ಪುತ್ತೂರು, 24.03.2012:
ನ್ಯಾಯವಾದಿ, ಲೇಖಕ°, ಪ್ರಕಾಶಕ°, ಪುತ್ತೂರು ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ನೆಂಪು ಮಾಡುವ ಕಾರ್ಯಕ್ರಮ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣಲ್ಲಿ ಹೊತ್ತಪ್ಪಗ ನಾಲ್ಕುಗಂಟೆಗೆ ನೆಡದತ್ತು.
ಸಭಾಧ್ಯಕ್ಷತೆಯ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ರು ವಹಿಶಿತ್ತಿದ್ದವು.
ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿಯವ್ವು ಬೋಳಂತಕೋಡಿಯವರ ಒಟ್ಟಿಂಗೆ ಅವರ ಒಡನಾಟವ ನೆಂಪುಮಾಡಿಂಡು,” ಈಶ್ವರ ಭಟ್ಟರದು ಪ್ರಾಕ್ಟಿಕಲ್ ಬದುಕು. ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಅವರು ‘ಕನಸು ಕಾಣುತ್ತಿದ್ದರು’ ಅಂತ ಗೊತ್ತಾಗದಂತೆ ಬದುಕಿರುವುದು ವಿಶೇಷ ಅಂತ ಅನ್ನಿಸುತ್ತದೆ. ಬದುಕನ್ನು ಅವರು ಇಷ್ಟವಾದ ಹಾಗೆ ‘ಚಂದ’ದಿಂದ ಅನುಭವಿಸಿದವರು. ಅವರು ಎಂದೂ ಹುಸಿಯಾಗಿ ಓಲೈಸಿಲ್ಲ. ಅವರಿಗೆ ಅವರನ್ನು ಓಲೈಸಲು ಸಾಧ್ಯವಾಗಲಿಲ್ಲ! ಉಪದೇಶ ಹೇಳುವವರಲ್ಲ, ಇನ್ನೊಬ್ಬರ ಉಪದೇಶವನ್ನೂ ಕೇಳಿದವರಲ್ಲ!” ಹೇಳಿ ಹೇಳಿದವು.
ಬೋಳಂತಕೋಡಿಯವರ ನೆನಪ್ಪಿಲಿ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’ಯ ಇದೀಗ ಪ್ರಾರಂಭ ಮಾಡಿದ್ದು, ಮೊದಲ ಪ್ರಶಸ್ತಿಯ ಮಕ್ಕಳ ಸಾಹಿತಿಯೂ, ಹೆರಿಯರೂ ಆದ ಶ್ರೀ ಪಳಕಳ ಸೀತಾರಾಮ ಭಟ್ ರ ಆಯ್ಕೆ ಮಾಡಿದ್ದು.
ಪ್ರಶಸ್ತಿ ಪುರಸ್ಕೃತರ ಬಗ್ಗೆ ಪ್ರೊ| ವಿ.ಬಿ. ಅರ್ತಿಕಜೆ ಮಾತಾಡಿದವು. ಗುಣಕಥನ ಫಲಕವ ಉಪನ್ಯಾಸಕ ಡಾ. ವಿಜಯಕುಮಾರ್ ಮೊಳೆಯಾರ ಓದಿದವು.
ಪಳಕಳ ಸೀತಾರಾಮ ಭಟ್ ರ ಪ್ರಶಂಸಾ ಪತ್ರವ ಶ್ರೀ ಕಿರಣ ಬೋಳಂತಕೋಡಿ ಓದಿದವು.
ಶ್ರೀ ಪಳಕಳ ಸೀತಾರಾಮ ಭಟ್ ರು ಅನಾರೋಗ್ಯಂದಾಗಿ ಕಾರ್ಯಕ್ರಮಲ್ಲಿ ಉಪಸ್ಥಿತರಾಯಿದವಿಲ್ಲೆ. ಅವರ ಮನೆಗೆ ಹೋಗಿ ಪ್ರಶಸ್ತಿಯ ಒಪ್ಪುಸಿ ಗೌರವಿಸುದು ಹೇಳಿ ಘೋಷಿಸಿತ್ತು.
ಪ್ರಶಸ್ತಿಲಿ, ಶಾಲು, ಫಲ, ಹಾರ, ಗುಣಕಥನ ಫಲಕ, ಪ್ರಶಸ್ತಿ ಫಲಕ, ಮತ್ತೆ ಹತ್ತುಸಾವಿರ ರೂಪಾಯಿಗಳ ಧನರಾಶಿಯ ಒಳಗೊಂಡಿದ್ದು.
ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀ ಪೆರಾಜೆ ನಾ ಕಾರಂತಣ್ಣನ ಕೃಷಿ ಬರಹಂಗಳ ಸಂಕಲನ ಆದ ‘ಮಣ್ಣ ಮಿಡಿತ’ ಮತ್ತೆ ಹೊಸದಿಗಂತ ಪತ್ರಿಕೆಲಿ ಪ್ರಕಟ ಆದ ಅಂಕಣಂಗಳ ಆಯ್ದ ಬರಹಂಗಳ ಸಂಕಲನ ‘ಮಾಂಬಳ’ ಪುಸ್ತಕವ ರಾಜೇಶ್ ಪವರ್ ಪ್ರೆಸ್ ನ ಮಾಲಕ ಎಮ್. ಎಸ್. ರಘುನಾಥ ರಾವ್ ಬಿಡುಗಡೆ ಮಾಡಿದವು.
ಪುಸ್ತಕಂಗಳ ಬಗ್ಗೆ ಉಪನ್ಯಾಸಕರಾದ ಶ್ರೀ ಅವಿನಾಶ್ ಕೊಡೆಂಕಿರಿ ಪರಿಚಯ ಮಾಡಿದವು.
ನ್ಯಾಯವಾದಿ ಕೆ.ಆರ್.ಆಚಾರ್ಯ ಸ್ವಾಗತಿಸಿ, ಪ್ರಕಾಶ್ ಕೊಡೆಂಕಿರಿ ವಂದಿಸಿದವು.
ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ಶ್ರೀಶಕುಮಾರ್ ನಿರ್ವಹಿಸಿದವು.
ಅಕೇರಿಗೆ ಆಕಾಶ್ ಆಚಾರ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೆಡದತ್ತು.
ಬೋಳಂತಕೋಡಿ ಪ್ರಕಾಶನ, ಪುತ್ತೂರು ಕಾರ್ಯಕ್ರಮವ ಸಂಘಟಿಸಿತ್ತು.
ಪ್ರತಿ ವರ್ಷವೂ ಪುತ್ತೂರಿಲಿ ಬೋಳಂತಕೋಡಿಯವರ ನೆಂಪಿಂಗೆ ಕಾರ್ಯಕ್ರಮವ ನೆಡೆಶುಲಾವುತ್ತು.
ಸೂ: ವರದಿಯ, ಪಟವ ಪೆರಾಜೆ ನಾ ಕಾರಂತಣ್ಣ ಕಳ್ಸಿ ಕೊಟ್ಟದು. ಅವಕ್ಕೆ ಧನ್ಯವಾದಂಗಳ ಈ ಮೂಲಕ ಹೇಳ್ತು.
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಬೋಳಂತಕೋಡಿ ಈಶ್ವರ ಮಾವ೦ಗೆ ನಮೋ ನಮ:. ಶ್ರೀ ಅಕ್ಕಂಗೆ ಧನ್ಯವಾದ.
ಶ್ರೀ ಅಕ್ಕಂಗೆ ಧನ್ಯವಾದ.