- ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” - April 28, 2012
- ಶ್ರೀ ವ್ಯಾಸಕೃತ ರಾಮಾಷ್ಟಕಮ್ - April 1, 2012
- ಅರ್ಘ್ಯೆಜೆಪ : ಸಂಧ್ಯಾವಂದನೆ - November 28, 2011
ಮಾರ್ಕಂಡೇಯ ಮುನಿಗಳಿಂದ ರಚಿತವಾದ ಈ ಸ್ತೋತ್ರವ ಪಠಣಮಾಡಿರೆ ಮೃತ್ಯುಭಯ ದೂರ ಆಗಿ, ಆಯುರಾರೋಗ್ಯ ಸೌಭಾಗ್ಯಂಗ ಸಿಕ್ಕುತ್ತು ಹೇಳ್ತವು.
ಎಲ್ಲೋರುದೇ ಇದರ ಸದುಪಯೋಗ ಪಡಕ್ಕೊಳೇಕು – ಹೇಳ್ತದು ನಮ್ಮ ಹಾರಯಿಕೆ.
(ಇದರ್ಲಿ ಪಾಠಾಂತರ ಬೇರೆಬೇರೆ ನಮುನೆ ಇಕ್ಕು. ಎಲ್ಲವೂ ಸರಿಯೇ)
ಚಂದ್ರಶೇಖರಾಷ್ಟಕ ಸ್ತೋತ್ರಮ್:
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್ |
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ || ಪ ||
ರತ್ನಸಾನು ಶರಾಸನಂ ರಜತಾದ್ರಿ ಶೃಂಗ ನಿಕೇತನಂ
ಶಿಂಜಿನೀಕೃತ ಪನ್ನಗೇಶ್ವರ ಮಚ್ಯುತಾನನ ಸಾಯಕಮ್ |
ಕ್ಷಿಪ್ರದಗ್ದ ಪುರತ್ರಯಂ ತ್ರಿದಿವಾಲಿಯೈರಭಿವಂದಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 1 ||
ಮತ್ತವಾರಣ ಮುಖ್ಯಚರ್ಮ ಕೃತೋತ್ತರೀಯ ಮನೋಹರಂ
ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿ ಸರೋರುಹಮ್ |
ದೇವ ಸಿಂಧು ತರಂಗ ಶೀಕರ ಸಿಕ್ತ ಶುಭ್ರ ಜಟಾಧರಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 2 ||
ಕುಂಡಲೀಕೃತ ಕುಂಡಲೇಶ್ವರ ಕುಂಡಲಂ ವೃಷವಾಹನಂ
ನಾರದಾದಿ ಮುನೀಶ್ವರಸ್ತುತ ವೈಭವಂ ಭುವನೇಶ್ವರಮ್ |
ಅಂಧಕಾಂತಕ ಮಾಶ್ರಿತಾಮರ ಪಾದಪಂ ಶಮನಾಂತಕಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 3 ||
ಪಂಚಪಾದಪ ಪುಷ್ಪಗಂಧ ಪದಾಂಬುಜದ್ವಯ ಶೋಭಿತಂ
ಫಾಲಲೋಚನ ಜಾತಪಾವಕ ದಗ್ಧ ಮನ್ಮಧ ವಿಗ್ರಹಮ್ |
ಭಸ್ಮದಿಗ್ದ ಕಲೇವರಂ ಭವನಾಶನಂ ಭವಮವ್ಯಯಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 4 ||
ಯಕ್ಷ ರಾಜಸಖಂ ಭಗಾಕ್ಷ ಹರಂ ಭುಜಂಗ ವಿಭೂಷಣಮ್
ಶೈಲರಾಜ ಸುತಾಪರಿಷ್ಕೃತ ಚಾರುವಾಮ ಕಲೇವರಮ್ |
ಕ್ಷ್ವೇಡನೀಲಗಲಿಂ ಪರಶ್ವಧ ಧಾರಿಣಂ ಮೃಗಧಾರಿಣಮ್
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 5 ||
ಭೇಷಜಂ ಭವರೋಗಿಣಾಮಖಿಲಾಪದಾ ಮಪಹಾರಿಣಂ
ದಕ್ಷಯಜ್ಞ ವಿನಾಶನಂ ತ್ರಿಗುಣಾತ್ಮಕಂ ತ್ರಿವಿಲೋಚನಮ್ |
ಭುಕ್ತಿ ಮುಕ್ತಿ ಫಲಪ್ರದಂ ಸಕಲಾಘ ಸಂಘ ನಿಬರ್ಹಣಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || 6 ||
ವಿಶ್ವಸೃಷ್ಟಿವಿಧಾಯಿನಂ ಪುನರೇವ ಪಾಲನತತ್ಪರಂ
ಸಂಹರಂತಪಿ ಪ್ರಪಂಚಮಶೇಷಲೋಕನಿವಾಸಿನಮ್ |
ಕ್ರೀಡಯಂತಮರ್ನಿಶಂ ಗಣನಾಥಯೂಥ ಸಮನ್ವಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈಯಮಃ ||7||
ಮೃತ್ಯುಭೀತಮೃಕಂಡುಸೂನುಕೃತಸ್ತವಂ ಶಿವಸನ್ನಿಧೌ
ಯತ್ರ ಕುತ್ರ ಚ ಯಃ ಪಠೇನ್ನಹಿತಸ್ಯ ಮೃತ್ಯು ಭಯಂಭವೇತ್ |
ಪೂರ್ಣಮಾಯುರರೋಗಿತಾಮಖಿಲಾರ್ಥ ಸಂಪದಮಾದರಂ
ಚಂದ್ರಶೇಖರ ಏವ ತಸ್ಯ ದದಾತಿ ಮುಕ್ತಿಮಯತ್ನತಃ ||8||
~*~*~*~
ಸೂ:
- ಚಂದ್ರಶೇಖರಾಷ್ಟಕದ ಧ್ವನಿ ಇಲ್ಲಿದ್ದು:
ಧನ್ಯವಾದಂಗೊ..
ಖುಶಿಯಾತು ಬಟ್ಟಮಾವ..
ಧನ್ಯವಾದ..
ಬಟ್ಟಮಾವ°,
ನಿಂಗಳ ತುಂಬಾ ಇಷ್ಟದ ಶ್ಲೋಕವ ಎಂಗೊಗೂ ಹಂಚಿದ್ದಕ್ಕೆ ಧನ್ಯವಾದಂಗೋ. ಇದರ ಪ್ರತಿ ಸೋಮವಾರ ಹೇಳಿದವಂಗೆ ಒಳ್ಳೆದಾವುತ್ತಡ್ಡ ಅಪ್ಪೋ?
ಸರ್ವ ದುಃಖಂಗಳ ನಿವಾರಣೆ, ಸರ್ವ ರೋಗ ನಿವಾರಣೆ,ಎಲ್ಲಾ ಸಮಸ್ಯೆಗಳುದೇ ಚಂದ್ರಶೇಖರನಾದ ಶಿವನ ಅರ್ಚನೆ ಮಾಡುದರಿಂದ ಪರಿಹಾರ ಆವುತ್ತು ಹೇಳುದೇ ಈ ಶ್ಲೋಕದ ಮೂಲ ತಾತ್ಪರ್ಯ ಅಲ್ಲದೋ?
ನಿಂಗಳ ಅಂಬೇರ್ಪಿಲಿಯೂ ಪುರುಸೋತ್ತು ಮಾಡಿ ಬಂದು, ಬೈಲಿಂಗೆ ಚಂದ್ರಶೇಖರಾಷ್ಟಕ ಸ್ತೋತ್ರವ ಹೇಳಿ ಕೊಟ್ಟದಕ್ಕೆ ತುಂಬಾ ತುಂಬಾ ತುಂಬಾ ಧನ್ಯವಾದಂಗೋ.
ತುಂಬ ಆಕರ್ಷಕ, ಸುಶ್ರಾವ್ಯವಾದ ಸ್ತೋತ್ರ ಇದು.
ಸುಳ್ಯ ಕೇಶವಕೃಪಾ ವೇದಶಿಬಿರದ ಮಕ್ಕೊಗೆ ಕಂಠಪಾಠ ಮಾಡ್ಸುತ್ತವು. ಬಟ್ಟಮಾವ ‘ಪಾಠಾಂತರಂಗೊ ಇಕ್ಕು’ ಹೇಳಿದ್ದು ನಿಜ. ಅಲ್ಲಿ ಕಲುಸುವ ಸ್ತೋತ್ರಲ್ಲಿ ಒಂದು ಶ್ಲೋಕ ಹೆಚ್ಚಿಗೆಯೂ ಇದ್ದು.
ಭಕ್ತವತ್ಸಲಮರ್ಚಿತಂ ನಿಧಿಮಕ್ಷರಂ ಹರಿದಂಬರಮ್
ಸರ್ವಭೂತಪತಿಂ ಪರಾತ್ಪರಮಪ್ರಮೇಯಮನುತ್ತಮಮ್
ಸೋಮವಾರಿನ ಭೂಹುತಾಶನ ಸೋಮಪಾನಿಲಖಾಕೃತಿಮ್
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ
( ಎನ್ನ ಅನಿಸಿಕೆ ಪ್ರಕಾರ ಈ ಶ್ಲೋಕ ಸೇರಿರೇ ‘ಅಷ್ಟಕ’ ಪೂರ್ತಿ ಅಕ್ಕಷ್ಟೆ. ಅಕೇರಿಯಾಣ ‘ಮೃತ್ಯುಭೀತ…’ ಶ್ಲೋಕ ಪಠನದ ಫಲಶೃತಿ ಹೇಳುವ ರೀತಿಲಿ ಇದ್ದು. ಅದು ಅಷ್ಟಕದ ಲೆಕ್ಕಕ್ಕೆ ಬತ್ತಿಲ್ಲೆ)
7ನೇ ಶ್ಲೋಕದ ಮೂರನೇ ಸಾಲಿಲ್ಲಿ ಕ್ರೀಡಯಂತಮಹರ್ನಿಶಂ ಹೇಳಿ ಆಯೆಕ್ಕು. ( ‘ಹ’ ಅಕ್ಷರ ಬಿಟ್ಟುಹೋಯಿದು) ಹಾಂಗೆಯೇ ಎಂಟನೇ ಶ್ಲೋಕಲ್ಲಿ ಪೂರ್ಣಮಾಯುರರೋ’ಗ’ತಾಂ ಆಯೆಕ್ಕು. ‘ಗಿ’ ಅಲ್ಲ.
5ನೇ ಶ್ಲೋಕದ ಮೂರನೇ ಸಾಲು ‘ಕ್ಷ್ವೇಳನೀಳಗಳಂ’ ಹೇಳಿಯೂ ಪಾಠಾಂತರ ಇದ್ದು.
ಪಠನಕ್ಕೂ ಶ್ರವಣಕ್ಕೂ ಅತ್ಯಂತ ಹಿತಕಾರಿಯಾಗಿಪ್ಪ ಈ ಅಷ್ಟಕವ ಬೈಲಿಂಗೆ ಒದಗುಸಿದ ಬಟ್ಟಮಾವಂಗೆ ಅನಂತ ಧನ್ಯವಾದಂಗೊ. ಹರೇ ರಾಮ.
ಹೋ.. ಭಟ್ಟ ಮಾವನ ಬಹು ದಿನದ ಬಳಿಕ ಕಂಡು ಸಂತೋಷ ಆತಿದ.
ಉಪಯುಕ್ತ ಸ್ತೋತ್ರ ಉತ್ತಮ ಧ್ವನಿ ಸಹಿತ ಇಲ್ಲಿ ಒದಗಿಸಕೊಟ್ಟದಕ್ಕೆ ಧನ್ಯವಾದ ಹೇಳಿ ನಮ್ಮ ಒಪ್ಪ.
ಚಂದ್ರಶೇಖರಾಷ್ಟಕವ ಒದಗುಸಿಕೊಟ್ಟ ಬಟ್ಟಮಾವಂಗೆ ಮನಸಾ ವಂದಿಸುತ್ತೆ. ಧನ್ಯವಾದಂಗೊ.
ಬಟ್ಟಮಾವ, ಈ ಸ್ತೋತ್ರವ ಆನು ಒ೦ದು ಸತ್ತಿ ಎಲ್ಲಿಯೋ ದೇವಸ್ತಾನಲ್ಲಿ ಕೇಳಿತ್ತೆ, ಭಾರಿಕೊಶಿಯಾಗಿತ್ತು ಅಪ್ಪಾ ಶಿವನ ಸ್ತೋತ್ರ ಕೇಳಿ..
ಮತ್ತೆ ಆನು ಇದರ youtube ಲಿ ಎಲ್ಲಾ ಹುಡುಕ್ಕಿ ಸಿಕ್ಕಿದತ್ತು..
ಇಲ್ಲಿ ನಿ೦ಗೊ ಇದರ ಬರದು ಕೊಟ್ಟದು ಒಳ್ಳೆದಾತು.. ಇದರ ಪ್ರಿ೦ಟುಮಾಡಿ ಮಡುಗಿಯೊಳ್ತೆ.. 😉 ಧನ್ಯವಾದ..
ಇಂತಹ ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಬಟ್ಟಮಾವಂಗೆ ಹೃತ್ಪೂರ್ವಕ ಧನ್ಯವಾದಂಗೊ.