ಈ ಸರ್ತಿಯೂ ಶ್ಯಾಮಲ ಮಾಂಬ್ಳವೂ ಹಪ್ಪಳವೂ ತಂದು ಕೊಟ್ಟತ್ತು.ಅದಕ್ಕೆ ಮಾಂಬ್ಳಕ್ಕೆ ಅಷ್ಟೂ ಬೇಡಿಕೆ ಇದ್ದು ಹೇಳಿ ಗೊಂತಿಲ್ಲೆ,ಪಾಪದ ಕೂಸು.
ಬೆರಟಿಯೂ ಮಾಡಿ ಕೊಡ್ತೆ ಹೇಳಿದ್ದು.
ಕಳುದ ಸರ್ತಿ ಅದು ಕೊಟ್ಟ ಬೆರಟಿ ರಜಾ ಎಳೆ ಪಾಕ ಆಗಿ ಮತ್ತೆ ಎಂಗೊ ಅದರ ಅವನಿಲ್ಲಿ ರಜಾ ಗಟ್ಟಿ ಮಾಡೆಕ್ಕಾಗಿ ಬಂತು.
ಈ ಸರ್ತಿ ನೋಡುವೋ° ಹೇಳಿ ಹೋಯಿದು.
ಊರಿಲ್ಲಿ ನಮ್ಮೋರು ಎಲ್ಲಾ ಮಾಡ್ತವು ಆದರೆ ಮಾರುದು ಹೇಂಗೆ ಹೇಳಿ ಅರಡಿಯ,ಪೇಟಗೆ ತಂದರೆ ವ್ಯಾಪಾರಿಗೊ ಸರಿಯಾದ ಕ್ರಯ ಕೊಡವು,ಮಾಂಬ್ಳಕ್ಕೆಂತ ಕರ್ಚಿದ್ದು ಮಾಡ್ಳೆ ಕೇಳುಗು.
ಹಾಂಗಾಗಿ ನಾವಉ ರಜಾ ನಮ್ಮ ಉತ್ಪನ್ನಂಗಳ ಮಾರಲೆ ಸಕಾಯ ಮಾಡ್ತು.ಅಳಿಯಂದ್ರಿಂಗೋ,ಭಾವಂದ್ರಿಂಗೋ ರಜ ರಜ ಕಳುಸುಗು.
ಹಪ್ಪಳ ಇನ್ನೂ ಇದ್ದು,ಬೆರಟಿ ಮಾಡ್ತು.
ನಿಜವಾಗಿ ಆಸಕ್ತಿ ಇದ್ದವು ಎನ್ನ ಸಂಪರ್ಕ ಮಾಡಿರೆ ವಿಟ್ಳಂದ ತೆಕ್ಕೊಂಬಲೆ ತಯಾರಿದ್ದರೆ ಹೇಳಿ.(ಬಂದಾಡಿ ಅಜ್ಜಿಯ ಹತ್ತರೆ ಇಕ್ಕುಅಲ್ಲದೋ ಅಜ್ಜಿ?)
- ಉಡುಗೊರೆ - February 3, 2013
- ಈ ಮರ್ಯಾದಿ ನವಗೆ ಬೇಕೋ - January 31, 2013
- ಹೇಂಗೆ? - September 30, 2012
ನೆಗೆಮಾಣಿಗೆ ಮಾಂಬ್ಳ ಚೀಪಲಕ್ಕು.ಹಲ್ಲು ಬಯಿಂದಿಲ್ಲೆ ಅಲ್ಲದೋ?
ಬೈಲಿನ ಆಸಕ್ತರಿಂಗೆ ಅನುಕೂಲ ಆವುತ್ತ ನಮುನೆಯ ಸಂಪರ್ಕಕೊಂಡಿಯಾಗಿ ಮಾಡ್ತಾ ಇಪ್ಪ ಈ ಕಾರ್ಯಕ್ಕಾಗಿ ಒಂದೊಪ್ಪ!
ನೆಗೆಮಾಣಿ ಮೊನ್ನೆಯೇ ಹೆರಟು ನಿಂದಿದ°, ಕೇಜಿಮಾವ° ಎಲ್ಲಿ ಹೇಮಾರ್ಸಿ ಮಡುಗುತ್ತವು ಹೇಳಿ ತಿಳಿಯಲೆ! 😉
ಎನ್ನ ಆಫೀಸಿನ ದೋಸ್ತಿಗಳ ಹತ್ತರೆ ಶುದ್ದಿ ಹೇಳಿದ ಕೂಡಲೆ ಎಲ್ಲೋರು ಬೇಕು ಹೇಳಿದ್ದವು.ಪೇಟೆಲಿ ಸಿಕ್ಕುವ ಕಸ೦ಬಟ್ಟೆ೦ದ ಹಲಸಿನ ಹಪ್ಪಳ ಎಷ್ಟೋ ಒಳ್ಳೆದು ಅಲ್ಲದೋ? ಸಹಕಾರಿ ವೆವಸ್ಥೆಯ ಬೆಳೆಶುವ ಮಾವನ ಈ ಪ್ರಯತ್ನಕ್ಕೆ ನಾವೂ ಕೈಜೋಡುಸುವ°.
ನಾಡ್ದು ಆನು ಚೆನ್ನೈಗೆ ಹೋಪ ಅಂದಾಜು ಮಾಡುದು. ಮಾಂಬಳ ಗೊಜ್ಜು ತಿಂಬಲೆ…ಹೇಂಗೆ ?
ಬನ್ನಿ,ಬೇರೆ ಎಲ್ಲಿಂದಾರೂ ನಮ್ಮೋರದ್ದೇ,ಕೊಡುಸುವೋ°,ನವಗಿಲ್ಲಿ ತುಂಬ ಸ್ನೇಹಿತರಿದ್ದವು.ನಿಂಗೊಗೆ ನಿರಾಶೆ ಅಪ್ಪಲಾಗ.
ಕೆ.ಜಿ. ಮಾವ, ಆನು ನಾಳಂಗೆ ಬಪ್ಪೋ ಹೇಳಿ ಇತ್ತಿದ್ದೆ.
ಈ ಬರಹಂದಾಗಿ ಎನ್ನ ಎರಡು ಸ್ನೇಹಿತರ ಮಾಲು ಇಂದೇ ಮುಗುದತ್ತು.ಇನ್ನಾರೂ ಕೇಳಿರೆ ಇಲ್ಲೆ.
ನಮ್ಮಲ್ಲಿ ಸರಕು ಇದ್ದರೂ ಅದರ ಸರಿಯಾದ ರೀತಿಲಿ ಮಾರ್ಕೆಟ್ ಮಾಡ್ತ ಅನುಭವ ಇಪ್ಪವು ಕಮ್ಮಿ.
ನಿಂಗಳ ಈ ಸೇವೆಯ ಉಪಯೋಗ ಸರಿಯಾಗಿ ಆಗಲಿ.