ಬೈಲಿಲ್ಲಿ ಶರ್ಮಪ್ಪಚ್ಚಿ ಶುದ್ದಿ ಹೇಳಿಗೊಂಡು ಇಪ್ಪದು ನಿಂಗೊಗೆಲ್ಲಾ ಗೊಂತಿಪ್ಪದೇ; ಅಪ್ಪಚ್ಚಿ ಶುದ್ದಿಗಳ ಎಷ್ಟು ವಿವರವಾಗಿ ಚೆಂದಕ್ಕೆ ಹೇಳ್ತವು ಹೇಳಿಯೂ ನಿಂಗೊಗೆಲ್ಲಾ ಗೊಂತಿಪ್ಪದೇ. ಮರದ ಎಲ್ಲಾ ಗುಣಂಗ ಬೀಜಲ್ಲಿ ಇರ್ತು, ಮುಂದೆ ಅದು ಗಿಡ ಆಗಿ ಬೆಳಕ್ಕೊಂಡು ಬಪ್ಪಗ ಎಲ್ಲಾ ಗುಣಂಗ ಪ್ರಪಂಚಕ್ಕೆ ಕಾಣುತ್ತು ಹೇಳಿದ ಹಾಂಗೆ ಅಪ್ಪಚ್ಚಿಯ ಹಾಂಗೇ ಉಶಾರು ಆಗಿಯೊಂಡು ಈಗ ಚಿನ್ನದ ಪದಕ ಪಡಕ್ಕೊಂಡಿದು ಅವರ ದೊಡ್ಡಮಗಳು ರಶ್ಮಿ.
ಬೆಂಗಳೂರಿಲ್ಲಿಪ್ಪ ಎಂ.ಎಸ್. ರಾಮಯ್ಯ ಎಂಜಿನಿಯರ್ ಕಾಲೇಜಿಲ್ಲಿ 2010-12 ರಲ್ಲಿ ಡಿಜಿಟಲ್ ಎಲೆಕ್ಟ್ರೋನಿಕ್ಸ್ ವಿಶಯ ತೆಕ್ಕೊಂಡು ಅದರಲ್ಲಿ ಒಂದನೇ ರೇಂಕ್ ತೆಕ್ಕೊಂಡು ಚಿನ್ನದ ಪದಕವ ತನ್ನದಾಗಿಸಿಗೊಂಡತ್ತು.
“ಒಲಿಂಪಿಕ್ ಸ್ಪರ್ಧೆಲಿ ಪದಕ ತೆಕ್ಕೊಂಡಷ್ಟೇ ಕೊಶಿ ಆತು” ಹೇಳಿತ್ತು ರಶ್ಮಿ.
ಹಾಂಗೆ ನೋಡಿರೆ, ಒಂದನೇ ಬಹುಮಾನ ತೆಕ್ಕೊಂಡದು ಇದು ಮೊದಲು ಅಲ್ಲ. ಸಣ್ಣಪ್ರಾಯಂದಲೇ ಅದು ತನ್ನ ಪ್ರತಿಭೆ ನಿರಂತರವಾಗಿ ಬೆಳಗುತ್ತಾ ಇದ್ದು. ಅದು ಆಟ-ಪಾಠ ಎರಡರಲ್ಲಿಯೂ ಕೂಡಾ! ರಶ್ಮಿಯ ಎಲ್ಲಾ ಬೆಳವಣಿಗೆಯ ಹಿಂದೆ ಶರ್ಮಪ್ಪಚ್ಚಿ ಮತ್ತೆ ಚಿಕ್ಕಮ್ಮನ ಪ್ರೋತ್ಸಾಹ, ಅವರ ಶ್ರಮ, ಅದರ ಶ್ರದ್ಧೆ ಖಂಡಿತಾ ಇದ್ದು.
ಎಂ.ಆರ್.ಪಿ.ಎಲ್ ಶಾಲೆಲಿ ಕಲಿವಾಗ 7ನೇ ಕ್ಲಾಸಿಂದ 10 ನೇ ಕ್ಲಾಸ್ ವರೇಗೆ ನಿರಂತರ ಪ್ರತಿ ವರ್ಷವೂ “Best Girl of the Class” ಪ್ರಶಸ್ತಿ ತೆಕ್ಕೊಂಡಿದು.
ಪಾಠಂಗಳಲ್ಲಿ ಪ್ರಥಮಂಗಳ ಸಾಧಿಸಿದ್ದು ಮಾತ್ರ ಅಲ್ಲದ್ದೆ ಆಟೋಟ ಸ್ಪರ್ಧೆಗಳಲ್ಲಿಯೂ “ಛಾಂಪಿಯನ್” ಅದ ಹೆಗ್ಗಳಿಕೆ ಇದರದ್ದು.
ಮಂಗಳೂರಿನ ಶಾರದಾ ಕಾಲೇಜಿಲ್ಲಿ ಪಿ.ಯು.ಸಿ ಕಲ್ತು ಹೆರ ಹೋಪಗ ಸಿಕ್ಕಿದ ಬಹುಮಾನ “Excellence in Academic & Co-Curricular activities”.
ಬೆಂಗಳೂರಿನ ಮಾತಾ ಅಮೃತಾನಂದಮಯಿ ಎಂಜಿನಿಯರ್ ಕಾಲೇಜಿಲ್ಲಿ Electronics & Communication ವಿಭಾಗಲ್ಲಿ B.Tech ಡಿಗ್ರಿಯ ಡಿಸ್ಟಿಂಕ್ಷನ್ ಲ್ಲಿ ತೆಕ್ಕೊಂಡು ಹೆರ ಬಂದಪ್ಪಗ ನಿರಂತರ ಅಧ್ಯಯನದ ಅವಕಾಶ ಕೊಡುವ “ಅಧ್ಯಾಪನ ವೃತ್ತಿಯೇ ಆಯೆಕ್ಕು” ಹೇಳಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿಲ್ಲಿ ಪ್ರಾಧ್ಯಾಪಿಕೆಯಾಗಿ ಕೆಲಸ ಮಾಡಿದ್ದು.
IEEE (Instritue of Electricals and Electronics Engineers) ಇದರ ಬೆಂಗಳೂರು ವಿಭಾಗಲ್ಲಿ ಒಂದು Conference ಲ್ಲಿ ವೈಜ್ಞಾನಿಕ ಲೇಖನ ಪ್ರಸ್ತುತಪಡಿಸಿದ್ದು ಮಾತ್ರ ಅಲ್ಲದ್ದೆ ಬೇರೆಯವರ ಸಹಯೋಗಂದ Defense Science Journal ಇದರಲ್ಲಿಯೂ ಲೇಖನ ಪ್ರಕಟ ಆಯಿದು.
ಮದುವೆ ಆದ ಮೇಲೆ M.Tech ಮಾಡುವದಕ್ಕೆ ಸಂಪೂರ್ಣ ಸಹಕಾರ ಮತ್ತೆ ಪ್ರೋತ್ಸಾಹ ಕೊಟ್ಟ ತನ್ನ ಗೆಂಡ ಕೊಯಂಗಾನ ಶಶಾಂಕನ ಮತ್ತೆ ಅತ್ತೆ ಮಾವನ ಹಾಂಗೂ ಅಪ್ಪ ಅಮ್ಮನ ಸಹಕಾರವ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ಬೈಲಿನ ಹೆರಿಯವರ ಎಲ್ಲರ ಆಶೀರ್ವಾದ ಬೇಡ್ತಾ ಇದ್ದು ನಮ್ಮ ಬೈಲಿನ ಕೂಸು ರಶ್ಮಿ.
ಸಾಧನೆ ಮಾಡುವ ಮನಸ್ಸಿದ್ದರೆ, ಛಲ ಇದ್ದರೆ, ಅನುಕೂಲ ವಾತಾವರಣ ಇದ್ದರೆ ಯಾವ ಸಾಧನೆಯನ್ನೂ ಮಾಡ್ಲಕ್ಕು ಹೇಳಿ ತೋರ್ಸಿಕೊಟ್ಟಿದು ರಶ್ಮಿ. “ಮದುವೆ ಆದ ಮತ್ತೆ ಕಲಿಯುವಿಕೆಯೇ ನಿಂದತ್ತು” ಹೇಳಿ ಗ್ರೇಶುವವಕ್ಕೆ ರಶ್ಮಿ ಅಕ್ಕ° ಮಾದರಿ. ಮನೆ ಮತ್ತೆ ಕಲಿಯುವಿಕೆಯ ತೂಗುಸಿಗೊಂಡು ನಮ್ಮ ಗುರಿಯ ಘನತೆಲಿ ಕಾಂಬಲಕ್ಕು ಹೇಳಿಯೂ ತೋರ್ಸಿಕೊಟ್ಟಿದು.
ಶರ್ಮಪ್ಪಚ್ಚಿಯ ವಾಚಿನ ಬೆಣಚ್ಚಿ ಎಷ್ಟಿದ್ದು ಹೇಳಿ ಬೈಲಿಂಗೇ ಗೊಂತಿದ್ದು. ಆ ಮನೆಂದಲೇ ಹೆರ ಹೊಳದು ಕಾಂಬ ರಮ್ಯ-ರಶ್ಮಿಗೊ ಮನೆಯ ಮನೆತನದ ಹೊಳಪಿನ ಇನ್ನಷ್ಟು ಬೆಳಗಲಿ.. ಎರಡು ಮನೆಯನ್ನೂ ಬೆಳಗಿಸಲಿ..
ಹಳೆಮನೆ ರಶ್ಮಿ ಅಕ್ಕಂಗೆ ತುಂಬಾ ತುಂಬಾ ಪ್ರೀತಿಯ ಅಭಿನಂದನೆಗೊ..
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಎನ್ನ ಭಾವನ ಮಗಳು ರಶ್ಮಿ ಮಾಡಿದ ಸಾಧನೆ ಹವ್ಯಕ ಸಮಾಜಕ್ಕೆ ಒಂದು ಹೆಮ್ಮೆಯೇ ಸರಿ. ಅದರ ಜೀವನಲ್ಲಿ ಸಕಲ ಸೌಭಾಗ್ಯ ಸಿಕ್ಕಲಿ ಹೇಳಿ ಎನ್ನ ಹಾರೈಕೆ.
ಎನ್ನ ಅಕ್ಕನ ಮಗಳ ಸಾಧನೆ ನೋಡಿ ತುಂಬಾ ಕುಶಿ ಆತು.
ಅಭಿನಂದನೆಗೊ ರಶ್ಮಿ.
ರಶ್ಮಿಯ ಸಾಧನೆ ನಿಜಕ್ಕೂ ಮೆಚ್ಚೆಕ್ಕಾದ್ದದೇ. ಈ ಸಂದರ್ಭಲ್ಲಿ ರಶ್ಮಿಯ ಯಜಮಾನ ಇಂಜಿನಿಯರ್ ಶಶಾಂಕಂಗುದೇ ಅಭಿನಂದನೆಗೊ… ಇಬ್ರುದೇ ಬೈಲಿಂಗೆ ಆದರ್ಶ ವ್ಯಕ್ತಿತ್ವ. ಇವರ ಇಬ್ರ “ಬೈಲಿನ ಈ ವರ್ಷದ ಹೆಮ್ಮೆಯ ವ್ಯಕ್ತಿಗೊ” ಆಗಿ ಗುರುತಿಸಿ ಎಲ್ಲೋರುದೇ ಅಭಿನಂದುಸೆಕ್ಕು. ಕೂಸು ಸಾಧಿಸಿದ್ದರಲ್ಲಿ ಭಾರೀ ಹೆಮ್ಮೆ ಆಯಿದು.
ರಶ್ಮಿಗೆ ಅಭಿನಂದನೆಗೊ. ಶ್ರೀಅಕ್ಕಂಗೆ ಧನ್ಯವಾದಂಗೊ.
ಅಭಿನ೦ದನೆಗೊ.
ಸುಡ್ದಿ ಓದಿ ಸಂತೋಷ ಆತು ರಶ್ಮಿಗೆ ಹಾರ್ದಿಕ ಅಭಿನಂದನೆಗಳು
ರಶ್ಮಿಗೆ ಹಾರ್ದಿಕ ಶುಭಾಶಯಂಗೊ.. ” ಎಲ್ಲಿ ದಣಿವಿರದ ಗೈಮೆಯು ಕೈಯ ನೀಡಿಹುದೊ ಪರಿಪೂರ್ಣ ಸಫಲತೆಯ ಕಡೆಗದೆಲ್ಲಿ..”
(ಮಧುರ ಗೀತಾಂಜಲಿ..ಪುಟ ೩೫ )
ಅಭಿನಂದನೆಗೊ ರಶ್ಮಿ..
ಜೀವನದ ಎಲ್ಲಾ ಹಂತಲ್ಲೂ ಯಶಸ್ಸು ಸಿಕ್ಕಲಿ..
ಶ್ರೀ ಗುರುಗಳ,ರಾಮ ದೇವರ ಆಶೀರ್ವಾದ ನಿನಗಿರಲಿ… ಃ)
Abhinandango… olledaagali heluva shubha haaraikego 🙂
ಮಗಳ ಸಾಧನೆ ಎಂಗೊಗೆ ಎಲ್ಲರಿಂಗೂ ತುಂಬಾ ಕೊಶಿ ತಂದ ಶುದ್ದಿ.
ಬೈಲಿಲ್ಲಿ ಪ್ರಸ್ತುತಪಡಿಸಿದ ಶ್ರೀ ಅಕ್ಕಂಗೆ ಮತ್ತೆ ಅಬಿನಂದನೆ ಸಲ್ಲಿಸಿ ಶುಭ ಹಾರೈಸಿದ ಎಲ್ಲರಿಂಗೂ ಧನ್ಯವಾದಂಗೊ. ಗುರು ಹಿರಿಯರ ಮತ್ತೆ ನಮ್ಮೆಲ್ಲರ ಆಶೀರ್ವಾದ ಅದಕ್ಕೆ ಸದಾಕಾಲ ಇರಲಿ ಹೇಳಿ ಹಾರೈಸುತ್ತೆ.
ರಶ್ಮಿ ಅಕ್ಕಂಗೆ ಚಿನ್ನದ ಪದಕ ಸಿಕ್ಕಿದ್ದು ತುಂಬಾ ಸಂತೋಷದ ಶುದ್ದಿ. ಅವರ ಜೀವನದುದ್ದಕ್ಕೂ ಹೀಂಗೇ ಯಶಸ್ಸುಗೊ ಸಿಕ್ಕಲಿ ಹೇಳಿ ಹಾರೈಸುತ್ತೆ.
ಇಷ್ಟು ಚೀಪೆ ಶುದ್ದಿ ಶ್ರೀ ಅಕ್ಕ ಹೇಳಿಪ್ಪಗ ಶರ್ಮಪ್ಪಚ್ಚಿ ಬೈಲಿನೋರಿಂಗೆ ಚೀಪೆ ಹಂಚದ್ದೆ ಅಕ್ಕೋ?? 🙂
ಅಭಿನ೦ದನೆಗೋ… ಸಾಧನೆಯ ಹಾದಿ ಸಾಗುತ್ತಾ ಇರಲಿ
ರಶ್ಮಿಗೆ ಅಭಿನ೦ದನೆ
ಅಭಿನಂದನೆಗೋ ರಶ್ಮಿಯಕ್ಕ…ಮನೆವಾರ್ತೆ ಎಲ್ಲಾ ನೋಡಿಗೊಂಡು, ಈ ಸಾಧನೆ ಮಾಡಿದ್ದು ಇನ್ನೂ ಕೊಶಿ ಆತು..
dhanyavaadagalu elloringe…ningolellara prothsaaha heenge sadaa irali
ಅಭಿನಂದನೆಗೊ ರಶ್ಮಿ ಅಕ್ಕ೦ಗೆ ಮತ್ತು ಅವರ ಕುಟು೦ಬಕ್ಕೆ.
ಅಭಿನಂದನೆಗೊ ರಶ್ಮಿ ಅಕ್ಕ೦ಗೆ.
ಮದುವೆ ಆದ ಮತ್ತೆಯುದೆ ಬರೀ ಕಲಿಯುವಿಕೆ ಮುಂದರಿಸಿದ್ದು ಮಾತ್ರ ಅಲ್ಲ, 1st Rank,ಚಿನ್ನದ ಪದಕವೂ ತೆಕ್ಕೊಂಬಲೆ ಎಡಿತ್ತು ಹೇಳುದರ ಸಾಧಿಸಿ ತೋರಿಸಿದ ರಶ್ಮಿಗೆ ,ಮನೆಯೋರೆಲ್ಲರಿಂಗುದೇ ಅಭಿನಂದನೆಗೊ.
ಅಭಿನ೦ದನೆಗೊ
ರಶ್ಮಿಗೆ ಅಭಿನಂದನೆಗೊ.
ಅಭಿನಂದನಮ್ !!
ಎಂ ಟೆಕ್ ಲ್ಲಿ ಒಂದನೇ ರೇಂಕು ಗಳಿಸಿ ಚಿನ್ನದ ಪದಕ ತೆಕ್ಕೊಂಡ, ಹಲವಾರು ಉತ್ತಮ ಸಾಧನೆಗಳ ಮಾಡಿದ ರಶ್ಮಿಗೆ ಹೃದಯಪೂರ್ವಕ ಅಭಿನಂದನೆಗೊ. ಇನ್ನು ಮುಂದೆಯುದೆ ರಶ್ಮಿ ತುಂಬಾ ಸಾಧನೆಗಳ ಮಾಡ್ಳಿ, ನಮ್ಮ ಸಮಾಜಕೆ ಕೀರ್ತಿ ತರಲಿ, ರಶ್ಮಿ ಎಂದೆಂದೂ ಬೆಳಗಲಿ ಹೇಳಿ ಶುಭ ಹಾರೈಕೆಗೊ.
ತುಂಬಾ ಸಂತೋಷದ ಶುದ್ದಿ,
ಅಭಿನಂದನೆಗೊ ರಶ್ಮಿಗೆ…
ಅಭಿನಂದನೆಗೊ. ಒಳ್ಳೆ ವಾತಾವರಣ, ಪ್ರೋತ್ಸಾಹ ಮನೆತನ ಸಿಕ್ಕಿದ ರಶ್ಮಿ ಅಕ್ಕ ಧನ್ಯ. ಇನ್ನಷ್ಟು ಕೀರ್ತಿ ನಿಂಗೊಗೆ ಲಭಿಸಲಿ.
ರಶ್ಮಿಗೆ ಅಭಿನ೦ದನೆಗೊ.ಯಶಸ್ಸಿನ ಒ೦ದೊ೦ದೇ ಮೆಟ್ಲಿನ ಹತ್ತಿ ನಿ೦ಬ ಯೋಗವ ದೇವರು ಹೀ೦ಗೆಯೇ ದಯಪಾಲಿಸಲಿ ಹೇಳಿ ಹಾರೈಕೆಗೊ.
ಸಂತೋಷದ ಸುದ್ದಿ.ಅಭಿನಂದನೆಗೋ ರಶ್ಮಿ ಅಕ್ಕಂಗೆ
ತುಂಬಾ ಸಂತೋಷದ ಸುದ್ದಿ.
ಹಾರ್ದಿಕ ಅಭಿನಂದನೆಗೋ ರಶ್ಮಿ ಅಕ್ಕಂಗೆ, ಹಾಂಗೆ ಮುಂದಿನ ಉಜ್ವಲ ಬದುಕಿಂಗೆ ಶುಭಾಶಯಂಗೋ.
ರಶ್ಮಿಗೆ ಅಭಿನಂದನೆಗೊ.