುವರಿಸಿ ಹೀಂಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×