Oppanna.com

ಶಮ್ಮಿಯ ಮದುವೆ : ದೃಶ್ಯ 6

ಬರದೋರು :   ವೇಣು ಮಾಂಬಾಡಿ    on   21/08/2013    6 ಒಪ್ಪಂಗೊ

ನಾಟಕದ ಐದನೆ ದೃಶ್ಯ ಇಲ್ಲಿದ್ದು.
ಪಾತ್ರ ವರ್ಗ:
ಸುದರ್ಶನ : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ 55
ಪ್ರಮೀಳಾ : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ 23, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ : ಮದುವೆ ದಲಾಲಿ , ವರ್ಷ 60 ಹೇಳಿ ಮಡಗಲಕ್ಕು.
ಕೇಶವಣ್ಣ : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ : ಒಂದನೇ ಮಾಣಿ ವರ, ವರ್ಷ 28, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣು ಮೂರ್ತಿ : ಎರಡನೇ ಮಾಣಿ ವರ, ವರ್ಷ 29, ಪೇಂಟು ಶರ್ಟು
ಸುರೇಶ : ಮೂರನೇ ಮಾಣಿ ವರ. ವರ್ಷ 28, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.

                                           ದೃಶ್ಯ : ೬

(ಅದೇ ಮನೆಯ ದೃಶ್ಯ)
(ವೇದಿಕೆಯಲ್ಲಿ ಪ್ರಮೀಳ ಮಲಗಿರ್ತು.  ತಲೆ ಹತ್ರೆ ಸುದರ್ಶನ, ಕಾಲ ಹತ್ರೆ ಶರ್ಮಿಳ, ಕತ್ತಲು. ಒಂದು ದೀಪ ಮಾತ್ರ.  ದು:ಖದ ಸಂಗೀತ )
ಸುದ : ಶಮ್ಮಿ,  ನೀನಂದು ಪೂನಾಕ್ಕೆ ಹೋದ ಲಾಗಾಯ್ತು,  ಅಮ್ಮ ಅನ್ನ ಆಹಾರ ಬಿಟ್ಟಿತ್ತು .  ಮಾತೇ ಹೊರಟು ಹೋಗಿತ್ತು. ಬಹುಶ: ಸಣ್ಣಕ್ಕೆ ಅಟ್ಯಾಕ್ ಆಗಿದ್ದಿಕ್ಕು ಹೇಳಿ  ಡಾಕ್ಟ್ರುಗೊ ಹೇಳಿದವು.  ಆದರೆ ಮೆಡಿಕಲ್ ಚೆಕ್ ಅಪ್ ಪ್ರಕಾರ ಏವ ರೋಗವುದೆ ಇಲ್ಲೆ. ಜೀವಚ್ಛವದ ಹಾಂಗಾಯಿದು ಅಮ್ಮ. ಮನಸ್ಸಿಂಗೆ ತುಂಬಾ ಶಾಕ್ ಆಗಿ ಹಾಂಗಾಗಿಕ್ಕು ಹೇಳಿದವು.  ಕಡೆಂಗಾದರೂ ಬಂದೆಯಾ ಮಗಳೇ.
ಶರ್ಮಿಳಾ : ಅಪ್ಪಾ, ಆನು ಪೂನಾಕ್ಕೆ ಆ ಮಾಪ್ಳೆ ಹುಡುಗನ ಮೀಟ್ ಅಪ್ಪಲೆ ಹೋಪಗಳೆ, ಆ ಹುಡುಗ ಒಂದು ಟೆರರಿಸ್ಟ್ ಹೇಳಿ ಪೋಲಿಸರ ಕೈಗೆ ಸಿಕ್ಕಿ ಹಾಕೆಂಡದು ಗೊಂತಾತು.  ಅದರ ಬಗ್ಗೆ ಇನ್ನಷ್ಟು ತಿಳ್ಕೊಂಬಲೆ ಪ್ರಯತ್ನಿಸಿದರೆ ತುಂಬಾ secrecy maintain ಮಾಡ್ತಾ ಇತ್ತು.  ಆರೊಟ್ಟಿಂಗೂ mingle  ಆವುತ್ತಿತ್ತಿಲ್ಲೆ. ಬಹುಶ: ಅದು ಎಂತದೋ purpose೦ಗೇ ಬಂದಾಂಗೆ ಕಾಣ್ತು ಹೇಳಿ ಎಲ್ಲ ಗೊಂತಾತು. ತುಂಬಾ ಬೇಜಾರಾತು, ಅದಕ್ಕಾಗಿ ಅಲ್ಲ, ಎನ್ನ ಬಗ್ಗೆ. ಕೂಡ್ಳೆ ಇತ್ಲಾಗಿ ಬಂದೆ.
ಸುದರ್ಶನ : ಎಲ್ಲವೂ ನಿನ್ನಮ್ಮ ಇಷ್ಟರವರೆಗೆ ದೇವರ ನಂಬಿಕೊಂಡ ಕಾರಣವೋ, ನಮ್ಮ ಎಲ್ಲೋರ ಮೇಲೆ ಗುರುಗಳ ಆಶೀರ್ವಾದ ಇದ್ದ ಕಾರಣವೋ ಅಂತೂ ಚೆಂದಕೆ ಊರಿಂಗೆ ತಿರುಗಿ ಬಂದೆನ್ನೇ.  ಇದಾ ಇದ್ಯಾವುದನ್ನೂ ಅಮ್ಮನ ಹತ್ರೆ ಹೇಳಿಕ್ಕೆಡ.  ನೀನು ಪುನ: ಬಂದದರ ಕಂಡು ಅಮ್ಮಂಗೆ ಖಂಡಿತಾ ಗುಣ ಅಕ್ಕು.
ಶರ್ಮಿಳಾ : ಅಪ್ಪು ಅಪ್ಪಾ.  ಎನ್ನದುದೆ ತಪ್ಪು ತುಂಬಾ ಇದ್ದು. ಅಮ್ಮ ಆವಗಾವಗ, ಆವಗಾವಗ ಎನಗೆ ಬುದ್ದಿ ಹೇಳ್ತಾ ಇತ್ತು.  ಆಗ ಕೇಳಿದ್ದಿಲ್ಲೆ.  ಅಮ್ಮ ಖಂಡಿತ ಎನ್ನ ಮರುಹುಟ್ಟಿನ ನೋಡುಗು ಹೇಳ್ತ ಭರವಸೆ ಎನಗಿದ್ದು.  ಅಪ್ಪಾ, ಆನು ಈಗ ಮದಲಾಣ ಶರ್ಮಿಳಾ ಅಲ್ಲ.  ಸಂಪೂರ್ಣ ಬದಲಾಯಿದೆ.
ಸುದ : ಇದಕ್ಕೆಲ್ಲಾ ನೀನು ಮಾಂತ್ರ ಅಲ್ಲ ಮಗಳೆ ಕಾರಣ. ಆನುದೆ.  ಎಲ್ಲವೂ ಹಾಂಗೆ, ಕೆಟ್ಟ ಮೇಲೆ ಬುದ್ಧಿ ಬಂತು.  ಎಷ್ಟು ಸರ್ತಿ ಎನಗೆ ಬುದ್ಧಿ ಹೇಳಿದ್ದು ಪಮ್ಮಿ. ನಿನಗು ತಿದ್ದುವಾಂಗೆ ಹೇಳ್ಲೆ ಹೇಳಿತ್ತು.  ಆದರೆ ಎನ್ನ ದೃಷ್ಟಿಯೇ ಕುರುಡಾಗಿಪ್ಪಗ ನಿನಗೆಂತ ಹೇಳುದು . . ಆನು ಸರಿ ಆಯಿದಿಲ್ಲೆ, ನೀನುದೆ ಹಾಳಾವ್ತ ಹಾಂಗೆ ಮಾಡಿದೆ.  ಎಲ್ಲವುದೆ, ಆ ದೇವರ ಕೈಲಿದ್ದು.  ಪಮ್ಮಿ, ಏ ಪಮ್ಮಿ,  ಉದಿಯಾತು ನೋಡು.  ಇದಾ, ಇಲ್ಲಿ ಆರು ಬಯಿಂದವು ನೋಡು. ಶಮ್ಮಿ ಬಯಿಂದಿದಾ. ಇದಾ ಶಮ್ಮಿ ಬಯಿಂದು.
ಶಮ್ಮಿ : ಅಮ್ಮಾ, ಅಮ್ಮಾ, ಆನು ಶಮ್ಮಿ, ಶರ್ಮಿಳಾ, ನಿನ್ನ ಪ್ರೀತಿಯ ಮಗಳು ಬೈಂದೆ ಅಮ್ಮಾ.  ನೋಡು. ನೋಡು, ಆನು  ಮದಲಾಣ ಶಮ್ಮಿ ಅಲ್ಲ ಅಮ್ಮಾ. ನೀನು ಹೇಳಿದ ಹಾಂಗೇ ಕೇಳ್ತೆ ಅಮ್ಮಾ. ನೋಡು ಅಮ್ಮಾ. (ಅಮ್ಮ ಅಲುಗಾಡುತ್ತು , ಅಮ್ಮನ ಕೈ ಕಾಲುಗಳ ಉಜ್ಜಿ ಪ್ರೀತಿ ತೋರುಸುತ್ತವು).
ಅಮ್ಮ.  ಆನು ..
ಪ್ರಃ  ಶಮ್ಮಿ.. (ಪ್ರಮೀಳ ಶಮ್ಮಿಯ ಹತ್ತಿರ ದಿನಿಗೇಳುತ್ತು).
ಹಿನ್ನೆಲೆಲಿ ಅಸತೋಮಾ ಸದ್ಗಮಯ ..  ಕೇಳಿ ಬತ್ತು.  ಕತ್ತಲೆ ಬೆಳಕಾವುತ್ತು.   ರಾಮಭಜನೆಯೂ ಕೇಳಿ ಬತ್ತು.
ಕೇಶವಣ್ಣ :  ಆ.  ಈ ಮನೆಲಿ ಎಂತ ಇದು ವಿಚಿತ್ರ ಕಾಣ್ತಾ ಇದ್ದು.  ಓ, ಶರ್ಮಿಳ ಭಜನೆ ಮಾಡ್ತಾ ಇದ್ದು.  ಸುದರ್ಶನನುದೆ ಇದ್ದ.  ಎಲ್ಲವುದೆ ಗುರುಗಳ ಕೃಪೆ.  ಹಾಂ.  ಈಗಳೇ ಸುರೇಶಂಗೆ ಫೋನ್ ಮಾಡಿ ತಿಳುಸುತ್ತೆ.  ಅವ ಅಮೇರಿಕಕ್ಕೆ  ಇನ್ನುದೆ ಹೋಗಿರ.
(ಕೇಶವಣ್ಣ ಮನೆಯೊಳ ಬತ್ತ ಇದ್ದ ಹಾಂಗೆ  ಮೂರು ಜೆನವುದೆ ಪ್ರೀತಿಲಿ ಅವನ ಎದುರುಗೊಳ್ಳುತ್ತವು, ಎಲ್ಲೋರ ಮುಖಲ್ಲಿಯುದೆ ಸಂತೋಷ)
(ಕಡೇಂಗೆ ಮದುವೆ ವಾದ್ಯದ ಶಬ್ದ ಕೇಳುಸಲಕ್ಕು)
( ಭದ್ರ೦ ಶುಭ೦ ಮ೦ಗಲ೦)
 
DSC_7248 DSC_7255

6 thoughts on “ಶಮ್ಮಿಯ ಮದುವೆ : ದೃಶ್ಯ 6

  1. ನಾವ್ ನಾವಾಗಿಯೆ ಜಾಗತೀಕರಣದ ಹೊಡೆತ ಎದುರು ನಿ೦ಬ ಪ್ರಯತ್ನವ ಆದರೂ ಮಾಡೆಕ್ಕು ಹೇಳುವುದು ಮಾ೦ಬಾಡಿಯಣ್ನನ ಕೊ(ರ)ಳಲ ಗಾನದ ಆಶಯ ಆಗಿರೆಕ್ಕು?.
    ವ್ಯಕ್ತಿಗತವಾಗಿ ತಪ್ಪ/ಸರಿಯ ಹೇಳಿ ನೋಡಿದರೆ, ನಮ್ಮ ಒಟ್ಟು ಸಮಾಜಲ್ಲಿ ಒಪ್ಪಿದ ಡೆಮಾಕ್ರಸಿಯ ಒ೦ದು ಭಾಗವೇ,ಈ ರನ್ನಿ೦ಗ್/ಚೇಸಿ೦ಗ್.
    ವೇಣು ಸೂತ್ರಧಾರಿಯೋ/ಪಾತ್ರದಾನಿಯೋ ಹೇಳುವುದು ನಾವಗರಡಿಯ.
    ಅವಸರವ ಹೇಳಿ ನೋಡಿದರೆ, ಬ್ಯಾಟು ಬೀಸುವವು ೬ ತೆಗಗೂ/ನೂರು ತೆಗಗೂ ಅಲ್ಲದೋ?.

  2. ಎನಗೆ ನಾಟಕದ ಬಗ್ಗೆ ತಿಳುವಳಿಕೆ ಕಮ್ಮಿ. ಆದರೂ ಇದರ ಓದಿಯಪ್ಪಗ ಎನಗೆ ಅನಿಸಿದ್ದು – ಇದರ ರಂಗಪ್ರಯೋಗ ಮಾಡುವಾಗ ಅಭಿನಯಕ್ಕೆ ಇಪ್ಪ ಅವಕಾಶ ಸಾಕೋ..!!!
    ಗೊಂತಿಪ್ಪೋರು ಹೇಳೆಕ್ಕಷ್ಟೆ.

  3. ರಜ ಸಮಯ ಹಿಂದೆ ಬದಿಯಡ್ಕ ಹೊಡೆಲಿ ಹೀಂಗೆ ಇಪ್ಪ ಪ್ರಕರಣ ಅದ ಹಾಂಗೆ ಸುದ್ದಿ ಕೇಳಿದ್ದೆ (ಅಲ್ಲಿ ಮಾಪಳೆ ಬದಲಿನ್ಗೆ ಕೊಚ್ಚಿ ಪುರ್ಬು). ಕೂಸುಗೊಕ್ಕೆ ಎಜುಕೇಶನ್ ಕೊಟ್ಟದು ಹೆಚ್ಚವುತಿದ್ದೋ ಹೇಳಿ ಸಂಶಯ ಬತ್ತ ಇದ್ದನ್ನೇ….

  4. ಅಪ್ಪು ಭಾವ… ಅಂತ್ಯ ರಜಾ ಅಮ್ಸರಲ್ಲಿ ಆದಹಾಂಗೆ ಕಾಣ್ತಾ ಇದ್ದು…. ಅಂಬಗ ಇದು ಎಷ್ಟು ಹೊತ್ತಿನ ನಾಟಕ?

  5. ನಾಟಕದ ಅಂತ್ಯ ರಜಾ ಅವಸರಲ್ಲಿ ಆತೋ ಹೇಳಿ ಕಾಣುತ್ತು.ಸುರೇಶ ಶಮ್ಮಿಯ ಹೇಂಗೆ ಒಪ್ಪಿದನೊ? ರಜಾ ಅಸಹಜತೆ ಕಾಣುತ್ತಾ ಇದ್ದು.ಕಡೆಯ ದೃಶ್ಯ ಮನಮುಟ್ಟುವ ಹಾಂಗೆ ಆಯಿದಿಲ್ಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×