Oppanna.com

ಭರಣಿ-ಮಂಡಗೆ-ಮಡ್ಡಿಯಳಗೆ…

ಬರದೋರು :   ನೆಗೆಗಾರ°    on   18/10/2011    39 ಒಪ್ಪಂಗೊ

ನೆಗೆಗಾರ°

ನೆಗೆಮಾಣಿದು ಎಂತ ಶುದ್ದಿಲ್ಲೆ – ಕಾದೊಂಡಿತ್ತಿರೋ? ಇದಾ, ಆನು ಇಲ್ಲೇ ಇದ್ದೆ. ಆತೋ?
ಕಳುದ ಸರ್ತಿ ಸುಪ್ರಭಾತ ಬರದು ಪಷ್ಟುಪ್ರೈಸು ಸಿಕ್ಕಿದ್ದು ನಿಂಗೊಗೆಲ್ಲ ಗೊಂತಿದ್ದಲ್ದಾ; ತೆಕ್ಕುಂಜೆಮಾವನ ಹಾಂಗೆ ಪ್ರಾಯ ಆದವಕ್ಕೆ ಮರದಿಕ್ಕು, ತೊಂದರಿಲ್ಲೆ, ಎನಗೆ ಮರದ್ದಿಲ್ಲೆ.. 😉
ಅದಾದ ಮತ್ತೆ ಅಂತೇ ಕೂದರೆ ಅಕ್ಕ, ಎಂತಾರು ಪದ್ಯ ಕಟ್ಟೆಕ್ಕನ್ನೇ – ಹೇಳಿ, ಯೋಚನೆಮಾಡಿಗೊಂಡು ಇತ್ತಿದ್ದೆ.

ಅದಕ್ಕೆ ಸರೀಯಾಗಿ ನಮ್ಮ ಶುಬತ್ತೆ ಮೊನ್ನೆ ತರವಾಡುಮನೆಗೆ ಬಂದಿತ್ತು, ನವರಾತ್ರಿ ಪೂಜಗೆ.
ಬೋಚಬಾವಂಗೆ ಕಾಳಿ ಒಲುದ್ದು ಅದೇ ದಿನ ಅಲ್ದಾ, ಹಾಂಗೆ ಪೂಜೆ ಮುಗುಶಿ ಮನಗೆ ಬಪ್ಪಗ ಆನುದೇ ಬೋಚಬಾವಂಗೆ ಈ ಪದ ಹೇಳಿಕೊಟ್ಟೊಂಡು ಬಂದೆ.
ನೋಡಿ, ಲಾಯ್ಕಾಯಿದು ಹೇಳಿಕ್ಕಿ. ಆತಾ?
~
ನೆಗೆಮಾಣಿ

(ರಾಗ: ಧರಣಿಮಂಡಲ…)

ಬರಣಿಮಂಡಗೆ ಮಡ್ಡಿಯಳಗೆ
ಉಂಡೆ ತುಂಬಿದ ಅಟ್ಟಿನಳಗೆ
ಕಂಡಕೂಡಲೆ ನೆಂಪು ಬಕ್ಕೂ
ಬೆಂಗಳೂರು ಶುಬತ್ತೆಯಾ…

ರಂಗಮಾವನ ಸೋದರತ್ತೇ
ಲಿಂಗು ಅಜ್ಜಿಯ ಒಂದೆ ಮಗಳೇ
ಬೆಂಗುಳೂರಿಲಿ ಬೀಡುಬಿಟ್ಟಾ
ಬೆಂಗಳೂರು ಶುಬತ್ತೆಯೇ..

ಕಾರುಬಾರಿನ ಜೋರು ಮಾವಾ
ಕಾರು ಅರಡಿವ ಎರಡು ಮಕ್ಕೋ
ಆರು ಸೆಂಟ್ಸಿನ ಮನೆಯ ಒಳವೇ
ಬೆಂಗುಳೂರು ಶುಬತ್ತೆಯೂ..

ಹಗಲು ಮಾಡುದು ತುಪ್ಪದಡಿಗೇ
ಇರುಳು ಉಂಬದು ಮೂಗಿನೊರೆಗೇ
ಕರಗಲಿಪ್ಪದು ಒಂದೆ ಗಳಿಗೇ
ಬೆಂಗಳೂರು ಶುಬತ್ತೆಗೇ..

ಊರಿಲಿಪ್ಪದು ರುಚಿಯೆ ಇಲ್ಲೇ
ಬೇರೆ ಊರಿನ ತಿಂಡಿ ತೀರ್ಥವ
ಕಾರುವಷ್ಟುದೆ ತಿಂದು ತಿರುಗುದು
ಬೆಂಗಳೂರು ಶುಬತ್ತೆಯೂ..

ಉಂಡೆ ಪತ್ರೊಡೆ ಮೆಚ್ಚಲಿಲ್ಲೇ
ಚೆಂಡೆಪೆಟ್ಟಿನ ಕೇಳುಲಿಲ್ಲೇ
ತುಂಡು ಕಂಪ್ಲೀಟರುವೆ ಜೀವನ
ಬೆಂಗುಳೂರು ಶುಬತ್ತೆಗೇ..

~*~*~

ಈ ಸರ್ತಿಯೂ ಒಂದೇ ಪದ್ಯ ಇದ್ದ ಕಾರಣ ಇದುವೇ ಪಷ್ಟು – ಹೇಳಿ ತೀರ್ಮಾನ ಮಾಡುಗೋ – ಗುರಿಕ್ಕಾರ್ರು?
ತೆಕ್ಕುಂಜೆಮಾವ ಎನ್ನ ಪುನಾ “ಖೆಣಿಯಾ” ಹೇಳಿ ಬೈಗು, ಆದರೆ ಇಪ್ಪ ಕತೆ ಹೀಂಗೆ! 😉

ವೋಯ್, ನಿಂಗಳೂ ಸೇರುಸುತ್ತರೆ ಸೇರುಸಿ, ಸೆಕೆಂಡು, ತಾರ್ಡು, ಬೂರ್ಡು ಪ್ರೈಸುಗೊ ಬಾಕಿ ಇದ್ದು!

39 thoughts on “ಭರಣಿ-ಮಂಡಗೆ-ಮಡ್ಡಿಯಳಗೆ…

  1. ಬೊಕ್ಕುಬಾಯಿಯ ಮುಸುಡಿನೋನೆ
    ಸೊಕ್ಕು ಸಾಕೂ ನಿನ್ನದಿನ್ನು
    ಸುಕ್ಕುರುಂಡೆ ಎರಡು ನಿನಗೆ
    ತುರ್ಕುಸುವೆ ಬಾಯೊಳದಿಕೆ..

    ಹ್ಮ್ಮ್ಮ್ …ನಿನ್ನ ನಿನ್ನ…

  2. ಒಪ್ಪ ಇಪ್ಪದದಕ್ಕೆ ಮತ್ತೆಂತ ಒಪ್ಪ ಕೊಡ್ಲೆಡಿಗು ? ಅದು ಬೇಲಿ ಇಪ್ಪ ಅಕ್ಕಂದಿರು ಪೌಡರ್ ಮೆತ್ತಿಗೊಂಡಾಂಗೆ ಆಗದಾ ?

  3. ನೆಗೆಮಾಣಿಯ ಪದ್ಯಂದ ಬೈಲಿಂಗೊಂದು ಕಳೆ ಬಂದಾಂಗಾತು. ಪಶ್ಟಾಯಿದು.

  4. ಇದು ಭರ್ಜರಿ ರೈಸಿದ್ದಾತೊ….
    ನೆಗೆಮಾಣಿಯ ಪದ್ಯವೂ…ಬೋಚನ ಪದ್ಯವೂ…
    ಅದರೊಟ್ಟಿಂಗೆ.. ಸೊನೆ ಮೆಡಿಯ ಹಾಂಗೆ
    ತೆಕ್ಕುಂಜೆ ಮಾವನ ಒಂದು ಗೆರೆ (‘ಬೋಳು ಬುರುಡೆ ಮಂಡೆಯೊಳಗೆ’) ಪದ್ಯವೂ ಗಮ್ಮತಾಯಿದು…

    ಪ್ರೈಸು ಕೊಡುವ ವಿಚಾರಕ್ಕೆ ಗುರಿಕ್ಕಾರ‍್ರು ಇನ್ನೂ ಇಳಿದ್ದವೇಲ್ಲನ್ನೇ…?

  5. ಎಲ್ಲಾ ಕವಿಗೊ ಆದವನ್ನೆ? ಇನ್ನು ಒಪ್ಪಣ್ಣನ ಬೈಲು ಪದ್ಯದ್ದೇ ಬೈಲಾವುತ್ತೊ?

  6. pas nege maniya hadu bhari pastaidu .
    hotte tumba nege madi athappa.
    koshiyo koshi .nege maniya nege kambagale koshi avuttu.
    kondata kondata kanuttu.gi heenge bare
    ethlagi hoda heli aathu nege mani.kanadde tumba dina aathu hange.
    sooper aidu josh aagi heenge baretta iru.
    good luck..

  7. ಲಾಯ್ಕಾಯಿದು ಲಾಯ್ಕಾಯಿದು ಇದು. 🙂

  8. ಶುಭತ್ತೆಯ ಪರಿಪಾಟಿನ ನೆಗೆ ಮಾಡಿದ ನೆಗೆಗಾರನ ಪದ್ಯ ಲಾಯಕಿಲ್ಲೆ ಹೇಳಿರೆ ಮೆಚ್ಚನಾ ಪರಮಾತ್ಮನು. ಅಪರೂಪಕ್ಕೆ ಬೈಲಿಲ್ಲಿ ಪದ್ಯ ಬಂದು ರಂಗೇರಿತ್ತದ. ನೆಗೆಗಾರಂಗೆ ಪ್ರತಿಸ್ಪರ್ಧಿ ಆಗಿ ನಿಂದ ಬೋಚ ಭಾವ, ಭೋಜ ರಾಜನ ಹಾಂಗೆ ಮೆರದ್ದನಾನೆ ?

  9. ಈಗ ಎ೦ಟ್ರಿ ಆದ್ದು ಎರಡೇ ಜನ ಹಾ೦ಗಾಗಿ ರಜ ಕಾಯುವ . ಪ್ರೈಸು ಕೊಡುವ ತೀರ್ಮಾನಕ್ಕೆ ಆನು ಬತ್ತೆ.

    ಎನ್ನ ದಿನಿಗೇಳುಲೆ ಮರೆಯೆಡಿ….

    ಇಲ್ಲದ್ದರೆ ಮೋಸ ನಡಗು…..

    (ಎ೦ತದೇ ಆದರೂ ಈ ನೆಗೆ ಪದ್ಯ ಒಳ್ಲೆದಾಯಿದು ಅದು ಗುಟ್ಟಿನ ಸುದ್ದಿ ಆರಿ೦ಗೂ ಹೇಳೆಡಿ)

    1. ಯೇ ಅಕ್ಕ,
      ಎಂಟ್ರಿ ಎರಡಲ್ಲ, ಮೂರು ಇದ್ದನ್ನೆ, ಎನ್ನ ಒಂದು ಗೆರೆಯ ಪದ್ಯ ಓದಿದ್ದಿಲಿರೋ – ‘ಬೋಳು ಬುರುಡೆ ಮಂಡೆಯೊಳಗೆ’
      ಈ ಪದ್ಯ ಭಾರಿ ಲಾಯಕ ಆಯಿದು ಹೇಳಿ ನೆಗೆಮಾಣಿ ಗುಟ್ಟಿಲಿ ಎನ್ನತ್ತ್ರೆ ಹೇಳಿದ್ದ ಆತೋ.
      ಒಂದು ಗೆರೆಯ ಪದ್ಯ ಬರದವಕ್ಕೆ ಒಂದನೆ ಪ್ರೈಸು ಹೇಳಿ ಗುರಿಕ್ಕಾರ್ರು ಓ ಮನ್ನೆ ಒಂದರಿ ಹೇಳಿತ್ತಿದ್ದವು.

  10. ಹೋ..! ನಮ್ಮದೂ ಒ೦ದು ಪದ್ಯ ಇರಳಿ ಏ????

    —————————

    ಊರ ಎಡಕ್ಕಿಲ್ಲಿ ಮದುವೆ ಊಟ,
    ಗುರ್ತ ಇಪ್ಪಲೆ ಆಚಕರೆ ತೋಟ,
    ಹಾ೦ಗೆ ಹೇಳಿ ಹೋಗದ್ರೆ ಅಕ್ಕೋ ,
    ಎ೦ತ ಹೇಳ್ತಿ ಬಾವಯ್ಯಾ..!!

    ಒ೦ದು ಬರಣಿಯ ಮದ್ಯ ದೊಳಗೆ,
    ಲಾಯಕೆ ರುಚಿಯ ನಾಲ್ಕು ಮೆಡಿಗೆ,
    ಮಜ್ಜಿಗೆ- ಅಶನ ಅಕ್ಕು ಹೇದು,
    ತ೦ಟೆ ಎಣುಸಲೆ ಎತ್ತಿದವೂ…!!

    ಡಿಕಿಶ್ನರಿ ಬೇಡ,ಪುಸ್ತಕ ಬೇಡ,
    ಬಾಕಿದ್ದವಕ್ಕೇ ಎ೦ತದು ಬೇಡ,
    ನಾವು ಬೇಗ ಕೂಪೋ ಹೇದು,
    ಕಿಟಿ-ಕಿಟಿಳಿ ನೆಗೆ ಮಾಣಿ ಎತ್ತಿದಾ…!!

    ಬೋಚ ಬಾವ೦ಗ ಪಾಚ ಬೇಕಡ,
    ಪೆ೦ಗಣ್ಣ೦ಗೆ ಹೋಳಿಗೆ ಅಕ್ಕಡ,
    ವಸಗೆ ಆತೊ ಇಲ್ಲಿಯೋ ನೋಡದ್ದೆ,
    ಹ೦ತಿಲಿ ಮೊದಲೇ ಕೂದವೂ…!!

    ಗಡ್ದಿಲ್ಲಿ ನಾಲ್ಕು ಹೋಳಿಗೆ ಹೊಡದು,
    ನಾಲ್ಕು ಸೌಟು ಪಾಚ ತಿ೦ದು,
    ಎರಡು ಲೋಟ ಕಾಪಿ ಕುಡುದು,
    ಸ್ವಸ್ತಾ ಒರಕ್ಕು ಒರಗಿದವೂ..!! 😉

    1. ಛ, ಸಬಾಶ್!
      ತಾರ್ಡು ಪ್ರೈಸು ನಿನಾಗೆ. ಆತಾ?

      ಇನ್ನು, ಸೆಕೆಂಡುದೇ, ಬೂರ್ಡುದೇ ಬಾಕಿ ಇದ್ದು. ಆರಾರು ಬತ್ತವೋ ನೋಡುವೊ° 😉

  11. ಯಬ್ಬಾ…ಭಾರೀ ಲಾಯ್ಕಾಯ್ದನ್ನೆ ನೆಗೆಗಾರಣ್ಣನ ಪದ್ಯ!!!! ಬೋಚ ಭಾವನೊಟ್ಟಿ೦ಗೆ ನಿ೦ಗೊಗೂ ದೇವಿಯ ಆಶೀರ್ವಾದ ಸಿಕ್ಕಿದೋಳಿ..!!

    1. ಏ ಅಕ್ಕೋ..!!
      ಇವ೦ಗೆ ದೇವಿಯ ಅನುಗ್ರಹ ಇದ್ದಡ..!
      ಹಾ೦ಗೆ ನಾವು ಅವ ಹೇಳಿ ಕೊಟ್ಟಾ೦ಗೆ ಈಗ ತಪಸ್ಸಿ೦ಗೆ ದಿನಾ ಕೂಪದು.. 😉

      1. ದೀಪತ್ತೆ, ಬೋಚಬಾವಂಗೆ ಅದಾಗಲೇ ಸಿಕ್ಕಿದ್ದು.
        ಬೋಚ° ಅಲ್ದಾ, ಹಾಂಗಾಗಿ ಅವಂಗೆ ಗೊಂತಾಗದ್ದು, ಅಷ್ಟೇ. 😉
        ಅಲ್ದಾ, ಬೋಚಬಾವಾ?

        1. ಹಾ, ಅದು ಅಪ್ಪು..
          ಆದರೆ ಎಲ್ಲಿ ಮಡುಗಿದ್ದೆ ಹೇಳ್ತು ನೆ೦ಪ್ಪಿಲ್ಲೆ ಬಾವ.
          ಒ೦ದಾರಿ ಹುಡುಕ್ಕಿ ಕೊಡುವಿಯೋ?? 🙁

  12. ಹಹ್ಹಹ್ಹಾ … ಎನಗೆ ತಡವಲೆ ಎಡಿಯದ್ದಷ್ಟು ನೆಗೆ ಬಂದು, ದೊಡ್ಡಕ್ಕೆ ನೆಗೆ ಮಾಡಿದ್ದು ಯಾವುದರ ಓದುವಗ ಗೊಂತಿದ್ದಾ?
    ಅದರ ಬರದರೆ ನಿಂಗೊಗೆಲ್ಲ “ಎಬೇ ಇದಕ್ಕೆ ಅದರ ಓದಿ ನೆಗೆ ಬಂದದಾ?” ಗ್ರೇಶುವಿ.
    ಅದಾ ಅಖೇರಿಗೆ ಬರದ ವಾಕ್ಯಲ್ಲಿ “ತಾರ್ಡು ಬೂರ್ಡು ಪ್ರೈಸು ಹೇಳಿ ಇದ್ದಲ್ಲದಾ? ಅಂಬಗ…
    ಸಣ್ಣ ಇಪ್ಪಗ ಆ ಪದದ(ಬೂರ್ಡು) ಉಪಯೋಗ ತುಂಬಾ ಇತ್ತಿದ್ದು ಎಂಗೊಗೆ.. ಈಗ ಮರದೇ ಹೋಗಿತ್ತು.

    ಮತ್ತೆ… ಕಟ್ಟಿ ಬರದ ಪದ್ಯಲ್ಲಿ ಸುಮಾರು ವಿಷ್ಯಂಗೊ ಇದ್ದುದೆ, ಭಾರಿ ಲಾಯಿಕದೆ ಆಯಿದು.

    1. ಸುಮನತ್ತೇ!
      ಬೂರ್ಡು – ನಿಂಗೊ ಸಣ್ಣ ಇಪ್ಪಗ ಹೇಳಿದ್ದಿರಾ? ಆನು ಈಗಳೂ ಹೇಳ್ತಾ ಇದ್ದೆ…
      🙁

      ಅಮೋಘಬಾವ° ಎನ್ನಷ್ಟು ದೊಡ್ಡ ಅಪ್ಪಗ ಹೇಳುಗಾ? 😉

    1. ಬೇಡ, ತೆಕ್ಕುಂಜೆಮಾವಂಗೆ ಸಿಕ್ಕದ್ದೆ ಎನಗೆ ಬೇಡ.
      ಅವು ಮತ್ತೆ ಎನ್ನ “ಖೆಣಿಯಾ°” ಹೇಳಿ ಬೈತ್ತವು. 😉
      ಅವಕ್ಕೆ ಸಿಕ್ಕಿದ ಮತ್ತೆ ಸಾಕು.

      1. ಆಂಬಗ, ಈ ಸರ್ತಿ ನಿನಗೆ ಬೂರ್ಡು ಪ್ರೈಸು ಕೊಡುದು ಹೇಳಿ ಗುರಿಕ್ಕಾರ್ರು ನಿಘಂಟು ಮಾಡಿದವು. ಒಪ್ಪಿಗೋ..ಯೇ ಮಾಣಿ.
        ಹುಳಿಯಡರಿನ ಈಚಿಕೆ ಗೋಡೆಗೆ ಆನಿಸಿ ಮಡಿಕ್ಕೊಂಡು ಮಾತಾಡ್ಸಿದರೇ ನಿನಗೆ ಅರ್ಥ ಅಪ್ಪದು ಹೇಳಿ ಅನುಭವಕ್ಕೆ ಬಂತಿದ…!
        ಅದಿರಳಿ, ಬೂರ್ಡಿನ ಅರ್ಥ ಎಂತ್ಸು ಹೇಳಿ ನಿನ್ನ ೫೦೦ ಪುಟದ ಡಿಕ್ಷನರಿ ನೋಡಿಕ್ಕಿ ಹೇಳು ಒಂದರಿ.

  13. ಓ! ಇದಾರು ಬಂದದೂ! ತಲೆ ಖಾಲಿ ಆದರೆ ಬುದ್ದಿವಂತಿಕೆ ಜಾಸ್ತಿ ಹೇಳುದು ನಿಜ ಆತು! ನೆಗೆಮಾಣಿ, ಪದ್ಯ ಪಷ್ಟಾಯಿದು.. ಇಂದ್ರಾಣ ಕಾಲದ ಜೀವನಶೈಲಿಯ ವಿಡಂಬನೆಯೂ, ಪದ್ಯದ ರಾಗವೂ! ಬೈಲಿನ ಹೆಮ್ಮಕ್ಕೊ ಎಲ್ಲರೂ ಒಂದರಿ ಒಟ್ಟಿಂಗೆ ಪದ್ಯ ಹೇಳಿ ನೋಡಿಕ್ಕಿ ಆತೋ! ರಾಗ ಸರೀ ಇಲ್ಲದ್ರೆ ರಜ ನೆಗೆಮಾಣಿಗೆ ತಟ್ಟಿರಾತು, ಒಳ್ಳೆ ರಾಗ ಹೆರಡುಗು! 😉 🙂

    1. ಅದಾ, ಬಂದ ಇವ°.
      ಆನು ಶುದ್ದಿ ಹೇಳುವಗ ಬಕ್ಕು, ಎಳಗುಸುಲೆ. 🙁

      ಲಾಯ್ಕಾಯಿದು ಹೇಳೆಕ್ಕು ಹೇಳಿರೆ ’ಪಷ್ಟಾಯಿದು’ ಹೇಳ್ತೆ ನೀನು! ನಿಲ್ಲು ನಿನಗೆ, ನಿನ್ನ ಶುದ್ದಿಗೂ ಹಾಂಗೇ ಹೇಳುವೆ. 😉

  14. ಡಿಕಿಶ್ನರಿ ಹಿಡ್ಕೊಂಡು ಹೋದವನ ಕಾಂಬಲೇ ಇಲ್ಲೆ ಹೇಳಿ ತಲೆಬೆಶಿ ಆಗಿಂಡಿದ್ದತ್ತು.
    ಬಂದ° ಅದ.
    ಕೊಶಿ ಆತು…

    1. ನಿಂಗೊ ಮಾಷ್ಟ್ರಣ್ಣ ಆಗಿಂಡು ಎನಗೆ ರಜ ಉಪಕಾರ ಮಾಡ್ತಿಲ್ಲಿರನ್ನೇ?
      ಡಿಕಿಶ್ನರಿಲಿ ಒಂದು ಐನ್ನೂರು ಪುಟ ಓದಿ ಕೊಡುವಿರೋ?

      ಅಲ್ಲದ್ದರೆ, ನಿಂಗಳ ಶಾಲಗೆ ಬತ್ತ ಯೇವದಾರು ಸಾರಡಿಪುಳ್ಳಿಯ ಕೈಲಿ ಕೊಟ್ರೂ ಅಕ್ಕು 😉

  15. ಓಯಿ ನೆಗೆ ಮಾಣಿ,
    ಊರಿಲ್ಲಿ ಇದ್ದೆಯಾ? ಶುದ್ದಿ ಇಲ್ಲದ್ದೆ ಹಾಂಗೊಂದು ಸಂಶಯ ಬಂತಿದ. ೫೦೦ ಪುಟದ ಡಿಕ್ಶನರಿ ಹಿಡ್ಕೊಂಡು ಕೂದಲ್ಲಿಯೇ ಬಾಕಿಯಾ ಹೇಳಿ 🙂
    ಅಲ್ಲ ಬೆಂಗಳೂರು ತಿರುಗಲೆ ಹೋಗಿ ಶುಬತ್ತೆಯಲ್ಲಿ ‘ಮಗ್ಗಿ’ ತಿಂದೆಯಾ?
    ನೋಡಿ, ‘ಲಾಯ್ಕಾಯಿದು ಹೇಳಿಕ್ಕು’ ಹೇಳಿದ್ದೆ. ಓದಿ ‘ಲಾಯ್ಕಾಯಿದು’ ಹೇಳ್ತೆ.
    ಶುಬತ್ತೆ ಮಕ್ಕೊ ಇನ್ನಾಣ ಸರ್ತಿ ಬಂದಿಪ್ಪಗ ಬೆಲ್ಲ ಕಾಯಿ ಹಾಕಿ ಪತ್ರೊಡೆ ಒಗ್ಗರ್ಸಿ ಕೊಡುವೊ°. ಹಾಂಗೇ ಸೇಮಗೆ ರಸಾಯನವೂದೆ. ಮತ್ತೆ ಮಕ್ಕೊ ಅದನ್ನೇ ಬೇಕು ಹೇಳಿ ಕಾದುಗು ಅಲ್ಲದಾ?-ಪಿಜ್ಜಾ, ಮಗ್ಗಿ, ಕುರೆ ಕುರೆ ಬೇಕಾಗ. ಹೇಂಗೆ?

    1. ಚ್ಛೆಲಾ ನೀನೇ!
      ಲಾಯ್ಕಾಯಿದು ಹೇಳೆಕ್ಕು ಹೇಳಿದ್ದಕ್ಕೆ ಲಾಯ್ಕಾಯಿದು ಹೇಳಿ ಮೋರೆ ತಿರುಗುಸಿ ಕೂದೆ! ಸೆಕೆಂಡು ಪ್ರೈಸೋ ಮಣ್ಣ ತೆಗವಲೆ ಪ್ರಯತ್ನ ಮಾಡ್ಳಾಗದಾ!

      ಮಗ್ಗಿ ತಿಂಬಲೆ ಸುಲಬ ಇದ್ದಡ, ನಕ್ಕುರುಸೇಮಗೆಯ ಒಂದು ಹೊಡೆ ಬಾಯಿಗೆ ಮಡಗಿ ಎಳದರೆ ಇಡೀ ಪ್ಲೇಟು ಕಾಲಿ ಆವುತ್ತಡ, ಬೋಚಬಾವ ಹೇಳಿಕೊಟ್ಟದು! 😉

  16. ಓಯ್! ನೆಗೆಮಾಣಿ….
    ಈ ಪದ್ಯದ ಒಳಾರ್ಥ ಪಷ್ಟ್ ಕ್ಲಾಸ್ ಇದ್ದು. “ಬೆಂಗಳೂರ ಶುಭತ್ತೆ” ಹೇಳಿ ಸಾಂಕೇತಿಕವಾಗಿ ಇದ್ದರೂ (ಮೋಡರ್ನ್)ಆಧುನಿಕತೆ ಹೇಳಿ ಹೇಳಿಸಿಕೊಂಡಿಪ್ಪ ಈಗಾಣ ಪೇಟೆಯ (ಹೞಿದೂ ಕೂಡ) ಜೀವನ ಶೈಲಿಯ ಅಧ್ವಾನಂಗಳ ಸೂಕ್ಷ್ಮವಾಗಿ ಹಾಂಗೂ ಭಾರೀ ಸರಳ ಹೇಳಿ ಕಾಂಬಾಂಗೆ ಪದ್ಯ ಕಟ್ಟಿದ್ದು ಸರಿಯಾಗಿ ನಾಟುವಾಂಗೆ ಇದ್ದನ್ನೆ!
    ಕುಕ್ಕಿಲ ಜಯತ್ತೆ

    1. ಜಯತ್ತೇ, ಶುಬತ್ತೆ ಇಪ್ಪದರ ಇಪ್ಪ ಹಾಂಗೇ ಹೇಳಿದ್ದಾನು. ಹೆಚ್ಚು ಕಮ್ಮಿ ಎಂತೂ ಮಾಡಿದ್ದಿಲ್ಲೆ ಅತ್ತೇ! 😉
      ಹೇಳಿದಾಂಗೆ, ನಿಂಗೊ ಹೀಂಗೆಲ್ಲ ದೊಡ್ಡದೊಡ್ಡ ಶೆಬ್ದ ಹಾಕಿ ಬರದರೆ ಆನು ಬೋಚಬಾವನ ಹತ್ರೆ ಅರ್ತ ಕೇಳೆಕ್ಕಟ್ಟೆ. 🙂

      1. ಹ್ಹಹ್ಹ!
        ಅರ್ತ ಕೇಳುಲೆ ಬೋಚಬಾವ ಎಂತಗೆ? ಡಿಕ್ಶನರಿ ಎಂತಾತು? ಡಿಕ್ಶನರಿ ಬದಲಿಂಗೆ ಡೈರೆಕ್ಟರಿ ಹಿಡಿದಿರಾ ಹೇಂಗೆ? ಖೆಣಿಯಾ!
        ಕುಕ್ಕಿಲ ಜಯತ್ತೆ

  17. ಓ, ಇದು ಪಷ್ಟಾಯಿದು..!!!
    ಇವನ ‘ಬೋಳು ಬುರುಡೆ ಮಂಡೆಯೊಳಗೆ’ ಇನ್ನೂ ಎಂತೆಲ್ಲ ಇದ್ದೋ..ಹ್ಹೂ..!

    1. ಹಪ್ಪಾ, ಎನ್ನ ತಲೆ ಬೋಳು ಹೇಳ್ತಿರಾ, ಎನ್ನಂದ ಮೊದಲು ನಿಂಗಳ ತಲೆ ಬೋಳಕ್ಕು (ಪೈಸೆ ತುಂಬಿ!!)

      ಮಾವ°, ಜಾಸ್ತಿ ಪೈಸೆ ಅಪ್ಪಗ ಎನಗೊಂದು ಪೆಕೆಟು ಚೋಕುಲೇಟು ತೆಗೇಕಾತಾ?

  18. ಓಯಿ., ಸಂಶಯವೇ ಇಲ್ಲೆ. ಇದು ಲಾಯಕ ಆಯ್ದು ಪದ್ಯ. ಒಪ್ಪೊಪ್ಪ ಒಪ್ಪ ಇದಕ್ಕೆ. ಶುಭತ್ತೆಗೆ ಇದರ ನೋಡಿ ಕಣ್ಣು ಕೆಂಪಾಗಿ ಮೈ ಉರುದು ಬೆಗರು ಬಿಚ್ಚಿ ಬೀಳದ್ರೆ ಸರಿ!!

    1. ಚೆನ್ನೈಮಾವ°,
      ಲಾಯ್ಕ ಆಯಿದು ಹೇಳಿದ್ದು ಲಾಯ್ಕ ಆಯ್ದು.

      ಇದೂ, ಶುಬತ್ತೆ ಈ ಬೈಲಿಂಗೆ ಬತ್ತಿಲ್ಲೆ ಹೇಳಿದವು ವೆಂಕಟಣ್ಣ; ಹಾಂಗೆ ದೈರ್ಯಲ್ಲಿ ಇಲ್ಲಿ ಹೇಳಿದ್ದು. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×