Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

ಬರದೋರು :   ಬೊಳುಂಬು ಕೃಷ್ಣಭಾವ°    on   03/02/2014    1 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

ಅಂಧಂ ತಮಃ ಪ್ರವಿಶಂತಿ ಯೇSಸಂಭೂತಿಮುಪಾಸತೇ |
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಗ್‍ಂ ರತಾಃ ||೧೨||

ಜಗದ ಚಿಂತನೆಯಲ್ಲಿ ಮಗ್ನರು ಕಪ್ಪು ಕತ್ತಲ ಪೊಗುವರು
ಆತ್ಮನಿರತರು ಮರೆತು ಜಗವನು ಹೆಚ್ಚು ಕತ್ತಲ ತುಳಿವರು ||೧೨||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಕುರುಡು ಕತ್ತಲೆ ಗತಿ ಅಸಂಭೂತಿ ಭಜಕರಿಗೆ
ನೆರಳವೊಲ್ ಸರಿಯುತಿಹ ಜಗವ ಪಿಡಿದರ್‍ಗೆ |
ಪಿರಿಯದದಕಿಂತ ಕತ್ತಲೆಯ ಗತಿ ಸಂಭೂತಿ-
ಪರರಿಗಾತ್ಮವನೆಳಸಿ ಜಗವ ಮರೆವರ್‍ಗೆ ||
ಸಂಭೂತಿ ಹೇಳ್ತ ಶಬ್ದದ ಬಗೆಗೆ ಮೊದಲಿಂದಲೂ ವಿಭಿನ್ನಾಪ್ರಾಯಂಗೊ ಇದ್ದು. ಸಾಮಾನ್ಯ ಉಪಯೋಗಲ್ಲಿ ಈ ಶಬ್ದದ ಅರ್ಥ ಆವಿರ್ಭಾವ ಹೇಳಿ ಆವುತ್ತು. ಉತ್ಪತ್ತಿ ಯಾವದಕ್ಕೆ ಇದ್ದೋ ಅದು ಸಂಭೂತಿ. ಅದಕ್ಕೆ ವಿರುದ್ಧವಾದುದು ಪ್ರಕೃತಿ, ಅವ್ಯಾಕೃತ ಅಥವಾ  ಅಸಂಭೂತಿ. ಇಲ್ಲಿ ಅಸಂಭೂತಿ ಹೇಳಿರೆ ಪರಮೇಶ್ವರನ ಉಪಾಧಿಯಾದ ಮಾಯೆ, ಅದು ಪರಬ್ರಹ್ಮ ಅಲ್ಲ. ಪರಬ್ರಹ್ಮಕ್ಕೆ ವಿಕಾರಂಗೊ ಇಲ್ಲದ್ದ ಕಾರಣ ಅದು ಪ್ರಕೃತಿ ಅಲ್ಲ.  ಎಲ್ಲಾ ಕಾಮಕರ್ಮಂಗೊವಕ್ಕೂ ಬೀಜರೂಪವಾಗಿಪ್ಪದು ಈ ಅಸಂಭೂತಿ. ಅದು ಅದರ್ಶನರೂಪಿಣಿಯೂ ಆಗಿಂಡಿದ್ದು. ಅದರ ಉಪಾಸನೆ ಮಾಡುವವು ಉಪಾಸನೆಗೊಳಪಡುವ ವಸ್ತುವಿಂಗೆ ಅನುಗುಣವಾಗಿ ಕತ್ತಲೆಯ ಹೊಗುತ್ತವು. ಹಿರಣ್ಯ ಗರ್ಭ ಹೇಳ್ತ ಕಾರ್ಯಬ್ರಹ್ಮದ ಉಪಾಸನೆ ಮಾಡುವವು ಅದಕ್ಕಿಂತ ಹೆಚ್ಚಿನ ಕತ್ತಲೆಯ ಹೊಗುತ್ತವು. ಅವ್ಯಾಕೃತವಾದ ಪ್ರಕೃತಿಯನ್ನೋ ಹಿರಣ್ಯಗರ್ಭನೆಂಬ ಕಾರ್ಯಬ್ರಹ್ಮವನ್ನೋ ಬೇರೆ ಬೇರೆಯಾಗಿ ಉಪಾಸನೆ ಮಾಡಿರೆ ಅಧಃಪತನವೇ ಫಲವಾಗಿ ಬಪ್ಪ ಕಾರಣ ಎರಡನ್ನೂ ಒಂದೇ ದೃಷ್ಟಿಂದ ಉಪಾಸನೆ ಮಾಡೆಕ್ಕು ಹೇಳುವದು ಶಂಕರ ಭಾಷ್ಯ.
ಪ್ರಕೃತಿಲಿ ಲಯಿಸಿರೂ ಸುಷುಪ್ತಿಲಿ ಇಪ್ಪ ಹಾಂಗೆ ಸಂಸಾರದುಃಖಂಗಳ ಅನುಭವಿಸೆಕ್ಕಾವುತ್ತಿಲ್ಲೆ. ಹಾಂಗಾಗಿ ಆ ಪ್ರಕೃತಿಲಿ ಲಯಿಸಲೆ ಆಶೆಪಡುವವು ಇಕ್ಕು, ಆದರೆ ಪ್ರಕೃತಿ ಸ್ವಾಭಾವಿಕವಾಗಿ ಜಡವಾದ ಕಾರಣ ಯಾವದೇ ಫಲಂಗಳನ್ನೂ ಕೊಡ್ಲೆ ಅಸಮರ್ಥವಾದ ಕಾರಣ ಅದರ ಉಪಾಸನೆ ಮಾಡುಲಾಗೆ ಹೇಳಿ ಹೇಳ್ಲೆ ಎಡಿತ್ತಿಲ್ಲೆ ಏಕೆ ಹೇಳಿರೆ ಕರ್ಮಂಗಳೂ ಇದೇ ರೀತಿಲಿ ಅಚೇತನವಾಗಿಪ್ಪದು; ಅದರ ಉಪಾಸನೆ ಮಾಡುವವಕ್ಕೆ ಫಲಂಗಳ ಭಗವಂತ° ಕೊಡುವ ಹಾಂಗೆ ಪ್ರಕೃತಿಯ ಉಪಾಸನೆ ಮಾಡುವವಕ್ಕು ಫಲಂಗಳ ಕೊಡುಗು.ಇಲ್ಲಿ ವ್ಯಾಕೃತೋಪಾಸನೆಯನ್ನೂ ಅವ್ಯಾಕೃತೋಪಾಸನೆಯನ್ನೂ ಒಟ್ಟೊಟ್ಟಿಂಗೆ ಮಾಡೆಕ್ಕಾವುತ್ತು ಹೇಳಿ ಹೇಳುವ ಕಾರಣ ಆ ಎರಡಕ್ಕೂ ಪ್ರತ್ಯೇಕ ಫಲಂಗೊ ಇದ್ದು ಹೇಳಿ ಗೊಂತಾವುತ್ತು.
~~~***~~~

One thought on “ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×