Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು

ಬರದೋರು :   ಬೊಳುಂಬು ಕೃಷ್ಣಭಾವ°    on   16/12/2013    4 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||೫||
ಚಲಿಪನಾತನು ಚಲಿಸದಿರುವನು ದೂರವ್ಯಾಪ್ತನು ಸನಿಹನು
ಎಲ್ಲ ಜೀವಿಗಳೊಳಗೆಯಿರುತಲಿ ಹೊರಗು ಎಲ್ಲೆಡೆ ಮೆರೆವನು ||೫||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಅದು ಚಲಿಸಿರೂ ಚಲಿಸದ್ದೆ ಇರುತ್ತು. ದೂರವಾಗಿಯೂ ಹತ್ತರೆಯೂ ಇರುತ್ತು. ಎಲ್ಲಾ ಜೀವಿಗಳಲ್ಲಿಯೂ ಅದಿರುತ್ತು. ಅದರ ಇರವಿನ ನಮ್ಮೊಳ ನಾವರಿಯೆಕ್ಕು, ಅದರ ಅನುಭವಕ್ಕೆ ತಂದುಗೊಳೆಕ್ಕು. ಪರತತ್ತ್ವದ ಗುಣದ ಸೂಚನೆ ಇಲ್ಲಿಪ್ಪದು. ಅದು ಬೇಡದ್ದವಕ್ಕೆ ದೂರವಾಗಿಯೂ ಬೇಕಾದವಕ್ಕೆ ಹತ್ತರೆಯೂ ಇರುತ್ತು. ಅದು ಎಲ್ಲದರ ಒಳವೂ ಇದ್ದು, ಆದರೂ ಎಲ್ಲದರ ಹೆರವೂದೆ ಇಪ್ಪದು. ಭಗವದ್ಗೀತೆಯ ಹದಿಮೂರನೆಯ ಅಧ್ಯಾಯದ ಹದಿನೈದನೇ ಶ್ಲೋಕವೂ ಇದನ್ನೇ ಹೇಳುತ್ತು.
ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ |
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ್ ತತ್ ||
ಅದು ಜೀವಿಗಳ ಹೆರವೂ ಇದ್ದು, ಒಳವೂ ಇದ್ದು. ಆದರೂ ಎಲ್ಲೋಡಿಕ್ಕೂ ಚಲಿಸಿಗೊಂಡಿದ್ದು. ಅದರ ಸೂಕ್ಷ್ಮತ್ವಂದಲಾಗಿ ನವಗೆ ಎಕ್ಕುತ್ತಿಲ್ಲೆ. ದೂರವಾಗಿದ್ದರೂ ಅದು ಹತ್ತರೆಯೇ ಇದ್ದು.
ಮೇಲ್ನೋಟಕ್ಕೆ ಕಾಂಬ ವೈರುದ್ಧ್ಯ ವಾಸ್ತವಲ್ಲಿ ಅಲ್ಲಿಲ್ಲೆ. ಆ ಪರತತ್ತ್ವ ಸರ್ವಾಂತರ್ಯಾಮಿ ಹೇಳ್ತದರ ಸೂಚನೆ ಇಲ್ಲಿ ಕಾಣುತ್ತು. ಅದು ಅನಂತ ವ್ಯಾಪಕ. ಅದು ನಿರಾಕಾರ. ಅದುವೇ ಪರತತ್ತ್ವ. ಎಲ್ಲವೂದೆ ಆ ಚೈತನ್ಯದ ಸಾಕ್ಷಾತ್ಕಾರವೇ ಆಗಿಂಡಿದ್ದು.
ಗೀತ
ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ
ಬರಿದೊಂದು ಸ್ಪರ್ಶದಲಿ ಒಳಗಿರುವ ಎನ್ನನ್ನು
ಮುಟ್ಟಿ ಎಬ್ಬಿಸಿದವನು ನೀನಲ್ಲವೇ
ಬರಿದೊಂದು ದೃಷ್ಟಿಯಲಿ ಎದೆಯೊಳಿಹ ತಂತಿಗಳ
ಮೀಂಟಿ ತಡುಗಿಸಿದವನು ನೀನಲ್ಲವೇ
~~~

4 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಐದು

  1. ಧನ್ಯೋಸ್ಮಿ.
    ಕನ್ನಡಲ್ಲಿ ಇಪ್ಪ ಗೀತ ಎನ್ನ ರಚನೆ. ನಿಂಗಳ ಸಲಹೆಯ ತೆಕ್ಕೊಂಡಿದೆ. ಒಳುದ ಮಂತ್ರಂಗಳ ಉದಾಹರಣೆಯೊಟ್ಟಿಂಗೆ ಕೊಡ್ಲೆ ಪ್ರಯತ್ನಮಾಡ್ತೆ.

  2. ಉತ್ತಮಮ್!
    ಭಾವ,
    ಉಪನಿಷತ್ತಿನ ಮಂತ್ರ, ಅದರ ಅನುವಾದ, ಮಂತ್ರದ ಅರ್ಥವನ್ನೇ ಕೊಡುವ ಗೀತೆಯ ಶ್ಲೋಕ, ಕನ್ನಡ ಪದ್ಯ ಇಷ್ಟನ್ನೂ ಒಟ್ಟಿಂಗೆ ಕೊಡುವ ರೀತಿ ಲಾಯಕಿದ್ದು. ಪ್ರಶಂಸನೀಯ ಕಾರ್ಯ ಮಾಡ್ತಾ ಇದ್ದಿ. ಈ ಕನ್ನಡ ಪದ್ಯ (ಗೀತ) ನಿಂಗಳದ್ದೇ ರಚನೆಯೋ?
    ಕೆಲವು ಉದಾಹರಣೆಯೊಟ್ಟಿಂಗೆ ವಿವರಣೆ ಕೊಟ್ಟರೆ ಇನ್ನೂ ಉತ್ಕೃಷ್ಟ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×