Oppanna.com

ಮೀನಾಕ್ಷೀ ಪಂಚರತ್ನಮ್

ಬರದೋರು :   ಶ್ರೀಅಕ್ಕ°    on   03/10/2014    7 ಒಪ್ಪಂಗೊ

ನವರಾತ್ರಿಯ ಈ ಪುಣ್ಯಪರ್ವದ ನವಮಿಯ ದಿನ ಶ್ರೀ ಶಂಕರಾಚಾರ್ಯರ ಕೃತಿಯಾದ, ಮಧುರೈಯ ಮೀನಾಕ್ಷೀ ದೇವಿಯ ಸೌಂದರ್ಯ ವರ್ಣನೆ ಮಾಡುವ ಮೀನಾಕ್ಷೀ ಪಂಚರತ್ನಮ್ ಹೇಳುವ ಸ್ತೋತ್ರವ ಕೊಡ್ತಾ ಇದ್ದೆ. ಅಮ್ಮನ ರೂಪವ ಆಚಾರ್ಯರು ಎಷ್ಟು ವಿಧಲ್ಲಿ ಬಣ್ಣಿಸಿದರೂ ಅದು ಪ್ರತಿಯೊಂದರಲ್ಲಿಯೂ ವಿಶೇಷವಾಗಿ ಕಾಣ್ತು. ಹಾಂಗೇ ಇಪ್ಪ ಒಂದು ಐದು ರತ್ನಂಗಳ ಹೊಂದಿದ ರಚನೆ ಇದು.

ಉದಯಿಸುತ್ತಾ ಇಪ್ಪ ಸಹಸ್ರ ಕೋಟಿಸೂರ್ಯರ ಹಾಂಗೆ ಇಪ್ಪ ತೇಜೋಮಯಿಯ, ಕೇಯೂರ ಹಾರಂಗಳಿಂದ ಸುಶೋಭಿತಳಾಗಿಪ್ಪ, ಸುಂದರ ದಂತಪಂಕ್ತಿಂದ ಮುಗುಳುನೆಗೆ ಮಾಡಿಗೊಂಡಿಪ್ಪ, ಪೀತಾಂಬರಾಲಂಕೃತಳ, ಬ್ರಹ್ಮ, ವಿಷ್ಣು, ಇಂದ್ರರಿಂದ ಸೇವಿಸಲ್ಪಡುವ ಚರಣಂಗಳ ಹೊಂದಿಪ್ಪ, ತತ್ತ್ವಸ್ವರೂಪಳ, ಶಿವೆಯ, ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ. ಮುತ್ತಿನ ಹಾರ, ಚೆಂದದ ಹೊಳವ ಕಿರೀಟ ಧರಿಸಿಪ್ಪ, ಹುಣ್ಣಿಮೆಯ ಪೂರ್ಣಚಂದ್ರನ ಹಾಂಗೆ ಮೋರೆಯ ತೇಜಸ್ಸಿಪ್ಪ, ಮಧುರ ಗೆಜ್ಜೆಯ ನಾದ ಹೊಂದಿದ, ರತ್ನದ ಆಭರಣ ಧರಿಸಿಪ್ಪ, ಪದ್ಮದ ಪ್ರಭೆಯ ತೇಜಸ್ಸು ಹೊಂದಿಪ್ಪ, ಎಲ್ಲರ ಇಚ್ಛೆಗಳ ಫಲಪ್ರದಗೊಳಿಸುವ, ಪರ್ವತರಾಜನ ಸುತೆಯ, ಶಾರದಾ ದೇವಿ, ಲಕ್ಷ್ಮಿಯರಿಂದ ಸೇವಿತಳಾದ ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ.

ಶಿವನ ವಾಮಭಾಗಲ್ಲಿ ವಿರಾಜಿಸುತ್ತಿಪ್ಪ, ಶ್ರೀವಿದ್ಯೆಯ, ’ಹ್ರೀಂ’ ಎಂಬ ಬೀಜಮಂತ್ರಂದ ಶೋಭಿತಳಾದ, ಶ್ರೀ ಚಕ್ರದ ಮಧ್ಯಬಿಂದುವಿಲಿ ವಾಸಿಸುತ್ತಿಪ್ಪ, ದೇವಸಭೆಯ ನಾಯಕಿ, ಷಣ್ಮುಖ, ವಿಘ್ನೇಶ್ವರರ ಅಬ್ಬೆಯಾಗಿಪ್ಪ, ಜಗನ್ಮೋಹಿನಿಯ, ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ. ಸುಂದರಿಯರಲ್ಲಿ ಸುಂದರಿಯೂ, ಭಯನಿವಾರಕಳೂ, ಜ್ಞಾನಪ್ರದಾಯಿನಿಯೂ, ನಿರ್ಮಲರೂಪಿಯೂ, ಶ್ಯಾಮಲ ಕಾಂತಿ ಹೊಂದಿದ, ಬ್ರಹ್ಮನಿಂದ ಪೂಜಿತಳೂ ಆದ, ಪದ್ಮಚರಣಂಗಳ ಹೊಂದಿದ, ನಾರಾಯಣನ ಸೋದರಿಯೂ, ವೀಣೆ, ಕೊಳಲು, ಮೃದಂಗ ಮೊದಲಾದ ವಾದ್ಯಪ್ರಿಯೆಯಾದ ಅಬ್ಬೆಯ, ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ. ಅಸಂಖ್ಯ ಯೋಗಿಗಳ, ಮುನಿಶ್ರೇಷ್ಠರ ಸುಂದರ ಹೃದಯಲ್ಲಿ ನಿವಾಸ ಆಗಿಪ್ಪ, ನಾನಾ ಸಿದ್ಧಿಗಳ ಕೊಡುವ, ನಾರಾಯಣನಿಂದಲೇ ಅರ್ಚನೆ ಮಾಡಿಸಿಗೊಂಡು ಹಲವು ಬಗೆಯ ಪುಷ್ಪಂಗಳಿಂದ ರಾರಾಜಿಸುತ್ತಿಪ್ಪ ಚರಣಕಮಲಂಗಳ ಹೊಂದಿದ, ನಾದಬ್ರಹ್ಮಮಯಿಯ, ಪರಾತ್ಪರಳ, ನಾನಾರ್ಥ ತತ್ತ್ವಸ್ವರೂಪಳ ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ- ಹೇಳಿ ಸ್ತೋತ್ರರೂಪಲ್ಲಿ ಶಂಕರಾಚಾರ್ಯರು ಅಮ್ಮನ ವೈಭವವ ವಿವರಿಸಿದ್ದವು.

ನವರಾತ್ರಿಯ ನವದಿನಂಗಳಲ್ಲಿ ಅಮ್ಮನ ನವವಿಧಲ್ಲಿ ಸ್ತೋತ್ರರೂಪಲ್ಲಿ ಬೈಲಿಲಿ ಕೊಡ್ಲೆ ಎನಗೆ ತುಂಬಾ ಕೊಶಿ ಆಯಿದು. ಅಮ್ಮನ ವರ್ಣನೆ ಮಾಡಿದಷ್ಟೂ ಮುಗಿಯ. ಅಬ್ಬೆಯ ಸೌಂದರ್ಯವ, ಅಮ್ಮನ ಮಹಿಮೆಯ ಸ್ತೋತ್ರ ರೂಪಲ್ಲಿ ಹೇಳಿ ಎಲ್ಲರ ಕಷ್ಟ ಕಳುದರೆ ಅದುವೇ ಒಂದು ಮಹಾಭಾಗ್ಯ.
ಬೈಲಿನ ಎಲ್ಲೋರ ಮೇಲೆದೇ ಯಾವಾಗಲೂ ಆ ಕೃಪಾಸಿಂಧುವಿನ ರಕ್ಷೆ ಇರಲಿ.
ಪ್ರತಿಯೊಬ್ಬಂಗೂ ಅವರವರ ಜೀವನದ ದಾರಿಯ ಕಷ್ಟಂಗ ಹರುದು ನವ ನವ ಸುಖದ, ಸಂತೋಷದ ದಾರಿ ಕಾಣಲಿ..
ಎಲ್ಲೋರ ಕೆಲಸಂಗಳಲ್ಲಿ ವಿಜಯ ಸಿಕ್ಕಲಿ..
ದೇವಿಯ ಕರುಣೆ ಎಲ್ಲೋರಿಂಗೂ ರಕ್ಷಾಕವಚ ಆಗಲಿ..

ಮೀನಾಕ್ಷೀ ಪಂಚರತ್ನಮ್

ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ವಲಾಂ
ಬಿಂಬೋಷ್ಠೀಂ ಸ್ಮಿತದಂತಪರಕ್ತಿರುಚಿರಾಂ ಪೀತಾಂಬರಾಲಂಕೃತಾಮ್ |
ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ ಶಿವಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||1||

ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇಂದುವಕ್ತ್ರಪ್ರಭಾಂ
ಶಿಂಜಿನ್ನೂಪುರಕಿಂಕಿಣೀಮಣಿಧರಾಂ ಪದ್ಮಪ್ರಭಾಭಾಸುರಾಮ್ |
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂ ವಾಣೀರಮಾಸೇವಿತಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||2||

ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಂಕಾರಮಂತ್ರೋಜ್ವಲಾಂ
ಶ್ರೀಚಕ್ರಾಂಕಿತಬಿಂದುಮಧ್ಯವಸತಿಂ ಶ್ರೀಮತ್ಸಭಾನಾಯಿಕಾಮ್ |
ಶ್ರೀಮಚ್ಛಣ್ಮುಖವಿಘ್ನರಾಜಜನನೀಂ ಶ್ರೀಮಜ್ಜಗನ್ಮೋಹಿನೀಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||3||

ಶ್ರೀಮತ್ಸುಂದರನಾಯಿಕಾಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಸ್ಯಾನುಜಾಮ್ ||
ವೀಣಾವೇಣುಮೃದಂಗವಾದ್ಯರಸಿಕಾಂ ನಾನಾವಿಧಾಂಬಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||4||

ನಾನಾಯೋಗಿಮುನೀಂದ್ರಹೃನ್ನಿವಸತೀಂ ನಾನಾರ್ಥಸಿದ್ಧಿಪ್ರದಾಂ
ನಾನಾಪುಷ್ಪವಿರಾಜಿತಾಂಘ್ರಿಯುಗಲಾಂ ನಾರಾಯಣೇನಾರ್ಚಿತಾಮ್ |
ನಾದಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥತತ್ತ್ವಾತ್ಮಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||5||

ಮೀನಾಕ್ಷೀ ಪಂಚರತ್ನಮ್ ನ ಕೇಳಲೆಃ

ಸೂಃ
♦ ಈ ಒಂಬತ್ತು ಸ್ತೋತ್ರಂಗಳ ಆನು ಟೈಪಿಸಿದ್ದದರಲ್ಲಿದ್ದ ಅಕ್ಷರ ತಪ್ಪುಗಳ ತಿದ್ದಿ, ಸ್ತೋತ್ರಂಗ ಬೈಲಿಲಿ ತಪ್ಪಿಲ್ಲದ್ದೆ ಬಪ್ಪ ಹಾಂಗೆ ಮಾಡಿದ ಡಾಮಹೇಶಂಗೆ ತುಂಬಾ ತುಂಬಾ ಧನ್ಯವಾದಂಗೋ.
♦ಸ್ತೋತ್ರಂಗೊಕ್ಕೆ ಹೊತ್ತುವೇಳ್ಯಮೂರ್ತಮಾಡಿ, ಚೆಂದ ಮಾಡಿ, ಬೈಲಿಲಿ ಹೊತ್ತಿಂಗೆ ಸರಿಯಾಗಿ ಬಪ್ಪ ಹಾಂಗೆ ಮಾಡಿದ ಗುರಿಕ್ಕಾರ್ರಿಂಗೆ ಧನ್ಯವಾದಂಗೋ.
♦ ಅಗತ್ಯ ಮಾಹಿತಿಗಳ ಒದಗಿಸಿಕೊಟ್ಟ ಶರ್ಮಪ್ಪಚ್ಚಿಗೆ, ಚೆನ್ನೈ ಭಾವಂಗೆ, ಅಭಾವಂಗೆ ಧನ್ಯವಾದಂಗೋ.

7 thoughts on “ಮೀನಾಕ್ಷೀ ಪಂಚರತ್ನಮ್

  1. ಅಕ್ಕಾ,
    ನವರಾತ್ರಿಯ ಪ್ರತಿದಿನವೂ ಅಮೂಲ್ಯ ಸ್ತೋತ್ರ೦ಗಳ ಬೈಲಿಲಿ ಹ೦ಚಿದ್ದಕ್ಕೆ ಧನ್ಯವಾದ.

  2. ಶ್ರದ್ಧಾ ಭಕ್ತಿಲಿ ಮತ್ತು ಬೈಲಿನ ಅಭಿಮಾನಲ್ಲಿ ನವರಾತ್ರಿಯ ಒಂದೊಂದು ದಿನಕ್ಕೂ ಒಂದೊಂದು ಸ್ತೋತ್ರವ ನೀಡಿ ಅಕ್ಕಾ° ಶುದ್ದಿ ಮಾಡಿದ್ದು ತುಂಬಾ ಲಾಯಕ ಆಯ್ದು. ಶೋಭಕ್ಕನ ಉಪದ್ರದೆಡೆಲಿಯೂ , ನೆಟ್ಟನ ತಂಟೆ ಮಧ್ಯೆಯೂ , ಟ್ರಾಯನ ರಗಳೆ ಇದ್ದರೂ , ನಿಂಗಳ ಇತರ ಅಂಬೇರ್ಪು ತೆರಕ್ಕಿನ ಸಮಯಲ್ಲಿಯೂ ಹಠಗಟ್ಟಿ ಮಾಹಿತಿ ಸಂಗ್ರಹಿಸಿ ಬರದ್ದಿ, ಯಶಸ್ವೀ ಆಯ್ದು ಹೇಳಿ ಅಭಿನಂದನೆ ಹೇಳುವದು – ‘ಚೆನ್ನೈವಾಣಿ’

      1. ಇದಾ… ಖಂಡಿತಾ ನಿಂಗೊ ಅಲ್ಲ ಆತೋ. ನಿಂಗೊ ಹಾಂಗೆಲ್ಲ ಅಲ್ಲ ಗೊಂತಿದ್ದು. ಶ್ರೀ ಅಕ್ಕಂಗೆ ಬೈಲಿಂಗೆ ಉಪದ್ರ ಅಪ್ಪೋದೆ ಆ ಬೆಂಗಳೂರ ಶೋಭಕ್ಕಂದ! (ವಿದ್ಯುತ್ ಸಚಿವೆ!!) .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×