ನಾಟಕದ ಪೀಠಿಕೆ, ಪ್ರಸ್ತಾವನೆ, ಪರಿಚಯ : ಇಲ್ಲಿದ್ದು
~
ಪಾತ್ರ ವರ್ಗ:
ಸುದರ್ಶನ : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ 55
ಪ್ರಮೀಳಾ : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ 23, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ : ಮದುವೆ ದಲಾಲಿ , ವರ್ಷ 60 ಹೇಳಿ ಮಡಗಲಕ್ಕು.
ಕೇಶವಣ್ಣ : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ : ಒಂದನೇ ಮಾಣಿ ವರ, ವರ್ಷ 28, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣು ಮೂರ್ತಿ : ಎರಡನೇ ಮಾಣಿ ವರ, ವರ್ಷ 29, ಪೇಂಟು ಶರ್ಟು
ಸುರೇಶ : ಮೂರನೇ ಮಾಣಿ ವರ. ವರ್ಷ28, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.
ಅಕ್ಕಂಬಗ ನಾಟಕ ಶುರು ಮಾಡುವೊ° ಅಲ್ಲದೊ ?
~
ದೃಶ್ಯ 1:
(ಮನೆಯ ದೃಶ್ಯ. ಮೇಲ್ ಮಧ್ಯಮ ವರ್ಗದ ಮನೆ, ಹಿಂದಂದ ಬೇಕಾರೆ ಕೊಣಿತ್ತ ಹಾಂಗಿಪ್ಪ ಹೊಸಾ ಹಿಂದಿ/ತಮಿಳು ಪದ್ಯ ಹಾಕಲಕ್ಕು)
ಸುದರ್ಶನ : (ಪ್ರವೇಶ) ಪಮ್ಮೀ, ಎನ್ನ ಫೇಸ್ ಕ್ರೀಂ ಎಲ್ಲಿದ್ದು ? ಎನ್ನದರೆಲ್ಲ ಎಂತಾದ್ದಕ್ಕೆ ತೆಗೆತ್ತವಾ. ತೆಗದರಲ್ಲೇ ಮಡಗಲೂ ಇಲ್ಲೆ.
ಪ್ರಮೀಳಾ : ಆನೆಂತಕೆ ತೆಗೆತ್ತೆ. ಎನಗೆ ಅದರೆಲ್ಲ ಮೆತ್ತಿಗೊಂಬಲೆ ಬೇಡಲೂ ಬೇಡ, ಮಾಡಿಗೊಂಬಲೆ ಪುರುಸೊತ್ತೂ ಇಲ್ಲೆ. ಅಲ್ಲ. ಇದು ಕ್ರೀಮು ಗೀಮು ಹಾಕಿಗೊಂಬ ಪ್ರಾಯವೊ ನಿಂಗಳದ್ದು? ಅಲ್ಲೇ ಎಲ್ಲೋ ಮಡುಗುದ್ದಿ ನೋಡಿ. ಇನ್ನುದೇ ಕ್ರೀಮು, ಹೇರ್ ಡೈ ಹೇಳಿ ಎಂತಾಕೆ ಹಾಕುತ್ತಿ ಹೇಳಿ. ಅದನ್ನೂ ಆನೇ ಹುಡುಕ್ಕಿ ಕೊಡೆಕೊ ? (ವೇದಿಕೆಗೆ ಒಂದು ಬದಿಯಿಂದ ಪ್ರವೇಶ)
ಸುದರ್ಶನ : ಬೇಡ. ಬೇಡ. ಸಿಕ್ಕಿತ್ತು. (ಇನ್ನೊಂದು ಬದಿಯಿಂದ ಕೂದಲನ್ನು ಸರಿ ಮಾಡಿಕೊಳ್ಳುತ್ತಾ ಪ್ರವೇಶ) ಅಲ್ಲಾ, ಆನು ಮೇಕ್ ಅಪ್ ಮಾಡಿರೆ ಎಂತಕೆ ಹಾಂಗೆಲ್ಲ ಕೊಂಕು ಮಾತುಗೊ. ನೋಡು, ಆ ಫಿಲಿಪ್ಪು ಇದ್ದ ಅಲ್ಲದೊ, ವಾಕಿಂಗ್ ಹೋಪಗ ಹೇಳಿದ್ದದು. ಭಟ್ರೆ, ನೀವು ಈಗ್ಲೂ ನಲುವತ್ತರ ಪ್ರಾಯದವರ ಹಾಗೆ ಕಾಣ್ತೀರಿ ಹೇಳಿ. ಎಂತ ಆನು ಚೆಂದ ಕಾಂಬ ಹಾಂಗಿದ್ದರೆ, ನಿನಗೆಂತಾರು ಆವ್ತಾ ?..
ಪ್ರಮೀಳಾ : ಇಲ್ಲೆಪ್ಪಾ ಇಲ್ಲೆ, ನಿಂಗ ಎಂತ ಬೇಕಾರೂ ಮಾಡಿಯೊಳಿ. ನಿಂಗಳ ಮೇಕ್ ಅಪ್ ಹೇಳುವಗ ಎನಗೆ ನಮ್ಮ ಗುರುಗೊ ಅವರ ಪ್ರವಚನಲ್ಲಿ ಹೇಳಿದ್ದು ನೆಂಪಾತು. ಎಲ್ಲಿ ಕಮ್ಮಿ ಬಿದ್ದತ್ತೊ, ಆವಗ ಅಲ್ಲಿ “ಮೇಕ್ ಅಪ್”ಮಾಡೆಕಾವುತ್ತು ಹೇಳಿ. (ಛೇಡಿಸುವ ನಗು)
ಸುದರ್ಶನ : ಸರಿ, ಅದೆಲ್ಲ ಸಾಕೀಗ. ನೆಗೆ ಮಾಡೆಕು ಹೇಳಿ ಇಲ್ಲೆ. ನೋಡು . ನಮ್ಮ ಶಮ್ಮಿಯ ನೋಡ್ಳೆ ಆರೋ ಬತ್ತವಾಡ ಅಲ್ಲದೊ ? ಬಪ್ಪೋರು ಹೇಂಗಿದ್ದವು ? ನವಗೆ ಅಪ್ಪ ರೀತಿಲಿ ಇದ್ದವಾ ಹೇಳಿ ಎಲ್ಲ ನೋಡಿಕ್ಕಿ ನಿನ್ನ ತಿಂಬ ಅಟ್ಟಣೆಗಳ ಎಲ್ಲ ಹೆರ ತಂದರೆ ಸಾಕು ಎಂತ ?
ಪ್ರ : ಹೂಂ. ಗೊಂತಿದ್ದು. ಗೊಂತಿದ್ದು. ಅದಾ. ಕಾರಿನ ಶಬ್ದ ಕೇಳ್ತು. ಓ , ಬಂದವೂ ಹೇಳಿ ಕಾಣ್ತು.
ಸುದ : (ಬಾಗಿಲ ವರೆಗೆ ಹೋಗಿ) (ದಲಾಲಿ ಕಿಟ್ಟಣ್ಣ, ಮಾಣಿ ಸುಬ್ರಹ್ಮಣ್ಯನ ಪ್ರವೇಶ)
ಹಾ. ಬನ್ನಿ, ಬನ್ನಿ, ಕೂರಿ. ಏ. ಕಿಟ್ಟಣ್ಣಾ. ರಜಾ ಬೇಗನೇ ಕರಕ್ಕೊಂಡು ಬಂದಿಯಾ ಎಂತ .
ಕಿಟ್ಟಣ್ಣ : ಹಿ ಹ್ಹಿ. ಬೇಗ ಎಲ್ಲಿಂದ , ಎಂಗ ಹೇಳಿದ ಸಮಯಕ್ಕೆ ಬಂದದು. ಅಣ್ಣನ ಮೇಕಪ್ಪು ಆಯಿದಿಲ್ಲೆಯೋ ಎಂತ ? ಹಾಂಗಾಗಿ ಬೇಗ ಬಂದ ಹಾಂಗೆ ಕಂಡತ್ತೊ ಹೇಳಿ.
ಸುದರ್ಶನ : ಹಾಂ. ನಿಂಗಳ ಹೆಸರು (ಮದುವೆ ಗಂಡಿಂಗೆ)
ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಹೇಳಿ.
ಸುದ : ವಿದ್ಯಾಭ್ಯಾಸ ?
ಸುಬ್ರಹ್ಮಣ್ಯ : ಸಿಎ ಮಾಡಿದ್ದೆ.
ಕಿಟ್ಟಣ್ಣ : ಅವ ಸಿಏ ಲಿ ರೇಂಕು. ಕಲಿತ್ತರಲ್ಲಿ ಮದಲೇ ಒಳ್ಳೆ ಉಶಾರಿ.
ಸುದ : ಈಗ .. ಎಲ್ಲಿ ಮಂಗ್ಳೂರಿಲ್ಲಿಯೊ ? ಎಲ್ಲಿ ?
ಸುಬ್ರ : ಬಿ ಎ ಎಸ್ ಎಫ಼್ ಹೇಳುವ ಕಂಪೆನಿಲಿ ಫ಼ೈನಾನ್ಸಿ ಡೈರೆಕ್ಟರ್ ಆಗಿದ್ದೆ.
ಸುದ : ಓ, ಇಷ್ಟು ಸಣ್ಣ ಪ್ರಾಯಲ್ಲೇ.. ಗೂಡ್. ಪ್ಯಾಕ್ಯಾಜ್ ಎಲ್ಲ ಒಳ್ಳೆದಿಕ್ಕಲ್ದ ?
ಸುಬ್ರ : ಹೂಂ. ತೊಂದ್ರೆ ಇಲ್ಲೆ, ಹತ್ರೆ ಹತ್ರೆ ಇಪ್ಪತ್ನಾಲ್ಕ್ಲು ಬತ್ತು. ವರ್ಷಕ್ಕೆ.
ಸುದ : ಓ ಅಂಬಗ ತಿಂಗಳಿಂಗೆ ಎರಡರ ಹಾಂಗಾತು. ತೊಂದರೆ ಇಲ್ಲೆ.
ಕಿಟ್ಟಣ್ಣ : ಹ್ಹ ಹ್ಹಾ. ಒಳ್ಳೆಯ ಕುಳವಾರು. ಮನೆಲಿಯುದೆ ತಕ್ಕ ಮಟ್ಟಿಂಗೆ ಇದ್ದು. ಒಳ್ಳೆ ಸಂಪ್ರದಾಯದವು. ದೇವರು, ಮಠ ಹೇಳಿ ಮನೆಯವಕ್ಕೆ ಮಾಂತ್ರ ಅಲ್ಲ, ಇವಂಗುದೆ ಒಳ್ಳೆ ಭಕ್ತಿ. ಆಫೀಸಿಂದ ಬಂದು ಮಿಂದು, ಜಪ ಮುಗುಶಿಯೇ ಕಾಪಿ ತಿಂಡಿ ಇವಕ್ಕೆ. ಇಂದುದೆ ಹಾಂಗೆ, ಮನಗೆ ಬಂದು ಎಲ್ಲ ಮಾಡಿಕ್ಕಿಯೇ ಹೆರಟದು. ಮನೆಲಿಯುದೆ, ಎಲ್ಲ ಆಚರಣೆಗಳು ಆಯೆಕು. ಈಗಾಣ ಮಕ್ಕೊ ಹೀಂಗಿಪ್ಪದು ತುಂಬಾ ಅಪರೂಪ.
ಸುದ : ಶಮಿ ಇನ್ನೂದೆ ಬೈಂದಿಲ್ಲೇನ್ನೆ. ಲೇಟು ಎಂತಕೆ ಆತಪ್ಪ .. (ಮೊಬೈಲ್ ತೆಕ್ಕೊಂಡು) ಶಮ್ಮೀ ಎಲ್ಲಿದ್ದೆ. ಇನ್ನೂ ಬೈಂದಿಲ್ಲೆನೆ ಹೇಳಿ..
ಶರ್ಮಿಳ : (ಹಿನ್ನೆಲೆಲಿ ) ಬಂದೆ, ಮನೆ ಹತ್ರವೇ ಇದ್ದೆ ಡ್ಯಾಡೀ. ಬೈಂದವಾ ? ಹೇಂಗಿದ್ದ ಮಾಣಿ ? ಎಂತ ಭಾರೀ ಅರ್ಜೆಂಟಿನೋರ . . ?
ಸುದರ್ಶನ : ಬೇಗ ಬಾ.. ಬತ್ತಾ ಇದ್ದು.
ಶರ್ಮಿಳ : (ಒಳ ಬಂದು ಮಾಣಿಯ ನೋಡಿ) (ಹಾಂಕಾರಲ್ಲಿ) ಡ್ಯಾಡೀ, ಬನ್ನಿಲ್ಲಿ. ಆರಿದು. ಇವ ಎಂತ ಕೂಸು ನೋಡ್ಳೆ ಬಂದದೋ, ಪೂಜೆಗೆ ಬಂದದೊ .. ಹಣೆಲಿ ಬೂದಿ, ಕುಂಕುಮ. ಎಂತ ಇದೆಲ್ಲ.
ಸುದ : ಬೊಬ್ಬೆ ಹಾಕಿ ಮಾತಾಡೆಡ ಮಾರಾಯ್ತಿ. ಅವ ಸಿ ಎ ಮಾಡಿ ದೊಡ್ಡ ಕಂಪೆನಿಲಿ ಫ಼ೈನಾನ್ಸ್ ಡೈರಕ್ಟರ್ ಆಗಿದ್ದ. ಅದು ಇಷ್ಟು ಸಣ್ಣ ಪ್ರಾಯಲ್ಲೆ. (ಮೆಲ್ಲಂಗೆ) ೨೪ ಲಕ್ಷದ ಸಿ ಟಿ ಸಿ ಆಡ.
ಶರ್ಮಿಳ : ಅವನ ಪೋಸ್ಟು, ಸಂಬಳ ಎಲ್ಲ ಕಟ್ಟೆಂಡು ಆನೆಂತ ಮಾಡ್ಳಿ. ಎನಗೆ ಅವನ ಮೋರೆ ನೋಡಿದರೇ ಆವ್ತಿಲ್ಲೆ. ಛಿ ಛಿ . ನೋಡಿ ಎನ್ನ ಸಮಯ ಸುಮ್ಮನೆ ಹಾಳು ಮಾಡೆಡಿ. ಅವನ ಕೂಡ್ಳೆ ಕಳುಸಿ.
ಸುದ : ಆತೂ, ಬೊಬ್ಬೆ ಒಂದರಿ ಹಾಕೆಡ ಮಾರಾಯ್ತಿ. (ಬಂದವರ ನೋಡಿ) ಅದೂ.. ಮಗಳಿಂಗೆ ಎಂತದೋ ಮೂಡಿಲ್ಲೆ ಹೇಳಿ ಕಾಣುತ್ತು.
ಸುಬ್ರಹ್ಮಣ್ಯ : (ಕೋಪಲ್ಲಿ) ಅದರ ಮೂಡು ಪಡು ಎಲ್ಲವುದೆ ಗೊಂತಾತು. ಎಂಗ ಹೆರಡ್ತೆಯ. ಕಿಟ್ಟಣ್ಣ, ಇವು ಆರು, ಎಂತ ಹೇಳಿ ಗೊಂತಿತ್ತಿಲ್ಲೆ ಆದಿಕ್ಕು, ಬನ್ನಿ ಹೋಪ. ಸುಮ್ಮನೆ ನಮ್ಮ ಸಮಯವುದೆ ಎಂತಕೆ ಹಾಳು ಮಾಡೆಕು ಅಲ್ಲದೊ. (ಹೆರ ಹೋವ್ತವು)
ಸುದ : ಕಿಟ್ಟ, ಬಾ ಇಲ್ಲಿ. ಆನೆಂತ, ಹೇಂಗೆ ಹೇಳಿ ನಿನಗೆಲ್ಲ ಗೊಂತಿದ್ದು. ಮತ್ತೆಂತಕೆ, ಹೀಂಗಿಪ್ಪೋರ ಎಂಗಳಲ್ಲಿಗೆ ಕರಕ್ಕೊಂಡು ಬಂದೆ ?
ಕಿಟ್ಟಣ್ಣ : (ಕರೇಂಗೆ ದಿನಿಗೇಳಿ) ಇದಾ ರಜ ದಾರಿ ಖರ್ಚಿಗೆ ಕೊಡೆಕು ನಿಂಗೊ. ಆನು ಇನ್ನೊಂದರಿ ಇಲ್ಲಿಗೆ ಬರೆಕೋ ಬೇಡದೊ ?
ಸುದ : ಒಂದರಿ ಕಾರ್ಯ ಎಲ್ಲ ಆಗಲಿ. ಈಗ ನೆಡೆ ನೋಡೊ. (ಕಿಟ್ಟಣ್ಣ ಹೋವ್ತ)
~
ಕೊಡೆಯಾಲಲ್ಲಿ ಆಡಿದ ನಾಟಕದ ಪಟಂಗೊ, ಬೊಳುಂಬುಮಾವ ಕಳುಸಿಕೊಟ್ಟದು:
~
ಹಾಂಗಾರೆ, ಮುಂದೆಂತಾತು?
- ಬಪ್ಪವಾರ ನಿರೀಕ್ಷಿಸಿ >>
- ಶಮ್ಮಿಯ ಮದುವೆ : ದೃಶ್ಯ 6 - August 21, 2013
- ಶಮ್ಮಿಯ ಮದುವೆ : ದೃಶ್ಯ 5 - August 14, 2013
- ಶಮ್ಮಿಯ ಮದುವೆ : ದೃಶ್ಯ 4 - August 7, 2013
ಹೀಂಗೆ ಹೇಳಿಯಪ್ಪಗ ಇದಾ ಸಮಾದಾನ ಆವ್ಸು. ಸರಿ ಅಂಬಗ ಬೇಗ ಎಲ್ಲ ಸರಿಯಾಗಿಲಿ
ಆ° ಪೋನು ಮಾಡಿ ಕೇಟೆ.. ಅವರ ಇಂಟರುನೆಟ್ಟು ನೆಟ್ಟಗೆ ಇಲ್ಲೆಡ.. ಬೇಗ ಹಾಕುತ್ತವಡೋ..
ಬೈಲಿನವಕ್ಕೆ ಆಸಕ್ತಿ ಇದ್ದೊ, ಇಲ್ಲೆಯೊ ಹೇಳಿ ನೋಡ್ಯೊಂಡು ಮೆಲ್ಲಂಗೆ ಎರಡನೇ ಸೀನಿನ ಹಾಕುವೊ ಹೇಳಿ ವೇಣು ಅಣ್ಣ ಗ್ರೇಶಿದವೋ ಹೇಳಿ. ವೇಣು ಅಣ್ಣ, ಎರಡನೇ ಸೀನಿಂಗೆ ಪರದೆಯ ಒಂದಾರಿ ಮೇಲೆ ಎಳದಿಕ್ಕಿ, ಎಲ್ಲೋರು ಕಾಯ್ತಾ ಇದ್ದವು ಬೈಲಿಲ್ಲಿ.
ಮ್ಯೂಸಿಕ್ ಸ್ಟಾರ್ಟ್, ಲೈಟ್ಸ್ ಆನ್, ಏಕ್ಷನ್ . . . ಎಂತ ಇದ್ದೂ ಹೇಳಿ ನೋಡುವೊ.
ರಜಾ ಕಾಯಿರಿ.ಕಿಟ್ಟಣ್ನ೦ಗೆ ಕೂಸುಗಳ ಕೋಪಲಿ ರಿಸೆಶನ್ ಸುರು ಆಯಿದು. ಮಳೆ೦ದಾಗಿ ಕರೆ೦ಟು ಇಲ್ಲೆ. ಈಗ ಎಲ್ಲಾ ಅದೃಶ್ಯಲಿ ಸಾಗುತ್ತಾ ಇದ್ದು. ರೀಪೇರಿಗೆ ಹೋದ ಕೊಡೆ ತೆಕ್ಕೊ೦ಡು , ಗೇಸುಲೈಟು ತಪ್ಪಗ ,ಮೆ೦ಟ್ಳು ಒಟ್ಟೆ ಆಗದ್ದರೆ ಸದ್ಯಲ್ಲೆ ಹಾಜರ್ ಹೇಳಿ ಗ್ರೇಶವ.
””ಶಮ್ಮಿ ಟೈಟಲು ಚೇ೦ಜು ””’ಹೇಳುವುದು ಬೈಲಿನವರ ಒ೦ದು ಗುಮಾನಿ ಇದ್ದಡ.
ದ್ರುಶ್ಯ ಎರಡೂ ಎವಾಗ?
ಕಾದು ಕಾದು ಸಾಕಾತು……..
ಮಾಂಬಾಡಿ ವೇಣುಮಾವನ ಕಾದು ಕಾದು ಸಾಕಾತು, ಎರಡನೆ ಕಂತೆ ಇಲ್ಲೇನ್ನೇ
ಎಂತ? ದಲ್ಲಾಲಿ ಕಿಟ್ಟಣ್ಣಂಗೆ ದಾರಿ ಕರ್ಚಿಗೆ ಕೊಡದ್ದಕ್ಕೆ ಒಳುದ ಎರಡು ಕುಳವಾರು ತತ್ತಿಲ್ಲೆ ಹೇಳಿ ಕೂದನೋ ಹೇಂಗೆ? 🙂
ದೃಶ್ಯ ೨ ಏವಗ?
ಪಷ್ಟಾಯಿದು. ಒಟ್ಟಿಂಗೆ ನಾಟಕದ ದೃಶ್ಯಾವಳಿಯ ಫಟಂಗೊ ಹಾಕಿದ್ದು ರೈಸಿದ್ದು.
ಹೋ ನಾಟಕ ಶುರು ಆತೋ… ಆಗಲಿ ಆಗಲಿ ರೈಸಿದ್ದು…
ದೃಶ್ಯಾವಳಿಯ ಕಲ್ಪಿಸಿಗೊಂಡು, ಅದರ್ಲಿ ಬೊಳುಂಬು ಮಾವ, ಮಾಂಬಾಡಿ ಅಣ್ಣ.. ಇವರೆಲ್ಲ ಸೇರ್ಸಿ ಗ್ರೇಶಿಗೊಂಡು ನಾಟಕ ಓದಿದೆ. ಹತ್ರಾಣ ಕೇಬಿನ್‍ಲಿ ಇಪ್ಪವು ಬಂದು ಕೇಳಿದವು- ‘ಎಂತ ನಿಂಗಳಷ್ಟಕ್ಕೇ ನೆಗೆ ಮಾಡ್ತಾ ಇದ್ದಿ ಕಂಪ್ಯೂಟರ ನೋಡಿಗೊಂಡು!’
ಎಂಗಳನ್ನೂ ನಿಂಗ ಸತ್ಯಣ್ಣನ ಕಥೆ ಹೇಳಿ ನೆಗೆ ಮಾಡಿಸಿದ್ದಕ್ಕೆ ಹಾಂಗೆ ಆಯೆಕ್ಕು, ಸದ ಕುಟ್ಟಿ ಬದನೆ
ಕಿಟ್ಟಣ್ಣ ನ , ಕ೦ಡ ಅಪ್ಪಗ ಒ೦ದು ಹಿ೦ಗೆ ಇಪ್ಪ ಪಾತ್ರದ ಕಮೀಶನರ್ ಶ೦ಭಣ್ನನ ನೆ೦ಪಾತು. ಅವರ ಕ್ರಮ ೧೦ ಮದುವೆ ಮಾಡಿಸ್ಪಗ ೧ ಪ್ರೀಆಗಿ ಅವುಪ್ಪದು , ಆ೦ದ್ರಾಣ ಕಾಲಲ್ಲೆ ಅವು ಹಾ೦ಗೆ ೯ ಆಯಿದವು ಹೇಟದ್ದು ನಾವು ಕೇಳೀದ್ದು. ಅಪ್ಪ ಅಲ್ಲದೋ ?ನಾವಗರಡಿಯ.