Oppanna.com

ಈಶಾವಾಸ್ಯೋಪನಿಷತ್ತು – ಪೀಠಿಕೆ

ಬರದೋರು :   ಬೊಳುಂಬು ಕೃಷ್ಣಭಾವ°    on   11/11/2013    5 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಪೀಠಿಕೆ
ಶುಕ್ಲ ಯಜುರ್ವೇದದ ೪೦ನೆಯ ಅಧ್ಯಾಯಕ್ಕೆ ‘ಈಶಾವಾಸ್ಯೋಪನಿಷತ್ತು’ ಹೇಳಿ ಹೆಸರು. ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಇದೂ ಒಂದು.  ಜ್ಞಾನ-ಅಜ್ಞಾನ,ವಿದ್ಯೆ-ಅವಿದ್ಯೆ,ಕರ್ಮ-ಆತ್ಮಂಗಳ ಕುರಿತಾದ ವಿಷಯಂಗಳ ಬಗ್ಗೆ ಇಲ್ಲಿ ವಿವರಣೆ ಸಿಕ್ಕುತ್ತು.
ಉಪನಿಷತ್ತುಗಳಲ್ಲಿ ಸುರುವಿಂಗೆ ಶಾಂತಿಪಾಠವ ಹೇಳುವ ಕ್ರಮ ಇದ್ದು. ಸಕಲ ಜಗತ್ತಿಂಗೂ ಒಳ್ಳೆಯದಾಯೆಕ್ಕು ಎಂಬ ಉದ್ದೇಶ ಇಲ್ಲಿಪ್ಪದು.
ಶಾಂತಿಪಾಠ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಅದು ಪೂರ್ಣ, ಇದೂ ಪೂರ್ಣವೇ. ಪೂರ್ಣವಾಗಿಪ್ಪದರಿಂದ ಪೂರ್ಣತ್ವ ಪ್ರಕಟಗೊಳುತ್ತು. ಪೂರ್ಣವ ಪೂರ್ಣಂದ ಕಳದರೆ ಒಳಿವದೂ ಪೂರ್ಣವಾಗಿರುತ್ತು. ಇಲ್ಲಿ ಅನಂತತೆಯ ಪರಿಕಲ್ಪನೆ ಇಪ್ಪದು.  ಅನಂತವಾಗಿಪ್ಪದು ಬ್ರಹ್ಮ. ಅದಕ್ಕೆ ಆದಿಯೋ ಅಂತ್ಯವೋ ಇಲ್ಲೆ. ಅದು ಎಲ್ಲರಲ್ಲಿಯೂ ಎಲ್ಲೆಡೆಯೂ ನೆಲೆಸಿರುತ್ತು. ರೂಪಂಗಳ ಮೀರಿಪ್ಪದಾದರೂ ರೂಪಂಗಳಲ್ಲಿ ಮೈದೋರುವಂಥದ್ದು ಅದು. ಆ ಪರಮ ಚೇತನದ ಆರಯ್ಯುವಿಕೆಯೇ ಉಪಾಸನೆಯ ಉದ್ದೇಶ. ಆನು ಬರದ “ನಂಬುವುದು ಆದಿಯೊಳು ಪರಮ ಚೇತನ ವಿಭುವ”ಹೇಳ್ತ ಕವಿತೆಯ ಪ್ರಮೇಯವೂ ಇದುವೇ.
ನಮಗೆ ಕಾಣಿಸದಿರುವ ಜಗವದು ಮತ್ತು ಕಾಣುವ ಜಗವಿದು
ಪೂರ್ಣವಾಗಿಯೆ ಉದಯಗೊಂಡವು ಪೂರ್ಣನೇ ಭಗವಂತನು
ಪೂರ್ಣ ಈಶ್ವರನಿಂದ ಪೂರ್ಣದ ಜಗವ ತೆಗೆದರು ಪೂರ್ಣವು
ಶಕ್ತಿ ಜ್ಞಾನವು ಮಹಿಮೆಯಾತನ ಎಲ್ಲ ಕಡೆಯಲಿ ಪೂರ್ಣವು
ಶಾಂತಿಯಾಗಲಿ! ಶಾಂತಿಯಾಗಲಿ!! ಶಾಂತಿ ನೆಮ್ಮದಿ ಲಭಿಸಲಿ !!!
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ. ಶರ್ಮಪ್ಪಚ್ಚಿ ಇದರ ಬೈಲಿಂಗೆ ಪರಿಚಯ ಮಾಡಿ ಕೊಟ್ಟಿದವು.
ಒಂದು ಪ್ರಸಿದ್ಧ ಇಂಗ್ಲೀಷ್ ಕವಿತೆಲಿ ಹೇಳ್ತು, “ಅಬಂಡನ್ಸ್ ಇಸ್ ಸ್ಕೂಪ್ಡ್ ಫ್ರಂ ಅಬಂಡನ್ಸ್ ಯೆಟ್ ಅಬಂಡನ್ಸ್ ರಿಮೆಯಿನ್ಸ್”.
ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ
ತಾನು ತಾನಲ್ಲದಿಹ ತಾನೇ ತಾನಾಗಿರುವ
ತನಗೆ ಮಿಗಿಲಿಲ್ಲದಿಹ ಅಧಿದೈವವ
ಮೇಲ್ನೋಟಕ್ಕೆ ಇದೊಂದು ವೈರುದ್ಧ್ಯದ ಹಾಂಗೆ ಕಾಣುತ್ತು. ಆದಿಯೋ ಅಂತ್ಯವೋ ಇಲ್ಲದ್ದದು ಇಪ್ಪದು ಹೇಂಗೆ ಹೇಳಿ ಸಾಮಾನ್ಯ ಶಬ್ದಂಗಳಲ್ಲಿ ವಿವರುಸಲೆ ಎಡಿಯ. ಅದರ ನಾವು ನಮ್ಮ ಅನುಭವಕ್ಕೆ ನಿಲುಕದ್ದದು ಹೇಳಿ ಅರ್ಥ ಮಾಡಿಗೊಂಬಲಕ್ಕು. ಆ ಅರ್ಥಲ್ಲಿ ಈ ಲೋಕಕ್ಕೆ ಆದಿಯೋ ಅಂತ್ಯವೋ ಇಲ್ಲೆ.
(ಇನ್ನೂ ಇದ್ದು)

5 thoughts on “ಈಶಾವಾಸ್ಯೋಪನಿಷತ್ತು – ಪೀಠಿಕೆ

  1. ಒಪ್ಪಂಗಳ ಮೂಲಕ ಒಪ್ಪೊಪ್ಪ ಮಾತುಗಳ ಹೇಳಿದ ಎಲ್ಲೋರಿಂಗೂ ಕೃತಜ್ಞತೆಗೊ. ಮುಂದಂಗೆ ಹದಿನೆಂಟು ಮಂತ್ರಂಗಳ ವಿವರ ಬಪ್ಪಲಿದ್ದು. ಎಲ್ಲೋರ ಸಹಕಾರ ಕೋರುತ್ತೆ.

  2. ಉತ್ತಮ ಕಾರ್ಯ ಆತಿದು ಭಾವ. ನಿರ್ವಿಘ್ನವಾಗಿ ಮುಂದುವರ್ಕೊಂಡು ಬರಳಿ.

  3. ಕೃಷ್ಣಭಾವನ ಬರವಣಿಗೆ ನೋಡಿ ಸಂತೋಷ ಆತು.
    ನಿರ್ವಿಘ್ನವಾಗಿ ಮುಂದುವರಿಯಲಿ. ಬಹುಜನೋಪಯೋಗಿ ಆಗಲಿ.

  4. ಪೀಠಿಕೆ ಲಾಯಿಕಾಯಿದು. ಮು೦ದಾಣ ಭಾಗವ ಎದುರು ನೋಡಿಗೊ೦ಡು ಇದ್ದೆ.

  5. ಇಂದು ಕಾರ್ತಿಕ ಸೋಮವಾರ. ಬೆಳಕಿನ ಹಬ್ಬದ ಈ ದಿನ ಸುರುವಾದ” ಈಶಾವಾಸ್ಯೋಪನಿಷತ್ತು” ಜ್ನಾನದ ಬೆಳಕಿಂದ ನಮ್ಮೆಲ್ಲರ ಅಜ್ನಾನವ ದೂರ ಮಾಡಲಿ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×