Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು

ಬರದೋರು :   ಬೊಳುಂಬು ಕೃಷ್ಣಭಾವ°    on   03/03/2014    1 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜೋ
ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ |
ಯೋSಸಾವಸೌ ಪುರುಷಃ ಸೋSಹಮಸ್ಮಿ ||೧೬||

ಏಕ, ಪೋಷಕ, ತತ್ತ್ವದರ್ಶಿಯೆ, ಸರ್ವ ಪ್ರಜೆಗಳ ಸ್ವಾಮಿಯೆ!
ಜ್ಞಾನ ಕಿರಣಗಳನ್ನು ಕರುಣಿಸು ರೂಪ ಮಂಗಳ ಸೂರ್ಯನೆ
ಈಶನಾತನು ನಾನು ಆತ್ಮನು ಎಂಬ ಸಮತಾ ಭಾವನೆ ||೧೬||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಓ ಸೂರ್ಯ, ಏಕಚರ, ಓ ಪ್ರಜಾಪತಿಪುತ್ರ |
ಪೂಷ, ಯಮ, ಬಿಸಿಯ ಬಿಸುಟೊಡ್ಡು ಕಿರಣಗಳ ||
ಲೇಸಿನಿಂ ನಿನ್ನಿಂಬುರೂಪವನು ಕಾಣುವೆನು |
ಭಾಸಿಪನ್ ಅದರೊಳಾರೊ ಆ ಪುರುಷ ನಾನು ||

ಲೋಕವ ಪೋಷಣೆ ಮಾಡುವವನೇ! ಏಕನಾಗಿ ಗಮಿಸುವವನೇ! ಸಕಲ ಲೋಕಂಗಳನ್ನೂ ನಿಯಂತ್ರಣ ಮಾಡುವವನೇ! ರಶ್ಮಿಗಳನ್ನೂ ರಸಂಗಳನ್ನೂ ಪ್ರಾಣಂಗಳನ್ನೂ ಆಕರ್ಷಿಸುವವನೇ! ಪ್ರಜಾಪತಿಯ ಮಗನೇ! ನಿನ್ನ ಕಿರಣಂಗಳ ಪ್ರತ್ಯೇಕವಾಗಿ ಮಡುಗು. ನಿನ್ನ ಪ್ರಸಾದಂದ ತೇಜೋಮಯವೂ ಅತಿಶೋಭನೀಯವೂ ಆದ ನಿನ್ನ ರೂಪವ ಎನಗೆ ಕಾಂಬಲೆ ಎಡಿವ ಹಾಂಗಾಗಲಿ.
(ಸೂರ್ಯನ ಬಾಹ್ಯತೇಜಸ್ಸಿಗಿಂತ ಸೂರ್ಯಮಂಡಲದ ಅಂತರ್ವರ್ತಿಯಾದ ಪರತತ್ತ್ವ ಸೂಕ್ಷ್ಮತರ ಸತ್ಯ ಹೇಳ್ತ ಸೂಚನೆ ಇಲ್ಲಿದ್ದು.) ಆನೊಬ್ಬ ಭೃತ್ಯನ ಹಾಂಗೆ ನಿನ್ನತ್ರೆ ಬೇಡಿಗೊಂಬದಲ್ಲ; ಆದಿತ್ಯ ಮಂಡಲಲ್ಲಿ ನೆಲೆಗೊಂಡವನೂ, ಮಹಾವ್ಯಾಹೃತಿಲಿಪ್ಪ ಭೂರ್ಲೋಕ ಶಿರಸ್ಸಾಗಿಯೂ, ಭುವರ್ಲೋಕ ಬಾಹುಗಳಾಗಿಯೂ, ಸುವರ್ಲೋಕ ಪಾದಂಗಳಾಗಿಯೂ, ಪ್ರಾಣವಾಗಿಯೂ ಬುದ್ಧಿಯಾಗಿಯೂ ಲೋಕಲ್ಲಿಡಿಯೇ ವ್ಯಾಪಿಸಿದವನೂ ಆ ಪುರುಷನೇ ಆನು. ಮಹಾವ್ಯಾಹೃತಿ ಹೇಳಿಯರೆ “ಭೂರ್ಭುವಸ್ಸುವಃ” ಹೇಳ್ತ ಮೂರು ಲೋಕಂಗೊ ಸೇರಿ ಇಪ್ಪದು. ಪ್ರಣವ ವ್ಯಾಹೃತಿ ಸಮೇತವಾದ ಗಾಯತ್ರಿ ಮಂತ್ರ ನವಗೆ ಗೊಂತಿದ್ದು. ಶರೀರವೆಂಬ ಪುರಲ್ಲಿ ಶಯಿಸುವವ° ಪುರುಷ° ಹೇಳಿ ಹೇಳುಲೆಡಿಗು.
ಸೂರ್ಯ-ಅಗ್ನಿ ತೇಜಸ್ಸಿನ ಮೂಲಕ ಆತ್ಮ ಸ್ವರೂಪವ ಮನಗಾಂಬಲೆ ನವಗೆ ನಿರಾಕಾರ ಬ್ರಹ್ಮಧ್ಯಾನಕ್ಕಿಂತ ಸುಲಭ ಆವುತ್ತು. ಇಲ್ಲಿ ಋಷಿಗೊ ಪರಮಾತ್ಮನ ಪ್ರತಿನಿಧಿಯಾಗಿ ಸೂರ್ಯನ ತೆಕ್ಕೊಂಡಿದವು.
ಇಷ್ಟು ದಿನ ಈಶಾವಾಸ್ಯೋಪನಿಷತ್ತು ಓದಿದವರತ್ರೆ ಒಂದು ಪ್ರಶ್ನೆ – ಉಪನಿಷತ್ತು ಹೇಳಿಯರೆ ಎಂತರ? ನಿಂಗಳ ಉತ್ತರವ ಕೆಳ ಬರೆಯೆಕ್ಕು ಹೇಳಿ ಕೇಳಿಗೊಳುತ್ತೆ. ಆ ಪರಮ ಚೇತನದ ದಯಂದಲಾಗಿ ಎಲ್ಲೋರಿಂಗೂ ಒಳ್ಳೆಯದೇ ಬರಲಿ.
~~~***~~~

One thought on “ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು

  1. ಉಪನಿಷತ್ತು ಹೇಳಿದರೆ ವೇದಕಾಲದ ನಂತರದ ಹಿಂದೂ ಧರ್ಮ ಗ್ರಂಥ. ವೇದಂಗಳಲ್ಲಿಪ್ಪ ಮುಖ್ಯ ಸಾರಾಂಶಂಗಳ ಆದಿ ಗುರು ಶ್ರೀ ಶಂಕರಾಚಾರ್ಯರು (ಹನ್ನೊಂದು ಉಪನಿಷತ್ತುಗೊ ಮಾಂತ್ರ) ಅರ್ಥ ನಿರೂಪಣೆ ಮಾಡಿದ್ದವು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×