Oppanna.com

ದಶಾವತಾರ ಸ್ತೋತ್ರಮ್

ಬರದೋರು :   ಬಟ್ಟಮಾವ°    on   08/09/2011    5 ಒಪ್ಪಂಗೊ

ಬಟ್ಟಮಾವ°

ಲಲಿತಾಸಹಸ್ರನಾಮಲ್ಲಿ ಒಂದು ದಿಕ್ಕೆ ಹೇಳ್ತು,ಕರಾಂಗುಲಿನಖೋತ್ಪನ್ನನಾರಾಯಣದಶಾಕೃತಿಃ  – ದೇವಿಯ ಬೆರಳುಗಳ ಉಗುರಿಂದ ನಾರಾಯಣನ ದಶಾಕೃತಿಯ ಉತ್ಪನ್ನ ಆತು ಹೇಳಿ!!
ಶ್ರೀಮನ್ನಾರಾಯಣನ ಈ ದಶಾವತಾರದ ಕತೆ ಎಲ್ಲರಿಂಗೂ ಬಗೆಬಗೆಲಿ ಅರಡಿಗು ಅಲ್ಲದಾ? ಆದರೂ ಬೈಲಿಲಿ ಒಂದರಿ ನೆಂಪು ಮಾಡುವ° ಆಗದೋ?

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತೆ ಕಲ್ಕಿ ಹೇಳ್ತ ಹತ್ತು ಅವತಾರಂಗಳಲ್ಲಿ ಧರೆಗಿಳಿದು ಬಂದ ಪಾಲನಕರ್ತ° ವಿಷ್ಣು.
ಮಹಾಪ್ರಳಯ ಕಾಲಲ್ಲಿ, ವೇದಂಗಳ, ಸಪ್ತರ್ಷಿಗಳ, ಸಕಲ ಜೀವರಾಶಿಗಳ ಎಲ್ಲದರ ರಕ್ಷಣೆ ಮಾಡುಲೆ ಮೀನ ರೂಪಧಾರಿ ಆಗಿ ಅವತರಿಸಿ, ಎಲ್ಲರ ರಕ್ಷಣೆ ಮಾಡಿ ಹೊಸ ಯುಗಕ್ಕೆ ನಾಂದಿ ಮಾಡ್ತ°.
ಅಮರತ್ವಕ್ಕೆ ಬೇಕಾಗಿ ರಕ್ಕಸಂಗಳೂ, ದೇವತೆಗಳೂ ಸಮುದ್ರವ ಕಡವಲೆ ಹೆರಟಪ್ಪಗ ಮಂದರ ಪರ್ವತ ನೀರಿಲಿ ಮುಂಗದ್ದ ಹಾಂಗೆ ಕೂರ್ಮ ರೂಪಲ್ಲಿ ಬಂದು ಬೆನ್ನು ಕೊಟ್ಟು ಅಲ್ಲಿ ತಾಂಗಿದ°.
ಹಿರಣ್ಯಾಕ್ಷ° ಹೇಳ್ತ ರಕ್ಕಸ°, ಭೂದೇವಿಯ ಅಟ್ಟಿಸಿಗೊಂಡು ಹೋಗಿ ಹಿಂಸೆ ಮಾಡುವಾಗ ವರಾಹ ರೂಪ ಧಾರಿ ಆಗಿ ಬಂದು ಕೋರೆದಾಡೆಲಿ ಭೂಮಿ ದೇವಿಯ ರಕ್ಷಣೆ ಮಾಡಿ ಲೋಕಕಲ್ಯಾಣ ಮಾಡಿದ°.
ಈ ರಕ್ಕಸಂಗ ಪಡಕ್ಕೊಂಬ ವರಂಗಳೂ ವಿಚಿತ್ರವೇ ಅಲ್ಲದೋ!!! ಹಾಂಗೇ ಒಂದು ಅಸಂಬದ್ಧ ವರ ತೆಕ್ಕೊಂಡ ಹಿರಣ್ಯಕಶಿಪುವಿನ, ವಿಷ್ಣು, ನರಸಿಂಹಾವತಾರ ಎತ್ತಿ ಹೊಟ್ಟೆಬಗದೇ ಕೊಂದ°!!!
ಇನ್ನೊಬ್ಬ ರಕ್ಕಸ°, ಬಲಿ ಚಕ್ರವರ್ತಿ… ಅವನ ಪಾತಾಳಕ್ಕೆ ಇಳಿಶುಲೆ ಬೇಕಾಗಿ ವಿಷ್ಣು ಒಳ್ಳೆ ಕೆಣಿ ಮಾಡಿ ಸಣ್ಣ ಮಾಣಿಯ ರೂಪಲ್ಲಿ ಬತ್ತ° ಅದಾ…!! ಬಲಿಯ ಮಂಕಡ್ಸಿ ಅವನ ಹತ್ತರಂದ ಮೂರು ಬಕ್ಕಾರು ಭೂಮಿ ಕೇಳಿ, ಅವ° ಒಪ್ಪಿ ಅಪ್ಪಗ, ಈ ಮಾಣಿ ಒಂದರಿಯಂಗೇ ದೇಹ ಬೆಳೆಶಿ, ತ್ರಿವಿಕ್ರಮ ಆಗಿ, ಎರಡು ಬಕ್ಕಾರಿಲಿ ಭೂಮಿಯನ್ನೂ, ಸ್ವರ್ಗವನ್ನೂ ಅಳದಿಕ್ಕಿ, ಮೂರನೆದಕ್ಕೆ ಕಾಲು ಎಲ್ಲಿ ಮಡಗೆಕ್ಕು ಕೇಳಿದ್ದೇ ಅಲ್ಲದಾ? ಇವಂಗೆ ಮಾತು ಕೊಟ್ಟಾಯಿದು. ಮತ್ತೆಂತ ಮಾಡುದು? ಅವನದ್ದಾಗಿ ಒಳುದ್ದು ಅವನ ದೇಹ ಮಾಂತ್ರ! ಎನ್ನ ತಲೆಲೇ ಮಡಗಿಕ್ಕು ಪುಣ್ಯಾತ್ಮ, ಹೇಳಿದ°. ಸರಿ ಹೇಳಿದ ತ್ರಿವಿಕ್ರಮ ಅವನ ಮೆಟ್ಟಿ ಪಾತಾಳಕ್ಕೆ ತಳ್ಳಿದ°. ಭೂಮಿಲಿ ತುಂಬಿ ಹೋದ ಅನ್ಯಾಯ ಮಾಡ್ತ ಕ್ಷತ್ರಿಯರ ನಾಶಕ್ಕೆ ಬೇಕಾಗಿಯೇ ಪರಶುರಾಮನ ರೂಪ ಹೊತ್ತು ಬಂದ°. ಈ ಅವತಾರವ ನಾವು ಮರವಲೆ ಎಡಿಯ ಮಿನಿಯಾ!!!
ನಾವು ನಿಂಬ ಭೂಮಿಯ ಸಮುದ್ರರಾಜಂದ ಕೊಡ್ಸಿದ ಅವತಾರ ಪುರುಷ ಅವ°!!

ಇದಾದಿಕ್ಕಿ ಮತ್ತೆ ಬತ್ತದು.. ರಾಮನ ಅವತಾರ. ಮೂರು ಲೋಕಲ್ಲಿಯೂ ಪ್ರಬಲ ಆಗಿ ಮೆರಕ್ಕೊಂಡಿದ್ದ ರಾವಣ ತನ್ನ ಅಕೃತ್ಯಂಗಳಿಂದಾಗಿಯೇ ಸುಮಾರು ಶಾಪ ಪಡದೂ, ಪಡದೂ ಅವನ ಪಾಪದ ಲೆಕ್ಕ ತುಂಬಿ ಅಪ್ಪಗ ಶ್ರೀ ರಾಮನ ಹೆಂಡತಿ ಸೀತೆಯ ಕದ್ದು ತೆಕ್ಕೊಂಡು ಹೋಗಿ, ಅಶೋಕಾ ವನಲ್ಲಿ ಮಡಿಗಿ, ಮತ್ತೆ ರಾಮ ಲಂಕೆಗೆ ಸೇತುವೆ ಕಟ್ಟಿ, ಅಲ್ಲಿಗೆ ವಾನರ ಸೇನೆಯ ಒಟ್ಟಿಂಗೆ ಹೋಗಿ, ರಾವಣನ ಕೊಂದು, ಸ್ವರ್ಣ ಲಂಕೆಲಿ ವಿಭೀಷಣಂಗೆ ಪಟ್ಟಾಭಿಷೇಕ ಮಾಡಿ, ಸೀತೆಯ ವಾಪಾಸು ಕರಕ್ಕೊಂಡು ಅಯೋಧ್ಯೆಗೆ ಹೋವುತ್ತ°.
ಈ ಕತೆಗಪ್ಪಗ ನೆಂಪಾತಿದಾ.., ಈಗ ಚಾತುರ್ಮಾಸ್ಯಲ್ಲಿ, ಗೋಕರ್ಣದ ಅಶೋಕೆಲಿ ನಮ್ಮ ಗುರುಗೋ ರಾಮಕಥೆಯ ಎಷ್ಟೊಂದು ವಿಧಲ್ಲಿ ವಿವರುಸಿ ಹೇಳ್ತಾ ಇದ್ದವಡ್ಡ.
ಕಳುದ ಒರಿಶ ಹೋಗಿತ್ತಿದ್ದಿದಾ ನಾವು… ಒಪ್ಪಣ್ಣ ಹೋದನೋ ಏನೋ… ಗುರಿಕ್ಕಾರ್ರು ಆಚ ವಾರ ಹೋಗಿ ಬಯಿಂದವಡ್ಡ ಸುಭಗ° ಹೇಳಿದ°!

ಇನ್ನು ಕೃಷ್ಣಾವತಾರ. ಈ ಅವತಾರಲ್ಲಿ ಕೊಂದ ರಕ್ಕಸಂಗಳ ಲೆಕ್ಕ ಇಕ್ಕೋ!! ಸಣ್ಣ ಬಾಬೆ ಆಗಿಪ್ಪಲ್ಲಿಂದ ಹಿಡುದು ಸುಮಾರು ರಕ್ಕಸಂಗಳ ಮುಗಿಶಿದ್ದ!! ಅವನ ಎಲ್ಲೋರಿಂಗೂ ಇಷ್ಟವೇ ಅಲ್ಲದಾ? ನಮ್ಮ ನೆಗೆ ಮಾಣಿ ಎಲ್ಲೋರಿಂಗೂ ಸಿಕ್ಕುತ್ತ ನಮುನೆಲಿ ಎಲ್ಲರಿಂಗೂ ಕಾಂಗಡ್ಡ ಅವನ. ಮನಸಾ ನೆನೆಸಿದಲ್ಲಿ ಪ್ರತ್ಯಕ್ಷ ಅಕ್ಕದಾ. ಅವ° ಯಾವಗಲೂ ಮಂದಹಾಸಲ್ಲಿಯೇ ಇಪ್ಪದು, ಹಾಂಗೆ ಕೃಷ್ಣನ ಭಕ್ತೀಲಿ ಅರ್ಚನೆ ಮಾಡುವವ್ವುದೇ ಕೊಶೀಲಿ ಇರ್ತವಡ್ಡ.
ಬುದ್ಧ ಹೇಳ್ತ ಅವತಾರ ಯೇವುದು ಹೇಳಿ ನಿಖರ ಮಾಹಿತಿ ಇಲ್ಲೆ ಇದಾ… ಅದು ಬಹುಶ ’ಪ್ರಾಜ್ಞ’ ಹೇಳ್ತ ರೂಪಲ್ಲಿ ಆದಿಕ್ಕು.
ಪ್ರಾಜ್ಞ ಹೇದರೆ ತಿಳುದವ°, ನಮ್ಮ ಸನಾತನ ಸಂಸ್ಕಾರಂಗೊ ನಷ್ಟ ಆವುತ್ತಾ ಇಪ್ಪಗ ಧರ್ಮರಕ್ಷಣೆಗೆ ಬಂದ ಶ್ರೀ ಶಂಕರಾಚಾರ್ಯರ ಹಾಂಗೆ ಅವತಾರ ರೂಪಿಯಾಗಿ, ಹಲವಾರು ಅವತಾರ ಪುರುಷರ ರೂಪಲ್ಲಿ ಬಂದವ° ಆದಿಕ್ಕು. ದೇವರಿಂಗೂ ಅಂದಾಜು ಆಗಿಕ್ಕು, ಇನ್ನಾಣ ಕಾಲಲ್ಲಿ ಒಂದೊಂದು ಅವತಾರ ಸಾಲ ಸುಮಾರು ಜೆನರ ರೂಪಲ್ಲಿ ಹೇಳಿದರೆ ಮಾಂತ್ರ ಈ ಜೆನೆಂಗೊಕ್ಕೆ ಅರಿವಕ್ಕಷ್ಟೇ ಹೇಳಿ!!
ಇನ್ನು ಒಳುದ ಅವತಾರ ಕಲ್ಕಿದು.. ಅದಕ್ಕಿನ್ನೂ ಸಮಯ ಆಯಿದಿಲ್ಲೆ ಕಾಣುತ್ತು.. ಎಲ್ಲ ಅವತಾರ ಅಪ್ಪಲೆಯೂ ಆಯಾ ಅವತಾರದ ರಕ್ಕಸರ ಪಾಪಂಗೋ ಒಂದು ಅತಿರೇಕಕ್ಕೆ ಎತ್ತುವನ್ನಾರ ತಾಳ್ಮೆಲಿ ಕೂದವ° ಅಲ್ಲದಾ ಈ ಮಹಾವಿಷ್ಣು.
ಈಗಳೂ ಸಮಯ ಬಂದಪ್ಪಗ ದುಷ್ಟ ಶಿಕ್ಷೆಗೆ ಶಿಷ್ಟ ರಕ್ಷೆಗೆ ಖಂಡಿತಾ ಅವತಾರ ಎತ್ತಿ ಬಂದು, ನಮ್ಮ ಎಲ್ಲರ ರಕ್ಷೆ ಮಾಡ್ತ°.

ದಶಾವತಾರವ ದಶಸಹಸ್ರ ರೂಪಲ್ಲಿ ಹೇಳಿದರೂ ಕತೆ ಶ್ರೀಮಹಾವಿಷ್ಣುವಿಂದೇ ಅಪ್ಪದಿದಾ. ಎಷ್ಟು ಹೇಳಿದರೂ ಬಚ್ಚ, ಬೊಡಿಯ. ಪ್ರತಿ ಸರ್ತಿಯೂ ಹೊಸ ರೂಪ ಕಾಂಗಿದಾ. ನವಗೆ ನಮ್ಮ ಹೆರಿಯೋರು ಸುಮಾರು ಸ್ತೋತ್ರಂಗಳ ರಚನೆ ಮಾಡಿ ದೇವರ ಸುಲಾಬಲ್ಲಿ ಒಲಿಶುಲೆ ದಾರಿ ತೋರ್ಸಿದ್ದವು.
ಕೆಲವು ಬರದೋರ ಬಗ್ಗೆ ಮಾಹಿತಿ ಇರ್ತು. ಕೆಲವು ಬಾಯಿಂದ ಬಾಯಿಗೆ, ತಲೆಮಾರುಗಳಿಂದ ಹರ್ಕೊಂಡು ಬತ್ತಿದಾ.. ಹಾಂಗೆ ಇಪ್ಪ ಒಂದು ಭಜನಾ ರೂಪದ ಸ್ತೋತ್ರ.
ಎಲ್ಲರೂ ಇದರ ನಿತ್ಯ ಹೇಳಿ ಶ್ರೀಮನ್ನಾರಾಯಣನ ಕೃಪೆಗೆ ಪಾತ್ರರಾಗಿ ಹೇಳಿ ಆಶಯ..

ದಶಾವತಾರ ಸ್ತೋತ್ರಮ್

ರಾಮಹರೇ – ಕೃಷ್ಣಹರೇ, ತವ ನಾಮವದಾಮಿ ಸದೈವ ಹರೇ |
ರಾಮಸ್ಮರಣಂ ಧನ್ಯೋಪಾಯಂ, ನ ಹಿ ಪಶ್ಯಾಮೋ ಭವತರಣೇ |
ರಾಮಹರೇ – ಕೃಷ್ಣಹರೇ, ತವ ನಾಮವದಾಮಿ ಸದೈವ ಹರೇ || ಪ ||

ವೇದೋದ್ಧಾರ-ವಿಚಾರಮತೇ, ಸೋಮಕದಾನವ ಸಂಹರಣೇ ।
ಮತ್ಸ್ಯಾಕಾರ-ಶರೀರ ನಮೋ ಹರಿ, ಭಕ್ತಂತೇ ಪರಿ ಪಾಲಯಮಾಮ್ || 1 ||

ಮಂದಾರಾಚಲಧಾರಣ ಹೇತೋ, ದೇವಾಸುರ ಪರಿಪಾಲ ನುತೇ ।
ಕೂರ್ಮಾಕಾರ ಶರೀರ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||2 ||

ಭೂಚೋರಕಹರ ಪುಣ್ಯದ ಮೂರ್ತೇ, ಕ್ರೋಢೋದ್ಧೃತ ಭೂದೇವಿ ಹರೇ ।
ಕ್ರೋಢಾಕಾರ ಶರೀರ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||3 ||

ಹೇಮಕಶಿಪು ತನುಧಾರಣಹೇತೋ, ಪ್ರಹ್ಲಾದಾಸುರಪಾಲನ ಭೋಃ ।
ನರಸಿಂಹಾಚ್ಯುತರೂಪ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||4 ||

ಬಲಿಮದಭಂಜನ ವಿತತಮತೇ, ಪಾದಾದ್ವಯಕೃತಲೋಕಕೃತೇ ।
ಪಟುವಟುವೇಷ ಮನೋಜ್ಞ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||5 ||

ಕ್ಷಿತಿಪತಿವಂಶ ಸಂಭವಮೂರ್ತೇ, ಕ್ಷಿತಿಪತಿ ರಕ್ಷಾಕ್ಷತಮೂರ್ತೇ ।
ಭೃಗುಪತಿರಾಮವರೇಣ್ಯ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||6 ||

ಸೀತಾವಲ್ಲಭ ದಾಶರಥೇ, ದಶರಥನಂದನ ಲೋಕಗುರೋ ।
ರಾವಣಮರ್ದನ ರಾಮ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||7॥

ಕೃಷ್ಣಾನಂದ ಕೃಪಾಜಲಧೇ, ಕಂಸಾರೇ ಕಮಲೇಶ ಹರೇ
ಕಾಲೀಮರ್ದನ ಕೃಷ್ಣ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||8 ||

ತ್ರಿಪುರಸತೀ ಮಾನವಿಹರಣಾ ತ್ರಿಪುರವಿಜಯ ಮಾರ್ಗಣ ರೂಪಾ |
ಶುದ್ಧಜ್ಞಾನವಿಬುದ್ಧ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ || 9 ||

ದುಷ್ಟವಿಮರ್ದನ ಶಿಷ್ಟಹರೇ, ಕಲಿತುರಗೋತ್ತಮ ವಾಹನ ರೇ ।
ಕಲ್ಕಿನ್ ಕರ ಕರವಾಲ ನಮೋ ಹರಿ, ಭಕ್ತಂತೇ ಪರಿಪಾಲಯಮಾಮ್ ||10 ||

ರಾಮಹರೇ – ಕೃಷ್ಣಹರೇ | ರಾಮಹರೇ – ಶ್ರೀಕೃಷ್ಣಹರೇ ||

~*~*~

ಸೂ:
ಇದೊಂದು ಭಜನೆ ಆದ ಕಾರಣ ಹಲವಾರು ಪಾಠಾಂತರಂಗೊ ಇದ್ದು.

5 thoughts on “ದಶಾವತಾರ ಸ್ತೋತ್ರಮ್

  1. ಸುಂದರ ಸ್ತುತಿ!
    {ಹರಿ, ಭಕ್ತಂತೇ ಪರಿಪಾಲಯಮಾಮ್}
    ಹರಿಭಕ್ತಂ ತೇ ಪರಿಪಾಲಯ ಮಾಮ್ ಹೇಳಿ ಆಗಿಕ್ಕೊ?
    (ಹರಿಭಕ್ತನಾದ ಎನ್ನ ಪರಿಪಾಲಿಸು)

  2. ಮಹಾ ವಿಷ್ಣುವಿನ ದಶಾವತಾರವ ಸ್ಥೂಲವಾಗಿ ಪರಿಚಯಿಸಿ, ಸ್ತೋತ್ರ ಮತ್ತೆ ಧ್ವನಿಯನ್ನೂ ಒದಗಿಸಿ ಕೊಟ್ಟ ಭಟ್ಟ ಮಾವಂಗೆ ನಮೋ ನಮಃ

  3. ಪೀಠಿಕೆ ಸಹಿತ ದಶಾವತಾರ ಸ್ತೋತ್ರ ಇಂಪಾದ ಧ್ವನಿ ಸಹಿತ ಇಲ್ಲಿ ಮೂಡಿ ಬಂದದು ಲಾಯಕ್ಕ ಆಯ್ದು. ಧನ್ಯವಾದಂಗೋ ಹೇಳಿಗೊಂಡು ಒಪ್ಪ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×