ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು!
ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು,ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!!
ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು.ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು.
’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’.
ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ!
ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°.
ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ.
ಆತೋ?ಏ°?
ಇದು ಆನು ಈಜಿಪ್ಟಿಲ್ಲಿ ಎಲ್ ಅಲಮೀನ್ ಹೇಳ್ತ ಪೇಟೆಲಿ ನೋಡಿದ್ದೆ.ಅಲ್ಲಿ ಕತ್ತೆ ಎಳವ ಸಣ್ಣ ಗಾಡಿಲಿ ಹೀಂಗೆ ಚಿಮಿಣಿ ಎಣ್ಣೆ ತುಂಬುಸಿಗೊಂಡು ಮಾರ್ತವು.ಅಲ್ಲಿ ಚಿಮಿಣಿ ಎಣ್ಣೆಯೂ ಪೆಟ್ರೋಲ್ ಸಿಕ್ಕಿದ ಹಾಂಗೆ ಪಂಪುಗಳಲ್ಲಿ ಸಿಕ್ಕುತ್ತು.
ಬೈಕಿಲ್ಲಿ ಹೋಗೆಂಡಿದ್ದಿದ್ದವನ ಪೆಟ್ರೋಲು ಟೇಂಕು ಖಾಲಿ ಆತಾಯ್ಕು. ಪೆಟ್ರೋಲು ಬಂಕಿನ ವರೆಗೆ ಕತ್ತೆ ಬೆನ್ನಿಲ್ಲಿ ಕೂದೊಂಡು ಬಂದು, ಕೇನಿಲ್ಲಿ ಪೆಟ್ರೋಲು ತುಂಬುಸಿ, ಅರ್ಧ ದಾರಿಲಿ ಬಾಕಿ ಆದ ಬೈಕಿನ ಅವ ತೆಕ್ಕೊಂಡು ಹೋಯೆಕಷ್ಟೇ. ಎಂತ ಹೇಳ್ತಿ ?
ಅದೂ ಆದಿಪ್ಪಲೂ ಸಾಕು.
ಅದು ಬೋಸ ಭಾವ೦ ಖ೦ಡಿತಾ ಅಲ್ಲ ಆದರೆ ಹಲ್ಲು ಕಾಣ್ತೀತು.ಕತ್ತೆ ಮೆಟ್ಟೀರೂ ಹೋಗದ್ದ ಹಲ್ಲಲ್ಲದೊ ನಮ್ಮ ಭಾವನದ್ದು.ಮತ್ತೆ ರಘು ಭಾವನ ಪದ್ಯ as usual superp.ಮತ್ತೆ ಆ ಮನುಷ್ಯ ನಯ್ಕಾಪಿನದ್ದೋ ಸೂರ೦ಬಯ್ಲಿನದ್ದೋ ಆಗಿಕ್ಕು ಕು೦ಬಳೆ ಸೀತಾ೦ಗೋಳಿ ಮಾರ್ಗಲ್ಲಿ ಕತ್ತಗೆ ಕೂಡಾ ರಜ ಕಷ್ಟವೆ.ಮನೇಲಿದ್ದ ಕಾರಿಲ್ಲಿ ರಜ ಪೆಟ್ರೋಲು ಬೇಟ್ರಿ ಕಮ್ಮಿ ಆಗದ್ದ ಹಾ೦ಗೆ ಸ್ಟಾರ್ಟು ಮಾಡ್ಲೆ ಬೇಕಾವುತ್ತದ.ಮತ್ತೆ ಹೆರ ಗುರುವಾಯೂರಪ್ಪನ್ ಬಸ್ಸಿನ ಅವನೇ ಕಾಯುಗು ಹೇಳ್ತ ದ್ಯರ್ಯಲ್ಲಿ ಓಡುಸುತ್ತವದ.ಹಾ೦ಗಾಗಿ ಪೇಟಗೆ ಹೋಪಲೆ ತೊ೦ದರೆ ಇಲ್ಲೆ.ಪೆಟ್ರೋಲು ತಪ್ಪಲೆ ಬಿಡ್ತವಿಲ್ಲೆ ಅದ.ಒಪ್ಪ೦ಗಳೊಟ್ಟಿ೦ಗೆ.
ಹಾ, ನಿ೦ಗೊ ಸರಿಯಾಗಿ ಗುರ್ತಿಸಿದ್ದಿ… ಅದು ಆನಲ್ಲಾ.. ಅದು ಬಲ್ನಾಡು ಮಾಣಿ… 😀 😛
ಹೊತ್ತು ಬಚ್ಚಿತ್ತೀ ಮನುಷ್ಯನೊ
ಹತ್ತಿ ಕೂಯಿದು ಎನ್ನ ಬೆನ್ನಿಲಿ
ಗತ್ತು ಮಾಡುತ್ತಿದರ ಕೈಲಿದ್ದೊಂದು ಚಡಿಬೆತ್ತ
ನೆತ್ತರಿನ ರಂಗಾದ ಪಾತ್ರಕೆ
ಒತ್ತಿ ತುಂಬಿಸುತಿಪ್ಪ ದ್ರಾವಣ
ಕತ್ತೆವಾಹನ ಓಡುಸುಲೆ ಹೊಸ ಬಗೆಯ ಇಂಧನವೋ?
ತುಂಬಾ ಅರ್ಥ ಪೂರ್ಣ ಆಯಿದು.ಆನು ಆ ಬೆತ್ತವ ನೋಡಿದ್ದೇ ಇಲ್ಲೆ.ನಿಂಗಳ ಪದ್ಯಲ್ಲಿ ನೋಡಿದ ಮೇಲೆ ಮತ್ತೆ ಪತಲ್ಲಿ ನೋಡುವಾಗ ಗೊಂತಾತು.ಪದ್ಯ ಕೊಟ್ಟದಕ್ಕೆ ಧನ್ಯವಾದ ಮಾವಾ..
ಲಾಯಕ್ಕಾಯಿದು ಬಾ – ಮಿನಿ
ನಮ್ಮ ಮಂಗ್ಳೂರಿನ ಮಾರ್ಗಂಗೊಕ್ಕೆ ಸರೀಯಾದ ವ್ಯವಸ್ಥೆ !!
ಮಂಗಳೂರಿನ ರಸ್ತೆಗೋ ಹೇಳಿರೆ????
ಹಹ್ಹಹ್ಹ !!!…
ಓಹ್!! ಶೀರ್ಷಿಕೆ ನೋಡಿ ಆನು ಯಾವುದೋ ವಿಶೇಷ ಸಾರು ಮಾಡ್ಲೆ ಇಪ್ಪ ವ್ಯವಸ್ಥೆ ಆಗಿಕ್ಕು ಹೇಳಿ ಗ್ರೇಶಿದೆ!! 🙂 ಒಳ್ಳೆ ಹಶು ಆವ್ತಾ ಇಪ್ಪ ಕಾರಣ ಆಗಿಕ್ಕು ಅಲ್ದಾ? ಹೆಚ್ಚಿನ೦ಶವೂ ಆ ಜನ ಕಾಳಸ೦ತೆಲಿ ಇ೦ಧನ ಮಾರುತ್ತ ಜನ ಆಗಿಕ್ಕು.. ಅಲ್ಲದ್ರೆ ಪ೦ಪಿ೦ಗೋ ಮತ್ತು ತು೦ಬುಸಲೆ ತೆಕ್ಕೊ೦ಡೋಪದಾಗಿಕ್ಕು ಅಲ್ದಾ?..
ಆನು ವಿಶೇಷ ಸಾರಿಗೆ ವ್ಯವಸ್ಥೆ ೧ ರ ವಿವರ್ಸಿದ್ದೆನ್ನೆ..ಹಾಂಗೆ ಇಲ್ಲಿ ೨ನೇದು ಹೇಳಿ ಹಾಕಿದ್ದು..ಸಾರಿಂದು ಬೇರೆ ಇದ್ದು.ಸಾಂಬ್ರಾಣಿದು…ಇನ್ನು ಮುಂದಾಣ ಶುದ್ಧಿಲಿ ಸಾರಿನ ವಿಷಯ ಹೇಳುವ..ಆಗದೋ ಗಣೇಶಣ್ಣ,,,
ಗಣೇಶಮಾವ° ,ಅದು ಬೋಸಭಾವ° ಅಲ್ಲಾನ್ನೆ?? ಮೊನ್ನೆ ನೆರೆಕರೆಲಿ ಹೇಳ್ಯೋಂಡಿತ್ತಿದ್ದ° , ಪೆಟ್ರೋಲು ಡ್ರಮ್ಮಿಲಿ ತುಂಬಿಸಿ ಮಡುಗತ್ತದಡ ಅವ° .. ಕೇನಿಲಿ ಕೊಂಡೋಗಿ ಡ್ರಮ್ಮಿಲಿ ತುಂಬ್ಸಿ ಮಡುಗುತ್ತದೋ ಗೊಂತಿಲ್ಲೆ!
😉
ಉಮ್ಮಪ್ಪ!!ಅವನ ಗೆಡ್ಡ ಕಾಣ್ತಿಲ್ಲೆ.ಅವ ಅಲ್ದೋ ಹೇಳಿ ಕಾಣ್ತು..ಮತ್ತೆ ಇನ್ನು ಅವನ ಹತ್ತರೆಯೇ ಕೇಳೆಕ್ಕಷ್ಟೇ.
ಬಲ್ನಾಡು ಮಾಣಿಗೆ… ಆ ಜನ.. ನಿನ್ನ ಹಾ೦ಗೆ ಕಾಣ್ತು.. ನಿನಗ ಕತ್ತೆ ಹೇಳಿರೆ ಇಷ್ಟಾ ಹೇಳಿ ಅ೦ದು ನೀನು ಎನ್ನತ್ರೆ ಹೇಳಿ ಗೊ೦ಡು ಇತ್ತೆ.. ಎನಗೆ ನಿನ್ನ ಮೇಲೆ ಸ೦ಶಯ…