Latest posts by ಗಣೇಶ ಮಾವ° (see all)
- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಅಬ್ಬ!!ಸುಮಾರು ದಿಕ್ಕೆ ಜೆನಿವಾರ ಹಾಕ್ಸಲೆ ಇತ್ತು.. ಉದಿಯಪ್ಪಗಳೇ ಹೋಯಿದೆ..ಮಳೆ ಬೇರೆ.ಸಾರಡಿ ತೋಡು ದಾಂಟಿ ಗೆದ್ದೆ ಕರೇಲಿ ಬಪ್ಪಗ ಇಷ್ಟು ಹೊತ್ತು ಆತು.ಇಲ್ಲಿ ಬಂದು ನೋಡುವಾಗ ಒಬ್ಬೊಬ್ಬ ಒಂದೊಂದು
ವಿಷಯ ಹೇಳ್ತವು.ಇಂದು ಆನು ಹೋದಲ್ಲೂ ಒಂದು ವಿಶೇಷ ಇತ್ತು..ಕೋಣಮ್ಮೆ ಬಟ್ಟಮಾವ° ಶೆಡ್ರಂಪಾಡಿ ದೇವಸ್ಥಾನಲ್ಲಿ ಜೆನಿವಾರ ಹಾಕ್ಸಿಗೊಂಡು ಇತ್ತವು..ಸುಮಾರು ಎಲ್ಲೋರು ಅದರ್ಲಿ ಗೋರ್ಮೆಂಟು
ಕೆಲಸಲ್ಲಿ ಇಪ್ಪವು.ಕ್ರಮ ಬದ್ಧವಾಗಿ ಎಲ್ಲೋರಿಂಗೂ ಜೆನಿವಾರ ಹಾಕ್ಸಿ ಆತು.ಸುಮಾರು ೨೫ ಜೆನ ಜೆನಿವಾರ ಹಾಕ್ಲೆ ಬಯಿಂದವು. ಕ್ರಿಯಾಭಾಗ ಎಲ್ಲ ಮುಗುತ್ತು. ಬಟ್ಟಮಾವ° ಎಲ್ಲೋರಿಂಗೂ ಆಶೀರ್ವಾದ ಮಾಡಿದವು. ” ಸರ್ವೇ ಜನಾಃ ಸುಖಿನೋ ಭವಂತು ” ಹೇಳಿ. ಸಮಸ್ಯೆ ಆದ್ದೆ ಅಲ್ಲಿ. ಸಂಸ್ಕೃತದ ಪ್ರಭಾವ ರಜ್ಜ ರಜ್ಜ ಅಲ್ಲಿಪ್ಪವಕ್ಕೆ ಗೊಂತಿಪ್ಪದೇ ಅಲ್ಲಿ ಆದ ಸಮಸ್ಯೆ.ಇರಳಿ,ವಿಷಯ ಎಂತ್ಸು ಹೇಳಿ ಹೇಳ್ತೆ.
ಜೆನಿವಾರ ಹಾಕ್ಲೆ ಗೋರ್ಮೆಂಟಿನ ಸರ್ವೇ,ಮತ್ತೆ ರೆವಿನ್ಯೂ ಡಿಪಾರ್ಟ್ಮೆಂಟಿನ ಎರಡೂ ಹೊಡೆಯವು ಇತ್ತಿದ್ದವು.ಅಷ್ಟೊತ್ತಿಂಗೆ ರೆವಿನ್ಯೂವಿನವು ಕೇಳಿದವು “ಬಟ್ಟಮಾವ°, ನಿಂಗ ಅವಕ್ಕೆ ಮಾತ್ರ ಆಶೀರ್ವಾದ ಮಾಡ್ತಿ..ಎಂಗೊಗೆ ಮಾಡ್ತಿಲ್ಲೀರಾ? ಬಟ್ಟಮಾವಂಗೆ ಒಂದು ಕ್ಷಣ ಎಂತ ಮಾಡೆಕ್ಕು ಹೇಳಿ ಗೊಂತಾಯಿದಿಲ್ಲೆ. ಕೂಡ್ಲೇ ” ರೆವಿನ್ಯೂ ಜನಾಃ ಸುಖಿನೋ ಭವಂತು ” ಹೇಳಿ ಹೇಳಿದವು..ಎರಡೂ ಹೊಡೆಯವಕ್ಕೆ ಕೊಶಿ ಆತು.
ಜೆನಿವಾರ ಹಾಕ್ಲೆ ಗೋರ್ಮೆಂಟಿನ ಸರ್ವೇ,ಮತ್ತೆ ರೆವಿನ್ಯೂ ಡಿಪಾರ್ಟ್ಮೆಂಟಿನ ಎರಡೂ ಹೊಡೆಯವು ಇತ್ತಿದ್ದವು.ಅಷ್ಟೊತ್ತಿಂಗೆ ರೆವಿನ್ಯೂವಿನವು ಕೇಳಿದವು “ಬಟ್ಟಮಾವ°, ನಿಂಗ ಅವಕ್ಕೆ ಮಾತ್ರ ಆಶೀರ್ವಾದ ಮಾಡ್ತಿ..ಎಂಗೊಗೆ ಮಾಡ್ತಿಲ್ಲೀರಾ? ಬಟ್ಟಮಾವಂಗೆ ಒಂದು ಕ್ಷಣ ಎಂತ ಮಾಡೆಕ್ಕು ಹೇಳಿ ಗೊಂತಾಯಿದಿಲ್ಲೆ. ಕೂಡ್ಲೇ ” ರೆವಿನ್ಯೂ ಜನಾಃ ಸುಖಿನೋ ಭವಂತು ” ಹೇಳಿ ಹೇಳಿದವು..ಎರಡೂ ಹೊಡೆಯವಕ್ಕೆ ಕೊಶಿ ಆತು.
ಹೀಂಗಿಪ್ಪ ಸುಮಾರು ಹಾಸ್ಯಾಸ್ಪದ ಘಟನೆಗ ನಮ್ಮ ಸಮಾಜಲ್ಲಿ ನೆಡತ್ತು.ಅದರ್ಲಿ ಇಂದು ಒಂದು ಘಟನೆ ಎನಗೆ ಕಂಡತ್ತು..ಎಲ್ಲೋರು ಇಂದು ಗಂಭೀರ ವಿಷಯವ ಹೇಳುವಗ ಎನಗೆ ಕಂಡ ಇಂದ್ರಾಣ ವಿಷಯವ ಹೇಳುವ ಹೇಳಿ ಕಂಡತ್ತು. ಎಲ್ಲೋರಿಂಗೂ ರಕ್ಷಾಬಂಧನ ಮತ್ತೆ ನೂಲಹುಣ್ಣಮೆಯ ಶುಭಾಶಯಂಗ…
ಆಗಲಿ, ಇಂದು ಬೈಲಿಲಿ ಶ್ರೀ ಅಕ್ಕ,ಸೌಮ್ಯಕ್ಕ,ಬೈಲಕರೆ ಅಜ್ಜಿ,ಎಲ್ಲೋರು ಸೇರಿ ಅಡಿಗೆ ಮಾಡಿದ್ದವಡ,,ಸ್ವೀಟು ಕಾಯಿ ಹೋಳಿಗೆ ಅಡ,
ಏ ಅಜ್ಜಕಾನ ಬಾವ,ನಾವು ಎಷ್ಟೊತ್ತಿಂಗೆ ಹೋಪದು?
ಇಂದ್ರಾಣ ವಿಜಯ ಕರ್ನಾಟಕ ಪೇಪರಿಲಿ ಅಹಮದಾಬಾದಿನ ಮಕ್ಕ ಜೆನಿವಾರ ಬದಲುಸುತ್ತ ಪಟ ಇದ್ದು. ಆದರೆ ವಿಶೇಷ ಇದ್ದದು ಶೀರ್ಷಿಕೆಲಿ – ರುಜುರುಪಾಕರ್ಮ ಹೇಳಿ ಬರದ್ದವು. ಇದೆಂತ ಆಗಿಕ್ಕು??
ಅವಕ್ಕೆ ಇನ್ನೂ ರುಗುಪಾಕರ್ಮ ಮುಗುದ್ದು ಹೇಳಿ ರುಜುವಾತು ಆಯಿದಿಲ್ಲೆಯೋ ಏನೋ?
ಋಗ್ವೇದ ಹಾಂಗೂ ಯಜುರ್ವೇದಂಗ ಒಟ್ಟು ಸೇರಿ ಅಪ್ಪಗ ರುಜು ಹೇಳ್ತ ಶಬ್ದದ ಉಗಮ ಆತಾಯ್ಕು ! ಎಲ್ಲೋರು ಒಟ್ಟು ಸೇರೆಕು, ಒಂದಾಗಿ ಬೆಳೆದರೆ ಒಳ್ಳೆದೇ ಅಲ್ದೊ ?
ಗಣೇಶ ಮಾವ ಇರುಳಿಂಗೆ ಹೋಯೆಕ್ಕಷ್ಟೆ. ಪೆರ್ಲದಣ್ಣ ಮುಜುಂಗೆರೆ ರಕ್ಷಾಬಂಧನಲ್ಲಿ ಬೌದ್ಢಿಕ್ ಮಾಡುಲಿದ್ದಡ. ಅವನ ಕರ್ಕೊಂಡೋಪ ಜೆವಾಭ್ದಾರಿ ಬೈಂದು. ಅದು ಮುಗುಶಿ ಬತ್ತೆ. ಒಟ್ಟಿಂಗೆ ಹೋಪ. ಎರಡು ಕುಡ್ತೆ ತುಪ್ಪ ಮಡಗುಲೆ ಹೇಳಿ. ಬಲ್ನಾಡು ಮಾಣಿ ಬಂದರೆ ಬೇಕಕ್ಕು.
{ ಅವನ ಕರ್ಕೊಂಡೋಪ ಜೆವಾಭ್ದಾರಿ ಬೈಂದು }
– ಅವಂಗೆ ನೆಡವಲಾಗದೋ? ಏ°?
ನೀ ಎಂತ್ಸಕೆ ಕರಕ್ಕೊಳೆಕ್ಕು?
ಹೊರ್ತವ ಇದ್ದರೆ ಸತ್ತಾಂಗೆ ಬಿದ್ದೊಂಬೆ ಹೇಳಿ ಶಂಬಜ್ಜನ ಗಾದೆ ಒಂದಿದ್ದು. ಪಾಪ ಅಜ್ಜಕಾನಬಾವ°!!
ಯೆ ನೆಗೆ ಬಾವೊ.. ಅವನ ಪೆರ್ಲಂದ ಮುಜುಂಗೆರೆಗೆ ತುಂಬಾ ದೂರ ಇಲ್ಲೆಯೋ ಬೈಕು ಬೇಕು ಹೇಳಿದ.. ಗೊಂತಾತೋ..?
ನಾಕೂವರೆಗೆ ಕೃಷ್ಣ ಬಸ್ಸು ಇದ್ದಡ!!!ಅದರ್ಲಿ ಅವನ ಹತ್ರೆ ಬಪ್ಪಲೆ ಹೇಳು. ಈಗ ಮಳೆ ಬಪ್ಪ ಹಾಂಗಿದ್ದು.ನೀನು ಬೈಕ್ಕು ತೆಕ್ಕೊಂಡು ಹೋಗಡ ಮಿನಿಯಾ!!!
ಏ ಅಜ್ಜಕಾನ ಭಾವ,ಇರುಳಾಣ ಊಟಕ್ಕೆ ಆದರೂ ಒಂದರಿ ಹೋಪ!!!ಇಲ್ಲದ್ರೆ ಮತ್ತೆ ಕಾನಾವು ಅತ್ತೆ ಹೋಳಿಗೆ ಪೇಕೆಟು ಕಟ್ಟುಗು. ಮತ್ತೆ ನವಗೆ ಬೈಲಿನದ್ದು ,ನಮ್ಮ ಹೆರಿಯೋರು ಮಾಡಿದ ವರ್ಜಿನಲ್ಲು ಹೋಳಿಗೆ ಸಿಕ್ಕ..ಮತ್ತೆ ನಾವು ಅದರ ಹೆಸರು ಹೇಳಿ ಇಲ್ಲಿ ಬೇಕರಿಂದ ತೆಗೆಯಕ್ಕಷ್ಟೆ.
ಆಚೆ ಹೊಡೆಲಿ ಕಾರ್ಯಕ್ರಮ ಶುರು ಆಯಿದು.. ರಕ್ಷೆ ಕಟ್ಟುಲಪ್ಪಗ ಬತ್ತೆ ಹೇಳಿ ಲೈಬ್ರೆಲಿಲಿ ಕೂದೊಂಡು ಇದ್ದೆ ಐದು ಗಂಟೆಗೆ ಮುಗಿತ್ತಡ ಆರೂವರೆಗೆ ಅಲ್ಲಿಗೆ ಬತ್ತೆ.. ಬೇಕರಿ ಕೊಂಕಣಿಗೆ ಎಂತ್ಸುಕೆ ಪೈಸೆ ಕೊಡುದು.. ಅಲ್ಲೆ ಸರಿ ತಿಂಬೊ…
ಅಕ್ಕು,ಆನು ಬತ್ತೆ ಈಗ…ಸಂಘದ ಕಾರ್ಯಕ್ರಮ ಅಲ್ದಾ?? ತಾರಿಣಿಯ ಕರಕ್ಕೊಂಡು ಬತ್ತೆ.ಅದಕ್ಕೊಂದು ರಕ್ಷೆ ಕಟ್ಟುವ.ಆಗದೋ ಭಾವ,?????
ಅಕ್ಕು ಮಾವ ಬೇಗ ಬನ್ನಿ.. ಮತ್ತೆ ರಕ್ಷೆ ಉಳುದರೆ ಮೆಲ್ಲ ಪೀಂಕ್ಸೆಕ್ಕು ಹೇಳಿ ಗುಣಾಜೆ ಮಾಣಿ ಲೆಕ್ಕ ಹಾಕಿಯೋಂಡು ಇದ್ದಾ.. ಸಿಕ್ಕದ್ದರೆ ಕಷ್ಟ..
ಏ!!! ಅವ ಬಾರ ಈಗ!!! ಹೊತ್ತೋಪಗ ಆರು ಗಂಟಗೆ ಕೊಡೆಯಾಲಲ್ಲಿ ಎಡಿಯೂರಪ್ಪನವು ಬತ್ತವಡ ..ಹಾಂಗೆ ಅವ ಉದಿಯಪ್ಪಗಳೇ ಅಲ್ಲಿಗೆ ಹೋಯಿದಡ..
ಗಣೇಶ ಮಾವ ಇದಾ ಹತ್ತ್ತು ನಿಮಿಷಲ್ಲಿ ಬಂದೆ.. ಹೆರಟು ಕೂರಿ.. ಮತ್ತೆ ತುಂಬ ಬಗೆ ಇಕ್ಕು ಬೈಲಿಲಿ.. ಹೊತ್ತಾದ್ರೆ ಅಟ್ಟುಂಬೊಳಲ್ಲಿ ಕಾಣ ಕಸ್ತಲೆಗೆ….
ಏ ಭಾವಾ, ಎರಡು ಕುಡ್ತೆ ತುಪ್ಪ ಕುಡುದರೆ ಮತ್ತೆ ಸುವರ್ಣಿನಿ ಅಕ್ಕನ ಏವ ಯೋಗಾಸನವೂ ಹಿಡಿಯ ಹೇಳಿ ಕಾಣ್ತು.
ಮಾಣಿ ತೋರ ಆಯೆಕ್ಕು ಹೇಳಿ(ಎದುರಿಂಗೆ ಹೇಳ) ಎಂತ್ಸೆಲ್ಲಾ ಮಾಡ್ತನೋ ಅರಡಿಯಾ.
ಏ ಭಾವಾ,, ಆನು ತೋರ ಆಯೆಕ್ಕು ಹೇಳಿ ಗ್ರೇಶಿದ್ದೇ ಇಲ್ಲೆ!. ಆನು “ಸಪೂರ ಇದ್ದರೆ ಅಪ್ಪ ಹತ್ತು ಪ್ರಯೊಜನಂಗ” ಹೇಳಿ ಲೇಖನ ಬರವ ಅಂದಾಜಿಲಿದ್ದೆ, ಇನ್ನು ತೋರ ಅಪ್ಪದೆಂತಕೆ… 😉
ಗಣೇಶ ಭಾವನ ತಮಾಷೆ ಲಾಯಕಿದ್ದು. ಓದುತ್ತಾ ಇಪ್ಪಗ ಆನು ಸುರೂವಿಂಗೆ ಗ್ರೇಶಿದೆ. ಇವ, ಗೋರ್ಮೆಂಟು ಬ್ರಾಹ್ಮಣರ ಬಗ್ಗೆ ಹೇಳ್ತನಾ ಹೇಳಿ. ಮತ್ತೆ ನೋಡಿರೆ ಗೋರ್ಮೆಂಟು ಬ್ರಾಹ್ಮಣ ಅಲ್ಲ.
ಹೇಳಿದ ಹಾಂಗೆ ಲೇಖನಲ್ಲಿಪ್ಪ ಪಟಲ್ಲಿ ಎಲ್ಲೋರೂ ಜೆನಿವಾರ ಹಾಕುತ್ತಾ ಇದ್ದರೂ ಒಬ್ಬ ಭಾವಯ್ಯ ಸುಮ್ಮನೆ ಕೂಯಿದಾನೆ, ಎಂತಕ್ಕೆ ?!!
ಅವಂಗೆ ಜೆನಿವಾರ ಸಿಕ್ಕಿತ್ತಿಲ್ಲೆಯೋ ?
ಹಾಕಲಿದ್ದ ಹೊಸ ಜೆನಿವಾರಕ್ಕೆ ಕಟ್ಟ ಬಿದ್ದತ್ತಾ ?
ಎಂಗೊಗೆ ಸೂತಕ ಹೇಳಿ ಕೂದನಾ ?
ಅಲ್ಲ ಎನಗೆ ಮಂತ್ರ ಬತ್ತೂ ಹೇಳಿ ಮದಲೇ ಮಂತ್ರ ಹೇಳಿ ಹೊಸ ಜೆನಿವಾರ ಹಾಕಿ ಆತೊ ?
ಆ ಭಾವಂಗೆ ಉಪನಯನ ಆಯೆಕ್ಕಷ್ಟೆಡ..ಮದುವೆ ಮುನ್ನಾಣ ದಿನ ಮುಹೂರ್ತ ಹೇಳಿ ಕಾಣುತ್ತು .
ಏ,,,ಹಾಂಗಲ್ಲ……ಅವ ಯಜ್ನೋಪವೀತಂ ಪರಮಂ ಪವಿತ್ರಂ ಹೇಳಿ ಮುಗಿಶಿ ಜೆನಿವಾರ ಹಾಕಿ ಆಗಿ ಬ್ರಹ್ಮಾರ್ಪಣ ಬಿಡ್ಲೇ ಕಾಯ್ತಾ ಇದ್ದ!
ಏ ಗೋಪಾಲೋ.. ನೀ ಏಕೋ ಹೀಂಗೆ?ಎನ್ನ ಪುಳ್ಳಿ ಗೋರ್ಮೆಂಟು ಬ್ರಾಹ್ಮಣ ಹೇಳಿ ಹೇಳಿದ್ದಯಿಲ್ಲೆ….ಗೋರ್ಮೆಂಟು ಕೆಲಸಲ್ಲಿ ಇಪ್ಪವು ಹೇಳಿ ಹೇಳಿದ್ದು ಅವ..
ಓ.. ಅಪ್ಪೋ.. ಹಾಂಗೊ.. ಎನಗೆ ಗೊಂತಾತಿಲ್ಲೆ. “ಸೋರಿ” ಹೇಳಿ ಹವ್ಯಕಲ್ಲಿ ಹೇಳ್ತು ಹೇಂಗೆ ?
{ ಹವ್ಯಕಲ್ಲಿ ಹೇಳ್ತು ಹೇಂಗೆ }
ಯೇವ ಬಾಶೆ ಆದರೂ ಆ ಶಬ್ದವ ಹಾಂಗೇ ಹೇಳೆಕ್ಕಟ್ಟೆಯೋ ಹೇಳಿಗೊಂಡು ಒಂದು ಕನುಪ್ಯೂಸು!! 😉
ಸೋರಿಯ ಸೋರಿ ಹೇಳಿಯೇ ಹೇಳಿಕ್ಕಿ. ಸೋರಿಹೋಪದಿದ್ದರೆ ಕೆರಿಶಿ ಮಡಗಿಕ್ಕಿ!!
ಏ ಗೋಪಾಲಣ್ಣ,ಅವ ಹೇಳಿದ ಹೇಳಿ ಆ ಹೋಳಿಗೆ ಕೆರಿಶಿ ಸೋರುವಲ್ಲಿ ಮಡುಗೆಡಿ.