Oppanna.com

ಬೋಚಬಾವನ ಪುಗ್ಗ!

ಬರದೋರು :   ನೆಗೆಗಾರ°    on   25/01/2012    64 ಒಪ್ಪಂಗೊ

ನೆಗೆಗಾರ°

ಬೋಚಬಾವ ಎಷ್ಟೇ ದೊಡ್ಡ ಆಗಿರಳಿ, ಇನ್ನೂ ಮಕ್ಕಳಾಟಿಕೆ.
ಹೊತ್ತಿಂಗೆ ಸರಿ ಊಟ ಸಮಾಕೆ ಬೇಕು- ಹಾಂಗೆ ದಿನಕ್ಕೊಂದರಿ ಮಕ್ಕೋ ಆಡ್ತ ಆಟದಸಾಮಾನು ಸಿಕ್ಕದ್ದರೆ ಸೋತದೆ.
ಮಕ್ಕಳಾಟಿಕೆ ಎಳಗಿ ಆಡೆಕ್ಕು ಹೇಳಿ ಕಾಂಬಗ ಸೀತ ಎಂತ ಸಿಕ್ಕುತ್ತೋ ಹುಡುಕ್ಕಿ ಹಿಡುದು ಆಡ್ಳೆ ಸುರು ಮಾಡುದೇ!)

ಮೊನ್ನೆಂತಾತು ಹೇಳಿರೆ, ಓ ಅಲ್ಲಿ ಉಪ್ನಾನ ಇತ್ತು.
ಅಲ್ಲಿ ಪುಗ್ಗ (ಬುಗ್ಗೆ) ಕಟ್ಟಿಗೊಂಡಿತ್ತು ಅಲ್ದಾ, ಹೆರಡ್ಳಪ್ಪಗ ಕುಂಞಿ ಮಕ್ಕಳೊಟ್ಟಿಂಗೆ ಲಡಾಯಿಮಾಡಿ ನಾಕು ಬುಗ್ಗೆ ಹಿಡ್ಕೊಂಡು ಹೆರಟ ಬೈಲಿಂಗೆ.
ಹಾಂಗೆ ನೋಡಿರೆ ಆನು ಸಣ್ಣ, ಎನಗೇ ಬುಗ್ಗೆ ಬೇಡ, ಇವ ಎಂತರ ಹೀಂಗೆ – ಛೇ ಚೇ!

ಅವ ಉಶಾರಿ ಆಯೆಕ್ಕು ಹೇಳಿ ನಮ್ಮ ಬೈಲಿನೋರು ಗ್ರೇಶುದು, ಆದರೆ – ಆವುತ್ತನೇ ಇಲ್ಲೆ.
ಅಂಬಗಂಬಗ ಆರಾರೊಬ್ಬ ಹೇಳಿಗೊಂಡು ಬೇಕು.

ಬೋಚಬಾವನ ಪುಗ್ಗ:

ಎದುರೆರಡು ತುಂಡಲ್ಲು ಕರೆಲಿ ಬೇರೊಂದರ್ಧ
ಬೋಸುನೆಗೆ ಮಾಡುವಗ ಮುಚ್ಚಿಗೊಳೊ° ಅದರ |
ಕೆಂಪಲ್ಲು ಕಾಣುತ್ತು ಎಲೆಸುಣ್ಣ ಅಗುದಾಂಗೆ
ಹಲ್ಲುಸರಿ ತಿಕ್ಕು ನೀ – ಬೋಚಬಾವ || 🙂 ||

ಕೈಲಿ ಆಟದ ಕೆಸರು – ತಲೆಲಿ ನಾರಿನ ಕಸವು
ಮಾರುದ್ದ ದೂರಕ್ಕೆ ಮೈ ನಾರುಗಿವನ |
ಇನ್ನಾರು ಚೆಂದಕಿರು ಬೈಲ ಬಾವನ ರೀತಿ
ಮೈಗೆ ಸರಿ ಮಿಂದುಗೊಳೊ° – ಬೋಚಬಾವ || 🙂 ||

ಕಾರು ಬಾರಿನ ಕುಂಞಿ ರೈಲು ಬಿಡುವಾ ಹೊತ್ತು
ಎಲ್ಲ ಅರಡಿವ ಹಾಂಗೆ ತಲೆಯ ಆಡುಸಿಗೊ |
ಆರೆಂತ ಕೇಳಿರೂ ಹೂಂಕುಟ್ಟಿ ಒಂದರಿಯೆ
ನೀನಂತೆ ನೆಗೆಮಾಡು – ಬೋಚಬಾವ || 🙂 ||

ಜೆಂಬ್ರದೂಟವ ಉಂಡು ಒಂದು ಮೈಲಾರು ನೆಡೆ
ಹೊಟ್ಟೆ ಕರಗಲೆ ತಕ್ಕ ಗುಂಡಿಯಾ ಗರ್ಪು |
ನೆಗೆನೆಗೆಯ ಮಾಡಿಂಡು – ಎಂದಿಂಗು ಚುರ್ಕಾಗು
ಸೋಮಾರಿಯಾಗೆಡಾ – ಬೋಚಬಾವ || 🙂 ||

ಗಾಳಿ ತುಂಬಿದ ಬುಗ್ಗೆ ಮೇಲೆಮೇಲೇರುತ್ತು
ನೀರು ತುಂಬಿದ ಹಂಡೆ ಕೆಳವೆ ನಿಂದಿರ್ತು |
ಹೆಚ್ಚು ಕೊಣಿಯೆಡ ನೀನು ಬೈಲಿನೆಲ್ಲರ ಎದುರು
ಬುಗ್ಗೆಗೊಂದೇ ಪಿನ್ನು – ಬೋಚಬಾವ || 🙂 ||

~_~

ಸೂ:

  • ಹಲ್ಲಿಲ್ಲದ್ದ ಈ ನೆಗೆಮಾಣಿಯ ಪದ್ಯ ಹಲ್ಲಿಲ್ಲದ್ದ ಗುಂಡಜ್ಜ ಬರದ ರಾಗಲ್ಲೇ ಇದ್ದು -ಹೇಳಿ ದೀಪಿಅಕ್ಕಂಗೆ ಅನುಸಿರೆ ಆನು ಜೆವಾಬ್ದಾರಿ ಅಲ್ಲ.
  • ಮುಳಿಯಭಾವಂಗೂ, ದೀಪಿಅಕ್ಕಂಗೂ ತಪ್ಪುಸಿ ಪಷ್ಟುಪ್ರೈಸಿನ ತೆಗದ ಪದ್ಯ ಇದು. ಲಾಯಿಕಯಿದಲ್ಲದೋ?
  • ನಿಂಗಳ ಹತ್ತರೆ ಇನ್ನೂ ಪುಗ್ಗ ಇದ್ದರೆ ಒಪ್ಪಲ್ಲಿ ಬರೆಯಿ; ಎಲ್ಲೋರು ಸೇರಿ ಬೋಚಬಾವಂಗೆ ಹೇಳುವೊ°.

64 thoughts on “ಬೋಚಬಾವನ ಪುಗ್ಗ!

  1. ಬೈಲಿಲ್ಲಿ ನಗೆ ಬುಗ್ಗೆಗಳ ರಾಶಿಯನ್ನೇ ಕಂಡು ಕೊಶೀ ಆತು. ನೆಗೆಗಾರನ ಪ್ರಯತ್ನ ಸಾರ್ಥಕ ಆತು. ಬೈಲಿನ ಪ್ರತಿಯೊಬ್ಬನುದೆ ಕವನ ಕೆತ್ತುವುದರಲ್ಲಿ ಕೈಚಳಕ ತೋರುಸಿದ್ದವು. ಒಪ್ಪದ ಮೇಗೆ ಒಪ್ಪ ಬಿದ್ದು ಒಪ್ಪ ಆತದ.

  2. ಚೆನೈ ವಾಣಿ ಪ್ರಕಾರ ಬೋಸ ಬಾವ ತಪಸ್ಸಿ೦ಗೆ ಕೂದ್ದದಡ! ಎ೦ಥಾ ತಪಸ್ಸು? ಎ೦ತ ಬೇಡುತ್ತಾ ಇದ್ದೆ ಭಾವ? ವರ- ಸಿಕ್ಕಿರೆ ಒ೦ದೆರಡು ಹೋಳಿಗೆ, ಲಾಡು, ಜಿಲೇಬಿ, ಮತ್ತೆ ಚಟ್ಟ೦ಬಡೆ(ಕಡ್ಲೆದಾಗ) ಸಾಕೆನಗೆ…
    ನೀನು ಪದ್ಯ ಬರವಲೆ ಕೂದ್ದದಪ್ಪಾ?

  3. ಪಾಚದೂಟ ತಿ೦ದೆದ್ದು ಮಿ೦ದು ಬ೦ದು ಬೈಲಿ೦ಗೆ ಕಾಲು ಮಡುಗಿದೆ೦ತ ಕಾ೦ಬೊದೀ ಬೋಚ ಬಾವ ಕಾಣೆಯಾದನೆ೦ಬ “ಸುದ್ದಿ?”! ಆನ್ ಮ೦ಡೆಬಿಸಿಯಲ್ಲಿ ಅವ ಎ೦ತ ಹೇಳ್ಯೆ೦ತ ಮಾಡಿದ ಹೇಳ್ಯೆ೦ತ ಆರತ್ರೆ ಕೇಳೊದೀಗ ಬೋಚ ಬಾವ?

    ಆನು ಸುಮಾರು ಸಮಯ ಆತು ಇಲ್ಲಿ ಬಾರದ್ದೆ, ಈಗ ಆಮೆಟ್ ಕುಸಲ್ ಈಮೆಟ್ ಅಸಲ್ನ ಹಾ೦ಗಾಯ್ದಲ್ಲ! 😉
    ಎ೦ತದಿದೀ “ಪುಗ್ಗ”? ಹೊಯ್ ಮಹರಾಯ ಎಲ್ಲಿದ್ದೆ? ಪದ್ಯ ಮುಗುದ್ದಿಲ್ಯಾ ನಿ೦ಗಳದ್ದು?

  4. ನಿನ್ನ ತಪಸ್ಸಿಧ್ಧಿ ಆತು, ಪುಗ್ಗ ಮೂವತ್ತೈದಾತು
    ಬೇಗ ಬಾರದ್ದರೆ ಪಾಯಸ ತಣಿಗು
    ಬೈಲಿಡೀ ನಿನ್ನ ದಾರಿ ಕಾಯ್ತಾ ಇದ್ದು
    ಏಳು ಭಾವಾ ಓ – ಬೋಚಭಾವಾ

  5. ಬೆನ್ನನ್ನೆ ತಟ್ಟಿದರೂ ಗೊಂತಾಗ ಬೋಚಂಗೆ
    ತನ್ನನ್ನೆ ತಟ್ಟಿದ್ದು ಇನ್ನಾರನ್ನಲ್ಲ
    ಇನ್ನು ಸುಮ್ಮನೆ ನೀ ಕಾಲ ಕಳವದು ಬೇಡ
    ನೀನಿನ್ನು ಮಾತಾಡು ಬೋಚ ಭಾವ

    ಬೋಚ ನೀ ತಪಸಿಂದ ಎದ್ದು ಬಂದು
    ಆಚ ಕರೆ ತೋಡಿಲ್ಲಿ ಮಿಂದು ಬಾ
    ಪಾಚ ಉಂಬಲೆ ಇದ್ದು, ದೊಡ್ಡ ಹಾಳೆಯ ಪಾತ್ರ
    ಪೇಚಾಟ ಬೇಡ ನಿನಗೆ, ಬೈಲ ಬಂಧುಗಳ ಎಡೆಲಿ

    1. ನಿಂಗಳೂ ಬಂದೀರಾ!

      ಹೊಸಬೆಟ್ಟಿನೊಳದಿಕ್ಕೆ ಹಸೆಬಿಡುಸಿ ಮನುಗಿಂಡು
      ಕಸವಿಂದ ರಸ ಶುದ್ದಿ ಹೆರ್ಕಿದನೊ ಭಾವ |
      ಹಸಿಲೊಟ್ಟೆಯೊಟ್ಟಿಂಗೆ ಬೈಲಿಂಗೆ ಬಪ್ಪಗಾ
      ಕಿಸಿಕಿಸಿನೆ ನೆಗೆಮಾಡು – ಬೋಚಬಾವ || 🙂 ||

  6. ಪಾಚ ಹೋಳಿಗೆ ಹೇಳಿ ಬೋಚಬಾವನ ಉಬ್ಬುಸುತ್ತವು ನೋಡಿಲ್ಲಿ
    ಇವು ಕಟ್ಟುತ್ತ ಪುಗ್ಗವ ಕಂಡು ಉಬ್ಬಿಬಿಟ್ಟಿಕ್ಕೆಡಾ ನೀನಿನ್ನು ನೋಡಲ್ಲಿ
    ನೀ ಬಾಯಿಯೊಡೆಯದ್ದೆ ಇವ್ವು ಬಾಯಿ ಮುಚ್ಚವು ಕೇಳಿಲ್ಲಿ
    ಎಲ್ಲಿದ್ದರೂ ಎದ್ದು ಬಾ ಬೈಲಿಂಗೆ ಕೇಳಿತ್ತೋ – ಬೋಚಬಾವ

    1. ಯೇ ಚೆನ್ನೈಮಾವಾ, ನಿಂಗೊ ಹೀಂಗೆ ಹೇಳಿದ್ದು ಕೊಶೀ ಆತು..

      ಚೆನ್ನೈಲಿ ಕೂದೊಂಡು ಇರುಳಿಡೀ ಒರಗದ್ದೆ
      ಚಿನ್ನದಂತಾ ಬೈಲ ಬೆಳೆಶಿದವು ಭಾವ
      ಎನ್ನನ್ನು ಒಳಗೊಂಡ ಮೂರುಮೂರುತಿಗೊಕ್ಕೆ
      ಬೆನ್ನನ್ನೆ ತಟ್ಟಿದವು – ಬೋಚಬಾವ || 🙂 ||

      ಈಗ ಬೆನ್ನು ತಟ್ಟಿದ್ದು ಸರೀ ಇದ್ದು, ಇನ್ನು ಜೋರು ತಟ್ಟಿಕ್ಕೆಡಿ, ಹಾಂ!! 😉

  7. ನೆಗೆ ಮಾಣಿ,
    ಬೋಚಬಾವನ ಪುಗ್ಗ ತುಂಬಾ ಲಾಯ್ಕ ಆಯಿದು ಮಿನಿಯಾ!!
    ಪುಗ್ಗ ಇಷ್ಟ ಇಪ್ಪ ಬೋಚ ಬಾವಂಗೆ ಬೈಲಿಲಿ ಪುಗ್ಗದ ರಾಶಿ ಕಂಡು ಕೊಶೀ ಅಕ್ಕು ಅಲ್ಲದಾ?
    ನಿನ್ನ ಪುಗ್ಗಕ್ಕೆ ಪಷ್ಟು ಪ್ರೈಸೇ ಕೊಡೆಕ್ಕನ್ನೆ!!!! ಒಪ್ಪ ಒಪ್ಪ ಆಯಿದು…


    ನೇರ್ಪ ಅಪ್ಪಲೆ ತಪಸ್ಸು ಕೂದ ಬೋಚಬಾವನ
    ಜೆಪ ಸುರು ಅಪ್ಪಗ ದಿನಿಗೆಳಿದನೋ° ಈ ಮಾಣಿ |
    ಕಾಪಿ ತಿಂಡಿಲು, ಶೋಕು ಕಾಂಬಲು ಜೋಕೆ ಹೇಳಿದ್ದರ
    ನೆಂಪು ಮಡಿಕ್ಕೋ ಸದಾ- ಬೋಚ ಬಾವ ||

    ಫಲ ಬಕ್ಕು ಬೈಲಿಂಗೆ ಎಲ್ಲರ ಪ್ರೀತಿಯ ಕಾಲ
    ಕಾಲಕೆ ಬಾಚಿಗೊಂಬ ಬೈಲ ಕಣ್ಮಣಿಗೋ |
    ಕಿಲ ಕಿಲ ಹೇಳಿ ಸಂಚಾರ ಮಾಡುವ ಜಾಗೆ ಇಕ್ಕು
    ಹಾಲಿನ ಹೊಳೆ ಹರಿವಾಂಗೆ – ಬೋಚ ಬಾವ ||

  8. ಹುಲಿಗೊ ಹಲ್ಲು ತಿಕ್ಕುತ್ತವೋ? ಕೇಳಿಂಡು
    ಬಾಯಿ ವಾಸನೆ ಬಂದರೂ ಅಡ್ಡಿ ಇಲ್ಲೆ
    ಹೋಳಿಗೆಯೊ ಪಾಯಸವೊ ಬೇಕಾದ್ದು ತಿನ್ನು
    ಪುಗ್ಗ ಇಪ್ಪತ್ತಾತು – ಬೋಸಭಾವ

  9. ನೆಗೆಮಾಣಿಯ ಪುಗ್ಗ ರಾಗ,ತಾಳ,ಲಯ,ಅರ್ಥ ಎಲ್ಲ ಚೇರ್ಚೆ ಆದ ರುಚಿಯಾದ ಅವಿಲಿನ ಹಾ೦ಗಾಯಿದು.
    ಎರಡು ಗುಟ್ಟಿಲಿ ಹೇಳಿಕ್ಕುತ್ತೆ,ಬೋಚಭಾವನ ಕೆಮೀಲೆ,ಆಗದೋ?

    ಹೋಳಿಗೆಯ ಕೆರೆಶಿ೦ದ ಕೈಜಾರಿ ಬಿದ್ದದರ
    ಬಾಳೆಲೆಯ ಮೇಗೆಯೇ ಒಳುಶೆಡದೊ° ಬಾಕಿ|
    ಮಾಳಿಗೆಲಿ ತಲೆಕೊ೦ಬು ಹಸೆಯ ಹಾಕಿದರಾತು
    ಕೇಳು ಎನ್ನಯ ಮಾತು –ಬೋಚಭಾವಾ||

    ಪಾಯಸವು ಸೀವಾದರಿದ್ದು ಮೆಣಸಿನ ಪೋಡಿ
    ಆಯ ತಪ್ಪದ ಹಾ೦ಗೆ ತಿನ್ನೆರಡು ಸೌಟು|
    ನಾಯಕನು ನೀನಪ್ಪೆ ಮೂರು ಮೂರ್ತಿಗಳಿ೦ಗೆ
    ಚಾಯ ಬಪ್ಪದರೊಳವೆ –ಬೋಚಭಾವಾ||

    1. ಅಯ್ಯೋ,
      ಈ ಮುಳಿಯಮಾವ ಏನಾರು ಹೇಳಿಕೊಟ್ಟು ಬೋಚಬಾವನ ಪೂರಾ ಲಗಾಡಿ ತೆಗೆತ್ತವಾತ. ಪಾಪ!
      ಎನಗೆ ಇದುವೇ ಆಗದ್ದೆ ಬಪ್ಪದು! 🙁 😉

      ಹುಳುಹಿಡುದ ಹಲ್ಲನ್ನೆ ತೊಳದು ಬಿಟ್ಟದು ನಿನ್ನೆ
      ಪಳಪಳನೆ ಹೊಳದತ್ತು ಹುಳಿನೆಗೆಯ ಪೋಸು |
      ಮುಳಿಯ ಭಾವನ ಕೇಳಿ ಹೋಳಿಗೆಯ ತಿಂತಲ್ಲಿ
      ಹಲ್ಲು ಕೆಡುಸೆಡ ನೀನು – ಬೋಚಬಾವ || 🙂 ||

      1. ಏ ನೆಗೆಗಾರಾ ನೀನು ಬೋಚಭಾವನ ಹೀಂಗೆಲ್ಲ ಹೆದರುಸುತ್ತು ಬೇಡ ಆತೋ…. ಅವನ ಸಪೋರ್ಟಿಂಗೆ ನಾವುದೇ ಇದ್ದು ಇದಾ
        ಹೋಳಿಗೆಯ ಹೊಡೆನಾಕು ಹಲ್ಲು ಹೋದರೆ ಎರಡು
        ಹಲ್ಲುತೊಳವಲೆ ಇದ್ದು ಎನ್ನತ್ರೆ ಬಗೆ ಎರಡು
        ಕೋಲ್ಗೇಟುಸಿಕ್ಕದ್ರೆ ಇದ್ದಿಲ್ಲಿ ಮಸಿಕೊರಡು
        ಹೋಳಿಗೆಯ ಹೊಡೆನೀನು – ಬೋಚಭಾವಾ

        1. {ಎನಗೆ ಇದುವೇ ಆಗದ್ದೆ ಬಪ್ಪದು! … }, ಯೇ ಬೋಚ ಭಾವ ನೀ ಹೆದರಡ ಇದಕ್ಕೆಲ್ಲ.
          ನೆಗೆಗಾರ ಹೇಳುವದು ಲೊಟ್ಟೆ ತಿಳ್ಕೊಳೊ° ಭಾವ
          ಬೇಗ ಬಾ ತಪಸಿಂದ ಹೆರ ಹೆರಟು ನೀನು ।
          ತೂಗುಸಿದ ಕೆರುಶಿಂದ ಹೋಳಿಗೆಯ ಹೊಡೆನಾಕು
          ತೇಗು ಹೆರಡುಗು ನಿನಗೆ – ಬೋಚಬಾವ ॥

          1. ಯೇ ಬೋಚಬಾವಾ, ಜಾಗ್ರತೆ!
            ಅವು ಆಶೆಬರುಸುತ್ತವು ಹೇಳಿಗೊಂಡು – ನೀ ಕೊಣಿಯೆಡ, ಗೊಂತಾತೋ? 😉

            ತೆಕ್ಕುಂಜೆ ಅಜ್ಜನೂ ಮುಳಿಯ ರಘುಮಾವನೂ
            ಪೊಕ್ಕುಸುಗು ನಿನ್ನನ್ನೆ ತಪಸಿಂದ ನೋಡು |
            ಲೆಕ್ಕ ಸಿಕ್ಕದ್ದಷ್ಟು ಹೋಳಿಗೆಯ ಹೊಡದಿಕ್ಕಿ
            ಪಿಕ್ಕಾಸು ನೆಗ್ಗೆಡದೊ – ಬೋಚಬಾವ || 🙂 ||

          2. ಹ್ಹು..! ಕೊಣುಸುದು ಆರು ನಿನ್ನ ಗೊಂತಾತೋ.? ಇವಂಗೆ ಮದ್ದು ಅರೆಯದ್ದರೆ ಸಾಬೀತಿಲಿ ಕೇಳ .

            ಆರು ಹೇಳಿದರೆಂತ ನಿನಗದರ ಗೊಡವೆಯೋ ?
            ಹರಟೆ ಮಾಡಿದರಿವನ ಬಾಯಿ ಮುಚ್ಚುಸುವ° ।
            ಪರ ಪರನೆ ತಲೆ ಕೆರದ ಮಾಣಿಗೊಂದೇ ಮದ್ದು
            ತರವಾಡು ಮನೆಲಿದ್ದು – ಬೋಚಬಾವ ॥

          3. ಬೋಚಬಾವಂಗೆ ಹಾಂಗೆಲ್ಲ ಹೇಳಿ ಸರಿಮಾಡ್ಳೆ ಹೆರಡುದುದೇ ತಪ್ಪೋ ಅಂಬಗ?! ತರವಾಡುಮನೆಲಿಪ್ಪ ಮದ್ದು ಎನಗಲ್ಲ, ಬೋಚಬಾವಂಗೆ ಒಳ್ಳೆದು!

            ಆಗಾತ ತೆಕ್ಕುಂಜೆ ಅಜ್ಜ° ಹೀಂಗೇಳಿದರೆ,
            ರಾಗಲ್ಲಿ ಪುಗ್ಗವಾ ಹಾಡುದುದೆ ತಪ್ಪಾ |
            ನಾಗರನ ಬೆತ್ತಲ್ಲಿ ನಾಕುಹಾಕಿರೆ ಮಾಂತ್ರ
            ಕಾಂಗಲ್ಲಿ ಸರಿದಾರಿ – ಬೋಚಬಾವ || 🙂 ||

          4. ಎಡಿಯಪ್ಪ..ಇವನ ದೆಸೆಲಿ ಎಡಿಯ.!!! ಸರಿ ದಾರಿ ತೋರ್ಸುಲೆ ಇವನೋ ಜೆನ ? ಮದಲೇ ಹಾದಿತಪ್ಪಿದ ಮಾಣಿ ಇವ°
            ಅದು ಬೇಡ ನಿನ್ನ ಕೈಲಿಪ್ಪ ನಾಗರ ಬೆತ್ತ
            ಅದರತ್ತ ಇಡ್ಕಿಕ್ಕಿ ಬಾ ನೀನು ಇತ್ತ ।
            ಹಾದಿ ತಪ್ಪಿದ ಇವನ ಮಾತು ಕೇಳಿದರಾಗ
            ಅದು ನಿನಗೆ ಕೇಡಕ್ಕು – ಬೋಚಬಾವ ॥

          5. ಮುಳಿಯ ಮಾವನೂ, ತೆಕ್ಕುಂಜೆಅಜ್ಜನೂ – ಈ ಬೋಚಬಾವನ ದಾರಿತಪ್ಪುಸಲೆ ಎಷ್ಟಕ್ಕೂ ಸಾಕು! ಹು! 😉

            ಹಾಡುವಗ ಬಂದವದ ಅಜ್ಜನೂ ಮಾವನೂ
            ಲಾಡು-ಹೋಳಿಗೆ ತಿನ್ನು ಹೇಳಿ ಮಂಕಡುಸಿ |
            ನೋಡಿದಿರ ಕೇಡು ಎಳಗುವ ಚೆಂದ ಇವರಲ್ಲಿ
            ಕೇಡಲ್ಲ “ನಂಜು” ಅದು – ಬೋಚಬಾವ || 🙂 ||

          6. ಎಂತ್ಸಕ್ಕೂ ನೀನಿವನ ನಂಬೆಡ ಬೋಚಬಾವ…..ಆ° ಹೇಳ್ತೆ ಕೇಳು.
            ಅಜ್ಜನೂ ಮಾವನೂ ಒಟ್ಟಿಂಗೆ ಸೇರಿದರೆ
            ಸಜ್ಜಿ ಮಾಡುಗು ಇವನ ನೀ ನೋಡು ಬಾವ ।
            ಹೆಜ್ಜೆ ತೆಳಿಯೂ ಸಿಕ್ಕ ನೀನಿವನ ನಂಬಿದರೆ
            ಗುಜ್ಜೆ ತಾಳ್ಳಿದ್ದು ಬಾ – ಬೋಚಬಾವ ॥

          7. ಗುಜ್ಜೆ ತಾಳೆಲ್ಲಿ, ಪಾಚ ಬಳುಸುತ್ತೆ ಹೇದರೂ ಹಂದುತ್ತನಿಲ್ಲೆ ಅವ°!
            ಎನ ದಿನಿಗೆಳಿ ಬಚ್ಚಿತ್ತು..ಪ್ಪೋ.

            ಪಾಚವೇ ಇದ್ದರೂ, ಬೋಚನ್ನ ಬಳುಸಿದರು
            ವಾಚನ್ನೆ ಕಟ್ಟಿದರು ತಪಸಿಂದ ಏಳ° |
            ಏಚ ಗುಡ್ಡೆಲಿ ಕೂದು ಬಾಕಿ ಆಯಿದೆ ಬಾವ
            ‘ಬೋಚಬಾವ’ನೆ ನೀನು – ಬೋಚಬಾವ || 🙂 ||

        2. ಚೆಲ, ಈ ಶೇ.ಪು ಭಾವ ಎನ್ನ ಅಂತೇ ಅಂತೇ ಎಳಗುಸುದು! 🙁

          ಶೇಪು ಬಾವನ ಶೇಪು ನೋಡಿದರೆ ಹೆದರಿಕೆಯೆ
          ಕ್ರೋಪು ಬಾಚಿದ ತಲೆಯೆ ಅರ್ದ ಮಾಲಿದ್ದು |
          ಜೀಪು ಬಿಡುವಗ ನೀನು ಸರ್ತ ಕೂರದ್ದರೇ
          ಹೋಪದದು ಹೊಂಡಕ್ಕೆ – ಬೋಚಬಾವ || 🙂 ||

          1. ನಾವು ಯಾರನ್ನೂ ಎಳಗುಸುಲಿಲ್ಲೆ ಆತೋ ಯಾರಿಂಗಾರು ಸಕಾಯ ಮಾಡ್ತದು ಮಾತ್ರಾ…
            ನೀನು ಎಳಗುಸುತ್ತದು ಹೇಳಿ ಹೇಳ್ತಾರೆ ಇದಾ
            ಎಳಗುಸುವವ ಆನಲ್ಲ ಏಳಗಿದ್ದು ನಿನಗೀಗ
            ಡೋಂಗಿ ಮಾಡೆಡನೀನು ತಪಸು ಮಾಡ್ತವನ
            ಜೀಪು ಬಿಡುವವ ಆನು ರೈಲು ಬಿಡುವವ ನೀನು
            ಹೊಗೆ ಭಾರೀ ಹೋವ್ತನ್ನೇ – ಬೋಚಭಾವಾ

  10. ಯೇ ನೆಗೆಮಾಣಿ
    ಕುಂಞಿ ನಿನ್ನ ಹುಡ್ಕಿಯೊಂಡು ಹೆರಟಿದನಡಾ..
    ಜಾಗ್ರತೆ ಮಾಡು.. ಬೋಚ ಬಾವ ಕೊಶಿಲಿ ಇನ್ನೆರಡುದಿನ ತಪಸ್ಸು ಮಾಡಿ ಬತ್ತೆ ಹೇಳಿ ಹೋಯಿದಾ..

  11. ಭಾರೀ ಲಾಯ್ಕಾಯ್ದು ನೆಗೆಗಾರಣ್ಣ 🙂
    [ಹಲ್ಲಿಲ್ಲದ್ದ ಈ ನೆಗೆಮಾಣಿಯ ಪದ್ಯ ಹಲ್ಲಿಲ್ಲದ್ದ ಗುಂಡಜ್ಜ ಬರದ ರಾಗಲ್ಲೇ ಇದ್ದು -ಹೇಳಿ ದೀಪಿಅಕ್ಕಂಗೆ ಅನುಸಿರೆ]– ಅಪ್ಪನ್ನೆ ಹಾ೦ಗೇ ಇದ್ದನ್ನೆಪ್ಪಾ ಇದುದೇ..ಅ೦ಬಗ ನಮ್ಮ ನೆಗೆಗಾರಣ್ಣ ಗು೦ಡಜ್ಜ೦ಗೆ ಏನು ಕಮ್ಮಿ ಇಲ್ಲೆ 🙂

    1. ಯೇ ದೀಪಿ ಅಕ್ಕಾ
      ಗುಂಡಜ್ಜನ ಪದ್ಯ ರಿಕಾರ್ಡು ಮಾಡಿದಾಂಗೆ ನೆಗೆಮಾಣಿಯ ಪದ್ಯ ವ ರಿಕಾರ್ಡು ಮಾಡಿಕ್ಕೋ ಕೇಳ್ತಾ ಇದ್ದ ಬೋಚಬಾವ…

  12. ಮಂಕು ತಿಮ್ಮನ ಕಗ್ಗ
    ಬೋಚ ಬಾವನ ಪುಗ್ಗ
    ಬಂತಯ್ಯ ಬೈಲಿಂಗೆ ಒಂದರಾ ಹಿಂದೊಂದು
    ನೆಗೆ ಮಾಣಿಯೊಟ್ಟಿಂಗೆ
    ಸೇರಿ ತ್ರಿಮೂರ್ತಿಗಳಾ ಸುದ್ದಿ
    ಬರಲಿ ಬೈಲಿಂಗೆ ಎಂದೆಂದು ಮುಂದೆ

    1. ಶರ್ಮಜ್ಜಾ..
      ಇದಾ ನಾವು ತಿರುಗಾಟಲ್ಲಿದ್ದು… ಪುರುಸೋತ್ತಿಲ್ಲೆ..

  13. ಬೋಚಭಾವನ ಪುಗ್ಗಕ್ಕೆ, ಪುಗ್ಗವೇ ಸಾಟಿ…
    ಲಾಯ್ಕಾಯ್ದು…. 🙂

    1. ಚೆಲ, ಒಪ್ಪ ಕೊಡುದು ಎಂತರ ಹೇದು ಎನ್ನತ್ರೆ ಕೇಳಿರೆ ಆನೆಂತ ಹೇಳೆಕ್ಕು?! 😉

      ಕೊಡೆಯಾಲ ಕೋಳೇಜು ಮೆಟ್ಟುಕಲ್ಲಿನ ಹತ್ತಿ
      ಒಪ್ಪ ಕೊಡುದೆಂತರಾ ಕೇಳಿದನ ಶಿವನೆ!
      ಬೆಳಿಬೆಳಿಯ ನಮ್ಮ ಈ ಮಂಗ್ಳೂರು ಮಾಣಿಗೇ
      ಒಂದಾರಿ ಹೇಳಿಕೊಡು – ಬೋಚಬಾವ|| 🙂 ||

      1. ಯೇ ದೇವರೇ ನೀನೇ…
        ನಿನ್ನ ಮೀರುಸುದಲ್ಲ, ಸರಿಗಟ್ಟುಲೂ ಆರಿಂದಲೂ ಎಡಿಯ.
        ಪಷ್ಟು ಪ್ರೈಸಿಂದ ಮದಲಾಣದ್ದು ಎಂತಾರು ಇದ್ದರೆ ಅದನ್ನೂ ಕೊಡ್ಲಕ್ಕು.

        ಇದಾ, ನೀ ಕೇಳಿದೆ ಅನ್ನೆ?
        ಎನ್ನದೂ ಒಂದಿರಳಿ. 😉

        ಅತ್ತಿತ್ತೆ ಸುತ್ತಿಯೊಂಡು ಊರೂರು ತಿರುಗಿ
        ಬೇನೆ ಬೈಗಳು ತಿಂದೊಂಡು ಅಲ್ಪ ಕಷ್ಟ ಬಂದು |
        ಆರ ಮೆಚ್ಚಿಸುಲೆ ಈ ನಿನ್ನ ಕೆಲಸ?
        ನಿನ್ನ ನೀ ನೋಡೊಂದರಿ – ಬೋಸ ಭಾವಾ || 🙂 ||

        1. ಪಷ್ಟು ಪ್ರೈಸಿಂದ ಮದಲಾಣದ್ದು ಕೈಬೀಸ ಅಡ ಅಕ್ಕೋ ಮಂಗ್ಲೂರು ಮಾಣಿ..

  14. ಗಾಳಿ ತುಂಬಿದ ಬುಗ್ಗೆ ಮೇಲೇರಿದರೆ ಚಂದ
    ನೀನೂ ಆಟ ಆಡು, ಎಲ್ಲೋರ ಆಡುಲೆ ಬಿಡು
    ಎಲ್ಲೋರೋಳೊಂದಾಗಿ ಆನಂದ ಅನುಭವಿಸು
    ತತ್ವ ತಿಳಿಯೋ… ಬೋಚಬಾವ||

    ನೀರು ತುಂಬಿದ ಹಂಡೆ ಕೆಳ ಇದ್ದರೆ ಚೆಂದ
    ನೀನೂ ಮಿಂದುಗೋ,ಎಲ್ಲೋರ ಮೀವಲೆ ಬಿಡು
    ಎಲ್ಲೋರ ಜೊತೆ ಪರಿಶುದ್ದವಾಗಿರು
    ತತ್ವ ತಿಳಿಯೋ… ಬೋಚಬಾವ||

    ಬುಗ್ಗೆಗೆ ಪಿನ್ನು ಚುಚ್ಚಿ, ಹಂಡೆಗೆ ಒಟ್ಟೆ ಮಾಡಿ
    ಕ್ಷಣಿಕ ತೃಪ್ತಿ ಪಟ್ಟುಗೊಂಡು
    ಎಲ್ಲೋರ ಜೊತೆ ನಿನ್ನ ಜೀವನವನ್ನೂ ಹಾಳು ಮಾಡಿಗೊಲ್ಳೆಡ
    ತತ್ವ ತಿಳಿಯೋ… ಬೋಚಬಾವ||

    ಒಪ್ಪಣ್ಣ ಒಪ್ಪಕ್ಕಂದ್ರ ಜೊತೆ ಸೇರಿ
    ಒಳ್ಳೆ ಅಭ್ಯಾಸಂಗಳ ರೂಡಿಸಿಗೊಂಡು
    ಎಲ್ಲೋರು ಹೇಳುವ ಹಾಂಗೆ ನೀನೂ ಒಪ್ಪಣ್ಣನಾಗು
    ತತ್ವ ತಿಳಿಯೋ… ಬೋಚಬಾವ||

    1. ಅಕ್ಕ, ಈ ಪದವ ನಿಂಗೊ ನಿನ್ನೆಯೇ ಬರದುಕೊಟ್ಟಿದ್ದರೆ ಎನಗೆ ಪಷ್ಟು ಸಿಕ್ಕುತ್ತದು ಕಷ್ಟ ಇತ್ತು! 🙁

  15. ಅದಾ, ಇದೇ ಆಗದ್ದೆ ಬಪ್ಪದು ಎನಗೆ ಈ ನೆಗೆಮಾಣಿಯತ್ತರೆ. ಬೋಚಭಾವನ ಹೀಂಗೂ ಗಾಳಿಗೆ ಹೀಡಿವದಾ..
    ಪಾಪ. ಬೇಜಾರಾಗದೋ ಅವಂಗೆ..

    ಬೋಚಬಾವನೆ ಆನು ಮರುಳು ಮಾಣಿಯ ತಮ್ಮ
    ಬೂಚು ಹಾಕಿದ ಎನಗೆ ಮರ್ಳು ಮಾಡಿಸಿದ° ।
    ಆಚ ಗುಡ್ಡೆಗೆ ಹೋಗಿ ತಪಸಿಂಗೆ ಕೂದರೂ
    ಈಚಭಾವನೆ ಬಡುದು ಎಬ್ಬಿಸಿದಾ° ॥

    ಹ್ಹು.. !

    1. ಈ ಬೋಚಭಾವನ ಹತ್ತರೆ ಹಠ ಮಾಡೆಡ ಮಗ ಹೇಳಿ ಬುದ್ದಿವಾದ ಹೇಳಿದ್ದಕ್ಕೆ ಅವ ಕೋಪುಸಿಗೊಂಡು ತಪಸ್ಸು ಮಾಡುಲೆ ಸುರು ಮಾಡಿದಡ… ಅಮ್ಮಂಗೆ ಅವ ಒಪ್ಪಣ್ಣ ಆಯೆಕ್ಕು ಹೇಳಿ ಆಸೆ ಅಡ… ಈಗ ಅಮ್ಮಂಗೂ ಬೇಜಾರು,ಬೋಚಂಗೂ ಬೇಜಾರು ಅಡ… ನಿಂಗಳೋ,ಅಪ್ಪಚ್ಚಿಯೋ ಮಣ್ಣ ಬೋಚಂಗೆ ರಜ ಬುದ್ದಿವಾದ ಹೇಳೆಕ್ಕಷ್ಟೇ ಹೇಳಿ ಬೋಚನ ಅಮ್ಮ ಬಂದು ಹೇಳಿದವು…

    2. ಟೀಕೆಮಾವಂಗೆ ಪಾಪದವನ ಕಂಡ್ರೆ ಆಗದ್ದೆಬತ್ತಡ! 🙁
      ಅಂಬಗ ಮೊನ್ನೆ ಮುಳಿಯಮಾವ ಭಾಮಿನಿ ಬರದಪ್ಪಗ ಏಕೆ ಆಗದ್ದೆ ಬಯಿಂದಿಲ್ಲೆ?

      ಈ°…

      1. ಟೀಕೆಮಾವಂಗೆ ಪಾಪದವನ ಕಂಡ್ರೆ ಆಗದ್ದೆಬತ್ತಡ – ನೆಗೆಮಾಣಿಯ ಪಾಪ ಹೇಳೀರೆ ಹೇಳಿದವಕ್ಕೇ ಪಾಪ ಬಕ್ಕು ಹೇಳಿ ಹೇಳ್ತಾನ್ನೇ ಬೋಚ ಭಾವ…!

  16. ಆಹಾ!!! ಸೂಪರ್ ಆಯಿದು!!!! ನಿ೦ಗೊ ವರ್ಷಕ್ಕೆ ಎರಡೋ ಮೂರೋ ಸರ್ತಿ ಮಾ೦ತ್ರ ಬರದರೂ, ಬರದ್ದದು ಭಾರೀ ಲಾಯಿಕ ಇರ್ತು ನೆಗೆಗಾರಣ್ಣೋ.. ಒಪ್ಪ೦ಗೊ.

    1. ಆನು ವರ್ಷಲ್ಲಿ ಮೂರುಸರ್ತಿ ಆದರೂ ಶುದ್ದಿ ಹೇಳ್ತೆ, ನಿಂಗೊ?
      ಒಂದು ಹೇಳಿಕ್ಕಿ ರಟ್ಟಿದ್ದಿ, ಇನ್ನಾಣದ್ದು ಯೇವಗ? 😉

    2. ಓಯಿ ಈ ಜೆನ ಎಲ್ಲಿ ಹೋಯಿದವೋ!

      ಮರುಭೂಮಿ ದೇಶದಾ ಮಾಳಿಗೆಲಿ ಕೂದೊಂಡು
      ಇರುಳಿಡೀ ಬೈಲಿನಾ ಕೃಷಿಗೆದ್ದೆ ನೋಡಿ |
      ಪೆರುವದಣ್ಣನ ಶುದ್ದಿ ಓದಲೇ ಅಪುರೂಪ
      ಇರುವಾರ ಬತ್ತವೋ – ಬೋಚಬಾವ || 🙂 ||

      1. 🙂 ಯೇ ಪೆ೦ಗಣ್ಣಾ.. / ನೆಗೆಗಾರಣ್ಣಾ.. ಶುದ್ದಿ ಬರವದು ಹೇಳಿರೆ ಒಪ್ಪ ಕೊಡ್ತಷ್ಟು ಸುಲಭವೋ? ಆದ ಕಾರಣ ಪುರುಸೊತ್ತಿಲ್ಲಿ ಕೂದ೦ಡು ಒ೦ದು ಲಾಯಿಕದ ಶುದ್ದಿ ಬರವಲೆ ಎಡಿಗಾಯಿದಿಲ್ಲೆ ಇಷ್ಟರ ವರೇ೦ಗೆ.. 🙁
        ಬೈಲಿ೦ಗೆ ದಿನಾಗಳೂ ಬಾರದ್ರೆ ಮನಸಿ೦ಗೆ ಒ೦ದು ಸಮಾಧಾನ ಇಲ್ಲೆ.. ಬೈಲಿ೦ಗೆ ಮಾ೦ತ್ರ ಅಲ್ಲ, ಇನ್ನು ಮೂವತ್ತು ದಿನ ಕಳುದರೆ, ಊರಿ೦ಗೇ ಬಪ್ಪಲಿದ್ದು.. ಲಾಲ್ಲಲಾಲಾಲ್ಲಾ… 🙂

  17. ನೆಗೆಗಾರ ಬರದ”ಪುಗ್ಗ” ಬಾರಿ ಲಾಯಿಕಾಯಿದು. {ಗಾಳಿ ತುಂಬಿದ ಬುಗ್ಗೆ ಮೇಲೆಮೇಲೇರುತ್ತು
    ನೀರು ತುಂಬಿದ ಹಂಡೆ ಕೆಳವೆ ನಿಂದಿರ್ತು | ಬುಗ್ಗೆಗೊಂದೇ ಪಿನ್ನು …} ಎನಗೆ ತು೦ಬಾ ಕುಶಿ ಆದ ಸಾಲು..

  18. ಮಾಣಿಯ ಪುಗ್ಗ ಭಾರೀ ಲಾಯಿಕ ಆಯಿದನ್ನೇ….

    ನೆಗೆಮಾಣಿ ಬರದಾತು ಬೋಚ ಭಾವನ ಪುಗ್ಗ
    ಬೋಚ ಭಾವಂಗಿಲ್ಲಿನ್ನು ಊಟಕ್ಕೆ ಒಗ್ಗ
    ಏ ಮಾಣಿ ನೀನಿನ್ನು ಕುತ್ತಿಕ್ಕೆಡಾ ಪಿನ್ನು
    ಅವ ಆಡ್ಲಿ ರಜನಿಲ್ಲು – ಬೋಚಭಾವಾ

    1. ಶೇಪುಭಾವ,
      ನಿಂಗೊ ಪದ್ಯಲ್ಲಿ ಉಶಾರಿ. ಎರಡ್ಣೇ ಒಪ್ಪ ನಿಂಗಳದ್ದೇ ಆದ ಕಾರಣ ಸೆಕೆಂಡು ಪ್ರೈಸು ನಿಂಗೊಗೆ.
      ಸೂ: ಅದಾಗಲೇ ಸೆಕೆಂಡು ಸಿಕ್ಕಿದ ಮುಳಿಯಭಾವ ಒಪ್ಪಿರೆ ಮಾಂತ್ರ. 😉

      1. ನಿಂಗಳದ್ದೂ ಇದ್ದರೆ ಕೊಟ್ಟುಕಳುಸಿ.- ಎಂತಾ ಇನ್ನಾಣ ಸರ್ತಿ ಅದರ ತೋರುಸಿ ಪಶ್ಟು ಪ್ರೈಸು ತೆಗವಲಕ್ಕೂಳಿಯೋ ಹೇಂಗೆ….?

        1. ಒಯಿ..!!
          ಹಾ೦ಗಲ್ಲಾ..!!
          ಹನುಮ೦ತನ ಬಾಲ ಬೆಳದಾ೦ಗೆ…
          “ಪುಗ್ಗ”ವೂ ಬೆಳೆಯಲಿ ಹೇದು.. 😉

          1. ಏ ಭಾವ ನೀನು ಆ ನೆಗೆಮಾಣಿಯ ಇಷ್ಟೊಂದು ನಂಬುತ್ತು ಒಳ್ಳೆದಲ್ಲ ಆತೋ
            ಆ ಮಾಣಿ ಹೇಂಗೇಳಿ ಆನು ಹೇಳ್ತೆ ಕೇಳಿಲ್ಲಿ
            ಬರಿ ಕೆಣಿಯ ಇಪ್ಪದವನಾ ತಲೆಲಿ
            ಕೂದಲಿಲ್ಲದ್ದಾತಲೆಯ ಹಣಿಗೆ ಹಿಡುದು ಬಾಚುತ್ತ
            ಕೂಸುಗಳ ಕಾಂಬಗವ – ಬೋಚಭಾವಾ

      2. ಉದಿಯಪ್ಪಗ ಎದ್ದಾಂಗೆ (!!) ಇದು ನೋಡಿದ ಕಾರಣ ಸುಪ್ರಭಾತದ ಹಾಂಗೇ ಇದ್ದತ್ತಿದಾ. ಇಷ್ಟೊಳ್ಳೆ ಪುಗ್ಗಕ್ಕೆ ಸಾಟಿ ನಮ್ಮತ್ರೆ ಎಂತ್ಸೂ ಇಲ್ಲೆಪ. ಓದಿ ಓದಿ ಖುಶೀ ಪಟ್ಟದೇ.

        1. ಚೆನ್ನೈ ಮಾವಾ
          ನಿಂಗಳತ್ರೆ ಸಾಟು ಇದ್ದೂಳಿ ಗೊಂತಾರೆ ಬೋಚ ಓಡೋಡಿ ಬಕ್ಕು..

          1. ಅಪ್ಪೋ??
            ಚೆನ್ನೈ ಮಾವಾ ಸಾಟು ಮಾಡುಲೆ ಉಶಾರಿಯೋ??
            ಅ೦ಬಗ ತಿ೦ಬಲೆ ನಾವು ಹೋಪದೊ ಭಾವ?? 😉

          2. ಚೆನ್ನೈಮಾವ ಸಾಟು ಮಾಡುದು ಮಾಂತ್ರ ಅಲ್ಲ, ಕೈಕ್ಕೆ ಹಾಗಲಕಾಯಿ ಜ್ಯೂಸುದೇ ಕೊಡ್ತವು. ಹಾಂಗಾಗಿ – ಸಾಟು ಎನಗೆ, ಜ್ಯೂಸು ನಿನಗೆ. ಅಕ್ಕೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×