Oppanna.com

ಭವಾನೀ ಭುಜಂಗ ಸ್ತೋತ್ರಮ್

ಬರದೋರು :   ಶ್ರೀಅಕ್ಕ°    on   28/09/2014    2 ಒಪ್ಪಂಗೊ

ಭವಾನೀ ಭುಜಂಗ ಸ್ತೋತ್ರಮ್ ಆದಿ ಶಂಕರಾಚಾರ್ಯರು, ನಾಲ್ಕು ಯಗಣಗಳ ಒಂದು ವೃತ್ತಲ್ಲಿ ಭುಜಂಗಪ್ರಯಾತಲ್ಲಿ ರಚಿಸಿದ ಒಂದು ದೇವೀ ಕೃತಿ. ಅಮ್ಮನ ಭವಾನಿಯ ರೂಪಲ್ಲಿ ಧ್ಯಾನಿಸಿ ಅಬ್ಬೆಯ ಸೀಮಾತೀತ, ಕಲ್ಪನಾತೀತ ಸೌಂದರ್ಯವ ವರ್ಣನೆ ಮಾಡುವ ರಚನೆ.

ಷಢಾದಾರ ಚಕ್ರ ಹೇಳುವ ಕಮಲಲ್ಲಿ ಹುಟ್ಟಿ, ಸುಷುಮ್ನಾನಾಡಿಲಿ ಅತಿಶಯ ತೇಜೋರೂಪಂದ ಪ್ರಕಾಶಿಸುವ, ಸಹಸ್ರದಳಪದ್ಮಲ್ಲಿ ಸುಧಾಮಂಡಲವ ಕರಗುಸುವ, ಅದರ ಸೇವನೆ ಮಾಡುವ ಚಿದಾನಂದ ರೂಪದ ಸುಧಾಮೂರ್ತಿಯ ಸ್ತುತಿಸುತ್ತೆ. ಉದಯರವಿಯ ತೇಜಸ್ಸಿನ, ಅರುಣವರ್ಣದ, ಲಾವಣ್ಯವತಿಯಾಗಿ ಶೃಂಗಾರಂಗಳಿಂದ ಸುಂದರಿಯಾಗಿಪ್ಪ, ಸಹಸ್ರದಳದ ಕಮಲದ ಕೇಸರಲ್ಲಿ ವಿರಾಜಿಸುವ, ತ್ರಿಕೋಣಂಗಳ ಮಧ್ಯೆ ಆಸೀನಳಾದ ಶ್ರೀ ಭವಾನಿಯ ಭಜಿಸುತ್ತೆ. ಕಿಂಕಿಣೀ ಧ್ವನಿ ಮಾಡುವ ನೂಪುರಲ್ಲಿಪ್ಪ ರತ್ನದ ಪ್ರಭೆ ಹರಡಿಪ್ಪ, ರಕ್ತವರ್ಣದ ಚರಣಕಮಲಂಗಳ ಹೊಂದಿದ, ಬ್ರಹ್ಮ, ಈಶ್ವರ, ಅಚ್ಯುತರಾದಿಯಾಗಿ ಎಲ್ಲಾ ದೇವತೆಗಳಿಂದ ಪೂಜಿಸಲ್ಪಡುವ ಮಹಾದೇವಿಯಾದ ಭವಾನಿಯ ಆನು ಮನಸ್ಸಿಲಿ ಚಿಂತನೆ ಮಾಡ್ತೆ.

ಅರುಣವರ್ಣದ ವಸ್ತ್ರಂದ ವಿರಾಜಿಸುತ್ತಿಪ್ಪ, ಮಹಾರತ್ನಂದ ಕೂಡಿದ ನಡುಪಟ್ಟಿ ಇಪ್ಪ, ಸುಂದರ ಕೇಶಾಲಂಕೃತಳಾದ ಅಬ್ಬೆ, ಮಹಾಹಾರಭೂಷಿತೆಯಾಗಿ ಸುಂದರ ಶರೀರ ಹೊಂದಿದ ಅಂಬುಜಾಕ್ಷಿಯಾದ ಭವಾನಿಯೇ, ನಿನ್ನ ಆನು ಭಜಿಸುತ್ತೆ. ಕುಸುಮಶರೀರದ ಶೋಭಾಯಮಾನ ಬಾಹುಗಳಲ್ಲಿ ಬಾಣ, ಧನುಶ, ಪಾಶ, ಅಂಕುಶಂಗಳ ಧರಿಸಿಪ್ಪ, ಚಂಚಲ ಕಣ್ಣುಗಳ ಹೊಂದಿದ, ಕೇಯೂರಾದಿಗಳಿಂದ ಭೂಷಿತಳಾದ ಶ್ರೀ ಭವಾನಿಯ ಭಜಿಸುತ್ತೆ. ಶರದೃತುವಿನ ಹುಣ್ಣಿಮೆಯ ಚಂದ್ರನ ಪ್ರಭೆಯ ಬಿಂಬದ ಹಾಂಗೆ ಇಪ್ಪ, ಮುಗುಳುನೆಗೆಯ ಮೋರೆಯ ಹೊಂದಿದ, ಅತ್ಯಂತ ಶಾಂತಳಾಗಿಪ್ಪ, ಶ್ರೇಷ್ಠ ರತ್ನಂಗಳಿಂದ ಕೂಡಿದ ಹಾರಕರ್ಣಾಭರಣಂಗಳಿಂದ ಶೋಭಿತಳಾದ, ಪ್ರಸನ್ನಳಾದ ಶ್ರೀ ಭವಾನಿಯ ಭಜಿಸುತ್ತೆ. ಚೆಂದದ ನಾಸಿಕವ, ಹುಬ್ಬಿನ, ಹಣೆಯ ಹೊಂದಿದ, ಭಕ್ತರಿಂಗೆ ದಾನಕೊಡುವ ಕೃಪಾಕಟಾಕ್ಷೆ ಆಗಿಪ್ಪ, ಗಂಧಕಸ್ತೂರಿಗಳಿಂದ ಭೂಷಿತವಾದ, ದಟ್ಟವಾದ ತುರುಬಿಪ್ಪ. ಮಾಣಿಕ್ಯಸಮೂಹದ ಕಿರೀಟ ಇಪ್ಪ ಅಬ್ಬೆಯ ಸ್ತುತಿಸುತ್ತೆ.

ನೀನು ಸೂರ್ಯ, ನೀನು ಚಂದ್ರ, ನೀನು ಅಗ್ನಿ, ನೀನು ಜಲ, ನೀನು ಆಕಾಶ, ಭೂಮಿ, ವಾಯು ಮಹತ್ ತತ್ತ್ವ ನಿನ್ನ ಬಿಟ್ಟು ಬೇರೆ ಇಲ್ಲೆ ಈ ಲೋಕಲ್ಲಿ. ಎಲ್ಲದರಲ್ಲಿಯೂ ನೀನಿದ್ದೆ. ನೀನೇ ಗುರು, ನೀನೇ ಶಿವ°, ನೀನೇ ಶಕ್ತಿ, ನೀನೇ ಜನಕ- ಜನನಿಯೂ ಕೂಡಾ, ನೀನೇ ವಿದ್ಯೆ, ನೀನೇ ಬಂಧು, ಆಧಾರ, ಬುದ್ಧಿ ಎಲ್ಲಾ ನೀನೇ ಆಗಿಪ್ಪ ಶ್ರೀ ಭವಾನಿಯ ಆನು ಸ್ತುತಿಸುತ್ತೆ. ಸಂಸಾರದ ಭವಾರಣ್ಯಂದ ಭೀತನಾಗಿಪ್ಪ ಎನ್ನ ಮೇಲೆ ಕೃಪೆ ತೋರು. ಹೇಳಿ ಆಚಾರ್ಯರು ಸ್ತೋತ್ರಲ್ಲಿ ವರ್ಣನೆ ಮಾಡಿದ್ದವು.

ಈ ಎಲ್ಲಾ ರೀತಿಲಿ ವಿಜೃಂಭಿಸುತ್ತಾ ಇಪ್ಪ ಭವಾನೀ ಭುಜಂಗ ಸ್ತೋತ್ರವ ಆರು ಭಕ್ತಿಂದ ಪಠನೆ ಮಾಡ್ತವೋ ಅವಕ್ಕೆ ವೇದಸಾರವಾದ ತನ್ನ ಶಾಶ್ವತ ಪದವಿಯನ್ನೂ, ಅಷ್ಟಸಿದ್ಧಿಯನ್ನೂ ಶ್ರೀ ಭವಾನಿ ಕೊಟ್ಟು ಅನುಗ್ರಹಿಸುತ್ತು. ಭವಾನೀ ಭವಾನೀ ಭವಾನೀ ಹೇಳಿ ಮೂರು ಸರ್ತಿ ಉದಾರ ಬುದ್ಧಿಲಿ, ಪ್ರೀತಿಂದ ಆರು ಜಪ ಮಾಡ್ತವೋ ಅವಕ್ಕೆ ಯಾವಾಗಲೂ, ಹೇಂಗೂ ಆರಿಂದಲೂ ದುಃಖ ಇಲ್ಲೆ, ಮೋಹ ಇಲ್ಲೆ, ಪಾಪ ಇಲ್ಲೆ, ಭಯ ಇಲ್ಲೆ ಹೇಳಿ ಸ್ತೋತ್ರದ ಅಕೇರಿಯಾಣ ಎರಡು ಶ್ಲೋಕಂಗಳಲ್ಲಿ ಹೇಳಿದ್ದವು ಆಚಾರ್ಯರು.
ನವರಾತ್ರಿಯ ಈ ಪುಣ್ಯಕಾಲಲ್ಲಿ ಭವಾನಿಯ ರೂಪದ ಅಬ್ಬೆಯ ಸ್ಮರಣೆಮಾಡಿ, ಸ್ತೋತ್ರ ಮಾಡಿ ಎಲ್ಲೋರೂ ಪರಮಮುಕ್ತಿಪದ ಪ್ರಾಪ್ತಿಮಾಡಿಗೊಳ್ಳಿ ಹೇಳ್ತ ಹಾರಯಿಕೆ.

ಭವಾನೀ ಭುಜಂಗ ಸ್ತೋತ್ರಮ್

ಷಢಾಧಾರಪಂಕೇರುಹಾಂತರ್ವಿರಾಜ-
ತ್ಸುಷುಮ್ನಾಂತರಾಲೇsತಿತೇಜೋಲ್ಲಸಂತೀಮ್|
ಸುಧಾಮಂಡಲಂ ದ್ರಾವಯಂತೀಂ ಪಿಬಂತೀಂ
ಸುಧಾಮೂರ್ತಿಮೀಡೇ ಚಿದಾನಂದರೂಪಾಮ್ ||1||

ಜ್ವಲತ್ಕೋಟಿಬಾಲಾರ್ಕಭಾಸಾರುಣಾಂಗೀಂ
ಸುಲಾವಣ್ಯಶೃಂಗಾರಶೋಭಾಭಿರಾಮಾಮ್ |
ಮಹಾಪದ್ಮಕಿಂಜಲ್ಕಮಧ್ಯೇ ವಿರಾಜ-
ತ್ತ್ರಿಕೋಣೀನಿಷಣ್ಣಾಂ ಭಜೇ ಶ್ರೀ ಭವಾನೀಮ್ ||2||

ಕ್ವಣತ್ಕಿಂಕಿಣೀನೂಪುರೋದ್ಭಾಸಿರತ್ನ
ಪ್ರಭಾಲೀಢಲಾಕ್ಷಾರ್ದ್ರಪಾದಾಬ್ಜಯುಗ್ಮಮ್ |
ಅಜೇಶಾಚ್ಯುತಾದ್ಯೈಃ ಸುರೈಃ ಸೇವ್ಯಮಾನಂ
ಮಹಾದೇವಿ ಮನ್ಮೂರ್ಧ್ನಿ ತೇ ಭಾವಯಾಮಿ ||3||

ಸುಶೋಣಾಂಬರಾಬದ್ಧನೀವೀವಿರಾಜ
ನ್ಮಹಾರತ್ನಕಾಂಚೀಕಲಾಪಂ ನಿತಂಬಮ್ |
ಸ್ಫುರದ್ದಕ್ಷೀಣಾವರ್ತನಾಭಿಂ ಚ ತಿಸ್ರೋ-
ವಲೀರಂಬತೇ ರೋಮರಾಜಿಂ ಭಜೇsಹಮ್ ||4||

ಲಸದ್ವೃತ್ತಮುತ್ತುಂಗಮಾಣಿಕ್ಯಕುಂಭೋ
ಪಮಶ್ರೀಸ್ತನದ್ವಂದ್ವಮಂಬಾಂಬುಜಾಕ್ಷಿ |
ಭಜೇ ದುಗ್ಧಪೂರ್ಣಾಭಿರಾಮಂ ತವೇದಂ
ಮಹಾಹಾರದೀಪ್ತಂ ಸದಾ ಪ್ರಸ್ನುತಾಸ್ಯಮ್ ||5||

ಶಿರೀಷಪ್ರಸೂನೋಲ್ಲಸದ್ಬಾಹುದಂಡೈ –
ರ್ಜ್ವಲದ್ಬಾಣಕೋದಂಡಪಾಶಾಂಕುಶೈಶ್ಚ |
ಚಲತ್ಕಂಕಣೋದಾರಕೇಯೂರಭೂಷೋ –
ಜ್ಜ್ವಲದ್ಭಿರ್ಲಸಂತೀಂ ಭಜೇ ಶ್ರೀ ಭವಾನೀಮ್ ||6||

ಶರತ್ಪೂರ್ಣಚಂದ್ರಪ್ರಭಾಪೂರ್ಣಬಿಂಬಾ –
ಧರಸ್ಮೇರವಕ್ತ್ರಾರವಿಂದಾಂ ಸುಶಾಂತಾಮ್ |
ಸುರರತ್ನಾವಲೀಹಾರತಾಟಂಕಶೋಭಾಂ
ಮಹಾಸುಪ್ರಸನ್ನಾಂ ಭಜೇ ಶ್ರೀ ಭವಾನೀಮ್ ||7||

ಸುನಾಸಾಪುಟಂ ಸುಂದರಭ್ರೂಲಲಾಟಂ
ತವೌಷ್ಠಶ್ರಿಯಂ ದಾನದಕ್ಷಂ ಕಟಾಕ್ಷಮ್ |
ಲಲಾಟೇಲ್ಲಸದ್ಗಂಡಕಸ್ತೂರಿಭೂಷಂ
ಸ್ಫುರಚ್ಛ್ರೀಮುಖಾಂಭೋಜಮೀಡೇsಹಮಂಬ ||8||

ಚಲತ್ಕುಂತಲಾಂತರ್ಭ್ರಮೃದ್ಭೃಂಗವೃಂದಂ
ಘನಸ್ನಿಗ್ಧಧಮ್ಮಿಲ್ಲಭೂಷೋಜ್ವಲಂ ತೇ |
ಸ್ಫುರನ್ಮೌಲಿಮಾಣಿಕ್ಯಬದ್ಧೇಂದುರೇಖಾ –
ವಿಲಾಸೋಲ್ಲಸದ್ದಿವ್ಯಮೂರ್ಧಾನಮೀಡೇ ||9||

ಇತಿ ಶ್ರೀ ಭವಾನಿ ಸ್ವರೂಪಂ ತವೇದಂ
ಪ್ರಪಂಚಾತ್ಪರಂ ಚಾತಿಸೂಕ್ಷ್ಮಂ ಪ್ರಸನ್ನಮ್|
ಸ್ಫುರತ್ವಂಬ ಡಿಂಬಸ್ಯ ಮೇ ಹೃತ್ಸರೋಜೇ
ಸದಾ ವಾಂಗ್ಮಯಂ ಸರ್ವ ತೇಜೋ ಮಯಂ ಚ ||10||

ಗಣೇಶಾಭಿಮುಖ್ಯಾಖಿಲೈಃ ಶಕ್ತಿವೃಂದೈಃ
ಭೃತಾಂ ಸ್ಫುರಚ್ಛ್ರೀಮಹಾಚಕ್ರ ರಾಜೋಲ್ಲಸಂತೀಮ್ |
ಪರಾಂ ರಾಜರಾಜೇಶ್ವರೀಂ ತ್ವಾಂ ಭವಾನೀಂ (ತ್ರೈಪುರಿ ತ್ವಾಂ)
ಶಿವಾಂಕೋಪರಿಸ್ಥಾಂ ಶಿವಾಂ ಭಾವಯೇsಹಮ್ ||11||

ತ್ವಮರ್ಕಸ್ತ್ವಮಿಂದುಸ್ತ್ವಮಗ್ನಿಸ್ತ್ವಮಾಪ
ಸ್ತ್ವಮಾಕಾಶಭೂವಾಯವಸ್ತ್ವಂ ಮಹತ್ತ್ವಂ |
ತ್ವದನ್ಯೋ ನ ಕಶ್ಚಿತ್ ಪ್ರಪಂಚೋsಸ್ತಿ ಸರ್ವಂ
ತ್ವಮಾನಂದಸಂವಿತ್ಸ್ವರೂಪಾಂ ಭಜೇsಹಮ್ ||12||

ಶ್ರುತೀನಾಮಗಮ್ಯೆಸ್ಸುವೇದಾಗಮಜ್ಞಾ
ಮಹಿಮ್ನೋ ನ ಜಾನಂತಿ ಪಾರಂ ತವಾಂಬ |
ಸ್ತುತಿಂ ಕರ್ತುಮಿಚ್ಛಾಮಿ ತೇ ತ್ವಂ ಭವಾನಿ
ಕ್ಷಮಸ್ವೇದಮತ್ರ ಪ್ರಮುಗ್ಧಃ ಕಿಲಾಹಮ್ ||13||

ಗುರುಸ್ತ್ವಂ ಶಿವಸ್ತ್ವಂ ಚ ಶಕ್ತಿಸ್ತ್ವಮೇವ
ತ್ವಮೇವಾಸಿ ಮಾತಾ ಪಿತಾ ಚ ತ್ವಮೇವ |
ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧು-
ರ್ಗತಿರ್ಮೇ ಮತಿರ್ದೇವಿ ಸರ್ವಂ ತ್ವಮೇವ ||14||

ಶರಣ್ಯೇ ವರೇಣ್ಯೇ ಸುಕಾರುಣ್ಯಮೂರ್ತೇ
ಹಿರಣ್ಯೋದರಾದ್ಯೈರಗಣ್ಯೇ ಸುಪುಣ್ಯೇ |
ಭವಾರಣ್ಯಭೀತೇಶ್ಚ ಮಾಂ ಪಾಹಿ ಭದ್ರೇ
ನಮಸ್ತೇ ನಮಸ್ತೇ ನಮಸ್ತೇ ಭವಾನಿ ||15||

ಇತೀಮಾಂ ಮಹಚ್ಛ್ರೀಭವಾನೀಭುಜಂಗಂ
ಸ್ತುತಿಂ ಯಃ ಪಠೇದ್ಭಕ್ತಿಯುಕ್ತಶ್ಚ ತಸ್ಮೈ |
ಸ್ವಕೀಯಂ ಪದಂ ಶಾಶ್ವತಂ ವೇದಸಾರಂ
ಶ್ರಿಯಂ ಚಾಷ್ಟಸಿದ್ಧಿಂ ಭವಾನೀ ದದಾತಿ ||16||

ಭವಾನೀ ಭವಾನೀ ಭವಾನೀ ತ್ರಿವಾರ-
ಮುದಾರಂ ಮುದಾ ಸರ್ವದಾ ಯೇ ಜಪಂತಿ |
ನ ಶೋಕೋ ನ ಮೋಹೋ ನ ಪಾಪಂ ನ ಭೀತಿಃ
ಕದಾಚಿತ್ಕಥಂಚಿತ್ಕುತಶ್ಚಿಜ್ಜನಾನಾಮ್ ||17||

ಸ್ತೋತ್ರವ ಕೇಳಲೆಃ

2 thoughts on “ಭವಾನೀ ಭುಜಂಗ ಸ್ತೋತ್ರಮ್

  1. ಭವಾನಿ ಸ್ವರೂಪ ವರ್ಣನೆ ಈ ಕೃತಿ ಒಳ್ಳೆ ಲಾಯಕ ಇದ್ದು. ಪೂರ್ವ ಪೀಠಿಕೆಳಿ ಸ್ತೋತ್ರ ವಿವರಣೆ ಬರದ್ದು ಚಂದ ಆಯ್ದು. ಶಂಕರಾಚಾರ್ಯರ ಕೃತಿಗೊ ಒಂದರಿಂದ ಇನ್ನೊಂದು ಲಾಯಕ ಇದ್ದು ಹೇಳಿ ಹೇಳೆಕ್ಕಷ್ಟೇ. ‘ಜೈ ಭವಾನಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×