ಕಾರ್ತಿಕ್ ಪಿ.ಎನ್
ಮಂಗಳೂರು ಮಹೇಶ್ ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 90.8% (545/600) ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ ಪ್ರತಿಭಾವಂತ ಕಾರ್ತಿಕ್ ಪಿ. ಎನ್
ಪೆಲತ್ತಡ್ಕ ಶ್ರೀಮತಿ ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.
ಇವನ SSLC ಮತ್ತೆ ಇತರ ಸಾಧನೆಗಳ ಪರಿಚಯ ಇಲ್ಲಿದ್ದು
PUC ಮಾರ್ಕಗಳ ವಿವರ ಹೀಂಗಿದ್ದು:
ಇಂಗ್ಲಿಷ್: 85%
ಸಂಸ್ಕೃತ: 97%
ಫಿಸಿಕ್ಸ್: 98%
ಕೆಮಿಸ್ಟ್ರಿ: 90%
ಗಣಿತ: 83%
ಕಂಪ್ಯೂಟರ್ ಸೈನ್ಸ್: 92%
ಮುಂದೆ Engineering in Information Technology/ Computer Science ಮಾಡುವ ಬಯಕೆ ಇಪ್ಪ ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ಮುಂದುವರುದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ, ಹೆತ್ತವರಿಂಗೆ ಕೀರ್ತಿ ತಂದು ಕೊಡಲಿ ಹೇಳಿ ಹರಸಿ ಶುಭ ಹಾರೈಸುವೊ°
~~~****~~~~
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಕಾರ್ತಿಕಂಗೆ ಶುಭಾಷಯ
ಕಾರ್ತಿಕಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ .