ಡಾ|| ರಘುರಾಮ,
ಇವು BITS (BIRLA INSTITUTE OF TECHNOLOGY AND SCIENCE) ಪಿಲಾನಿ ಕ್ಯಾಂಪಸ್ ನ ಹೊಸ ನಿರ್ದೇಶಕರಾಗಿ 16ನೇ ಎಪ್ರಿಲ್ 2010 ರಿಂದ ಅನ್ವಯ ಆಗಿ ಆಯ್ಕೆಯಾಯಿದವು.
ಇವು ಮದರಾಸಿನ ಐ.ಐ.ಟಿ ಲಿ M.Sc ಪದವಿಯ ನಂತರ ಬೆಂಗಳೂರಿನ ಪ್ರತಿಷ್ಠಿತ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ “ ಲ್ಲಿ ತಮ್ಮ Ph.D ಪದವಿಯ ಭೌತ ಶಾಸ್ತ್ರಲ್ಲಿ ಪಡಕ್ಕೊಂಡವು.
1987 ರಲ್ಲಿ ಬಿಟ್ಸ್ ಗೆ ಸೇರ್ಪಡೆಯಾಗಿ, 2007 ರಿಂದ ಸಂಸ್ಥೆಯ ಅಕಾಡೆಮಿಕ್ ವಿಭಾಗದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಇತ್ತಿದ್ದವು
ಇಲೆಕ್ಟ್ರಾನಿಕ್ಸ್ ಸೈನ್ಸ್, ಕಮ್ಯುನಿಕೇಶನ್ ಸಿಸ್ಟಮ್ಸ್, ಟೆಲೆ ಕಮ್ಯುನಿಕೇಶನ್, ಸಾಫ್ಟ್ ವೇರ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿ 40 ಕ್ಕೂ ಹೆಚ್ಚು ಸಂಶೋಧನಾ ಲೇಖನಂಗಳ ಇವು ಮಂಡನೆ ಮಾಡಿದ್ದವು .
2000 ರಲ್ಲಿ ಸಂಶೋಧನೆ ಸಲುವಾಗಿ ನೋಕಿಯಾ ಕಂಪೆನಿ ಇವರ ಪುರಸ್ಕರಿಸಿ ಅನುದಾನ ನೀಡಿದ್ದು.
2007 ರಲ್ಲಿ ಮೈಕ್ರೊಸಾಫ್ಟ್ ಕೂಡಾ ಇವರ ಗೌರವಿಸಿದ್ದು ವಿಶೇಷ.
2005 ರಲ್ಲಿ BITS ಪಿಲಾನಿ, ತನ್ನ ವಿದ್ಯಾರ್ಥಿಗಳ ಸೇರ್ಪಡೆಗೆ (admission) ಬೇಕಾಗಿ ಕಂಪ್ಯೂಟರ್ ಮೂಲಕ ಪರೀಕ್ಷೆ “BITSAT” ಸುರು ಮಾಡಿತ್ತು.
ದೊಡ್ಡ ಪ್ರಮಾಣದ ಈ ಪರೀಕ್ಷೆಯ design ಮಾಡಿ ಮತ್ತೆ ಅನುಷ್ಠಾನ (implement) ಮಾಡುವದರ ನೇತೃತ್ವ ವಹಿಸಿದವು ಪ್ರೊ. ರಘುರಾಮ.
BITSAT ಹೇಳುವದು, ಕಂಪ್ಯೂಟರ್ ಮೂಲಕ online admission ಪರೀಕ್ಷೆಗೊಕ್ಕೆ ಒಂದು ಮಾನದಂಡ (benchmark)ವಾಗಿ ಭಾರತಲ್ಲಿ ಹೆಸರು ಪಡದ್ದು.
ಈ ವರ್ಷ ಒಂದು ಲಕ್ಷದಷ್ಟು ಜೆನಂಗೊ ಈ ವೆವಸ್ತೆಲಿ ಪರೀಕ್ಷೆಗೆ ಹಾಜರು ಆಯಿದವು.
ಇವು ಪ್ರಾಥಮಿಕ ವಿದ್ಯಾಭ್ಯಾಸ ಕಾಸರಗೋಡು ತಾಲೂಕಿನ ಏಳ್ಕಾನ ಶಾಲೆಲಿ ಮತ್ತೆ ಮುಂಡಿತ್ತಡ್ಕ ಶಾಲೆಲಿ , ಹೈಸ್ಕೂಲ್ ವಿದ್ಯಾಭ್ಯಾಸ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಲ್ಲಿ, ಪದವಿ ಪೂರ್ವ ವಿಧ್ಯಾಭ್ಯಾಸ ಪುತ್ತೂರಿನ “ರಾಮಜ್ಜ”ನ ಕಾಲೇಜಿಲ್ಲಿ,
ಮತ್ತೆ ಪದವಿ ವಿದ್ಯಾಭ್ಯಾಸ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಲ್ಲಿ ಪಡಕ್ಕೊಂಡವು.
ಡಾ|| ರಘುರಾಮ, ಇವು ಕಾಸರಗೋಡಿನ ಹತ್ರೆ ನೆಲಕ್ಕಳಲ್ಲಿ ಇಪ್ಪ ಗುಣಾಜೆ ಮನೆತನದ ಶ್ರೀ ಪರಮೇಶ್ವರ ಭಟ್ಟ ಮತ್ತೆ ಶಾರದ ಅಮ್ಮ ದಂಪತಿಗಳ ಹೆಮ್ಮೆಯ ಪುತ್ರ.
ಪ್ರೊ. ರಘುರಾಮರ ವಿವರ:
Prof. Raghurama G.
Director – Pilani Campus
BITS, Pilani – 333 031
Phone: 01596-242234 (Off.) -242157 (Res.)
Fax: 01596-244183
Email: graghu@bits-pilani.ac.in
ನಮ್ಮ ಸಮಾಜ ಮತ್ತೆ ಬೈಲಿನವು ಅವರ ಸಾಧನೆಯ ಗೌರವಿಸುತ್ತು.
ಇನ್ನೂ ಹೆಚ್ಚಿನ ಸಾಧನೆ ಇವು ಮಾಡುವಂತಾಗಲಿ ಹೇಳಿ ಹಾರೈಸುತ್ತು.
ಇವರ ಸಾಧನೆ ನಮ್ಮ ಸಮಾಜದ ಇತರ ಯುವಕ ಯುವತಿಯರಿಂಗೆ ಸ್ಪೂರ್ತಿದಾಯಕವಾಗಲಿ, ಹೇಳುವ ಆಶಯ ನಮ್ಮದು.
–
ಶರ್ಮಪ್ಪಚ್ಚಿ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಗುಣಾಜೆ ಅಪ್ಪಚ್ಚಿಗೆ ಧನ್ಯವಾದಗಳು. ಇವರ ಪರಿಚಯ ಮಾಡಿಕೊಟ್ಟ ಶರ್ಮ ದೊಡ್ಡಪ್ಪಂಗೂ ಧನ್ಯವಾದಂಗೊ. ಆನುದೆ ಗುಣಾಜೆಯವ ಹೇಳಿ ಹೇಳುಲೆ ಕೊಶಿ ಆವುತ್ತು
ಓಹೋ!! ಗುಣಾಜೆ ಅಪ್ಪಚ್ಚಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದದು ಎಂಗಳ ನೀರ್ಚಾಲು ಮಹಾಜನ ಶಾಲೆಲ್ಲಿಯೇ ಅದ! ಮತ್ತಷ್ಟು ಖುಷಿ ಆತು. 🙂 “ವಂದನಂ ಅಭಿನಂದನಂ”
ಬ್ಲೋಗಿಂಗೆ ಹಾಕಲೆ ಒಂದು ದೊಡ್ಡಾ ವಿಷಯ ಸಿಕ್ಕಿತ್ತು ದೊಡ್ಡ ಭಾವಂಗೆ 🙂
ಹಳ್ಳಿ ಶಾಲೆಲಿ ಕನ್ನಡ ಮಾಧ್ಯಮಲಿ ಕಲ್ತು, ಮುಂದೆ ತನ್ನ ಹಠ, ಸಾಮರ್ಥ್ಯ, ಸಾಧನೆಂದ ಇಷ್ಟು ದೊಡ್ಡ ಹುದ್ದೆಗೆ ಏರಿದ್ದು ನವಗೆ ಹೆಮ್ಮೆಯ ವಿಷಯ.
BITS -ಪಿಲಾನಿ, ಯಾವುದೇ IIT ಗೆ ಕಮ್ಮಿ ಇಲ್ಲದ್ದ ಬಿರ್ಲಾ ಗ್ರೂಪ್ ನ ಒಂದು ದೊಡ್ಡ ಸಂಸ್ಥೆ.
ಡೈರೆಕ್ಟರ್ ಹುದ್ದೆ, ಅದೂ ಒಬ್ಬ ಕನ್ನಡಿಗಂಗೆ, ಅದರಲ್ಲಿಯೂ ನಮ್ಮ ಹಳ್ಳಿಂದ ಹೋದ ಒಬ್ಬ ಹವ್ಯಕಂಗೆ- ಅಧ್ಭುತ ಸಾಧನೆ.
ಇವರ ಸಾಧನೆ ಮೆಚ್ಚುವದು ಮಾತ್ರ ಅಲ್ಲ ನಮ್ಮ ಮಕ್ಕೊಗೆ ಇವರ ಸಾಧನೆ ಒಂದು ದಾರಿ ದೀಪ ಆಯೆಕ್ಕು.
ಇವು ಇನ್ನು ಮುಂದೆ ಇದಕ್ಕಿಂತಲೂ ದೊಡ್ಡ ಹುದ್ದೆ ಅಲಂಕರಿಸುವ ಹಾಂಗೆ ಆಗಲಿ ಹೇಳಿ ಹಾರೈಸುವೊ
ಸಾಧನೆ, ನಿರಂತರ ಪ್ರಯತ್ನದ ಪಲವೇ ಇಂತಾ ಹೆಸರುಗೊ.
ಕೊಶಿಆವುತ್ತಾ ಇದ್ದು ಅಪ್ಪಚ್ಚಿ, ನಮ್ಮ ಬೈಲಿನವು ಆ ಕುರ್ಶಿಲಿ ಕೂದ್ದದು ನೋಡ್ಳೆ. 🙂
ದೇವರು, ಗುರುಗೊ ಒಳ್ಳೆದು ಮಾಡ್ಳಿ.
ಸಾಧನೆ ಮಾಡಿದ ನಮ್ಮೊರ ಪರಿಚಯ ಮಾಡುಸಿದ್ದು ಸಂತೋಷ.ಇಲ್ಲದ್ದರೆ ಎಂಗೊಗೆ ಗೊಂತಾವುತಿತೆ ಇಲ್ಲೆ.
ಅಪ್ಪು ಅಕ್ಕೋ.
ಗುಣಾಜೆ ಮಾಣಿಯ ಅಜ್ಜನೂ, ಇವರ ಅಪ್ಪನೂ ಖಾಸಾ ಅಣ್ಣ ತಮ್ಮಂದಿರು
ಅಪ್ಪೋ ಶರ್ಮಪ್ಪಚ್ಚಿ?! ನಿಜವಾಗಿಯೂ ಅವಿಬ್ರೂ ಒಂದೇ ಕುಟುಂಬವೋ?
ಶುದ್ದಿ ಓದಿ ನಂಬುಲೇ ಎಡಿಗಾಯಿದಿಲ್ಲೆ.
ಅಜ್ಜಕಾನಬಾವಂಗೆ ರಜ ಲೊಟ್ಟೆ ಇದ್ದಿದಾ – ಮೊನ್ನೆ ಎಂತದೋ ಲೊಟ್ಟೆಹೇಳಿ ನಂಬುಸಿತ್ತಿದ್ದ° – ಹಾಂಗಾಗಿ ಅವ° ಹೇಳುವಗಳೂ ನಂಬಿದ್ದಿಲ್ಲೆ! 😉 🙂
ಆಗಲಿ, ಗುಣಾಜೆ ಅಪ್ಪಚ್ಚಿಗೆ ಅಭಿನಂದನೆಗೊ.. 🙂
ಒಹೋ….. ಸಂತೋಷ…
ಶರ್ಮಪ್ಪಚ್ಚಿ, ಭಾರೀ ಲಾಯಿಕ ಆಯಿದು ಪರಿಚಯ…. ಗುಣಾಜೆ ಮಾವಂಗೆ ಅಭಿವಂದನೆಗೊ……
ನಮ್ಮ ಗುಣಾಜೆ ಮಾಣಿ ಹೇಳಿರೆ ಇದೇ ಮನೆತನದವೋ ಹೇಂಗೆ?
ನಮ್ಮೊರು ಉನ್ನತ ಸ್ತಾನಕ್ಕೆ ಏರಿದಸ್ಟ್ಟು ತುಂಬಾ ಸಂತೋಶ ಆಉತ್ತು.ಇವರ ಪರಿಚಯ ಮಾಡಿಕೊಟ್ಟದಕ್ಕೆ ಶರ್ಮಣ್ಣಂಗೆ ಧನ್ಯವಾದಂಗ..
A Great achievement . Raghu ram we are all all proud of you.
Y V
good to know this… Evara parichaya madikotadu Koshiattu..